ಪ್ರವಾಸಿ ತಾಣ

ಚಿಕ್ಕಮಗಳೂರು: ಈ ಮೂರು ದಿನ ಮುಳ್ಳಯ್ಯನ ಗಿರಿ ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ

ಸಮಗ್ರ ನ್ಯೂಸ್: ಚಿಕ್ಕಮಗಳೂರಿನಲ್ಲಿರುವ ಪ್ರವಾಸಿಗರ ನೆಚ್ಚಿನ ತಾಣ ಮುಳ್ಳಯ್ಯನಗಿರಿ, ದತ್ತ ಬೆಟ್ಟಕ್ಕೆ ನವೆಂಬರ್ 4 ರಿಂದ 3 ದಿನ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ದತ್ತಮಾಲಾ ಅಭಿಯಾನ ಹಿನ್ನೆಲೆ ನವೆಂಬರ್ 4 ರಿಂದ 6 ವರೆಗೆಗೆ ದತ್ತಪೀಠ, ಮಾಣಿಕ್ಯಧಾರ, ಸೀತಾಳಯ್ಯನಗಿರಿ, ಮಾಣಿಕ್ಯಧಾರ, ಗಾಳಿಕೆರೆಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅ.30 ರಿಂದ ನ.5 ರವರೆಗೆ ದತ್ತಮಾಲಾ ಅಭಿಯಾನ ನಡೆಯಲಿದ್ದು, ಸಾವಿರಾರು ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಲಿದ್ದಾರೆ. ಈ ಹಿನ್ನೆಲೆ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.

ಚಿಕ್ಕಮಗಳೂರು: ಈ ಮೂರು ದಿನ ಮುಳ್ಳಯ್ಯನ ಗಿರಿ ಪ್ರವಾಸಕ್ಕೆ ಜಿಲ್ಲಾಡಳಿತ ನಿರ್ಬಂಧ Read More »

ಕಾರ್ಕಳದ ಬೈಲೂರಿನಲ್ಲಿರುವ ಪರಶುರಾಮ ಮೂರ್ತಿ ‘ಮಾಯ’

ಸಮಗ್ರ ನ್ಯೂಸ್: ಭಾರೀ ವಿವಾದ ಹಾಗೂ ಕೋಟ್ಯಂತರ ರೂ.ಗಳ ಅವ್ಯವಹಾರದ ಆರೋಪಕ್ಕೆ ಸಿಲುಕಿರುವ ಕಾರ್ಕಳ ತಾಲೂಕು ಬೈಲೂರು ಸಮೀಪದ ಉಮಿಕಲ್ ಬೆಟ್ಟದ ಮೇಲಿನ ಪರಶುರಾಮ ಮೂರ್ತಿ ದಿಢೀರನೇ ‘ಮಾಯ’ವಾಗಿದೆ ಎಂದು ಕಾಂಗ್ರೆಸ್ ನಾಯಕರು ಹಾಗೂ ಸ್ಥಳೀಯ ಅನೇಕರು ಆರೋಪಿಸುತ್ತಿದ್ದಾರೆ. ತೀವ್ರ ಪರ ಹಾಗೂ ವಿರೋಧದ ಚರ್ಚೆಗಳಿಗೆ ಕಾರಣವಾಗಿದ್ದ ಯರ್ಲಪಾಡಿ ಗ್ರಾಪಂ ವ್ಯಾಪ್ತಿಯಲ್ಲಿರುವ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಪರಶುರಾಮನ ಮೂರ್ತಿಯನ್ನು ಕಳೆದ ಜ.27ರಂದು ಪ್ರತಿಷ್ಠಾಪಿಸ ಲಾಗಿತ್ತು. ಬಳಿಕ ಮೂರ್ತಿಯ ಅಸಲೀತನದ ಬಗ್ಗೆ ಭಾರೀ ವಿವಾದಗಳು, ಪ್ರತಿಭಟನೆಗಳೆಲ್ಲಾ ನಡೆದ

ಕಾರ್ಕಳದ ಬೈಲೂರಿನಲ್ಲಿರುವ ಪರಶುರಾಮ ಮೂರ್ತಿ ‘ಮಾಯ’ Read More »

ನಂದಿಬೆಟ್ಟದ ವೀಕ್ಷಣೆ ಸಮಯ ಬದಲಾವಣೆ: ಜಿಲ್ಲಾಧಿಕಾರಿ ಆದೇಶ

ಸಮಗ್ರ ನ್ಯೂಸ್: ವೀಕೆಂಡ್ ಅಥವಾ ರಜೆ ಸಿಕ್ಕಿದ್ದಾಗ ಜನರು ಪ್ರವಾಸ ಹೋಗೊದಂತು ಇದ್ದದ್ದೆ, ಅದೇ ರೀತಿ ನಂದಿಗಿರಿಧಾಮದ ಪ್ರಕೃತಿ ಸೌಂದರ್ಯಕ್ಕೆ ಮನಸೋಲದ ಪ್ರವಾಸಿಗರು ಇಲ್ಲ. ಸಾವಿರಾರು ಸಂಖ್ಯೆಯಲ್ಲಿ ಜನ ನಂದಿಬೆಟ್ಟದ ವೀಕ್ಷಣೆಗೆ ಹೋಗುತ್ತಾರೆ. ಆದರೆ ಇದೀಗ ವೀಕ್ಷಣೆಯ ಸಮಯ ಬದಲಾಗಿದೆ. ನಂದಿಬೆಟ್ಟ ಪ್ರವೇಶ ಸಮಯವನ್ನು ಸರ್ಕಾರ ಬದಲಾಯಿಸಿದೆ. ಈ ಹಿಂದೆ ಬೆಳಗ್ಗೆ 5 ರಿಂದ ಸಂಜೆ 7 ಗಂಟೆವರೆಗೂ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇನ್ಮುಂದೆ ಬೆಳಗ್ಗೆ 5:30 ರಿಂದ ಸಂಜೆ 6:30ಕ್ಕೆ ಪ್ರವೇಶ ಸಮಯವನ್ನು ಇಳಿಕೆ ಮಾಡಲಾಗಿದೆ.

ನಂದಿಬೆಟ್ಟದ ವೀಕ್ಷಣೆ ಸಮಯ ಬದಲಾವಣೆ: ಜಿಲ್ಲಾಧಿಕಾರಿ ಆದೇಶ Read More »

ಸುಬ್ರಹ್ಮಣ್ಯ:ಇಂದಿನಿಂದ ಕುಮಾರಪರ್ವತ ಚಾರಣಕ್ಕೆ ಮತ್ತೆ ಅವಕಾಶ

ಸಮಗ್ರ ನ್ಯೂಸ್: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹಿಂಭಾಗದಲ್ಲಿರುವ ಪ್ರಸಿದ್ಧ ಚಾರಣ ತಾಣ ಕುಮಾರಪರ್ವತಕ್ಕೆ ಚಾರಣಕ್ಕೆ ಸೆ. 7ರಿಂದ (ಇಂದಿನಿಂದ) ಮತ್ತೆ ಅವಕಾಶ ನೀಡಲಾಗಿದೆ. ಇದೀಗ ಮಳೆಯ ಪ್ರಮಾಣ ಕಡಿಮೆಯಾದ ಕಾರಣ ಮತ್ತೆ ಚಾರಣಿಗರಿಗೆ ಚಾರಣ ಮಾಡಲು ಅವಕಾಶ ಒದಗಿಸಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿಂದೆ ಜಿಲ್ಲೆಯಾದ್ಯಂತ ಸುರಿಯುತ್ತಿದ್ದ ಬಾರೀ ಮಳೆಯ ಕಾರಣ ಹಾಗೂ ಹವಾಮಾನ ಇಲಾಖೆಯು ನಿರಂತರವಾಗಿ ಜಿಲ್ಲೆಯಲ್ಲಿ ಆರೆಂಜ್ ಎಲರ್ಟ್ ಘೋಷಿಸಿದ ಕಾರಣ ಚಾರಣಿಗರ ಹಿತದೃಷ್ಠಿಯಿಂದ ಕುಮಾರಪರ್ವತ ಚಾರಣ ನಿಷೇಧಿಸಲಾಗಿತ್ತು.

ಸುಬ್ರಹ್ಮಣ್ಯ:ಇಂದಿನಿಂದ ಕುಮಾರಪರ್ವತ ಚಾರಣಕ್ಕೆ ಮತ್ತೆ ಅವಕಾಶ Read More »

ಚಾರಣಿಗರಿಗೆಲ್ಲ ಸಂತಸದ ಸುದ್ದಿ/ ಕುಮಾರ ಪರ್ವತಕ್ಕೆ ಚಾರಣ ಆರಂಭ

ಸಮಗ್ರ ನ್ಯೂಸ್: ಚಾರಣ ಪ್ರಿಯರಿಗೆಲ್ಲ ಪರಿಚಿತವಾದ ಚಾರಣ ತಾಣವೆಂದರೆ ಅದು ಕುಮಾರ ಪರ್ವತ. ಈ ಸಾಲಿನ ಕುಮಾರ ಪರ್ವತ ಚಾರಣಕ್ಕೆ ಅನುಮತಿ ನೀಡುವುದರ ಮೂಲಕ ಅರಣ್ಯ ಇಲಾಖೆ ಚಾರಣಿಗರಿಗೆ ಸಿಹಿ ಸುದ್ದಿ ನೀಡಿದೆ. ಕುಮಾರ ಪರ್ವತ ಚಾರಣವೆಂದರೆ ಅದೊಂದು ತರಹ ಚಾಲೆಂಜಿಂಗ್. ಪುಷ್ಪಗಿರಿ ಎಂದು ಕೂಡ ಕರೆಲ್ಪಡುವ ಕುಮಾರ ಪರ್ವತ ಕರ್ನಾಟಕದ 6ನೇ ಅತೀ ಎತ್ತರದ ಶಿಖರವಾಗಿದೆ. ಚಾರಣಿಗರು ಕುಕ್ಕೆ ಸುಬ್ರಹ್ಮಣ್ಯದಿಂದ ಗಿರಿಗದ್ದೆಯ ಮೂಲಕ ಅಥವಾ ಸೋಮವಾರ ಪೇಟೆಯ ಬೀಡೇಹಳ್ಳಿಯ ಮೂಲಕ ಪರ್ವತದ ತುದಿಯನ್ನು ತಲುಪಬಹುದು. ಕುಮಾರ

ಚಾರಣಿಗರಿಗೆಲ್ಲ ಸಂತಸದ ಸುದ್ದಿ/ ಕುಮಾರ ಪರ್ವತಕ್ಕೆ ಚಾರಣ ಆರಂಭ Read More »

ಪ್ರವಾಸ ಪ್ರಯಾಸವಲ್ಲ/ ಇಂದು ವಿಶ್ವ ಪ್ರವಾಸೋದ್ಯಮ ದಿ‌ನ

ಸಮಗ್ರ ನ್ಯೂಸ್: ‘ದೇಶ ಸುತ್ತು ಕೋಶ ಓದು’ ಎಂಬ ಮಾತಿದೆ. ಎರಡು ಚಟುವಟಿಕೆಗಳು ಕೂಡ ಮನುಷ್ಯನಿಗೆ ಜ್ಞಾನವನ್ನು ತಂದುಕೊಡುತ್ತದೆ. ಓದುವಿಕೆ ಪುಸ್ತಕದ ಜ್ಞಾನವನ್ನು ಕೊಟ್ಟರೆ, ಪ್ರವಾಸ ಅನುಭವದ ಜ್ಞಾನವನ್ನು ಕೊಡುತ್ತದೆ. ಹಾಗಾಗಿ ಪ್ರವಾಸ ಎಂಬುದು ಮನುಷ್ಯನ ಜೀವನದಲ್ಲಿ ಬಹುಮುಖ್ಯವಾದುದು. ವಿಶ್ವಸಂಸ್ಥೆ ಸೆಪ್ಟೆಂಬರ್ 27, 1980ರಂದು ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲು ಗೊತ್ತುವಳಿಯನ್ನು ಅಂಗೀಕರಿಸಿತು. ಅಂದಿನ ಜಗತ್ತಿನಲ್ಲಿ ಪ್ರವಾಸೋದ್ಯಮವನ್ನು ಹೆಚ್ಚಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸ ಎಂಬುದು ಜ್ಞಾನವನ್ನು ನೀಡುವುದರ ಜೊತೆಗೆ, ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಕೆಲಸದ ಸುಸ್ತು

ಪ್ರವಾಸ ಪ್ರಯಾಸವಲ್ಲ/ ಇಂದು ವಿಶ್ವ ಪ್ರವಾಸೋದ್ಯಮ ದಿ‌ನ Read More »

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ

ಸಮಗ್ರ ನ್ಯೂಸ್: ಜಾಗತಿಕ ಮಾರುಕಟ್ಟೆಗಳಲ್ಲಿನ ಅಪಾಯದ ನಿರಾಸಕ್ತಿ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆಗಳಿಂದಾಗಿ ರೂಪಾಯಿ ಮೌಲ್ಯವು ಸತತ ನಾಲ್ಕನೇ ದಿನವೂ ಯುಎಸ್ ಡಾಲರ್ ವಿರುದ್ಧ 13 ಪೈಸೆ ಕುಸಿದು ಸಾರ್ವಕಾಲಿಕ ಕನಿಷ್ಠ ಮಟ್ಟ ₹ 83.29 ಕ್ಕೆ (ತಾತ್ಕಾಲಿಕ) ತಲುಪಿದೆ. ಇಂಟರ್ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ದೇಶೀಯ ಘಟಕವು ಡಾಲರ್ ವಿರುದ್ಧ 83.09 ಕ್ಕೆ ಪ್ರಾರಂಭವಾಯಿತು ಮತ್ತು ಗ್ರೀನ್ಬ್ಯಾಕ್ ವಿರುದ್ಧ 83.09 ರಿಂದ 83.30 ರ ವ್ಯಾಪ್ತಿಯಲ್ಲಿ ವಹಿವಾಟು ನಡೆಸಿತು. ಅಂತಿಮವಾಗಿ ಡಾಲರ್ ಎದುರು ರೂಪಾಯಿ ದಾಖಲೆಯ

ಡಾಲರ್ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ Read More »

ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌

ಸಮಗ್ರ ನ್ಯೂಸ್: ಬ್ರೆಜಿಲ್‌ನ ರಿಯೊ ಡಿ ಜನೈರೊದಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ವಿಶ್ವಕಪ್ 2023 ರಲ್ಲಿ ಭಾರತದ ಶೂಟರ್ ಇಳವೆನ್ನಿಲಾ ವಾಳರಿವನ್, ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಒಲಿಂಪಿಯನ್ ಇಳವೆನ್ನಿಲಾ ವಾಳರಿವನ್ (Elavenil Valarivan) ಫೈನಲ್‌ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ 252.2 ಪಾಯಿಂಟ್ಸ್‌ಗಳೊಂದಿಗೆ ಚಿನ್ನಕ್ಕೆ ಮುತ್ತಿಟ್ಟಿದ್ದಾರೆ. ಫ್ರಾನ್ಸ್‌ನ ಓಸಿಯಾನ್ ಮುಲ್ಲರ್, 251.9 ಪಾಯಿಂಟ್ಸ್‌ಗಳೊಂದಿಗೆ ಬೆಳ್ಳಿ ಹಾಗೂ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಜಿಯಾಲೆ ಜಾಂಗ್, 229.0 ಪಾಯಿಂಟ್ಸ್‌ನೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ.

ಏರ್ ರೈಫಲ್‌ನಲ್ಲಿ ಚಿನ್ನ ಗೆದ್ದ ಭಾರತದ ಇಳವೆನ್ನಿಲಾ ವಾಳರಿವನ್‌ Read More »

ಓಡಿ ಓಡಿ ಉಮ್ಲಿಂಗ್ಲಾ ತಲುಪಿದ ಸಬಿತಾ| 19 ದಿನಗಳಲ್ಲಿ ಹೊಸತೊಂದು ದಾಖಲೆ ಬರೆದ ಮಹಿಳೆ

ಸಮಗ್ರ ನ್ಯೂಸ್: ವಾಹನ ಚಲಿಸ ಬಲ್ಲ ಹಾಗೂ ಸಮುದ್ರ ಮಟ್ಟದಿಂದ ಅತ್ಯಂತ ಎತ್ತರದಲ್ಲಿರುವ ರಸ್ತೆ ಎಂದರೆ ಅದು ಉಮ್ಲಿಂಗ್ ಲಾ. 19 ದಿನಗಳ ಕಾಲ ಓಡಿಯೇ ಈ ಸ್ಥಳವನ್ನು ಬಿಹಾರದ ಒಬ್ಬ ಮಹಿಳೆ ತಲುಪಿದ್ದಾರೆ. ಈ ಮೂಲಕ ವಿಶ್ವದ ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಓಡಿದ ವಿಶ್ವದ ಮೊದಲ ಮಹಿಳೆ ಎಂಬ ಖ್ಯಾತಿಗೆ ಸಬಿತಾ ಮಹತೋ ಭಾಜನರಾಗಿದ್ದಾರೆ. ಪರ್ವತಾರೋಹಿ, ಸೈಕ್ಲಿಸ್ಟ್ ಮತ್ತು ಅಲ್ಟ್ರಾ ರನ್ನರ್ ಸಬಿತಾ ಮಹತೋ ಸಪ್ಟೆಂಬರ್​ 5 ರಂದು ಉಮ್ಲಿಂಗ್ ಲಾ ತಲುಪಿ ಈ

ಓಡಿ ಓಡಿ ಉಮ್ಲಿಂಗ್ಲಾ ತಲುಪಿದ ಸಬಿತಾ| 19 ದಿನಗಳಲ್ಲಿ ಹೊಸತೊಂದು ದಾಖಲೆ ಬರೆದ ಮಹಿಳೆ Read More »

ಎರಡು ಸಾವಿರ ತಲುಪಿದ ಸಾವಿನ ಸಂಖ್ಯೆ| ಕಂಡು ಕೇಳರಿಯದ ಭೂಕಂಪಕ್ಕೆ ಸಾಕ್ಷಿಯಾದ ಮೊರಾಕೋ

ಸಮಗ್ರ ನ್ಯೂಸ್: ಮೊರಾಕೊದಲ್ಲಿ ಸಂಭವಿಸಿದ ಭೀಕರ ಭೂಕಂಪಕ್ಕೆ 2,000 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಶುಕ್ರವಾರ ರಾತ್ರಿ 11:11 ಗಂಟೆಗೆ (2211 GMT) ಪ್ರವಾಸಿ ಹಾಟ್‌ಸ್ಪಾಟ್‌ನ ನೈರುತ್ಯಕ್ಕೆ 72 ಕಿ.ಮೀ (45 ಮೈಲಿ) ಪರ್ವತ ಪ್ರದೇಶದಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುಎಸ್‌ ಭೂವೈಜ್ಞಾನಿಕ ಸಮೀಕ್ಷೆ ವರದಿ ಮಾಡಿದೆ. ಪ್ರಬಲ ಭೂಕಂಪಕ್ಕೆ 2,012 ಜನರು ಸಾವನ್ನಪ್ಪಿದ್ದು, 2,059 ಮಂದಿ ಗಾಯಗೊಂಡಿದ್ದಾರೆ, ಇದರಲ್ಲಿ 1,404 ಮಂದಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಸಚಿವಾಲಯದ

ಎರಡು ಸಾವಿರ ತಲುಪಿದ ಸಾವಿನ ಸಂಖ್ಯೆ| ಕಂಡು ಕೇಳರಿಯದ ಭೂಕಂಪಕ್ಕೆ ಸಾಕ್ಷಿಯಾದ ಮೊರಾಕೋ Read More »