ಪ್ರವಾಸಿ ತಾಣ

ಚಿಕ್ಕಮಗಳೂರು: 2023ರಲ್ಲಿ 78.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ

ಸಮಗ್ರ ನ್ಯೂಸ್: ಚಿಕ್ಕಮಗಳೂರು ಜಿಲ್ಲೆಯ ಪ್ರವಾಸಿ ತಾಣಗಳಿಗೆ ಈ ವರ್ಷ ಜಿಲ್ಲೆಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ ಕಳೆದ ವರ್ಷಕ್ಕಿಂತ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಬಂದು ಹೋಗಿದ್ದಾರೆ. ಹವಾಮಾನ ವೈಪರಿತ್ಯ ಮತ್ತು ರೋಗಬಾಧೆಯಿಂದ ಕಾಫಿ, ಏಲಕ್ಕಿ, ಕಾಳು ಮೆಣಸು, ಅಡಿಕೆ ಬೆಳೆಯ ಇಳುವರಿ ಕಡಿಮೆಯಾಗಿರುವ ಬೆನ್ನಲ್ಲೇ ಜಿಲ್ಲೆಯ ಪ್ರವಾಸೋದ್ಯಮ ಈಗ ಹಿಂದಿಗಿಂತ ಹೆಚ್ಚು ಆಕರ್ಷಣೆ ಪಡೆದುಕೊಳ್ಳುತ್ತಿದೆ. ಮುಗಿಲೆತ್ತರದ ಬೆಟ್ಟಗಳು, ಪ್ರಪಾತಗಳು, ಜಲಪಾತಗಳು, ಹುಲ್ಲುಗಾವಲುಗಳು, ಅವುಗಳ ನಡುವೆ ಇರುವ ದೇಗುಲಗಳು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಬರುವ ಪ್ರವಾಸಿಗರಿಗೆ […]

ಚಿಕ್ಕಮಗಳೂರು: 2023ರಲ್ಲಿ 78.50 ಲಕ್ಷಕ್ಕೂ ಹೆಚ್ಚು ಪ್ರವಾಸಿಗರ ಭೇಟಿ Read More »

ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್/ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ನೂತನ ವರ್ಷದ ಸ್ವಾಗತಕ್ಕೆ ಸಜ್ಜಾಗುತ್ತಿದ್ದು, ಇದರ ಬೆನ್ನಲ್ಲೇ ನಂದಿಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಬರ್ಂಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿಸೆಂಬರ್ 31 ರ ಸಂಜೆ 6 ರಿಂದ ಜನವರಿ 1 ರ ಬೆಳಗ್ಗೆ 6 ಗಂಟೆವರೆಗೆ ಪ್ರವಾಸಿಗರ ಪ್ರವೇಶಕ್ಕೆ ನಿಬರ್ಂಧ ವಿಧಿಸಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ರವೀಂದ್ರ ಮಾಹಿತಿ ನೀಡಿದ್ದಾರೆ. ನಂದಿ ಬೆಟ್ಟ ಒಂದು ಪುರಾನ ಕಾಲದ ಕೋಟೆಯಾಗಿದ್ದು, ಇದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ

ಹೊಸ ವರ್ಷಕ್ಕೆ ಪ್ರವಾಸಿಗರಿಗೆ ಶಾಕಿಂಗ್ ನ್ಯೂಸ್/ ನಂದಿಬೆಟ್ಟಕ್ಕೆ ಪ್ರವಾಸಿಗರಿಗೆ ನೋ ಎಂಟ್ರಿ Read More »

ದತ್ತಜಯಂತಿಯ ಸಂಭ್ರಮ/ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ

ಸಮಗ್ರ ನ್ಯೂಸ್: ದತ್ತಜಯಂತಿ ಹಿನ್ನೆಲೆಯಲ್ಲಿ ಇಂದಿನಿಂದ ಆರು ದಿನಗಳ ಕಾಲ ಚಂದ್ರದ್ರೋಣ ಪರ್ವತಗಳ ಸಾಲಿನ ಎಲ್ಲಾ ಪ್ರವಾಸಿ ತಾಣಗಳನ್ನು ಬಂದ್ ಮಾಡಲಾಗಿದೆ. ಮುಳ್ಳಯನಗಿರಿ, ದತ್ತಪೀಠ, ಸೀತಾಳಯ್ಯನಗಿರಿ, ಗಾಳಿಕೆರೆ ಹಾಗೂ ಮಾಣಿಕ್ಯಧಾರಾಗೆ ಇಂದಿನಿಂದ ಡಿಸೆಂಬರ್ 27ರವರೆಗೆ ಎಲ್ಲಾ ಪ್ರವಾಸಿಗರಿಗೆ ಸಂಪೂರ್ಣ ನಿಬರ್ಂಧ ಹೇರಲಾಗಿದೆ. ನಾವು ಈಗಾಗಲೇ ಹೋಂ ಸ್ಟೇ ಹಾಗೂ ರೆಸಾಟ್ರ್ಗಳನ್ನು ಬುಕ್ ಮಾಡಿದ್ದೇವೆ ಎನ್ನುವ ಪ್ರವಾಸಿಗರು ಚಿಕ್ಕಮಗಳೂರಿಗೆ ಆಗಮಿಸಬಹುದು. ಆದರೆ ಹೋಮ್ ಸ್ಟೇಯಲ್ಲೇ ಇರಬೇಕು, ಮೇಲೆ ಹೆಸರಿಸಿದ ಪ್ರವಾಸಿಗರ ತಾಣಕ್ಕೆ ತೆರಳುವಂತಿಲ್ಲ. ಇದರ ಜೊತೆಗೆ ಚಿಕ್ಕಮಗಳೂರು, ಮೂಡಿಗೆರೆ,

ದತ್ತಜಯಂತಿಯ ಸಂಭ್ರಮ/ ಚಂದ್ರದ್ರೋಣ ಪರ್ವತಗಳ ಸಾಲಿನ ಪ್ರವಾಸಿ ತಾಣಗಳಿಗೆ ನೋ ಎಂಟ್ರಿ Read More »

ಪ್ರವಾಸಿಗರಿಗೆ ಸಿಹಿ ಸುದ್ದಿ/ ಮುರ್ಡೇಶ್ವರದಲ್ಲಿ ಸೀ ವಾಕ್

ಸಮಗ್ರ ನ್ಯೂಸ್: ವಿಶ್ವ ಪ್ರಸಿದ್ಧ ಪ್ರವಾಸಿ ತಾಣ ಮುರ್ಡೇಶ್ವರ ಕಡಲತೀರದಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಸೀವಾಕ್ ಹಾಗೂ ಪ್ಯಾರಸೆಲಿಂಗ್ ಎಂಬ ಎರಡು ಹೊಸ ಜಲಕ್ರೀಡೆ ಆರಂಭಿಸಲಾಗಿದೆ. ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಮೊದಲ ಬಾರಿಗೆ ಸೀವಾಕ್ ಅಳವಡಿಸಲಾಗಿದ್ದು, ಇದೀಗ ಮುರ್ಡೇಶ್ವರದಲ್ಲಿ ರಾಜ್ಯದ ಎರಡನೇ ಸೀವಾಕ್ ಅನುಭವ ಪಡೆಯಲು ಪ್ರವಾಸಿಗರಿಗೆ ಅವಕಾಶವಾಗುತ್ತಿದೆ. ದೇಶ ವಿದೇಶಗಳಿಂದ ಪ್ರವಾಸಿಗರು ಇಂದಿಗೂ ಇಲ್ಲಿಗೆ ಆಗಮಿಸಿ ನೇತ್ರಾಣಿ ಹವಳದ ದ್ವೀಪದ ಸಮುದ್ರದಾಳದಲ್ಲಿ ಸ್ಕೂಬಾ ಡೈವಿಂಗ್ ಅನುಭವ ಪಡೆದು ಹೋಗುತ್ತಿದ್ದಾರೆ. ಜಿಲ್ಲೆಯ ಗೋಕರ್ಣ ಕಡಲತೀರದಲ್ಲಿ

ಪ್ರವಾಸಿಗರಿಗೆ ಸಿಹಿ ಸುದ್ದಿ/ ಮುರ್ಡೇಶ್ವರದಲ್ಲಿ ಸೀ ವಾಕ್ Read More »

ಪ್ರವಾಸಿಗರಿಗೆ ಶುಭ ಸುದ್ದಿ/ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು

ಸಮಗ್ರ ನ್ಯೂಸ್: ಬೆಂಗಳೂರಿನಿಂದ 60 ಕಿಮೀ ದೂರ ಇರುವ ನಂದಿ ಬೆಟ್ಟಕ್ಕೆ ಇಂದಿನಿಂದ ಎಲೆಕ್ನಿಕ್ ರೈಲು ಸಂಚಾರ ಆರಂಭವಾಗಲಿದ್ದು, ಪ್ರಯಾಣಿಕರಿಗೆ ಸಂತಸ ತಂದಿದೆ. ಪ್ರವಾಸಿಗರಿಗೆ ವಾರಾಂತ್ಯದ ಪ್ರವಾಸಕ್ಕೆ ಸೂಕ್ತ ಎನಿಸಿರುವ ನಂದಿ ಬೆಟ್ಟದಲ್ಲಿ ವಾರಾಂತ್ಯದಲ್ಲಿ ಕಾಲಿಡಲೂ ಜಾಗ ಇರದಷ್ಟು ಜನ ಸಂದಣಿ ಇರುತ್ತದೆ. ಇದರ ಜೊತೆಗೆ ವಾಹನಗಳ ನಿಲುಗಡೆ, ಟ್ರಾಫಿಕ್ ಜಾಮ್ ಸಮಸ್ಯೆ ಇದ್ದೇ ಇರುತ್ತದೆ. ಇದಕ್ಕೆ ಪರ್ಯಾಯವಾಗಿ ಇಂದಿನಿಂದ ಎಲೆಕ್ಟಿಕ್ ರೈಲು ಓಡಾಟ ನಡೆಸಲಿದ್ದು, ಸುಗಮ ಪ್ರಯಾಣಕ್ಕೆ ಅನುಕೂಲವಾಗಲಿದೆ.

ಪ್ರವಾಸಿಗರಿಗೆ ಶುಭ ಸುದ್ದಿ/ ನಂದಿ ಬೆಟ್ಟಕ್ಕೆ ಎಲೆಕ್ಟ್ರಿಕ್ ರೈಲು Read More »

ಕಾಫಿನಾಡಲ್ಲೊಂದು ಮಂಜಿನ ಸ್ವರ್ಗ| ಈ ಚಳಿಗಾಲದಲ್ಲಿ ಇಲ್ಲಿಗೊಮ್ಮೆ ಭೇಟಿ ಕೊಡ್ಲೇಬೇಕು…

ಸಮಗ್ರ ನ್ಯೂಸ್: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಈ ತಾಣ ಎಂಥವರಿಗೂ ಸ್ವರ್ಗದ ಅನುಭವ ನೀಡುತ್ತದೆ. ಅದರಲ್ಲೂ ಇಲ್ಲಿಗೆ ಡಿಸೆಂಬರ್‌ನಿಂದ ಫೆಬ್ರವರಿವೊಳಗೆ ಭೇಟಿ ನೀಡುವುದೇ ಸೂಕ್ತ. ಯಾಕೆ ಅಂತೀರಾ ಈ ವೇಳೆ ಮಂಜು ಮುಸುಕಿದ ವಾತಾವರ ಇರಲಿದ್ದು, ಈ ಮಂಜಿನಲ್ಲಿ ಸ್ವರ್ಗದಂತಿರುವ ಇಲ್ಲಿನ ಸ್ಥಳಗಳನ್ನು ನೋಡಿದರೆ ಮನಸಿಗೆ ಮುದಾ ಸಿಕ್ಕಂತಾಗುತ್ತದೆ. ವರ್ಷದ ಕೊನೆಯ ತಿಂಗಳು ಡಿಸೆಂಬರ್‌ ಸಮೀಪಿಸುತ್ತಿದ್ದು, ಇನ್ನು ಹೊಸವರ್ಷ ಆಗಮಿಸುತ್ತಿರುವ ಹಿನ್ನೆಲೆ ಚಿಕ್ಕಮಗಳೂರಿನ ಕಡೆ ಪ್ರವಾಸ ಬೆಳೆಸಿ. ಈ ವೇಳೆ ಮಂಜು ಮುಸುಕಿದ ಸ್ವರ್ಗದ ಅನುಭವ ಪಡೆಯಲು

ಕಾಫಿನಾಡಲ್ಲೊಂದು ಮಂಜಿನ ಸ್ವರ್ಗ| ಈ ಚಳಿಗಾಲದಲ್ಲಿ ಇಲ್ಲಿಗೊಮ್ಮೆ ಭೇಟಿ ಕೊಡ್ಲೇಬೇಕು… Read More »

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ/ ಒಪ್ಪಿಗೆ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ

ಜಗತ್ತಿನಾದ್ಯಂತ ಚರ್ಚೆಯಲ್ಲಿರುವ ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ ವಿಚಾರ ಇದೀಗ ಥಾಯ್ಲೆಂಡ್‍ನಲ್ಲಿ ಮುಂಚೂಣಿಗೆ ಬಂದಿದ್ದು, ಸಲಿಂಗ ವಿವಾಹಕ್ಕೆ ಒಪ್ಪಿಗೆ ನೀಡುವ ಹಿನ್ನಲೆಯಲ್ಲಿ ನಾಗರಿಕ ಸಂಹಿತೆ ಕಾಯ್ದೆಯ ತಿದ್ದುಪಡಿಗೆ ಥಾಯ್ಲೆಂಡ್ ಸರ್ಕಾರ ಒಪ್ಪಿಗೆ ನೀಡಿದೆ. ಇದು ಕಾನೂನಾಗಿ ಪರಿವರ್ತನೆಯಾದಲ್ಲಿ, ನೇಪಾಳ ಮತ್ತು ತೈವಾನ್ ದೇಶಗಳ ನಂತರ ಸಲಿಂಗ ವಿವಾಹಕ್ಕೆ ಅನುಮತಿ ನೀಡಿದ ಮೂರನೇ ದೇಶವಾಗಿ ಥಾಯ್ಲೆಂಡ್ ಗುರುತಿಸಲ್ಪಡಲಿದೆ. ಈ ತಿದ್ದುಪಡಿಯು ಥಾಯ್ಲೆಂಡ್‍ನಲ್ಲಿ ಇನ್ನು ಮುಂದೆ ಸಲಿಂಗ ದಂಪತಿಗಳಿಗೆ ಪತಿ ಮತ್ತು ಪತ್ನಿ ಎಂಬ ಪದಗಳಿಗೆ ಬದಲಾಗಿ ವ್ಯಕ್ತಿಗಳು ಮತ್ತು

ಸಲಿಂಗ ವಿವಾಹಕ್ಕೆ ಕಾನೂನು ಮಾನ್ಯತೆ/ ಒಪ್ಪಿಗೆ ನೀಡಿದ ಥಾಯ್ಲೆಂಡ್ ಸಚಿವ ಸಂಪುಟ Read More »

ಮಾಲ್ಡೀವ್ಸ್ ನಿಂದ ಸೇನೆ ಹಿಂತೆಗೆದುಕೊಳ್ಳಲು ಭಾರತಕ್ಕೆ ಸೂಚನೆ

ಸಮಗ್ರ ನ್ಯೂಸ್: ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರು ಪ್ರಮಾಣ ವಚನ ಸ್ವೀಕರಿಸಿದ ಒಂದು ದಿನದ ನಂತರ, ದೇಶದಿಂದ ಭಾರತೀಯ ಸೇನೆ ಹಿಂದೆಗೆದುಕೊಳ್ಳುವಂತೆ, ಅಲ್ಲಿನ ಸರ್ಕಾರವು ಅಧಿಕೃತವಾಗಿ ಭಾರತಕ್ಕೆ ಸೂಚಿಸಿದೆ. ಹೊಸದಾಗಿ ಆಯ್ಕೆಯಾದ ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಕಚೇರಿಯಿಂದ ಶನಿವಾರ ಈ ಘೋಷಣೆ ಮಾಡಲಾಗಿದೆ. ರಾಷ್ಟ್ರಪತಿಗಳ ಕಚೇರಿಯಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು ಅವರನ್ನು ಭೇಟಿಯಾದಾಗ ಅಧ್ಯಕ್ಷ ಮುಯಿಝು ಅವರು ಔಪಚಾರಿಕವಾಗಿ ಈ ಬಗ್ಗೆ ವಿನಂತಿಸಿದರು ಎಂದು ಪ್ರಕಟಣೆ ತಿಳಿಸಿದೆ. ಭೂ ವಿಜ್ಞಾನ ಸಚಿವರಾಗಿರುವ

ಮಾಲ್ಡೀವ್ಸ್ ನಿಂದ ಸೇನೆ ಹಿಂತೆಗೆದುಕೊಳ್ಳಲು ಭಾರತಕ್ಕೆ ಸೂಚನೆ Read More »

ಚಳಿಗಾಲದ ಆರಂಭ/ ಮುಚ್ಚಿತು ಕೇದಾರನಾಥದ ಬಾಗಿಲು

ಸಮಗ್ರ ನ್ಯೂಸ್: ಉತ್ತರ ಭಾರತದಲ್ಲಿ ಚಳಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ಕೇದಾರನಾಥ ಪ್ರದೇಶವು ಈಗಾಗಲೇ ಹಿಮದ ಹೊದಿಕೆಯಿಂದ ಆವೃತವಾಗಿರುವ ಕಾರಣ ಇಂದು ಶುಭ ಮಹೂರ್ತದಲ್ಲಿ ವಿವಿಧ ಆಚರಣೆಗಳೊಂದಿಗೆ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ಕೇದಾರನಾಥ ದೇವಾಲಯದ ಬಾಗಿಲುಗಳನ್ನು ಆರು ತಿಂಗಳುಗಳ ಕಾಲ ಭಕ್ತರಿಗಾಗಿ ಮುಚ್ಚಲಾಗಿದೆ. ಕೇದಾರನಾಥ ದೇವರ ಪಂಚಮುಖಿ ಡೋಲಿಯು ವಿಧಿವಿಧಾನಗಳ ಪ್ರಕಾರ ದೇವಾಲಯದ ಆವರಣದಿಂದ ಹೊರಟಿತು. ಕೇದಾರನಾಥನ ಭೋಗ್ ವಿಗ್ರಹವು ಚಳಿಗಾಲದ ವಿಶ್ರಾಂತಿ ಸ್ಥಳ ಉಖಿಮಠದ ಓಂಕಾರೇಶ್ವರ ದೇವಸ್ಥಾನಕ್ಕೆ ಬರಲಿದ್ದು, ಮುಂದಿನ ಆರು

ಚಳಿಗಾಲದ ಆರಂಭ/ ಮುಚ್ಚಿತು ಕೇದಾರನಾಥದ ಬಾಗಿಲು Read More »

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ

ಸಮಗ್ರ ಸಮಾಚಾರ: ಮಧ್ಯಪ್ರದೇಶ ಚುನಾವಣೆಗೂ ಮೊದಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನತೆಗೆ ಗುಡ್​ ನ್ಯೂಸ್ ನೀಡಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಯಲ್ಲಿ ಶ್ರೀರಾಮನ ಉಚಿತ ದರ್ಶನ ವ್ಯವಸ್ಥೆಯ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆ ರಾಮಮಂದಿರಕ್ಕೆ ಹಂತ ಹಂತವಾಗಿ ಮಧ್ಯಪ್ರದೇಶದ ಜನರನ್ನು ಕರೆದುಕೊಂಡು ಹೋಗಲಾಗುವುದು ಎಂದು ಹೇಳಿದ್ದಾರೆ. ಮಧ್ಯಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕೆ ಇನ್ನೆರಡು ದಿನ ಮಾತ್ರ ಬಾಕಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಮುಖಂಡರು ಪ್ರಚಾರ ಕಾರ್ಯ ಚುರುಕುಗೊಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದರೆ ಅಯೋಧ್ಯೆಗೆ ಉಚಿತ ಪ್ರವಾಸ..! ಅಮಿತ್ ಶಾ ಭರವಸೆ Read More »