ಪ್ರವಾಸಿ ತಾಣ

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ

ಟ್ರಕ್ಕಿಂಗ್ ಅಥವಾ ಚಾರಣವೆಂದರೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರೋ ವಿಷಯ. ಹಲವರು ಚಾರಣದ ಬಗ್ಗೆ ಕೇಳಿರಬಹುದು, ಬಹಳಷ್ಟು ಮಂದಿ‌ ಅದರ ಅನುಭವ ಪಡೆದಿರಬಹುದು. ಬೆಟ್ಟ ಗುಡ್ಡಗಳ ನಡುವೆ ಕಲ್ಲು ಬಂಡೆಗಳ ಮಧ್ಯೆ ಪ್ರಕೃತಿಯ ಸೌಂದರ್ಯ ಸವಿಯುತ್ತಾ ಸಾಗುವ ಪಾದಯಾತ್ರೆ ಸುಂದರ ಅನುಭವವನ್ನೇ ಕೊಡುತ್ತದೆ. ಸದಾ ಬ್ಯುಸಿಯಾಗಿರುವ ಪೇಟೆ ಮಂದಿ ಚಾರಣವನ್ನು ವರ್ಷಕ್ಕೊಮ್ಮೆಯಾದರೂ ಮಾಡಲೇಬೇಕು. ಹಳ್ಳಿ ಜನಕ್ಕೆ ದಿನವೂ ಚಾರಣವೇ ಬಿಡಿ…. ಆದರೆ ಇಲ್ಲೊಂದು ಹೊಸ ಕಾನ್ಸೆಪ್ಟ್ ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ತಲೆಎತ್ತುತ್ತಿದೆ. ಅದೇ ಬೀಚ್ ಟ್ರಕ್ಕಿಂಗ್ ಅಥವಾ ಸಮುದ್ರ […]

ನೀವು ಬೀಚ್ ಟ್ರಕ್ಕಿಂಗ್ ಮಾಡಿದೀರಾ? ಇಲ್ಲಿದೆ ಸಮುದ್ರಚಾರಣ ಎಂಬ ಹೊಸ ಕಾನ್ಸೆಪ್ಟ್ ನ ಮಾಹಿತಿ Read More »

ಪರಶುರಾಮ ರಾಮನ ಸೃಷ್ಟಿಯ ಪಡುವಣ ಕಡಲ ಸೌಂದರ್ಯ ಸವಿಯೋಣ….. ಸುಂದರ‌ ಬೀಚ್ ಗಳಲ್ಲಿನ ರಸ ಸಂಜೆ….

ಪಡುವಣ ಕಡಲಿನ ತೀರದಲ್ಲಿ ಹತ್ತಾರು ಸುಂದರ ಬೀಚ್‌ಗಳಿವೆ. ಕೇರಳದ ಕಾಸರಗೋಡಿನಿಂದ ಗೋವಾದವರೆಗೆ ಅರಬ್ಬಿ ಸಮುದ್ರದ ತೀರದಲ್ಲಿ ಹಲವು ಸುಂದರ ತಾಣಗಳು ಮೈಚಾಚಿ ಮಲಗಿವೆ. ಇಂಥ ಬೀಚ್‌ಗಳ ಪೈಕಿ ಉಡುಪಿ ಜಿಲ್ಲೆಯಲ್ಲಿರುವ ಕಾಪು ಕೂಡಾ ಒಂದು.ಮಂಗಳೂರು-ಗೋವಾ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಧ್ಯೆ ಸಿಗುವ ಕಾಪು ಪೇಟೆಯಿಂದ ಪಶ್ಚಿಮಕ್ಕೆ ನಡೆದು ಹೋದರೆ ವಿಶಾಲ ಸಮುದ್ರ ಕಾಣಸಿಗುತ್ತದೆ. ಅದೇ ನೀವು ನೋಡಬಹುದಾದ ಕಾಪು ಬೀಚ್ ಮತ್ತು ದೀಪಸ್ತಂಭ(ಲೈಟ್ ಹೌಸ್). ಮಂಗಳೂರಿನಿಂದ ಸುಮಾರು 45 ಕಿ.ಮೀ ಹಾಗೇ ಉಡುಪಿಯಿಂದ ಸುಮಾರು 15 ಕಿ.ಮೀ

ಪರಶುರಾಮ ರಾಮನ ಸೃಷ್ಟಿಯ ಪಡುವಣ ಕಡಲ ಸೌಂದರ್ಯ ಸವಿಯೋಣ….. ಸುಂದರ‌ ಬೀಚ್ ಗಳಲ್ಲಿನ ರಸ ಸಂಜೆ…. Read More »

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ

ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ತಾಲೂಕು ಕೇಂದ್ರ ಹಾಗೂ ಎರಡನೇ ದೊಡ್ಡ ಪಟ್ಟಣ ಪುತ್ತೂರು. ಮುತ್ತು ಬೆಳೆಯುವ ಕೆರೆ ಎಂದು ಐತಿಹ್ಯ ಹೊಂದಿರುವ ಪುತ್ತೂರು ಎಂದೊಡನೆ ತಟ್ಟನೆ ನೆನಪಾಗುವುದು ಮಹಾಲಿಂಗೇಶ್ವರ ದೇವಸ್ಥಾನ. ಊರಿನ ಹೆಸರಿಗೂ ಇಲ್ಲಿ ವಿರಾಜಮಾನನಾಗಿ ಸಕಲ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಮಹತೋಭಾರ ಮಹಾಲಿಂಗೇಶ್ವರನಿಗೂ ಒಂದು ಐತಿಹಾಸಿಕ ನಂಟಿದೆ! ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯ 11-12ನೇ ಶತಮಾನಕ್ಕೆ ಸೇರಿದ್ದು ಎಂದು ನಂಬಲಾಗಿದೆ. ಅಂದ ಹಾಗೆ ಇಲ್ಲಿ ನೆಲೆಸಿರುವ ಮಹಾಲಿಂಗೇಶ್ವರನಿಗೂ ಗಜರಾಜನಿಗೂ ಎಣ್ಣೆ ಸೀಗೆಕಾಯಿ ಸಂಬಂಧ. ಇದಕ್ಕೆ ಕಾರಣವೂ

ಮುತ್ತು ಬೆಳೆಯುವ ಪುರದೊಡೆಯ ಗಜ ವಿರೋದಿ….! ಇಲ್ಲಿನ ನಂದಿಗೆ ಮೂರೇ ಕಾಲು…. ಪುತ್ತೂರು ಮಹಾಲಿಂಗೇಶ್ವರನ ಸೊಗಸಾದ ಚರಿತೆ Read More »

ಎತ್ತಿನ ಭುಜ ಹತ್ತೋದೇ ಮಜಾ

ಚಿಕ್ಕಮಗಳೂರು….ಬೆಟ್ಟಗುಡ್ಡ ಪರ್ವತಗಳ ತವರೂರು. ಕಾಫಿನಾಡಿನಲ್ಲಿ ಕಾಫೀಯ ಘಮದ ಜೊತೆಗೆ ಪ್ರಕೃತಿಯ ಸೌಂದರ್ಯ ಸವಿಯೋದೇ ಅದ್ಬುತ ಅನುಭವ. ಜಿಲ್ಲೆಯ ಪ್ರತೀ ಭಾಗದಲ್ಲೂ ಒಂದಲ್ಲೊಂದು ಅನುಭವ ನೀಡುವ ರಮಣೀಯ ತಾಣಗಳಿವೆ. ಅವುಗಳಲ್ಲಿ ಒಂದು ಎತ್ತಿನ ಭುಜ.ದೂರದಿಂದ ನೋಡಿದಾಗ ಕೊಬ್ಬಿದ ಎತ್ತು ಮಲಗಿದಂತಿದ್ದು, ಅದರ ಭುಜ ಮಾತ್ರ ಕಾಣುವಂತಿರುವ ಈ ಬೆಟ್ಟ ಇದನ್ನು ಚಾರಣಿಗರ ಬೆಟ್ಟ ಅಂತಾನೆ ಫೇಮಸ್ಸ್ . ಮೂಡಿಗೆರೆಯಿಂದ 28 ಕೀ.ಮಿ. ದೂರದಲ್ಲಿರುವ ಶಿಶಿಲ ಬೆಟ್ಟ ಚಾರಣಿಗರ ಹಾಟ್ ಸ್ಪಾಟ್. ಕಾಫಿನಾಡಲ್ಲಿ ಚಾರಣ ಮಾಡೋವಂತ ಪ್ರವಾಸಿಗರಿಗೆ ಇಲ್ಲೊಂದು ಅವರ

ಎತ್ತಿನ ಭುಜ ಹತ್ತೋದೇ ಮಜಾ Read More »

ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ

ಪ್ರಿನ್ಸ್ ಆರ್ಥರ್, ದಿ ಡ್ಯೂಕ್ ಆಫ್ ಕನ್ಹಾಟ್ ನಿಂದ ಶಂಕುಸ್ಥಾಪನೆ ನೆರವೇರಿಸಲ್ಪಟ್ಟ ಭಾರತದ ಮುಕುಟಮಣಿ ದೆಹಲಿಯ ಇಂಡಿಯಾ ಗೇಟ್ ಶತ ವರ್ಷಗಳ ಹೊಸ್ತಿಲಲ್ಲಿದೆ. ಈ ವಿಚಾರ ತಿಳಿಯಬೇಕಾದರೆ ಬರೋಬ್ಬರಿ 100 ವರ್ಷಗಳ ಇತಿಹಾಸ ಪುಟಗಳನ್ನು ತಿರುಚಿ ಹಾಕಬೇಕಾಗುತ್ತದೆ.ದಿಲ್ಲಿಯ ಅತ್ಯಂತ ಪ್ರಮುಖ ಆಕರ್ಷಣೆಗಳಲ್ಲಿ ಇಂಡಿಯಾ ಗೇಟ್‌ ಕೂಡ ಒಂದು. ಅತಿ ಹೆಚ್ಚು ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುವ ತಾಣ ಕೂಡ ಹೌದು. ನಗರ ಕೇಂದ್ರದಲ್ಲಿ ಇದು ನೆಲೆಸಿದೆ. ಇದು ರಾಷ್ಟ್ರೀಯ ಸ್ಮಾರಕವಾಗಿ ಗುರುತಾಗಿದೆ. 42 ಮೀಟರ್‌ ಎತ್ತರವಾಗಿರುವ ಇದು,

ಭಾರತದ ಮುಕುಟ ಇಂಡಿಯಾ ಗೇಟ್ ಐತಿಹಾಸಿಕ ಸ್ಮಾರಕಕ್ಕೀಗ ಶತವರ್ಷದ ಸಂಭ್ರಮ Read More »

ಖಿನ್ನತೆಯ ಮೆಟ್ಟಿ ನಿಂತವ ಜಗತ್ತಿಗೆ ದೊಡ್ಡಣ್ಣನಾದ. ಅಬ್ರಾಹಂ ಲಿಂಕನ್ ಎಂಬ ಅಜಾತಶತ್ರು

ಮನೋಖಿನ್ನತೆ… ಇದು ಬಹುತೇಕ ಎಲ್ಲರನ್ನೂ ಕಾಡಿರುವ ಭೂತ. ಇದರ ತೀಕ್ಷ್ಣತೆ ಹಲವರನ್ನು ಕುಗ್ಗಿಸಿಬಿಟ್ಟರೆ ಮನೋ ದಾರ್ಢ್ಯತೆ, ಛಲ ಮತ್ತು ಹೊಣೆಗಾರಿಕೆಗಳಿಂದ ಬದ್ಧರಾದ ವ್ಯಕ್ತಿಗಳು ಅದರಿಂದ ಹೊರಬಂದು ಜಗತ್ತನ್ನೇ ಬೆರಗುಗೊಳಿಸುವಂತಹ ಸಾಧನೆ ಮಾಡಿ ಮಹಾಪುರುಷರು ಎನಿಸುತ್ತಾರೆ. ಇಂತಹವರ ಸಾಲಿನಲ್ಲಿ ಅಚ್ಚರಿಪಡುವಂತಹ ವ್ಯಕ್ತಿ ಎಂದರೆ ಅಮೆರಿಕದ 16ನೇ ಅಧ್ಯಕ್ಷ ಅಬ್ರಹಾಂ ಲಿಂಕನ್.! ಆಧುನಿಕ ಪ್ರಜಾಪ್ರಭುತ್ವಕ್ಕೆ ಭಾಷ್ಯ ಬರೆದು, ಗುಲಾಮಗಿರಿಯನ್ನೇ ಹೊಡೆದೋಡಿಸಿದ ಅಜಾತಶತ್ರು. ಅಮೆರಿಕದ ಅಧ್ಯಕ್ಷರಾಗಿ ಆ ದೇಶದ ಆರ್ಥಿಕ ಪರಿಸ್ಥಿತಿ ಉನ್ನತ ಶೃಂಗಕ್ಕೇರಲು ಭದ್ರ ಬುನಾದಿ ಹಾಕಿದ ಅಬ್ರಹಾಂ ಲಿಂಕನ್

ಖಿನ್ನತೆಯ ಮೆಟ್ಟಿ ನಿಂತವ ಜಗತ್ತಿಗೆ ದೊಡ್ಡಣ್ಣನಾದ. ಅಬ್ರಾಹಂ ಲಿಂಕನ್ ಎಂಬ ಅಜಾತಶತ್ರು Read More »

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ

ನೀವೇನಾದ್ರೂ ಚಾರಣ ಪ್ರೀಯರಾದ್ರೆ ಈ ತಾಣಕ್ಕೊಮ್ಮೆ ಭೇಟಿ‌ ನೀಡ್ಲೇ ಬೇಕು. ಭಾರತದಲ್ಲಿ ಅತೀ ಕಷ್ಟಕರವಾದ ಹಾಗೆಯೇ ಅತ್ಯಂತ ಮನಸ್ಸಿಗೆ ಮುದ ನೀಡುವ ಕೆಲವೇ ಕೆಲವು ಚಾರಣ ತಾಣಗಳ ಪೈಕಿ ಚಾರಣಿಗರ ಸ್ವರ್ಗ ಅಂತನೇ ಕರೆಸಿಕೊಳ್ಳುವ ಪುಷ್ಪಗಿರಿ ಕುಮಾರ ಪರ್ವತ ಶ್ರೇಣಿ ನಿಜಕ್ಕೂ ಅಧ್ಬುತ ಮತ್ತು ಅಷ್ಟೇ ರೋಮಾಂಚಕಾರಿ ಅನುಭವ ನೀಡುವ ಪ್ರಕೃತಿಯ ಸೃಷ್ಟಿ. ದಕ್ಷಿಣ ಕನ್ನಡ ಮತ್ತು‌ ಕೊಡಗು ಜಿಲ್ಲೆಗಳ ನಡುವೆ.ಸಮುದ್ರ ಮಟ್ಟದಿಂದ 1712 ಮೀಟರ್‌ ಎತ್ತರದಲ್ಲಿರುವ ಪುಷ್ಪಗಿರಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಕಣ್ಣುಗಳೇ ಸಾಲದು. ಈ ಶಿಖರಕ್ಕೆ

ಚಾರಣಕ್ಕೊಂದು ಸೂಕ್ತ ತಾಣ ಪುಷ್ಪಗಿರಿ-ಕುಮಾರಪರ್ವತ Read More »

ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ….

ಕಾಶ್ಮೀರ… ಭೂಲೋಕದ ಸ್ವರ್ಗಕ್ಕೆ ಮನಸೋಲದವರೇ ಇಲ್ಲ. ಸದಾ ಹಿಮದಿಂದ ಆವೃತ್ತವಾಗಿರುವ ಈ ಕಣಿವೆ ರಾಜ್ಯದಲ್ಲಿ ಈ ಚಳಿಗಾಲ ಮತ್ತೊಂದು ವಿಶಿಷ್ಟ ಆಕರ್ಷಣೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿದೆ. ಅದುವೇ ಗುಲ್ಮಾರ್ಗ್ ನ ಇಗ್ಲೂ ಕೆಫೆ(ಹಿಮ ಕೆಫೆ). ಚಳಿಗಾಲದ ಸೀಸನ್ ನಲ್ಲಿ ಎತ್ತ ನೋಡಿದರೂ ಹಿಮ. ಅದರಲ್ಲೂ ಕಣಿವೆ ರಾಜ್ಯದ ಗುಲ್ಮಾರ್ಗ್ ಕ್ಕೆ ಚಳಿಗಾಲದಲ್ಲಿ ಪ್ರವಾಸಿಗರು ಭೇಟಿ ನೀಡುವ ನೆಚ್ಚಿನ ತಾಣಗಳಲ್ಲಿ ಮೊದಲ ಸ್ಥಾನದಲ್ಲಿದೆ. ಈಗ ಗುಲ್ಮಾರ್ಗ್ ನಲ್ಲಿ ಇಗ್ಲೋ ಕೆಫೆ ತಲೆ ಎತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ಕಾಶ್ಮೀರ ಕಣಿವೆಯಲ್ಲೊಂದು ಹಿಮ ಕೆಫೆ: ಪ್ರವಾಸಿಗರ ಸ್ವರ್ಗವಾಗಿದೆ ಗುಲ್ಮಾರ್ಗ್ ನ ಇಗ್ಲೂ…. Read More »

ರಾಮಚರಿತೆಯ ದಂಡಕಾರಣ್ಯ ಅಭಯಾರಣ್ಯ, ಕಿನ್ನೇರಸಾನಿ ವನ್ಯಧಾಮದ ಸಂಪೂರ್ಣ ಮಾಹಿತಿ.

ಕಿನ್ನೇರಸಾನಿ…. ಹೆಸರು ಕೇಳುವಾಗಲೇ ಅದೆಂತಹುದೋ ಆಕರ್ಷಣೆ. ವಿಶೇಷವಾದ ಭಾವ. ಇದಕ್ಕೆ ಕಾರಣವೂ ಇದೆ. ಯಾಕೆಂದರೆ ಇದು ಅಂತಿಂಥ ಪ್ರದೇಶವಲ್ಲ. ಇದು ತ್ರೇತಾಯುಗದ ದಂಡಕಾರಣ್ಯದ ಕಾಡುಗಳ ಭಾಗ. ಪ್ರಭು ರಾಮಚಂದ್ರ ತನ್ನ ವನವಾಸದ ದಿನಗಳನ್ನು ಇಲ್ಲಿ ಕಳೆದಿದ್ದಾನೆ ಎಂಬುದು ಪುರಾಣ ಐತಿಹ್ಯ. ಹಿಂದೂ ಪುರಾಣಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಪರ್ನ್‌ಶಾಲಾ, ರೇಖಾಪಲ್ಲಿ, ದುಮ್ಮುಗುಡೆಮ್ ಮುಂತಾದ ಸ್ಥಳಗಳು ಇದಕ್ಕೆ ಸಾಕ್ಷಿ.ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯವು ಭಾರತದ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿದೆ. ಕಿನ್ನೇರಸಾನಿ ವನ್ಯಜೀವಿ ಅಭಯಾರಣ್ಯವು ಖಮ್ಮಮ್ ಜಿಲ್ಲೆಯಲ್ಲಿರುವ ಪಾಲೊಂಚ ಪಟ್ಟಣದಿಂದ 21

ರಾಮಚರಿತೆಯ ದಂಡಕಾರಣ್ಯ ಅಭಯಾರಣ್ಯ, ಕಿನ್ನೇರಸಾನಿ ವನ್ಯಧಾಮದ ಸಂಪೂರ್ಣ ಮಾಹಿತಿ. Read More »

ಮನಕ್ಕೆ ಮುದ ನೀಡುವ ಮಲ್ಲಳ್ಳಿ ಫಾಲ್ಸ್

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ದಟ್ಟ ಕಾನನ ಪ್ರದೇಶ, ಪುಷ್ಪಗಿರಿಯ ಹಚ್ಚ ಹಸಿರಿನ ನಡುವೆ ಭೋರ್ಗರೆವ ಸದ್ದಿನೊಂದಿಗೆ ನಯನ ಮನೋಹರವಾಗಿ ತನ್ನ ಸೌಂದರ್ಯ ರಾಶಿಯನ್ನು ಹರಿಸುತ್ತಾ, ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತಿರುವ ಮನಮೋಹಕ ಜಲಧಾರೆ ಮಲ್ಲಳ್ಲಿ ಫಾಲ್ಸ್ ಪ್ರಕೃತಿಯ ರಮಣೀಯತೆಯ ಕೈಗನ್ನಡಿ.ಸುಮಾರು 250 ರಿಂದ 300 ಅಡಿ ಎತ್ತರದಿಂದ ಧುಮ್ಮಿಕ್ಕುವ ಆ ಜಲರಾಶಿಯ ದೃಶ್ಯ ಸುಂದರ ಅನುಭವವನ್ನು ಮನಸ್ಸಿಗೆ ನೀಡುತ್ತದೆ. ಸೋಮವಾರ ಪೇಟೆಯ ಹಂಚಿಹಳ್ಳಿ ಗ್ರಾಮದಲ್ಲಿನ ಈ ಜಲಪಾತಕ್ಕೆ ನಡೆದುಕೊಂಡೇ ಹೋಗಬೇಕು. ದಾರಿಯು ಕಿರಿದಾಗಿದ್ದು, ಯಾವುದೇ

ಮನಕ್ಕೆ ಮುದ ನೀಡುವ ಮಲ್ಲಳ್ಳಿ ಫಾಲ್ಸ್ Read More »