ಪ್ರವಾಸಿ ತಾಣ

ಕುವೈತ್‌ನಿಂದ ಚೆನ್ನೈಗೆ ಬಂದಿಳಿದ ಪ್ರಯಾಣಿಕರಿಗೆ ಲಗೇಜು ಇಲ್ಲದೆ ಶಾಕ್, ಮಾರ್ಗ ಮಧ್ಯೆ ಕಾಣೆಯಾಯ್ತಾ!?

ಸಮಗ್ರ ನ್ಯೂಸ್ : ಕುವೈತ್‌ನಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಹಲವಾರು ಪ್ರಯಾಣಿಕರು ಜ. 06 ರಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ತಮ್ಮ ಚೆಕ್-ಇನ್ ಸಾಮಾನುಗಳು ಕನ್ವೇಯ‌ರ್ ಬೆಲ್ಟ್ನಲ್ಲಿ ಕಾಣೆಯಾಗಿರುವುದನ್ನು ಕಂಡು ಆಘಾತಕ್ಕೊಳಗಾದರು. ವಿಮಾನಯಾನ ಸಂಸ್ಥೆಯ ವಿವರಣೆ – ವಾಯು ಸಾಗಣೆ ತೂಕವನ್ನು ಕಾಯ್ದುಕೊಳ್ಳಲು ಸಾಮಾನುಗಳನ್ನು ಕುವೈತ್‌ನಲ್ಲಿ ಬಿಡಲಾಗಿದೆ – ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಯಿತು. 176 ಪ್ರಯಾಣಿಕರೊಂದಿಗೆ ಬೆಳಿಗ್ಗೆ 6:30 ಕ್ಕೆ ಚೆನ್ನೈಗೆ ಬಂದಿಳಿದ A320 ವಿಮಾನ ಈ ಘಟನೆಗೆ ಸಂಬಂಧಿಸಿದೆ. ಅವರು ಆಗಮನ ಟರ್ಮಿನಲ್‌ಗೆ ಬಂದಾಗ, ಕನ್ವೇಯರ್ […]

ಕುವೈತ್‌ನಿಂದ ಚೆನ್ನೈಗೆ ಬಂದಿಳಿದ ಪ್ರಯಾಣಿಕರಿಗೆ ಲಗೇಜು ಇಲ್ಲದೆ ಶಾಕ್, ಮಾರ್ಗ ಮಧ್ಯೆ ಕಾಣೆಯಾಯ್ತಾ!? Read More »

ರನ್‌ವೇಯಲ್ಲೇ 289 ಪ್ರಯಾಣಿಕರಿದ್ದ ವಿಮಾನದ ಟೈರ್ ಸ್ಫೋಟ: ಪ್ರಯಾಣಿಕರು ಬದುಕುಳಿದ್ದಿದ್ದೇಗೆ

ಸಮಗ್ರ ನ್ಯೂಸ್: ಮೆಲೋರ್ನ್ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿಸಲಾಗಿದೆ. ಸುಮಾರು 300 ಮಂದಿ ಪ್ರಯಾಣಿಕರನ್ನು ಹೊತ್ತು ಅಬುಧಾಬಿಗೆ ತೆರಳುತ್ತಿದ್ದ ಎತಿಹಾದ್ ಏರ್‌ವೇಸ್ ವಿಮಾನದ ಎರಡು ಟೈರ್‌ಗಳು ಸ್ಫೋಟಗೊಂಡ ಹಿನ್ನೆಲೆಯಲ್ಲಿ ಟೇಕಾಫ್ ಆಗದಂತೆ ನಿಲ್ಲಿಸಬೇಕಾಯಿತು ಈ ಘಟನೆ ಜ.5 ರಂದು ನಡೆಯಿತು. 289 ಪ್ರಯಾಣಿಕರೊಂದಿಗೆ ಮೆಲ್ಬರ್ನ್‌ನಿಂದ ಅಬುಧಾಬಿಗೆ ಹೋಗುತ್ತಿದ್ದ EY 461 ವಿಮಾನದ ಟೈರ್‌ಗಳು ಟೇಕ್‌ಆಫ್ ಆಗುವ ಕೆಲವೇ ಕ್ಷಣಗಳ ಮೊದಲು ಸ್ಫೋಟಗೊಂಡಿದ್ದವು. ಮೆಲ್ಲೋರ್ನ್ ವಿಮಾನ ನಿಲ್ದಾಣದಲ್ಲಿ ತುರ್ತು ಸೇವೆಗಳು ಬೋಯಿಂಗ್ 787 ವಿಮಾನವನ್ನು ಸುತ್ತುವರೆದಿದ್ದು ಸುರಕ್ಷತಾ

ರನ್‌ವೇಯಲ್ಲೇ 289 ಪ್ರಯಾಣಿಕರಿದ್ದ ವಿಮಾನದ ಟೈರ್ ಸ್ಫೋಟ: ಪ್ರಯಾಣಿಕರು ಬದುಕುಳಿದ್ದಿದ್ದೇಗೆ Read More »

ಪುತ್ತೂರು: ಅಯ್ಯೋ ಬಸ್ಸಿಲ್ಲ!! ಈ ಕಾಯುವಿಕೆಗೆ ಕೊನೆ ಎಂದು?

ಸಮಗ್ರ ನ್ಯೂಸ್: ಕಳೆದೊಂದು ವಾರದಿಂದ ಪುತ್ತೂರು ವಿಭಾಗದ ಕೆಎಸ್ಆರ್ ಟಿಸಿ ನಿಲ್ದಾಣಗಳಲ್ಲಿ ಯಾರನ್ನ ಕೇಳಿದ್ರೂ ಇದೇ ಅಂಬೋಣ. ಯಾವದೇ ಊರುಗಳಿಗೂ ಸರಿಯಾದ ಬಸ್ ಗಳಿಲ್ಲ. ಜನರಂತೂ ಬಸ್ ಗಾಗಿ ಕಾದೂ ಕಾದೂ ಹೈರಾಣಾಗಿ ಹೋಗಿದ್ದಾರೆ. ಕೆಲವೊಂದು ಊರುಗಳಿಗೆ ತೆರಳಲು ಎರಡು ಗಂಟೆಗೂ ಅಧಿಕ ಸಮಯ ಕಾಯಬೇಕಾಗುತ್ತದೆ. ಕೊನೆಗೂ ಬಸ್ ಬಂದರೆ ಒಂದಡಿ ಎರಲೂ ಶತಾಯಗತಾಯ ಹೋರಾಟ ಮಾಡಬೇಕಾಗುತ್ತದೆ. ಸಾರಿಗೆ ಬಸ್ ಗಳ ಈ ಕೊರತೆಗೆ ಕೆಎಸ್ಆರ್ ಟಿಸಿಯವರು ಖಾಸಗಿ ಕಂಪನಿಗಳನ್ನು ದೂರುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೇಮಕವಾದ ಚಾಲಕರು

ಪುತ್ತೂರು: ಅಯ್ಯೋ ಬಸ್ಸಿಲ್ಲ!! ಈ ಕಾಯುವಿಕೆಗೆ ಕೊನೆ ಎಂದು? Read More »

ಮಂಗಳೂರು – ಪುತ್ತೂರು ರೈಲು ಸುಬ್ರಹ್ಮಣ್ಯದವರೆಗೆ ವಿಸ್ತರಣೆಗೆ ಅನುಮೋದನೆ| ನನಸಾಗಲಿದೆಯಾ ದಶಕದ ಕನಸು

ಸಮಗ್ರ ನ್ಯೂಸ್: ಮಂಗಳೂರು- ಪುತ್ತೂರು ಪ್ಯಾಸೆಂಜರ್‌ ರೈಲನ್ನು ಸುಬ್ರಹ್ಮಣ್ಯದವರೆಗೆ ವಿಸ್ತರಿಸುವ ಬಹು ಕಾಲದ ಬೇಡಿಕೆಗೆ ಕೊನೆಗೂ ನೈಋತ್ಯ ಮತ್ತು ದಕ್ಷಿಣ ರೈಲ್ವೇ ವಲಯಗಳಿಂದ ಅನು ಮೋದನೆ ಸಿಕ್ಕಿದ್ದು, ಪ್ರಸ್ತಾವನೆಯನ್ನು ಈಗ ಅನುಮತಿಗಾಗಿ ರೈಲ್ವೇ ಮಂಡಳಿಗೆ ಸಲ್ಲಿಸಲಾಗಿದೆ. ದಶಕಗಳ ಹಿಂದೆ ಮೀಟರ್‌ ಗೇಜ್‌ ಕಾಲದಲ್ಲಿ ಸುಬ್ರಹ್ಮಣ್ಯದಿಂದ ಬೆಳಗ್ಗೆ ಮತ್ತು ಸಂಜೆ ಹೊತ್ತು ಮಂಗಳೂರು ವರೆಗೆ 2005ನೇ ಇಸವಿ ತನಕ 06484/85 ಹಾಗೂ 06486/87 ಪ್ಯಾಸೆಂಜರ್‌ ರೈಲು ಸಂಚರಿಸುತ್ತಿತ್ತು. ಹಳಿ ಪರಿವರ್ತನೆಯ ಅನಂತರ ಇದು ಪುತ್ತೂರಿನವರೆಗೆ ಮಾತ್ರ ಸಂಚಾರ ನಡೆಸುತ್ತಿದೆ.

ಮಂಗಳೂರು – ಪುತ್ತೂರು ರೈಲು ಸುಬ್ರಹ್ಮಣ್ಯದವರೆಗೆ ವಿಸ್ತರಣೆಗೆ ಅನುಮೋದನೆ| ನನಸಾಗಲಿದೆಯಾ ದಶಕದ ಕನಸು Read More »

ನಾಲ್ಕಲ್ಲ 15 ಜನರು ಮುಳುಗಿ ಹೋಗುತ್ತಿದ್ದೆವು : ಮುರುಡೇಶ್ವರ ದುರಂತದ ನೈಜ ಘಟನೆ ವಿವರಿಸಿದ ವಿದ್ಯಾರ್ಥಿನಿ!

ಸಮಗ್ರ ನ್ಯೂಸ್: ಕಳೆದ ಎರಡು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚಲ್ಲಿ ನಾಲ್ವರು ವಿದ್ಯಾರ್ಥಿನಿಯರು ಸಮುದ್ರದ ಅಲೆಗಳಿಗೆ ಕೊಚ್ಚಿ ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಅದರಲ್ಲಿ ಬದುಕುಳಿದು ಬಂದಂತಹ ವಿದ್ಯಾರ್ಥಿನಿಯಾದ ಪಲ್ಲವಿ ಸಮುದ್ರದ ಅಲೆಗಳ ಹೊಡೆತಕ್ಕೆ ನಾವು ನಾಲ್ಕಲ್ಲ 15 ಜನರು ಮುಳುಗಿ ಹೋಗಿ ಸಾಯುತ್ತಿದ್ದೆವು ಎಂದು ಕಣ್ಣೆದುರಿಗೆ ನಡೆದ ನೈಜ ಘಟನೆ ವಿವರಿಸಿದ್ದಾಳೆ. ಮಾಧ್ಯಮಗಳೊಂದಿಗೆ ಮಾತನಾಡಿದ ಆಕೆ, ದೊಡ್ಡ ದೊಡ್ಡ ಅಲೆಗಳಿಗೆ

ನಾಲ್ಕಲ್ಲ 15 ಜನರು ಮುಳುಗಿ ಹೋಗುತ್ತಿದ್ದೆವು : ಮುರುಡೇಶ್ವರ ದುರಂತದ ನೈಜ ಘಟನೆ ವಿವರಿಸಿದ ವಿದ್ಯಾರ್ಥಿನಿ! Read More »

ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನಲೆ| ಮುಳ್ಳಯ್ಯನ ಗಿರಿಗೆ 4 ದಿನ ಪ್ರವಾಸ ನಿರ್ಬಂಧ

ಸಮಗ್ರ ನ್ಯೂಸ್: ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿಯಲ್ಲಿ ದತ್ತ ಪಾದುಕೆ ದರ್ಶನ ಹಾಗೂ ದತ್ತ ಜಯಂತಿ ಹಿನ್ನಲೆಯಲ್ಲಿ ಪ್ರವಾಸಿಗರಿಗೆ 4 ದಿನ ಮುಳ್ಳಯ್ಯನ ಗಿರಿ ಹಾಗೂ ಮಾಣಿಕ್ಯಧಾರಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶಿಸಿದೆ. ದತ್ತಜಯಂತಿ ಹಿನ್ನೆಲೆಯಲ್ಲಿ ವಿಶ್ವಹಿಂದೂ ಪರಿಷದ್, ಬಜರಂಗದಳದ ನೇತೃತ್ವದಲ್ಲಿ ನಡೆಯುವ ದತ್ತಜಯಂತಿ ಡಿ.11ರಿಂದ 14ರವರೆಗೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಈ ನಾಲ್ಕು ದಿನಗಳಂದು ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಈ ಕುರಿತಂತೆ ಅಧಿಕೃತ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಡಿ. 15ರ ಸಂಜೆ ಬಳಿಕ ಮುಳ್ಳಯ್ಯನ

ಚಿಕ್ಕಮಗಳೂರು: ದತ್ತ ಜಯಂತಿ ಹಿನ್ನಲೆ| ಮುಳ್ಳಯ್ಯನ ಗಿರಿಗೆ 4 ದಿನ ಪ್ರವಾಸ ನಿರ್ಬಂಧ Read More »

ದೇಶಕ್ಕಾಗಿ ಹೋರಾಡಿ ಮೃತಪಟ್ಟ ಸೈನಿಕರ ದೇಹಗಳನ್ನು ಕತ್ತೆ ಮೇಲೆ ಹೊತ್ತೊಯ್ದ ಪಾಕಿಸ್ತಾನ ಸೇನೆ!

ಸಮಗ್ರ ನ್ಯೂಸ್ : ಪಾಕಿಸ್ತಾನದ ಆಡಳಿತವು ಭಯೋತ್ಪಾದಕರ ವಿರುದ್ಧ ಹೋರಾಡಿ ಮಡಿದ ಪಾಕ್ ಸೈನಿಕರ ದೇಹಗಳನ್ನು ವಾಹನಗಳ ಬದಲಿಗೆ ಕತ್ತೆಗಳ ಮೇಲೆ ಸಾಗಿಸಿದೆ. ಪಾಕಿಸ್ತಾನಿ ಸೇನೆಯ ಉನ್ನತ ಕಮಾಂಡರ್‌ಗಳನ್ನು ಕತ್ತೆಗಳ ಮೇಲೆ ಹೊತ್ತೊಯ್ಯುವ ವಿಡಿಯೋ ಹೊರಬಿದ್ದ ನಂತರ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪಾಕಿಸ್ತಾನದ ಪರ ಹೋರಾಡಿ ಪ್ರಾಣತೆತ್ತ ಸೈನಿಕರಿಗೆ ಅಲ್ಲಿನ ಸರ್ಕಾರ ತೋರುತ್ತಿರುವ ಅಗೌರವದ ಬಗ್ಗೆ ಟೀಕೆ ವ್ಯಕ್ತವಾಗಿದೆ. ಪಾಕಿಸ್ತಾನದ ಬಲೂಚಿಸ್ತಾನ್ ಮತ್ತು ಖೈಬರ್ ಪುಂಖ್ಯಾ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆಯ 100ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದಾರೆ. ಈ

ದೇಶಕ್ಕಾಗಿ ಹೋರಾಡಿ ಮೃತಪಟ್ಟ ಸೈನಿಕರ ದೇಹಗಳನ್ನು ಕತ್ತೆ ಮೇಲೆ ಹೊತ್ತೊಯ್ದ ಪಾಕಿಸ್ತಾನ ಸೇನೆ! Read More »

ಸೌತಡ್ಕ ಮಹಾಗಣಪತಿ ಕ್ಷೇತ್ರದ ಸ್ವಚ್ಚತಾ ಸಿಬ್ಬಂದಿಯ ಮೇಲೆ ಹಲ್ಲೆ

ಸಮಗ್ರ ನ್ಯೂಸ್:ಸೌತಡ್ಕ ಶ್ರೀ ಮಹಾಗಣಪತಿ ಸನ್ನಿದಾನದ ಸ್ವಚ್ಚತಾ ಕೆಲಸ ನಿರ್ವಹಿಸುತ್ತಿದ್ದ ಸಿಬ್ಬಂದಿ ಮಹೇಂದ್ರ ಕೊಲ್ಲಾಜೆಪಳಿಕೆ ಎಂಬವರಿಗೆ ಯಾತ್ರಾರ್ಥಿಗಳು ಹಲ್ಲೆ ನಡೆಸಿದ ಘಟನೆ ನ.20ರಂದು ನಡೆದಿದೆ. ಸ್ವಚ್ಚತಾ ಸಿಬ್ಬಂದಿಯಾದ ಮಹೇಂದ್ರ ಅವರು ತನ್ನ ಮೊಬೈಲನ್ನು ಶೌಚಾಲಯದ ಒಳಗಿಟ್ಟು, ಸ್ವಚ್ಚತೆಗೊಳಿಸುತ್ತಿದ್ದ ವೇಳೆ ಹಲ್ಲೆ ನಡೆಸಿದ್ದಾರೆ.ಅವರ ತಲೆಗೆ ಗಂಭೀರ ಏಟಾಗಿದ ಪರಿಣಾಮ ಅವರು ಪ್ರಜ್ಞೆ ಕಳೆದುಕೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಕೊಕ್ಕಡ ಸರಕಾರಿ ಆಸ್ಪತ್ರೆಗೆ ಕರೆತಂದು, ಅಲ್ಲಿಂದ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು

ಸೌತಡ್ಕ ಮಹಾಗಣಪತಿ ಕ್ಷೇತ್ರದ ಸ್ವಚ್ಚತಾ ಸಿಬ್ಬಂದಿಯ ಮೇಲೆ ಹಲ್ಲೆ Read More »

ಕುಕ್ಕೆ‌ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ

ಸಮಗ್ರ ನ್ಯೂಸ್: ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸೋಮವಾರ ಭೇಟಿ ನೀಡಿದರು. ಪತ್ನಿ ಸಮೇತ ದೇಗುಲಕ್ಕೆ ಆಗಮಿಸಿದ ಅವರು, ಆಶ್ಲೇಷ ಬಲಿ ಪೂಜೆ, ಮಹಾಪೂಜೆ ಹಾಗೂ ಅಭಿಷೇಕ ನೆರವೇರಿಸಿದರು. ಈ ವೇಳೆ, ಸೂರ್ಯಕುಮಾರ್ ಯಾದವ್ ದಂಪತಿಗೆ ದೇವಸ್ಥಾನದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಈ ಹಿಂದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಗೆದ್ದ ಬಳಿಕ ಸೂರ್ಯಕುಮಾರ್ ಯಾದವ್ ಉಡುಪಿಯ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ

ಕುಕ್ಕೆ‌ ಸುಬ್ರಹ್ಮಣ್ಯಕ್ಕೆ ಕ್ರಿಕೆಟಿಗ ಸೂರ್ಯಕುಮಾರ್ ಯಾದವ್ ಭೇಟಿ Read More »

ದೀಪಾವಳಿ ಬಂಪರ್‌/ ಕೆಎಸ್‌ಆರ್‌ಟಿಸಿಗೆ ಭರ್ಜರಿ ಆದಾಯ

ಸಮಗ್ರ ನ್ಯೂಸ್‌: ದೀಪಾವಳಿ ಹಬ್ಬದ ಸಮಯದಲ್ಲಿ ಸಾಲು ಸಾಲು ರಜೆಗಳಿದ್ದ ಕಾರಣ ಕೆಎಸ್‌ಆರ್‌ಟಿಸಿ (KSRTC) ಬಂಪ‌ರ್ ಆದಾಯಗಳಿಸಿದ್ದು, ಒಂದೇ ದಿನದಲ್ಲಿ ಬರೋಬ್ಬರಿ 5.59 ಕೋಟಿ ರೂ. ಆದಾಯವನ್ನು ಕೆಎಸ್‌ಆರ್‌ಟಿಸಿ ಗಳಿಸಿದೆ. ಊರಿನತ್ತ ತೆರಳಿದ್ದವರು ನ.03 ರಂದು ಭಾನುವಾರ ಮತ್ತೆ ಸಿಲಿಕಾನ್ ಸಿಟಿಗೆ ಮರಳಿದ್ದಾರೆ. ಇದರಿಂದಾಗಿ ಭಾನುವಾರ ಒಂದೇ ದಿನ ಆನ್‌ಲೈನ್‌ಲ್ಲಿ 85,462 ಸೀಟುಗಳನ್ನು ಬುಕಿಂಗ್ ಆಗಿದ್ದವು. ಇದಕ್ಕೂ ಮೊದಲು ಅಕ್ಟೋಬರ್ ಅಂತ್ಯದ ದಿನವೊಂದರಲ್ಲಿ 67,033 ಟಿಕೆಟ್ ಮಾರಾಟವಾಗಿದ್ದವು.

ದೀಪಾವಳಿ ಬಂಪರ್‌/ ಕೆಎಸ್‌ಆರ್‌ಟಿಸಿಗೆ ಭರ್ಜರಿ ಆದಾಯ Read More »