ಕ್ರೀಡೆ

ಟೋಕಿಯೋ ಒಲಿಂಪಿಕ್ ‌ನಿಂದ ಹಿಂದೆ ಸರಿದ ಪೆಡರರ್

ಸ್ವೀಸ್ ಮೇಸ್ಟ್ರೋ ರೋಜರ್ ಫೆಡರರ್ ‘ಟೋಕಿಯೊ ಒಲಿಂಪಿಕ್ಸ್ʼನಿಂದ ಹಿಂದೆ ಸರಿಯುವ ನಿರ್ಧಾರವನ್ನ ಮಂಗಳವಾರ ಘೋಷಿಸಿದ್ದಾರೆ ಸ್ವಿಟ್ಜರ್ಲೆಂಡ್ ಒಲಿಂಪಿಕ್ಸ್ ತಂಡದಲ್ಲಿ ಹೆಸರಿಸಲ್ಪಟ್ಟ ಕೆಲವು ದಿನಗಳ ನಂತರ ಈ ನಿರ್ಧಾರ ಪ್ರಕಟಿಸಿರುವ ಅವರು ಮೊಣಕಾಲು ನೋವಿನಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. 20 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ಚಾಂಪಿಯನ್ ಆಗಿರುವ ಫೆಡರರ್ ಈ ವರ್ಷದ ಆರಂಭದಲ್ಲಿ ಅನೇಕ ಮೊಣಕಾಲು ಶಸ್ತ್ರಚಿಕಿತ್ಸೆಗಳಿಂದಾಗಿ 2020ರ ಹೆಚ್ಚಿನ ಭಾಗವನ್ನು ಕಳೆದುಕೊಂಡ ನಂತರ ಮತ್ತೆ ಆಟಕ್ಕೆ ಮರಳಿದ್ದರು.ಅಂದ ಹಾಗೆ,ಮಾರ್ಚ್ʼನಲ್ಲಿ ದೋಹಾ ಓಪನ್ʼನಲ್ಲಿ ಮರಳಿದ್ದು, ಅಲ್ಲಿ ಅವರು 2ನೇ ಸುತ್ತಿನಲ್ಲಿ […]

ಟೋಕಿಯೋ ಒಲಿಂಪಿಕ್ ‌ನಿಂದ ಹಿಂದೆ ಸರಿದ ಪೆಡರರ್ Read More »

ಭಾರತದ ಮಾಜಿ ಕ್ರಿಕೆಟಿಗ ಯಶ್’ಪಾಲ್ ಶರ್ಮ ವಿಧಿವಶ

ಚೊಚ್ಚಲ ವಿಶ್ವಕಪ್ ವಿಜೇತ ಕ್ರಿಕೆಟ್ ತಂಡದ ಆಟಗಾರ ಯಶ್ ಪಾಲ್ ಶರ್ಮಾ(66) ಅವರು ಇಂದು ಬೆಳಿಗ್ಗೆ ಹೃದಯಾಘಾತದಿಂದ ಮೃತಾಪಟ್ಟಿದ್ದಾರೆ. ಕಪಿಲ್ ದೇವ್ ನಾಯಕತ್ವದಲ್ಲಿ, 1983ರಲ್ಲಿ ಭಾರತ ಕ್ರಿಕೆಟ್ ತಂಡ ಮೊದಲ ಬಾರಿಗೆ ವಿಶ್ವಕಪ್ ಗೆ ಮುತ್ತಿಕ್ಕಿತ್ತು. ಆ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದಲ್ಲಿ ಯಶ್ ಪಾಲ್ ಶರ್ಮಾ ಆಡಿದ್ದರು. ಭಾರತ ತಂಡದ ಮಾಧ್ಯಮ ಕ್ರಮಾಂಕದ ದಾಂಡಿಗರಾಗಿದ್ದ ಯಶ್ ಪಾಲ್ ಶರ್ಮಾ ಇಂದು ಬೆಳಿಗ್ಗೆ 7.30ರ ಸುಮಾರಿಗೆ ಹೃದಯಾಘಾತದಿಂದ ನಿಧರಾಗಿದ್ದಾರೆ. ಅವರ ನಿಧನಕ್ಕೆ ಕ್ರಿಕೆಟ್ ವಲಯ ಕಂಬನಿ ಮಿಡಿದಿದೆ.

ಭಾರತದ ಮಾಜಿ ಕ್ರಿಕೆಟಿಗ ಯಶ್’ಪಾಲ್ ಶರ್ಮ ವಿಧಿವಶ Read More »

53 ವರ್ಷಗಳ ಬಳಿಕ ಯೂರೋಕಪ್ ಗೆ ಮುತ್ತಿಕ್ಕಿದ ಇಟಲಿ, ಜಿದ್ದಾಜಿದ್ದಿನ ಹೋರಾಟದಲ್ಲಿ ಇಂಗ್ಲೆಂಡ್ ಗೆ ಸೋಲು

ಲಂಡನ್: ಭಾರೀ ಜಿದ್ದಾಜಿದ್ದಿನಿಂದ ಕೂಡಿದ್ದ ಯೂರೊ ಕಪ್ ನ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಇಟಲಿ ಗೆದ್ದು ಬೀಗಿದೆ. ಅಂತಿಮ ಸೆಣಸಾಟದಲ್ಲಿ 3-2 ರ ಅಂತರದಿಂದ ಗೆದ್ದ ಇಟಲಿ 53 ವರ್ಷಗಳ ಬಳಿಕ ಯುರೊ ಕಪ್ ಗೆದ್ದು ಸಂಭ್ರಮಿಸಿತು. ವೆಂಬ್ಲೇ ಸ್ಟೇಡಿಯಂ ನಲ್ಲಿ ನಡೆದ ಪಂದ್ಯದಲ್ಲಿ ಎಕ್ಸಟ್ರಾ ಅವಧಿ ಮುಗಿಯುವಾಗ ಇತ್ತಂಡಗಳು 1-1 ಗೋಲು ಬಾರಿಸಿದ್ದರು. ಆದರೆ ಪೆನಾಲ್ಟಿ ಶೂಟ್ ಔಟ್ ನಲ್ಲಿ ಇಟಲಿ ಗೆಲುವು ಸಾಧಿಸಿತು. ಇಂಗ್ಲೆಂಡ್ ಆಟವನ್ನು ಉನ್ನತ ಮಟ್ಟದಲ್ಲಿ ಪ್ರಾರಂಭಿಸಿತು. 1.57 ನೇ

53 ವರ್ಷಗಳ ಬಳಿಕ ಯೂರೋಕಪ್ ಗೆ ಮುತ್ತಿಕ್ಕಿದ ಇಟಲಿ, ಜಿದ್ದಾಜಿದ್ದಿನ ಹೋರಾಟದಲ್ಲಿ ಇಂಗ್ಲೆಂಡ್ ಗೆ ಸೋಲು Read More »

ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್‌ಗೆ ಅಭಿಮಾನಿಗಳು ಫಿದಾ

ಲಂಡನ್: ಭಾರತ ಮಹಿಳಾ ತಂಡದ ಆಟಗಾರ್ತಿ ಹರ್ಲೀನ್ ಡಿಯೋಲ್ ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಹಿಡಿದ ಅದ್ಭುತ ಕ್ಯಾಚ್‌ಗೆ ದಿಗ್ಗಜ ಕ್ರಿಕೆಟಿಗರು ಸಹಿತ ಅಭಿಮಾನಿಗಳು ಫಿದಾ ಆಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಮೊದಲ ಟ-20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಇಂಗ್ಲೆಂಡ್ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಇಂಗ್ಲೆಂಡ್ ಬ್ಯಾಟಿಂಗ್ ವೇಳೆ 18.5 ನೇ ಓವರ್ ನಲ್ಲಿ ಎಮಿ ಜೋನ್ಸ್ ಬಾರಿಸಿದ ಬಿಗ್ ಶಾಟ್ ಒಂದನ್ನು ಲಾಂಗ್ ಆಫ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಹರ್ಲೀನ್

ಹರ್ಲೀನ್ ಡಿಯೋಲ್ ದಿ ಬೆಸ್ಟ್ ಕ್ಯಾಚ್‌ಗೆ ಅಭಿಮಾನಿಗಳು ಫಿದಾ Read More »

ಬ್ಯಾಟ್ ಯಾವಾಗಲು ನೆರೆಮನೆಯಾತನ ಹೆಂಡತಿಯಂತೆ | ದಿನೇಶ್ ಕಾರ್ತಿಕ್ ಕ್ಷಮೆಯಾಚನೆ

ನವದೆಹಲಿ: ಪ್ರತಿಯೊಬ್ಬ ಕ್ರಿಕೆಟಿಗನು ಇನ್ನೊಬ್ಬರ ಬ್ಯಾಟನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅದೊಂತರ ನೆರೆಮನೆಯಾತನ ಹೆಂಡತಿ ಇದ್ದಂತೆ ಎಂದು ಹೇಳಿದ್ದ ಕಮೆಂಟೇಟರ್ ದಿನೇಶ್ ಕಾರ್ತಿಕ್ ಕ್ಷಮೆಯಾಚಿಸಿದ್ದಾರೆ. ಇತ್ತೀಚೆಗೆ ನಡೆದ ಶ್ರೀಲಂಕಾ-ಇಂಗ್ಲೆಂಡ್ ನಡುವಣ ಎರಡನೇ ಏಕದಿನ ಪಂದ್ಯದ ವೇಳೆ ಕಮೆಂಟೇಟರ್ ಆಗಿದ್ದ ಅವರು ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರತಿಯೊಬ್ಬ ಬ್ಯಾಟ್ಸ್ಮನ್ ತನ್ನ ಬ್ಯಾಟ್’ಗಿಂತ ಹೆಚ್ಚಾಗಿ ಸಹ ಆಟಗಾರರ ಬ್ಯಾಟ್’ನ್ನು ಇಷ್ಟಪಡುತ್ತಾರೆ. ಅದೊಂಥರಾ ಪಕ್ಕದ ಮನೆಯಾತನ ಹೆಂಡತಿ ಇದ್ದಂತೆ ಯಾವಾಗಲೂ ಚೆನ್ನಾಗಿ ಕಾಣುತ್ತದೆ ಎಂದಿದ್ದರು. ಈ ಹೇಳಿಕೆ ಸಾಮಾಜಿಕ ಜಾಲ ತಾಣಗಳಲ್ಲಿ

ಬ್ಯಾಟ್ ಯಾವಾಗಲು ನೆರೆಮನೆಯಾತನ ಹೆಂಡತಿಯಂತೆ | ದಿನೇಶ್ ಕಾರ್ತಿಕ್ ಕ್ಷಮೆಯಾಚನೆ Read More »

ಮಹಿಳಾ ಏಕದಿನ ಕ್ರಿಕೆಟ್ ಸರಣಿ: ಭಾರತಕ್ಕೆ 4 ವಿಕೆಟ್ ಜಯ, ಟ್ರೋಫಿ ಇಂಗ್ಲೆಂಡ್ ‌ಪಾಲು

ವೋರ್ಸೆಸ್ಟರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಮಹಿಳಾ ತಂಡ ನಾಲ್ಕು ವಿಕೆಟ್ ಗಳಿಂದ ಗೆಲುವು ಸಾಧಿಸಿ ವೈಟ್ ವಾಶ್ ಮುಖಭಂಗದಿಂದ ತಪ್ಪಿಸಿಕೊಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಇಂಗ್ಲೆಂಡ್ 2-1 ಅಂತರದಿಂದ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಇಂಗ್ಲೆಂಡ್ ಮೊದಲ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿತ್ತು. ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ 219 ರನ್ ಗಳಿಗೆ ಆಲೌಟ್ ಆಯಿತು. ನಂತರ ಟೀ ಇಂಡಿಯಾಗೆ ಓವರ್ ಕಡಿತಗೊಳಿಸಿ

ಮಹಿಳಾ ಏಕದಿನ ಕ್ರಿಕೆಟ್ ಸರಣಿ: ಭಾರತಕ್ಕೆ 4 ವಿಕೆಟ್ ಜಯ, ಟ್ರೋಫಿ ಇಂಗ್ಲೆಂಡ್ ‌ಪಾಲು Read More »

ಏಕದಿನ ಸರಣಿ: ಇಂಗ್ಲೆಂಡ್ ಅಬ್ಬರಕ್ಕೆ ಶ್ರೀಲಂಕಾ‌ ತತ್ತರ

ಟಿ20 ಸರಣಿಯ ನಂತರ ಏಕದಿನ ಸರಣಿಯಲ್ಲಿಯೂ ಇಂಗ್ಲೆಂಡ್ ಶ್ರೀಲಂಕಾ ವಿರುದ್ಧ ಅಬ್ಬರಿಸಿದೆ. ಮಂಗಳವಾರ ನಡೆದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಶ್ರೀಲಂಕಾ ತಂಡದ ವಿರುದ್ಧ ಐದು ವಿಕೆಟ್‌ಗಳ ಅಂತರದ ಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ನಾಯಕ ಕುಸಾಲ್ ಪೆರೆರ ಹಾಗೂ ಹಸರಂಗ ಅವರ ಅದ್ಭುತ 99 ರನ್‌ಗಳ ಅದ್ಭುತ ಜೊತೆಯಾಟದ ಹೊರತಾಗಿಯೂ ಶ್ರೀಲಂಕಾ ದೊಡ್ಡ ಮೊತ್ತವನ್ನು ಗಳಿಸಲು ವಿಫಲವಾಗಿತ್ತು. ಶ್ರೀಲಂಕಾ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿದರೆ ಯಾವ ಆಟಗಾರನಿಂದಲೂ ಉತ್ತಮ ರನ್‌ ಕೊಡುಗೆ ದೊರೆಯಲೇ ಇಲ್ಲ.

ಏಕದಿನ ಸರಣಿ: ಇಂಗ್ಲೆಂಡ್ ಅಬ್ಬರಕ್ಕೆ ಶ್ರೀಲಂಕಾ‌ ತತ್ತರ Read More »

ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ

ಶಿಖರ್ ಧವನ್ ನೇತೃತ್ವದ ಭಾರತೀಯ ಸೀಮಿತ ಓವರ್‌ಗಳ ತಂಡ ಸೋಮವಾರ ಸಂಜೆ ಶ್ರೀಲಂಕಾವನ್ನು ತಲುಪಿದೆ. ರಾಹುಲ್ ದ್ರಾವಿಡ್ ಕೋಚ್ ಆಗಿ ತೆರಳಿರುವ ಈ ತಂಡದಲ್ಲಿ ಯುವ ಆಟಗಾರರ ದಂಡೇ ಇದೆ. ಮೂರು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ ಲಂಕಾ ತಂಡವನ್ನು ಎದುರಿಸಲಿದೆ. ಭಾರತ ತಂಡದ ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದು ಟೀಮ್ ಇಂಡಿಯಾ ತಂಡವನ್ನು ಟೆಸ್ಟ್ ಸರಣಿಯಲ್ಲಿ ಮುನ್ನಡೆಸಲಿದ್ದಾರೆ. ಆಗಸ್ಟ್ ತಿಂಗಳಿನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಇಂಗ್ಲೆಂಡ್

ಶಿಖರ್ ಧವನ್ ನೇತೃತ್ವದಲ್ಲಿ ಶ್ರೀಲಂಕಾ ತಲುಪಿದ ಟೀಂ ಇಂಡಿಯಾ Read More »

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ

ಹೊಸದಿಲ್ಲಿ: ಇಟಲಿಯ ರೋಮ್‌ನ ಸೆಟ್ಟೆ ಕೊಲ್ಲಿ ಟ್ರೋಫಿಯಲ್ಲಿ ಶನಿವಾರ ನಡೆದ ಪುರುಷರ 200 ಮೀಟರ್ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸಾಜನ್ ಪ್ರಕಾಶ್ 1:56:38 ಸೆಕೆಂಡುಗಳಲ್ಲಿ ಗುರಿ ತಲುಪಿ ಒಲಿಂಪಿಕ್ಸ್ ಅರ್ಹತಾ ಸಮಯವನ್ನು ಮೀರಿದ ಮೊದಲ ಭಾರತೀಯ ಈಜುಗಾರ ಎನಿಸಿಕೊಳ್ಳುವುದರೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ. 2016 ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ 27 ವರ್ಷದ ಪ್ರಕಾಶ್ ಟೋಕಿಯೋ ಕ್ರೀಡಾಕೂಟದಲ್ಲಿ ನಿಗದಿಪಡಿಸಿರುವ ‘ಎ’ ಮಾನದಂಡವನ್ನು (1: 56.48 ಸೆಕೆಂಡು) ಮೀರಿ ನಿಂತರು. ಕೇರಳದ ಈಜುಗಾರ 200 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ

ಒಲಿಂಪಿಕ್ ನಲ್ಲಿ ಇತಿಹಾಸ ಸೃಷ್ಟಿಸಿದ ‘ಸಾಜನ್’, ಬಟರ್ ಫ್ಲೈನಲ್ಲಿ ಅರ್ಹತೆ ಪಡೆದ ಮೊದಲ ಭಾರತೀಯ Read More »

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್

ಸೌಂಥಾಂಪ್ಟನ್: ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಗೆದ್ದುಕೊಳ್ಳುವ ಮೂಲಕ ನ್ಯೂಜಿಲೆಂಡ್ ಇತಿಹಾಸ ನಿರ್ಮಿಸಿದೆ. ಭಾರತದ ವಿರುದ್ಧ 8 ವಿಕೆಟ್‍ಗಳಿಂದ ಗೆದ್ದ ನ್ಯೂಜಿಲೆಂಡ್ ಚೊಚ್ಚಲ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದೆ. ಗೆಲ್ಲಲು 139 ರನ್‍ಗಳ ಗುರಿಯನ್ನು ಪಡೆದ ನ್ಯೂಜಿಲೆಂಡ್ 45.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 140 ರನ್ ಹೊಡೆಯುವ ಮೂಲಕ ವಿಜಯದ ನಗೆ ಬೀರಿತು. ಇಲ್ಲಿಯವರೆಗೆ ಐಸಿಸಿ ಆಯೋಜಿಸಿದ್ದ ಯಾವುದೇ ಟೂರ್ನಿಯನ್ನು ನ್ಯೂಜಿಲೆಂಡ್ ಗೆದ್ದಿರಲಿಲ್ಲ. ಆದರೆ ಈ ಬಾರಿ ಫೈನಲ್ ಗೆಲ್ಲುವ ಮೂಲಕ ಐಸಿಸಿ ಟ್ರೋಫಿ ಗೆಲ್ಲುವ ಕನಸನ್ನು

ಫಸ್ಟ್ ಟೈಂ ಐಸಿಸಿ ಟ್ರೋಫಿಗೆ ಮುತ್ತಿಕ್ಕಿದ ನ್ಯೂಜಿಲೆಂಡ್ Read More »