ಕ್ರೀಡೆ

ಕಾಮನ್ವೆಲ್ತ್ ಗೇಮ್ಸ್| ಭಾರತದ ಮುಡಿಗೆ ಚಿನ್ನದ ಜೊತೆಗೆ ದಾಖಲೆ ಸೃಷ್ಟಿಸಿದ ಮೀರಾ

ಸಮಗ್ರ ನ್ಯೂಸ್: ಬರ್ಮಿಂಗ್ ಹ್ಯಾಂ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಮಹಿಳೆಯರ ವೇಟ್‌ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾರತದ ಮೀರಾಬಾಯಿ ಚಾನು 88 ಕೆಜಿ ಲಿಫ್ಟ್‌ ನೊಂದಿಗೆ ಮುನ್ನಡೆ ಸಾಧಿಸಿ ಚಿನ್ನದ ಪದಕ ಗಳಿಸಿದರು. ಮೀರಾಬಾಯಿ ಚಾನು ಮಹಿಳೆಯರ ವೇಟ್‌ ಲಿಫ್ಟಿಂಗ್ 49 ಕೆಜಿ ವಿಭಾಗದಲ್ಲಿ ಈ ಸಾಧನೆ ಮಾಡಿದ್ದಾರೆ.ವೇಟ್‌ ಲಿಫ್ಟರ್ ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಒಟ್ಟು 201 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದು, ವಿಭಾಗದಲ್ಲಿ ಆಟದ ದಾಖಲೆ ನಿರ್ಮಿಸಿದ್ದಾರೆ.

ಕಾಮನ್ವೆಲ್ತ್ ಗೇಮ್ಸ್| ಭಾರತದ ಮುಡಿಗೆ ಚಿನ್ನದ ಜೊತೆಗೆ ದಾಖಲೆ ಸೃಷ್ಟಿಸಿದ ಮೀರಾ Read More »

ಇಂದಿನಿಂದ ಕಾಮನ್‌ವೆಲ್ತ್ ಗೇಮ್ಸ್| ಪದಕ ಬೇಟೆಗೆ ಭಾರತದ ಹುಲಿಗಳು ಸಜ್ಜು

ಸಮಗ್ರ ನ್ಯೂಸ್: 22ನೇ ಆವೃತ್ತಿಯ ಕಾಮನ್ವೆಲ್ತ್ ಗೇಮ್ಸ್ ಬರ್ಮಿಂಗ್ ಹ್ಯಾಮ್ ನಲ್ಲಿ ಆರಂಭವಾಗಲಿದ್ದು, ಅದಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ಭಾರತೀಯ ಕಾಲಮಾನ ರಾತ್ರಿ 11:30ಕ್ಕೆ ಅದ್ದೂರಿ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಈ ವೇಳೆ 30,000ಕ್ಕೂ ಅಧಿಕ ಪ್ರೇಕ್ಷಕರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ರಾಣಿ ಎಲಿಜಬೆತ್ ಅನುಪಸ್ಥಿತಿಯಲ್ಲಿ ರಾಜಕುಮಾರ ಚಾರ್ಲ್ಸ್ ಕ್ರೀಡಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು, ರಾಣಿ ಎಲಿಜಬೆತ್ ಬಕಿಂಗ್ ಹ್ಯಾಮ್ ಅರಮನೆಯಿಂದಲೇ ಸಂದೇಶವನ್ನು ಓದುವ ಮೂಲಕ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಚಾಲನೆ ನೀಡಲಿದ್ದಾರೆ. ಉದ್ಘಾಟನಾ ಸಮಾರಂಭದ ವೇಳೆ ಲೇಸರ್ ಶೋ

ಇಂದಿನಿಂದ ಕಾಮನ್‌ವೆಲ್ತ್ ಗೇಮ್ಸ್| ಪದಕ ಬೇಟೆಗೆ ಭಾರತದ ಹುಲಿಗಳು ಸಜ್ಜು Read More »

ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ| ಕೆರೆಬಿಯನ್ ನಾಡಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ

ಸಮಗ್ರ ನ್ಯೂಸ್: ವೆಸ್ಟ್ ಇಂಡೀಸ್ ವಿರುದ್ಧದ ಮಳೆ ಬಾಧಿತ ಅಂತಿಮ ಏಕದಿನ ಪಂದ್ಯದಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ 119 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿರುವ ಟೀಮ್ ಇಂಡಿಯಾ, ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ 3-0 ಅಂತರದ ಕ್ಲೀನ್‌ಸ್ವೀಪ್ ಜಯ ಸಾಧಿಸಿದೆ. ಮಳೆಯಿಂದಾಗಿ ಓವರ್‌ಗಳ ಸಂಖ್ಯೆಯನ್ನು ಇಳಿಕೆ ಮಾಡಲಾಯಿತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಟೀಮ್ ಇಂಡಿಯಾ, ಶುಭಮನ್ ಗಿಲ್ ಹಾಗೂ ನಾಯಕ ಶಿಖರ್ ಧವನ್ ಆಕರ್ಷಕ ಅರ್ಧಶತಕಗಳ ನೆರವಿನಿಂದ ಮೂರು ವಿಕೆಟ್

ಸರಣಿ ಕ್ಲೀನ್ ಸ್ವೀಪ್ ಮಾಡಿದ ಟೀಂ ಇಂಡಿಯಾ| ಕೆರೆಬಿಯನ್ ನಾಡಲ್ಲಿ ಮತ್ತೊಂದು ಐತಿಹಾಸಿಕ ದಾಖಲೆ Read More »

ವಿಶ್ವದಾಖಲೆ ಬರೆದ ಟೀಂ ಇಂಡಿಯಾ| ವೆಸ್ಟ್ ಇಂಡೀಸ್ ವಿರುದ್ದ 12 ಸರಣಿಯಲ್ಲಿ ಜಯಮಾಲೆ

ಸಮಗ್ರ ನ್ಯೂಸ್: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಭಾರತ ತಂಡ 2-0 ರನ್‌ ಅಂತರದಿಂದ ಗೆದ್ದುಕೊಂಡಿದೆ. ಇದರೊಂದಿಗೆ ತಂಡವೊಂದರ ವಿರುದ್ಧ ಸತತ 12 ಸರಣಿ ಜಯಿಸಿದ ವಿಶ್ವದಾಖಲೆ ಬರೆದಿದೆ. ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವಿಂಡೀಸ್‌, ಶಾಯ್‌ ಹೋಪ್‌ ಗಳಿಸಿದ ಶತಕದ ನೆರವಿನಿಂದ 311 ರನ್‌ ಗಳಿಸಿತ್ತು. ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ಪರ ಅಮೋಘ ಬ್ಯಾಟಿಂಗ್‌

ವಿಶ್ವದಾಖಲೆ ಬರೆದ ಟೀಂ ಇಂಡಿಯಾ| ವೆಸ್ಟ್ ಇಂಡೀಸ್ ವಿರುದ್ದ 12 ಸರಣಿಯಲ್ಲಿ ಜಯಮಾಲೆ Read More »

ವಿಶ್ವ ಅಥ್ಲೆಟಿಕ್ಸ್; ರಜತಕ್ಕೆ ಕೊರಳೊಡ್ಡಿದ ನೀರಜ್

ಸಮಗ್ರ ನ್ಯೂಸ್: ವಿಶ್ವ ಆಯತ್ಲೆಟಿಕ್ಸ್‌ ಜಾವೆಲಿನ್‌ ಸ್ಪರ್ಧೆಯಲ್ಲಿ ಭಾರತದ ತಾರೆ ನೀರಜ್ ಚೋಪ್ರಾ ಅವರು ರಜತ ಪದಕಕ್ಕೆ ತೃಪ್ತಿ ಪಟ್ಟರು. ನೀರಜ್ ಗೆ ಪ್ರಬಲ ಸ್ಪರ್ಧೆ ನೀಡಿದ ಆಯಂಡರ್ಸನ್ ಪೀಟರ್ ಮೂರು ಬಾರಿ 90 ಮೀಟರ್ ಗಿಂತ ಹೆಚ್ಚು ಎಸೆದು ಬಂಗಾರದ ಪದಕ ಪಡೆದರು. ಇಂದಿನ ಫೈನಲ್ ಪಂದ್ಯದಲ್ಲಿ ನೀರಜ್ ಚೋಪ್ರಾ ಅವರು ಮೊದಲ ಎಸೆತ ಫೌಲ್, ಎರಡನೇ ಎಸೆತ 82.39, ಮೂರನೇ ಎಸೆತವನ್ನು 86.37, ನಾಲ್ಕನೇ ಎಸೆತ 88.13 ಮತ್ತು ಐದನೇ ಎಸೆತ ಫೌಲ್ ಆಯಿತು.

ವಿಶ್ವ ಅಥ್ಲೆಟಿಕ್ಸ್; ರಜತಕ್ಕೆ ಕೊರಳೊಡ್ಡಿದ ನೀರಜ್ Read More »

ವೆಸ್ಟ್ ಇಂಡೀಸ್ ಏಕದಿನ ಸರಣಿ| ಮೂರು ರನ್ ಗಳ ರೋಚಕ ಜಯ ಗಳಿಸಿದ ಇಂಡಿಯಾ

ಸಮಗ್ರ ನ್ಯೂಸ್: ಆತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧದ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡ 3 ರನ್‌ ಅಂತರದ ಗೆಲುವು ಸಾಧಿಸಿದೆ. ಟ್ರೆನಿಡಾಡ್‌ನ ಕ್ವೀನ್ಸ್‌ ಪಾರ್ಕ್‌ ಓವಲ್‌ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ವಿಂಡೀಸ್‌ ತಂಡದ ನಾಯಕ ನಿಕೋಲಸ್‌ ಪೂರನ್‌, ಭಾರತವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿದರು. ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕತ್ವದ ಹೊಣೆ ಹೊತ್ತಿರುವ ಶಿಖರ್‌ ಧವನ್‌ ಹಾಗೂ ಶುಭಮನ್‌ ಗಿಲ್‌ ಭಾರತಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಈ ಜೋಡಿ,

ವೆಸ್ಟ್ ಇಂಡೀಸ್ ಏಕದಿನ ಸರಣಿ| ಮೂರು ರನ್ ಗಳ ರೋಚಕ ಜಯ ಗಳಿಸಿದ ಇಂಡಿಯಾ Read More »

ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಗೆ ಕೋವಿಡ್ ಸೋಂಕು ದೃಢ

ನವದೆಹಲಿ : ಭಾರತದ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ʼಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಮತ್ತೊಂದು ಹಿನ್ನಡೆಯನ್ನು ಅನುಭವಿಸಿದ್ದಾರೆ ಎಂದು ಅಪೆಕ್ಸ್ ಕೌನ್ಸಿಲ್ ಸಭೆಯ ನಂತರ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ. ಇನ್ನು ರಾಹುಲ್‌ಗೆ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಸರಣಿಯ ಕೊನೆಯ ಭಾಗಕ್ಕಾಗಿ ವೆಸ್ಟ್ ಇಂಡೀಸ್‌ಗೆ ತೆರಳುವುದು ಅವರ ಚೇತರಿಕೆಯ ಮೇಲೆ ಅವಲಂಬಿತವಾಗಿದೆ ಎಂದಿದ್ದಾರೆ.

ಭಾರತದ ಬ್ಯಾಟ್ಸ್‌ಮನ್ ಕೆ.ಎಲ್.ರಾಹುಲ್ ಗೆ ಕೋವಿಡ್ ಸೋಂಕು ದೃಢ Read More »

ಸಿಂಗಾಪುರ್ ಓಪನ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಪಿ.ವಿ ಸಿಂಧು

ಸಮಗ್ರ ನ್ಯೂಸ್: ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್ ಚಾಂಪಿಯನ್​ಶಿಪ್​ನ ಮಹಿಳೆಯರ ಸಿಂಗಲ್ಸ್ ಫೈನಲ್‌ನಲ್ಲಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧು ಅಮೋಘ ಜಯ ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಚೀನಾದ ವಾಂಗ್ ಝಿ ಯಿ ವಿರುದ್ದ ನಡೆದ ಫೈನಲ್​ ಪಂದ್ಯದಲ್ಲಿ ಭಾರತೀಯ ತಾರೆ ಭರ್ಜರಿ ಪ್ರದರ್ಶನ ನೀಡಿದ್ದರು. ಆರಂಭದಿಂದಲೇ ವಾಂಗ್ ವಿರುದ್ದ ಮೇಲುಗೈ ಸಾಧಿಸಿದ್ದ ಸಿಂಧು, ಮೊದಲ ಸೆಟ್​ ಅನ್ನು 21-9 ಅಂತರದಿಂದ ಗೆದ್ದುಕೊಂಡರು. ಇದಾಗ್ಯೂ 2ನೇ ಸೆಟ್​ನಲ್ಲಿ ವಾಂಗ್ ಝಿ ಯಿ ಕಂಬ್ಯಾಕ್ ಮಾಡಿದ್ದರು. ದ್ವಿತೀಯ ಸೆಟ್​ನ

ಸಿಂಗಾಪುರ್ ಓಪನ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಪಿ.ವಿ ಸಿಂಧು Read More »

ಚೊಚ್ಚಲ ಮಹಿಳಾ ಗ್ರ್ಯಾನ್ ಸ್ಲ್ಯಾಮ್ ಗೆ ಮುತ್ತಿಕ್ಕಿದ ರೈಬಾಕಿನಾ

ಸಮಗ್ರ ನ್ಯೂಸ್: ವಿಂಬಲ್ಡನ್ ಮಹಿಳೆಯರ ಫೈನಲ್‌ನಲ್ಲಿ ಕಜಕಿಸ್ತಾನದ ಎಲೆನಾ ರೈಬಾಕಿನಾ ಅವರು ಟ್ಯುನೀಶಿಯಾದ ಆನ್ಸ್ ಜಬ್ಯೋರ್ ಅವರನ್ನು ಸೋಲಿಸುವ ಮೂಲಕ ತಮ್ಮ ಚೊಚ್ಚಲ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಸೆಂಟರ್ ಕೋರ್ಟ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕಜಕಿಸ್ತಾನದ 17ನೇ ಶ್ರೇಯಾಂಕದ ರಿಬಾಕಿನಾ 3-6, 6-2, 6-2 ಸೆಟ್‌ಗಳಿಂದ ಮೂರನೇ ಶ್ರೇಯಾಂಕದ ಜಬ್ಯೋರ್ ಅವರನ್ನು ಸೋಲಿಸಿದರು. ಇದು ರಿಬಾಕಿನಾ ಅವರ ಮೊದಲ ಗ್ರ್ಯಾಂಡ್ ಸ್ಲಾಮ್ ಫೈನಲ್ ಆಗಿದ್ದು, ಅವರ ಮೂರನೇ ಪ್ರಶಸ್ತಿಯನ್ನು ಗೆದ್ದರು. ರಷ್ಯಾದಲ್ಲಿ ಬೆಳೆದು ಕಜಕಿಸ್ತಾನದಲ್ಲಿ ನೆಲೆಸಿ ಆ

ಚೊಚ್ಚಲ ಮಹಿಳಾ ಗ್ರ್ಯಾನ್ ಸ್ಲ್ಯಾಮ್ ಗೆ ಮುತ್ತಿಕ್ಕಿದ ರೈಬಾಕಿನಾ Read More »

ಕ್ರಿಕೆಟ್ ಗೆ ಗುಡ್ ಬೈ‌ ಹೇಳಿದ ಮಿಥಾಲಿ ರಾಜ್

ಸಮಗ್ರ ನ್ಯೂಸ್: ಭಾರತ ಏಕದಿನ ಮತ್ತು ಟೆಸ್ಟ್ ತಂಡದ ನಾಯಕಿ ಮಿಥಾಲಿ ರಾಜ್ ಬುಧವಾರ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ‘ವರ್ಷಗಳಿಂದ ನಿಮ್ಮ ಎಲ್ಲಾ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು! ನಿಮ್ಮ ಆಶೀರ್ವಾದ ಮತ್ತು ಬೆಂಬಲದೊಂದಿಗೆ ನಾನು ನನ್ನ 2 ನೇ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿದ್ದೇನೆ’ ಎಂದು ಮಿಥಾಲಿ ಟ್ವೀಟ್ ಮಾಡಿದ್ದಾರೆ. 1999ರಲ್ಲಿ ಮಹಿಳಾ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಿಥಾಲಿ, ಇಂದು ತಮ್ಮ 23 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ

ಕ್ರಿಕೆಟ್ ಗೆ ಗುಡ್ ಬೈ‌ ಹೇಳಿದ ಮಿಥಾಲಿ ರಾಜ್ Read More »