Uncategorized

ಬಿಜೆಪಿ ವಿರುದ್ಧ ಬಂಡಾಯವೆದ್ದು ಥಂಡಾ ಹೊಡೆದ ಪುತ್ತಿಲ ಮರಳಿ ಬಿಜೆಪಿಗೆ ಸೇರ್ಪಡೆ

ಸಮಗ್ರ ನ್ಯೂಸ್: ಬಿಜೆಪಿ ವಿರುದ್ಧ ಬಂಡಾಯ ಸಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಪುತ್ತೂರಿನ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.‌ ಈ ಮೂಲಕ ಮತ್ತೆ ಮರಳಿ ಗೂಡಿಗೆ ವಾಪಾಸ್ಸಾಗಿದ್ದಾರೆ. ಮಾ.14ರ ರಾತ್ರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ವೇಳೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಸುನಿಲ್ ಕುಮಾರ್ ಕಾರ್ಕಳ ಅವರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅರುಣ್ ಕುಮಾರ್ ಪುತ್ತಿಲ […]

ಬಿಜೆಪಿ ವಿರುದ್ಧ ಬಂಡಾಯವೆದ್ದು ಥಂಡಾ ಹೊಡೆದ ಪುತ್ತಿಲ ಮರಳಿ ಬಿಜೆಪಿಗೆ ಸೇರ್ಪಡೆ Read More »

ಪುತ್ತೂರು :ಮನೆಯ ಆವರಣಗೋಡೆ ಕೆಡವಿ ಮಹಿಳೆಗೆ ಹಲ್ಲೆ-ದೂರು ದಾಖಲು

ಸಮಗ್ರ ನ್ಯೂಸ್: ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವಿದ್ದಲ್ಲದೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ಕಡಬ ಕೊಂಬಾರು ಗ್ರಾಮದ ಗಂಗಮ್ಮ(72) ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾ.10ರಂದು ನೆರೆಕೆರೆಯ ಸಂಬಂಧಿಯೂ ಆಗಿರುವ ಶಶಿಧರ ಎಂಬಾತ ಜೆಸಿಬಿ ಯಂತ್ರದ ಮೂಲಕ ಮನೆಯ ಆವರಣಗೋಡೆಯನ್ನು ಕೆಡವಿದ್ದು, ಇದನ್ನು ಪ್ರಶ್ನಿಸಿದಾಗ ಆತ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದು, ಗಾಯಗೊಂಡ ಗಂಗಮ್ಮ ಅವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಗಂಗಮ್ಮ ನೀಡಿದ ದೂರಿನನ್ವಯ ಕಡಬ ಪೊಲೀಸರು

ಪುತ್ತೂರು :ಮನೆಯ ಆವರಣಗೋಡೆ ಕೆಡವಿ ಮಹಿಳೆಗೆ ಹಲ್ಲೆ-ದೂರು ದಾಖಲು Read More »

ಬಿಎಂಆರ್​ಸಿಎಲ್ ನಿಂದ ಮಹತ್ತರ ಕಾರ್ಯ|ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ಆರಂಭ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂಆರ್​ಸಿಎಲ್ ಒಂದು ಮಹತ್ತರ ಬೆಳವಣಿಗೆಯತ್ತ ಕಾಲಿಡುತ್ತಿದೆ. ಹೌದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದು. ನಿನ್ನೆಯಿಂದ ಸಿಗ್ನಲಿಂಗ್ ಪರೀಕ್ಷೆ ನಡೆಯುತ್ತಿದೆ. ಈ ನಡುವೆ, ಬಿಎಂಆರ್​ಸಿಎಲ್​ನ ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಾರ್ಥ ಸಂಚಾರ ನಿನ್ನೆ ಸಂಜೆಯಿಂದ ಹಳದಿ ಮಾರ್ಗದಲ್ಲಿ ಆರಂಭಗೊಂಡಿದೆ. ಇದು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಚಲಿಸುವ ರೈಲಾಗಿದೆ. ಒಟ್ಟು 18.82 ಕಿ.ಮೀ ಇರುವ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದ್ದು, ಈ

ಬಿಎಂಆರ್​ಸಿಎಲ್ ನಿಂದ ಮಹತ್ತರ ಕಾರ್ಯ|ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ಆರಂಭ Read More »

ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆಟೋಚಾಲಕ| ನಿರ್ಜನ ಪ್ರದೇಶದಲ್ಲಿ ನಡೆದಿತ್ತು ಭೀಕರ ಕ್ರೌರ್ಯ

ಸಮಗ್ರ ನ್ಯೂಸ್: ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.20ರ ಮುಂಜಾನೆ ಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ ಕಾಮುಕ. ಮುಬಾರಕ್ (28) ಎಂಬ ಆಟೋ ಚಾಲಕ ಅತ್ಯಾಚಾರವೆಸಗಿ ಕೊಂದುಹಾಕಿದ್ದು, ಶಾಂತಿನಗರದ ಜನತಾಕೋ ಆಪರೇಟಿವ್ ಕಟ್ಟಡದ ಬಳಿ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಮಹಿಳೆ ಕಟ್ಟಡದಿಂದ ಬಿದ್ದು ಮೃತಪಟ್ಟಂತೆ ಕಾಣುತ್ತಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರವೆಸಗಿ ಕೊಂದಿರುವುದು ದೃಢವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆಟೋ ಚಾಲಕ ಮುಬಾರಕ್ ನನ್ನು

ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆಟೋಚಾಲಕ| ನಿರ್ಜನ ಪ್ರದೇಶದಲ್ಲಿ ನಡೆದಿತ್ತು ಭೀಕರ ಕ್ರೌರ್ಯ Read More »

ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ದ.ಕ. ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ

ಸಮಗ್ರ ನ್ಯೂಸ್: ಶಿವಮೊಗ್ಗ ವರ್ಷಿಣಿ ಯೋಗ ಶಿಕ್ಷಣ ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಶಿವಮೊಗ್ಗ ಸಹಯೋಗದೊಂದಿಗೆ ಕರ್ನಾಟಕ ರತ್ನ ಡಾ|ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ 6ನೇ ವರ್ಷದ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆ ವಾಸವಿ ಪಬ್ಲಿಕ್ ಶಾಲೆ ಕೋಟೆ ರಸ್ತೆ ಶಿವಮೊಗ್ಗ ದಲ್ಲಿ ಫೆ. 25ರಂದು ನಡೆಯಿತು. 7 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸುಭಿಕ್ಷಾ ಬಾಲಾಡಿ ಪ್ರಥಮ ಸ್ಥಾನ, ತ್ರಿಷಾಲಿ ನೇರ್ಪು ತೃತೀಯ ಸ್ಥಾನ08 ರಿಂದ 10 ವರ್ಷದ

ಮುಕ್ತ ರಾಷ್ಟ್ರ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಿರಂತರ ಯೋಗ ಕೇಂದ್ರ ದ.ಕ. ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿಗಳ ಸಾಧನೆ Read More »

ಪಾವಗಡದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಯರ ಸಾವು ಪ್ರಕರಣ: ಇಬ್ಬರೂ ನರ್ಸ್ ಸಸ್ಪೆಂಡ್

ಸಮಗ್ರ ನ್ಯೂಸ್: ತುಮಕೂರಿನ ಪಾವಗಡ ತಾಲ್ಲೂಕು ಆಸ್ಪತ್ರೆಯಲ್ಲಿ ಮೊನ್ನೆ ಮೂರು ಜನ ಮಹಿಳೆಯರು ಸಾವು ಪ್ರಕರಣ ನಡೆದಿತ್ತು, ಸಂತಾನಹರಣ, ಗರ್ಭಕೋಶದ ಚಿಕಿತ್ಸೆ ಹಾಗೂ ಸಿಸರಿಯನ್​ಗೆ ಒಳಗಾಗಿದ್ದ ಮೂವರು ಮಹಿಳೆಯರ ಮೃತ ಪಟ್ಟಿದ್ದರು. ಈಗ ಈ ಸಾವು ಪ್ರಕರಣ ಸಂಬಂಧ ಆಸ್ಪತ್ರೆಯ ಗುತ್ತಿಗೆ ವೈದ್ಯೆ ಸೇರಿದಂತೆ ಮೂವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯೆ ಡಾ.ಪೂಜಾ, OT ಟೆಕ್ನಿಷಿಯನ್ ಕಿರಣ್ ಹಾಗೂ ಸ್ಟಾಫ್ ನರ್ಸ್ ಪದ್ಮಾವತಿ ಅವರನ್ನು ಸೇವೆಯಿಂದ ವಜಾಗೊಳಿಸಿ ತುಮಕೂರು ಡಿಹೆಚ್​ಓ ಆದೇಶಿಸಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್

ಪಾವಗಡದಲ್ಲಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಮಹಿಳೆಯರ ಸಾವು ಪ್ರಕರಣ: ಇಬ್ಬರೂ ನರ್ಸ್ ಸಸ್ಪೆಂಡ್ Read More »

ಮಗನ ಕೈಗೆ ಚಿನ್ನಾಭರಣ ಕೊಟ್ಟು ಸೆಲ್ಫಿ ವೀಡಿಯೊ ಮಾಡ್ತಾ ಆತ್ಮಹತ್ಯೆಗೆ ಯತ್ನ

ಸಮಗ್ರ ನ್ಯೂಸ್: ಚಿಕ್ಕಬಳ್ಳಾಪುರದ ನಂದಿ ಬೆಟ್ಟ ಪ್ರವಾಸಿತಾಣವಾದರೂ ಕೆಲವರಿಗಂತು ಅದು ಸೂಸೈಡ್ ಸ್ಪಾಟ್ ಆಗೋಗಿದೆ.ಹೌದು ನನ್ನ ಗಂಡ, ಅತ್ತೆ, ಅವರ ಸಂಬಂಧಿಕರು ಸೇರಿ ನನಗೆ ಮಾನಸಿಕ ಕಿರುಕುಳ ನೀಡಿದ್ದಾರೆ. ನನ್ನ ಸಾವಿಗೆ ನನ್ನ ಗಂಡ ನವೀನ್ ಕಾರಣ ಅಂತ ಸೆಲ್ಫಿ ವೀಡಿಯೊ ಮಾಡಿ… ಮಗನ ಕಣ್ಮುಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಈ ಮಹಿಳೆಯ ಹೆಸರು ಕಾವ್ಯಾ, ಬೆಂಗಳೂರಿನ ಕೆ.ಆರ್. ಪುರಂ ಮೂಲದ ಗೃಹಿಣಿ. ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮಕ್ಕೆ ತನ್ನ ಮಗನ ಜೊತೆ ಆಗಮಿಸಿ ಮೈಮೇಲಿದ್ದ

ಮಗನ ಕೈಗೆ ಚಿನ್ನಾಭರಣ ಕೊಟ್ಟು ಸೆಲ್ಫಿ ವೀಡಿಯೊ ಮಾಡ್ತಾ ಆತ್ಮಹತ್ಯೆಗೆ ಯತ್ನ Read More »

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ರೆ ಸಾಕು, ಲಕ್ಷಗಟ್ಟಲೆ ಹಣ ಗಳಿಸಬಹುದು!

ಸಮಗ್ರ ನ್ಯೂಸ್: ಇಂದಿನ ತಂತ್ರಜ್ಞಾನ ಯುಗದಲ್ಲಿ ಮೊಬೈಲ್ ಬಿಟ್ಟರೆ ಒಂದು ಇಂಚು ಕೂಡ ಕದಿಯಲು ಯಾರಿಂದಲೂ ಸಾಧ್ಯವಿಲ್ಲ. ಮೊಬೈಲ್ ಮಾಯೆ ಜನರನ್ನು ಸ್ವಲ್ಪ ಕಾಲ ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುವುದಕ್ಕೆ ಇದೇ ಸಾಕ್ಷಿ. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಮೊಬೈಲ್ ಬೇಕು ಎನ್ನುವ ಆಸೆ ಹೆಚ್ಚಿದೆ. ನೀವು ಸ್ವಲ್ಪ ಸಮಯದವರೆಗೆ ನಿಮ್ಮ ಮೊಬೈಲ್ ಫೋನ್‌ನಿಂದ ದೂರವಿರಲು ಸಾಧ್ಯವಾದರೆ, ನೀವು ಐಸ್ಲ್ಯಾಂಡಿಕ್ ಮೊಸರು ಕಂಪನಿಯ ಸವಾಲನ್ನು ಸ್ವೀಕರಿಸಬಹುದು. ಡಿಜಿಟಲ್ ಡಿಟಾಕ್ಸ್ ಪ್ರೋಗ್ರಾಂ ಅನ್ನು ನಡೆಸುತ್ತಿರುವ ಮೊಸರು ಬ್ರ್ಯಾಂಡ್ ಸ್ಮಾರ್ಟ್‌ಫೋನ್ ಇಲ್ಲದೆ

ನಿಮ್ಮ ಬಳಿ ಸ್ಮಾರ್ಟ್ ಫೋನ್ ಇದ್ರೆ ಸಾಕು, ಲಕ್ಷಗಟ್ಟಲೆ ಹಣ ಗಳಿಸಬಹುದು! Read More »

ಬಾಲಕಿ ಕಪಾಳಕ್ಕೆ ಹೊಡೆದ KSRTC ಬಸ್ ಕಂಡಕ್ಟರ್

ಸಮಗ್ರ ನ್ಯೂಸ್: ಬಾಲಕಿಗೆ KSRTC ಬಸ್ ನಲ್ಲಿ ಕಂಡಕ್ಟರ್ ಕಪಾಳಕ್ಕೆ ಹೊಡೆದ ಘಟನೆ ಧಾರವಾಡದ ಕೆಲಗೇರಿ ಬಡಾವಣೆಯಲ್ಲಿ ನಡೆದಿದೆ. ಹಣ ಎಣಿಕೆ ಮಾಡುವಾಗ ಕಂಡಕ್ಟರ್ ನ ಬಾಲಕಿ ಟಚ್ ಮಾಡಿದ್ದಾಳೆ. ಇದರಿಂದ ಕಂಡಕ್ಟರ್ ಬಳಿ ಇದ್ದ ಹಣ ಕೆಳಗೆ ಬಿದ್ದಿದೆ ಇದರಿಂದ ಕೋಪಗೊಂಡ ಕಂಡಕ್ಟರ್ ವಿದ್ಯಾರ್ಥಿನಿಗೆ ಹೊಡೆದಿದ್ದಾರೆ. ಕಂಡಕ್ಟರ್ ಕಪಾಳ ಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಕಂಡಕ್ಟರ್ ವಿರುದ್ಧ ಬಾಲಕಿಯರು ಮತ್ತು ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಉಪನಗರ ಠಾಣೆ ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಕಾರರ ಮನವೊಲಿಸುವಲ್ಲಿ

ಬಾಲಕಿ ಕಪಾಳಕ್ಕೆ ಹೊಡೆದ KSRTC ಬಸ್ ಕಂಡಕ್ಟರ್ Read More »

ಕಡಬ: ಚಿಲ್ಲರೆ ನೀಡಿಲ್ಲವೆಂದು ವೃದ್ಧ ವ್ಯಕ್ತಿಯನ್ನು ಅರ್ಧದಲ್ಲೇ ಇಳಿಸಿ‌ದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ

ಸಮಗ್ರ ನ್ಯೂಸ್: ಚಿಲ್ಲರೆ ನೀಡಿಲ್ಲವೆಂಬ ಕಾರಣಕ್ಕೆ KSRTC ಬಸ್ ನಿರ್ವಾಹಕ ವೃದ್ಧರೋರ್ವರನ್ನು ಅರ್ಧ ದಾರಿಯಲ್ಲೇ ಇಳಿಸಿ‌ಹೋದ ಘಟನೆ ಜ. 6ರಂದು ಕಡಬದಲ್ಲಿ ನಡೆದಿದೆ. ಬೆಳಿಗ್ಗೆ 9.30 ಗಂಟೆಗೆ ಕಲ್ಲುಗುಡ್ಡೆಯಿಂದ ಇಚಿಲಂಪಾಡಿ ಮಾರ್ಗವಾಗಿ ಪುತ್ತೂರಿಗೆ ತೆರಳುವ ಕೆಎಸ್ಸಾರ್ಟಿಸಿ ಬಸ್ಸಿಗೆ ಹತ್ತಿದ ಕಲ್ಲುಗುಡ್ಡೆ ನಿವಾಸಿ ವೃದ್ಧರೋರ್ವರು ಕಾಂಚನ ಎಂಬಲ್ಲಿ ಇಳಿಸುವಂತೆ 200 ರೂ. ನೀಡಿದ್ದರು. ಈ ವೇಳೆ ಕಂಡಕ್ಟರ್ ಚಿಲ್ಲರೆ ಕೇಳಿದ್ದು, ವೃದ್ಧರು ಚಿಲ್ಲರೆ ಇಲ್ಲವೆಂದಾಗ ಅರ್ಧ ದಾರಿಯಲ್ಲಿ ಇಳಿಸಿದ್ದಾರೆ ಎನ್ನಲಾಗಿದೆ. ಕಾಂಚನದಲ್ಲಿ ಇಳಿಯುವ ವೇಳೆ ಚಿಲ್ಲರೆ ನೀಡಿದರೆ ಸಾಕೆಂದು

ಕಡಬ: ಚಿಲ್ಲರೆ ನೀಡಿಲ್ಲವೆಂದು ವೃದ್ಧ ವ್ಯಕ್ತಿಯನ್ನು ಅರ್ಧದಲ್ಲೇ ಇಳಿಸಿ‌ದ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ Read More »