Uncategorized

ಕಡಬ: ನದಿಗೆ ಹಾರಿದ ಯುವತಿ| ಪ್ರಾಣ ರಕ್ಷಿಸಿದ ಆಟೋ ಚಾಲಕ!

ಸಮಗ್ರ ನ್ಯೂಸ್: ನದಿಗೆ ಹಾರಿದ ಯುವತಿಯೋರ್ವಳನ್ನು ಆಟೋ ಚಾಲಕ ರಕ್ಷಿಸಿದ ಘಟನೆ ಕಡಬ ಆಲಂಕಾರು ಸಮೀಪದ ಶಾಂತಿಮೊಗರಿನಲ್ಲಿ ನಡೆದಿದೆ. ಶಾಂತಿಮೊಗರು ಸೇತುವೆಯ ಕೆಳಭಾಗದಲ್ಲಿ ಹರಿಯುವ ಕುಮಾರಧಾರ ನದಿಗೆ ಯುವತಿಯು ತನ್ನ ಸ್ಕೂಟಿ ನಿಲ್ಲಿಸಿ ಹಾರಿದ್ದಾಳೆ. ಈ ವೇಳೆ ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಆಕೆ ಬದುಕುಳಿದಿರುವುದಾಗಿ ವರದಿಯಾಗಿದೆ. ಇನ್ನು ಯುವತಿ ಕಡಬ ಸಮುದಾಯ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ತಿಳಿದುಬಂದಿದೆ. ಯುವತಿಯನ್ನು ಪೊಲೀಸರು ಕಡಬ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ. ಯಾವ ಕಾರಣಕ್ಕಾಗಿ ಯುವತಿ ನದಿಗೆ ಹಾರಿರಬಹುದೆಂಬುದು ಪೊಲೀಸರ […]

ಕಡಬ: ನದಿಗೆ ಹಾರಿದ ಯುವತಿ| ಪ್ರಾಣ ರಕ್ಷಿಸಿದ ಆಟೋ ಚಾಲಕ! Read More »

ಬರ ಪರಿಹಾರ/ ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ

ಸಮಗ್ರ ನ್ಯೂಸ್: ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಬರ ಪರಿಹಾರ ಪಡೆಯುವ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ. ರಾಜ್ಯದ 223 ತಾಲೂಕುಗಳಲ್ಲಿ ಎದುರಾಗಿರುವ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯಂತೆ 18,171 ಕೋಟಿ ರು. ಗಳ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್‍ಗೆ ಶನಿವಾರ ರಿಟ್ ಅರ್ಜಿ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದ ಪರಿಹಾರ ಮತ್ತು ಅನುದಾನಕ್ಕಾಗಿ ಈಗಾಗಲೇ ಹಲವು

ಬರ ಪರಿಹಾರ/ ಸುಪ್ರೀಂ ಮೆಟ್ಟಿಲೇರಿದ ಕರ್ನಾಟಕ ಸರ್ಕಾರ Read More »

ಪುತ್ತೂರು: ಗಾಂಜಾ ಸೇವಿಸಿ ಅನುಚಿತ ವರ್ತನೆ| ಆರೋಪಿಗಳ ಸೆರೆ

ಸಮಗ್ರ ನ್ಯೂಸ್‌ : ವ್ಯಕ್ತಿಗಳಿಬ್ಬರು ಗಾಂಜಾ ಸೇವಿಸಿ ಅನುಚಿತವಾಗಿ ವರ್ತನೆ ತೋರಿದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ ದಾಳಿ ನಡೆಸಿ ಪುತ್ತೂರು ನಗರ ಪೊಲೀಸರು ಮೂವರನ್ನು ದಸ್ತಗಿರಿ ಮಾಡಿದ ಘಟನೆ ಪುತ್ತೂರು ಕಸಬಾ ಗ್ರಾಮದ ಕಿಲ್ಲೆ ಮೈದಾನದಲ್ಲಿರುವ, ಟೌನ್‌ಹಾಲ್‌ ಬಳಿ ಸಾರ್ವಜನಿಕ ಪ್ರದೇಶದಲ್ಲಿ ನಡೆದಿದೆ. ಆರೋಪಿಗಳನ್ನು ಬಪ್ಪಳಿಗೆ ಮನೆ, ಪುತ್ತೂರು ಕಸಬಾ ಗ್ರಾಮದ ನಿವಾಸಿ ಬಿ . ಉಮ್ಮರ್‌ ಫಾರೂಕ್‌ (36) ಹಾಗೂ ಮುಕ್ಕಚೇರಿ, ಉಳ್ಳಾಲ, ಮಂಗಳೂರು ತಾಲೂಕು ನಿವಾಸಿ ಕೆ. ಮೊಹಿದ್ದಿನ್‌ (43)

ಪುತ್ತೂರು: ಗಾಂಜಾ ಸೇವಿಸಿ ಅನುಚಿತ ವರ್ತನೆ| ಆರೋಪಿಗಳ ಸೆರೆ Read More »

ಇಂದು ಕಾಂಗ್ರೆಸ್‍ನ ಎರಡನೇ ಪಟ್ಟಿ ಬಿಡುಗಡೆ/ ಸಿದ್ದರಾಮಯ್ಯ ಘೋಷಣೆ

ಸಮಗ್ರ ನ್ಯೂಸ್: ಕಾಂಗ್ರೆಸ್ ಪಕ್ಷ ಬಾಕಿ ಉಳಿದಿರುವ ಕರ್ನಾಟಕದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಮಾ20ರಂದು ಪ್ರಕಟಿಸುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಕರ್ನಾಟಕದ ಉಳಿದ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿಯನ್ನು ಘೋಷಣೆ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಕರ್ನಾಟಕದ ಉಳಿದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಚರ್ಚಿಸಲಾಯಿತು. ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದ್ದು, ನಾಳೆ ಪಟ್ಟಿಯನ್ನು ಪ್ರಕಟಿಸುವುದಾಗಿ ಘೋಷಿಸಿದರು.

ಇಂದು ಕಾಂಗ್ರೆಸ್‍ನ ಎರಡನೇ ಪಟ್ಟಿ ಬಿಡುಗಡೆ/ ಸಿದ್ದರಾಮಯ್ಯ ಘೋಷಣೆ Read More »

ಅಸಿಸ್ಟೆಂಟ್ ಪ್ರೊಫೆಸರ್ ಜಾಬ್ ಖಾಲಿ ಇದೆ, ಈಗಲೇ ಅಪ್ಲೈ ಮಾಡಿ

ಸಮಗ್ರ ಉದ್ಯೋಗ: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1 ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆ ಖಾಲಿ ಇದ್ದು, ಆಸಕ್ತರು ಈಗಲೇ ಅಪ್ಲೈ ಮಾಡಿ. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಿ. ವಿದ್ಯಾರ್ಹತೆ:ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಫಾರ್ಮ್ ಪವರ್ & ಮೆಷಿನರಿ/ ಬಯೋ ಎನರ್ಜಿಯಲ್ಲಿ ಸ್ನಾತಕೋತ್ತರ ಪದವಿ, ಎಂ.ಟೆಕ್,

ಅಸಿಸ್ಟೆಂಟ್ ಪ್ರೊಫೆಸರ್ ಜಾಬ್ ಖಾಲಿ ಇದೆ, ಈಗಲೇ ಅಪ್ಲೈ ಮಾಡಿ Read More »

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ರೂ. ವಂಚನೆ

ಸಮಗ್ರ ನ್ಯೂಸ್ : ಎಟಿಎಂ ಕಾರ್ಡ್ ಬಳಸಲು ತಿಳಿಯದೆ ಇದ್ದ ವ್ಯಕ್ತಿಗೆ ಅಪರಿಚಿತ ವ್ಯಕ್ತಿಯಿಂದ ಲಕ್ಷಾಂತರ ರೂಪಾಯಿ ಲಪಟಾಯಿಸಿದ ಘಟನೆ ಬೆಳ್ತಂಗಡಿ ಕಸಬಾ ಗ್ರಾಮದಲ್ಲಿ ನಡೆದಿದೆ. ಮೆಲಂತಬೆಟ್ಟು ನಿವಾಸಿ ಶರೀಫ್ (53) ಎಂಬವರು ಬೆಳ್ತಂಗಡಿ ಕಸಬಾ ಗ್ರಾಮದ ಎಸ್.ಬಿ.ಐ ಎಟಿಎಂ ಯಂತ್ರದಿAದ ಹಣ ಪಡೆಯಲು ಬಂದಿದ್ದು, ಈ ವೇಳೆ ತನಗೆ ಎಟಿಎಂ ಕಾರ್ಡ್ ಬಳಕೆಯ ಬಗ್ಗೆ ತಿಳಿಯದೇ ಇದ್ದುದರಿಂದ, ಅಲ್ಲೇ ಪಕ್ಕದಲ್ಲಿದ್ದ ಅಪರಿಚಿತ ವ್ಯಕ್ತಿಯ ಕೈಯಲ್ಲಿ ಎಟಿಎಂ ಕಾರ್ಡ್ ನೀಡಿ ಆತನಿಗೆ ಎ.ಟಿ.ಎಂ ಪಿನ್ ಸಂಖ್ಯೆಯೂ ತಿಳಿಸಿ

ಬೆಳ್ತಂಗಡಿ : ಅಪರಿಚಿತ ವ್ಯಕ್ತಿಯ ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ರೂ. ವಂಚನೆ Read More »

ಬಿಜೆಪಿ ವಿರುದ್ಧ ಬಂಡಾಯವೆದ್ದು ಥಂಡಾ ಹೊಡೆದ ಪುತ್ತಿಲ ಮರಳಿ ಬಿಜೆಪಿಗೆ ಸೇರ್ಪಡೆ

ಸಮಗ್ರ ನ್ಯೂಸ್: ಬಿಜೆಪಿ ವಿರುದ್ಧ ಬಂಡಾಯ ಸಾರಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದ ಪುತ್ತೂರಿನ ಪ್ರಭಾವಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಗುರುವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.‌ ಈ ಮೂಲಕ ಮತ್ತೆ ಮರಳಿ ಗೂಡಿಗೆ ವಾಪಾಸ್ಸಾಗಿದ್ದಾರೆ. ಮಾ.14ರ ರಾತ್ರಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷ ಸೇರ್ಪಡೆ ವೇಳೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಸುನಿಲ್ ಕುಮಾರ್ ಕಾರ್ಕಳ ಅವರು ಉಪಸ್ಥಿತರಿದ್ದರು. ಪಕ್ಷದ ಹಿರಿಯ ನಾಯಕ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿಯಾಗಿ ಅರುಣ್ ಕುಮಾರ್ ಪುತ್ತಿಲ

ಬಿಜೆಪಿ ವಿರುದ್ಧ ಬಂಡಾಯವೆದ್ದು ಥಂಡಾ ಹೊಡೆದ ಪುತ್ತಿಲ ಮರಳಿ ಬಿಜೆಪಿಗೆ ಸೇರ್ಪಡೆ Read More »

ಪುತ್ತೂರು :ಮನೆಯ ಆವರಣಗೋಡೆ ಕೆಡವಿ ಮಹಿಳೆಗೆ ಹಲ್ಲೆ-ದೂರು ದಾಖಲು

ಸಮಗ್ರ ನ್ಯೂಸ್: ಮನೆಯ ಕೌಂಪೌಂಡನ್ನು ಜೆಸಿಬಿ ಯಂತ್ರದ ಮೂಲಕ ಕೆಡವಿದ್ದಲ್ಲದೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿರುವುದಾಗಿ ಕಡಬ ಕೊಂಬಾರು ಗ್ರಾಮದ ಗಂಗಮ್ಮ(72) ಕಡಬ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಾ.10ರಂದು ನೆರೆಕೆರೆಯ ಸಂಬಂಧಿಯೂ ಆಗಿರುವ ಶಶಿಧರ ಎಂಬಾತ ಜೆಸಿಬಿ ಯಂತ್ರದ ಮೂಲಕ ಮನೆಯ ಆವರಣಗೋಡೆಯನ್ನು ಕೆಡವಿದ್ದು, ಇದನ್ನು ಪ್ರಶ್ನಿಸಿದಾಗ ಆತ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿದ್ದು, ಗಾಯಗೊಂಡ ಗಂಗಮ್ಮ ಅವರನ್ನು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ. ಗಂಗಮ್ಮ ನೀಡಿದ ದೂರಿನನ್ವಯ ಕಡಬ ಪೊಲೀಸರು

ಪುತ್ತೂರು :ಮನೆಯ ಆವರಣಗೋಡೆ ಕೆಡವಿ ಮಹಿಳೆಗೆ ಹಲ್ಲೆ-ದೂರು ದಾಖಲು Read More »

ಬಿಎಂಆರ್​ಸಿಎಲ್ ನಿಂದ ಮಹತ್ತರ ಕಾರ್ಯ|ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ಆರಂಭ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಬಿಎಂಆರ್​ಸಿಎಲ್ ಒಂದು ಮಹತ್ತರ ಬೆಳವಣಿಗೆಯತ್ತ ಕಾಲಿಡುತ್ತಿದೆ. ಹೌದು ಹಳದಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಪರೀಕ್ಷೆಯು ಮುಂದಿನ ದಿನಗಳಲ್ಲಿ ನಡೆಯಲಿದು. ನಿನ್ನೆಯಿಂದ ಸಿಗ್ನಲಿಂಗ್ ಪರೀಕ್ಷೆ ನಡೆಯುತ್ತಿದೆ. ಈ ನಡುವೆ, ಬಿಎಂಆರ್​ಸಿಎಲ್​ನ ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ರೈಲಿನ ಪ್ರಾಯೋಗಾರ್ಥ ಸಂಚಾರ ನಿನ್ನೆ ಸಂಜೆಯಿಂದ ಹಳದಿ ಮಾರ್ಗದಲ್ಲಿ ಆರಂಭಗೊಂಡಿದೆ. ಇದು ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರ ಮಾರ್ಗವಾಗಿ ಚಲಿಸುವ ರೈಲಾಗಿದೆ. ಒಟ್ಟು 18.82 ಕಿ.ಮೀ ಇರುವ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದ್ದು, ಈ

ಬಿಎಂಆರ್​ಸಿಎಲ್ ನಿಂದ ಮಹತ್ತರ ಕಾರ್ಯ|ಬೆಂಗಳೂರಿನಲ್ಲಿ ಚಾಲಕ ರಹಿತ ಮೆಟ್ರೋ ರೈಲಿನ ಟ್ರಯಲ್ ಆರಂಭ Read More »

ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆಟೋಚಾಲಕ| ನಿರ್ಜನ ಪ್ರದೇಶದಲ್ಲಿ ನಡೆದಿತ್ತು ಭೀಕರ ಕ್ರೌರ್ಯ

ಸಮಗ್ರ ನ್ಯೂಸ್: ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆ ಶವ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.20ರ ಮುಂಜಾನೆ ಆಟೋಗಾಗಿ ಕಾಯುತ್ತಿದ್ದ ಅಪರಿಚಿತ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರವೆಸಗಿ ಕೊಲೆ ಮಾಡಿದ ಕಾಮುಕ. ಮುಬಾರಕ್ (28) ಎಂಬ ಆಟೋ ಚಾಲಕ ಅತ್ಯಾಚಾರವೆಸಗಿ ಕೊಂದುಹಾಕಿದ್ದು, ಶಾಂತಿನಗರದ ಜನತಾಕೋ ಆಪರೇಟಿವ್ ಕಟ್ಟಡದ ಬಳಿ ಶವ ಪತ್ತೆಯಾಗಿತ್ತು. ಮೇಲ್ನೋಟಕ್ಕೆ ಮಹಿಳೆ ಕಟ್ಟಡದಿಂದ ಬಿದ್ದು ಮೃತಪಟ್ಟಂತೆ ಕಾಣುತ್ತಿತ್ತು. ಮರಣೋತ್ತರ ಪರೀಕ್ಷೆ ವೇಳೆ ಅತ್ಯಾಚಾರವೆಸಗಿ ಕೊಂದಿರುವುದು ದೃಢವಾಗಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಆಟೋ ಚಾಲಕ ಮುಬಾರಕ್ ನನ್ನು

ಅಪರಿಚಿತ ಮಹಿಳೆ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆಟೋಚಾಲಕ| ನಿರ್ಜನ ಪ್ರದೇಶದಲ್ಲಿ ನಡೆದಿತ್ತು ಭೀಕರ ಕ್ರೌರ್ಯ Read More »