Uncategorized

ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ | ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ | ಕಿಡಿಕಾರಿದ ಭೋಜೇಗೌಡರಿಗೆ ಪ್ರತಿಕ್ರಿಯೆಸಿದ ಎಸ್. ಅಂಗಾರ

ಚಿಕ್ಕಮಗಳೂರು: ತನ್ನ ವಿರುದ್ಧ ಕಿಡಿಕಾರಿದ ಭೋಜೆಗೌಡರಿಗೆ, ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಪ್ರತಿಕ್ರಿಯೆ ನೀಡಿದರು. ತಮ್ಮ ಮೇಲಿನ ಆರೋಪಕ್ಕೆ ತಾಲೂಕಿನ ಸಖರಾಯಪಟ್ಟಣದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ನಾನು ಯಾವುದೇ ಪಕ್ಷದ, ಯಾವುದೇ ಜನಪ್ರತಿನಿಧಿಯನ್ನು ಕಡೆಗಣಿಸಿಲ್ಲ. ಯಾವುದೇ ಸಭಾ ಕಾರ್ಯಕ್ರಮ ಮಾಡಿಲ್ಲ. ನನ್ನ ಇಲಾಖೆಗೆ ಸಂಬಂಧಿಸಿದ ಕಾಮಗಾರಿಗಳ ಬಗ್ಗೆ ಸ್ಥಳ ಪರಿಶೀಲನೆ ಮಾಡಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾದ ಮೇಲೆ […]

ಕ್ಷೇತ್ರದ ಜನ ನನ್ನನ್ನು ಆರು ಬಾರಿ ಗೆಲ್ಲಿಸಿದ್ದಾರೆ | ನಾನು ಯಾವತ್ತೂ, ಯಾರನ್ನೂ ಕಡೆಗಣಿಸಿಲ್ಲ | ಕಿಡಿಕಾರಿದ ಭೋಜೇಗೌಡರಿಗೆ ಪ್ರತಿಕ್ರಿಯೆಸಿದ ಎಸ್. ಅಂಗಾರ Read More »

ಸಚಿವರಾಗಿದ್ರೂ ಅಂಗಾರರಿಗೆ ಪ್ರೋಟೋಕಾಲ್ ಗೊತ್ತಿಲ್ವೇ…? | ಕಿಡಿಕಾರಿದ ಎಂಎಲ್ ಸಿ ಭೋಜೇಗೌಡ

ಚಿಕ್ಕಮಗಳೂರು: ಜಿಲ್ಲಾಡಳಿತ ನನ್ನನ್ನು ನಿರ್ಲಕ್ಷ್ಯ ಮಾಡಿದೆ, ಜಿಲ್ಲಾ ಉಸ್ತುವಾರಿ ಸಚಿವರು ನನ್ನನ್ನು ಸಭೆಗಳಿಗೆ ಕರೆಯದೆ ಪ್ರೊಟೊಕಾಲ್ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ವಿಧಾನಪರಿಷತ್ ಸದಸ್ಯ , ಜೆಡಿಎಸ್ ಮುಖಂಡ ಎಸ್.ಎಲ್ ಭೋಜೇಗೌಡ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಪ್ರಸಂಗ ನಡೆದಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ಮಾಡಿದೆ. ಯಾವುದೇ ಸಭೆ -ಕಾರ್ಯಕ್ರಮಗಳಿಗೆ ಕರೆಯುವುದಿಲ್ಲ ಎಂದು ಜಿಲ್ಲಾಧಿಕಾರಿ ಕಚೇರಿ ಎದುರು ಏಕಾಂಗಿಯಾಗಿ ಕುಳಿತು ಪ್ರತಿಭಟನೆ ನಡೆಸಿದರು. ‘ಹಲವು ಬಾರಿ ಶಾಸಕರಾಗಿ, ಈಗ ಸಚಿವರಾಗಿದ್ರೂ ಜಿಲ್ಲಾ ಮಂತ್ರಿಗಳಿಗೆ ಪ್ರೊಟೋಕಾಲ್ ಏನೆಂದು ಗೊತ್ತಿಲ್ವೇ?

ಸಚಿವರಾಗಿದ್ರೂ ಅಂಗಾರರಿಗೆ ಪ್ರೋಟೋಕಾಲ್ ಗೊತ್ತಿಲ್ವೇ…? | ಕಿಡಿಕಾರಿದ ಎಂಎಲ್ ಸಿ ಭೋಜೇಗೌಡ Read More »

ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ 11 ಪ್ರಕರಣ ದಾಖಲು

ಆಂಧ್ರ ಪ್ರದೇಶ: ಇಲ್ಲಿನ ಹೈಕೋರ್ಟ್ ಸ್ವಯಂಪ್ರೇರಿತವಾಗಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ವಿರುದ್ಧ (ಸುಮೋಟೋ) 11 ಪ್ರಕರಣಗಳನ್ನು ದಾಖಲಿಸಿದೆ. ಜಗನ್ ಮೋಹನ್ ರೆಡ್ಡಿಯವರು 2016 ರಲ್ಲಿ ವಿರೋಧ ಪಕ್ಷದಲ್ಲಿದ್ದಾಗ ಅಂದಿನ ಸಿಎಂ, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ವಿರುದ್ಧ ಅಮರಾವತಿ ಭೂಮಿ ಅಕ್ರಮದ ಆರೋಪ ಮಾಡಿದ್ದರು. ಜೊತೆಗೆ ನ್ಯಾಯಾಲಯದ ಬಗ್ಗೆಯೂ ಹಲವು ಟೀಕೆಗಳನ್ನು ಮಾಡಿದ್ದರು. ಇವುಗಳ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಹೇಳಿಕೆಗಳನ್ನು ಆಧರಿಸಿ ಅನಂತಪುರ ಮತ್ತು ಗುಂಟೂರು ಜಿಲ್ಲೆಯಲ್ಲಿ ಕೆಲವು ಪ್ರಕರಣಗಳು

ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ವಿರುದ್ಧ 11 ಪ್ರಕರಣ ದಾಖಲು Read More »

ಸಂಸದೆ ಮಂಗಳ ಅಂಗಡಿ ಜಲಮಾರ್ಗ ಸಲಹಾ ಸಮಿತಿಗೆ ನೇಮಕ

ನವದೆಹಲಿ: ದಿ.ಸುರೇಶ್​ ಅಂಗಡಿ ಪತ್ನಿ, ಬೆಳಗಾವಿ ಲೋಕಸಭಾ ಕ್ಷೇತ್ರದ ಸಂಸದೆ ಮಂಗಳ ಅಂಗಡಿ ಅವರಿಗೆ ಕೇಂದ್ರ ಸರ್ಕಾರದಿಂದ ಹೊಸ ಜವಾಬ್ದಾರಿ ನೀಡಲಾಗಿದೆ. ಮಂಗಳ ಅವರನ್ನ ಹಡಗು ಮತ್ತು ಜಲಮಾರ್ಗ ಸಚಿವಾಲಯ ಸಲಹಾ ಸಮಿತಿಗೆ ನೇಮಕ ಮಾಡಲಾಗಿದೆ. ಲೋಕಸಭಾ ಉಪಚುನಾವಣೆಯಲ್ಲಿ ಗೆದ್ದು ಸಂಸದೆಯಾಗಿ ಆಯ್ಕೆಯಾದ ಎರಡು ತಿಂಗಳಲ್ಲೆ ಮಂಗಳ ಅಂಗಡಿ ಸಲಹಾ ಸಮಿತಿಯ ಸದಸ್ಯರಾಗಿ ನೇಮಕವಾಗಿದ್ದಾರೆ. ಕೇಂದ್ರ ಸಚಿವರಾಗಿದ್ದ ದಿವಂಗತ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾಗಿದ್ದ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಮಂಗಳ ಅಂಗಡಿ ಸ್ಪರ್ಧಿಸಿದ್ದರು. ಕಾಂಗ್ರೆಸ್ ಅಭ್ಯರ್ಥಿ

ಸಂಸದೆ ಮಂಗಳ ಅಂಗಡಿ ಜಲಮಾರ್ಗ ಸಲಹಾ ಸಮಿತಿಗೆ ನೇಮಕ Read More »

ಕೂಸು ಹುಟ್ಟೋಕು ಮುನ್ನವೇ ಕುಲಾವಿ ಹೊಲಿಯುತ್ತಿರೋ ಕಾಂಗ್ರೆಸ್…! | ಇದು ಎಂತಾ ಮರುಳಯ್ಯಾ….?

ಬೆಂಗಳೂರು : ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಹೇಳಿಕೆಗಳನ್ನು ಸಿದ್ದು ಆಪ್ತ ಬಣದ ಶಾಸಕರು ಪದೇ ಪದೇ ಹೇಳುತ್ತಿದ್ದಾರೆ. ಆದರೆ ಇದಕ್ಕೆ ಕಡಿವಾಣ ಹಾಕಲು ಡಿಕೆಶಿ ಬಣ ತಂತ್ರಗಾರಿಕೆ ನಡೆಸುತ್ತಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿಕೆಶಿ ದೆಹಲಿಗೆ ತೆರಳಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರಿಗೆ ಮುಂದಿನ ಸಿಎಂ ಆಗಬೇಕು ಎಂಬ ಕನಸಿದೆ. ಈ ನಿಟ್ಟಿನಲ್ಲಿ ಪಕ್ಷವನ್ನು ತಮ್ಮದೇ ಆದ ರೀತಿಯಲ್ಲಿ

ಕೂಸು ಹುಟ್ಟೋಕು ಮುನ್ನವೇ ಕುಲಾವಿ ಹೊಲಿಯುತ್ತಿರೋ ಕಾಂಗ್ರೆಸ್…! | ಇದು ಎಂತಾ ಮರುಳಯ್ಯಾ….? Read More »

ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್ | ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆದ ಸಿ.ಟಿ.ರವಿ

ಚಿಕ್ಕಮಗಳೂರು: ಮುಖ್ಯಮಂತ್ರಿ ಬದಲಾವಣೆ ಎಂಬುವುದು ಹಾಗೂ ಅರುಣ್ ಸಿಂಗ್ ವರದಿ ನೀಡಿದರು ಎನ್ನುವುದು ಎರಡೂ ಸುಳ್ಳು ಸುದ್ದಿ. ಅವರು ಯಾರೆಂದು ಪತ್ತೆ ಹಚ್ಚುವುದು ಕಷ್ಟದ ಕೆಲಸವಲ್ಲ. ಕಳ್ಳನ ಹೆಂಡತಿ ಯಾವತ್ತಿದ್ದರೂ ಡ್ಯಾಶ್ ಎಂದು ಸಿ.ಟಿ.ರವಿ ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಕಿಡಿ ಕಾರಿದ್ದಾರೆ. ತಾಲೂಕಿನ ಭದ್ರಾ ನದಿ ಬಳಿ ಕೊರೊನಾದಿಂದ ಸತ್ತವರು ಅಸ್ಥಿ ವಿಸರ್ಜನೆ ಬಳಿಕ ಮಾತನಾಡಿದ ಅವರು, ಕನ್ನಡದಲ್ಲಿ ಒಂದು ಗಾದೆ ಮಾತಿದೆ. ಕಳ್ಳನ ಹೆಂಡತಿ ಡ್ಯಾಶ್ ಅಂತೇಳಿ. ಅವರನ್ನು ಪತ್ತೆ ಹಚ್ಚುವುದು ಕಷ್ಟದ್ದೇನಲ್ಲ. ಎಷ್ಟು

ಕಳ್ಳನ ಹೆಂಡ್ತಿ ಯಾವತ್ತಿದ್ರು ಡ್ಯಾಶ್ | ಸುಳ್ಳು ಸುದ್ದಿ ಹಬ್ಬಿಸುವವರ ವಿರುದ್ಧ ಗರಂ ಆದ ಸಿ.ಟಿ.ರವಿ Read More »

ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ | ಇಲ್ಲಿದೆ ಸೇವಾ ಸಿಂಧು ಪೋರ್ಟಲ್

ಬೆಂಗಳೂರು: ಕೊರನಾ ಎರಡನೇ ಅಲೆ ಹಿನ್ನೆಲೆಯಲ್ಲಿ ಜಾರಿಯಾಗಿದ್ದ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ಚಲನಚಿತ್ರ ಮತ್ತು ಕಿರುತೆರೆ ಕಲಾವಿದರು ಮತ್ತು ತಂತ್ರಜ್ಞರು ಹಾಗೂ ಚಲನಚಿತ್ರ ಮಂದಿರದ ಕಾರ್ಮಿಕರಿಗೆ ಮುಖ್ಯಮಂತ್ರಿ ಯವರು ಘೋಷಿಸಿದ್ದ ವಿಶೇಷ ಆರ್ಥಿಕ ಪ್ಯಾಕೇಜ್ ನೆರವಿಗಾಗಿ ಸೇವಾಸಿಂಧು ಪೋರ್ಟಲ್ ಮೂಲಕ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಆನ್ಲೈನ್ ಅರ್ಜಿ ಆಹ್ವಾನಿಸಿದೆ. ರಾಜ್ಯದಲ್ಲಿ ಎರಡನೇ ಅಲೆಯ ವೇಳೆ ಸರ್ಕಾರ ವಿಧಿಸಿದ್ದ ನಿರ್ಬಂಧದಿಂದಾಗಿ ಬಾಧಿತರಾಗಿದ್ದ ಸಮಾಜ ವಿವಿಧ ವರ್ಗದವರಿಗೆ ಮುಖ್ಯಮಂತ್ರಿ ಯವರು 2021ರ ಜೂನ್ 3 ರಂದು ವಿಶೇಷ

ಚಲನಚಿತ್ರ, ಕಿರುತೆರೆ ರಂಗದವರಿಗೆ ಆರ್ಥಿಕ ನೆರವು: ಅರ್ಜಿ ಆಹ್ವಾನ | ಇಲ್ಲಿದೆ ಸೇವಾ ಸಿಂಧು ಪೋರ್ಟಲ್ Read More »

ಮಾನನಷ್ಟ ಮೊಕದ್ದಮೆ: 2 ಕೋಟಿ ಪರಿಹಾರ ಕೊಡಲು ದೇವೇಗೌಡರಿಗೆ ಆದೇಶ

ಬೆಂಗಳೂರು: ಖಾಸಗಿ ಕಂಪನಿಯೊಂದಕ್ಕೆ 2 ಕೋಟಿ ರೂ. ಮನನಷ್ಟ ಪರಿಹಾರ ನೀಡಲು ಮಾಜಿ ಪ್ರಧಾನ ಮಂತ್ರಿ ದೇವೇಗೌಡರಿಗೆ ನ್ಯಾಯಾಲಯ ಆದೇಶ ನೀಡಿದೆ. ನಂದಿ ಇನ್​ಫ್ರಾ ಸ್ಟ್ರಕ್ಚರ್ ಕಾರಿಡಾರ್ (NICE) ಕಂಪನಿಯ ವಿರುದ್ಧ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರು ಆರೋಪವೊಂದನ್ನು ಮಾಡಿದ್ದರು. ಇದೀಗ ಅದನ್ನು ಸಾಬೀತುಪಡಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಹೀಗಾಗಿ ನೈಸ್ ಕಂಪನಿಗೆ ₹ 2 ಕೋಟಿ ಪರಿಹಾರ ಕೊಡಬೇಕು ಎಂದು ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ಆದೇಶ ಮಾಡಿದೆ. ದೇವೇಗೌಡರು ಕಂಪನಿಯ ವಿರುದ್ಧ ಮಾಡಿದ್ದ ಆರೋಪ ಸಾಬೀತುಪಡಿಸುವಲ್ಲಿ ವಿಫಲರಾದಾಗ

ಮಾನನಷ್ಟ ಮೊಕದ್ದಮೆ: 2 ಕೋಟಿ ಪರಿಹಾರ ಕೊಡಲು ದೇವೇಗೌಡರಿಗೆ ಆದೇಶ Read More »

ಸೋಂಕಿತರ ಸಾವಿಗೆ ಬಿಜೆಪಿ ಸರ್ಕಾರ ಕಾರಣ |ಸಿಎಂ ಬಿ.ಎಸ್.ವೈ ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ: ಸಿದ್ದು

ಕೊಪ್ಪಳ: ‘ರಾಜ್ಯದಲ್ಲಿ ಕೊರೊನ ಸೋಂಕಿತರ ಸಾವಿಗೆ ರಾಜ್ಯ ಬಿಜೆಪಿ ಸರ್ಕಾರವೇ ಕಾರಣ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಅಧಿಕಾರದಿಂದ ಏಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ. ರಾಜ್ಯ ಬಿಜೆಪಿಯಲ್ಲಿ ಗೊಂದಲ ಇಲ್ಲದೇ ಅರುಣ್ ಸಿಂಗ್ ಅವರು ಸುಮ್ನೆ ಬಂದಿದ್ದರಾ? ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಶಾಸಕ ಜಮೀರ್ ಅಹ್ಮದ್ ನಾನು ಸಿಎಂ ಆಗ್ಬೇಕು ಎನ್ನುವ ಹೇಳಿದ ವಿಚಾರದ ಕುರಿತಂತೆ ವೈಯುಕ್ತಿಕ ಅಭಿಪ್ರಾಯ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

ಸೋಂಕಿತರ ಸಾವಿಗೆ ಬಿಜೆಪಿ ಸರ್ಕಾರ ಕಾರಣ |ಸಿಎಂ ಬಿ.ಎಸ್.ವೈ ಅಧಿಕಾರದಿಂದ ಎಷ್ಟು ಬೇಗ ತೊಲಗುತ್ತಾರೋ ಅಷ್ಟು ರಾಜ್ಯಕ್ಕೆ ಒಳ್ಳೆಯದಾಗುತ್ತದೆ: ಸಿದ್ದು Read More »

ನಾವು ಕರ್ನಾಟಕದವರು, ತುಳುರಾಜ್ಯ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ | ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆಯಿದೆ : ಕರಂದ್ಲಾಜೆ

ಉಡುಪಿ: ತುಳುವಿಗೆ ಸಂವಿಧಾನದ ಮಾನ್ಯತೆ ಸಿಗಬೇಕು. ಸಂಸತ್ತಿನಲ್ಲೂ ನಾನು ಈ ಬಗ್ಗೆ ಮಾತನಾಡಿದ್ದೇನೆ. ನಾವು ಕರ್ನಾಟಕದವರು. ಆದರೆ ತುಳುರಾಜ್ಯ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತನಾಡಿದ್ದಾರೆ. ಗೃಹ ಸಚಿವ ಅಮಿತ್ ಶಾ ಭೇಟಿ ಮಾಡಿ ನಾನು ಮನವಿ ಸಲ್ಲಿಸಿದ್ದೇನೆ. ಎರಡು ಬಾರಿ ಸಂಸತ್ ನಲ್ಲಿ ಪ್ರಸ್ತಾಪ ಮಾಡಿದ್ದೇನೆ. ತುಳುವನ್ನು ಎಂಟನೇ ಪರಿಚ್ಛೇದಕ್ಕೆ ಸೇರಿಸಲು ಏನೆಲ್ಲ ಮಾಡಬೇಕು ಆ

ನಾವು ಕರ್ನಾಟಕದವರು, ತುಳುರಾಜ್ಯ ಕುಚೋದ್ಯದ ಬೇಡಿಕೆಗೆ ನಮ್ಮ ಬೆಂಬಲ ಇಲ್ಲ | ಒಡಕಿನ ಮಾತುಗಳನ್ನು ಮಹಾರಾಷ್ಟ್ರ ದುರುಪಯೋಗ ಮಾಡುವ ಸಾಧ್ಯತೆಯಿದೆ : ಕರಂದ್ಲಾಜೆ Read More »