Uncategorized

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ.

ಬೆಂಗಳೂರು: ಕೋವಿಡ್ ಎರಡನೇ ಅಲೆಯ ತೀವ್ರತೆ ಕಡಿಮೆಯಾಗಿದ್ದು, ಲಾಕ್​ಡೌನ್​ ಕೂಡ ಸಡಿಲವಾಗಿದೆ. ಈ ಬಾರಿಯ ಎಸ್​ಎಸ್​ಎಲ್​ಸಿ ಪರೀಕ್ಷೆ ಕೂಡ ಯಶಸ್ವಿಯಾಗಿದ್ದು, ಈಗಿರುವ ಬೇಡಿಕೆ ಶಾಲೆ ಆರಂಭ ಯಾವಾಗ ಎನ್ನೋದು. ಸರ್ಕಾರ ಕೂಡ ಈ ಬಗ್ಗೆ ಗಮನಹರಿಸಿದ್ದು, ಶಾಲೆ ಆರಂಭಿಸುವ ಬಗ್ಗೆ ಯೋಜನೆ ಸಿದ್ಧಪಡಿಸುತ್ತಿದೆ. ಆದರೆ ಈ ವಿಚಾರವಾಗಿ ಖಾಸಗಿ ಶಾಲೆಗಳ ಒಕ್ಕೂಟ ಒಂದು ಹೆಜ್ಜೆ ಮುಂದೆ ಇಟ್ಟಿದ್ದು, ಸರ್ಕಾರ ಶಾಲೆ ಆರಂಭಿಸದೇ ಹೋದರೆ ಅಗಸ್ಟ್ 2 ರಿಂದ ಖಾಸಗಿ ಶಾಲೆ ಆರಂಭಿಸುವುದಾಗಿ ಎಚ್ಚರಿಕೆ ನೀಡಿವೆ. ಶೇ.80 ರಷ್ಟು […]

ಶಾಲೆ ಯಾವಾಗ ಓಪನ್ ಮಾಡ್ತೀರಿ? ಇಲ್ಲದಿದ್ದರೆ ನಾವೇ ಶಾಲೆ ಓಪನ್ ಮಾಡ್ಕೋತೀವಿ. ಸರ್ಕಾರಕ್ಕೆ ರುಪ್ಸಾ ಟಕ್ಕರ್! ಆ.2ರಿಂದ ಶಾಲೆ ತೆರೆಯುವ ಎಚ್ಚರಿಕೆ. Read More »

ರಾಜ್ಯ‌ ಉಳಿಸ್ಬೇಕಂದ್ರೆ ಕಾಂಗ್ರೆಸ್ ಕಿತ್ತೋಡಿಸ್ಬೇಕು…! ಆವೇಶದಲ್ಲಿ ಎಡವಟ್ಟು ಹೇಳಿಕೆ ಕೊಟ್ಟ ಸಿದ್ದು

ತುಮಕೂರು: ಸುದ್ದಿಗೊಷ್ಠಿ ವೇಳೆ ಎಡವಟ್ಟು ಮಾಡಿಕೊಂಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಉಳಿಸಲು ಕಾಂಗ್ರೆಸ್ ಪಕ್ಷವನ್ನೇ ತೆಗೆಯಬೇಕು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತುಮಕೂರಿನಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಆವೇಶದಲ್ಲಿ ಬಿಜೆಪಿಯನ್ನು ತೆಗೆಯಬೇಕು ಎಂದು ಹೇಳುವ ಬದಲು ಬಾಯಿತಪ್ಪಿನಿಂದ ಕಾಂಗ್ರೆಸ್ ಪಕ್ಷವನ್ನು ರಾಜ್ಯದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ಎಸ್.ಆರ್. ಪಾಟೀಲ್ ಹೇಳಿದ ಬಳಿಕ ತಕ್ಷಣ ಸರಿಪಡಿಸಿಕೊಂಡು ಬಿಜೆಪಿಯನ್ನು ರಾಜ್ಯದಿಂದ ತೆಗೆಯಬೇಕು ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಭ್ರಷ್ಟ ಬಿಜೆಪಿ

ರಾಜ್ಯ‌ ಉಳಿಸ್ಬೇಕಂದ್ರೆ ಕಾಂಗ್ರೆಸ್ ಕಿತ್ತೋಡಿಸ್ಬೇಕು…! ಆವೇಶದಲ್ಲಿ ಎಡವಟ್ಟು ಹೇಳಿಕೆ ಕೊಟ್ಟ ಸಿದ್ದು Read More »

ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ – ಬಿಜೆಪಿಗೆ ಸಿದ್ದು ಸವಾಲ್

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ರಾಜೀನಾಮೆ ನೀಡುವ ಸಾಧ್ಯತೆ ಇದ್ದು, ಬಿಜೆಪಿಯಲ್ಲಿ ಖಾಲಿಯಾಗುವ ಸಿಎಂ ಹುದ್ದೆಗೆ ದಲಿತ ನಾಯಕನನ್ನು ಆಯ್ಕೆ ಮಾಡಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಅವರಿಗೆ ಸವಾಲು ಹಾಕಿದ್ದಾರೆ. ನಗರದಲ್ಲಿ‌ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಳಿನ್ ಕುಮಾರ್ ಕಟೀಲು ಇತ್ತೀಚೆಗೆ ಕಾಂಗ್ರೆಸ್ ದಲಿತ ಸಿಎಂ ಅಭ್ಯರ್ಥಿಯನ್ನು ಘೋಷಿಸಲಿ ಎಂದು ಹೇಳಿದ್ದರು. ಇದೀಗ ಬಿಜೆಪಿಯಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಬೀಳಲಿದೆ. ನಳಿನ್ ನಮಗೆ ಹೇಳುವ ಬದಲು ಅವರೇ

ತಾಕತ್ತಿದ್ದರೆ ದಲಿತರನ್ನು ಸಿಎಂ ಮಾಡಲಿ – ಬಿಜೆಪಿಗೆ ಸಿದ್ದು ಸವಾಲ್ Read More »

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅಥವಾ ಅವರು ಪ್ರತಿನಿಧಿಸುತ್ತಿರುವ ಪಕ್ಷದ ವಿರುದ್ಧ ಆಧಾರರಹಿತವಾಗಿ ಯಾವುದೇ ಸುದ್ದಿ ಪ್ರಸಾರ ಮಾಡಬಾರದು ಎಂದು tv5 ಮಾದ್ಯಮಕ್ಕೆ ನ್ಯಾಯಾಲಯ ಆದೇಶ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಧ್ಯಮವು ‘ಆರ್ ವಿ ಸ್ಟುಪ್ಪಿಡ್’ ಎಂಬ ಕಾರ್ಯಕ್ರಮದ ಮೂಲಕ ಸುಳ್ಳು ಸುದ್ದಿ ಬಿತ್ತರಿಸುತ್ತಿದೆ. ಈ ಆರೋಪಗಳಿಗೆ ಮಾಧ್ಯಮದ ಬಳಿ ಯಾವುದೇ ಸಾಕ್ಷ್ಯಧಾರವಿಲ್ಲ. ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ಸದಸ್ಯರಾದ ಆರ್ ಹರೀಶ್ ಕುಮಾರ್ ಎಂಬವರು ಮೊಕದ್ದಮೆ ಹೂಡಿದ್ದರು. ಟಿವಿ 5 ಕನ್ನಡ ಸುದ್ದಿ

ಪ್ರಧಾನಿಯ ಚಾರಿತ್ರ್ಯವಧೆ ಮಾಡುವ ಮುನ್ನ ಎಚ್ಚರ | ಆಧಾರರಹಿತ ಸುದ್ದಿ ಬಿತ್ತರಿಸದಂತೆ TV 5 ಮಾಧ್ಯಮಕ್ಕೆ ಕೋರ್ಟ್ ಆದೇಶ Read More »

75 ರ ಬಳಿಕ ಗದ್ದುಗೆಯಲ್ಲಿರುವ ನಿಯಮ ಬಿಜೆಪಿ ಯಲ್ಲಿಲ್ಲ | ಪಕ್ಷವನ್ನು ಮುಂದೆಯೂ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಬಿಎಸ್ ವೈ

ಬೆಂಗಳೂರು: ಸಿಎಂ ಕುರ್ಚಿಯಿಂದ ಈ ಮಾಸಾಂತ್ಯಕ್ಕೆ ಕೆಳಗಿಳಿಯುವ ಬಗ್ಗೆ ಇದೇ ಮೊದಲ ಬಾರಿಗೆ ಸ್ವತಃ ಪ್ರತಿಕ್ರಿಯಿಸಿರುವ ಬಿಎಸ್ವೈ, ರಾಜ್ಯದಲ್ಲಿ ಮುಂದಿನ ಬಾರಿಗೆ ಪಕ್ಷವನ್ನು ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದಿದ್ದಾರೆ. ಇದು ಪದತ್ಯಾಗಕ್ಕೆ ಯಡ್ಡಿ ಮಾನಸಿಕವಾಗಿ ತಯಾರಾಗಿರುವ ಸೂಚನೆ ನೀಡಿದಂತಾಗಿದೆ. ಈ ಬಗ್ಗೆ ಇಂದು ಸುದ್ದಿಗರರೊಂದಿಗೆ ಮಾತನಾಡಿದ ಸಿಎಂ, 26 ರವರೆಗೆ ರಾಜ್ಯಕ್ಕಾಗಿ ಶ್ರಮಿಸುತ್ತಿದ್ದೇನೆ. ಆ ಬಳಿಕ ಪಕ್ಷದ ವರಿಷ್ಟರ ನಿರ್ಧಾರಕ್ಕೆ ತಲೆಬಾಗಿ ಅವರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದಿದ್ದಾರೆ. ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಜುಲೈ

75 ರ ಬಳಿಕ ಗದ್ದುಗೆಯಲ್ಲಿರುವ ನಿಯಮ ಬಿಜೆಪಿ ಯಲ್ಲಿಲ್ಲ | ಪಕ್ಷವನ್ನು ಮುಂದೆಯೂ ಅಧಿಕಾರಕ್ಕೆ ತರುವುದೇ ನನ್ನ ಗುರಿ: ಬಿಎಸ್ ವೈ Read More »

ಹೊಸ ಟೀಂ ರೆಡಿಯಾಗ್ತಿದೆ, ಯಾರಿಗೂ ಹೇಳ್ಬೇಡಿ- ಸಂಚಲನ ಸೃಷ್ಟಿಸಿದ ನಳಿನ್ ಅಡಿಯೋ

ಬೆಂಗಳೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ಬಹಿರಂಗವಾಗಿದ್ದು, ರಾಜ್ಯ ರಾಜಕಾರಣಕ್ಕೆ ರೋಚಕ ಟ್ವಿಸ್ಟ್‌ ದೊರೆಯುವ ಸಾಧ್ಯತೆ ಇದೆ. ತಮ್ಮ ಅಪ್ತರ ಬಳಿ ಮಾತುಕತೆ ನಡೆಸಿರುವ ನಳಿನ್‌ ಕುಮಾರ್‌ ಕಟೀಲ್‌ ಅವರು, ಈ ಸಂಗತಿಯನ್ನು ಬಹಿರಂಗ ಪಡಿಸಿರುವ ರೀತಿ ಯಡಿಯೂರಪ್ಪ ಅವರ ಪದಚ್ಯುತಿಯ ಸುಳಿವು ನೀಡಿದೆ. ಅಲ್ಲದೆ ಸದ್ಯದಲ್ಲೇ ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬುದನ್ನು ಖಚಿತಪಡಿಸಿದಂತಾಗಿದೆ. ಕಟೀಲ್‌ ಅವರು ತುಳುವಿನಲ್ಲಿ ಮಾತನಾಡಿದ್ದು, ‘ಯಾರಿಗೂ ಹೇಳಬೇಡಿ. ಶೆಟ್ಟರ್‌, ಈಶ್ವರಪ್ಪ

ಹೊಸ ಟೀಂ ರೆಡಿಯಾಗ್ತಿದೆ, ಯಾರಿಗೂ ಹೇಳ್ಬೇಡಿ- ಸಂಚಲನ ಸೃಷ್ಟಿಸಿದ ನಳಿನ್ ಅಡಿಯೋ Read More »

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು

ಕಾಸರಗೋಡು: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನೋರ್ವ ಬೈಕ್ ಢಿಕ್ಕಿ ಹೊಡೆದು ಮೃತಪಟ್ಟ ಘಟನೆ ಇಂದು (ಜು.15 ರಂದು) ನಡೆದಿದೆ. ಮೃತರನ್ನು ತೃಕ್ಕನ್ನಾಡ್ ನಿವಾಸಿ ರತೀಶ್ ( 37) ಎಂದು ಗುರುತಿಸಲಾಗಿದೆ. ಇವರು ಮೀನು ಕಾರ್ಮಿಕರಾಗಿದ್ದು, ರಾತ್ರಿ ಮನೆಗೆ ತೆರಳುತ್ತಿದ್ದಾಗ ಕಾಞ೦ಗಾಡ್ ಕಡೆಗೆ ತೆರಳುತ್ತಿದ್ದ ಬೈಕ್ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ರತೀಶ್ ರನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾಸರಗೋಡು: ಬೈಕ್ ಢಿಕ್ಕಿ | ಪಾದಚಾರಿ ಮೃತ್ಯು Read More »

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ

ಕೊಡಗು: ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಮಡಿಕೇರಿ ಆಕಾಶವಾಣಿ ಟವರ್ ನ ತಡೆಗೋಡೆ ಕುಸಿದಿದೆ. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ಕೊಡಗು ತತ್ತರಿಸಿದೆ. ಇಂದು ಆಕಾಶವಾಣಿಯ ಟವರ್ ನ ತಡೆಗೋಡೆ ಕುಸಿದಿದ್ದುಕಳೆದ ವರ್ಷದ ಮಳೆ ಕುಸಿದ ತಡೆಗೊಡೆಯನ್ನು ಮರು ನಿರ್ಮಿಸಲಾಗಿತ್ತು. ಕೊಡಗಿನ ಕಾವೇರಿ ನದಿ ತುಂಬಿ ಹರಿಯಿತ್ತಿದ್ದು ಹಲವೆಡೆಗಳಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಕಳೆದೆರಡು ವರ್ಷಗಳಿಂದ ಕೊಡಗಿನಲ್ಲಿ ಭಾರಿ ಮಳೆಗೆ ಗುಡ್ಡ ಕುಸಿತ ಉಂಟಾಗುತ್ತಿದ್ದು ಈ ವರ್ಷವೂ ಗುಡ್ಡ ಕುಸಿಯಲಾರಂಭಿಸಿದೆ.ಇದೀಗ ಕಳೆದ ಎರಡು

ಮಡಿಕೇರಿ: ಮುಂದುವರಿದ ವರುಣನ ಆರ್ಭಟ | ಆಕಾಶವಾಣಿ ಟವರ್ ತಡೆಗೋಡೆ ಕುಸಿತ Read More »

ಭೀಕರ ಅಗ್ನಿ ದುರಂತ, 39 ಕ್ಕೂ ಹೆಚ್ಚು ಮಂದಿ ಸಾವು

ಕೈರೋ: ದಕ್ಷಿಣ ಇರಾಕ್ ನ ನಾಸಿರಿಯಾದ ಕೊರೊನಾ ವೈರಸ್ ಆಸ್ಪತ್ರೆಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 39 ಜನರು ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಆರೋಗ್ಯ ಅಧಿಕಾರಿಗಳು ಮತ್ತು ಪೊಲೀಸರು ತಿಳಿಸಿದ್ದಾರೆ ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ ಅಲ್-ಹುಸೇನ್ ಕೊರೊನಾವೈರಸ್ ಆಸ್ಪತ್ರೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಸರ್ಕಾರಿ ಇರಾಕ್ ಸುದ್ದಿ ಸಂಸ್ಥೆ ಹೇಳಿದೆ. ದಕ್ಷಿಣ ಇರಾಕಿನ ನಗರ ನಾಸಿರಿಯಾದ ಅಲ್ ಹುಸೇನ್ ಆಸ್ಪತ್ರೆಯಲ್ಲಿ ಭೀಕರ ಅಗ್ನಿ

ಭೀಕರ ಅಗ್ನಿ ದುರಂತ, 39 ಕ್ಕೂ ಹೆಚ್ಚು ಮಂದಿ ಸಾವು Read More »

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ

ಮಂಡ್ಯ: ತನ್ನ ಹೆಗಲ ಮೇಲೆ ಕೈ ಇಟ್ಟರು ಎಂಬ ಕಾರಣಕ್ಕೆ ಸ್ವಪಕ್ಷದ ಕಾರ್ಯಕರ್ತನಿಗೆ ಡಿ.ಕೆ.ಶಿವಕುಮಾರ್ ಕಾಪಾಳಮೋಕ್ಷ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಈ ನಡೆ ಭಾರೀ ವೈರಲ್ ಆಗಿದ್ದು ಇದು ಇದೀಗ ಬಿಜೆಪಿಗರಿಗೆ ಕಾಂಗ್ರೆಸ್ ನ್ನು ಟೀಕಿಸಲು ಬಂಡವಾಳ ಸಿಕ್ಕಿದಂತಾಗಿದೆ. ಡಿಕೆಶಿ, ಅನಾರೋಗ್ಯಕ್ಕೆ ಒಳಗಾಗಿರುವ ಮಾಜಿ ಸಂಸದ ಜಿ.ಮಾದೇಗೌಡ ಅವರ ಆರೋಗ್ಯ ವಿಚಾರಿಸಲು ಶುಕ್ರವಾರ ಸಂಜೆ ಭಾರತೀನಗರಕ್ಕೆ ಬಂದ ಸಂದರ್ಭದಲ್ಲಿ ಘಟನೆ ನಡೆದಿದೆ. ಹಿಂದಿನಿಂದ ಬಂದ ಕಾರ್ಯಕರ್ತ ಅಣ್ಣಾ ಎನ್ನುತ್ತಾ ಡಿಕೆಶಿ ಹೆಗಲ ಮೇಲೆ ಕೈ ಇಟ್ಟಿದ್ದಾರೆ. ಇದರಿಂದ

ಸ್ವಪಕ್ಷದ ಕಾರ್ಯಕರ್ತನಿಗೆ ಡಿಕೆಶಿ ಯಿಂದ ಕಾಪಾಳಮೋಕ್ಷ Read More »