Uncategorized

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಇಂದು ಬೆಂಗಳೂರಿಗೆ ಆಗಮಿಸಿದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರಿಗೆ ಸಿಎಂ ಬಸವರಾಜ ಬೊಮ್ಮಾಯಿ ಪುಸ್ತಕ ನೀಡಿ ಸ್ವಾಗತ ಕೋರಿದ್ದಾರೆ. ಕಾರ್ಯಕ್ರಮ ನಿಮಿತ್ತ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೆಂಕಯ್ಯನಾಯ್ಡು ಅವರನ್ನು ಸಿಎಂ ಸಂಭ್ರಮದಿಂದ ಸ್ವಾಗತಿಸಿದರು. ವಿಮಾನದ ಬಳಿಯೇ ತೆರಳಿದ ಸಿಎಂ ಬೊಮ್ಮಾಯಿವರು ವಿಶೇಷ ಹಾರ, ಶಾಲು ಸೇರಿದಂತೆ ಪುಸ್ತಕ ನೀಡಿ ಅವರನ್ನು ಬರ ಮಾಡಿಕೊಂಡರು. ಇನ್ನೂ ಇದೇ ವೇಳೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಹ ಉಪರಾಷ್ಟ್ರಪತಿಗಳನ್ನ ಸ್ವಾಗತಿಸಿದರು. ಸಚಿವರಾದ ಅಶ್ವತ್ಥನಾರಾಯಣ್, ಸಂಸದ ಪಿ.ಸಿ.ಮೋಹನ್ ಸಹ […]

ಉಪರಾಷ್ಟ್ರಪತಿಗೆ ಪುಸ್ತಕ ನೀಡಿ ಸ್ವಾಗತಿಸಿದ ಸಿಎಂ ಬೊಮ್ಮಾಯಿ Read More »

ಸಚಿವರ ಮೆರವಣಿಗೆ ವೇಳೆ ಪೊಲೀಸರ ಕಾಲಿನ ಮೇಲೆ ಹರಿದ ಜೀಪ್

ಬೆಂಗಳೂರು: ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ವೇಳೆ ಅವಘಡವೊಂದು ಸಂಭವಿಸಿದ್ದು, ಪೊಲೀಸರ ಕಾಲಿನ ಮೇಲೆಯೇ ಜೀಪಿನ ಚಕ್ರ ಹರಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರನ್ನು ಸ್ವಾಗತಿಸುವ ಕಾರ್ಯಕ್ರಮದ ವೇಳೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬರುವಾಗ ಈ ದುರ್ಘಟನೆ ಸಂಭವಿಸಿದೆ. ಸಚಿವ ನಾರಾಯಣಸ್ವಾಮಿ ಮೆರವಣಿಗೆ ನಡೆಸುತ್ತಿದ್ದ ಜೀಪ್ ನ ಚಕ್ರ ಪೊಲೀಸ್ ಸಿಬ್ಬಂದಿ ಕಾಲಿನ ಮೇಲೆ ಹರಿದಿದೆ. ಇಂದು ಜನಾಶೀರ್ವಾದ ಯಾತ್ರೆಯಲ್ಲಿ ಭಾಗವಹಿಸಲು ದೆಹಲಿಯಿಂದ, ನಗರದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಸಚಿವರು

ಸಚಿವರ ಮೆರವಣಿಗೆ ವೇಳೆ ಪೊಲೀಸರ ಕಾಲಿನ ಮೇಲೆ ಹರಿದ ಜೀಪ್ Read More »

ಬಂಟ್ವಾಳ: ಮನೆಯೊಳಗೆ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ

ಬಂಟ್ವಾಳ: ಒಬ್ಬಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯ ಮನೆಗೆ ನುಗ್ಗಿ ಬಲಾತ್ಕಾರವಾಗಿ ಅತ್ಯಾಚಾರ ವೆಸಗಿದಲ್ಲದೆ, ಹಲ್ಲೆ ಮಾಡಿ ಇದೀಗಾ ಆರೋಪಿ ತಲೆಮರೆಸಿಕೊಂಡ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಕಟ್ಟೆ ಎಂಬಲ್ಲಿ ನಡೆದಿದ್ದು, ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ದ ದೂರು ದಾಖಲಾಗಿದೆ. ಸಿದ್ದಕಟ್ಟೆ ಅನಿಲ್ ಎಂಬಾತ ಪ್ರಕರಣದ ಆರೋಪಿಯಾಗಿದ್ದು. ಆಗಸ್ಟ್ 11 ರಂದು 52 ಹರೆಯದ ಮಹಿಳೆ ಕೂಲಿ ಕೆಲಸ ಮಾಡಿ ಮನೆಗೆ ಬಂದು ಬಚ್ಚಲಿನಲ್ಲಿ ಬಿಸಿ ನೀರು ಕಾಯಿಸಲು ಎಂದು ಹೋಗಿದ್ದರು. ಇದೇ ಸಮಯ ನೋಡಿಕೊಂಡು

ಬಂಟ್ವಾಳ: ಮನೆಯೊಳಗೆ ಕೂಡಿ ಹಾಕಿ ಮಹಿಳೆಯ ಅತ್ಯಾಚಾರ Read More »

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ…

ನವದೆಹಲಿ: ಅಫ್ಘಾನಿಸ್ತಾನದ ಯುವಕ ಹಾಗೂ ಫ್ರಾನ್ಸ್​ನ ಯುವತಿ ನಡುವೆ ಭಾರತದಲ್ಲಿ ಪ್ರೀತಿ ಚಿಗುರಿ ಕೊನೆಗೆ ಇಲ್ಲಿಯೇ ಹೈಕೋರ್ಟ್​ನಿಂದ ಇವರ ಲವ್​ ಸ್ಟೋರಿ ಸುಖಾಂತ್ಯಗೊಂಡಿರುವ ಘಟನೆ ನಡೆದಿದೆ. ಇವರಿಬ್ಬರೂ ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬಂದ ಇಬ್ಬರು ಆಸ್ಪತ್ರೆಯಲ್ಲಿ ಭೇಟಿಯಾಗಿದ್ದಾರೆ. ಮಾತಿಗೆ ಮಾತು ಬೆಳೆದು, ಸಲುಗೆಯಾಗಿ, ಅದು ಪ್ರೀತಿಗೆ ತಿರುಗಿ ಮದುವೆಯವರೆಗೂ ಬಂದಿದ್ದಾರೆ. ನಂತರ ದೆಹಲಿಯ ಮಸೀದಿಯೊಂದರಲ್ಲಿ ವಿವಾಹವಾಗಿದ್ದರು. ಆದರ ದುರದೃಷ್ಟವಶಾತ್​ ಇವರು ವಾಪಸ್​ ಹೋಗಲು ಆಗಲಿಲ್ಲ. ಇದಕ್ಕೆ ಕಾನೂನು ಅಡಚಣೆ ಉಂಟಾಯಿತು. ಏಕೆಂದರೆ ಈ ವೇಳೆಗಾಗಲೇ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ

ಎತ್ತಣ ಮಾಮರ, ಎತ್ತಣ ಕೋಗಿಲೆ – ವಿದೇಶಿ ಪ್ರೀತಿಗೆ ಸಾಕ್ಷಿಯಾಯಿತು ಭಾರತ – ಇದೊಂದು ಸ್ಪೆಷಲ್ ಲವ್ ಸ್ಟೋರಿ… Read More »

ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟಪತಿ ಪದಕ| 19 ಪೊಲೀಸರಿಗೆ ಸೇವಾ ಪದಕ ಗೌರವ|

ನವದೆಹಲಿ : ಸ್ವಾತಂತ್ರ್ಯ ದಿನಾಚರಣೆಯಂದು ಉತ್ತಮ ಸೇವೆಗೈದ ಪೊಲೀಸ್ ಅಧಿಕಾರಿಗಳಿಗೆ ನೀಡಲಾಗುವಂತೆ ರಾಷ್ಟ್ರಪತಿ ಪದಕ ಹಾಗೂ ಪೊಲೀಸ್ ಪದಕದ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಬಾರಿ 1,380 ಪೊಲೀಸ್ ಅಧಿಕಾರಿಗಳಿಗೆ ಪ್ರಶಸ್ತಿ ನೀಡಲಾಗಿದೆ. ಇದರಲ್ಲಿ ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಸಂದಿದ್ದರೆ, 19 ಪೊಲೀಸರಿಗೆ ಪೊಲೀಸ್ ಸೇವಾ ಪದಕ ಪ್ರಶಸ್ತಿ ಬಂದಿದೆ. ಈ ಕುರಿತಂತೆ ಕೇಂದ್ರ ಗೃಹ ಇಲಾಖೆಯಿಂದ ಪಟ್ಟಿಯನ್ನು ರಿಲೀಸ್ ಮಾಡಲಾಗಿದ್ದು, ಕರ್ನಾಟಕದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಈ ಬಾರಿಯ ರಾಷ್ಟ್ರಪತಿ ಪದಕ

ರಾಜ್ಯದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ರಾಷ್ಟಪತಿ ಪದಕ| 19 ಪೊಲೀಸರಿಗೆ ಸೇವಾ ಪದಕ ಗೌರವ| Read More »

ನಾನು ಹೇಳಿದ್ದು ಹೌದು ತಪ್ಪು ಎಂದು ಕ್ಷಮೆಯಾಚಿಸಿದ ಈಶ್ವರಪ್ಪ

ಬೆಳಗಾವಿ: ಕಾಂಗ್ರೆಸ್ ನಾಯಕರ ವಿರುದ್ಧ ಅವಾಚ್ಯ ಬಳಸಿದಕ್ಕೆ ಸಚಿವ ಈಶ್ವರಪ್ಪ “ನಾನು ಆ ಪದ ಬಳಸಬಾರದಿತ್ತು, ಆದರೆ ಬಳಸಿದ್ದೇಕ್ಕೆ ಕ್ಷಮೆಯನ್ನು ಯಾಚಿಸಿದ್ದೇನೆ” ಎಂದು ಕ್ಷಮೆಯಸಿದ್ದಾರೆ. ಕಾಂಗ್ರೆಸ್‍ನವರ ವಿರುದ್ಧ ಅಶ್ಲೀಲ ಶಬ್ದ ಬಳಸಿದ ವಿಚಾರವಾಗಿ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾನು ಹೇಳಿದ್ದು ಹೌದು, ಆ ಒಂದು ಪದ ಬಳಸಿದ್ದು ತಪ್ಪು. ಸಿಟ್ಟಿನ ಭರದಲ್ಲಿ ಹೇಳಿ ಆ ಪದವನ್ನು ಹಿಂಪಡೆದುಕೊಂಡಿದ್ದೇನೆ. ಆದರೆ ಸುಲಭ್ ಶೌಚಾಲಯಕ್ಕೆ ನರೇಂದ್ರ ಮೋದಿ ಅವರ ಹೆಸರಿಡಬೇಕು ಎಂದು ಹೇಳಿದನ್ನು ಕಾಂಗ್ರೆಸ್ ಅವರು ಒಪ್ಪುತ್ತಾರಾ? ಕಾಂಗ್ರೆಸ್ ಅವರು

ನಾನು ಹೇಳಿದ್ದು ಹೌದು ತಪ್ಪು ಎಂದು ಕ್ಷಮೆಯಾಚಿಸಿದ ಈಶ್ವರಪ್ಪ Read More »

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ

ಬೆಳ್ತಂಗಡಿ: ಇಲ್ಲಿನ ಸುಲ್ಕೇರಿ ಗ್ರಾಮದಲ್ಲಿ ಆ.10 ರ ಮಧ್ಯಾಹ್ನ ನಾಪತ್ತೆಯಾಗಿದ್ದ ಎರಡು ವರ್ಷದ ಹೆಣ್ಣು ಮಗು ಇಂದು ಶವವಾಗಿ ಪತ್ತೆಯಾಗಿದೆ. ಜಂತಿಗೂಳಿಯ ಪರಾರಿ ನಿವಾಸಿ ಸಂಜೀವ ಶೆಟ್ಟಿ ಅವರ ಪುತ್ರಿ ಸುಚಿತ್ರ ಮತ್ತು ಸುಭಾಷ್ ದಂಪತಿಯು ತಮ್ಮ ಎರಡು ವರ್ಷದ ಹೆಣ್ಣು ಮಗುವಿನೊಂದಿಗೆ ಸುಲ್ಕೇರಿ ಯ ತವರು ಮನೆಯಲ್ಲಿ ವಾಸವಿದ್ದರು. ಮಂಗಳವಾರ ಮಧ್ಯಾಹ್ನ ಸುಚಿತ್ರಾ ಅವರು ಮಗುವನ್ನು ಅಜ್ಜನೊಂದಿಗೆ ಮನೆಯಲ್ಲಿ ಬಿಟ್ಟು ತಾಯಿಯೊಂದಿಗೆ ಹುಲ್ಲು ತರಲು ಎಂದು ತೋಟಕ್ಕೆ ಹೋಗಿದ್ದರು ಎನ್ನಲಾಗಿದೆ. ಹಿಂತಿರುಗಿ ಬರುವಷ್ಟರಲ್ಲಿ ಮಗು ಕಾಣಿಸದೆ

ಬೆಳ್ತಂಗಡಿ : ಅಜ್ಜನ ಜೊತೆಗಿದ್ದ ಮಗು ನಾಪತ್ತೆ ಪ್ರಕರಣ ಎರಡು ವರ್ಷದ ಹೆಣ್ಣು ಮಗು ಶವವಾಗಿ ಪತ್ತೆ Read More »

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ|

ಹಲವು ವರ್ಷಗಳಿಂದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿರುವ ಘಳಿಗೆ 2028ರಲ್ಲಿ ಕೂಡಿಬರುತ್ತಿದ್ದು, 2028ರಲ್ಲಿ ಲಾಸ್​ ಎಂಜಲೀಸ್​ನಲ್ಲಿ ನಡೆಯಲಿರುವ ಒಲಿಂಪಿಕ್ಸ್​​ನಲ್ಲಿ ಕ್ರಿಕೆಟ್ ಸೇರ್ಪಡೆ ಮಾಡಲು ಬಿಡ್​ ಮಾಡಿರೋದಾಗಿ ಐಸಿಸಿ ಹೇಳಿದೆ. ಐಸಿಸಿ ಈಗಾಗಲೇ ವರ್ಕಿಂಗ್ ಗ್ರೂಪ್​ನ್ನು ರಚನೆ ಮಾಡಿದೆ. ಈ ಮೂಲಕ ಕ್ರಿಕೆಟ್ ಪ್ರಿಯರಿಗೆ ಭರ್ಜರಿಗೆ ಗುಡ್ ನ್ಯೂಸ್ ನೀಡಿದೆ.. ಇನ್ನೂ 2028ರ ಲಾಸ್ ​ಏಂಜಲೀಸ್​ ಒಲಂಪಿಕ್ ​ನಲ್ಲಿ ಕ್ರಿಕೆಟ್​ ಸೇರ್ಪಡೆ ಮಾಡಿದಲ್ಲಿ ಟೀಂ ಇಂಡಿಯಾ ಕೂಡ ಸ್ಪರ್ಧೆಗೆ ಇಳಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್​ ಶಾ, ಹೇಳಿದ್ರು. ಈ

ಕ್ರೀಡಾ ಪ್ರೇಮಿಗಳಿಗೆ ಗುಡ್ ನ್ಯೂಸ್|ಒಲಿಂಪಿಕ್ ನಲ್ಲಿ ಇನ್ಮುಂದೆ ಕ್ರಿಕೆಟ್ ಕೂಡಾ‌ ಸೇರ್ಪಡೆ| Read More »

ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ

ಬೆಂಗಳೂರು: ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಸಹಕಾರಿ ಬ್ಯಾಂಕ್ ಗೆ ನೀಡಿದ್ದ 5.2ಕೋಟಿ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಚಿಕ್ಕೋಡಿ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಸಹಕಾರಿ ಬ್ಯಾಂಕ್ ಖಾಸಗಿ ದೂರು ದಾಖಲಿಸಿತ್ತು. ಆದರೆ ಬ್ಯಾಂಕ್ ಪರ ವಕೀಲರು ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಚಿಕ್ಕೋಡಿ ನ್ಯಾಯಾಲಯ ಪ್ರಕರಣ ವಜಾಗೊಳಿಸಿ ಆದೇಶ ನೀಡಿತ್ತು. ಈ ಆದೇಶ

ಜಾರಕಿಹೊಳಿ ವಿರುದ್ಧ ವಜಾಗೊಂಡಿದ್ದ ಪ್ರಕರಣವೊಂದಕ್ಕೆ ಮರುಜೀವ Read More »

ಮೇಕೆದಾಟು ಅಣೆಕಟ್ಟು ನಿರ್ಮಾಣ ಶತಸಿದ್ಧ – ಸಿಎಂ ಬೊಮ್ಮಾಯಿ

ಮೈಸೂರು: ಯಾರು ಏನೇ ಹೇಳಿದರೂ ಮೇಕೆದಾಟು ಅಣೆಕಟ್ಟು ನಿರ್ಮಾಣ ಮಾಡಿಯೇ ಸಿದ್ಧ. ನಮ್ಮ ನೀರು, ನಮ್ಮ ಹಕ್ಕು ಯೋಜನೆ ಬಗ್ಗೆ ಡಿಪಿಆರ್ ಸಿದ್ಧಪಡಿಸಿ ದೆಹಲಿಗೆ ಕಳುಹಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದರು. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳಿದ ಸಿಎಂ ಬೊಮ್ಮಾಯಿ, ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಚಾಮುಂಡಿ ತಾಯಿ ಮೊದಲ ದರ್ಶನ

ಮೇಕೆದಾಟು ಅಣೆಕಟ್ಟು ನಿರ್ಮಾಣ ಶತಸಿದ್ಧ – ಸಿಎಂ ಬೊಮ್ಮಾಯಿ Read More »