Uncategorized

ಮೊತ್ತ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಬಿ.ವಿ ನಾಗರತ್ನ

ನವದೆಹಲಿ: 2027 ರಲ್ಲಿ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲ ಮಹಿಳೆಯಾಗಲಿದ್ದಾರೆ ಎನ್ನಲಾಗಿದೆ. ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರು 2027 ರಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿಯಾಗುವ ಮೊದಲ ಮಹಿಳೆಯಾಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದಲ್ಲಿ, ಸುಪ್ರೀಂ ಕೋರ್ಟ್ ಕೊಲಿಜಿಯಂ ಒಂಬತ್ತು ನ್ಯಾಯಾಧೀಶರ ಹೆಸರನ್ನು ಉನ್ನತ ನ್ಯಾಯಾಲಯದ ಮುಖ್ಯಮೂರ್ತಿಯಾಗಿ ನೇಮಕ ಮಾಡಲು ಶಿಫಾರಸು ಮಾಡಿದೆ. ಪ್ರಸ್ತುತ ಕರ್ನಾಟಕ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರನ್ನು ಸಹ ಕೊಲಿಜಿಯಂ ಶಿಫಾರಸು ಮಾಡಿದೆ. ನ್ಯಾಯಮೂರ್ತಿ ಹಿಮಾ […]

ಮೊತ್ತ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಬಿ.ವಿ ನಾಗರತ್ನ Read More »

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…?

ಮಂಗಳೂರು: ಕೊರೊನಾ ಭಯದಲ್ಲಿ ಸಾವಿಗೆ ಶರಣಾಗಿರುವ ದಂಪತಿಯ ಪ್ರಕರಣ ಕರಾವಳಿಯಲ್ಲಿ ಭಾರೀ ಸಂಚಲನವನ್ನೇ ಸೃಷ್ಟಿಸಿದೆ. ಕೊರೊನಾ ಸೋಂಕಿನ ಎರಡನೇ ಅಲೆಯಲ್ಲಿ ಉಸಿರಾಟದ ತೊಂದರೆ, ಬ್ಲಾಕ್ ಫಂಗಸ್ ಕಂಡುಬಂದಿದ್ದರೂ, ಮೂರೇ ತಿಂಗಳಲ್ಲಿ ಸೋಂಕಿನ ತೀವ್ರತೆ ಕಡಿಮೆಯಾಗಿತ್ತು. ಸೋಂಕು ಕಡಿಮೆಗೊಂಡು ಜನಜೀವನ ಸಹಜಸ್ಥಿತಿಗೆ ಬರುತ್ತಿರುವಾಗಲೇ ದಂಪತಿ ಅನ್ಯಾಯವಾಗಿ ಸಾವು ಕಂಡಿರುವುದು ಕರಾವಳಿ‌ ಮುಮ್ಮಲ ಮರುಗುವಂತೆ ಮಾಡಿದೆ. ಪಡುಬಿದ್ರಿ ಮೂಲದ ರಮೇಶ್ ಸುವರ್ಣ (45) ಉದ್ಯಮಿಯಾಗಿದ್ದರೂ ಕೊರೊನಾ ಕಾರಣದಿಂದ ಅವರಿಗೇನೂ ದೊಡ್ಡ ನಷ್ಟ ಆಗಿರಲಿಲ್ಲ. ಮದುವೆಯಾಗಿ 21 ವರ್ಷ ಆಗಿದ್ದರೂ ಮಕ್ಕಳಾಗಿಲ್ಲ

ಭಯ, ಆತಂಕಕ್ಕೆ ಬಲಿಯಾದ ದಂಪತಿ| ವಿಧಿಯೇ….ಈ ಸಾವು ನ್ಯಾಯವೇ…? Read More »

ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದು, ಮಂಗಳವಾರ ಕುಂದಾಪುರ ತಾಲೂಕಿನ ವಕ್ವಾಡಿ-ಕಾಳಾವರ ರಸ್ತೆ ಸಮೀಪದ ಸರಕಾರಿ ಹಾಡಿಯಲ್ಲಿ ಯುವಕನ ಶವ ಪತ್ತೆಯಾಗಿದೆ.ವಕ್ವಾಡಿ ನವನಗರ ನಿವಾಸಿ ರವಿಚಂದ್ರ ಕುಲಾಲ್ (33) ಆತ್ಮಹತ್ಯೆಗೈದ ಯುವಕ.ವಕ್ವಾಡಿಯಲ್ಲಿ ಆಟೋ ಚಾಲಕರಾಗಿದ್ದ ರವಿಚಂದ್ರ ಕುಲಾಲ್ ಸೋಮವಾರ ಮಧ್ಯಾಹ್ನದ ಸುಮಾರಿಗೆ ತನ್ನ ಆಟೋ ರಿಕ್ಷಾವನ್ನು ವಕ್ವಾಡಿ ನವನಗರ ತಿರುವಿನಲ್ಲಿ ನಿಲ್ಲಿಸಿ ನಾಪತ್ತೆಯಾಗಿದ್ದರು. ತನ್ನ ವಾಟ್ಸಾಪ್ ಸ್ಟೇಟಸ್’ನಲ್ಲಿ ಗುಡಾರ್ಥದ ಬರಹಗಳನ್ನು ಬರೆದುಕೊಂಡಿದ್ದರಿಂದ ಅನುಮಾನಗೊಂಡ ಸ್ನೇಹಿತರು ಹಾಗೂ ಕುಟುಂಬದವರು ನಿರಂತರವಾಗಿ ಕರೆ ಮಾಡಿದ್ದಾರೆ.

ಕುಂದಾಪುರ: ನಾಪತ್ತೆಯಾಗಿದ್ದ ಆಟೋ ಚಾಲಕನ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ತಮಿಳು ಚಿತ್ರರಂಗದತ್ತ ಪೃಥ್ವಿ ಅಂಬರ್| ಕಾಲಿವುಡ್ ನಲ್ಲಿ ಮಿಂಚಲಿರುವ ಕರಾವಳಿ ಪ್ರತಿಭೆ|

‘ದಿಯಾ’ ಚಿತ್ರದ ಮೂಲಕ ಗಡಿ ದಾಟಿ ಜನಪ್ರಿಯತೆ ಗಳಿಸಿರುವ ಕರಾವಳಿಯ ಪ್ರತಿಭೆ ಪೃಥ್ವಿ ಅಂಬರ್ ಇದೀಗ ತಮಿಳು ಚಿತ್ರರಂಗ ಪ್ರವೇಶಿಸಲು ಸಜ್ಜಾಗಿದ್ದಾರೆ. ಅವರ ನಟಿಸಲಿರುವ ತಮಿಳು ಚಿತ್ರದಲ್ಲಿ ಡಾಲಿ ಧನಂಜಯ್ ಸಹ ನಟಿಸುತ್ತಿದ್ದಾರೆ ಎನ್ನುವುದು ಮತ್ತೊಂದು ವಿಶೇಷ. ವಿಜಯ್ ಮಿಲ್ಟನ್ ನಿರ್ದೇಶನದ “ಮಲೈ ಪಿಡಿಕ್ಕಾದ ಮಣಿದನ್” ಚಿತ್ರದ ಮೂಲಕ ಪೃಥ್ವಿ ಅಂಬರ್ ತಮಿಳು ಚಲನಚಿತ್ರ ರಂಗಕ್ಕೆ ಕಾಲಿಡುತ್ತಿದ್ದಾರೆ. ನಿರ್ದೇಶಕರಾಗಿ ಸಾಕಷ್ಟು ಹೆಸರು ಮಾಡಿರುವ ವಿಜಯ್ ಮಿಲ್ಟನ್ ಪ್ರಸ್ತುತ ಶಿವರಾಜ್ ಕುಮಾರ್, ಪೃಥ್ವಿ ಅಂಬರ್ ಮತ್ತು ಧನಂಜಯ್ ಅಭಿನಯದ

ತಮಿಳು ಚಿತ್ರರಂಗದತ್ತ ಪೃಥ್ವಿ ಅಂಬರ್| ಕಾಲಿವುಡ್ ನಲ್ಲಿ ಮಿಂಚಲಿರುವ ಕರಾವಳಿ ಪ್ರತಿಭೆ| Read More »

ಟೇಸ್ಟಿಯಾದ ಅಣಬೆ ಕರಿ ಅಥವಾ ಮಶ್ರೂಮ್‌ ಕರಿ ಹೀಗೆ ಮಾಡಿ.

ಬೇಕಾಗುವ ಸಾಮಾಗ್ರಿಗಳು 2 ಕಪ್ ಅಣಬೆ,1 ಕಪ್ ಟೊಮೆಟೊ,¾ ಕಪ್ ಈರುಳ್ಳಿ,¾ ಕಪ್ ಕಾರ್ನ್,½ ಕಪ್ ಬಟಾಣಿ,2 ಹಸಿಮೆಣಸಿನ ಕಾಯಿ,ಸ್ವಲ್ಪ ಲವಂಗ, ಬೆಳ್ಳುಳ್ಳಿ,2 ಇಂಚು ಶುಂಠಿ,15 ಗೋಡಂಬಿ,1 ಚಮಚ ರಸಂ ಪೌಡರ್,3 ಚಮಚ ಎಣ್ಣೆ,½ ಚಮಚ ಅಜ್ವೈನ್ ,¼ ಚಮಚ ಅರಶಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು ಅಣಬೆ ಕರಿ ಅಥವಾ ಮಶ್ರೂಮ್‌ ಕರಿ ಮಾಡುವ ವಿಧಾನ ಮೇಲೆ ತಿಳಿಸಿದ ಎಲ್ಲಾ ಸಾಮಾಗ್ರಿಗಳನ್ನು ಸಿದ್ಧವಾಗಿಟ್ಟುಕೊಳ್ಳಿ. ಮೊದಲು ಗೋಡಂಬಿಯನ್ನು ನೀರಿನೊಂದಿಗೆ ರುಬ್ಬಿ ಪೇಸ್ಟ್ ತಯಾರಿಸಿ. ಬಳಿಕ ಈರುಳ್ಳಿ, ಬೆಳ್ಳುಳ್ಳಿ,

ಟೇಸ್ಟಿಯಾದ ಅಣಬೆ ಕರಿ ಅಥವಾ ಮಶ್ರೂಮ್‌ ಕರಿ ಹೀಗೆ ಮಾಡಿ. Read More »

ಕಾಂಡೋಮ್, ಕಾಪರ್ ಟಿ‌ ಗೆ ಗುಡ್ ಬೈ| ಇನ್ಮುಂದೆ ಬರಲಿದೆ ಹೊಸ ಮದ್ದು|

ಸದ್ಯ ಗರ್ಭನಿರೋಧಕವಾಗಿ ಕಾಂಡೋಮ್, ಕಾಪರ್ ಟಿ ಸೇರಿದಂತೆ ಅನೇಕ ವಿಧಾನಗಳನ್ನು ಗರ್ಭನಿರೋಧಕವಾಗಿ ಬಳಸಲಾಗುತ್ತಿದೆ. ಆದರೆ ಶೀಘ್ರದಲ್ಲಿಯೇ ಇದೆಲ್ಲದಕ್ಕೂ ಬ್ರೇಕ್ ಬೀಳಲಿದೆ. ದೇಹದಲ್ಲಿ ಕಂಡುಬರುವ ವಿಶೇಷ ರೀತಿಯ ಪ್ರತಿಕಾಯದಿಂದ ಹೊಸ ಔಷಧಿ ಸಿದ್ಧವಾಗಲಿದೆ. ಇದು ಅನಗತ್ಯ ಗರ್ಭಧಾರಣೆಯನ್ನು ತಡೆಯಲು ನೆರವಾಗಲಿದೆ. ಈ ಪ್ರತಿಕಾಯವು ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಕಂಡುಬರುತ್ತದೆ. ವಿಜ್ಞಾನಿಗಳ ಪ್ರಕಾರ, ಈ ಪ್ರತಿಕಾಯಗಳು ಒಂದು ರೀತಿಯಲ್ಲಿ ವೀರ್ಯವನ್ನು ಬೇಟೆಯಾಡುತ್ತವೆ. ವೀರ್ಯವು ದೇಹದ ಅನಗತ್ಯ ಭಾಗವನ್ನು ಪ್ರವೇಶಿಸುವುದನ್ನು ತಡೆಯುವಲ್ಲಿ ಇದು ಪರಿಣಾಮಕಾರಿಯಾಗಿದೆ. ಗರ್ಭನಿರೋಧಕ ಔಷಧವನ್ನು ದೇಹದಲ್ಲಿರುವ ಪ್ರತಿಕಾಯಗಳಿಂದ

ಕಾಂಡೋಮ್, ಕಾಪರ್ ಟಿ‌ ಗೆ ಗುಡ್ ಬೈ| ಇನ್ಮುಂದೆ ಬರಲಿದೆ ಹೊಸ ಮದ್ದು| Read More »

ಅಯ್ಯಪ್ಪನ ದರ್ಶನಕ್ಕೆ ಅಪ್ರಾಪ್ತ ಬಾಲಕಿಯರಿಗೆ ಅವಕಾಶ| 9 ವರ್ಷದ ಬಾಲಕಿಯ ಮನವಿ ಸಮ್ಮತಿಸಿದ ಕೇರಳ ಹೈಕೋರ್ಟ್|

ಕೊಚ್ಚಿ: -ಶಬರಿಮಲೆ ಯಾತ್ರೆ ಕೈಗೊಳ್ಳುವ ಅಪ್ಪನೊಂದಿಗೆ ಅಪ್ರಾಪ್ತ ಬಾಲಕಿಯರು ದೇವರ ದರ್ಶನಕ್ಕೆ ತೆರಳಲು ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ಶಬರಿಮಲೆ ಯಾತ್ರೆ ಕೈಗೊಳ್ಳುವವರು ಕಡ್ಢಾಯವಾಗಿ ಕೊರೊನಾ ಲಸಿಕೆ ಹಾಕಿಸಿಕೊಂಡಿರಬೇಕು ಹಾಗೂ ಲಸಿಕೆ ಪಡೆಯಲು ಸಾಧ್ಯವಿಲ್ಲದ ಅಪ್ರಾಪ್ತ ಮಕ್ಕಳನ್ನು ಜತೆಯಲ್ಲಿ ಕರೆದುಕೊಂಡು ಹೋಗಬಾರದು ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿತ್ತು. ಸರ್ಕಾರದ ಈ ಆದೇಶದ ವಿರುದ್ಧ ನ್ಯಾಯಾಲಯದ ಮೆಟ್ಟಿಲು ಏರಿದ್ದ 9 ವರ್ಷದ ಬಾಲಕಿ ನಾನು ನಮ್ಮ ತಂದೆಯೊಂದಿಗೆ ಶಬರಿಮಲೆ ಯಾತ್ರೆ ಕೈಗೊಳ್ಳಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದಳು.

ಅಯ್ಯಪ್ಪನ ದರ್ಶನಕ್ಕೆ ಅಪ್ರಾಪ್ತ ಬಾಲಕಿಯರಿಗೆ ಅವಕಾಶ| 9 ವರ್ಷದ ಬಾಲಕಿಯ ಮನವಿ ಸಮ್ಮತಿಸಿದ ಕೇರಳ ಹೈಕೋರ್ಟ್| Read More »

ಕುಶಾಲನಗರ: ಹೊತ್ತಿ ಉರಿದ ‘ಪೂರ್ವಿಕಾ ಮೊಬೈಲ್’ ಶೋರೂಂ| ಲಕ್ಷಾಂತರ ರೂ. ಮೊಬೈಲ್ ಸಾಮಾಗ್ರಿ ನಷ್ಟ|

ಕೊಡಗು : ಕುಶಾಲನಗರದ ಪೂರ್ವಿಕಾ ಮೊಬೈಲ್ ಮಳಿಗೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಬೆಲೆ ಬಾಳುವಂತ ಮೊಬೈಲ್ ಮತ್ತು ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಭಸ್ಮವಾಗಿರೋ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಇದನ್ನು ಕಂಡ ದಾರಿಹೋಕರು, ಅಗ್ನಿ ಶಾಮಕ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ತಂಡದ ಅಧಿಕಾರಿಗಳು 2 ಗಂಟೆಗೂ ಹೆಚ್ಚುಕಾಲ ಕಾರ್ಯಾಚರಣೆ ನಡೆಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾರ್ಟ್

ಕುಶಾಲನಗರ: ಹೊತ್ತಿ ಉರಿದ ‘ಪೂರ್ವಿಕಾ ಮೊಬೈಲ್’ ಶೋರೂಂ| ಲಕ್ಷಾಂತರ ರೂ. ಮೊಬೈಲ್ ಸಾಮಾಗ್ರಿ ನಷ್ಟ| Read More »

ಮಂಗಳೂರು: ಸಿಟಿ ಬಸ್ ಮೇಲೆ ಉರುಳಿ ಬಿದ್ದ ತೆಂಗಿನಮರ.! ಬೊಂಡ ಕಿತ್ತ ಸಾರ್ವಜನಿಕರು

ಮಂಗಳೂರು: ಸಿಟಿ ಬಸ್ ಮೇಲೆ ತೆಂಗಿನಮರವೊಂದು ಬಿದ್ದ ಘಟನೆ ಆ. 17 ರ ನಗರದ ಮಲ್ಲಿಕಟ್ಟೆ ವೃತ್ತದ ಬಳಿ ನಡೆದಿದೆ. ಘಟನೆಯಲ್ಲಿ ಪ್ರಯಾಣಿಕರೆಲ್ಲರೂ ಪವಾಡ ಸದೃಶ್ಯವಾಗಿ ಪಾರಾಗಿದ್ದಾರೆ. ಬೆಳಗ್ಗೆ ಸುಮಾರು ಹತ್ತುಗಂಟೆ ವೇಳೆ ಚಲಿಸುತ್ತಿದ್ದ 15 ನಂಬರ್ ನ ಸಿಟಿ ಬಸ್ ಮೇಲೆ ಬಿದ್ದಿದೆ. ತೆಂಗಿನ ಮರ ಬಸ್ ನ ಹಿಂಬಂದಿಗೆ ಬಿದ್ದ ಕಾರಣ ಸಂಭವನೀಯ ಅಪಾಯ ತಪ್ಪಿದೆ. ಸ್ಥಳಕ್ಕೆ ಮಾಜಿ ಎಮ್.ಎಲ್.ಸಿ ಐವನ್ ಡಿಸೋಜ್ ಅವರು ಹಾಗು ಮಾಜಿಮೇಯರ್ ಶಶಿಧರ ಹೆಗ್ಡೆಯವರು ಭೇಟಿ ನೀಡಿದರು ಬಿದ್ದ

ಮಂಗಳೂರು: ಸಿಟಿ ಬಸ್ ಮೇಲೆ ಉರುಳಿ ಬಿದ್ದ ತೆಂಗಿನಮರ.! ಬೊಂಡ ಕಿತ್ತ ಸಾರ್ವಜನಿಕರು Read More »

ಕರಾವಳಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಎಸ್ ಡಿಪಿಐ| ಘಟನೆ ಖಂಡಿಸಿ ಆ.17ರಂದು ವೀರ ಸಾವರ್ಕರ್ ರಥಯಾತ್ರೆ|

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯ ರಥಯಾತ್ರೆಯನ್ನು ಎಸ್‌ಡಿಪಿಐ ಕಾರ್ಯಕರ್ತರು ತಡೆದ ವಿಚಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿವಾದದ ಕಿಡಿ ಹೊತ್ತಿಸಿದೆ. ಸ್ವಾತಂತ್ರ್ಯ ರಥ ಯಾತ್ರೆಯಲ್ಲಿದ್ದ ಸಾವರ್ಕರ್ ಭಾವಚಿತ್ರವನ್ನು ಹರಿಯಲು ಯತ್ನಿಸಿದ ಎಸ್‌ಡಿಪಿಐ ವಿರುದ್ಧ ಹಿಂದೂ ಸಂಘಟನೆಗಳು ತೊಡೆ ತಟ್ಟಿದ್ದು, ಕಬಕ ಜಂಕ್ಷನ್‌ನಲ್ಲಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ. ಪುತ್ತೂರು ತಾಲೂಕಿನ ಕಬಕ ಜಂಕ್ಷನ್‌ನಲ್ಲಿ ಹಿಂದೂಪರ ಸಂಘಟನೆಗಳ ನೂರಾರು ಕಾರ್ಯಕರ್ತರು ಸೇರಿದ್ದು, ಸಾವರ್ಕರ್ ಫೋಟೋ ಹಿಡಿದು, ಎಸ್‌ಡಿಪಿಐ ವಿರುದ್ಧ ಘೋಷಣೆ ಕೂಗಿದ್ದಾರೆ.

ಕರಾವಳಿಯಲ್ಲಿ ಮತ್ತೆ ವಿವಾದದ ಕಿಡಿ ಹೊತ್ತಿಸಿದ ಎಸ್ ಡಿಪಿಐ| ಘಟನೆ ಖಂಡಿಸಿ ಆ.17ರಂದು ವೀರ ಸಾವರ್ಕರ್ ರಥಯಾತ್ರೆ| Read More »