ಉಡುಪಿ| ಚೂರಿ ಇರಿತಕ್ಕೊಳಗಾದ ಯುವತಿ ಸಾವು| ಜೀವನ್ಮರಣ ಸ್ಥಿತಿಯಲ್ಲಿ ಭಗ್ನ ಪ್ರೇಮಿ| ಘಟನೆ ನಡೆದಿದ್ದು ಯಾಕೆ? ಇಲ್ಲಿದೆ ಫುಲ್ ಡೀಟೈಲ್
ಉಡುಪಿ: ನಗರದ ಸಂತೆಕಟ್ಟೆ ಸಮೀಪದ ರೋಬೊ ಸಾಪ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೋರ್ವ ಯುವತಿಗೆ ಚೂರಿ ಇರಿತವನ್ನು ಮಾಡಿದ್ದು ಬಳಿಕ ತಾನು ಕೂಡ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಯುವತಿ ಮೃತಪಟ್ಟಿದ್ದಾಳೆ. ಯುವತಿಯನ್ನು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದಾನೆ. ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26) […]