Uncategorized

”ಗಣೇಶ” ಹೆಸರಿರುವವರಿಗೆ ಬಂಪರ್ ಆಫರ್ – ವಂಡರ್ ಲಾದಿಂದ 100 ಮಂದಿಗೆ ಉಚಿತ ಪಾಸ್

ಬೆಂಗಳೂರು: ಗಣೇಶ ಹಬ್ಬದ ಪ್ರಯುಕ್ತ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ವಂಡರ್ ಲಾದಿಂದ ಈ ಬಾರಿ ಗಣೇಶ ಹಬ್ಬಕ್ಕೆ ಬಂಪರ್ ಆಫರ್ ನೀಡಿದೆ. ಗಣೇಶ ಚತುರ್ಥಿ ದಿನದ ಅಂಗವಾಗಿ ವಂಡರ್ ಲಾ ವತಿಯಿಂದ ವಿಶೇಷ ಕೊಡುಗೆ ನೀಡಲಾಗಿದೆ. ಭಗವಾನ್ ಶ್ರೀ ಗಣೇಶನ 108 ಹೆಸರುಗಳ ಪೈಕಿ ಯಾವುದೇ ಹೆಸರು ನೀವು ಇಟ್ಟುಕೊಂಡಿದ್ದರೆ, ಅವರಿಗೆ ಸೆಪ್ಟೆಂಬರ್ 10ರ ಗಣೇಶ ಹಬ್ಬದಂದು ಉಚಿತ ಪಾಸ್ ನೀಡುತ್ತಿದೆ. ಇಂಥ 100 ಪಾಸ್ ನೀಡಲು ನಿರ್ಧರಿಸಿದೆ. ಶ್ರೀ ಗಣೇಶನ ವಿವಿಧ ಹೆಸರು ಹೊಂದಿರುವ ಜನರು […]

”ಗಣೇಶ” ಹೆಸರಿರುವವರಿಗೆ ಬಂಪರ್ ಆಫರ್ – ವಂಡರ್ ಲಾದಿಂದ 100 ಮಂದಿಗೆ ಉಚಿತ ಪಾಸ್ Read More »

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ

ಕೋಝಿಕೋಡ್: ಕೇರಳದಲ್ಲಿ ಆತಂಕ ಮೂಡಿಸಿದ್ದ ನಿಫಾ ವೈರಸ್ ಮತ್ತೆ ಕಾಣಿಸಿಕೊಂಡಿದೆ. ರಾಜ್ಯದ ಕೋಳಿಕೋಡ್ ನಲ್ಲಿ 13 ವರ್ಷದ ಬಾಲಕ ನಿಫಾ ವೈರಸ್ ನಿಂದ ಸಾವನ್ನಪ್ಪಿದ್ದಾನೆ ಎಂದು ಆರೋಗ್ಯ ಇಲಾಖೆ ಮೂಲಗಳು ಭಾನುವಾರ ತಿಳಿಸಿವೆ. ಸೋಂಕಿಗೊಳಗಾಗಿರುವ ಬಾಲಕ ಛತಮಂಗಳಂ ಹತ್ತಿರ ಬಳಿಯಿರುವ ಚುಲೂರ್ ಮೂಲದವನೆಂದು ತಿಳಿದುಬಂದಿದೆ.ಪುಣೆ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಕಳುಹಿಸಲಾದ ಹುಡುಗನ ಮಾದರಿಗಳು ನಿಫಾ ವೈರಸ್ ಇರುವಿಕೆಯನ್ನು ದೃಢಪಡಿಸಿವೆ. ಕೇಂದ್ರ ಸರ್ಕಾರವು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರದ ತಂಡವನ್ನು ರಾಜ್ಯಕ್ಕೆ ರವಾನಿಸಿದೆ, ಅದು ಭಾನುವಾರ ತಲುಪಲಿದೆ.

ಕೇರಳದಲ್ಲಿ ಮತ್ತೆ ಕಾಣಿಸಿಕೊಂಡ ನಿಫಾ| ಬಾಲಕನ ಬಲಿ ಪಡೆದ ಬಾವಲಿ ಜ್ವರ Read More »

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಚೂರಿ ಇರಿತ

ಮಂಗಳೂರು: ವಕ್ತಿಯೊಬ್ಬನಿಗೆ ತಂಡವೊಂದು ಚೂರಿ ಇರಿದ ಘಟನೆ ಮಂಗಳೂರು ಹೊರವಲಯದ ಎದುರುಪದವು ಎಂಬಲ್ಲಿ ನಿನ್ನೆ ತಡರಾತ್ರಿ ನಡೆದಿದೆ.ಇರಿತಕ್ಕೊಳಗಾದವರನ್ನು ಬಾಗಲಕೋಟೆ ಮೂಲದ ನಿಂಗಣ್ಣ ಎಂದು ಗುರುತಿಸಲಾಗಿದೆ. ಚೂರಿ ಎದುರುಪದವು ನಿವಾಸಿ ದಿವಾಕರ್ ಯಾನೆ ದೀವ ತಂಡದಿಂದ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ. ಮದ್ಯಪಾನದ ಅಮಲಿನಲ್ಲಿ ನಿಂಗಣ್ಣ ಹಾಗೂ ತಂಡದೊಂದಿಗೆ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಜಗಳ ಪ್ರಾರಂಭವಾಗಿ ಕೊನೆಗೆ ಚೂರಿ ಇರಿಯುವ ಹಂತಕ್ಕೆ ಹೋಗಿದೆ.ಚೂರಿ ಇರಿತದ ಪರಿಣಾಮ ನಿಂಗಣ್ಣ ತಲೆಗೆ ಗಂಭೀರ ಗಾಯವಾಗಿದ್ದು

ಮಂಗಳೂರು: ದುಷ್ಕರ್ಮಿಗಳ ತಂಡದಿಂದ ಯುವಕನಿಗೆ ಚೂರಿ ಇರಿತ Read More »

ಅಪ್ಘಾನ್ ನಲ್ಲಿ ಸಕ್ರಿಯರಾಗಿದ್ದಾರೆ ಭಾರತದ ಮೋಸ್ಟ್ ವಾಂಟೆಂಡ್ ಟೆರರಿಸ್ಟ್| 25 ಮಂದಿಯಲ್ಲಿ ಕೇರಳದವರೇ ಹೆಚ್ಚು…!

ಕಾಬೂಲ್, ಸೆ.1: ಭಾರತದಲ್ಲಿ ಮೋಸ್ಟ್ ವಾಂಟೆಡ್ ಲಿಸ್ಟ್ ನಲ್ಲಿರುವ 25ಕ್ಕೂ ಹೆಚ್ಚು ಮಂದಿ ಉಗ್ರರು ಅಪ್ಘಾನಿಸ್ತಾನದಲ್ಲಿ ಸಕ್ರಿಯರಾಗಿದ್ದಾರೆ ಎಂಬ ಮಾಹಿತಿಯನ್ನು ಗುಪ್ತಚರ ಮೂಲಗಳು ತಿಳಿಸಿವೆ. ಇತ್ತೀಚೆಗೆ ಕಾಬೂಲನ್ನು ತಾಲಿಬಾನಿಗಳು ವಶಕ್ಕೆ ಪಡೆಯುತ್ತಿದ್ದಂತೆ, ಅಲ್ಲಿನ ಜೈಲಿನಲ್ಲಿದ್ದ ಸಾವಿರಾರು ಕೈದಿಗಳನ್ನು ಹೊರಕ್ಕೆ ಬಿಡಲಾಗಿತ್ತು. ಅದರಲ್ಲಿ ಹಲವು ಭಾರತ ಮೂಲದವರೂ ಇದ್ದರು ಎನ್ನಲಾಗಿದ್ದು, ಇದೀಗ ಅಫ್ಘಾನಿಸ್ತಾನದ ನಂಗರ್ಹರ್ ಪ್ರಾಂತ್ಯದಲ್ಲಿ ಬೀಡುಬಿಟ್ಟಿದ್ದಾರೆ ಎನ್ನಲಾಗುತ್ತಿದೆ. 25 ಮಂದಿಯ ಪೈಕಿ ಹೆಚ್ಚಿನವರು ಭಾರತದ ಕೇರಳದವರು ಎನ್ನುವ ಮಾಹಿತಿಯನ್ನು ಗುಪ್ತಚರ ಪಡೆಗಳು ಹೇಳುತ್ತಿವೆ. ಕಳೆದ ವಾರ ಕಾಬೂಲ್

ಅಪ್ಘಾನ್ ನಲ್ಲಿ ಸಕ್ರಿಯರಾಗಿದ್ದಾರೆ ಭಾರತದ ಮೋಸ್ಟ್ ವಾಂಟೆಂಡ್ ಟೆರರಿಸ್ಟ್| 25 ಮಂದಿಯಲ್ಲಿ ಕೇರಳದವರೇ ಹೆಚ್ಚು…! Read More »

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ

ಮಂಗಳೂರು : ಕಾರಿನ ನಂಬರ್ ಪ್ಲೇಟ್‌ ಬಳಿ ಕೊರಗಜ್ಜನ ಭಾವಚಿತ್ರ ಇದೆ ಎಂದು ಆಕ್ಷೇಪಿಸಿದ ಪೊಲೀಸ್‌ ಸಿಬ್ಬಂದಿಯ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ ಬಳಿ ಇಂದು ನಡೆದಿದೆ. ನಗರದ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರ ಮಾರುತಿ 800 ವಾಹನದಲ್ಲಿ ನೋಂದಣಿ ಸಂಖ್ಯೆಯ ಬಳಿ ಕೊರಗಜ್ಜನ ಭಾವಚಿತ್ರವಿತ್ತು. ಆ ಭಾವಚಿತ್ರ ತೆಗೆಯುವಂತೆ ಪೊಲೀಸ್‌ ಸಿಬ್ಬಂದಿ ಸೂಚಿಸಿದ್ದು, ಈ ವೇಳೆ ದೈವದ ಭಾವಚಿತ್ರ ತೆಗೆಯಲು ಕಾರಿನ ಮಾಲೀಕ ಹಾಗೂ

ಉಳ್ಳಾಲ| ಕಾರಿನ ನಂಬರ್ ಪ್ಲೇಟ್ ನಲ್ಲಿ ಕೊರಗಜ್ಜನ ಭಾವಚಿತ್ರಕ್ಕೆ ಪೊಲೀಸರಿಂದ ಆಕ್ಷೇಪ| ಪೊಲೀಸರ ನಡೆಗೆ ಸಾರ್ವಜನಿಕರಿಂದ ತೀವ್ರ ಆಕ್ರೋಶ| ಸ್ಥಳದಲ್ಲಿ ಬಿಗುವಿನ ವಾತಾವರಣ Read More »

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ.

ಮಡಿಕೇರಿ: ಕೊಡಗಿನ ಮದೆನಾಡು ಗ್ರಾಮದ ಬಾರಿಯಂಡ ದೀಪಕ್ ಜೋಯಪ್ಪ ಅವರು ಸಂಶೋಧಸಿದ ’ಇಂಗ್ಲಿಷ್ ಮತ್ತು ಕನ್ನಡ ನ್ಯೂಸ್ ವೆಬ್‌ಸೈಟ್ಸ್: ಸ್ಟಡಿ ಆನ್ ದೇರ್ ಪೊಟೆನ್‌ಷ್ಯಾಲಿಟಿ ಆಂಡ್ ಸಸ್ಟೈನೇಬಿಲಿಟಿ’ ಎಂಬ ಮಹಾಪ್ರಬಂಧಕ್ಕೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್(ಮಾಹೆ) ಸಂಸ್ಥೆಯು ಡಾಕ್ಟರೇಟ್ ನೀಡಿದೆ. ದೀಪಕ್ ಅವರು ಈ ಸಂಸ್ಥೆಯು ಕೊಡುವ ಪ್ರತಿಷ್ಠಿತ ’ಡಾ. ಟಿಎಂಎ ಪೈ’ ವಿದ್ಯಾರ್ಥಿ ವೇತನದಲ್ಲಿ ಸಂಶೋಧನೆ ನಡೆಸಿದ್ದರು. ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಸಂಸ್ಥೆಯ ಪ್ರೊಫೆಸರ್ ಮತ್ತು ನಿರ್ದೇಶಕರಾದ ಡಾ. ಪದ್ಮ ರಾಣಿ ಅವರ

ಬಾರಿಯಂಡ ದೀಪಕ್ ಜೋಯಪ್ಪರಿಗೆ ಜರ್ನಲಿಸಂನಲ್ಲಿ ಪಿಹೆಚ್.ಡಿ. Read More »

ಉಡುಪಿ| ಚೂರಿ‌ ಇರಿತಕ್ಕೊಳಗಾದ ಯುವತಿ‌ ಸಾವು| ಜೀವನ್ಮರಣ ಸ್ಥಿತಿಯಲ್ಲಿ ಭಗ್ನ ಪ್ರೇಮಿ| ಘಟನೆ ನಡೆದಿದ್ದು ಯಾಕೆ? ಇಲ್ಲಿದೆ ಫುಲ್ ಡೀಟೈಲ್

ಉಡುಪಿ: ನಗರದ ಸಂತೆಕಟ್ಟೆ ಸಮೀಪದ ರೋಬೊ ಸಾಪ್ಟ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಯುವಕನೋರ್ವ ಯುವತಿಗೆ ಚೂರಿ ಇರಿತವನ್ನು ಮಾಡಿದ್ದು ಬಳಿಕ ತಾನು ಕೂಡ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದ ಪ್ರಕರಣದಲ್ಲಿ ಯುವತಿ ಮೃತಪಟ್ಟಿದ್ದಾಳೆ. ಯುವತಿಯನ್ನು ಇರಿದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಯುವಕ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ‌ ನಡೆಸುತ್ತಿದ್ದಾನೆ. ಅಂಬಾಗಿಲು ಸಮೀಪದ ಕಕ್ಕುಂಜೆ ನಿವಾಸಿ ವಿಠಲ ಭಂಡಾರಿ ಹಾಗೂ ಸುಶೀಲಾ ದಂಪತಿಯ ಪುತ್ರಿ ಸೌಮ್ಯಶ್ರೀ(26) ಕೊಲೆಯಾಗಿದ್ದು, ಕೃತ್ಯ ಎಸಗಿರುವ ಆರೋಪಿ ಅಲೆವೂರು ರಾಂಪುರ ನಿವಾಸಿ ಸಂದೇಶ್ ಕುಲಾಲ್(26)

ಉಡುಪಿ| ಚೂರಿ‌ ಇರಿತಕ್ಕೊಳಗಾದ ಯುವತಿ‌ ಸಾವು| ಜೀವನ್ಮರಣ ಸ್ಥಿತಿಯಲ್ಲಿ ಭಗ್ನ ಪ್ರೇಮಿ| ಘಟನೆ ನಡೆದಿದ್ದು ಯಾಕೆ? ಇಲ್ಲಿದೆ ಫುಲ್ ಡೀಟೈಲ್ Read More »

ಅಪ್ರಾಪ್ತ ಬಾಲಕರಿಂದ ಅಪ್ರಾಪ್ತೆ ಬಾಲಕಿಯ ಸಾಮೂಹಿಕ ಅತ್ಯಾಚಾರ| ವಿಕೃತರಾಗ್ತಿದಾರಾ ನವಪೀಳಿಗೆ…?

ಜಾರ್ಖಂಡ್‌: ರಾಜಧಾನಿ ರಾಂಚಿ ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಏಳು ಬಾಲಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಎಲ್ಲಾ ಆರೋಪಿಗಳೂ ಸಹ ಅಪ್ರಾಪ್ತ ಬಾಲಕರೇ ಆಗಿದ್ದು, ಪರಿಚಯಸ್ಥ ಹುಡುಗರಿಂದಲೇ ಇಂತಹ ಹೀನ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರನ್ನು ಬಂಧಿಸಲು ಶೋಧಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತ ಬಾಲಕಿಯ ಪರಿಚಯದವನಾದ ಒಬ್ಬ ಆರೋಪಿ ತನ್ನ ಬೈಕಿನಲ್ಲಿ ಬಾಲಕಿಯನ್ನು ಸುತ್ತಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ.

ಅಪ್ರಾಪ್ತ ಬಾಲಕರಿಂದ ಅಪ್ರಾಪ್ತೆ ಬಾಲಕಿಯ ಸಾಮೂಹಿಕ ಅತ್ಯಾಚಾರ| ವಿಕೃತರಾಗ್ತಿದಾರಾ ನವಪೀಳಿಗೆ…? Read More »

ತುಮಕೂರು : ಮನೆಯಲ್ಲೇ ವೇಶ್ಯಾವಾಟಿಕೆ: ಐವರ ಪೊಲೀಸ್ ವಶಕ್ಕೆ

ತುಮಕೂರು: ವೇಶ್ಯಾವಾಟಿಕೆ ನಡೆಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಐವರನ್ನು ಬಂಧಿಸಿರುವ ಘಟನೆ ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ನಡೆದಿದೆ. ಕೆಲವು ದಿನಗಳಿಂದ ಮನೆಯಲ್ಲಿ ವೇಶ್ಯವಾಟಿಕೆ ನಡೆಸಲಾಗುತ್ತಿತ್ತು ಎನ್ನುವ ಖಚಿತ ಮಾಹಿತಿ ಮೇರೆಗೆ ಚಿಕ್ಕನಾಯಕನಹಳ್ಳಿ ಪೋಲಿಸರು ದಾಳಿ ನಡೆಸಿದ್ದಾರೆ. ವೇಶ್ಯವಾಟಿಕೆಯಲ್ಲಿ ತೊಡಗಿದ್ದರು ಎನ್ನಲಾದ ಮೂವರು ಮಹಿಳೆಯರು ಸೇರಿ ಒಟ್ಟು ಐವರನ್ನು ಸದ್ಯ ಬಂಧಿಸಲಾಗಿದೆ. ಚಿಕ್ಕನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪೊಲೀಸರು ಹೆಚ್ಚಿನ ತನಿಖೆಯನ್ನು ನಡೆಸುತ್ತಿದ್ದಾರೆ.

ತುಮಕೂರು : ಮನೆಯಲ್ಲೇ ವೇಶ್ಯಾವಾಟಿಕೆ: ಐವರ ಪೊಲೀಸ್ ವಶಕ್ಕೆ Read More »

ಪ್ಯಾರಾಲಂಪಿಕ್: ಭಾರತಕ್ಕೆ ಕಂಚು ತಂದು ಕೊಟ್ಟ‌ ವಿನೋದ್ ಕುಮಾರ್

ಟೋಕಿಯೊ: ಜಪಾನ್‌ನ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ವಿನೋದ್‌ ಕುಮಾರ್ ಅವರು ಕಂಚಿನ ಪದಕ ಗೆದ್ದುಕೊಂಡಿದ್ದಾರೆ.‌ ಇದರೊಂದಿಗೆ ಭಾರತಕ್ಕೆ ಭಾನುವಾರ ಒಟ್ಟು ಮೂರು ಪದಕಗಳು ಬಂದಂತಾಗಿದೆ. 19.91 ಮೀಟರ್‌ ದೂರ ಎಸೆದು ಪದಕ್ಕೆ ಕೊರಳೊಡ್ಡಿದ್ದೂ ಮಾತ್ರವಲ್ಲದೆ ಏಷಿಯನ್‌ ದಾಖಲೆಯನ್ನೂ ನಿರ್ಮಿಸಿದರು. ಪೋಲೆಂಡ್‌ನ ಪಿಯೋಟರ್‌ ಕೊಸೆವಿಕ್ಜ್‌ (20.02ಮೀ), ಕ್ರೊವೇಷಿಯಾದ ವೆಲಿಮಿರ್‌ ಸ್ಯಾಂಡೊರ್‌ (19.98ಮೀ) ಕ್ರಮವಾಗಿ ಚಿನ್ನ ಮತ್ತು ಬೆಳ್ಳಿ ಪದಕ ಬಾಚಿಕೊಂಡರು.

ಪ್ಯಾರಾಲಂಪಿಕ್: ಭಾರತಕ್ಕೆ ಕಂಚು ತಂದು ಕೊಟ್ಟ‌ ವಿನೋದ್ ಕುಮಾರ್ Read More »