Uncategorized

ಕಡಬ: ಅತ್ಯಾಚಾರ ಆರೋಪಿ ಪೊಲೀಸ್ ಕಾನ್‌ಸ್ಟೆಬಲ್‌ ಗೆ ಜಾಮೀನು ತಿರಸ್ಕರಿಸಿದ ಕೋರ್ಟ್

ಕಡಬ: ಬಾಲಕಿಗೆ ಅತ್ಯಾಚಾರ ನಡೆಸಿ ಗರ್ಭಿಣಿಯಾಗಿಸಿದ ಆರೋಪದಡಿ ಬಂಧಿತನಾಗಿರುವ ಕಡಬ ಠಾಣೆ ಪೊಲೀಸ್ ಕಾನ್‌ಸ್ಟೆಬಲ್‌ ಶಿವರಾಜ್ ಎಂಬಾತನ ಜಾಮೀನು ಅರ್ಜಿಯನ್ನು ಪುತ್ತೂರಿನ 5 ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ತಿರಸ್ಕರಿಸಿದೆ. ಕಡಬ ತಾಲೂಕಿನ ಕುಂತೂರು ಗ್ರಾಮದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಗರ್ಭಿಣಿಯಾಗಿಸಿದ ಪ್ರಕರಣದಲ್ಲಿ ಆರೋಪಿ ಶಿವರಾಜ್ ನನ್ನು ಸೆ. 28 ರಂದು ಪೊಲೀಸರು ಬಂಧಿಸಿದ್ದರು. ಆರೋಪಿಯ ವಿರುದ್ದ ಬಾಲಕಿಯ ತಂದೆ ನೀಡಿದ ದೂರಿನಂತೆ ಅತ್ಯಾಚಾರ, ಸಾಕ್ಷಿ ನಾಶ ಹಾಗೂ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಇದೀಗ […]

ಕಡಬ: ಅತ್ಯಾಚಾರ ಆರೋಪಿ ಪೊಲೀಸ್ ಕಾನ್‌ಸ್ಟೆಬಲ್‌ ಗೆ ಜಾಮೀನು ತಿರಸ್ಕರಿಸಿದ ಕೋರ್ಟ್ Read More »

ಟಾಯ್ಲೆಟ್ ಪಿಟ್ ಒಳಗೆ ಅಡಗಿ ಕುಳಿತ ‘ನಾಗಪ್ಪ’ | ಮುಂದೇನಾಯ್ತು?

ಶಿವಮೊಗ್ಗ: ಮನೆಯೊಂದರ ಶೌಚಾಲಯ ಕೊಠಡಿಯಲ್ಲಿ ಹಾವು ಕಾಣಿಸಿಕೊಂಡಿರುವ ಘಟನೆ ನಗರದ ಶಿವಪ್ಪನಾಯಕ ಬಡಾವಣೆಯಲ್ಲಿ ನಡೆದಿದೆ. ಬೆಳಗ್ಗೆ ಟಾಯ್ಲೆಟ್ ಪಿಟ್​ನಲ್ಲಿ ನಾಗರಹಾವೊಂದು ಸೇರಿಕೊಂಡಿತ್ತು. ತಕ್ಷಣ ಸ್ನೇಕ್ ಕಿರಣ್​ಗೆ ಫೋನ್ ಮಾಡಿದ್ದಾರೆ. ಸ್ನೇಕ್ ಕಿರಣ್ ಬಂದು ನಾಗರ ಹಾವನ್ನು ಸುರಕ್ಷಿತವಾಗಿ ಪಿಟ್​ನಿಂದ ತೆಗೆದು‌ ಹೊರಗೆ ತಂದಿದ್ದಾರೆ. ಹಾವನ್ನು ಮನೆ ಹೊರಗೆ ತಂದ ಬಳಿಕ ಮನೆಯ ಒಡತಿ ನಾಗರ ಹಾವಿಗೆ ಮಂಗಳರಾತಿ ಬೆಳಗಿ, ಪೂಜೆ ಮಾಡಿದ್ದಾರೆ. ನಂತರ ಸ್ನೇಕ್ ಕಿರಣ್ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಟಾಯ್ಲೆಟ್ ಪಿಟ್ ಒಳಗೆ ಅಡಗಿ ಕುಳಿತ ‘ನಾಗಪ್ಪ’ | ಮುಂದೇನಾಯ್ತು? Read More »

ಪುತ್ತೂರು: ಕ್ರಿಸ್ಮಸ್ ಗೋದಲಿ ಸ್ಫರ್ದೆಯ ಫಲಿತಾಂಶ ಪ್ರಕಟ

ಪುತ್ತೂರು : ಬಂಟ್ವಾಳ ತಾಲೂಕಿನ ಪೆರುವಾಯಿ ಫಾತಿಮ ಚರ್ಚ್ ಮುಚ್ಚಿರಪದವು ಅಧೀನದಲ್ಲಿ ಕ್ರಿಸ್ಮಸ್ ಹಬ್ಬದ ದಿನದಂದು ಗೋದಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಇದರ ಫಲಿತಾಂಶ ಪ್ರಕಟಗೊಂಡಿದೆ. ರಾಜೇಶ್ ಪ್ರಕಾಶ್ ಡಿಸೋಜ ಮುಳಿಯ ಪೆರುವಾಯಿ ಪ್ರಥಮ ಬಹುಮಾನ, ದ್ವಿತೀಯ ಬಹುಮಾನವನ್ನು ರೋಶನ್ ಡಿಸೋಜ ಅಂಗರಕುಮೇರ್ ಶಾಲೋಮ್ ನಿವಾಸ್ ಪಡೆದುಕೊಂಡರು. ಇವರಿಗೆ ಡಿಸೆಂಬರ್ 31 ರಂದು ರೆl ಫಾದರ್ ವಿಶಾಲ್ ಮೋನಿಸ್ ಅವರ ಉಪಸ್ಥಿಯಲ್ಲಿ ಪೆರುವಾಯಿ ಚರ್ಚ್ ನಲ್ಲಿ ಬಹುಮಾನವನ್ನ ವಿತರಿಸಲಾಯಿತು.

ಪುತ್ತೂರು: ಕ್ರಿಸ್ಮಸ್ ಗೋದಲಿ ಸ್ಫರ್ದೆಯ ಫಲಿತಾಂಶ ಪ್ರಕಟ Read More »

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ

ಮಾಣಿ: ಯುವಕನೋರ್ವನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ವಿಟ್ಲದ ಮಾಣಿಯಲ್ಲಿ ನಡೆದಿದೆ. ಹುಸೇನ್ ಹಲ್ಲೆಗೊಳಗಾದ ಯುವಕ. ಅಂಗಡಿ ಕಟ್ಟಡವನ್ನು ಬಾಡಿಗೆಗೆ ಕೊಟ್ಟ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈತನ ಮೇಲೆ ಬುಡೋಳಿಯ ಅಶ್ರಫ್ ಅನ್ವರ್, ಖಾದರ್ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ. ಗಾಯಾಳು ಪುತ್ತೂರಿನ ಪ್ರಗತಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಈ ಕುರಿತು ವಿಟ್ಲ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಮಾಣಿ : ಯುವಕನಿಗೆ ಮಾರಣಾಂತಿಕ ಹಲ್ಲೆ Read More »

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ವೇಳೆ ಕಳಚಿ‌ ಬಿದ್ದ ಧ್ವಜ|

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಪ್ರಯುಕ್ತ ನಡೆದ ಧ್ವಜಾರೋಹಣದ ವೇಳೆ ಕಾಂಗ್ರೆಸ್ ಬಾವುಟ ಕೆಳಗೆ ಬಿದ್ದಿದ್ದು, ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಡಿದಿದ್ದಾರೆ. ಮಂಗಳವಾರ ದೆಹಲಿಯ ಕಾಂಗ್ರೆಸ್ ಕಚೇರಿ ಮುಂದೆ 137ನೇ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಈ ಎಡವಟ್ಟು ಸಂಭವಿಸಿದ್ದು, ನೆಲಕ್ಕೆ ಬೀಳದಂತೆ ಸೋನಿಯಾ ಗಾಂಧಿ ಬಾವುಟವನ್ನು ಹಿಡಿದಿದ್ದಾರೆ. ಘಟನೆ ಬೆನ್ನಲ್ಲೇ ಎಚ್ಚೆತ್ತ ಕಾರ್ಯಕರ್ತರು ಬಾವುಟವನ್ನು ಸರಿಪಡಿಸಿ ಮತ್ತೊಮ್ಮೆ ಧ್ವಜಾರೋಹಣಕ್ಕೆ ವ್ಯವಸ್ಥೆ ಮಾಡಿದರು. ಭಾರತದ ತ್ರಿವರ್ಣ ಧ್ವಜವನ್ನು ಹೋಲುವ ರೀತಿ ಇರುವ ಕಾಂಗ್ರೆಸ್

ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ ವೇಳೆ ಕಳಚಿ‌ ಬಿದ್ದ ಧ್ವಜ| Read More »

ಬೆಳ್ತಂಗಡಿ: ನಮಾಜ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು

ಬೆಳ್ತಂಗಡಿ : ಯುವಕನೊರ್ವ ಇದ್ದಕ್ಕಿದ್ದಂತೆ ತನ್ನ ಮನೆಯಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಬೆಳ್ತಂಗಡಿಯ ಜಾರಿಗೆ ಬೈಲ್ ನಲ್ಲಿ ನಡೆದಿದೆ. ಮೃತಪಟ್ಟ ಯುವಕ ಶಾಕಿರ್(24) ಎಂದು ತಿಳಿದು ಬಂದಿದೆ. ಎಂದಿನಂತೆ ಬೆಳಿಗ್ಗೆ ನಮಾಝ್ ಮಾಡಲು ಜಾರಿಗೆ ಬೈಲ್ ಮಸೀದಿಗೆ ತೆರಳಿದ್ದರು. ಮಸೀದಿಯಿಂದ ಬಂದ ಯುವಕ ತಾಯಿ ಬಳಿ ಸ್ವಲ್ಪ ಎದೆನೋವು ಇದೆ ಎಂದು ಹೇಳಿಕೊಂಡಿದ್ದರು. ತಾಯಿಯಲ್ಲಿ ನೋವಿನ ಬಗ್ಗೆ ತಿಳಿಸಿ ಒಂದಷ್ಟು ನಿಮಿಷಗಳ ಬಳಿಕ ದಿಢೀರ್ ಆಗಿ ಹೃದಯಾಘಾತ ಸಂಭವಿಸಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿ: ನಮಾಜ್ ಮಾಡುತ್ತಿದ್ದ ಯುವಕ ಹೃದಯಾಘಾತದಿಂದ ಸಾವು Read More »

ವೋಟರ್ ಐಡಿ ಗೆ ಆಧಾರ್ ಜೋಡಣೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ

ನವದೆಹಲಿ : ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಚುನಾವಣಾ ಸುಧಾರಣೆಗಳ ಚುನಾವಣಾ ಕಾಯ್ದೆ (ತಿದ್ದುಪಡಿ) ಮಸೂದೆ 2021 ಮಸೂದೆಯನ್ನು ಮಂಡಿಸಿದೆ. ವಿರೋಧ ಪಕ್ಷಗಳ ಗದ್ದಲದ ನಡುವೆ, ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಚುನಾವಣಾ ಕಾಯ್ದೆ (ತಿದ್ದುಪಡಿ) ಮಸೂದೆ 2021 ಅನ್ನು ಕೆಳಮನೆಯಲ್ಲಿ ಮಂಡಿಸಿದರು. ಮಸೂದೆಯ ಅಡಿಯಲ್ಲಿ, ಮತದಾರರ ಪಟ್ಟಿಯಲ್ಲಿ ನಕಲು ಮತ್ತು ನಕಲಿ ಮತದಾನವನ್ನು ತಡೆಯಲು ಮತದಾರರ ವೋಟರ್ ಐಡಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಗಳಿಗೆ ಲಿಂಕ್ ಮಾಡಲಾಗುತ್ತದೆ. ಲೋಕಸಭೆಯಲ್ಲಿ

ವೋಟರ್ ಐಡಿ ಗೆ ಆಧಾರ್ ಜೋಡಣೆ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ Read More »

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಆ್ಯಕ್ಸಿಡೆಂಟ್| ಒಬ್ಬ ಸಾವು, ಮತ್ತೋರ್ವ ಗಂಭೀರ|

ಪುತ್ತೂರು: ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ಇಂದು ಕುಂಬ್ರ ಸಮೀಪದ ಕೊಲ್ಲಾಜೆ ಎಂಬಲ್ಲಿ ನಡೆದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ಸ್ಕೂಟರ್ ಸವಾರ ಸೆಲ್ವಂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಕೊಲ್ಲಾಜೆ ಒಳರಸ್ತೆಯಿಂದ ಸೆಲ್ವಂ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನ ಮುಖ್ಯ ರಸ್ತೆಗೆ ಹಾದು ಬರುತ್ತಿದ್ದ ವೇಳೆ ಕೆಯ್ಯೂರು ಕಡೆಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಕೆ.ಟಿ.ಎಂ ಬೈಕ್ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಎರಡೂ ದ್ವಿಚಕ್ರ

ಪುತ್ತೂರು: ದ್ವಿಚಕ್ರ ವಾಹನಗಳ ನಡುವೆ ಆ್ಯಕ್ಸಿಡೆಂಟ್| ಒಬ್ಬ ಸಾವು, ಮತ್ತೋರ್ವ ಗಂಭೀರ| Read More »

ಯುವತಿಯರನ್ನು ಬಳಸಿ ಹನಿಟ್ರ್ಯಾಪ್| ಆರೋಪಿ ಕೈಗೆ ಕೋಳ ಬಿಗಿದ ಪೊಲೀಸರು|

ಉಡುಪಿ : ಹಣಕ್ಕಾಗಿ ಯುವತಿಯರನ್ನು ಬಳಸಿಕೊಂಡು ಹನಿಟ್ರ್ಯಾಪ್ ನಡೆಸಿ ಬೆದರಿಕೆ ಹಾಕುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಶಂಕರ ನಾರಾಯಣ ಪೊಲೀಸರು ಬಂಧಿಸಿದ್ದಾರೆ. ರಂಜಿತ್ ಎಸ್. ಹೆಂಗವಳ್ಳಿ (26) ಬಂಧಿತ ಆರೋಪಿ. ರಂಜಿತ್ ಹಣಕ್ಕಾಗಿ ಹನಿಟ್ರ್ಯಾಪ್ ನಡೆಸಿ ಬೆದರಿಕೆ ಹಾಕುತ್ತಿದ್ದನು ಎಂದು ವ್ಯಕ್ತಿಯೊಬ್ಬರು ಶಂಕರನಾರಾಯಣ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಡಿ.17ರಂದು ಸಂಜೆ ವೇಳೆ ಬಂಧಿಸಿದ್ದಾರೆ. ಆರೋಪಿಯನ್ನು ಡಿ.18ರಂದು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು, ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಆರು ದಿನಗಳ ಕಾಲ

ಯುವತಿಯರನ್ನು ಬಳಸಿ ಹನಿಟ್ರ್ಯಾಪ್| ಆರೋಪಿ ಕೈಗೆ ಕೋಳ ಬಿಗಿದ ಪೊಲೀಸರು| Read More »

ಆಟೋ ಮೇಲೆ ಮಗುಚಿ ಬಿದ್ದ ಕಂಟೈನರ್| ನಾಲ್ಕು ಮಂದಿ ದುರ್ಮರಣ|

ನವದೆಹಲಿ: ಬೃಹತ್ ಕಂಟೈನರ್ ವೊಂದು ಚಲಿಸುತ್ತಿದ್ದ ಆಟೋವೊಂದರ ಮೇಲೆ ಮಗುಚಿ ಬಿದ್ದ ಪರಿಣಾಮ ಆಟೋದಲ್ಲಿದ್ದ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದಿರಾ ಗಾಂಧಿ ಸ್ಟೇಡಿಯಂ ಬಳಿಯಲ್ಲಿ ಸಂಭವಿಸಿದೆ. ಶುಕ್ರವಾರ ತಡರಾತ್ರಿ ಈ ಘಟನೆ ನಡೆದಿದ್ದು, ಚಲಿಸುತ್ತಿದ್ದ ಕಂಟೈನರ್ ಆಟೋ ಮೇಲೆ ಮಗುಚಿ ಬಿದ್ದಿದ್ದು, ಈ ವೇಳೆ ಆಟೋದಲ್ಲಿದ್ದ ಮೂವರು ಪ್ರಯಾಣಿಕರು ಹಾಗೂ ಆಟೋ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತ ನಡೆದ ತಕ್ಷಣವೇ ಕಂಟೈನರ್ ನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು

ಆಟೋ ಮೇಲೆ ಮಗುಚಿ ಬಿದ್ದ ಕಂಟೈನರ್| ನಾಲ್ಕು ಮಂದಿ ದುರ್ಮರಣ| Read More »