Uncategorized

ಇನ್ಮುಂದೆ ಬೆಳಗ್ಗಿ‌ನ ಆಜಾನ್ ಗೆ ಧ್ವನಿವರ್ಧಕ ಉಪಯೋಗಿಸದಿರಲು ಮುಸ್ಲಿಂ ಮುಖಂಡರ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮುಸ್ಲೀಂ ಮುಖಂಡರು, ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಮುಸ್ಲೀಂ ಮುಖಂಡರು ಸಭೆ ನಡೆಸಿದ ಬಳಿಕ, ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಇಮಾಮ್ ಮೌಲಾನ್ ಮಕ್ಸೂದ್ ಇಮ್ರಾನ್ ರಶಾದಿ […]

ಇನ್ಮುಂದೆ ಬೆಳಗ್ಗಿ‌ನ ಆಜಾನ್ ಗೆ ಧ್ವನಿವರ್ಧಕ ಉಪಯೋಗಿಸದಿರಲು ಮುಸ್ಲಿಂ ಮುಖಂಡರ ನಿರ್ಧಾರ Read More »

ತಾಜ್ ಮಹಲ್ ಗೆ ನಾವೇ ವಾರಸ್ದಾರರು| ಕೋರ್ಟ್ ಕೇಳಿದರೆ ದಾಖಲೆ‌ ನೀಡಲು ಸಿದ್ಧವೆಂದ ಸಂಸದೆ ದಿಯಾ ಕುಮಾರಿ

ಸಮಗ್ರ ನ್ಯೂಸ್: ಪ್ರೇಮಸೌಧ ತಾಜ್ ಮಹಲ್ ಹೆಸರಿನಲ್ಲಿ ಹೊಸ ವಿವಾದ ಶುರುವಾಗಿದೆ. ಉತ್ತರ ಪ್ರದೇಶದಿಂದ ವಿವಾದ ಆರಂಭವಾಗಿದ್ದು, ಜೈಪುರದ ಮಾಜಿ ರಾಜಮನೆತನವೂ ಈ ವಿವಾದದಲ್ಲಿ ಧುಮುಕಿದೆ. ಮಾಜಿ ರಾಜಮನೆತನದ ರಾಜಕುಮಾರಿ ಮತ್ತು ಪ್ರಸ್ತುತ ಸವಾಯಿ ಮಾಧೋಪುರದ ಬಿಜೆಪಿ ಸಂಸದೆ ದಿಯಾ ಕುಮಾರಿ ಅವರು ಈ ಹೇಳಿಕೆ ನೀಡಿದ್ದಾರೆ. ಜೈಪುರದಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದ ಅವರು, ಈ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಅಂದು ಒತ್ತುವರಿ ಮಾಡಿಕೊಂಡಿದ್ದರು. ಸುಪ್ರೀಂ ಕೋರ್ಟ್ ದಾಖಲೆಗಳನ್ನು ಕೇಳಿದರೆ, ಅವರಿಗೂ ದಾಖಲೆಗಳನ್ನು ನೀಡುತ್ತೇವೆ ಎಂದು

ತಾಜ್ ಮಹಲ್ ಗೆ ನಾವೇ ವಾರಸ್ದಾರರು| ಕೋರ್ಟ್ ಕೇಳಿದರೆ ದಾಖಲೆ‌ ನೀಡಲು ಸಿದ್ಧವೆಂದ ಸಂಸದೆ ದಿಯಾ ಕುಮಾರಿ Read More »

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಬೆಂಗಳೂರಿನ ಜೆ.ಜೆ. ನಗರದಲ್ಲಿ ಚಂದ್ರು ಕೊಲೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದೇನೆ. ನಿನ್ನೆ ಡಿಜಿ, ಐಜಿಪಿ ಮತ್ತು ಕಮಿಷನರ್ ಕರೆದು ಮಾತನಾಡಿದ್ದೇನೆ. ಇಂದು ನಗರ ಪೊಲೀಸ್ ಆಯುಕ್ತರು ಸಿಐಡಿಗೆ ಚಂದ್ರು ಹತ್ಯೆ ಕೇಸ್ ಹಸ್ತಾಂತರ ಮಾಡಲಿದ್ದಾರೆ.ಆರೋಪ ಪ್ರತ್ಯಾರೋಪ ಏನೇ ಇರಲಿ ಸತ್ಯ ಹೊರಬರಲೇಬೇಕು ಎಂದು

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ Read More »

ಮಳೆ ಅವಾಂತರ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮರ ಬಿದ್ದು ಜಖಂಗೊಂಡ ಯಾತ್ರಾರ್ಥಿಗಳ ಕಾರು|

ಸಮಗ್ರ ನ್ಯೂಸ್: ಅವಿಭಜಿತ ಸುಳ್ಯ ತಾಲೂಕಿನಲ್ಲಿ ಇಂದು ಸಂಜೆ ಭಾರೀ ಮಳೆ‌ಸುರಿದಿದ್ದು, ಮಳೆ ಅವಾಂತರಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳ ಕಾರು ಜಖಂಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆಯ ಬಾರೀ ಗುಡುಗು ಸಹಿತ ಗಾಳಿ ಮಳೆಗೆ ಕಾರೊಂದರ ಮೇಲೆ ಮರದ ರೆಂಬೆ ಮುರಿದು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿಯಲ್ಲಿ ಘಟನೆ ನಡೆದಿದ್ದು, ದಾವಣಗೆರೆಯಿಂದ ಯಾತ್ರಿಕರಾಗಿ ಬಂದಿರುವವರ ಕಾರು ಘಟನೆಯಲ್ಲಿ ಜಖಂಗೊಂಡಿರುವುದು ಎಂದು ತಿಳಿದುಬಂದಿದೆ. ಇಲ್ಲಿನ ಬೃಹತ್ ಮರದ ರೆಂಬೆ ಮುರಿದು

ಮಳೆ ಅವಾಂತರ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮರ ಬಿದ್ದು ಜಖಂಗೊಂಡ ಯಾತ್ರಾರ್ಥಿಗಳ ಕಾರು| Read More »

ಪುತ್ತೂರು ಜಾತ್ರೆಗೂ ತಟ್ಟಿದ ಧರ್ಮದ್ವೇಷ| ಅನ್ಯಮತೀಯರ ಅಟೋ ಬಳಸದಂತೆ ಕ್ಯಾಂಪೇನ್

ಸಮಗ್ರ ನ್ಯೂಸ್: ರಾಜ್ಯದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರಗಳಿಗೆ ತೆರಳುವಾಗ ಅನ್ಯಧರ್ಮೀಯರ ಕ್ಯಾಬ್ ಬಳಸದಂತೆ ಕರೆ ನೀಡಿದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಮತ್ತೊಂದು ಅಭಿಯಾನ ಆರಂಭವಾಗಿದೆ. ಹತ್ತು ದಿನಗಳ ಕಾಲ ನಡೆಯುವ ಪ್ರಸಿದ್ಧ ಪುತ್ತೂರು ಮಹಾಲಿಂಗೇಶ್ವರ ದೇವರ ಜಾತ್ರೋತ್ಸವದ ವೇಳೆ ಹಿಂದೂಗಳು ಭಗವಾ ಧ್ವಜ ಇರುವ ಹಿಂದೂಗಳ ಆಟೋವನ್ನು ಹೊರತುಪಡಿಸಿ ಇತರ ಆಟೋಗಳನ್ನು ಬಳಸದಂತೆ ಹಿಂದೂ ಜಾಗರಣ ವೇದಿಕೆ ಕರೆ ನೀಡಿದೆ. ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವದಲ್ಲಿ ವ್ಯಾಪಾರ ನಿರ್ಬಂಧದ

ಪುತ್ತೂರು ಜಾತ್ರೆಗೂ ತಟ್ಟಿದ ಧರ್ಮದ್ವೇಷ| ಅನ್ಯಮತೀಯರ ಅಟೋ ಬಳಸದಂತೆ ಕ್ಯಾಂಪೇನ್ Read More »

ಮಂಗಳೂರು: ಡಿವೈಡರ್ ಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ| ಸ್ಕೂಟಿ ಸವಾರೆ ಗಂಭೀರ

ಸಮಗ್ರ ನ್ಯೂಸ್: ಅತಿವೇಗದಿಂದ ಚಲಿಸುತ್ತಿದ್ದ ಬಿಎಂಡಬ್ಲ್ಯು ಕಾರು ಡಿವೈಡರ್ ಮೇಲಕ್ಕೆ ಹಾರಿ ಮತ್ತೊಂದು ಕಾರು ಹಾಗೂ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆಯೊಬ್ಬರು ತೀವ್ರವಾಗಿ ಗಾಯಗೊಂಡಿರುವ ಘಟನೆ ಮಂಗಳೂರಿನ ಬಲ್ಲಾಳ್‌ಬಾಗ್‌ನಲ್ಲಿ ನಡೆದಿದೆ. ಬಿಎಂಡಬ್ಲ್ಯು ಕಾರು ಚಾಲಕ ಮದ್ಯ ಸೇವನೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ರಸ್ತೆ ದಾಟಲು ಡಿವೈಡರ್ ಮೇಲೆ ನಿಂತಿದ್ದ ಇನ್ನೋರ್ವ ಮಹಿಳೆಯು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರು ಡಿವೈಡರ್ ಮೇಲಿಂದ ಹಾರಿ ರಸ್ತೆಯ ಇನ್ನೊಂದು ಬದಿಗೆ ಬರುತ್ತಿರುವ ಸಂಪೂರ್ಣ

ಮಂಗಳೂರು: ಡಿವೈಡರ್ ಗೆ ಡಿಕ್ಕಿ ಹೊಡೆದ ಬಿಎಂಡಬ್ಲ್ಯೂ| ಸ್ಕೂಟಿ ಸವಾರೆ ಗಂಭೀರ Read More »

ಸಿದ್ದಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ‌ ತಮ್ಮ ಮಗುವಿಗೆ ‘ಶಿವಮಣಿ’ ಹೆಸರಿಟ್ಟ ಮುಸ್ಲಿಂ ದಂಪತಿ

ಸಮಗ್ರ ನ್ಯೂಸ್: ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿಗಳ ತ್ರಿವಿಧ ದಾಸೋಹ ಇಡೀ ದೇಶಕ್ಕೆ ಜನಪ್ರಿಯ. ನಡೆದಾಡುವ ದೇವರೆಂದೇ ಜನಪ್ರಿಯರಾದವರು. ಏಪ್ರಿಲ್ 1ರಂದು ಅವರ 115ನೇ ಜಯಂತ್ಯೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಿದ್ದಗಂಗಾ ಮಠದಲ್ಲಿ ಭಕ್ತಿಪೂರ್ವಕ ಕಾರ್ಯಕ್ರಮಗಳು ನಡೆದವು. ಈ ಕಾರ್ಯಕ್ರಮದಲ್ಲಿ ಕ್ಯಾತ್ಸಂದ್ರ ನಿವಾಸಿ ಶಾಹಿಸ್ತಾ ಮತ್ತು ಜಮೀರ್ ದಂಪತಿ ತಮ್ಮ ಮಗುವಿಗೆ ʼಶಿವಮಣಿʼ ಎಂದು ನಾಮಕರಣ ಮಾಡುವ ಮೂಲಕ ಸೌಹಾರ್ದ ಸಾರಿದ್ದು ವಿಶೇಷವಾಗಿತ್ತು. ರಾಜ್ಯದ ನಾನಾ ಭಾಗಗಳಿಂದ ಮಠಕ್ಕೆ ಬಂದಿದ್ದ ಮಕ್ಕಳಿಗೆ ನಾಮಕರಣ ಮಾಡುವುದರ ಜೊತೆಗೆ

ಸಿದ್ದಗಂಗಾ ಶ್ರೀಗಳ ಜಯಂತಿ ಕಾರ್ಯಕ್ರಮದಲ್ಲಿ‌ ತಮ್ಮ ಮಗುವಿಗೆ ‘ಶಿವಮಣಿ’ ಹೆಸರಿಟ್ಟ ಮುಸ್ಲಿಂ ದಂಪತಿ Read More »

ಮಾ.28ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ| ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ

ಸಮಗ್ರ ನ್ಯೂಸ್: ಮಾರ್ಚ್ 28ರಿಂದ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಲಿದ್ದು, ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೀಕ್ಷೆಗಳನ್ನು ಆಫ್‌ಲೈನ್‌ನಲ್ಲಿ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್‌ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು, ಹಿಜಾಬ್‌ ವಿವಾದ ಪಸರಿಸಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳ ಕೈಗೊಳ್ಳಲಾಗಿದೆ ಎಂದು ಹೇಳಿದರು ವಿದ್ಯಾರ್ಥಿಗಳು ಹಿಜಾಬ್ ಧರಿಸಿ

ಮಾ.28ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭ| ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ – ಸಚಿವ ಬಿ.ಸಿ ನಾಗೇಶ್ ಸ್ಪಷ್ಟನೆ Read More »

ಏಕರೂಪ ನಾಗರಿಕ ನೀತಿ ಜಾರಿಗೊಳಿಸಿದ ಉತ್ತರಾಖಂಡ| ಸಂಹಿತೆಗೆ ಸಚಿವ ಸಂಪುಟ ಅಸ್ತು

ಸಮಗ್ರ ನ್ಯೂಸ್: ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತಂದಿರುವುದಾಗಿ‌ ಉತ್ತರಾಖಂಡದ ಸಿಎಂ ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖಿಸಿತ್ತು ಎನ್ನಲಾಗಿದೆ.‌ ಇದೀಗ ಅಧಿಕಾರಕ್ಕೆ ಬಂದ ತಕ್ಷಣ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಮರುದಿನವೇ ಪುಷ್ಕರ್‌ ಸಿಂಗ್‌ ಧಾಮಿ ಈ ಘೋಷಣೆ ಮಾಡಿದ್ದಾರೆ. ಸಂಪುಟ ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಅವರು, ರಾಜ್ಯದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನಿರ್ಧರಿಸಿದ್ದೇವೆ.

ಏಕರೂಪ ನಾಗರಿಕ ನೀತಿ ಜಾರಿಗೊಳಿಸಿದ ಉತ್ತರಾಖಂಡ| ಸಂಹಿತೆಗೆ ಸಚಿವ ಸಂಪುಟ ಅಸ್ತು Read More »

ಕೂದಲೆಳೆಯಲ್ಲಿ ಸಾವಿನ ಬಾಯಿಂದ ಪಾರಾದ ಬಾಲಕ| ಮೈ ಜುಂ ಅನಿಸುತ್ತೆ ಈ ದೃಶ್ಯ|

ಸಮಗ್ರ ನ್ಯೂಸ್: ಬಾಲಕನೋರ್ವ ಸೈಕಲ್ ತುಳಿದುಕೊಂಡು ಏಕಾಏಕಿ ಮುಖ್ಯ ರಸ್ತೆಗೆ ಪ್ರವೇಶಿಸಿ, ಕೂದಲೆಳೆ ಅಂತರದಲ್ಲಿ ಬಸ್ಸಿನಡಿಗೆ ಬೀಳುವುದು ತಪ್ಪಿ‌ ಸಾವಿನ ಬಾಯಿಂದ ಪಾರಾದ ಘಟನೆ ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿ ನಡೆದಿದೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಬಾಲಕ ಮೃತ್ಯುವಿನ ಕೂಪದಿಂದ ಬಚಾವಾಗಿದ್ದಾನೆ. ಮುಖ್ಯ ರಸ್ತೆಗೆ ಪ್ರವೇಶಿಸಿದ ಬಾಲಕ ಚಲಿಸುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದಿದ್ದಾನೆ. ಇದರ ಬೆನ್ನಲ್ಲೇ ಅತಿವೇಗದಲ್ಲಿ ಕೇರಳ ಸಾರಿಗೆ ಬಸ್ಸು ಬಂದಿದ್ದು, ಬಾಲಕನ ಸೈಕಲ್ ಮೇಲೆ ಚಲಿಸಿದೆ. ಆದರೆ ಅದೃಷ್ಟವಶಾತ್

ಕೂದಲೆಳೆಯಲ್ಲಿ ಸಾವಿನ ಬಾಯಿಂದ ಪಾರಾದ ಬಾಲಕ| ಮೈ ಜುಂ ಅನಿಸುತ್ತೆ ಈ ದೃಶ್ಯ| Read More »