Uncategorized

ಪ್ರವಾದಿ ಬಗ್ಗೆ ಅವಹೇಳನಕಾರಿ ಟ್ವೀಟ್| ಬಿಜೆಪಿ ವಿರುದ್ದ ತಿರುಗಿ ಬಿದ್ದ ಕತಾರ್|

ಸಮಗ್ರ ನ್ಯೂಸ್: ಬಿಜೆಪಿಯ ಕೆಲ ನಾಯಕರು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿರುವ ಘಟನೆಗಳನ್ನು ಕತಾರ್ ದೇಶ ತುಸು ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ನಿಲುವಿನ ಸ್ಪಷ್ಟನೆ ಕೋರಿ ಕತಾರ್ ಸರಕಾರ ಭಾನುವಾರ ಭಾರತೀಯ ರಾಯಭಾರಿಗೆ ಕರೆ ಮಾಡಿದೆ. ಇದೇ ವೇಳೆ, ಕತಾರ್‌ನ ಭಾರತೀಯ ರಾಯಭಾರಿ ಕಚೇರಿ ಸ್ಪಷ್ಟನೆ ನೀಡಿದ್ದು, ನಾಯಕರ ಟ್ವೀಟ್‌ಗಳು ಭಾರತದ ಸರಕಾರದ ಅಧಿಕೃತ ಹೇಳಿಕೆಗಳೆನಿಸುವುದಿಲ್ಲ ಎಂದು ತಿಳಿಸಿದ್ಧಾರೆ. ಕತಾರ್‌ನ ವಿದೇಶಾಂಗ ಸಚಿವಾಲಯ ಬಿಜೆಪಿ ನಾಯಕರು ಮಾಡಿದ ನಿಂದನಾತ್ಮಕ ಟ್ವೀಟ್ ಕುರಿತು ಆಕ್ಷೇಪ […]

ಪ್ರವಾದಿ ಬಗ್ಗೆ ಅವಹೇಳನಕಾರಿ ಟ್ವೀಟ್| ಬಿಜೆಪಿ ವಿರುದ್ದ ತಿರುಗಿ ಬಿದ್ದ ಕತಾರ್| Read More »

ಉಳ್ಳಾಲ: ಸಮುದ್ರ ಪಾಲಾದ ಮೈಸೂರಿನ ಮಹಿಳೆ

ಸಮಗ್ರ ನ್ಯೂಸ್: ಮಂಗಳೂರಿನ ಉಳ್ಳಾಲದ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ. ಮೈಸೂರು ನಿವಾಸಿ ಭಾಗ್ಯಲಕ್ಷ್ಮೀ (45) ಮೃತ ದುರ್ದೈವಿ. ಭಾಗ್ಯಲಕ್ಷ್ಮೀ ದಂಪತಿ, ಅವರ ಮೂವರು ಪುತ್ರಿಯರು ಹಾಗೂ ಮೊಮ್ಮಗಳು ಮೈಸೂರಿನಿಂದ ಮಂಗಳೂರಿಗೆ ವಿಹಾರಕ್ಕೆಂದು ಬಂದಿದ್ದರು. ಪಂಪ್‌ವೆಲ್‌ ಬಳಿ ರೂಮಿನಲ್ಲಿ ತಂಗಿದ್ದ ಕುಟುಂಬ ಮೇ 28ರಂದು ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು. ಅಲ್ಲಿಂದ ಉಳ್ಳಾಲದ ಸಮುದ್ರ ವಿಹಾರಕ್ಕೆಂದು ತೆರಳಿದ್ದ ಕುಟುಂಬದ ಪೈಕಿ ಭಾಗ್ಯಲಕ್ಷ್ಮೀ

ಉಳ್ಳಾಲ: ಸಮುದ್ರ ಪಾಲಾದ ಮೈಸೂರಿನ ಮಹಿಳೆ Read More »

ಬೆಳ್ತಂಗಡಿ: ಬಚ್ಚಲು ಕೋಣೆಯಲ್ಲಿ ಅಡಗಿದ್ದ ಕಾಳಿಂಗ!!

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲ್ಲೂಕಿನ ಮೊಗ್ರು ಗ್ರಾಮದ ಮುಗೇರಡ್ಕ ಬಳಿಯ ಬನತ್ತಕೋಡಿ ಎಂಬಲ್ಲಿ ಕಂಡುಬಂದ ಕಾಳಿಂಗ ಸರ್ಪವನ್ನು ರಕ್ಷಣೆ ಮಾಡಲಾಗಿದೆ. ಇಲ್ಲಿನ ಲೀಲಾವತಿಯವರ ಮನೆಯ ಬಚ್ಚಲು ಕೋಣೆಗೆ ನುಗ್ಗಿದ ಸುಮಾರು 8 ಅಡಿ ಉದ್ದದ ಕಾಳಿಂಗ ಸರ್ಪವನ್ನು‌ ಉರಗ ತಜ್ಞರಾದ ಪುತ್ತೂರಿನ ತೇಜಸ್ ಮತ್ತು ಪುನೀತ್ ರವರು ರಕ್ಷಣೆ ಮಾಡಿದ್ದು, ಕಾಡಿಗೆ ಬಿಟ್ಟ ಬಗ್ಗೆ ವರದಿಯಾಗಿದೆ.

ಬೆಳ್ತಂಗಡಿ: ಬಚ್ಚಲು ಕೋಣೆಯಲ್ಲಿ ಅಡಗಿದ್ದ ಕಾಳಿಂಗ!! Read More »

ಭಾರೀ ಮಳೆ ಹಿನ್ನಲೆ: ಉಡುಪಿಯಲ್ಲಿ ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ನಿರಂತರವಾಗಿ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳಿಗೆ ಮೇ.20ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ. ಕೂರ್ಮರಾವ್ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಕಳೆದೆರಡು ದಿನದಿಂದ ಧಾರಾಕಾರ ಮಳೆಯಾಗುತ್ತಿದ್ದು, ನಿರಂತರ ಮಳೆಯಿಂದ ಅಲ್ಲಲ್ಲಿ ಅವಘಡಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆ ಘೋಷಿಸಿರುವುದಾಗಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಭಾರೀ ಮಳೆ ಹಿನ್ನಲೆ: ಉಡುಪಿಯಲ್ಲಿ ನಾಳೆ ಶಾಲಾ-ಕಾಲೇಜಿಗೆ ರಜೆ ಘೋಷಣೆ Read More »

ಎಸ್ಎಸ್ಎಲ್ಸಿ ರಿಸಲ್ಟ್; ವಾಚ್ ಮನ್ ಮಗಳು ರಾಜ್ಯಕ್ಕೆ ಪ್ರಥಮ

ಸಮಗ್ರ ನ್ಯೂಸ್: ಹಾವೇರಿ ನಗರದ ಜಿಲ್ಲಾ ಗುರುಭವನದಲ್ಲಿ ಕಾವಲುಗಾರನಾಗಿ ಕೆಲಸ ಮಾಡುವ ಬಸವರಾಜ ಶೇತಸನದಿ ಅವರ ಮಗಳು ಮಧು ಶೇತಸನದಿ, ಕನ್ನಡ ಮಾಧ್ಯಮದಲ್ಲಿ 625ಕ್ಕೆ 625 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ಮೊದಲನೇ ಸ್ಥಾನ ಪಡೆದಿದ್ದಾಳೆ. ‘ನನ್ನ ಮಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ ಎಂಬುದನ್ನು ಕೇಳಿ ತುಂಬಾ ಸಂತೋಷವಾಗಿದೆ.ಹಗಲು-ರಾತ್ರಿ ಕಷ್ಟಪಟ್ಟು ಓದಿ ನಮಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಮಗಳು ಡಾಕ್ಟರ್‌ ಆಗಬೇಕು ಎಂದು ಕನಸು ಕಾಣುತ್ತಿದ್ದಾಳೆ. ಆದರೆ ನನ್ನ ಆದಾಯದಲ್ಲಿ ಅವಳನ್ನು ಓದಿಸುವಷ್ಟು ಆರ್ಥಿಕ

ಎಸ್ಎಸ್ಎಲ್ಸಿ ರಿಸಲ್ಟ್; ವಾಚ್ ಮನ್ ಮಗಳು ರಾಜ್ಯಕ್ಕೆ ಪ್ರಥಮ Read More »

ಎಸ್ ಎಸ್ ಎಲ್‌ಸಿ ಫಲಿತಾಂಶ ಪ್ರಕಟ ಶೇ.85.63 ಮಂದಿ ಪಾಸ್

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಎಸ್ಎಸ್ಎಲ್ ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ‌ಮಂತ್ರಿ‌ ಬಿ.ಸಿ ನಾಗೇಶ್ ಇಂದು ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದಾರೆ. ಒಟ್ಟು ವಿದ್ಯಾರ್ಥಿಗಳಲ್ಲಿ ಶೇ.85.63% ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, 90% ಬಾಲಕಿಯರು, ಹಾಗೂ 81.63% ಬಾಲಕರು ಪಾಸಾಗಿದ್ದಾರೆ. ಸರ್ಕಾರಿ ಶಾಲೆಗಳ 21 ಮಕ್ಕಳು, ಅನುದಾನಿತ ಶಾಲೆಗಳ 8 ಮಕ್ಕಳು, ಅನುದಾನ ರಹಿತ ಶಾಲೆಗಳ 116 ಮಕ್ಕಳು 625ಕ್ಕೆ 625 ಅಂಕ ಗಳಿಸಿದ್ದಾರೆ. ಸರಕಾರಿ ಶಾಲೆಗಳು 88%,

ಎಸ್ ಎಸ್ ಎಲ್‌ಸಿ ಫಲಿತಾಂಶ ಪ್ರಕಟ ಶೇ.85.63 ಮಂದಿ ಪಾಸ್ Read More »

ಇನ್ಮುಂದೆ ಬೆಳಗ್ಗಿ‌ನ ಆಜಾನ್ ಗೆ ಧ್ವನಿವರ್ಧಕ ಉಪಯೋಗಿಸದಿರಲು ಮುಸ್ಲಿಂ ಮುಖಂಡರ ನಿರ್ಧಾರ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಮಸೀದಿಗಳಲ್ಲಿ ಧ್ವನಿ ವರ್ಧಕ ಬಳಕೆಯ ಬಗ್ಗೆ ಮಾರ್ಗಸೂಚಿಯನ್ನು ಜಾರಿಗೊಳಿಸಲಾಗಿದೆ. ಬೆಳಗಿನ ಜಾವದಲ್ಲಿ ಇಂತಿಷ್ಟೇ ಡೆಸಿಬಲ್ ಶಬ್ದವನ್ನು ಹೊರಸೂಸುವಂತೆ ಧ್ವನಿ ವರ್ಧಕ ಬಳಕೆಗೂ ಖಡಕ್ ಸೂಚನೆ ನೀಡಲಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿರುವ ಮುಸ್ಲೀಂ ಮುಖಂಡರು, ಇನ್ಮುಂದೆ ರಾಜ್ಯಾಧ್ಯಂತ ಬೆಳಿಗ್ಗೆ 5 ಗಂಟೆಯ ಆಜಾನ್ ಕೂಗೋದನ್ನು ನಿಲ್ಲಿಸಲು ನಿರ್ಧರಿಸಿದ್ದಾರೆ. ಈ ಕುರಿತಂತೆ ಮುಸ್ಲೀಂ ಮುಖಂಡರು ಸಭೆ ನಡೆಸಿದ ಬಳಿಕ, ಸುದ್ದಿಗಾರರಿಗೆ ಮಾಹಿತಿ ನೀಡಿದಂತ ಇಮಾಮ್ ಮೌಲಾನ್ ಮಕ್ಸೂದ್ ಇಮ್ರಾನ್ ರಶಾದಿ

ಇನ್ಮುಂದೆ ಬೆಳಗ್ಗಿ‌ನ ಆಜಾನ್ ಗೆ ಧ್ವನಿವರ್ಧಕ ಉಪಯೋಗಿಸದಿರಲು ಮುಸ್ಲಿಂ ಮುಖಂಡರ ನಿರ್ಧಾರ Read More »

ತಾಜ್ ಮಹಲ್ ಗೆ ನಾವೇ ವಾರಸ್ದಾರರು| ಕೋರ್ಟ್ ಕೇಳಿದರೆ ದಾಖಲೆ‌ ನೀಡಲು ಸಿದ್ಧವೆಂದ ಸಂಸದೆ ದಿಯಾ ಕುಮಾರಿ

ಸಮಗ್ರ ನ್ಯೂಸ್: ಪ್ರೇಮಸೌಧ ತಾಜ್ ಮಹಲ್ ಹೆಸರಿನಲ್ಲಿ ಹೊಸ ವಿವಾದ ಶುರುವಾಗಿದೆ. ಉತ್ತರ ಪ್ರದೇಶದಿಂದ ವಿವಾದ ಆರಂಭವಾಗಿದ್ದು, ಜೈಪುರದ ಮಾಜಿ ರಾಜಮನೆತನವೂ ಈ ವಿವಾದದಲ್ಲಿ ಧುಮುಕಿದೆ. ಮಾಜಿ ರಾಜಮನೆತನದ ರಾಜಕುಮಾರಿ ಮತ್ತು ಪ್ರಸ್ತುತ ಸವಾಯಿ ಮಾಧೋಪುರದ ಬಿಜೆಪಿ ಸಂಸದೆ ದಿಯಾ ಕುಮಾರಿ ಅವರು ಈ ಹೇಳಿಕೆ ನೀಡಿದ್ದಾರೆ. ಜೈಪುರದಲ್ಲಿ ಮಾಧ್ಯಮದವರ ಮುಂದೆ ಮಾತನಾಡಿದ ಅವರು, ಈ ಭೂಮಿ ನಮ್ಮ ಪೂರ್ವಜರಿಗೆ ಸೇರಿದ್ದು, ಅಂದು ಒತ್ತುವರಿ ಮಾಡಿಕೊಂಡಿದ್ದರು. ಸುಪ್ರೀಂ ಕೋರ್ಟ್ ದಾಖಲೆಗಳನ್ನು ಕೇಳಿದರೆ, ಅವರಿಗೂ ದಾಖಲೆಗಳನ್ನು ನೀಡುತ್ತೇವೆ ಎಂದು

ತಾಜ್ ಮಹಲ್ ಗೆ ನಾವೇ ವಾರಸ್ದಾರರು| ಕೋರ್ಟ್ ಕೇಳಿದರೆ ದಾಖಲೆ‌ ನೀಡಲು ಸಿದ್ಧವೆಂದ ಸಂಸದೆ ದಿಯಾ ಕುಮಾರಿ Read More »

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ಬೆಂಗಳೂರಿನ ಜೆ.ಜೆ. ನಗರದಲ್ಲಿ ಚಂದ್ರು ಕೊಲೆ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಚಂದ್ರು ಹತ್ಯೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸೂಚಿಸಿದ್ದೇನೆ. ನಿನ್ನೆ ಡಿಜಿ, ಐಜಿಪಿ ಮತ್ತು ಕಮಿಷನರ್ ಕರೆದು ಮಾತನಾಡಿದ್ದೇನೆ. ಇಂದು ನಗರ ಪೊಲೀಸ್ ಆಯುಕ್ತರು ಸಿಐಡಿಗೆ ಚಂದ್ರು ಹತ್ಯೆ ಕೇಸ್ ಹಸ್ತಾಂತರ ಮಾಡಲಿದ್ದಾರೆ.ಆರೋಪ ಪ್ರತ್ಯಾರೋಪ ಏನೇ ಇರಲಿ ಸತ್ಯ ಹೊರಬರಲೇಬೇಕು ಎಂದು

ಚಂದ್ರು ಹತ್ಯೆ ಪ್ರಕರಣ| ಸಿಐಡಿ‌ ತನಿಖೆಗೆ ರಾಜ್ಯ ಸರ್ಕಾರ ಆದೇಶ Read More »

ಮಳೆ ಅವಾಂತರ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮರ ಬಿದ್ದು ಜಖಂಗೊಂಡ ಯಾತ್ರಾರ್ಥಿಗಳ ಕಾರು|

ಸಮಗ್ರ ನ್ಯೂಸ್: ಅವಿಭಜಿತ ಸುಳ್ಯ ತಾಲೂಕಿನಲ್ಲಿ ಇಂದು ಸಂಜೆ ಭಾರೀ ಮಳೆ‌ಸುರಿದಿದ್ದು, ಮಳೆ ಅವಾಂತರಕ್ಕೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಯಾತ್ರಾರ್ಥಿಗಳ ಕಾರು ಜಖಂಗೊಂಡಿದೆ. ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಶನಿವಾರ ಸಂಜೆಯ ಬಾರೀ ಗುಡುಗು ಸಹಿತ ಗಾಳಿ ಮಳೆಗೆ ಕಾರೊಂದರ ಮೇಲೆ ಮರದ ರೆಂಬೆ ಮುರಿದು ಬಿದ್ದು ಕಾರು ಸಂಪೂರ್ಣ ಜಖಂಗೊಂಡಿದೆ. ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟದ ಬಳಿಯಲ್ಲಿ ಘಟನೆ ನಡೆದಿದ್ದು, ದಾವಣಗೆರೆಯಿಂದ ಯಾತ್ರಿಕರಾಗಿ ಬಂದಿರುವವರ ಕಾರು ಘಟನೆಯಲ್ಲಿ ಜಖಂಗೊಂಡಿರುವುದು ಎಂದು ತಿಳಿದುಬಂದಿದೆ. ಇಲ್ಲಿನ ಬೃಹತ್ ಮರದ ರೆಂಬೆ ಮುರಿದು

ಮಳೆ ಅವಾಂತರ: ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ಮರ ಬಿದ್ದು ಜಖಂಗೊಂಡ ಯಾತ್ರಾರ್ಥಿಗಳ ಕಾರು| Read More »