Uncategorized

ಕೋವಿಡ್ ಕೇಸ್ ಹೆಚ್ಚಳ; ಮಾಸ್ಕ್ ಧರಿಸದಿದ್ದರೆ ದಂಡ ಫಿಕ್ಸ್

ಬೆಂಗಳೂರು : ಇದೀಗ ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆ ನಡೆಸಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದರು ಮತ್ತು ಮಾಸ್ಕ್ ಧರಿಸದವರಿಗೆ ಸರ್ಕಾರಿ ಸಂಸ್ಥೆಗಳನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿದರು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, […]

ಕೋವಿಡ್ ಕೇಸ್ ಹೆಚ್ಚಳ; ಮಾಸ್ಕ್ ಧರಿಸದಿದ್ದರೆ ದಂಡ ಫಿಕ್ಸ್ Read More »

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ

ಬೆಂಗಳೂರು: ನಗರದ ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಪೂರ್ಣ ದರ್ಗಾ ಹೊತ್ತಿ ಉರಿದಿದೆ. ಫ್ರೇಜರ್​ ಟೌನ್ ಬಳಿಯ ಟ್ಯಾನಿ ರಸ್ತೆಯಲ್ಲಿರುವ ಮಸ್ತಾನಿ ದರ್ಗಾದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡುತ್ತಿದ್ದಂತೆ ದರ್ಗಾ ಹೊತ್ತಿ ಉರಿದಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ Read More »

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ

ಬಂಟ್ವಾಳ: ತಾಲೂಕಿನ ಸಜೀಪನಡುವಿನ ಲಕ್ಷ್ಮಣಕಟ್ಟೆ ಎಂಬಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯ ಅಶ್ವತ್ಥ ಮರ ಉರುಳಿಬಿದ್ದಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಲುಕ್ಮಾನ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರನ್ನು ಮರದ ಬಳಿ ನಿಲ್ಲಿಸಿ ಕಾರಿನೊಳಗಿದ್ದ ತನ್ನ ಸಂಬಂಧಿ ಮಹಿಳೆಯರಿಬ್ಬರನ್ನು ಇಳಿಸಿ ತಾನೂ ಇಳಿಯಲು ಹೊರಟಾಗ ಈ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ Read More »

ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ನಾಲೆಗೆ ಬಿದ್ದು 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೋಕಾಕ್‍ನಿಂದ ಬೆಳಗಾವಿಗೆ ಬೆಳಗ್ಗೆ 7.30ರ ಸಮಯದಲ್ಲಿ ಬರುತ್ತಿದ್ದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆ ಬಳಿ ಪಲ್ಟಿಯಾಗಿ ಉರುಳಿಬಿದ್ದಿದೆ. ಈ ವೇಳೆ ಕ್ರೂಸರ್‍ನಲ್ಲಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 18 ಮಂದಿ ರೈಲುಹಳಿ ಜೋಡಣೆ ಕೆಲಸಕ್ಕೆಂದು ಅಕ್ಕತಂಗಿಯರ ಹಾಳದಿಂದ ಬಳ್ಳಾರಿಗೆ

ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು Read More »

ನಿರಂತರ ಯೋಗದಿಂದ ದೇಹದ ರೋಗಕ್ಕೆ ವಿಯೋಗ| ಜೂ.21 ಯಾಕೆ ಪ್ರಾಮುಖ್ಯ ಗೊತ್ತಾ?

ಸಮಗ್ರ ವಿಶೇಷ: ಪ್ರಾಚೀನ ಭಾರತದ ಪರಂಪರೆಯ ಅತಿ ಮಹತ್ವದ ಕೊಡುಗೆ ಎಂದರೆ ಅದು ಯೋಗ. ಇದು ದೇಹ ಮತ್ತು ಮನಸನ್ನು ಒಳಗೊಂಡಿದೆ. ಯೋಚನೆ ಮತ್ತು ಕ್ರಮ, ನಿಯಂತ್ರಣ ಮತ್ತು ಈಡೇರುವಿಕೆ, ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯವೇ ಯೋಗ. ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಗೆ ಯೋಗ ಉತ್ತಮ ಸಾಧನ. ಯೋಗ ಕೇವಲ ವ್ಯಾಯಾಮವಲ್ಲ, ಇದು ವಿಶ್ವ ಮತ್ತು ಪ್ರಕೃತಿಯೊಂದಿಗೆ ನಮ್ಮತನವನ್ನು ಒಂದಾಗಿಸುವ ವಿದ್ಯೆಯಾಗಿದೆ. ಯೋಗವು ಬದುಕನ್ನು ಬದಲಿಸುವ ಮತ್ತು ಆತ್ಮಸಾಕ್ಷಿಯ ಸೃಷ್ಟಿ. ಯೋಗದ ಗುರಿಯು ಕೇವಲ ದೇಹವನ್ನು

ನಿರಂತರ ಯೋಗದಿಂದ ದೇಹದ ರೋಗಕ್ಕೆ ವಿಯೋಗ| ಜೂ.21 ಯಾಕೆ ಪ್ರಾಮುಖ್ಯ ಗೊತ್ತಾ? Read More »

ರಾಜ್ಯದಲ್ಲಿ ಏರಿಕೆ ಕಂಡ ಕೊರೊನಾ ಪಾಸಿಟಿವಿಟಿ ದರ| ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕೊರೋನಾ ಪಾಸಿಟಿವ್ ದರ ಶೇ.2.56ಕ್ಕೆ ಏರಿಕೆಯಾಗಿದ್ದು, ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಕೋವಿಡ್ ತಜ್ಞರ ಸಲಹಾ ಸಮಿತಿ ಸಲಹೆಯಂತೆ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ. ಆರೋಗ್ಯ ಆಯುಕ್ತ ಡಾ.ರಣದೀಪ್ ಮಾತನಾಡಿ, ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ಏರಿಕೆಯಾಗಿದ್ದು, ಆದರೆ ಆಸ್ಪತ್ರೆಗೆ ದಾಖಲೆಯಾಗುವವರ ಸಂಖ್ಯೆ ಕಡಿಮೆ ಇದೆ.ಮುಂದಿನ ದಿನಗಳಲ್ಲಿ ಸೋಂಕು ತ್ವರಿತ ಪತ್ತೆ ಹಾಗೂ ನಿಯಂತ್ರಣಕ್ಕಾಗಿ ಹೆಚ್ಚಿನ ಗಮನ ಹರಿಸುತ್ತಿದ್ದು, ಕೊರೊನಾ ಲಸಿಕಾಕರಣಕ್ಕೆ ಹೆಚ್ಚಿನ‌ ಒತ್ತು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಕೊರೋನಾ ಶೀಘ್ರ ಪತ್ತೆಗೆ ಕೊರೋನಾ ಪರೀಕ್ಷೆ, ಐಸೋಲೇಶನ್

ರಾಜ್ಯದಲ್ಲಿ ಏರಿಕೆ ಕಂಡ ಕೊರೊನಾ ಪಾಸಿಟಿವಿಟಿ ದರ| ಪರಿಷ್ಕೃತ ಮಾರ್ಗಸೂಚಿ ಬಿಡುಗಡೆ Read More »

ಧರ್ಮಸ್ಥಳ: ರಸ್ತೆಗೆ ಬಿದ್ದಿದ್ದ ಮರಕ್ಕೆ ಬೈಕ್ ಢಿಕ್ಕಿ ಹೊಡೆದು ಉದ್ಯಮಿ ಸಾವು

ಸಮಗ್ರ ನ್ಯೂಸ್: ಧರ್ಮಸ್ಥಳದಿಂದ ನೇತ್ರಾವತಿ ಸ್ನಾನಘಟ್ಟ ಬರುವ ಹಾದಿಯಲ್ಲಿ ರಸ್ತೆಗೆ ಬಿದ್ದಿದ್ದ ಮರಕ್ಕೆ ಢಿಕ್ಕಿ ಹೊಡೆದ ಬೈಕ್ ಸವಾರರೊಬ್ಬರು ರಸ್ತೆಗೆ ಎಸೆಯಲ್ಪಟ್ಟು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಇಂದು ಮುಂಜಾನೆ 5 ರ ಸುಮಾರಿಗೆ ನಡೆದಿದೆ. ಮೃತಪಟ್ಟವರನ್ನು 42 ವರ್ಷದ ಓಡಿಲ್ನಾಲ ಮುಗುಳಿಚತ್ರ ನಿವಾಸಿ ವಸಂತ್ ಕುಮಾರ್ ಜೈನ್ ಎಂದು ಗುರುತಿಸಲಾಗಿದೆ. ಇವರು ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟ ಸಮೀಪ ಹೋಟೆಲ್ ನಡೆಸುತ್ತಿದ್ದು ಧರ್ಮಸ್ಥಳದಲ್ಲಿ ವಾಸವಾಗಿದ್ದರು. ಮುಂಜಾನೆ ಧರ್ಮಸ್ಥಳ ಕಡೆಯಿಂದ ಸ್ನಾನಘಟ್ಟಕ್ಕೆ ಬರುವ ಮಾರ್ಗ ಮಧ್ಯ ರಸ್ತೆಗೆ ಬಿದ್ದಿದ್ದ ಮರವನ್ನು

ಧರ್ಮಸ್ಥಳ: ರಸ್ತೆಗೆ ಬಿದ್ದಿದ್ದ ಮರಕ್ಕೆ ಬೈಕ್ ಢಿಕ್ಕಿ ಹೊಡೆದು ಉದ್ಯಮಿ ಸಾವು Read More »

ಪುತ್ತೂರು: ಅಪಘಾತದಲ್ಲಿ ಉದ್ಯಮಿ ಸಾವು

ಸಮಗ್ರ ನ್ಯೂಸ್: ದ್ವಿಚಕ್ರ ವಾಹನಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರೋರ್ವರು ಮೃತಪಟ್ಟ ಘಟನೆ ಪುತ್ತೂರು ಹೊರವಲಯದ ನೆಹರುನಗರದಲ್ಲಿ ಮಂಗಳವಾರ ರಾತ್ರಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ದೇವಸ್ಯ ನಿವಾಸಿ, ಪುತ್ತೂರು ನಗರದ ಎಂ.ಟಿ. ರಸ್ತೆಯ ಮಹಮ್ಮಾಯಿ ದೇವಸ್ಥಾನದ ಬಳಿ ಶ್ರೀ ದುರ್ಗಾ ಕೀ ಮತ್ತು ಸ್ಟವ್ ರಿಪೇರಿ ಅಂಗಡಿ ಮಾಲಕ ರವೀಂದ್ರ (60) ಎಂದು ಗುರುತಿಸಲಾಗಿದೆ. ರವೀಂದ್ರ ಅವರು ಮಂಗಳವಾರ ರಾತ್ರಿ ನೆಹರು ನಗರ ಕಡೆಯಿಂದ ಪುತ್ತೂರು ಪೇಟೆ ಕಡೆಗೆ ದ್ವಿಚಕ್ರ

ಪುತ್ತೂರು: ಅಪಘಾತದಲ್ಲಿ ಉದ್ಯಮಿ ಸಾವು Read More »

ಪುತ್ತೂರು: ಸಾಂಬಾರು ಪಾತ್ರೆಗೆ ಜಾರಿಬಿದ್ದು ಮಹಿಳೆ ಸಾವು

ಸಮಗ್ರ ನ್ಯೂಸ್: ಶಾಲೆಯ ಬಿಸಿಯೂಟ ಮಾಡುತ್ತಿದ್ದ ಸಂದರ್ಭ ಸಾಂಬಾರ್‌ ಪಾತ್ರೆಗೆ ಕಾಲು ಜಾರಿ ಬಿದ್ದ ಮಹಿಳೆಯೋರ್ವರು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಪುತ್ತೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸೈಂಟ್ ವಿಕ್ಟರ್ ಶಾಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಗ್ನೆಸ್ ಪ್ರಮೀಳಾ ಡಿಸೋಜಾ (37) ಎಂದು ಗುರುತಿಸಲಾಗಿದೆ. ಪ್ರಮೀಳಾ ಡಿಸೋಜಾ ಅವರು ಪುತ್ತೂರು ಕಸ್ಬಾ ಗ್ರಾಮದ ಸೈಂಟ್ ವಿಕ್ಟರ್ ಶಾಲೆಯಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಮೇ.30 ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶಾಲೆಯ ಅಡುಗೆ

ಪುತ್ತೂರು: ಸಾಂಬಾರು ಪಾತ್ರೆಗೆ ಜಾರಿಬಿದ್ದು ಮಹಿಳೆ ಸಾವು Read More »

ಆಕೆಯ ಆ “ಭಾಗ”ದ ಪ್ರದರ್ಶನ ಕಂಡು ಕೆಂಗಣ್ಣಿಗೆ ಗುರಿಯಾದ ನಾರಿಮಣಿ

ಸಮಗ್ರ ಡಿಜಿಟಲ್ ಡೆಸ್ಕ್: ಕ್ಯಾಲಿಫೋರ್ನಿಯಾದ ಡಾಡ್ಜರ್ಸ್ ಸ್ಟೇಡಿಯಂನಲ್ಲಿ ಲಾಸ್ ಏಂಜಲೀಸ್ ಡಾಡ್ಜರ್ಸ್ ಮತ್ತು ಚಿಕಾಗೋ ವೈಟ್ ಸಾಕ್ಸ್ ನಡುವಿನ ಬೇಸ್ ಬಾಲ್ ಪಂದ್ಯದ ಸಂದರ್ಭದಲ್ಲಿ, ಚಿಯರ್ ಗರ್ಲ್ ತನ್ನ ಸ್ತನವನ್ನು ಕ್ರೀಡಾಭಿಮಾನಿಗಳ ಸಮ್ಮುಖದಲ್ಲಿ ಬಹಿರಂಗಪಡಿಸಲು ಹೋದ ಪ್ರಸಂಗ ನಡೆದಿದೆ. ಆಕೆಯು ಸ್ತನಗಳನ್ನು ತೋರಿಸುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಕೆ ಕುಡಿದ ಅಮಲಿನಲ್ಲಿದ್ದ ಕಾರಣ ಗಾರ್ಡ್‌ಗಳು ಬಲವಂತವಾಗಿ ಸ್ಟೇಡಿಯಂ‌ನಿಂದ ಹೊರಕ್ಕೆ ಹಾಕಿದ್ದಾರೆ. ಬ್ಯಾಕ್‌ಲೆಸ್ ನೀಲಿ ಜಂಪ್‌ಸೂಟ್ ಧರಿಸಿದ್ದವಳು ಮುಂದಿನ ಸಾಲಿನಲ್ಲಿ ನಿಂತು ಸಾರ್ವಜನಿಕವಾಗಿ ಪದೇ ಪದೇ

ಆಕೆಯ ಆ “ಭಾಗ”ದ ಪ್ರದರ್ಶನ ಕಂಡು ಕೆಂಗಣ್ಣಿಗೆ ಗುರಿಯಾದ ನಾರಿಮಣಿ Read More »