Uncategorized

ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ಕೊಟ್ಟ ಮೈಸೂರು ಒಡೆಯರ್ ಕುಟುಂಬ

ಸಮಗ್ರ ನ್ಯೂಸ್: ಮೈಸೂರಿನ ಒಡೆಯರಾದ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಹಾಗೂ ಅವರ ತಾಯಿ ಪ್ರಮೋದದೇವಿ ಅವರು ಸೋಮವಾರ ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡಿದರು. ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನಕ್ಕೆ ಬಂದು ವಿರೂಪಾಕ್ಷನಿಗೆ ವಿಶೇಷ ಪೂಜೆ ಸಲ್ಲಿಸಿದರು ವಿಜಯ ವಿಠಲ ದೇವಸ್ಥಾನ, ಸಪ್ತಸ್ವರ ಮಂಟಪ, ಕಲ್ಲಿನ ರಥ ಸ್ಮಾರಕಗಳನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ಅವರು ಸಮೀಪದ ಅಂಜನಾದ್ರಿ ಬೆಟ್ಟಕ್ಕೆ ತೆರಳಿ ಆಂಜನೇಯನ ದರ್ಶನ ಪಡೆದರು.

ವಿಶ್ವ ಪ್ರಸಿದ್ಧ ಹಂಪಿಗೆ ಭೇಟಿ ಕೊಟ್ಟ ಮೈಸೂರು ಒಡೆಯರ್ ಕುಟುಂಬ Read More »

“ನಳಿನ್ ಕುಮಾರ್ ಓರ್ವ ಬೆಸ್ಟ್ ಕಾಮಿಡಿಯನ್, ಡಾಲರ್, ಮರಳಿನ ರೇಟ್ ಕಡಿಮೆ ಮಾಡಿ ಸಕ್ಸಸ್ ಆಗಿದ್ದಾರೆ” – ರಮಾನಾಥ ರೈ

ಸಮಗ್ರ ನ್ಯೂಸ್: ಅಗ್ನಿಪಥ್ ಯೋಜನೆಗೆ ಕಾಂಗ್ರೆಸ್ ನಾಯಕರ ಮಕ್ಕಳನ್ನು ಕೇಳಿಲ್ಲ ಎಂದಿದ್ದ ನಳಿನ್ ಕುಮಾರ್ ಹೇಳಿಕೆಗೆ ಕಿಡಿಕಾರಿರುವ ಮಾಜಿ ಸಚಿವ ರಮಾನಾಥ ರೈ, ನಳಿನ್ ಒಬ್ಬ ಹಾಸ್ಯಗಾರ, ಅವರ ಹೇಳಿಕೆಯನ್ನು ಗಂಭೀರ ಪರಿಗಣಿಸಲ್ಲ.‌ ಡಾಲರ್ ರೇಟ್, ಹೊಯ್ಗೆ ದರದ ಬಗ್ಗೆ ಹೇಳಿ ಜನರ ನಡುವೆ ನಗೆಪಾಟಲಿಗೆ ಈಡಾಗಿದ್ದಾರೆ. ಕಾಂಗ್ರೆಸ್ ಮಕ್ಕಳ ವಿಚಾರ ಅಲ್ಲ, ನಾವು ದೇಶದ ಮಕ್ಕಳ ಬಗ್ಗೆ ಪ್ರಶ್ನೆ ಮಾಡುತ್ತೇವೆ ಎಂದು ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿದ ರಮಾನಾಥ ರೈ, ದೇಶಕ್ಕಾಗಿ ಹೋರಾಡಿದ

“ನಳಿನ್ ಕುಮಾರ್ ಓರ್ವ ಬೆಸ್ಟ್ ಕಾಮಿಡಿಯನ್, ಡಾಲರ್, ಮರಳಿನ ರೇಟ್ ಕಡಿಮೆ ಮಾಡಿ ಸಕ್ಸಸ್ ಆಗಿದ್ದಾರೆ” – ರಮಾನಾಥ ರೈ Read More »

ಚುಚ್ಚುಮದ್ದು ನೀಡಿ 14 ಮಕ್ಕಳಿಗೆ ಅಡ್ಡ ಪರಿಣಾಮ

ಶಿವಮೊಗ್ಗ: ಸರ್ಕಾರಿ ಆಸ್ಪತ್ರೆಯಲ್ಲಿ ನೀಡಿದ ಚುಚ್ಚುಮದ್ದು ನಿಂದ 14 ಮಕ್ಕಳಿಗೆ ಅಡ್ಡ ಪರಿಣಾಮ ಬೀರಿದ ಘಟನೆಯೊಂದು ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ನಡೆದಿದೆ. ನಿನ್ನೆ ಸಂಜೆ ಮಕ್ಕಳಿಗೆ ಆಂಟಿಬಯಾಟಿಕ್ ಇಂಜೆಕ್ಷನ್ ನೀಡಲಾಗಿತ್ತು. ನಿನ್ನೆ ತಡರಾತ್ರಿ ಏಕಾಎಕಿ ಅಡ್ಡ ಪರಿಣಾಮ ಉಂಟಾಗಿದ್ದು, ನಾಲ್ಕು ಮಕ್ಕಳಿಗೆ ತೀವ್ರ ಜ್ವರ ಹಾಗೂ ಇನ್ನೂ ನಾಲ್ಕು ಮಕ್ಕಳ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಒಟ್ಟು 14 ಮಕ್ಕಳನ್ನು ಕೂಡಲೇ ಮೆಗ್ಗಾನ್ ಸೇರಿದಂತೆ ನಗರದ ವಿವಿಧ​ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸದ್ಯ ಮಕ್ಕಳು ಚೇತರಿಸಿಕೊಳ್ಳುತ್ತಿದ್ದು, ಸಾಗರದ ಉಪವಿಭಾಗೀಯ ಆಸ್ಪತ್ರೆ, ಶಿವಮೊಗ್ಗದ

ಚುಚ್ಚುಮದ್ದು ನೀಡಿ 14 ಮಕ್ಕಳಿಗೆ ಅಡ್ಡ ಪರಿಣಾಮ Read More »

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ 4ನೇ ಬಾರಿಗೆ ಆಯ್ಕೆ

ಬೆಂಗಳೂರು : ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವರು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಭಾನುವಾರದಂದು ಚುನಾಯಿತರಾಗಿದ್ದಾರೆ. ಮುಂದಿನ ಮೂರು ವರ್ಷಗಳ ಕಾಲ ಆಡಳಿತ ನಡೆಸಲಿದ್ದಾರೆ. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತು. ಈ ಸಂದರ್ಭದಲ್ಲಿ ಬಿ.ಎಲ್.ಶಂಕರ್ ಅವರು ಒಟ್ಟು 122 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಪ್ರೊ.ಕೆ.ಇ.ರಾಧಾಕೃಷ್ಣ ಕೇವಲ 20 ಮತಗಳನ್ನು ಪಡೆದರು. ಬಹುಮತ ಪಡೆಯುವ ಮೂಲಕ ಬಿ.ಎಲ್.ಶಂಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ 4ನೇ ಬಾರಿಗೆ ಆಯ್ಕೆ Read More »

ಗೆಳೆಯರ ಜೊತೆ ಸೇರಿ ಪತ್ನಿಯನ್ನೇ ಸಾಮೂಹಿಕ ಅತ್ಯಾಚಾರ ಮಾಡಿದ ಭೂಪ

ಸಮಗ್ರ ನ್ಯೂಸ್: ವ್ಯಕ್ತಿಯೊಬ್ಬ ತನ್ನ ಸ್ನೇಹಿತರೊಂದಿಗೆ ಸೇರಿ ಪತ್ನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ 17 ವರ್ಷದ ಬಾಲಕಿಯನ್ನು ಬೆದರಿಸಿ ಮದುವೆಯಾಗಿದ್ದ ವ್ಯಕ್ತಿ ಸೇರಿದಂತೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮದುವೆಯಾದ ನಂತರ ಪತ್ನಿಯ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ ಆರೋಪಿ, ಜೂನ್ 7 ರಂದು ಚಿತ್ರದುರ್ಗ ಹೊರವಲಯಕ್ಕೆ ಕರೆದೊಯ್ದು ತನ್ನ ಮೂವರು ಸ್ನೇಹಿತರೊಂದಿಗೆ ಸೇರಿ ಹಲ್ಲೆ ನಡೆಸಿ,

ಗೆಳೆಯರ ಜೊತೆ ಸೇರಿ ಪತ್ನಿಯನ್ನೇ ಸಾಮೂಹಿಕ ಅತ್ಯಾಚಾರ ಮಾಡಿದ ಭೂಪ Read More »

ದೆಹಲಿಯ ಪ್ಲಾಸ್ಟಿಕ್ ಗೋದಾಮು ನಲ್ಲಿ‌ ಬೆಂಕಿ ದುರಂತ

ನವದೆಹಲಿ: ವಾಯುವ್ಯ ದೆಹಲಿಯ ಬಾದ್ಲಿ ಪ್ರದೇಶದಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಸಂಗ್ರಹಿಸಿ ಇಡಲಾಗಿದ್ದ ಗೋದಾಮಿನಲ್ಲಿ ಭಾನುವಾರ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸಲು ರೋಬೊಟ್ ಅನ್ನು ಬಳಸಲಾಗಿದ್ದು, ಯಾವುದೇ ಅಪಾಯ ಸಂಭವಿಸಲಿಲ್ಲ. ಈ ವೇಳೆ ಸ್ಥಳಕ್ಕೆ ತೆರಳಿ, 36 ಅಗ್ನಿಶಾಮಕದಳದ ವಾಹನಗಳ ಸಿಬ್ಬಂದಿ ಮತ್ತು ರೊಬೋಟ್ ಅನ್ನು ಬಳಸಿ ಬೆಂಕಿ ನಿಯಂತ್ರಿಸಲಾಯಿತು’ ಎಂದು ತಿಳಿಸಿದರು.

ದೆಹಲಿಯ ಪ್ಲಾಸ್ಟಿಕ್ ಗೋದಾಮು ನಲ್ಲಿ‌ ಬೆಂಕಿ ದುರಂತ Read More »

ಕೋವಿಡ್ ಕೇಸ್ ಹೆಚ್ಚಳ; ಮಾಸ್ಕ್ ಧರಿಸದಿದ್ದರೆ ದಂಡ ಫಿಕ್ಸ್

ಬೆಂಗಳೂರು : ಇದೀಗ ರಾಜ್ಯಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆ, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸಲು ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಕರ್ನಾಟಕದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆ ನಡೆಸಿದ್ದು, ರಾಜ್ಯದಲ್ಲಿ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಬಗ್ಗೆ ವಿವರವಾದ ಚರ್ಚೆ ನಡೆಸಿದರು ಮತ್ತು ಮಾಸ್ಕ್ ಧರಿಸದವರಿಗೆ ಸರ್ಕಾರಿ ಸಂಸ್ಥೆಗಳನ್ನು ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿದರು. ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ,

ಕೋವಿಡ್ ಕೇಸ್ ಹೆಚ್ಚಳ; ಮಾಸ್ಕ್ ಧರಿಸದಿದ್ದರೆ ದಂಡ ಫಿಕ್ಸ್ Read More »

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ

ಬೆಂಗಳೂರು: ನಗರದ ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಸಂಪೂರ್ಣ ದರ್ಗಾ ಹೊತ್ತಿ ಉರಿದಿದೆ. ಫ್ರೇಜರ್​ ಟೌನ್ ಬಳಿಯ ಟ್ಯಾನಿ ರಸ್ತೆಯಲ್ಲಿರುವ ಮಸ್ತಾನಿ ದರ್ಗಾದಲ್ಲಿ ಇಂದು ಮುಂಜಾನೆ ಬೆಂಕಿ ಕಾಣಿಸಿಕೊಂಡಿದ್ದು, ನೋಡುತ್ತಿದ್ದಂತೆ ದರ್ಗಾ ಹೊತ್ತಿ ಉರಿದಿದೆ. ಸದ್ಯ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿ ಹೊತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದ್ದಾರೆ.

ಡಿಜೆ ಹಳ್ಳಿಯಲ್ಲಿ ಅಗ್ನಿ ಅವಘಡ; ಹೊತ್ತಿ ಉರಿದ ದರ್ಗಾ Read More »

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ

ಬಂಟ್ವಾಳ: ತಾಲೂಕಿನ ಸಜೀಪನಡುವಿನ ಲಕ್ಷ್ಮಣಕಟ್ಟೆ ಎಂಬಲ್ಲಿ ಸುಮಾರು 600 ವರ್ಷಗಳಷ್ಟು ಹಳೆಯ ಅಶ್ವತ್ಥ ಮರ ಉರುಳಿಬಿದ್ದಿದ್ದು, ಮರದ ಕೆಳಗೆ ನಿಲ್ಲಿಸಿದ್ದ ಕಾರು ಜಖಂಗೊಂಡಿದೆ. ಲುಕ್ಮಾನ್ ಎಂಬವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರನ್ನು ಮರದ ಬಳಿ ನಿಲ್ಲಿಸಿ ಕಾರಿನೊಳಗಿದ್ದ ತನ್ನ ಸಂಬಂಧಿ ಮಹಿಳೆಯರಿಬ್ಬರನ್ನು ಇಳಿಸಿ ತಾನೂ ಇಳಿಯಲು ಹೊರಟಾಗ ಈ ಘಟನೆ ನಡೆದಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

600 ವರ್ಷಗಳ ಹಳೆಯ ಅಶ್ವತ್ಥ ಮರ ಉರುಳಿ ಬಿದ್ದು ನಿಲ್ಲಿಸಿದ ಕಾರು ಜಖಂ Read More »

ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿದ ಕ್ರೂಸರ್ ವಾಹನ ನಾಲೆಗೆ ಬಿದ್ದು 7 ಮಂದಿ ದುರಂತ ಸಾವಿಗೀಡಾಗಿರುವ ಘಟನೆ ಇಂದು ಬೆಳ್ಳಂಬೆಳಗ್ಗೆ ಮಾರಿಹಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗೋಕಾಕ್‍ನಿಂದ ಬೆಳಗಾವಿಗೆ ಬೆಳಗ್ಗೆ 7.30ರ ಸಮಯದಲ್ಲಿ ಬರುತ್ತಿದ್ದ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಬಳ್ಳಾರಿ ನಾಲೆ ಬಳಿ ಪಲ್ಟಿಯಾಗಿ ಉರುಳಿಬಿದ್ದಿದೆ. ಈ ವೇಳೆ ಕ್ರೂಸರ್‍ನಲ್ಲಿದ್ದ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರಿಗೆ ಗಂಭೀರವಾಗಿ ಗಾಯವಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಒಟ್ಟು 18 ಮಂದಿ ರೈಲುಹಳಿ ಜೋಡಣೆ ಕೆಲಸಕ್ಕೆಂದು ಅಕ್ಕತಂಗಿಯರ ಹಾಳದಿಂದ ಬಳ್ಳಾರಿಗೆ

ನಾಲೆಗೆ ಬಿದ್ದ ಕ್ರೂಸರ್; 7 ಮಂದಿ ಸಾವು Read More »