Uncategorized

ಎರಡು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ

ವಿಜಯಪುರ : ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿ ಹಂದಿಗನೂರಿನಲ್ಲಿ ಈ ಘಟನೆ ನಡೆದಿದ್ದು, ಅವ್ವಮ್ಮಾ ಶ್ರೀಶೈಲ ಗುಬ್ಬೆವಾಡ (32) ತನ್ನ 3 ವರ್ಷದ ಹಾಗೂ 1 ವರ್ಷದ ಹೆಣ್ಣು ಮಗುವನ್ನು ಬಾವಿಗೆ ತಳ್ಳಿ ಬಳಿಕ ತಾನೂ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅವ್ವಮಾ ಕಳೆದ 6 ತಿಂಗಳಿನಿಂದ ಖಿನ್ನತೆಗೆ ಒಳಗಾಗಿದ್ದು, ಪತಿ ಶ್ರೀಶೈಲ ಗುಬ್ಬೆವಾಡ ಕುರಿಮೇಯಿಸಲು ಹೋಗಿದ್ದ ವೇಳೆ ಮಕ್ಕಳನ್ನು ಬಾವಿಗೆ […]

ಎರಡು ಮಕ್ಕಳನ್ನು ಬಾವಿಗೆ ತಳ್ಳಿ ತಾಯಿ ಆತ್ಮಹತ್ಯೆ Read More »

ವಿಟ್ಲ: ಕುಡಿದ ಅಮಲಿನಲ್ಲಿ ಕತ್ತಿಯಿಂದ ಹಲ್ಲೆ , ಓರ್ವ ಗಂಭೀರ

ವಿಟ್ಲ: ಕುಡಿದ ಮತ್ತಿನಲ್ಲಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ವ್ಯಕ್ತಿಯೊಬ್ಬರಿಗೆ ಕತ್ತಿಯಿಂದ ಹಲ್ಲೆಗೈದ ಘಟನೆಯೊಂದು ಅಡ್ಯನಡ್ಕ ದ ಪುಣಚ ಸೊಸೈಟಿ ಮುಂಭಾಗ ನಡೆದಿದೆ. ಘಟನೆಯಿಂದ ಗಂಭೀರ ಗಾಯಗೊಂಡ ವ್ಯಕ್ತಿ ಕೊಳ್ಳಪದವು ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡಿರುವ ದಿನೇಶ್ ನನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಟ್ಲ: ಕುಡಿದ ಅಮಲಿನಲ್ಲಿ ಕತ್ತಿಯಿಂದ ಹಲ್ಲೆ , ಓರ್ವ ಗಂಭೀರ Read More »

ಸುಳ್ಯ ; ಗೃಹಪ್ರವೇಶಕ್ಕೆ ಸಜ್ಜಾದ ಮನೆ ಭಾರೀ ಮಳೆಗೆ ನೆಲಸಮ

ಸುಳ್ಯ: ಭಾರೀ ಮಳೆಯಿಂದಾಗಿ ಗೃಹಪ್ರವೇಶಕ್ಕೆ ಸಿದ್ಧವಾಗಿದ್ದ ಮನೆಯೊಂದು ನೆಲಸಮವಾಗಿರುವ ಘಟನೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕ ಬಳಿ ಮೂರು ದಿನದ ಹಿಂದೆ ಮರ ಬಿದ್ದು ಮನೆ ಗೋಡೆಗಳಲ್ಲಿ ಬಿರುಕು ಕಂಡಿತ್ತು. ಬಿರುಕು ಬಿಟ್ಟಿದ್ದ ಗೋಡೆ ದುರಸ್ತಿ ಕೆಲಸ ಮಾಡಲಾಗಿದ್ದು, ಜುಲೈ 18ರಂದು ಗೃಹಪ್ರವೇಶ ನೆರವೇರಿಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಅಷ್ಟು ಹೊತ್ತಿಗಾಗಲೇ ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮವಾಗಿದೆ. ಕಷ್ಟಪಟ್ಟು ಕಟ್ಟಿದ್ದ ಮನೆ ಗೃಹಪ್ರವೇಶಕ್ಕೆ

ಸುಳ್ಯ ; ಗೃಹಪ್ರವೇಶಕ್ಕೆ ಸಜ್ಜಾದ ಮನೆ ಭಾರೀ ಮಳೆಗೆ ನೆಲಸಮ Read More »

ಮಳೆಯಲ್ಲಿ ಆಟ ಆಡಬೇಡ ತಾಯಿ ಹೇಳಿದ್ದಕ್ಕೆ ಕೋಪಗೊಂಡು ಬಾಲಕ ನೇಣುಬಿಗಿದು ಆತ್ಮಹತ್ಯೆ

ಕೋಟ :  ಮಳೆಯಲ್ಲಿ ಆಟ ಆಡದಂತೆ ತಾಯಿ ಬುದ್ಧಿ ಮಾತು ಹೇಳಿದ್ದಕ್ಕೆ 9ನೇ ತರಗತಿ ಬಾಲಕನೊಬ್ಬ ಕೋಪಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಬ್ರಹ್ಮಾವರ ತಾಲೂಕಿನ ಕಾರ್ಕಡದಲ್ಲಿ ನಡೆದಿದೆ. ಮೃತ ಬಾಲಕನನ್ನು ಕಾರ್ಕಡ ನಿವಾಸಿ ಲಕ್ಷ್ಮಿ ಎಂಬವರ ಮಗ, ಕೋಟ ವಿವೇಕ ಹೈಸ್ಕೂಲಿನಲ್ಲಿ 9ನೇ ತರಗತಿಯ ವಿದ್ಯಾರ್ಥಿ ನಾಗೇಂದ್ರ (14) ಎಂದು ಗುರುತಿಸಲಾಗಿದೆ. ಲಕ್ಷ್ಮೀ ಕಾರ್ಕಡದಲ್ಲಿ ವೀರಭದ್ರ ಕ್ಯಾಂಟೀನ್ ನಡೆಸಿಕೊಂಡಿದ್ದು, ಶಾಲಾ ರಜೆ ಹಿನ್ನೆಲೆ ನಾಗೇಂದ್ರ ಕಾರ್ಕಡ ಶಾಲಾ ಮೈದಾನದಲ್ಲಿ ಆಟ ಆಡಲು ಹೋಗಿದ್ದ ಎನ್ನಲಾಗಿದೆ.

ಮಳೆಯಲ್ಲಿ ಆಟ ಆಡಬೇಡ ತಾಯಿ ಹೇಳಿದ್ದಕ್ಕೆ ಕೋಪಗೊಂಡು ಬಾಲಕ ನೇಣುಬಿಗಿದು ಆತ್ಮಹತ್ಯೆ Read More »

ಮದುವೆ ಹುಡುಗ ಕಪ್ಪು , ಸಮಾರಂಭದಲ್ಲಿ ಮದುವೆ ನಿರಾಕರಿಸಿದ ಹುಡುಗಿ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಇಟಾವಾದಲ್ಲಿ ನಡೆದ ಮದುವೆ ಕಾರ್ಯಕ್ರಮ ದಲ್ಲಿ ನಡೆದ ಘಟನೆಯಲ್ಲಿ ಮದುವೆಯು ಅರ್ಧ ಪ್ರಕ್ರಿಯೆ ವೇಳೆ ವಧು ಮದುವೆಯಿಂದ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾಳೆ. ಅದಕ್ಕೆ ಆಕೆ ನೀಡಿದ ಉತ್ತರ ವರ ಬಹಳ ಕಪ್ಪಾಗಿ ಇದ್ದಾನೆಂಬುದಾಗಿ ಹೇಳಿದ್ದಾಳೆ. ಮದುವೆಯ ಸಮಾರಂಭವು ಪ್ರಾರಂಭವಾದ ತಕ್ಷಣ, ದಂಪತಿಗಳು ಹೂಮಾಲೆಗಳನ್ನು ವಿನಿಮಯ ಮಾಡಿಕೊಂಡರು. ಅಲ್ಲಿಂದ ಸಮಸ್ಯೆ ಶುರುವಾಯಿತು. ವಧು ನೀತಾ ಯಾದವ್​ ಎರಡು “ಫೆರಾ'(ಏಳು ಸುತ್ತು) ನಂತರ ವಿವಾಹವನ್ನು ಹಠಾತ್ತನೆ ರದ್ದುಗೊಳಿಸುವ ತನ್ನ ನಿರ್ಧಾರ ಪ್ರಕಟಿಸಿದ್ದಾಳೆ. ಆಕೆಯ

ಮದುವೆ ಹುಡುಗ ಕಪ್ಪು , ಸಮಾರಂಭದಲ್ಲಿ ಮದುವೆ ನಿರಾಕರಿಸಿದ ಹುಡುಗಿ Read More »

ಬಾಹುಬಲಿ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ ಕಂಪ್ಲೀಟ್

ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್’ ಬಿಡುಗಡೆಯಾಗಿ ಇಂದಿಗೆ 7 ವರ್ಷಗಳನ್ನು ಪೂರೈಸಿದೆ. ಟಾಲಿವುಡ್ ಮಾತ್ರವಲ್ಲದೆ ಇಡೀ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಈ ಚಿತ್ರವನ್ನು ಅರ್ಕ ಮೀಡಿಯಾ ವರ್ಕ್ಸ್ ಬ್ಯಾನರ್ ನಡಿ ಶೋಬು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ನಿರ್ಮಾಣ ಮಾಡಿದ್ದರು, ಎಂ ಎಂ ಕೀರವಾಣಿ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ರಾಜಮೌಳಿ ಕುಟುಂಬದ ಬಹುತೇಕ ಮಂದಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ‘ಬಾಹುಬಲಿ ‘

ಬಾಹುಬಲಿ ಸಿನಿಮಾ ಬಿಡುಗಡೆಯಾಗಿ ಇಂದಿಗೆ 7 ವರ್ಷ ಕಂಪ್ಲೀಟ್ Read More »

ಕಾರು ನಿಯಂತ್ರಣ ತಪ್ಪಿ ಮರವಂತೆ ಬೀಚ್ ಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮರವಂತೆ ಬೀಚ್​ನಲ್ಲಿ ಕೆಂಪು ಬಣ್ಣದ ಸ್ವಿಫ್ಟ್​ ಕಾರು ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಪ್ರಕರಣದಲ್ಲಿ ನಾಪತ್ತೆಯಾಗಿದ್ದ ರೋಶನ್​ ಆಚಾರ್ಯ ಶವ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರು ನಿಯಂತ್ರಣ ತಪ್ಪಿದ ಪರಿಣಾಮ ನಾಲ್ವರು ಪ್ರಯಾಣಿಸುತ್ತಿದ್ದ ಸ್ವಿಫ್ಟ್​ ಕಾರು ಮರವಂತೆ ಕಡಲಿಗೆ ಹಾರಿತ್ತು. ಕೋಟೇಶ್ವರ ಮೂಲದ ವಿರಾಜ್​ ಆಚಾರ್ಯ ಸೀಟ್​ ಬೆಲ್ಟ್​ ಧರಿಸಿದ್ದ ಪರಿಣಾಮ ಅವರ ಮೃತದೇಹ ಕಾರಿನಲ್ಲಿಯೇ ಪತ್ತೆಯಾಗಿತ್ತು. ಇದೇ ಕಾರಿನಲ್ಲಿದ್ದ ಕಾರ್ತಿಕ್​ ಹಾಗೂ ಸಂದೀಪ್​

ಕಾರು ನಿಯಂತ್ರಣ ತಪ್ಪಿ ಮರವಂತೆ ಬೀಚ್ ಗೆ ಬಿದ್ದು ನಾಪತ್ತೆಯಾಗಿದ್ದ ಯುವಕನ ಶವ ಪತ್ತೆ Read More »

ಸಂಪಾಜೆ ಭೂಕಂಪನ ಪ್ರದೇಶಕ್ಕೆ ಕೇಂದ್ರ ತಂಡ ಪರಿಶೀಲನೆ

ಸಮಗ್ರ ನ್ಯೂಸ್: ಕಳೆದ‌ ಕೆಲವಾರಗಳಿಂದ ಕಂಪಿಸುತ್ತಿರುವ ಸಂಪಾಜೆ ಗ್ರಾಮಕ್ಕೆ ಭೂಕಂಪ ಅಧ್ಯಯನ ತಂಡ ಆಗಮಿಸಿದ್ದು, ಭೂಕಂಪನ ಬಾಧಿತ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿದೆ. ಕೇಂದ್ರ ಸರಕಾರದ ಪ್ರಾಕೃತಿಕ ವಿಕೋಪ ಇಲಾಖೆಯ ಮುಖ್ಯಸ್ಥರಾದ ಅಝದ್ ಅಹಮದ್ ಭಟ್, ಸೆಂಥಿಲ್ ,ಮಂಗಳೂರು ವಿಭಾಗದ ಭೂ ಗರ್ಭ ಇಲಾಖೆಯ ಮಹದೇವ್, ತಹಸೀಲ್ದಾರ್ ಅನಿತಾಲಕ್ಷ್ಮಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜ, ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಮ್. ಶಾಹಿದ್ ತೆಕ್ಕಿಲ್, ಪಂಚಾಯತ್ ಸದಸ್ಯ ಎಸ್.

ಸಂಪಾಜೆ ಭೂಕಂಪನ ಪ್ರದೇಶಕ್ಕೆ ಕೇಂದ್ರ ತಂಡ ಪರಿಶೀಲನೆ Read More »

44 ನೇ ಹುಟ್ಟುಹಬ್ಬ ದ ಸಡಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್

ಬೆಂಗಳೂರು: ಸ್ಯಾಂಡಲ್​ ವುಡ್ ನಟ ಗೋಲ್ಡನ್ ಸ್ಟಾರ್ ಗಣೇಶ್ ಜನುಮ ದಿನದ ಸಡಗರದಲ್ಲಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರಿಗೆ ಇಂದು 44ನೇ ಹುಟ್ಟುಹಬ್ಬದ ಸಂಭ್ರಮ. ಅವರು ಬೆಂಗಳೂರಿನ ನೆಲಮಂಗಲದ ಅಡಕಮರನಹಳ್ಳಿಯಲ್ಲಿ ಜುಲೈ 2, 1980ರಲ್ಲಿ ಕಿಶನ್ ಮತ್ತು ಸುಲೋಚನ ಎಂಬ ದಂಪತಿಗಳ ಮೂರನೇ ಮಗನಾಗಿ ಗಣೇಶ್ ಜನಿಸಿದರು. ಇವರು ಎಲೆಕ್ಟ್ರಾನಿಕ್ಸ್ ನಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದುಕೊಂಡಿದ್ದಾರೆ. ಇನ್ನೂ ಇವರು 99 ಕ್ಕೂ ಹೆಚ್ಚಿನ ಸಿನಿಮಾದಲ್ಲಿ ನಟಿಸಿದ್ದಾರೆ

44 ನೇ ಹುಟ್ಟುಹಬ್ಬ ದ ಸಡಗರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ Read More »

ಮಂಗಳೂರು; ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿ , ಓರ್ವ ಮೃತ್ಯು, ಇಬ್ಬರಿಗೆ ಗಾಯ

ಸಮಗ್ರ ನ್ಯೂಸ್ : ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆಯೊಂದು ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ರಸ್ತೆಯಲ್ಲಿ ನಡೆದಿದೆ. ಮೃತಚಾಲಕನನ್ನು ಕೆಎಸ್.ರಾವ್ ನಗರ ವಿಜಯಪುರ ಕಾಲೊನಿ ನಿವಾಸಿ ಯಶವಂತರಾಯ ಎಂದು ಗುರುತಿಸಲಾಗಿದೆ. ಗಾಯಗೊಂಡವರನ್ನು ಭಗವಂತರಾಯ ಮತ್ತು ಕುಮಾರ್ ಎಂದು ಗುರುತಿಸಲಾಗಿದೆ. ಇವರು ಕೂಲಿ ಕೆಲಸಕ್ಕೆಂದು ಟೆಂಪೋದಲ್ಲಿ ಮಂಗಳೂರು ಕಡೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ವಿದ್ಯುತ್

ಮಂಗಳೂರು; ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿ , ಓರ್ವ ಮೃತ್ಯು, ಇಬ್ಬರಿಗೆ ಗಾಯ Read More »