Uncategorized

ಮದೆನಾಡು ಗುಡ್ಡಬಿರುಕು ಹಿನ್ನಲೆ ಮಂಗಳೂರು-ಮಡಿಕೇರಿ ರಾ.ಹೆ‌ ರಾತ್ರಿ ಸಂಚಾರಕ್ಕೆ ನಿರ್ಬಂಧ

ಸಮಗ್ರ ನ್ಯೂಸ್: ಮಡಿಕೇರಿ -ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಮದೆನಾಡು ಗ್ರಾಮದ ಗುಡ್ಡ ಪ್ರದೇಶದಲ್ಲಿ ಭಾರೀ ಬಿರುಕುಗಳು ಕಾಣಿಸಿಕೊಂಡಿದ್ದು, ಮಣ್ಣು ಕುಸಿಯುವ ಸಾಧ್ಯತೆ ‌ಕಾರಣ ರಾತ್ರಿ‌ ಸಂಚಾರ‌ ನಿರ್ಬಂಧಿಸಲಾಗಿದೆ ಕಳೆದ ಒಂದು ತಿಂಗಳಿಗೂ ಹೆಚ್ಚಿನ ಅವಧಿಯಿಂದ ನಿರಂತರ ಮಳೆ‌ ಹಾಗೂ‌ ಭಾರೀ ಗಾಳಿಯಿಂದಾಗಿ ಮಡಿಕೇರಿ ಸಮೀಪದ ಮದೆನಾಡು ಗ್ರಾಮದ ಕರ್ತೋಜಿ ಎಂಬಲ್ಲಿ, ರಸ್ತೆ ಪಕ್ಕದ ಗುಡ್ಡದಲ್ಲಿ ಭಾರೀ ಬಿರುಕು ಮೂಡಿದೆ. ಅಲ್ಪಸ್ವಲ್ಪ ಕುಸಿತವೂ ಸಂಭವಿಸಿದೆ. ಇದೀಗ ಯಾವುದೇ ಕ್ಷಣದಲ್ಲೂ ಮಣ್ಣು ಕುಸಿತವಾಗಿ ರಸ್ತೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವ […]

ಮದೆನಾಡು ಗುಡ್ಡಬಿರುಕು ಹಿನ್ನಲೆ ಮಂಗಳೂರು-ಮಡಿಕೇರಿ ರಾ.ಹೆ‌ ರಾತ್ರಿ ಸಂಚಾರಕ್ಕೆ ನಿರ್ಬಂಧ Read More »

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯು.ಯು ಲಲಿತ್ ನೇಮಕ

ಸಮಗ್ರ ನ್ಯೂಸ್: ಸುಪ್ರಿಂಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಉಮೇಶ್ ಲಲಿತ್ ಅವರನ್ನು ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಾಡಿಸಿದೆ. ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ ಮಾಡಲಾಗಿದೆ. ದೇಶದ‌ 49ನೇ ಸಿಜೆಐಯಾಗಿ ನ್ಯಾಯಮೂರ್ತಿ ಉದಯ್ ಲಲಿತ್ ಅವರನ್ನು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಉದಯ್ ಲಲಿತ್ ನೇಮಿಸಿ ಕೇಂದ್ರ ಸರ್ಕಾರದಿಂದ ಆದೇಶ ಹೋರಾಡಿಸಿದೆ. ಶೀಘ್ರವೇ ಹಾಲಿ ಸಿಜೆಐ ರಮಣ ಸೇವಾವಧಿ ಅಂತ್ಯವಾಗುವ ಹಿನ್ನೆಲೆಯಲ್ಲಿ ಈ ನೇಮಕ

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಯು.ಯು ಲಲಿತ್ ನೇಮಕ Read More »

ಉಳ್ಳಾಲದಲ್ಲಿ ರಿಕ್ಷಾ ಓಡಿಸಿದ ಯು.ಟಿ ಖಾದರ್

ಸಮಗ್ರ ನ್ಯೂಸ್: ಮಂಗಳೂರು ಕ್ಷೇತ್ರದ ಶಾಸಕ, ವಿಪಕ್ಷ ಉಪನಾಯಕ ಯು.ಟಿ ಖಾದರ್ ಬಸ್, ಜೆಸಿಬಿ ಚಲಾಯಿಸಿ ಒಂದೊಮ್ಮೆ ಸುದ್ದಿಯಾಗದ್ದರು, ಇದೀಗ ಮಳೆಹಾನಿಗೊಳಗಾದ ಮನೆ ವೀಕ್ಷಿಸಲು ಸ್ವತಃ ರಿಕ್ಷಾ ಚಲಾಯಿಸಿಕೊಂಡು ಹೋಗಿದ್ದಾರೆ. ಪಜೀರು ಪಾನೇಲ ಎಂಬಲ್ಲಿ ಮಿಂಗಲ್ ವೇಗಸ್ ಎಂಬವರ ಮಳೆಯಿಂದ ಹಾನಿಗೀಡಾದ ಮನೆಯ ವೀಕ್ಷಣೆಗೆ ತೆರಳಿದ್ದ ಸಂದರ್ಭ ಶಾಸಕರು, ವಾರ್ಡಿನ ಸದಸ್ಯರೊಬ್ಬರ ರಿಕ್ಷಾವನ್ನು ಚಲಾಯಿಸಿ ಮನೆಯನ್ನು ವೀಕ್ಷಿಸಿದ್ದಾರೆ. ಇವರ ಜೊತೆಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಯೂಸುಫ್ ಪಾನೇಲ, ರೊನಾಲ್ಡ್ ಇದ್ದರು.

ಉಳ್ಳಾಲದಲ್ಲಿ ರಿಕ್ಷಾ ಓಡಿಸಿದ ಯು.ಟಿ ಖಾದರ್ Read More »

ಭಾರತ ಮಾತೆ ಕೈಯಲ್ಲಿ ಭಗವಾಧ್ವಜ| ಮಂಗಳೂರು ವಿವಿ ಕಾಲೇಜಿನಲ್ಲಿ ‌ಮತ್ತೆ ವಿವಾದ!

ಸಮಗ್ರ ನ್ಯೂಸ್: ಕಾಲೇಜು ಕ್ಯಾಂಪಸ್‌ನಲ್ಲಿ ‘ಭಾರತ್ ಮಾತಾ ಪೂಜನಾ’ ಕಾರ್ಯಕ್ರಮ ನಡೆಸಲು ಮುಂದಾದ ಮಂಗಳೂರು ವಿವಿ ಕಾಲೇಜು ವಿದ್ಯಾರ್ಥಿ ಸಂಘದ ‌ನಡೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮದ ವಿರುದ್ದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ‌.ಕ ಜಿಲ್ಲಾಧಿಕಾರಿಗೆ ದೂರು ನೀಡಿದ್ದು, ಕಾರ್ಯಕ್ರಮ ರದ್ದು ಪಡಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರರಿಗೆ ಮನವಿ ಮಾಡಿದೆ. ಭಾರತ ಮಾತೆ ಕೇಸರಿ ಧ್ವಜ ಹಿಡಿದ ಫೋಟೋ ಬಳಸಿದ್ದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿರುವ ಕ್ಯಾಂಪಸ್ ಫ್ರಂಟ್, ಮಂಗಳೂರು ವಿವಿ ಘಟಕ ಕಾಲೇಜಿನಲ್ಲಿ

ಭಾರತ ಮಾತೆ ಕೈಯಲ್ಲಿ ಭಗವಾಧ್ವಜ| ಮಂಗಳೂರು ವಿವಿ ಕಾಲೇಜಿನಲ್ಲಿ ‌ಮತ್ತೆ ವಿವಾದ! Read More »

8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ‌ಅಧಿಕಾರ ಸ್ವೀಕಾರ

ಸಮಗ್ರ ನ್ಯೂಸ್: ಬಿಹಾರದಲ್ಲಿ ಮಹಾಘಟಬಂಧನ ಸರ್ಕಾರ ರಚನೆಯಾಗಿದ್ದು, ನಿತೀಶ್ ಕುಮಾರ್ ಅವರು ದಾಖಲೆಯ 8 ನೇ ಬಾರಿಗೆ ಬಿಹಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತೀಶ್ ಕುಮಾರ್ ಅವರಿಗೆ ರಾಜ್ಯಪಾಲ ಫಗು ಚೌಹಾಣ್ ಅವರು ಪ್ರಮಾಣ ವಚನ ಬೋಧಿಸಿದರು. ಇನ್ನು ಆರ್ ಜೆ ಡಿ ಯ ತೇಜಸ್ವಿ ಯಾದವ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡಿರುವ ಜೆಡಿಯು ಪಕ್ಷ ಆರ್ ಜೆಡಿ, ಕಾಂಗ್ರೆಸ್ ಸೇರಿದಂತೆ 7 ಪಕ್ಷಗಳು ಮತ್ತು

8ನೇ ಬಾರಿಗೆ ಬಿಹಾರ ಮುಖ್ಯಮಂತ್ರಿಯಾಗಿ ನಿತೀಶ್ ಕುಮಾರ್ ‌ಅಧಿಕಾರ ಸ್ವೀಕಾರ Read More »

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭೂ ಕುಸಿತ| ಆತಂಕದಲ್ಲಿ ಸ್ಥಳೀಯರು

ಸಮಗ್ರ ನ್ಯೂಸ್:‌ಕೊಡಗು ಜಿಲ್ಲೆಯಲ್ಲಿ ಭೂಕುಸಿತಗಳು ಮುಂದುವರೆದಿದ್ದು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟದ ತಪ್ಪಲಿನಲ್ಲಿರುವ ಹರಪಲ್ಲಿ ಗ್ರಾಮದಲ್ಲಿ ಭಾರಿ ಭೂಕುಸಿತ ಉಂಟಾಗಿದೆ. ಕಿ.ಮೀ ಗಟ್ಟಲೇ ಬೆಟ್ಟ ಕುಸಿದಿದ್ದು ಸ್ಥಳೀಯರಲ್ಲಿ ಭಾರೀ ಆತಂಕ ಮನೆ ಮಾಡಿದೆ. ಹೆಚ್.ಎ.ಸೋಮಯ್ಯ ಅವರ ಮನೆ ಬಳಿ‌ ಭೂಮಿ ಕುಸಿದು ಹೋಗಿದೆ. ಮನೆಯಿಂದ 20 ಅಡಿ ದೂರದಲ್ಲಿ ಕುಸಿತ ಉಂಟಾಗಿದ್ದು, ಇದರಿಂದಾಗಿ ಸೋಮಯ್ಯ ಅವರ ಮನೆಅಪಾಯದಲ್ಲಿ ಇದೆ. ನಿನ್ನೆ ಸುರಿದ ಮಳೆಯಿಂದ ಉಂಟಾದ ಭೂಕುಸಿತಗೊಂಡಿದೆ. ಸ್ಥಳಕ್ಕೆ ಅಧಿಕಾರಿಗಳ ಭೇಟಿ ಪರಿಶೀಲನೆ ಮಾಡಿದ್ದಾರೆ. ಬೆಟ್ಟದ ಮೇಲ್ಭಾಗದಲ್ಲೂ

ಕೊಡಗು ಜಿಲ್ಲೆಯಲ್ಲಿ ಮುಂದುವರಿದ ಭೂ ಕುಸಿತ| ಆತಂಕದಲ್ಲಿ ಸ್ಥಳೀಯರು Read More »

ಸುಳ್ಯ: ಕನಕಮಜಲಿನಲ್ಲಿ ತಲ್ವಾರ್ ಪ್ರದರ್ಶಿಸಿದ ಪ್ರಕರಣ

ಯುವಕನ ವಿರುದ್ಧ ಎಫ್ ಐಆರ್ ಸಮಗ್ರ ನ್ಯೂಸ್: ಆ. 9 ರಂದು ತಲ್ವಾರ್ ಹಿಡಿದು ಊರಿಡೀ ಸುತ್ತಿ ಭಯದ ವಾತಾವರಣ ನಿರ್ಮಿಸಿದ ಯುವಕ ಇದೀಗ ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಈತ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಟ ನಡೆಸಿ ಹುಚ್ಚಾಟ ಪ್ರದರ್ಶಿಸಿದ್ದ. ಇದರಿಂದ ಸ್ಥಳೀಯರಲ್ಲಿ ಒಂದು ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಈತನ ಅತಿರೇಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು

ಸುಳ್ಯ: ಕನಕಮಜಲಿನಲ್ಲಿ ತಲ್ವಾರ್ ಪ್ರದರ್ಶಿಸಿದ ಪ್ರಕರಣ Read More »

ನಗರಗಳಲ್ಲಿ ಚಿನ್ನದ ಬೆಲೆ ಚೆನ್ನಾಗಿದೆಯೇ ? ಇಲ್ಲಿದೆ ನೋಡಿ ಇಂದಿನ ಬೆಳ್ಳಿ ಬಂಗಾರದ ಬೆಲೆ

ಭಾರತದಲ್ಲಿ ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ಬೆಲೆ ಇಂದು ಭಾರೀ ಏರಿಕೆ ಕಂಡಿದೆ.ಬೆಳ್ಳಿ ಬೆಲೆ ಕೂಡ ಇಂದು ಭಾರೀ ಏರಿಕೆಯಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿ ಬೆಲೆ 57,400 ರೂ. ಇದ್ದುದು ಇಂದು 59,000 ರೂ. ಆಗಿದೆ. ನಗರಗಳಲ್ಲಿ ಇಂದಿನ ಚಿನ್ನ ಬೆಳ್ಳಿಯ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ. ಭಾರತದಲ್ಲಿ ಚಿನ್ನದ ಬೆಲೆ ಇಂದು ಹೆಚ್ಚಳವಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,550 ರೂ. ಇದ್ದುದು 47,950 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ

ನಗರಗಳಲ್ಲಿ ಚಿನ್ನದ ಬೆಲೆ ಚೆನ್ನಾಗಿದೆಯೇ ? ಇಲ್ಲಿದೆ ನೋಡಿ ಇಂದಿನ ಬೆಳ್ಳಿ ಬಂಗಾರದ ಬೆಲೆ Read More »

ಬೆಳ್ತಂಗಡಿ: ಹೃದಯಾಘಾತದಿಂದ ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಬೆಳ್ತಂಗಡಿ ತಾಲ್ಲೂಕಿನ ನೆರಿಯಾ ಗ್ರಾಮದ ಪಿಲಿಕಳ ಪಂಪ್ ಹೌಸ್ ಬಳಿಯ ನಿವಾಸಿ ಸಚಿನ್ (17) ಮಂಗಳವಾರ ಹೃದಯಘಾತದಿಂದ ಮನೆಯಲ್ಲಿ ಮೃತಪಟ್ಟಿದ್ದಾನೆ. ಮುಂಡಾಜೆ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದ ಈತ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ. ಮಂಗಳವಾರ ಕಾಲೇಜಿಗೆ ರಜೆ ಇದ್ದು, ಮನೆಯಲ್ಲಿದ್ದ ಸಂದರ್ಭ ಏಕಾಏಕಿ ಎದೆನೋವು ಕಾಣಿಸಿಕೊಂಡಿತ್ತು. ಅವಳಿ ಮಕ್ಕಳ ಪೈಕಿ ಒಬ್ಬನಾಗಿದ್ದ ಈತನಿಗೆ ತಂದೆ, ತಾಯಿ, ಹಾಗೂ ಇಬ್ಬರು ಸಹೋದರರು ಇದ್ದಾರೆ.

ಬೆಳ್ತಂಗಡಿ: ಹೃದಯಾಘಾತದಿಂದ ವಿದ್ಯಾರ್ಥಿ ಸಾವು Read More »

ಸುಳ್ಯ: ಸೆಕ್ಷನ್ ನಡುವೆಯೂ ಕನಕಮಜಲಿನಲ್ಲಿ ಯುವಕನಿಂದ ತಲ್ವಾರ್ ಪ್ರದರ್ಶನ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದರೂ ಯುವಕನೋರ್ವ ತಲ್ವಾರ್ ಹಿಡಿದು ಊರಿಡೀ ಸುತ್ತಾಡಿದ ಘಟನೆ ಸುಳ್ಯ ತಾಲೂಕಿನ ಕನಕಮಜಲಿನಲ್ಲಿ ನಡೆದಿದೆ. ಇಲ್ಲಿನ ಸಂದೀಪ್ ಎಂಬಾತ ಘಟನೆಗೆ ಕಾರಣಕರ್ತ ವ್ಯಕ್ತಿ ಎಂದು ತಿಳಿಸಿದು ಬಂದಿದೆ. ದುಷ್ಕರ್ಮಿಗಳಿಂದ ಕೊಲೆಯಾದ ಪ್ರವೀಣ್ ನೆಟ್ಟಾರುರವರಿಗೆ ಶ್ರದ್ದಾಂಜಲಿ ಕುರಿತ ಬ್ಯಾನರ್ ವಿಚಾರದಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಕನಕಮಜಲು ಪೇಟೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ಹಾಕಲು ಅನುಮತಿ ಇಲ್ಲದೇ ಇದ್ದು, ಪ್ರವೀಣ್ ರ ಶ್ರದ್ದಾಂಜಲಿ ಬ್ಯಾನರ್ ಅನ್ನು ಬಟ್ಟೆಯಲ್ಲಿ ಹಾಕಲು ತಿಳಿಸಲಾಗಿತ್ತಾದರೂ ಕನಕಮಜಲಿನ

ಸುಳ್ಯ: ಸೆಕ್ಷನ್ ನಡುವೆಯೂ ಕನಕಮಜಲಿನಲ್ಲಿ ಯುವಕನಿಂದ ತಲ್ವಾರ್ ಪ್ರದರ್ಶನ Read More »