ರಾಜ್ಯ

ಜೂ.7ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ. ಸಿಎಂ ಹೇಳಿದ್ದೇನು?

ಬೆಂಗಳೂರು : ಜೂನ್ 7 ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಮುಂದುವರೆಸುವ ಕುರಿತಂತೆ ಸಿಎಂ ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದಾರೆ. ಜನರು ಸಹಕರಿಸಿದರೆ ಲಾಕ್‌ಡೌನ್ ಮುಂದುವರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ತಿಳಿಸಿರುವ ಅವರು ಗೃಹ ಕಚೇರಿ ಕೃಷ್ಣದಲ್ಲಿ ಐದು ಜಿಲ್ಲೆಗಳ ಜನಪ್ರತಿನಿಗಳ ಜೊತೆ ಸಭೆ ನಡೆಸಿ ಬಳಿಕ ಮಾತನಾಡಿದರು. ಲಾಕ್​ಡೌನ್ ಜೂನ್ 7ರವರೆಗೂ ಮುಂದುವರೆಯಲಿದ್ದು, ಅಲ್ಲಿಯವರೆಗೂ ಇರುತ್ತದೆ. ಅಲ್ಲಿವರೆಗೂ ಬಿಗಿಯಾದ ಕ್ರಮ ಮುಂದುವರೆಯಲಿದೆ. ಕೊರೊನಾ ಕಡಿಮೆ ಆದರೆ ಲಾಕ್​ಡೌನ್ ಮುಂದುವರಿಸುವುದಿಲ್ಲ. ಜನ ಸಹಕರಿಸಿದರೆ ಲಾಕ್​ಡೌನ್ ಮುಂದುವರೆಸುವ ಪ್ರಶ್ನೆಯೇ […]

ಜೂ.7ರ ನಂತರ ರಾಜ್ಯದಲ್ಲಿ ಲಾಕ್ ಡೌನ್ ಕಂಟಿನ್ಯೂ. ಸಿಎಂ ಹೇಳಿದ್ದೇನು? Read More »

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….?

ಬೆಂಗಳೂರು: ರಾಮಮೂರ್ತಿ ನಗರ ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ವೈರಲ್ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ಆರೋಪಿಗಳ ಬಳಿ ಆಧಾರ ಕಾರ್ಡ್ ಪತ್ತೆಯಾಗಿದೆ. ಆದರೆ ಈ ಬಾಂಗ್ಲಾ ಪ್ರಜೆಗಳಿಗೆ ಆಧಾರ ಕಾರ್ಡ್ ಸಿಕ್ಕಿದ್ದು ಹೇಗೆ..? ಎಂಬುದನ್ನು ಬೆಂಗಳೂರು ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿ ಅದರ ಬೆನ್ನು ಬಿದ್ದಿದ್ದಾರೆ. ಅಕ್ರಮವಾಗಿ ಆಧಾರ ಕಾರ್ಡ್ ಮಾಡಿಕೊಟ್ಟವರಿಗಾಗಿ ವಿಶೇಷ ತಂಡ ರಚಿಸಿ ಶೋಧ ಆರಂಭಿಸಿದ್ದಾರೆ. ಇದರ ಹಿಂದೆ ವ್ಯವಸ್ಥಿತ ಅಕ್ರಮ ಜಾಲ ಕೆಲಸ ಮಾಡಿದ್ದರ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅಕ್ರಮವಾಗಿ ಬಾಂಗ್ಲಾದಿಂದ

ಅಗೆದಷ್ಟು ಆಳ ಬೆಂಗಳೂರು ಗ್ಯಾಂಗ್ ರೇಪ್ ಪ್ರಕರಣ | ಸಂತ್ರಸ್ತೆ ಭಾರತದಲ್ಲಿ ಅಂತರ್ರಾಜ್ಯ ವೇಶ್ಯಾವಾಟಿಕೆ ಕಿಂಗ್ ಪಿನ್…!? | ಬಾಂಗ್ಲಾ ಪ್ರಜೆಗಳಿಗೆ ಬೆಂಗ್ಳೂರಲ್ಲಿ ಆಧಾರ್….? Read More »

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು

ಗದಗ: ತನ್ನ ತವರು ಜಿಲ್ಲೆ ಗದಗಕ್ಕೆ ತೆಲಂಗಾಣದಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆಗೈದ ಆರೋಪಿಗಳನ್ನು ಎನ್‌ಕೌಂಟರ್‌ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದ ಕರ್ನಾಟಕ ಮೂಲದ ಹಿರಿಯ ಐಪಿಎಸ್‌ ಅಧಿಕಾರಿ ವಿಶ್ವನಾಥ ಸಜ್ಜನರ ಅವರು ನೆರವು ನೀಡಿದ್ದಾರೆ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಗದಗ ಜಿಲ್ಲೆಗೆ ಸುಮಾರು 40 ಲಕ್ಷ ರೂ ಮೌಲ್ಯದ ವೈದ್ಯಕೀಯ ಸಾಮಗ್ರಿಗಳನ್ನು ಒದಗಿಸುವ ಮೂಲಕ ಸಹಾಯಹಸ್ತ ಚಾಚಿದ್ದಾರೆ. ಅವರು 22 ಆಕ್ಸಿಜನ್‌ ಕಾನ್ಸಂಟ್ರೇಟರ್‌, 84 ಆಕ್ಸಿಜನ್‌ ಸಿಲಿಂಡರ್‌, 2000 ಕೋವಿಡ್‌

ತವರು ಜಿಲ್ಲೆಗೆ ತೆಲಂಗಾಣ ಎನ್ಕೌಂಟರ್ ಖ್ಯಾತಿಯ ಐಪಿಎಸ್ ಅಧಿಕಾರಿ ವಿಶ್ವನಾಥ ಸಜ್ಜನರ ನೆರವು Read More »

ನಾನೇ ಈ ರೀತಿ ಪರದಾಡಬೇಕಾದ್ರೆ ಜನಸಾಮಾನ್ಯರ ಕಥೆಯೇನು…?: ಸಿದ್ದರಾಮಯ್ಯ

ಬೆಂಗಳೂರು: ಕೊರೊನಾ ಸೋಂಕಿಗೆ ಲಸಿಕೆ ನೀಡಲು ಸರಕಾರ ಖಾಸಗಿಯವರಿಗೆ ಅವಕಾಶ ನೀಡಿದೆ. ಆದರೆ ಇದನ್ನೇ ಬಂಡವಾಳವಾಗಿ ಬಳಸಿಕೊಂಡಿರುವ ಖಾಸಗಿ ಆಸ್ಪತ್ರೆಗಳು ಜನರಿಂದ ಹಣ ಲೂಟಿ ಹೊಡೆಯುತ್ತಿವೆ. ಒಂದೊಂದು ಆಸ್ಪತ್ರೆಯಲ್ಲೂ ಲಸಿಕೆಗೆ ಒಂದೊಂದು ದರವಿದೆ ಎಂದು ಆರೋಪಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಲಸಿಕೆಗಳಿಗೆ ಏಕರೂಪದ ದರ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಮಾತನಾಡಿದ ಸಿದ್ದರಾಮಯ್ಯ, “ಸರ್ಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಸಿಗುತ್ತಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಒಂದೊಂದು ರೀತಿ ದರವಿದೆ. ೯೦೦ರೂ ಇಂದ ೧೨೫೦ರೂವರೆಗೆ ದರ ನಿಗದಿ

ನಾನೇ ಈ ರೀತಿ ಪರದಾಡಬೇಕಾದ್ರೆ ಜನಸಾಮಾನ್ಯರ ಕಥೆಯೇನು…?: ಸಿದ್ದರಾಮಯ್ಯ Read More »

ಕೊರೋನಾದಿಂದ ಅನಾಥರಾದ ಮಕ್ಕಳಿಗಾಗಿ “ಬಾಲಸೇವಾ ಯೋಜನೆ” ಜಾರಿ: ಬಿಎಸ್ ವೈ

ಬೆಂಗಳೂರು: ಕೊರೊನಾಗೆ ತುತ್ತಾಗಿ ಮೃತ್ತಪಟ್ಟವರ ಮಕ್ಕಳಿಗೆ ಬಾಲ ಸೇವಾ ಯೋಜನೆಯಡಿ ಮಾಸಿಕ 3,500 ರೂ. ಹಾಗು ಹಲವು ಸೌಲಭ್ಯಗಳನ್ನು ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ತಂದೆ-ತಾಯಿ ಕಳೆದುಕೊಂಡು ತಬ್ಬಲಿಯಾದ ಮಕ್ಕಳ ಕಲ್ಯಾಣಕ್ಕಾಗಿ ಈ ಯೋಜನೆ ರೂಪಿಸಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ. ಮಕ್ಕಳ ಪಾಲನೆ, ಪೋಷಣೆ ಮಾಡುವ ನಿಟ್ಟಿನಲ್ಲಿ ಸರ್ಕಾರದಿಂದ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಯೋಜನೆಯ ಪ್ರಕಾರ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ತಿಂಗಳಿಗೆ 3500 ರೂ. ಸಹಾಯಧನ ನೀಡಲಾಗುವುದುಪೋಷಕರಿಲ್ಲದ ಮಕ್ಕಳಿಗೆ ನೋಂದಾಯಿತ ಪಾಲನ ಸಮಿತಿಯಲ್ಲಿ

ಕೊರೋನಾದಿಂದ ಅನಾಥರಾದ ಮಕ್ಕಳಿಗಾಗಿ “ಬಾಲಸೇವಾ ಯೋಜನೆ” ಜಾರಿ: ಬಿಎಸ್ ವೈ Read More »

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..!

ಬೆಂಗಳೂರು: ಈವರೆಗೆ ಕೊರೋನಾ ಸೋಂಕಿತರಲ್ಲಿ ಪತ್ತೆಯಾಗಿದ್ದ ವೈಟ್ ಫಂಗಸ್ ಇಂದು ಕೋವಿಡ್​ ಕೇರ್​ ಸೆಂಟರ್​ನ ಚಪಾತಿಯಲ್ಲಿಯೇ ಕಾಣಿಸಿಕೊಂಡಿದೆ. ಈ ಫಂಗಸ್ ನೋಡಿ ಕ್ವಾರಂಟೈನ್ ನಲ್ಲಿದ್ದವರು ಶಾಕ್ ಆಗಿದ್ದಾರೆ. ಹೌದು ಈಗಾಗಲೇ ಕೊರೋನಾ ರೋಗಿಗಳನ್ನು ಹಿಂಡಿ ಹಿಪ್ಪೆ ಮಾಡಿರುವ ಫಂಗಸ್​ ನಿನ್ನೆ ರಾತ್ರಿ ಕೋರಮಂಗಲದ ಕೋವಿಡ್ ಕೇರ್ ಸೆಂಟರ್ ನಲ್ಲಿದ್ದ ಸೋಂಕಿತರಿಗೆ ನೀಡಲಾದ ಚಪಾತಿಯಲ್ಲಿ ಕಂಡುಬಂದಿದೆ. ಇದು ಕೋವಿಡ್ ನಿಗ್ರಹ ವಿಚಾರದಲ್ಲಿ ಬಿಬಿಎಂಪಿ ಬೇಜವಾಬ್ದಾರಿತನವನ್ನು ಮತ್ತೆ ಎತ್ತಿ ತೋರಿಸಿದೆ. ಈ ಘಟನೆ, ಇಂತಹ ಊಟವನ್ನು ಸೇವಿಸ ಬೇಕಾ ಅಥವಾ

ಕೋವಿಡ್ ರೋಗಿಗಳಲ್ಲಿ ಅಲ್ಲ ಸೋಂಕಿತರಿಗೆ ನೀಡಿದ ಚಪಾತಿಯಲ್ಲಿ ವೈಟ್ ಫಂಗಸ್…..! Read More »

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಫುಲ್ ಸ್ಟಾಪ್..! | ಸಾಹುಕಾರನಿಗೆ ಕ್ಲೀನ್ ಚಿಟ್ ನೀಡುತ್ತಾ ಎಸ್ ಐ ಟಿ.?

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಸಿಡಿ ಪ್ರಕರಣವು ಇಡೀ ರಾಜ್ಯ ರಾಜಕೀಯವನ್ನೇ ತಲ್ಲಣಗೊಳಿಸಿದ ಸುದ್ದಿ. ಇದರ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳದ ಅಧಿಕಾರಿಗಳು, ಸಾಕ್ಷ್ಯಾಧಾರ ಕೊರತೆ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿಯವರಿಗೆ ಕ್ಲೀನ್ ಚಿಟ್ ನೀಡಲು ಮುಂದಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಪ್ರಕರಣ ಸಂಬಂಧ ಆರಂಭವಾಗಿದ್ದ ತನಿಖೆ ಪೂರ್ಣಗೊಂಡಿದೆ. ಜಾರಕಿಹೊಳಿ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ದೊರೆತಿಲ್ಲ. ಮಹಿಳೆಯೇ ಪದೇ ಪದೇ ಜಾರಕಿಹೊಳಿಯವರನ್ನು ಸಂಪರ್ಕಿಸಿದ್ದಾರೆ. ಸಾಕಷ್ಟು ಬಾರಿ ದೂರವಾಣಿ ಕರೆ ಮಾಡಿ ಪ್ರಚೋದನೆ ನೀಡುವ ರೀತಿಯಲ್ಲಿ

ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಫುಲ್ ಸ್ಟಾಪ್..! | ಸಾಹುಕಾರನಿಗೆ ಕ್ಲೀನ್ ಚಿಟ್ ನೀಡುತ್ತಾ ಎಸ್ ಐ ಟಿ.? Read More »

ಈಗ ಸಾಯಲು ಶೇಕ್ಸ್‌ಪಿಯರ್‌ ಮತ್ತೆ ಹುಟ್ಟಿದ್ದಾದರು ಯಾವಾಗ….?

ಇಂಗ್ಲಿಷ್ ಸಾಹಿತ್ಯ ಲೋಕದ ಖ್ಯಾತ ಕವಿ ವಿಲಿಯಂ ಶೇಕ್ಸ್‌ಪಿಯರ್ ಎರಡು ದಿನದ ಹಿಂದೆ ನಿಧನರಾಗಿದ್ದಾರೆ ಎಂದು ಸುದ್ದಿ ಮಾಡಿ ಅರ್ಜೆಂಟೈನಾದ ಸುದ್ದಿವಾಹಿನಿಯೊಂದರಲ್ಲಿ ವರದಿಯಾಗಿದೆ. ಬರೋಬ್ಬರಿ ನಾಲ್ಕು ಶತಮಾನಗಳ ಮೃತಪಟ್ಟಿದ್ದ ಶೇಕ್ಸ್ ಪಿಯರ್ ಈಗ ಸಾಯಲು ಮತ್ತೆ ಹುಟ್ಟಿದ್ದಾದರು ಯಾವಾಗ ಎಂದಿರುವ ವೀಕ್ಷಕರ ನಗೆಪಾಟಲಿಗೆ ಸುದ್ದಿವಾಹಿನಿ ಗುರಿಯಾಗಿದೆ. ಇಷ್ಟಕ್ಕೂ ಈ ರೀತಿ ಸುದ್ದಿಯಾಗಲು ಕಾರಣವಿದೆ. ಫೈಜರ್ ಸಂಸ್ಥೆಯಿಂದ ಲಸಿಕೆ ಪಡೆದ ವಿಶ್ವದ ಎರಡನೇ ವ್ಯಕ್ತಿ ಎಂಬ ಹೆಗ್ಗಳಿಕೆ ಹೊಂದಿದ್ದ ವಿಲಿಯಮ್ ಶೇಕ್ಸ್‌ಪಿಯರ್ ಎಂಬ ವ್ಯಕ್ತಿ ಇಂಗ್ಲೆಂಡ್‌ನಲ್ಲಿ ಎರಡು ದಿನದ

ಈಗ ಸಾಯಲು ಶೇಕ್ಸ್‌ಪಿಯರ್‌ ಮತ್ತೆ ಹುಟ್ಟಿದ್ದಾದರು ಯಾವಾಗ….? Read More »

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇನ್ನಿಲ್ಲ

ಬೆಂಗಳೂರು: ಸ್ಯಾಂಡಲ್ ವುಡ್ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇಂದು ನಿಧನ ಹೊಂದಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಘು ಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಳಗಿನ ಜಾವ 4.30ಕ್ಕೆ ಇಹಲೋಕ ತ್ಯಜಿಸಿದ್ದಾರೆ. ಸಹ ನಿರ್ದೇಶಕನಾಗಿ ಡಾ. ರಾಜ್ ಕುಮಾರ್ ಅಭಿನಯದ ನಾಗಪೂಜಾ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ತಿಪಟೂರು ರಘು, ಬಳಿಕ ಊರ್ವಶಿ, ಕೆಂಪು ಹೋರಿ, ಸ್ವರ್ಣ ಮಹಲ್ ರಹಸ್ಯ, ನಾಗ ಕಾಳ ಭೈರವ, ಬೆಂಕಿ

ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ಇನ್ನಿಲ್ಲ Read More »

ಮಾಸ್ಕ್ ಧರಿಸದ ತಹಶೀಲ್ದಾರ್ ಗೆ ದಂಡ ವಿಧಿಸಿದ ಪೊಲೀಸರು

ಬೆಳಗಾವಿ  : ಮಾಸ್ಕ್ ಧರಿಸದ ತಹಶೀಲ್ದಾರ್ ಆರ್.ಕೆ. ಕುಲಕರ್ಣಿ ಅವರಿಗೆ ಪೊಲೀಸರು ದಂಡ ವಿಧಿಸಿದ ಘಟನೆ  ಬೆಳಗಾವಿ ಜಿಲ್ಲೆಯ ಲ್ಲಿ  ನಡೆದಿದೆ. ಹಶೀಲ್ದಾರ್ ಆರ್.ಕೆ. ಕುಲಕರ್ಣಿ ಸರಕಾರಿ ವಾಹನದಲ್ಲಿ ಕರ್ತವ್ಯಕ್ಕೆ ತೆರಳುತ್ತಿದ್ದರು. ಈ ವೇಳೆ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ  ಖಡೇ ಬಜಾರ್ ಪೊಲೀಸರು ತಪಾಸಣೆ ನಡೆಸುತ್ತಿದ್ದು, ತಹಶೀಲ್ದಾರ್ ಮಾಸ್ಕ್ ಧರಿಸದೆ ತೆರಳುತ್ತಿರುವುದನ್ನು ಕಂಡು ವಾಹನ ನಿಲ್ಲಿಸಿ ವಿಚಾರಿಸಿ 250ರೂ. ದಂಡವನ್ನು ವಿಧಿಸಿದ್ದಾರೆ. ಬಳಿಕ ದಂಡವನ್ನು ಪಾವತಿ ಮಾಡಿ ತಹಶೀಲ್ದಾರ್ ತೆರಳಿದ್ದಾರೆ. ಇನ್ನು ಇದೇ ವೇಳೆ ಮಾಸ್ಕ್

ಮಾಸ್ಕ್ ಧರಿಸದ ತಹಶೀಲ್ದಾರ್ ಗೆ ದಂಡ ವಿಧಿಸಿದ ಪೊಲೀಸರು Read More »