ಬೆಳ್ಳಿಮೀಸೆಯ ಹರಕೆಗೆ ಒಲಿಯುವ ಬಚ್ಚನಾಯಕ ದೈವ ಬಲ್ಲಾಳ ಸ್ಥಾಪಿತ ಯೇನೆಕಲ್ಲು ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಪರಿಚಯ
ಪರಶುರಾಮ ಸೃಷ್ಟಿಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆ, ಭೂತಾರಾಧನೆಗಳು ಅನಾದಿಕಾಲದಿಂದ ನಡೆದು ಬಂದಿದೆ. ಜಾತಿ ಬೇಧವಿಲ್ಲದೇ ಎಲ್ಲರ ಆರಾಧನೆ, ಆಚರಣೆಗಳು ದೈವಶಕ್ತಿಗೆ ಅರ್ಪಿತವಾಗುತ್ತವೆ. ಇಂತಹ ಹಲವು ಸುಪ್ರಸಿದ್ದ ಕ್ಷೇತ್ರಗಳ ಪೈಕಿ ಮಂಗಳೂರಿನಿಂದ 100 ಕಿ.ಮೀ ಹಾಗೂ ತಾಲೂಕು ಕೇಂದ್ರವಾದ ಕಡಬದಿಂದ 20ಕಿ.ಮೀ ದೂರದಲ್ಲಿದೆ ಏನೆಕಲ್ಲು ಬಚ್ಚನಾಯಕ, ಉಳ್ಳಾಲ್ತಿ, ಶಂಖಪಾಲ ಸುಬ್ರಹ್ಮಣ್ಯ ಕ್ಷೇತ್ರ. ನಾಗರಾಧನೆ ಜೊತೆಗೆ ದೈವಾರಾಧನೆ ಈ ಕ್ಷೇತ್ರದ ವಿಶೇಷತೆ. ಅದರಲ್ಲೂ ಇಲ್ಲಿ ನೆಲೆಸಿರುವ ಬಚ್ಚನಾಯಕ ದೈವಕ್ಕೆ ಬೆಳ್ಳಿ ಮೀಸೆಯೇ ಪ್ರದಾನ ಹರಿಕೆ. ಗುಡಿ, ಅತಿಶಯ ಕ್ಷೇತ್ರ ಇಲ್ಲಿನ […]