ರಾಜ್ಯ

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲ

ಸಮಗ್ರ ನ್ಯೂಸ್: ಇದು ಆಗಸ್ಟ್‌ ತಿಂಗಳ ಕೊನೆಯ ವಾರ. 25 ರಿಂದ 31 ರವರೆಗೆ ಇರಲಿದೆ. ಸೂರ್ಯನು ಸಿಂಹದಲ್ಲಿ ಇರುವನು. ಕುಜನೂ ನೀಚಗಾಮಿಯಾಗಿ ಶತ್ರುಸ್ಥಾನಕ್ಕೆ ಬಂದಿದ್ದಾನೆ. ಶುಕ್ರನು ನೀಚನಾಗಿ ತನ್ನ ಎಲ್ಲ ಶುಭಪ್ರದವಾದ ಕೊಡುಗೆಯನ್ನು ಕೊಡಲು ಅಸಮರ್ಥನಾಗಿದ್ದಾನೆ. ಬುಧನು ಸ್ವಕ್ಷೇತ್ರಕ್ಕೂ ಉಚ್ಚ ಕ್ಷೇತ್ರಕ್ಕೂ ಪ್ರವೇಶಿಸುವ ಹುನ್ನಾರದಲ್ಲಿದ್ದಾನೆ.‌ ಎರಡು ಗ್ರಹಗಳು ಶುಭವನ್ನು ಉಳಿದವು ಅಶುಭವನ್ನೂ ನೀಡಲಿವೆ. ಇಷ್ಟದೇವರಲ್ಲಿ ಎಲ್ಲರೂ ಶುಭಫಲವನ್ನೇ ಕೊಡುವಂತೆ ಆಗಲಿ‌ ಎಂದು ಪ್ರಾರ್ಥಿಸಿ ಮುನ್ನಡೆಯಿರಿ. ಮೇಷ ರಾಶಿ :ಈ ವಾರದಲ್ಲಿ ನಿಮಗೆ ಶುಭಪ್ರದವಾದ ಸುದ್ದಿಗಳು ಹೆಚ್ಚು […]

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲ Read More »

ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಅಪಘಾತ

ಸಮಗ್ರ ನ್ಯೂಸ್: ಮಡಿಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 275ರ ಬೋಯಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಅಪಘಾತವಾಗಿದ್ದು ಕಾರಿನಲ್ಲಿ ಗಾಯಗೊಂಡ ತಾಯಿ ಮಗುವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ ಮೈಸೂರಿನಿಂದ ಮಡಿಕೇರಿಗೆ ಬರುತ್ತಿತ್ತು. ಇತ್ತ ಕಾರಿನಲ್ಲಿ ಒಟ್ಟು ಆರು ಮಂದಿ ಕೇರಳದಿಂದ ಊಟಿಗೆ ತೆರಳುತ್ತಿದ್ದರು. ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿದ್ದು, ಕಾರು ಹಾಗೂ ಬಸ್‌ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್‌ಗೆ ಕಾರು ಗುದ್ದಿದ ರಭಸಕ್ಕೆ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಇನ್ನೂ ಈ

ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಅಪಘಾತ Read More »

ಸಮಗ್ರ ಸಮಾಚಾರ ಲಕ್ಕಿ ಕೃಷ್ಣ ಫೋಟೋ ಸ್ಪರ್ಧೆ-2024 | ಆ.31 ಫೋಟೋ ಕಳುಹಿಸಲು ಕೊನೆಯ ದಿನ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುವ ಲಕ್ಕಿ ಕೃಷ್ಣ ಫೋಟೋ ಸ್ಪರ್ಧೆಗೆ ಫೋಟೋ ಕಳುಹಿಸಲು ಆ. 31 ಕೊನೆಯ ದಿನವಾಗಿರುತ್ತದೆ. ಸ್ಪರ್ಧಿಸಲು ಇನ್ನಷ್ಟೇ ದಿನಗಳು ಬಾಕಿ ಇದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಮೂರು ವರ್ಷದ ಒಳಗಿನ ಮಾತ್ರ ಅವಕಾಶವಿದ್ದು, 50/- ರೂಪಾಯಿ ಪ್ರವೇಶ ಶುಲ್ಕವಿರುತ್ತದೆ. ಮಗುವಿನ ಫೋಟೋ, ವಿಳಾಸ ಮತ್ತು ಜನನ ಪ್ರಮಾಣ ಪತ್ರವನ್ನು 9108131193ಗೆ ವ್ಯಾಟ್ಸ್ಯಾಪ್ ಮಾಡಿ. ನೀವು ಕಳುಹಿಸಿದ ಮುದ್ದು ಕೃಷ್ಣನ ಫೋಟೋವನ್ನು samagrasamachara.com ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುತ್ತದೆ.

ಸಮಗ್ರ ಸಮಾಚಾರ ಲಕ್ಕಿ ಕೃಷ್ಣ ಫೋಟೋ ಸ್ಪರ್ಧೆ-2024 | ಆ.31 ಫೋಟೋ ಕಳುಹಿಸಲು ಕೊನೆಯ ದಿನ Read More »

ಉಡುಪಿ: ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಯುವತಿ ಅಸ್ವಸ್ಥ| ಬಸ್ ಅನ್ನು ಆಸ್ಪತ್ರೆ ಕಡೆ ತಿರುಗಿಸಿ ಪ್ರಾಣ ಉಳಿಸಿದ ಸಿಬ್ಬಂದಿ

ಸಮಗ್ರ ನ್ಯೂಸ್: ವಿದ್ಯಾರ್ಥಿನಿಯೋರ್ವಳು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ (AKMS) ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸಿದ ಮಾನವೀಯ ಘಟನೆ ಕೃಷ್ಣ ನಗರಿ ಉಡುಪಿಯಲ್ಲಿ ಗುರುವಾರ ನಡೆದಿದೆ. ಬೆಳಗ್ಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ AKMS ಖಾಸಾಗಿ ಬಸ್ಸಿಗೆ ಮೂಲ್ಕಿಯಲ್ಲಿ ವಿದ್ಯಾರ್ಥಿನಿ ಯೊಬ್ಬಳು ಹತ್ತಿದ್ದಾಳೆ. ಆದರೆ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಬಸ್ಸಿನಲ್ಲಿದ್ದ ಈ ವಿದ್ಯಾರ್ಥಿನಿ ಏಕಾಏಕಿ ಅಸ್ವಸ್ಥಗೊಂಡಿದ್ದಳು. ಇದನ್ನು ಗಮನಿಸಿದ ಬಸ್ಸಿನ ಚಾಲಕ ನಸೀಫ್ ಹಾಗೂ ನಿರ್ವಾಹಕ

ಉಡುಪಿ: ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಯುವತಿ ಅಸ್ವಸ್ಥ| ಬಸ್ ಅನ್ನು ಆಸ್ಪತ್ರೆ ಕಡೆ ತಿರುಗಿಸಿ ಪ್ರಾಣ ಉಳಿಸಿದ ಸಿಬ್ಬಂದಿ Read More »

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ| ಪೊಲೀಸರ ಚಾರ್ಜ್ ಶೀಟ್ ನಲ್ಲಿ ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ಕಾಮಪುರಾಣ ಬಯಲು

ಸಮಗ್ರ ನ್ಯೂಸ್: ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣ ಮತ್ತು ಮಗ ಪ್ರಜ್ವಲ್ ರೇವಣ್ಣ ರಾಸಲೀಲೆಗಳು ಈಗ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಪ್ರಜ್ವಲ್ ಬಸವನಗುಡಿಯ ಮನೆಯಲ್ಲಿ ದೂರುದಾರ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ನಿಜ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಇನ್ನು ಎಚ್ ಡಿ ರೇವಣ್ಣ ಹಣ್ಣು ಕೊಡುವ ನೆಪದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ| ಪೊಲೀಸರ ಚಾರ್ಜ್ ಶೀಟ್ ನಲ್ಲಿ ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ಕಾಮಪುರಾಣ ಬಯಲು Read More »

ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ ‘ಕಾನು’/ ನಾಳೆ ಬಿಳಿಗಿರಿರಂಗನ ಬೆಟ್ಟದಲ್ಲಿ ಉದ್ಘಾಟನೆ

ಸಮಗ್ರ ನ್ಯೂಸ್‌: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಲ್ಲಿ ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ ‘ಕಾನು’ ಆಗಸ್ಟ್ 25 ರಂದು ಉದ್ಘಾಟನೆಗೊಳ್ಳಲಿದೆ. ‘ಕಾನು’ ಎಂದರೆ ಸೋಲಿಗ ಭಾಷೆಯಲ್ಲಿ ನಿತ್ಯಹರಿದ್ವರ್ಣ ಕಾಡು ಎಂದರ್ಥ. ದಕ್ಷಿಣ ಭಾರತ ಆದಿವಾಸಿ ಜ್ಞಾನ ಕೇಂದ್ರ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕರ್ನಾಟಕ, ಕೇರಳ, ತಮಿಳುನಾಡು ಸುತ್ತಮುತ್ತಲ ಸೋಲಿಗ ಜನಾಂಗದ ಜ್ಞಾನ ಪರಂಪರೆ, ನೈಪುಣ್ಯತೆ, ಕಲೆ, ಸಂಪ್ರದಾಯ, ಸಂಸ್ಕೃತಿಗಳ ಬಗ್ಗೆ ಚರ್ಚೆ ನಡೆಯಲಿದೆ. ಹಾಡಿಗಳ ಇತಿಹಾಸ, ಅರಣ್ಯ ಆಧಾರಿತ ಕೃಷಿ, ಕಟ್ಟುಪಾಡು, ಸಾಮಾಜಿಕ ವ್ಯವಸ್ಥೆ ಮೊದಲಾದ ಸಂಕೀರ್ಣ

ದಕ್ಷಿಣ ಭಾರತದ ಮೊದಲ ಆದಿವಾಸಿ ಗ್ರಂಥಾಲಯ ‘ಕಾನು’/ ನಾಳೆ ಬಿಳಿಗಿರಿರಂಗನ ಬೆಟ್ಟದಲ್ಲಿ ಉದ್ಘಾಟನೆ Read More »

ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ/ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯಿಂದ ಸುತ್ತೋಲೆ

ಸಮಗ್ರ ನ್ಯೂಸ್‌: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಸರ್ಕಾರಿ/ಅನುದಾನಿತ/ ಅನುದಾನರಹಿತ ಶಾಲೆಗಳ ಮೈದಾನ ಮತ್ತು ಆವರಣಗಳನ್ನು ಶೈಕ್ಷಣಿಕ ಚಟುವಟಿಕೆ ಅಲ್ಲದೇ ಮತ್ಯಾವುದಕ್ಕೂ ಬಳಸಬಾರದು ಎಂದು ಸೂಚನೆ ನೀಡಲಾಗಿದೆ. ಸದ್ಯ ಇಲಾಖೆಯ ಈ ನಡೆ ಈಗ ಚರ್ಚೆಗೆ ಗ್ರಾಸವಾಗಿದೆ. ಅಷ್ಟಾಗಿಯೂ ನಿಯಮಗಳ ಉಲ್ಲಂಘನೆಯಾದರೆ ಶಾಲಾ ಮುಖ್ಯಸ್ಥರು ಹೊಣೆಗಾರರಾಗುತ್ತಾರೆ. ಹಲವು ವರ್ಷಗಳಿಂದ ಸರ್ಕಾರಿ ಶಾಲೆಗಳ ಆವರಣಗಳಲ್ಲಿ ನಡೆಯುತ್ತಿದ್ದ ಶೈಕ್ಷಣಿಕೇತರ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿದೆ.

ಶಾಲಾ ಮೈದಾನಗಳಲ್ಲಿ ಶೈಕ್ಷಣಿಕೇತರ ಚಟುವಟಿಕೆಗಳನ್ನು ನಡೆಸುವಂತಿಲ್ಲ/ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣ ಇಲಾಖೆಯಿಂದ ಸುತ್ತೋಲೆ Read More »

ಅನಿಲ್ ಅಂಬಾನಿ ಸೇರಿದಂತೆ 24‌ ಪ್ರಮುಖ ಕಂಪನಿಗಳಿಗೆ ೫ ವರ್ಷ ನಿಷೇಧ ಹೇರಿದ ಸೆಬಿ

ಸಮಗ್ರ ನ್ಯೂಸ್: ಉದ್ಯಮಿ ಅನಿಲ್ ಅಂಬಾನಿ ಮತ್ತು ರಿಲಯನ್ಸ್ ಹೋಮ್ ಫೈನಾನ್ಸ್ನ ಮಾಜಿ ಅಧಿಕಾರಿಗಳು ಸೇರಿದಂತೆ ಇತರ 24 ಸಂಸ್ಥೆಗಳನ್ನು ಸೆಕ್ಯುರಿಟೀಸ್ ಮಾರುಕಟ್ಟೆಯಿಂದ ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ. ಸೆಬಿ ಅಂಬಾನಿಗೆ 25 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ ಮತ್ತು ಯಾವುದೇ ಲಿಸ್ಟೆಡ್ ಕಂಪನಿಯಲ್ಲಿ ನಿರ್ದೇಶಕ ಅಥವಾ ಕೀ ಮ್ಯಾನೇಜ್ಮೆಂಟ್ ಪರ್ಸನಲ್ (ಕೆಎಂಪಿ) ಅಥವಾ ಮಾರುಕಟ್ಟೆ ನಿಯಂತ್ರಕದಲ್ಲಿ ನೋಂದಾಯಿಸಲಾದ ಯಾವುದೇ ಮಧ್ಯವರ್ತಿ ಸೇರಿದಂತೆ ಸೆಕ್ಯುರಿಟೀಸ್ ಮಾರುಕಟ್ಟೆಯೊಂದಿಗೆ 5 ವರ್ಷಗಳ ಅವಧಿಗೆ ಸಂಬಂಧ ಹೊಂದದಂತೆ ನಿರ್ಬಂಧಿಸಿದೆ. ಅಲ್ಲದೆ, ನಿಯಂತ್ರಕವು

ಅನಿಲ್ ಅಂಬಾನಿ ಸೇರಿದಂತೆ 24‌ ಪ್ರಮುಖ ಕಂಪನಿಗಳಿಗೆ ೫ ವರ್ಷ ನಿಷೇಧ ಹೇರಿದ ಸೆಬಿ Read More »

ವಾಲ್ಮೀಕಿ ನಿಗಮದ ಅಕ್ರಮ| ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕ್ಲೀನ್ ಚಿಟ್!!

ಸಮಗ್ರ ನ್ಯೂಸ್: ಮಹರ್ಷಿ ವಾಲ್ಮೀಕಿ ನಿಗಮದ ಲೆಕ್ಕಪರಿಶೋಧಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣ ಸಂಬಂಧ ಸಿಐಡಿ ಅಧಿಕಾರಿಗಳಿಂದ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಅಧಿಕಾರಿಗಳಾದ ಪದ್ಮನಾಭ, ಪರುಶುರಾಮ್ ಅವರ ಒತ್ತಡದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿ ಎಸ್‌ಐಟಿ ಅಧಿಕಾರಿಗಳ ತಂಡ 300 ಪುಟಗಳ ಚಾರ್ಜ್‌ಶೀಟ್ ಅನ್ನು ಶಿವಮೊಗ್ಗ ಕೋರ್ಟ್‌ಗೆ ಸಲ್ಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಚಂದ್ರಶೇಖರ್ ಅವರ ಡೆತ್ ನೋಟ್ ಹಾಗೂ ನಾಗೇಂದ್ರ ಪತ್ನಿ ನೀಡಿದ್ದ ದೂರು ಆಧರಿಸಿ ತನಿಖೆ ನಡೆಸಿರುವ ಎಸ್‌ಐಟಿ ತಂಡ ಇಂದು 300 ಪುಟಗಳ

ವಾಲ್ಮೀಕಿ ನಿಗಮದ ಅಕ್ರಮ| ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ಕ್ಲೀನ್ ಚಿಟ್!! Read More »

ಯಾರು ಏನೇ ಬೈದರೂ ನೀರಿನ ಬೆಲೆ ಏರಿಕೆ ಮಾಡೇ ಮಾಡುತ್ತೇನೆ: ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ ಏರಿಕೆ ಮಾಡಬೇಕಿದೆ. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡಲು ಹಣವಿಲ್ಲ. ಯಾರು ಏನು ಹೇಳಿದರೂ ನಾನು ನೀರಿನ ಬೆಲೆ ಏರಿಕೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ. 8-9 ವರ್ಷದಿಂದ ನೀರಿನ ದರ ಏರಿಕೆ ಮಾಡಿಲ್ಲ. ನೀರಿನ‌ ದರ ಹೆಚ್ಚಿಸಬೇಕು, ಅಂತರ್ಜಲ ಹೆಚ್ಚಳ ಆಗಬೇಕು. ಜಲಮಂಡಳಿ ನಷ್ಟದಲ್ಲಿ ನಡೆಯುತ್ತಿದೆ. ಸಂಬಳ ಕೊಡೋಕೆ‌ ಆಗುತ್ತಿಲ್ಲ. ಮಂಡಳಿಯ ವಿದ್ಯುತ್ ದರವೂ ಪಾವತಿ ಮಾಡಲು ಆಗುತ್ತಿಲ್ಲ. ಕೆಲವು ಸೆಕ್ಷನ್‌ಗೆ ನೋಡಿ ದರ

ಯಾರು ಏನೇ ಬೈದರೂ ನೀರಿನ ಬೆಲೆ ಏರಿಕೆ ಮಾಡೇ ಮಾಡುತ್ತೇನೆ: ಡಿ.ಕೆ ಶಿವಕುಮಾರ್ Read More »