ಶಿಕ್ಷಣ

ಸಿಇಟಿ ಕೇಂದ್ರ ಬದಲಾವಣೆ/ ಎಪ್ರಿಲ್ 12ರ ಒಳಗೆ ಅರ್ಜಿ ಸಲ್ಲಿಸಿ

ಸಮಗ್ರ ನ್ಯೂಸ್: ಸಿಇಟಿ ಅರ್ಜಿ ಭರ್ತಿ ಮಾಡುವ ಸಂದರ್ಭದಲ್ಲಿ ಪರೀಕ್ಷಾ ಕೇಂದ್ರಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿರುವ ಕಲಬುರಗಿ ಜಿಲ್ಲೆಯ ಕೆಲ ಅಭ್ಯರ್ಥಿಗಳು ತಾವು ವ್ಯಾಸಂಗ ಮಾಡಿರುವ ಪಿಯು ಕಾಲೇಜಿನ ಪ್ರಾಂಶುಪಾಲರ ಮೂಲಕ ಇದೇ 12ರೊಳಗೆ ಮನವಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೂಚಿಸಿದೆ. ಕಲಬುರಗಿಯ ಕೆಲವು ಅಭ್ಯರ್ಥಿಗಳು ತಮಗೆ ಪರೀಕ್ಷಾ ಕೇಂದ್ರ ಕೋಲಾರ ಜಿಲ್ಲೆಯಲ್ಲಿ ಹಂಚಿಕೆಯಾಗಿದೆ ಎಂದು ಕೆಇಎಗೆ ಇ-ಮೇಲ್ ಮತ್ತು ದೂರವಾಣಿ ಮೂಲಕ ತಿಳಿಸಿರುವ ಕಾರಣ ಅವರ ಅರ್ಜಿಗಳನ್ನು ಪರಿಶೀಲಿಸಿದಾಗ ಅವರೇ ಎಡಿಟ್ ಸಂದರ್ಭದಲ್ಲಿ ಕೋಲಾರ […]

ಸಿಇಟಿ ಕೇಂದ್ರ ಬದಲಾವಣೆ/ ಎಪ್ರಿಲ್ 12ರ ಒಳಗೆ ಅರ್ಜಿ ಸಲ್ಲಿಸಿ Read More »

5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆ/ ಇಂದು ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: 2023-24ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗೆ ಮಾ.11,12 ಮತ್ತು 25ರಿಂದ 28ರವರೆಗೆ 5,8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಮೌಲ್ಯಾಂಕನದ ಪರೀಕ್ಷೆಯ ಫಲಿತಾಂಶವನ್ನು ಶಾಲೆಗಳಲ್ಲಿ ಏ.8ರಂದು ಪ್ರಕಟಿಸುವಂತೆ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸೂಚಿಸಿದೆ. ಏ.2ರೊಳಗೆ ಬ್ಲಾಕ್ ಹಂತದಲ್ಲಿ ಮೌಲ್ಯಮಾಪನ ಕಾರ್ಯವನ್ನು ಪೂರ್ಣಗೊಳಿಸಿ ಉತ್ತರ ಪತ್ರಿಕೆಗಳನ್ನು ಸಂಬಂಧಿಸಿದ ಶಾಲೆಗಳಿಗೆ ಮರು ರವಾನಿಸಲು ಸೂಚಿಸಲಾಗಿತ್ತು. ಹಾಗೆಯೇ ಈ ವಿದ್ಯಾರ್ಥಿಗಳ ಫಲಿತಾಂಶವನ್ನು ಏ.8ರಂದು ನಡೆಸುವ

5,8 ಮತ್ತು 9ನೇ ತರಗತಿಗಳ ಮೌಲ್ಯಾಂಕನ ಪರೀಕ್ಷೆ/ ಇಂದು ಫಲಿತಾಂಶ ಪ್ರಕಟ Read More »

ಲೋಕಸಭಾ ಚುನಾವಣಾ ಹಿನ್ನಲೆ/ ಬದಲಾದ ಪರೀಕ್ಷಾ ವೇಳಾಪಟ್ಟಿಗಳು

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ 2024 ರ ಮತದಾನ ಏಪ್ರಿಲ್ 19 ರಂದು ಆರಂಭವಾಗಲಿದ್ದು, ದೇಶಾದ್ಯಂತ ತೀವ್ರ ರಾಜಕೀಯ ಚಟುವಟಿಕೆನಡೆದಿದೆ. ಈ ಹಿನ್ನಲೆಯಲ್ಲಿ ಪ್ರಮುಖ ಪ್ರವೇಶ ಪರೀಕ್ಷೆಗಳು ಮತ್ತು ವೃತ್ತಿಪರ ಸಾಮಥ್ರ್ಯ ಪರೀಕ್ಷೆಗಳ ದಿನಾಂಕಗಳನ್ನು ಬದಲಾಯಿಸಲಾಗಿದೆ. ಮೇ 26ಕ್ಕೆ ನಿಗದಿಯಾಗಿದ್ದ ಯುಪಿಎಸ್‍ಸಿ ನಡೆಸುವ ನಾಗರಿಕ ಸೇವೆಗಳ ಪರೀಕ್ಷೆ 2024ರ ವೇಳಾಪಟ್ಟಿಯನ್ನು ಆರಂಭದಲ್ಲಿ ಪರೀಕ್ಷೆ ಜೂನ್ 16ಕ್ಕೆ ಮುಂದೂಡಲಾಗಿದೆ. ಜುಲೈ 7ರಂದು ನಡೆಯಬೇಕಿದ್ದ ನೀಟ್ ಪಿಜಿ ಪರೀಕ್ಷೆ ಜೂನ್ 23ಕ್ಕೆ ನಡೆಯಲಿದೆ. ಫಲಿತಾಂಶಗಳು ಈ ಹಿಂದೆ ಘೋಷಿಸಿದಂತೆ ಜುಲೈ

ಲೋಕಸಭಾ ಚುನಾವಣಾ ಹಿನ್ನಲೆ/ ಬದಲಾದ ಪರೀಕ್ಷಾ ವೇಳಾಪಟ್ಟಿಗಳು Read More »

ಇಂದು (ಮಾ.30) ಪ್ರಥಮ ಪಿಯುಸಿ ಫಲಿತಾಂಶ| ರಿಸಲ್ಟ್ ಚೆಕ್ ಮಾಡ್ಕೊಳ್ಳೋದು ಹೀಗೆ…

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷಾ ಹಾಗೂ ಮೌಲ್ಯಾಂಕನ ಮಂಡಳಿ ನಡೆಸಿದ ಪ್ರಥಮ ಪಿಯುಸಿ ಮೌಲ್ಯಾಂಕನ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಇಂದು ಬೆಳಗ್ಗೆ 11 ಗಂಟೆಗೆ ಇಲಾಖೆಯ ವೆಬ್ ಸೈಟ್ ನಲ್ಲಿ ಫಲಿತಾಂಶ ಪ್ರಕಟವಾಗಲಿದ್ದು, ಫಲಿತಾಂಶ ನೋಡಲು www.karresults.nic.in ವೆಬ್ ಸೈಟ್ ಗೆ ಭೇಟಿ ನೀಡಬಹುದು. ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಮೇ. 20 ರಿಂದ ಮೇ.31 ರವರೆಗೆ ಪೂರಕ ಪರೀಕ್ಷೆ ದಿನಾಂಕವನ್ನು ಪ್ರಕಟಿಸಲಾಗಿದೆ.

ಇಂದು (ಮಾ.30) ಪ್ರಥಮ ಪಿಯುಸಿ ಫಲಿತಾಂಶ| ರಿಸಲ್ಟ್ ಚೆಕ್ ಮಾಡ್ಕೊಳ್ಳೋದು ಹೀಗೆ… Read More »

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ/ ನಾಳೆ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ಪ್ರಥಮ ಪಿಯುಸಿ ಪರೀಕ್ಷೆಯ ಫಲಿತಾಂಶವನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು 2023-24ನೇ ಸಾಲಿನ ಮಾರ್ಚ್ 30 ರಂದು ಪ್ರಕಟಿಸಲಿದೆ. ಫಲಿತಾಂಶವನ್ನು ಮಾರ್ಚ್ 30 ರಂದು ಬೆಳಗ್ಗೆ 11:00 ಗಂಟೆಗೆ karresults.nic.in ನಲ್ಲಿ ಪ್ರಕಟಿಸಲಾಗುತ್ತದೆ. ಫಲಿತಾಂಶವನ್ನು ವಿಶ್ವವಿದ್ಯಾಲಯದಲ್ಲಿಯೇ ನಾಳೆ ನೋಡಬಹುದು. ಫೆಬ್ರವರಿ 12 ರಿಂದ 27 ರವರೆಗೆ ಪ್ರಥಮ ಪಿಯುಸಿ ಪರೀಕ್ಷೆ ನಡೆದಿದ್ದು, ನಾಳೆ ಫಲಿತಾಂಶ ಪ್ರಕಟವಾಗಲಿದ್ದು, ಪರೀಕ್ಷೆಯಲ್ಲಿ ಅನುತ್ತೀರ್ಣರಾದವರಿಗೆ ಪೂರಕ ಪರೀಕ್ಷೆಯನ್ನು ಮೇ ತಿಂಗಳಲ್ಲಿ ನಡೆಸಲಾಗುವುದು. ಪೂರಕ ಪರೀಕ್ಷೆಗಳ ವೇಳಾಪಟ್ಟಿಯನ್ನು ಈಗಾಗಲೇ

ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ/ ನಾಳೆ ಫಲಿತಾಂಶ ಪ್ರಕಟ Read More »

3, 6 ನೇ ತರಗತಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ

ಸಮಗ್ರ ನ್ಯೂಸ್‌:: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮಂಡಳಿಯು 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮವನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸುತ್ತಿದೆ.ಪಠ್ಯಕ್ರಮದ ಜೊತೆಗೆ, ಕೌನ್ಸಿಲ್ 6 ನೇ ತರಗತಿಗೆ ಪಠ್ಯಕ್ರಮ ಸೇತುವೆ ಕಾರ್ಯಕ್ರಮ ಮತ್ತು 3 ನೇ ತರಗತಿಯಿಂದ CBSE, ಕೇಂದ್ರೀಯ ವಿದ್ಯಾಲಯ ಸಂಘಟನೆಗೆ ಮಾರ್ಗಸೂಚಿಗಳನ್ನು ಸಹ ಒದಗಿಸುತ್ತದೆ. 3, 6 ನೇ ತರಗತಿಗಳ ವಿದ್ಯಾರ್ಥಿಗಳಿಗೆ ವೇಳಾಪಟ್ಟಿಯಲ್ಲಿನ ಪರಿಷ್ಕರಣೆ ಮತ್ತು ಸಮಯದ ಹಂಚಿಕೆಯಲ್ಲಿ ಬದಲಾವಣೆಯ ಬಗ್ಗೆ ಶಾಲಾ ಮುಖ್ಯಸ್ಥರು, ಶಿಕ್ಷಕರು ಮತ್ತು ಪೋಷಕರಿಗೆ ತಿಳಿಸಲು CBSE

3, 6 ನೇ ತರಗತಿಗೆ ಮುಂಬರುವ ಶೈಕ್ಷಣಿಕ ವರ್ಷದಿಂದ ಹೊಸ ಪಠ್ಯಕ್ರಮ Read More »

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್/ ಪರೀಕ್ಷೆ ನಂತರ ಬಿಸಿಯೂಟ ಪೂರೈಕೆ

ಸಮಗ್ರ ನ್ಯೂಸ್: ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದ್ದು, ಪರೀಕ್ಷೆ ಬರೆಯುವ ಮಕ್ಕಳಿಗೆ ಬಿಸಿಯೂಟ ನೀಡಲು ನಿರ್ಧರಿಸಿದೆ. ರಾಜ್ಯಾದ್ಯಂತ ಮಾ.25 ರಿಂದ ಏಪ್ರಿಲ್ 10ರವರೆಗೆ ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುವ ಸಂದರ್ಭದಲ್ಲಿ ಬಿಸಿಯೂಟ ಪೂರೈಕೆ ಮಾಡಬೇಕು ಎಂದು ಹೇಳಿದೆ. ಉತ್ತಮ ಆರೋಗ್ಯ, ಶುದ್ಧ ಕುಡಿಯುವ ನೀರು ಹಾಗೂ ನೈರ್ಮಲ್ಯದ ಕಡೆ ಗಮನ ಇಡುವಂತೆ ಸರ್ಕಾರ ಸೂಚನೆ ನೀಡಿದೆ.

ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್/ ಪರೀಕ್ಷೆ ನಂತರ ಬಿಸಿಯೂಟ ಪೂರೈಕೆ Read More »

ಮಾ.25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಶುರು

ಸಮಗ್ರ ನ್ಯೂಸ್: 2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆ-1ಯು ಮಾ.25ರಿಂದ ಪ್ರಾರಂಭವಾಗುತ್ತಿದ್ದು, ರಾಜ್ಯಾದ್ಯಂತ 2,750 ಕೇಂದ್ರಗಳಲ್ಲಿ ಪರೀಕ್ಷೆಯು ನಡೆಯಲಿದೆ. ಒಟ್ಟು 8,69,968 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ. ಒಟ್ಟು ವಿದ್ಯಾರ್ಥಿಗಳ ನೋಂದಣಿಯಲ್ಲಿ 8,10,368 ಶಾಲಾ ವಿದ್ಯಾರ್ಥಿಗಳು ಹಾಗೂ 18,225 ಖಾಸಗಿ ವಿದ್ಯಾರ್ಥಿಗಳಾಗಿದ್ದಾರೆ. 41,375 ಪುನರಾವರ್ತಿತ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದಾರೆ. 4,41,910 ಬಾಲಕರು ಮತ್ತು 4,28,058 ಬಾಲಕಿಯರು ಪರೀಕ್ಷೆಯನ್ನು ಬರೆಯುತ್ತಿದ್ದು, ಈ ಬಾರಿ 5,424 ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ.

ಮಾ.25ರಿಂದ ಎಸ್ಎಸ್ಎಲ್ ಸಿ ಪರೀಕ್ಷೆ ಶುರು Read More »

17 ಶಾಲೆಗಳ ಮಾನ್ಯತೆ ರದ್ದು/ ಕಠಿಣ ಕ್ರಮ ಕೈಗೊಂಡ ಸಿಬಿಎಸ್‍ಇ

ಸಮಗ್ರ ನ್ಯೂಸ್: ಸಂಯೋಜಿತವಲ್ಲದ ಶಾಲೆಗಳು, ನಕಲಿ ವಿದ್ಯಾರ್ಥಿಗಳು, ಅನರ್ಹ ಅಭ್ಯರ್ಥಿಗಳನ್ನು ಪ್ರಸ್ತುತ ಪಡಿಸುತ್ತಿವೆ ಮತ್ತು ದಾಖಲೆಗಳನ್ನ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂಬ ಉದ್ದೇಶದಿಂದ 17 ಶಾಲೆಗಳ ಮಾನ್ಯತೆಯನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ರದ್ದುಗೊಳಿಸಿದೆ. ಇದರ ಜೊತೆಗೆ ಇನ್ನು 3 ಶಾಲೆಗಳನ್ನು ಕೆಳದರ್ಜೆಗೆ ಇಳಿಸಿದೆ. ‘ಈ ಶಾಲೆಗಳು ನಕಲಿ ವಿದ್ಯಾರ್ಥಿಗಳು, ಅನರ್ಹ ಅಭ್ಯರ್ಥಿಗಳನ್ನು ಪ್ರಸ್ತುತಪಡಿಸುವ ಮತ್ತು ದಾಖಲೆಗಳನ್ನ ಸರಿಯಾಗಿ ನಿರ್ವಹಿಸದ ವಿವಿಧ ದುಷ್ಕೃತ್ಯಗಳನ್ನು ಮಾಡುತ್ತಿರುವುದನ್ನು ಕಂಡುಕೊಂಡ ನಂತರ ಸಿಬಿಎಸ್‍ಇ 17 ಶಾಲೆಗಳನ್ನು ಅಮಾನತುಗೊಳಿಸಿದೆ, ಇನ್ನು 3 ಶಾಲೆಗಳನ್ನು

17 ಶಾಲೆಗಳ ಮಾನ್ಯತೆ ರದ್ದು/ ಕಠಿಣ ಕ್ರಮ ಕೈಗೊಂಡ ಸಿಬಿಎಸ್‍ಇ Read More »

ಪಬ್ಲಿಕ್ ಪರೀಕ್ಷೆಗೆ ಮತ್ತೆ ಕಂಟಕ ಎದುರಾಗುವ ಸಾಧ್ಯತೆ/ ಸುಪ್ರೀಂ ಮೆಟ್ಟಿಲೇರಲು ರುಪ್ಸಾ ನಿರ್ಧಾರ

ಸಮಗ್ರ ನ್ಯೂಸ್: 5,8 ಮತ್ತು 9ನೇ ತರಗತಿ ಪಬ್ಲಿಕ್ ಪರೀಕ್ಷೆಗೆ ಮತ್ತೆ ಸಮಸ್ಯೆ ಎದುರಾಗುವ ಸಾಧ್ಯತೆ ಕಾಣುತ್ತಿದೆ. ಪಬ್ಲಿಕ್ ಪರೀಕ್ಷೆ ನಡೆಸಲು ರಾಜ್ಯ ಹೈಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಆದರೆ ಈ ಆದೇಶದ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ (ರುಪ್ಸಾ) ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ. ಹೀಗಾಗಿ ಮತ್ತೆ ಸುಪ್ರೀಂಕೋರ್ಟ್ ನಿರ್ಧಾರದ ಮೇಲೆ ಪರೀಕ್ಷೆ ಭವಿಷ್ಯ ನಿಂತಿದೆ. ನ್ಯಾ. ಸೋಮಶೇಖರ್ ಹಾಗೂ ನ್ಯಾ. ರಾಜೇಶ್ ರೈ ಅವರನ್ನು ಒಳಗೊಂಡ ಹೈಕೋರ್ಟ್ ವಿಭಾಗೀಯ ಪೀಠ ಪಬ್ಲಿಕ್ ಪರೀಕ್ಷೆಗೆ

ಪಬ್ಲಿಕ್ ಪರೀಕ್ಷೆಗೆ ಮತ್ತೆ ಕಂಟಕ ಎದುರಾಗುವ ಸಾಧ್ಯತೆ/ ಸುಪ್ರೀಂ ಮೆಟ್ಟಿಲೇರಲು ರುಪ್ಸಾ ನಿರ್ಧಾರ Read More »