ಶಿಕ್ಷಣ

ಸ್ಪೋಕನ್ ಇಂಗ್ಲಿಷ್ ಕ್ಲಾಸ್/ ಸರ್ಕಾರಿ ಶಾಲೆಗಳಲ್ಲಿ ಶುರುವಾದ ತಯಾರಿ

ಸಮಗ್ರ ನ್ಯೂಸ್: “How to make English easy” ಎಂಬ ಪರಿಕಲ್ಪನೆಯೊಂದಿಗೆ ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಸ್ಪೋಕನ್ ಇಂಗ್ಲಿಷ್ ಕ್ಲಾಸ್ ಶುರು ಮಾಡಲು ತಯಾರಿ ನಡೆದಿದ್ದು, ಈ ಯೋಜನೆಯನ್ನು ರೂಪಿಸುವಂತೆ ಶಾಲಾ ಶಿಕ್ಷಕರಿಗೆ ನಿರ್ದೇಶನ ನೀಡಲಾಗಿದೆ 2024- 25ರ ಶೈಕ್ಷಣಿಕ ವರ್ಷದಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು (ಡಿಎಸ್‍ಇಎಲ್) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಸ್ಪೋಕನ್ ಇಂಗ್ಲಿಷ್ ತರಗತಿಗಳನ್ನು ಪರಿಚಯಿಸಲಿದೆ. 40 ನಿಮಿಷಗಳ ಸ್ಪೋಕನ್ ಇಂಗ್ಲಿಷ್ ತರಗತಿಯನ್ನು ಪ್ರತಿ ಶನಿವಾರ […]

ಸ್ಪೋಕನ್ ಇಂಗ್ಲಿಷ್ ಕ್ಲಾಸ್/ ಸರ್ಕಾರಿ ಶಾಲೆಗಳಲ್ಲಿ ಶುರುವಾದ ತಯಾರಿ Read More »

ಮೇ.29:ಇಂದಿನಿಂದ ಶಾಲಾರಂಭ| ಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ

ಸಮಗ್ರ ನ್ಯೂಸ್: ಇಂದಿನಿಂದ ರಾಜ್ಯದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನರಾರಂಭವಾಗುತ್ತಿದ್ದು, 31 ರಂದು ರಾಜ್ಯದ ಎಲ್ಲ ಶಾಲೆಗಳಲ್ಲೂ ಏಕಕಾಲಕ್ಕೆ ಪ್ರಾರಂಭೋತ್ಸವ ಹಮ್ಮಿಕೊಳ್ಳಲಾಗಿದೆ. 2024-25ನೇ ಸಾಲಿನ ಶಿಕ್ಷಣವನ್ನು ʼಶೈಕ್ಷಣಿಕ ಬಲವರ್ಧನೆʼ ಪರಿಕಲ್ಪನೆಯ ಆಧಾರದಲ್ಲಿ ನಿರ್ವಹಿಸಲು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಘೋಷವಾಕ್ಯ ಸಿದ್ಧಪಡಿಸಿದ್ದು, ಕಲಿಕಾ ಗುಣಮಟ್ಟ ಹಾಗೂ ತಂತ್ರಜ್ಞಾನ ಆಧಾರಿತ ಬೋಧನೆಗೆ ಹೆಚ್ಚಿನ ಒತ್ತು ನೀಡಲು ರಾಜ್ಯ ಸರ್ಕಾರ ಸೂಚಿಸಿದೆ. ಶಾಲಾ ಮಕ್ಕಳಿಗೆ ಮೊದಲ ದಿನದಿಂದಲೇ ಪಠ್ಯಪುಸ್ತಕ, ಎರಡು ಜೊತೆ ಸಮವಸ್ತ್ರ ವಿತರಿಸಲಾಗುತ್ತದೆ. ಇದೇ ಮೊದಲ ಬಾರಿ

ಮೇ.29:ಇಂದಿನಿಂದ ಶಾಲಾರಂಭ| ಮೇ.31ಕ್ಕೆ ಶಾಲಾ ಪ್ರಾರಂಭೋತ್ಸವ Read More »

ಎಸ್ಎಸ್ಎಲ್ ಸಿ ಪರೀಕ್ಷೆ -2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಜೂನ್.14ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಪ್ರಾರಂಭಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದಂತ ಎನ್ ಮಂಜುಶ್ರೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅದರಲ್ಲಿ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2ನ್ನು ದಿನಾಂಕ:07-06-2024 ರಿಂದ 14-06-2024 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು, ಸದರಿ ಪರೀಕ್ಷೆ-2ನ್ನು ಮುಂದೂಡಿ

ಎಸ್ಎಸ್ಎಲ್ ಸಿ ಪರೀಕ್ಷೆ -2 ಪರಿಷ್ಕೃತ ವೇಳಾಪಟ್ಟಿ ಪ್ರಕಟ Read More »

ಎಲ್ಲರಿಗೂ ಡಿಸ್ಟಿಂಕ್ಷನ್ ಬರೋದೇ ಸಾಧನೆ ಆದ್ರೆ, ಈ ‘ಬ್ರೂಸ್ಲಿ’ ಪಾಸಾಗಿದ್ದೇ ಗೆಳೆಯರಿಗೆ ಸಂಭ್ರಮ! ಬ್ಯಾನರ್ ಹಾಕಿ ಖುಷಿ ಹಂಚಿಕೊಂಡ ಪ್ರೆಂಡ್ಸು

ಸಮಗ್ರ ನ್ಯೂಸ್: ಕೆಲವರಿಗೆ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದರೆ ಸಾಧನೆ, ಇನ್ನು ಕೆಲವರಿಗೆ ತೇರ್ಗಡೆಯಾದರೆ ಅದೇ ಸಾಧನೆ. ನಿಜದ ಅರ್ಥದಲ್ಲಿ ಎರಡೂ ಸಂಭ್ರಮವೇ, ಆದ್ಯತೆಯೆ ಬೇರೆ. ಕುಡುಪಿನ ಮಂಗಳಾನಗರದಲ್ಲಿ ಇಂಥದ್ದೇ ಒಂದು ಅಪರೂಪದ ಸಂಭ್ರಮಾಚರಣೆ ನಡೆದಿದೆ. ಇತ್ತೀಚಿನ ಎಸ್‌ಎಸ್‌ ಎಲ್‌ ಸಿ ಪರೀಕ್ಷೆಯಲ್ಲಿ ಪಾಸಾಗಿದ್ದಕ್ಕೇ (ಜಸ್ಟ್‌ ಪಾಸ್‌) ವಿದ್ಯಾರ್ಥಿಯೋರ್ವನಿಗೆ ಯುವ ಫ್ರೆಂಡ್ಸ್‌ನ ಗೆಳೆಯರು ಹಿತೈಷಿಗಳು ಸೇರಿ ಬ್ಯಾನರ್‌ ಹಾಕಿ ಅಭಿನಂದಿಸಿದ್ದಾರೆ. ಬ್ಯಾನರ್‌ ಹೀಗಿದೆ ನೋಡಿ : ವಿದ್ಯಾರ್ಥಿಯ ಫೋಟೋ ಇರುವ ಬ್ಯಾನರ್‌ನಲ್ಲಿ ಆತನಿಗೆ ಅಭಿನಂದನೆಗಳನ್ನು ಸಲ್ಲಿಸಿ ಪಕ್ಕದಲ್ಲೇ

ಎಲ್ಲರಿಗೂ ಡಿಸ್ಟಿಂಕ್ಷನ್ ಬರೋದೇ ಸಾಧನೆ ಆದ್ರೆ, ಈ ‘ಬ್ರೂಸ್ಲಿ’ ಪಾಸಾಗಿದ್ದೇ ಗೆಳೆಯರಿಗೆ ಸಂಭ್ರಮ! ಬ್ಯಾನರ್ ಹಾಕಿ ಖುಷಿ ಹಂಚಿಕೊಂಡ ಪ್ರೆಂಡ್ಸು Read More »

ಎನ್.ಡಿ.ಎ/ಎನ್.ಎ-1 ಲಿಖಿತ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ 4 ವಿದ್ಯಾರ್ಥಿಗಳು ಆಯ್ಕೆ

ಸಮಗ್ರ ನ್ಯೂಸ್: ನ್ಯಾಶನಲ್ ಡಿಫೆನ್ಸ್ ಅಕಾಡೆಮಿ ಹಾಗೂ ನೇವಲ್ ಅಕಾಡೆಮಿಯವರು ಎ. 21ರಂದು ನಡೆಸಿದ ಅತ್ಯಂತ ಕಠಿಣಕರವಾದ ಎನ್.ಡಿ.ಎ ಅರ್ಹತಾ ಪರೀಕ್ಷೆಯಲ್ಲಿ ಕಾರ್ಕಳದ ಕ್ರಿಯೇಟಿವ್ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ನ್ಯಾಶನಲ್ ಡಿಫೆನ್ಸ್ ಅಕಾಡೆಮಿಯವರು ನಡೆಸುವ ರಾಷ್ಟ್ರಮಟ್ಟದ ಅತೀ ಕಷ್ಟಕರವಾದ ಪರೀಕ್ಷೆ ಇದಾಗಿದ್ದು ಕ್ರಿಯೇಟಿವ್ ವಿದ್ಯಾರ್ಥಿ ನೇಹಾ ಕೆ. ಉದಪುಡಿ, ಸುಧೀಶ್ ಕೆ.ಆರ್. ಶೆಟ್ಟಿ, ಸುಜಿತ್ ಡಿ.ಕೆ., ವರ್ಷ ಹೆಚ್.ವಿ. ಲಿಖಿತ ಪರೀಕ್ಷೆಯಲ್ಲಿ ತೆರ್ಗಡೆಯಾಗುವ ಮೂಲಕ ಮುಂದಿನ ಹಂತದ ಪರೀಕ್ಷೆಗೆ ಅರ್ಹತೆ ಪಡೆದಿರುತ್ತಾರೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕ್ರಿಯೇಟಿವ್

ಎನ್.ಡಿ.ಎ/ಎನ್.ಎ-1 ಲಿಖಿತ ಪರೀಕ್ಷೆಯಲ್ಲಿ ಕ್ರಿಯೇಟಿವ್ ಪಿಯು ಕಾಲೇಜಿನ 4 ವಿದ್ಯಾರ್ಥಿಗಳು ಆಯ್ಕೆ Read More »

ಎಸ್ಎಸ್ ಎಲ್ ಸಿ ಫಲಿತಾಂಶ| ರೈತನ ಮಗ ರಾಜ್ಯಕ್ಕೆ ದ್ವಿತೀಯ

ಸಮಗ್ರ ನ್ಯೂಸ್: ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಶೇಡಬಾಳ ಗ್ರಾಮದ ಸಿದ್ದಾಂತ ನಾಯಿಕಬಾ ಗಡಗೆ ಅವರು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಹಾರಾಷ್ಟ್ರ ಗಡಿಗೆ ಹೊಂದಿಕೊಂಡ ಶೇಡಬಾಳದ ಆಚಾರ್ಯ ಸುಬಲಸಾಗರ ಫ್ರೌಢ ವಿದ್ಯಾಮಂದಿರದ ಈ ವಿದ್ಯಾರ್ಥಿ ರೈತನ ಮಗ. ಇಂಗ್ಲಿಷ್ ನಲ್ಲಿ 99 ಪಡೆದಿದ್ದು ಉಳಿದೆಲ್ಲ ವಿಷಯಗಳಿಗೂ ಸಂಪೂರ್ಣ ಅಂಕಗಳನ್ನು ಬಾಚಿಕೊಂಡಿದ್ದಾರೆ

ಎಸ್ಎಸ್ ಎಲ್ ಸಿ ಫಲಿತಾಂಶ| ರೈತನ ಮಗ ರಾಜ್ಯಕ್ಕೆ ದ್ವಿತೀಯ Read More »

ಎಸ್ಎಸ್ಎಲ್ ಸಿ‌ ಫಲಿತಾಂಶ| 625/625; ಈಕೆ ರಾಜ್ಯಕ್ಕೆ ಟಾಪರ್| ಯಾರಿವಳು ಬಾಲೆ!?

ಸಮಗ್ರ ನ್ಯೂಸ್: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು 625ಕ್ಕೆ 625 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಬನಶಂಕರಿಯ ಹೋಲಿ ಚೈಲ್ಡ್ ಇಂಗ್ಲೀಷ್ ಪ್ರೌಢಶಾಲೆಯ ಮೇಧಾ ಶೆಟ್ಟಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ತುಮಕೂರಿನ ಶಿರಾದ ಶ್ರೀವಾಸವಿ ಇಂಗ್ಲೀಷ್ ಪ್ರೌಢಶಾಲೆಯ ಹರ್ಷಿತಾ ಡಿಎಂ, ಚಿನ್ಮಯ್ (ದಕ್ಷಿಣ ಕನ್ನಡ) ಸಿದ್ದಾಂತ್ (ಚಿಕ್ಕೊಡಿ ), ದರ್ಶನ್

ಎಸ್ಎಸ್ಎಲ್ ಸಿ‌ ಫಲಿತಾಂಶ| 625/625; ಈಕೆ ರಾಜ್ಯಕ್ಕೆ ಟಾಪರ್| ಯಾರಿವಳು ಬಾಲೆ!? Read More »

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ| ಉಡುಪಿ ಪ್ರಥಮ, ದ.ಕ ದ್ವಿತೀಯ

ಸಮಗ್ರ ನ್ಯೂಸ್: 2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಉಡುಪಿ ಜಿಲ್ಲೆ ಫಲಿತಾಂಶದಲ್ಲಿ ಪ್ರಥಮ ಸ್ಥಾನವನ್ನು ಶೇಕಡ 94 ರೊಂದಿಗೆ ಪಡೆದುಕೊಂಡಿದೆ. ದ. ಕನ್ನಡ ಜಿಲ್ಲೆಗೆ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದೆ. ಅದು ಶೇ 92.12 ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ ಪಡೆದುಕೊಂಡಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದ್ದಾರೆ. ಓರ್ವ ವಿದ್ಯಾರ್ಥಿನಿ

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ| ಉಡುಪಿ ಪ್ರಥಮ, ದ.ಕ ದ್ವಿತೀಯ Read More »

ಕರ್ನಾಟಕದಲ್ಲಿ ಪದವಿ ತರಗತಿ ಮೂರು ವರ್ಷಕ್ಕಷ್ಟೇ ಸೀಮಿತ| ಎನ್ಇಪಿ ಶಿಫಾರಸು ಕೋರ್ಸ್ ರದ್ದುಪಡಿಸಿದ‌ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಶಿಫಾರಸು ಮಾಡಿದ ಎನ್‌ಇಪಿ – 2020 ಅನ್ನು ಕರ್ನಾಟಕ ಸರ್ಕಾರ ಬುಧವಾರ ರದ್ದುಗೊಳಿಸಿದೆ. 2024-25ರ ಶೈಕ್ಷಣಿಕ ವರ್ಷಕ್ಕೆ ಮೂರು ವರ್ಷಗಳ ಪದವಿ ಕಾರ್ಯಕ್ರಮವನ್ನು ಮತ್ತೆ ಪರಿಚಯಿಸಲಾಗಿದೆ. ಎನ್‌ಇಪಿ ಪ್ರಕಾರ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಮುಂದುವರಿಸುವಲ್ಲಿ ಸ್ಪಷ್ಟತೆಯ ಕೊರತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಪ್ರೊಫೆಸರ್ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ

ಕರ್ನಾಟಕದಲ್ಲಿ ಪದವಿ ತರಗತಿ ಮೂರು ವರ್ಷಕ್ಕಷ್ಟೇ ಸೀಮಿತ| ಎನ್ಇಪಿ ಶಿಫಾರಸು ಕೋರ್ಸ್ ರದ್ದುಪಡಿಸಿದ‌ ರಾಜ್ಯ ಸರ್ಕಾರ Read More »

ಮೇ 20 ರ ಬಳಿಕ 10 ಮತ್ತು 12ನೇ ತರಗತಿ ಪರೀಕ್ಷಾ ಫಲಿತಾಂಶ/ ಖಚಿತಪಡಿಸಿದ ಸಿಬಿಎಸ್ಇ ಬೋರ್ಡ್

ಸಮಗ್ರ ನ್ಯೂಸ್: 10 ಮತ್ತು 12ನೇ ತರಗತಿ ಪರೀಕ್ಷೆಗಳ ಫಲಿತಾಂಶವನ್ನು ಮೇ. 20ರ ಬಳಿಕ ಪ್ರಕಟ ಮಾಡುತ್ತೇವೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್ಇ) ತಿಳಿಸಿದೆ. ಈ ಮೊದಲು ಇದೇ ವಿಚಾರವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವರು ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಹೀಗಾಗಿ ಪೋಷಕರು ಮತ್ತು ವಿದ್ಯಾರ್ಥಿಗಳು ತಲೆಕೆಡಿಸಿಕೊಳ್ಳಬಾರದು ಎಂದು ವೆಬ್‌ಸೈಟ್‌ನಲ್ಲಿ ತಿಳಿಸಿದೆ. ಸಿಬಿಎಸ್ಇ ಬೋರ್ಡ್ ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದ್ದು, 10 ಮತ್ತು 12 ನೇ ಬೋರ್ಡ್ ಪರೀಕ್ಷೆಗಳ ಫಲಿತಾಂಶ ಮೇ 20ರ

ಮೇ 20 ರ ಬಳಿಕ 10 ಮತ್ತು 12ನೇ ತರಗತಿ ಪರೀಕ್ಷಾ ಫಲಿತಾಂಶ/ ಖಚಿತಪಡಿಸಿದ ಸಿಬಿಎಸ್ಇ ಬೋರ್ಡ್ Read More »