ರಾಷ್ಟ್ರೀಯ

ಪಾಕ್ ಪರ ಘೋಷಣೆ ಕೂಗಿದ ಇಬ್ಬರು ಅರೆಸ್ಟ್

ಸಮಗ್ರ ನ್ಯೂಸ್: ಪಾಕಿಸ್ತಾನ​ ಪರ ಘೋಷಣೆ ಕೂಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇನಾಯತ್​ವುಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಬಂಧಿತ ಆರೋಪಿಗಳು. ಬೆಂಗಳೂರಿನ ಜೆಪಿ ನಗರದ ಪಬ್‌ವೊಂದರಲ್ಲಿ ಭಾರತ-ಆಸ್ಟ್ರೇಲಿಯಾ ತಂಡದ ನಡುವೆ ಟಿ20 ಪಂದ್ಯ ವೀಕ್ಷಣೆ ಮಾಡುತ್ತಿದ್ದ ವೇಳೆ ಇಬ್ಬರು ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು. ಘಟನೆಗೆ ಸಂಬಂಧಿಸಿ ಪಬ್​ನಲ್ಲಿದ್ದವರು ಜೆ.ಪಿ.ನಗರ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇನಾಯತ್​ವುಲ್ಲಾ ಖಾನ್, ಸೈಯದ್ ಮುಬಾರಕ್​ನನ್ನು ಬಂಧಿಸಿದ್ದಾರೆ. […]

ಪಾಕ್ ಪರ ಘೋಷಣೆ ಕೂಗಿದ ಇಬ್ಬರು ಅರೆಸ್ಟ್ Read More »

ಮಾರ್ಯದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.15ಕ್ಕೆ ಸಿದ್ದ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಒಂದು ತಿಂಗಳ ಮುಂಚೆಯೇ ಮೊದಲ ಹಂತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ. 15ರೊಳಗೆ ಸಿದ್ಧಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ವಿಮಾನ ನಿಲ್ದಾಣವನ್ನು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌’ ಎಂದು ಕರೆಯಲಾಗುವುದು. ಬೋಯಿಂಗ್ 737, ಏರ್‌ಬಸ್ 319 ಮತ್ತು ಏರ್‌ಬಸ್ 320 ವಿಮಾನಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರೊಂದಿಗೆ

ಮಾರ್ಯದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.15ಕ್ಕೆ ಸಿದ್ದ Read More »

ಡಿ.4ರಿಂದ ಸಂಸತ್ ನ ಚಳಿಗಾಲದ ಅಧಿವೇಶನ| ಇಂದು ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಸಮಗ್ರ ನ್ಯೂಸ್: ಡಿಸೆಂಬರ್ 4ರಂದು ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇಂದು(ಡಿ.2) ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಚಳಿಗಾಲ ಅಧಿವೇಶನ ಡಿಸೆಂಬರ್ 22ಕ್ಕೆ ಮುಕ್ತಾಯವಾಗಲಿದೆ. ನಾಳೆ(ಡಿ.3) ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು ಹೀಗಾಗಿ ಇಂದು ಸರ್ವಪಕ್ಷ ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಒಟ್ಟು ೧೫ ದಿನಗಳ ಕಲಾಪ ನಡೆಯಲಿದ್ದು, ಡಿಸೆಂಬರ್ ೨೨ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ. ಸಂಸತ್ತಿನಲ್ಲಿ ರಚನಾತ್ಮಕ ಚರ್ಚೆ ನಡೆಸಲು

ಡಿ.4ರಿಂದ ಸಂಸತ್ ನ ಚಳಿಗಾಲದ ಅಧಿವೇಶನ| ಇಂದು ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ Read More »

ಮಿಜೋರಾಂ ವಿಧಾನಸಭಾ ಚುನಾವಣೆ/ ಡಿಸೆಂಬರ್ 4ಕ್ಕೆ ಮುಂದೂಡಿದ ಮತ ಎಣಿಕೆ

ಸಮಗ್ರ ನ್ಯೂಸ್: ಪಂಚರಾಜ್ಯಗಳ ಪೈಕಿ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನಾಂಕವನ್ನು ಡಿಸೆಂಬರ್ 3ರಿಂದ ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಡ ಮತ್ತು ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರವೇ ಹೊರಬೀಳಲಿದೆ. ಮಿಜೋರಾಂ ರಾಜ್ಯದಲ್ಲಿ ಕ್ರೈಸ್ತ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಭಾನುವಾರ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದು, ಆ ದಿನ ವಿಶೇಷ ಪ್ರಾರ್ಥನೆ ನಡೆಯಲಿದೆ. ಹೀಗಾಗಿ ವಿವಿಧ ವಲಯಗಳಿಂದ ಬಂದ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು

ಮಿಜೋರಾಂ ವಿಧಾನಸಭಾ ಚುನಾವಣೆ/ ಡಿಸೆಂಬರ್ 4ಕ್ಕೆ ಮುಂದೂಡಿದ ಮತ ಎಣಿಕೆ Read More »

ವಿದೇಶಿ ಆತಿಥ್ಯ ಸ್ವೀಕಾರ/ ಸಂಸದರಿಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ

ಸಮಗ್ರ ನ್ಯೂಸ್: ಭಾರತದ ಸಂಸತ್ತಿನ ಸದಸ್ಯರು ಖಾಸಗಿಯಾಗಿ ವಿದೇಶಗಳಿಗೆ ತೆರಳಿದ ಸಂದರ್ಭಗಳಲ್ಲಿ, ಅಲ್ಲಿನ ಆತಿಥ್ಯ ಸ್ವೀಕರಿಸುವ ಮುನ್ನ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಹಾಗೇಯೇ ಸರ್ಕಾರದ ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ರಾಜ್ಯಸಭಾ ಸಚಿವಾಲಯ ಆದೇಶ ಹೊರಡಿಸಿದೆ. ವಿದೇಶಗಳಿಂದ ಬರುವ ಆಹ್ವಾನವನ್ನು ಕಡ್ಡಾಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರಬೇಕು ಸಂಸದರಾಗಿ ತಾವು ನಿರ್ವಹಿಸಬೇಕಿರುವ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿ ಉಂಟುಮಾಡಬಹುದಾದ ಉಡುಗೊರೆಗಳನ್ನು ಪಡೆಯಬಾರದು. ಸಂಸದರು ನೀತಿಸಂಹಿತೆ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ವಿದೇಶಿ ಆತಿಥ್ಯ ಸ್ವೀಕಾರ/ ಸಂಸದರಿಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ Read More »

ಜ್ಞಾನವಾಪಿ ಮಸೀದಿ/ ವರದಿ ಸಲ್ಲಿಸಲು 10 ದಿನಗಳ ಅವಕಾಶ ನೀಡಿದ ಕೋರ್ಟ್

ಸಮಗ್ರ ನ್ಯೂಸ್: ನ್ಯಾಯಾಲಯವು ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಿದೆ. ವೈಜ್ಞಾನಿಕ ಸಮೀಕ್ಷೆಯ ವರದಿಯು ಒಂದು ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಅದನ್ನು ಕೋರ್ಟ್ ಗೆ ಸಲ್ಲಿಸಲು ಪುರಾತತ್ವ ಸಂಸ್ಥೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ನಾಲ್ಕನೇ ಬಾರಿಗೆ ವಿಸ್ತರಣೆಯಾಗಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ 21 ದಿನಗಳ ಕಾಲಾವಕಾಶ ಕೋರಿದ್ದು, ಇದನ್ನು ಮಸೀದಿ ಸಮಿತಿ ವಿರೋಧಿಸಿತ್ತು. ಸಧ್ಯ ನ್ಯಾಯಾಲಯ ಇನ್ನೂ

ಜ್ಞಾನವಾಪಿ ಮಸೀದಿ/ ವರದಿ ಸಲ್ಲಿಸಲು 10 ದಿನಗಳ ಅವಕಾಶ ನೀಡಿದ ಕೋರ್ಟ್ Read More »

ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರು

ಸಮಗ್ರ ನ್ಯೂಸ್: ಉತ್ತರಕಾಶಿಯ ಸಿಲ್ಕ್ಯಾರಾ-ಬರ್ಕೋಟ್ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರನ್ನು ಹೊರತೆಗೆಯಲು ಎಲ್ಲ ರೀತಿಯ ಕಾರ್ಯಚರಣೆ ನಡೆಸಲಾಗಿದ್ದು, ಇದೀಗ ಎಲ್ಲ ಕಾರ್ಮಿಕರು ಸುರಕ್ಷಿತವಾಗಿ ಕೆಲವೇ ಕ್ಷಣದಲ್ಲಿ ಹೊರಬರಲಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ರಕ್ಷಣಾ ತಂಡ ತನ್ನ ಕಾರ್ಯವನ್ನು ಮುಂದುವರಿಸಿದ್ದು, ಕಾರ್ಮಿಕರನ್ನು ರಕ್ಷಣೆ ಮಾಡಲಿದೆ ಎಂದು ಎನ್​​ಡಿಆರ್​​ಎಫ್​​​​ ಹೇಳಿದೆ. ಸುರಂಗದ ಒಳಗೆ ಎನ್​​​ಡಿಆರ್​ಎಫ್​​​​ ತಂಡ ಕೂಡ ಈಗಾಗಲೇ ಹೋಗಿದೆ. ಸ್ಥಳದಲ್ಲಿ ಆರೋಗ್ಯ ಸಿಬ್ಬಂದಿಗಳು ಧಾವಿಸಿದ್ದು, ಆಸ್ಪತ್ರೆಗೆ ಸಾಗಿಸಲು ಆಂಬ್ಯುಲೆನ್ಸ್‌ ವ್ಯವಸ್ಥೆಗಳನ್ನು ಕೂಡ ಮಾಡಲಾಗಿದೆ.ಇಲ್ಲಿ41 ಕಾರ್ಮಿಕರಿಗೆ 41 ಆಂಬುಲೆನ್ಸ್ ವ್ಯವಸ್ಥೆ

ಕೆಲವೇ ಕ್ಷಣಗಳಲ್ಲಿ ಹೊರಬರಲಿದ್ದಾರೆ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರು Read More »

ಕೇವಲ 60 ಸಾವಿರಕ್ಕೆ iPhone 14 ಪರ್ಚೇಸ್ ಮಾಡ್ಬೋದು! ಇಲ್ಲಿದೆ ಬಿಗ್ ಆಫರ್

ಆಪಲ್ ಕಂಪನಿಯ ಐಫೋನ್‌ಗಳನ್ನು ಅನೇಕ ಜನರು ಇಷ್ಟಪಡುತ್ತಾರೆ. ಈ ಸ್ಮಾರ್ಟ್‌ಫೋನ್‌ನ ವಿನ್ಯಾಸ, ಕಾರ್ಯಕ್ಷಮತೆ, ಕ್ಯಾಮೆರಾ ಮತ್ತು ವೈಶಿಷ್ಟ್ಯಗಳು ಅದನ್ನು ಖರೀದಿಸಲು ಆಸಕ್ತಿಯನ್ನು ತೋರಿಸುತ್ತವೆ. ಹೆಚ್ಚಿನ ಬೆಲೆಯ ಕಾರಣದಿಂದಾಗಿ ಪ್ರತಿಯೊಬ್ಬರೂ ಈ ಪ್ರಮುಖ ಸಾಧನವನ್ನು ಹೊಂದಲು ಸಾಧ್ಯವಿಲ್ಲ. ಕೆಲವರು ಉತ್ತಮ ಡೀಲ್‌ಗಳು ಮತ್ತು ರಿಯಾಯಿತಿ ಬೆಲೆಗಳಿಗಾಗಿ ಕಾಯುತ್ತಾರೆ. ನೀವು ಈ ಪಟ್ಟಿಯಲ್ಲಿ ಇದ್ದೀರಾ? ಈ ತಿಂಗಳ ಆರಂಭದಲ್ಲಿ ಹಬ್ಬದ ಮಾರಾಟದಲ್ಲಿ iPhone 14 ಒಪ್ಪಂದವನ್ನು ಪಡೆಯಲು ಸಾಧ್ಯವಾಗಲಿಲ್ಲವೇ? ಆದರೆ ನಿಮಗೆ ಒಳ್ಳೆಯ ಸುದ್ದಿ. ಅತ್ಯಂತ ಕಡಿಮೆ ಬೆಲೆಯಲ್ಲಿ ಐಫೋನ್

ಕೇವಲ 60 ಸಾವಿರಕ್ಕೆ iPhone 14 ಪರ್ಚೇಸ್ ಮಾಡ್ಬೋದು! ಇಲ್ಲಿದೆ ಬಿಗ್ ಆಫರ್ Read More »

ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ

ಸಮಗ್ರ ನ್ಯೂಸ್:ಕಾರಿನಲ್ಲಿ ದೂರ ಪ್ರಯಾಣಿಸುವಾಗ ಆ ಪ್ರಯಾಣ ನಮಗೆ ಆರಾಮದಾಯಕವಾಗಿರಬೇಕೆಂದು ಬಯಸುತ್ತೇವೆ. ಈ ಆರಾಮದಾಯಕ ಪ್ರಯಾಣಕ್ಕಾಗಿ ಕಾರಿನ ಇಡೀ ಅವಸ್ಥೆಯ ಬಗ್ಗೆ ಒಮ್ಮೆ ಯೋಚಿಸುತ್ತೇವೆ ಮತ್ತು ಅದರಲ್ಲಿ ಏನಾದರೂ ಕೊರತೆ ಇದ್ದರೆ, ಮೊದಲು ಮೆಕ್ಯಾನಿಕ್ ಬಳಿ ಅದನ್ನು ಒಯ್ದು ಸರಿಪಡಿಸಿಕೊಂಡು ಬರುತ್ತೇವೆ. ಹೀಗೆ ಸರಿಪಡಿಸಿಕೊಳ್ಳುವ ಅನೇಕ ವಿಷಯಗಳಲ್ಲಿ ಕಾರಿನ ಸ್ಟೇರಿಂಗ್, ಚಕ್ರಗಳು(Wheels) ಮತ್ತು ಕುಳಿತುಕೊಳ್ಳುವ ಆಸನಗಳು ಸರಿಯಾಗಿರುವುದು ಸಹ ತುಂಬಾನೇ ಮುಖ್ಯವಾಗುತ್ತದೆ. ಹೌದು, ನಿಮ್ಮ ಕಾರಿನ ಸ್ಟೇರಿಂಗ್ ವೀಲ್ ಮತ್ತು ಸೀಟಿನ ಸರಿಯಾದ ಹೊಂದಾಣಿಕೆಯು ನಿಮ್ಮ ಡ್ರೈವಿಂಗ್

ಕಾರ್ ಡ್ರೈವ್ ಸಮಯದಲ್ಲಿ ಆರಾಮದಾಯಕ ಪ್ರಯಾಣಕ್ಕೆ ಈ ಟಿಪ್ಸ್ ಫಾಲೋ ಮಾಡಿ Read More »

ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿದೆ ಎಲೆಕ್ಟ್ರಿಕ್ ಸ್ಕೂಟರ್‌! ಸೂಪರ್​ ಮೈಲೇಜ್​ ಕೊಡುತ್ತೆ ಕೂಡ

ಈ ಪಟ್ಟಿಯಲ್ಲಿರುವ ಅತಿ ಹೆಚ್ಚು ಶ್ರೇಣಿಯ ಸ್ಕೂಟರ್ ಸಿಂಪಲ್ ಒನ್ ಆಗಿದೆ, ಇದು ಒಂದೇ ಚಾರ್ಜ್‌ನಲ್ಲಿ 212 ಕಿಮೀ ವ್ಯಾಪ್ತಿಯನ್ನು (ಮೈಲೇಜ್) ನೀಡುತ್ತದೆ. ಇದು 5kWh ಬ್ಯಾಟರಿ ಪ್ಯಾಕ್ ಅನ್ನು ಬಳಸುತ್ತದೆ. ನೀವು ಇದನ್ನು ರೂ.1.45 ಲಕ್ಷದ ಆರಂಭಿಕ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಸಬಹುದು. Ola S1 Pro ಸ್ಕೂಟರ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಫುಲ್ ಚಾರ್ಜ್‌ನಲ್ಲಿ 181 ಕಿಲೋಮೀಟರ್ ರೇಂಜ್ ನೀಡಬಲ್ಲದು. ಈ ಎಲೆಕ್ಟ್ರಿಕ್ ಸ್ಕೂಟರ್ 4 kWh ಸಾಮರ್ಥ್ಯದ

ಅತೀ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂದಿದೆ ಎಲೆಕ್ಟ್ರಿಕ್ ಸ್ಕೂಟರ್‌! ಸೂಪರ್​ ಮೈಲೇಜ್​ ಕೊಡುತ್ತೆ ಕೂಡ Read More »