ರಾಷ್ಟ್ರೀಯ

ಹೊಸ ಚುನಾವಣಾ ಆಯುಕ್ತರ ನೇಮಕ/ ಅಡ್ಡಿ ಮಾಡಲಿದೆಯೇ ಸುಪ್ರೀಂ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಘೋಷಣೆಯಾಗಲು ಕೆಲವೇ ದಿನಗಳು ಇರುವಾಗ, ಇಬ್ಬರು ಹೊಸ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಕೇಂದ್ರ ಸರ್ಕಾರದ ಸಿದ್ಧತೆಗೆ ಸುಪ್ರೀಂಕೋರ್ಟ್‍ನಲ್ಲಿ ಹಿನ್ನಡೆಯಾಗುವ ಆತಂಕ ಎದುರಾಗಿದೆ. 2023ರ ಹೊಸ ಕಾಯ್ದೆಯ ಪ್ರಕಾರ ಕೇಂದ್ರ ಚುನಾವಣಾ ಆಯುಕ್ತರನ್ನು ನೇಮಕಗೊಳಿಸುವ ಪ್ರಕ್ರಿಯೆಯ ವಿರುದ್ಧ ಸಲ್ಲಿಕೆಯಾದ ಅರ್ಜಿಯ ವಿಚಾರಣೆ ಬಾಕಿಯಿರುವಾಗಲೇ ಕೇಂದ್ರ ಸರ್ಕಾರ ಆ ಕಾಯ್ದೆಯ ಪ್ರಕಾರ ಹೊಸ ಚುನಾವಣಾ ಆಯುಕ್ತರನ್ನು ನೇಮಿಸಲು ಮುಂದಾಗಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ಮುಖಂಡರೊಬ್ಬರು ಸಲ್ಲಿಸಿದ ಮನವಿಯನ್ನು ವಿಚಾರಣೆಗೆ ಅಂಗೀಕರಿಸಲು ಸುಪ್ರೀಂಕೋರ್ಟ್ ಒಲವು ತೋರಿದೆ. […]

ಹೊಸ ಚುನಾವಣಾ ಆಯುಕ್ತರ ನೇಮಕ/ ಅಡ್ಡಿ ಮಾಡಲಿದೆಯೇ ಸುಪ್ರೀಂ Read More »

ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ/ ಇಸ್ರೋದಿಂದ ಎರಡು ರಾಕೆಟ್ ಬಳಕೆ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ಇಸ್ರೋ ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ ಹೊಂದಿರುವ ತನ್ನ ಮಹತ್ವಕಾಂಕ್ಷೆ ಯೋಜನೆಗೆ 2 ರಾಕೆಟ್‍ಗಳನ್ನು ಬಳಸಲಿದೆ. ಒಂದೇ ಯೋಜನೆಗೆ ಎರಡು ರಾಕೆಟ್ ಬಳಕೆ ಇಸ್ರೋ ಇತಿಹಾಸದಲ್ಲೇ ಮೊದಲು ಆಗಿದೆ. ಚಂದ್ರಯಾನ 4 ಯೋಜನೆಯಲ್ಲಿ ಅತ್ಯಂತ ತೂಕದ ಉಪಗ್ರಹ ಹೊತ್ತೊಯ್ಯಬಲ್ಲ ಎಲ್‍ವಿಎಂ-3 ಮತ್ತು ಇಸ್ರೋದ ಅತ್ಯಂತ ಯಶಸ್ವಿ ರಾಕೆಟ್‍ಗಳ ಪೈಕಿ ಒಂದಾದ ಪಿಎಸ್‍ಎಲ್‍ವಿ ಅನ್ನು ಎರಡು ಪ್ರತ್ಯೇಕ ದಿನಗಳಂದು ಹಾರಿಬಿಡಲಾಗುವುದು. ಇಸ್ರೋದ ಈ ಯೋಜನೆ ಯಶಸ್ವಿಯಾದಲ್ಲಿ ಚಂದ್ರನಿಂದ

ಚಂದ್ರನ ಮೇಲಿನ ಕಲ್ಲನ್ನು ಭೂಮಿಗೆ ತರುವ ಉದ್ದೇಶ/ ಇಸ್ರೋದಿಂದ ಎರಡು ರಾಕೆಟ್ ಬಳಕೆ Read More »

10 ಹೊಸ ವಂದೇ ಭಾರತ್ ರೈಲುಗಳು ಇಂದು ಪ್ರಧಾನಿ ಮೋದಿ ಚಾಲನೆ

ಸಮಗ್ರ ನ್ಯೂಸ್: ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್​​​ನ ಅಹಮದಾಬಾದ್‌ನಲ್ಲಿ 10 ಹೊಸ ವಂದೇ ಭಾರತ್ ರೈಲುಗಳು ಮತ್ತು ಇತರ ರೈಲು ಸೇವೆಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ. ಇನ್ನು ಪ್ರಧಾನಿ ಮೋದಿ ರಾಜ್ಯದಲ್ಲಿ ರೈಲ್ವೆ ಮೂಲಸೌಕರ್ಯ , ಸಂಪರ್ಕ ಮತ್ತು ಪೆಟ್ರೋಕೆಮಿಕಲ್ ವಲಯವನ್ನು ಉತ್ತೇಜಿಸುವ ಸಲುವಾಗಿದೆ. ರೈಲ್ವೆ ವರ್ಕ್‌ಶಾಪ್‌ಗಳು, ಲೋಕೋ ಶೆಡ್‌ಗಳು ಮತ್ತು ಪಿಟ್‌ಲೈನ್‌ಗಳು/ಕೋಚಿಂಗ್ ಡಿಪೋಗಳು ಸೇರಿದಂತೆ ವಿವಿಧ ರೈಲ್ವೆ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದ್ದಾರೆ. ಮೋದಿ ಅವರು ಫಾಲ್ಟನ್-ಬಾರಾಮತಿ ಹೊಸ ಮಾರ್ಗ, ಎಲೆಕ್ಟ್ರಿಕ್ ಟ್ರಾಕ್ಷನ್ ಸಿಸ್ಟಮ್

10 ಹೊಸ ವಂದೇ ಭಾರತ್ ರೈಲುಗಳು ಇಂದು ಪ್ರಧಾನಿ ಮೋದಿ ಚಾಲನೆ Read More »

ತೆಲುಗು ಹೀರೋಗಳ ಫ್ಯಾನ್ಸ್ ಗಳ ನಡುವೆ ಬಡಿದಾಟ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ತೆಲುಗು ಹೀರೋಗಳ ನಡುವಿನ ಅಭಿಮಾನಿಗಳ ನಡುವೆ ಬಡಿದಾಟ ನಡೆದಿದೆ. ನಟ ಅಲ್ಲು ಅರ್ಜುನ್​ ಮತ್ತು ಪ್ರಭಾಸ್ ಫ್ಯಾನ್ಸ್ ಗಳ ನಡುವೆ ಹೊಡೆದಾಟ ಆಗಿದ್ದು, ಬೆಂಗಳೂರಿನ ಕೆ. ಆರ್. ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವಕರ ನಡುವಿನ ಗಲಾಟೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವ್ಯಕ್ತಿಯೊಬ್ಬರು ವಿಡಿಯೋವನ್ನು ಎಕ್ಸ್​​ನಲ್ಲಿ ಪೋಸ್ಟ್​ ಮಾಡಿ ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ. ಅಲ್ಲು ಬಾಹುಬಲಿ ಖ್ಯಾತಿಯ ನಟ ಪ್ರಭಾಸ್​ ಫ್ಯಾನ್ ಎನ್ನಲಾದ ಓರ್ವ ಯುವಕನಿಗೆ ಅಲ್ಲು

ತೆಲುಗು ಹೀರೋಗಳ ಫ್ಯಾನ್ಸ್ ಗಳ ನಡುವೆ ಬಡಿದಾಟ Read More »

ಆಸ್ಕರ್ ವೇದಿಕೆಗೆ ಬೆತ್ತಲಾಗಿ ಬಂದ ರೆಸ್ಲಿಂಗ್ ಸ್ಟಾರ್ ಜಾನ್ ಸೆನಾ!! ಒಂದು ಲಕೋಟೆಯಿಂದ ‘ಮರ್ಯಾದೆ’ ಮುಚ್ಚಿಕೊಂಡ ನಿರೂಪಕ!

ಸಮಗ್ರ ನ್ಯೂಸ್: 96ನೇ ಸಾಲಿನ ಅಕಾಡೆಮಿ ಪ್ರಶಸ್ತಿ ಮಾರ್ಚ್ 10ರಂದು ನಡೆದಿದೆ. 2024ನೇ ಸಾಲಿನ ಆಸ್ಕರ್ ಪ್ರಶಸ್ತಿ ಮಾರ್ಚ್ 10ರಂದು ಲಾಸ್ ಎಂಜಲೀಸ್‌ನಲ್ಲಿರುವ (Oscars 2024) ಹಾಲಿವುಡ್‌ನ ಡಾಲ್ಬಿ ಥಿಯೇಟರ್‌ನಲ್ಲಿ ನಡೆದಿದ್ದು, ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಮಾರ್ಚ್ 11ರಂದು ಭಾರತದಲ್ಲಿ ಪ್ರಸಾರ ಕಂಡಿದೆ. ಜಾನ್ ಸೆನಾ ಅವರು ಅತ್ಯುತ್ತಮ ವಸ್ತ್ರ ವಿನ್ಯಾಸವನ್ನು ಪ್ರಸ್ತುತಪಡಿಸಲು ವೇದಿಕೆಯ ಮೇಲೆ ಬೆತ್ತಲಾಗಿ ಬಂದರು. ಇವರ ಅವತಾರ ಕಂಡು ನೆರೆದಿದ್ದ ಪ್ರೇಕ್ಷಕರು ಒಂದು ಕ್ಷಣ ಮೂಕಸ್ಮಿತರಾಗಿದ್ದಾರೆ. ಅತ್ಯುತ್ತಮ ವಸ್ತ್ರ ವಿನ್ಯಾಸಕ್ಕಾಗಿ ಪ್ರಶಸ್ತಿಯನ್ನು ನೀಡಲು, ಜಾನ್ ಸೆನಾ

ಆಸ್ಕರ್ ವೇದಿಕೆಗೆ ಬೆತ್ತಲಾಗಿ ಬಂದ ರೆಸ್ಲಿಂಗ್ ಸ್ಟಾರ್ ಜಾನ್ ಸೆನಾ!! ಒಂದು ಲಕೋಟೆಯಿಂದ ‘ಮರ್ಯಾದೆ’ ಮುಚ್ಚಿಕೊಂಡ ನಿರೂಪಕ! Read More »

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ ಭಾರೀ ರಿಯಾಯಿತಿ! ಬೇಗ ಶೋ ರೂಮ್ ಗೆ ಹೋಗಿ

ನೀವು ಎಲೆಕ್ಟ್ರಿಕ್ ಕಾರು ಖರೀದಿಸಲು ಯೋಚಿಸುತ್ತಿದ್ದರೆ, ಇದೀಗ ಸರಿಯಾದ ಸಮಯ. ಟಾಟಾ ಮೋಟಾರ್ಸ್ ರಿಯಾಯಿತಿ ಕೊಡುಗೆಗಳನ್ನು ನೋಡೋಣ. ಮಾರುತಿ ಸುಜುಕಿ ಕಾರುಗಳಿಗೆ ಹೋಲಿಸಿದರೆ ಟಾಟಾ ಮೋಟಾರ್ಸ್ ಕಾರುಗಳು ಪ್ರಯಾಣಿಕರ ಸುರಕ್ಷತೆಯ ವಿಷಯದಲ್ಲಿ ಮುಂದಿವೆ. ಆದ್ದರಿಂದ, ಜನರು ಈ ಕಂಪನಿಯ ಕೊಡುಗೆಗಳನ್ನು ಆಸಕ್ತಿಯಿಂದ ನೋಡುತ್ತಿದ್ದಾರೆ. ಇತ್ತೀಚೆಗೆ ಈ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಮೇಲೆ ಕೆಲವು ರಿಯಾಯಿತಿ ಕೊಡುಗೆಗಳನ್ನು ಘೋಷಿಸಿದೆ. 2023 ರ ಮಾದರಿಗಳ ಜೊತೆಗೆ, ನೆಕ್ಸಾನ್ ಮತ್ತು ಟಿಯಾಗೊದ 2024 EV ಮಾದರಿಗಳಲ್ಲಿಯೂ ಸಹ ಕೊಡುಗೆಗಳಿವೆ. ಟಾಟಾ ನೆಕ್ಸಾನ್

ಟಾಟಾ ಮೋಟಾರ್ಸ್ ಎಲೆಕ್ಟ್ರಿಕ್ ಕಾರುಗಳ ಮೇಲೆ ಭಾರೀ ರಿಯಾಯಿತಿ! ಬೇಗ ಶೋ ರೂಮ್ ಗೆ ಹೋಗಿ Read More »

ಜರ್ಮನಿಯಿಂದ ಪಾರ್ಸೆಲ್ ಕಳುಹಿಸಿರುವುದಾಗಿ ನಂಬಿಸಿ ಮಹಿಳೆಗೆ 54 ಲಕ್ಷ ರೂ. ವಂಚನೆ

ಸಮಗ್ರ ನ್ಯೂಸ್ : ಜರ್ಮನಿಯಿಂದ ಪಾರ್ಸೆಲ್ ಕಳುಹಿಸಿರುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಅರ್ಧ ಕೋಟಿಗೂ ಹೆಚ್ಚು ವಂಚಿಸಿರುವ ಪ್ರಕರಣ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಿಹಿಯಾಲ್ ನಿಲ್ಜೆನ್ ಎಂಬಾತ ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ನಂಬಿಸಿ ಫೆ.10ರಂದು ಫೇಸ್‍ಬುಕ್‍ನಲ್ಲಿ ಪೇತ್ರಿಯ ಲವೀನಾ ಸ್ಟೆಫನಿ ಕ್ರಾಸ್ಟೊ(42) ಎಂಬವರನ್ನು ಪರಿಚಯ ಮಾಡಿಕೊಂಡಿದ್ದನು. ನಂತರ ವಾಟ್ಸಪ್ ಮೂಲಕ ಇವರು ಚಾಟಿಂಗ್ ನಡೆಸಿ ಸ್ನೇಹಿತರಾಗಿದ್ದರು. ಆತ ಲವೀನಾಗೆ ಗಿಫ್ಟ್ ಕಳುಹಿಸುವುದಾಗಿ ನಂಬಿಸಿದ್ದು ಫೆ.15ರಂದು ಲವೀನಾಗೆ ದೆಹಲಿಯ ಪಾರ್ಸೆಲ್ ಕಚೇರಿ ಎಂಬುದಾಗಿ

ಜರ್ಮನಿಯಿಂದ ಪಾರ್ಸೆಲ್ ಕಳುಹಿಸಿರುವುದಾಗಿ ನಂಬಿಸಿ ಮಹಿಳೆಗೆ 54 ಲಕ್ಷ ರೂ. ವಂಚನೆ Read More »

2024ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಕ್ರಿಸ್ಟಿನಾ ಪಿಸ್ಕೋವಾ

ಸಮಗ್ರ ನ್ಯೂಸ್: ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಮಿಸ್ ವರ್ಲ್ಡ್ 2024 ಕಿರೀಟವನ್ನು ಗೆದ್ದರು. ದೇಶದಾದ್ಯಂತ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಮಿಸ್ ವರ್ಲ್ಡ್’ನಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಕರ್ನಾಟಕ ಮೂಲದ ಸಿನಿ ಶೆಟ್ಟಿ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಚೆಕ್ ರಿಪಬ್ಲಿಕ್​ನ ಕ್ರಿಸ್ಟಿನಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ಒಲಿದಿದೆ. ಮುಂಬೈನ

2024ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಕ್ರಿಸ್ಟಿನಾ ಪಿಸ್ಕೋವಾ Read More »

ಲೋಕಸಭಾ ಚುನಾವಣೆ ಹೊತ್ತಲ್ಲೆ ದಿಢೀರ್ ರಾಜೀನಾಮೆ ಕೊಟ್ಟ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್

ಸಮಗ್ರ ನ್ಯೂಸ್: ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಇದೇ ಸಂದರ್ಭದಲ್ಲಿ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿದ್ದಾರೆ ಅರುಣ್ ಗೋಯಲ್ ಅಧಿಕಾರಾವಧಿ 2027ರವರೆಗೆ ಇತ್ತು. ಸದ್ಯ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಹೀಗಾಗಿ ಗೋಯಲ್​ ಅವರ ರಾಜೀನಾಮೆಯಿಂದಾಗಿ ಇದೀಗ ಚುನಾವಣಾ ಸಮಿತಿಯಲ್ಲಿ ಎರಡು ಚುನಾವಣಾ ಆಯುಕ್ತ ಸ್ಥಾನಗಳು ಖಾಲಿಯಾಗಿವೆ. ಇದೀಗ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ

ಲೋಕಸಭಾ ಚುನಾವಣೆ ಹೊತ್ತಲ್ಲೆ ದಿಢೀರ್ ರಾಜೀನಾಮೆ ಕೊಟ್ಟ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ Read More »

ಕಾಜಿರಂಗ ಉದ್ಯಾನದಲ್ಲಿ ಪ್ರಧಾನಿ: ಸಫಾರಿ ಮತ್ತು ಜೀಪ್ ಸವಾರಿ ಮಾಡಿದ ನಮೋ

ಸಮಗ್ರ ನ್ಯೂಸ್: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ಮತ್ತು ಜೀಪ್ ಸವಾರಿ ಮಾಡಿದ್ದಾರೆ. ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದ್ದು, ಸೆಂಟ್ರಲ್ ಖೇರಾ ವಲಯದ ಮಿಹಿಮುಖ್ ವಲಯದಲ್ಲಿ ಮೊದಲು ಆನೆ ಸಫಾರಿ ಮಾಡಿ ಇದೇ ವಲಯದಲ್ಲಿ ಪ್ರಧಾನಿ ಜೀಪ್ ಸವಾರಿಯನ್ನು ಮಾಡಿದ್ದರು. ಎರಡು ದಿನದ ಅಸ್ಸಾಂ ಪ್ರವಾಸದಲ್ಲಿ ಪ್ರಧಾನಿ ಮೋದಿ ಇದ್ದು, ಉದ್ಯಾನದಲ್ಲಿ ಪ್ರಧಾನಿಗೆ ಉದ್ಯಾನದ ನಿರ್ದೇಶಕಿ, ಅರಣ್ಯ ಅಧಿಕಾರಿಗಳು ಸಾತ್ ನೀಡಿದ್ದರು.

ಕಾಜಿರಂಗ ಉದ್ಯಾನದಲ್ಲಿ ಪ್ರಧಾನಿ: ಸಫಾರಿ ಮತ್ತು ಜೀಪ್ ಸವಾರಿ ಮಾಡಿದ ನಮೋ Read More »