ರಾಷ್ಟ್ರೀಯ

ವಯನಾಡಿನಲ್ಲಿ ರಾಹುಲ್ ಸ್ಪರ್ಧೆ/ ಆಕ್ಷೇಪ ವ್ಯಕ್ತಪಡಿಸಿದ ಪಿಣರಾಯಿ ವಿಜಯನ್

ಸಮಗ್ರ ನ್ಯೂಸ್: ವಯನಾಡ್ ಕ್ಷೇತ್ರದಿಂದ ಕಾಂಗ್ರೆಸ್‍ನ ನಾಯಕ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವುದಕ್ಕೆ ಇಂಡಿಯಾ ಮೈತ್ರಿಕೂಟದ ಸದಸ್ಯ ಪಕ್ಷ ಹಾಗೂ ಕೇರಳ ಮುಖ್ಯಮಂತ್ರಿ ಪಿಣರಾಜಿ ವಿಜಯನ್ ಟೀಕೆ ಮಾಡಿದ್ದು, ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದಕ್ಕೆ ಮತ್ತೊಂದು ಪುರಾವೆ ಸಿಕ್ಕಿದೆ. ವಯನಾಡ್‍ನಲ್ಲಿ ಎಲ್‍ಡಿಎಫ್ ಹಾಗೂ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದ (ಸಿಪಿಐ) ರಾಷ್ಟ್ರೀಯ ನಾಯಕಿ ಅನ್ನಿ ರಾಜಾರನ್ನು ಕಣಕ್ಕೆ ಇಳಿಸಿದೆ. ‘ರಾಷ್ಟ್ರಮಟ್ಟದಲ್ಲಿ ಹೆಸರಾಂತ ಎಡ ನಾಯಕಿ ಅನ್ನಿ ರಾಜಾ ವಿರುದ್ಧ ರಾಹುಲ್ ಗಾಂಧಿ ಸ್ಪರ್ಧಿಸುತ್ತಿದ್ದಾರೆ. ಮಣಿಪುರದ ವಿಷಯದಲ್ಲಿ ಬಿಜೆಪಿ […]

ವಯನಾಡಿನಲ್ಲಿ ರಾಹುಲ್ ಸ್ಪರ್ಧೆ/ ಆಕ್ಷೇಪ ವ್ಯಕ್ತಪಡಿಸಿದ ಪಿಣರಾಯಿ ವಿಜಯನ್ Read More »

ಹಿರಿಯ ನಾಗರಿಕರ ವಿನಾಯ್ತಿ ರದ್ದು/ 5,875 ಕೋಟಿ ಹೆಚ್ಚಿನ ಆದಾಯ ಗಳಿಸಿದ ರೈಲ್ವೆ

ಸಮಗ್ರ ನ್ಯೂಸ್: ಹಿರಿಯ ನಾಗರಿಕರಿಗೆ ರೈಲುಗಳಲ್ಲಿ ನೀಡಲಾಗುತ್ತಿದ್ದ ವಿನಾಯ್ತಿ ದರದ ಟಿಕೆಟ್ ರದ್ದು ಮಾಡಿದ ಬಳಿಕ ಇಲಾಖೆಗೆ ರೂ. 5,875 ಕೋಟಿ ಹೆಚ್ಚಿನ ಆದಾಯ ಹರಿದುಬಂದಿದೆ ಎಂದು ಮಧ್ಯಪ್ರದೇಶದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆ ಅರ್ಜಿಗೆ ರೈಲ್ವೆ ಇಲಾಖೆ ಮಾಹಿತಿ ನೀಡಿದೆ. ಕೋವಿಡ್ ಲಾಕ್‍ಡೌನ್‍ನಿಂದಾಗಿ 2020ರ ಮಾ.20ರಂದು ರೈಲುಗಳಲ್ಲಿ ಹಿರಿಯ ನಾಗರಿಕರ ಟಿಕೆಟ್ ವಿನಾಯ್ತಿಯನ್ನು ರದ್ದುಗೊಳಿಸಿದ ನಂತರ, ಈ ವರ್ಷದ ಜ.31ರವರೆಗೆ 13 ಕೋಟಿ ಪುರುಷ, 9 ಕೋಟಿ ಮಹಿಳೆ ಹಾಗೂ 33,700 ತೃತೀಯ ಲಿಂಗದ

ಹಿರಿಯ ನಾಗರಿಕರ ವಿನಾಯ್ತಿ ರದ್ದು/ 5,875 ಕೋಟಿ ಹೆಚ್ಚಿನ ಆದಾಯ ಗಳಿಸಿದ ರೈಲ್ವೆ Read More »

ನವದೆಹಲಿ: ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಬಿಜೆಪಿ ಪಕ್ಷ ದೆಹಲಿ ಸಚಿವೆ ಆತಿಶಿಗೆ ಸವಾಲು

ಸಮಗ್ರ ನ್ಯೂಸ್‌ : ಬಿಜೆಪಿ ಪಕ್ಷಕ್ಕೆ ಸೇರುವಂತೆ ಆಪ್ತ ಸಹಾಯಕರೊಬ್ಬರ ಮೂಲಕ ನನ್ನನ್ನು ಸಂಪರ್ಕಿಸಲಾಗಿದೆ ಎಂಬ ದೆಹಲಿ ಸಚಿವೆ ಆತಿಶಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಹೇಳಿದೆ. ಬಿಜೆಪಿ ಮುಖಂಡ ವೀರೇಂದ್ರ ಸಚ್‌ದೇವ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ಸೇರಲು ಆತಿಶಿಯನ್ನು ಸಂಪರ್ಕಿಸಲಾಗಿದೆ ಎಂಬ ಹೇಳಿಕೆಗೆ ಇಂದು ಸಂಜೆಯೊಳಗೆ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಸವಾಲು ಹಾಕಿದ್ದಾರೆ. ಆಧಾರರಹಿತ ಆರೋಪಗಳು ಮಾಡಿ, ಆದರಿಂದ

ನವದೆಹಲಿ: ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಬಿಜೆಪಿ ಪಕ್ಷ ದೆಹಲಿ ಸಚಿವೆ ಆತಿಶಿಗೆ ಸವಾಲು Read More »

ಮಧ್ಯಪ್ರದೇಶದಲ್ಲಿ ರೈಲ್ವೆ ಸೇತುವೆ ಕುಸಿತ

ಸಮಗ್ರ ನ್ಯೂಸ್‌ : ಕುವಾರಿ ನದಿ ಮೇಲಿನ ರೈಲ್ವೆ ಸೇತುವೆ ಕುಸಿದ ಘಟನೆ ಇಂದು ಮಧ್ಯಪ್ರದೇಶದ ಮೊರೈನಾದಲ್ಲಿ ನಡೆದಿದೆ. ಘಟನೆಯಲ್ಲಿ ಐದು ಕಾರ್ಮಿಕರು ಗಾಯಗೊಂಡಿದ್ದಾರೆ. ಶತಮಾನದಷ್ಟು ಹಳೆಯದಾದ ರೈಲ್ವೆ ಸೇತುವೆಯನ್ನು ಕಳಚುವ ಪ್ರಕ್ರಿಯೆಯಲ್ಲಿ ಕಾರ್ಮಿಕರು ನಿರತರಾಗಿದ್ದಾಗ ಈ ಅವಘಡ ಸಂಭವಿಸಿದೆ. ರೈಲ್ವೆ ಹಳಿಯನ್ನು ನ್ಯಾರೋ ಗೇಜ್‌ನಿಂದ ಬ್ರಾಡ್‌ ಗೇಜ್‌ಗೆ ಪರಿವರ್ತಿಸಲಾಗುತ್ತಿದ್ದು, ಸೇತುವೆಯನ್ನು ಆ ಸಲುವಾಗಿ ಕಳಚುವ ಕಾಮಗಾರಿ ನಡೆಸಲಾಗುತ್ತಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗ್ಯಾಸ್‌ ಕಟರ್‌ ಬಳಸಿ ಸೇತುವೆಯ ಉಕ್ಕಿನ ಭಾಗವನ್ನು ತುಂಡರಿಸುವ ಕಾರ್ಯದಲ್ಲಿ ಕಾರ್ಮಿಕರು ನಿರತರಾಗಿದ್ದಾಗ

ಮಧ್ಯಪ್ರದೇಶದಲ್ಲಿ ರೈಲ್ವೆ ಸೇತುವೆ ಕುಸಿತ Read More »

ನವದೆಹಲಿ: ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದ 70 ವಿಮಾನಗಳ ಸೇವೆ ರದ್ದು

ಸಮಗ್ರ ನ್ಯೂಸ್‌ : ಟಾಟಾ ಕಂಪನಿ ಒಡೆತನದ ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದಾಗಿ ಇಂದು ಕಂಪನಿಯ ಸುಮಾರು 70 ವಿಮಾನಗಳ ಸೇವೆ ರದ್ದಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ಒಂದು ವಾರದಿಂದ ಇದೇ ಕಾರಣದಿಂದ ವಿಸ್ತಾರಾದ 100ಕ್ಕೂ ಹೆಚ್ಚು ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗಿದೆ.ಈ ಬಗ್ಗೆ ನಾಗರಿಕ ವಿಮಾನಯಾನ ಸಚಿವಾಲಯವು ಡಿಜಿಸಿಎದಿಂದ ವರದಿ ಕೇಳಿದೆ. ವಿಸ್ತಾರ ಟಾಟಾ ಗ್ರೂಪ್ ಸೇರಿದ ನಂತರ ಅದರ ಪೈಲಟ್‌ಗಳು ಸಂಬಳ ಸೇರಿದಂತೆ ಇತರೆ ಅನುಕೂಲಗಳಿಗೆ ಆಗ್ರಹಿಸಿ ಅಘೋಷಿತ ಪ್ರತಿಭಟನೆ ನಡೆಸುತ್ತಿದ್ದಾರೆ. ಅನೇಕರು

ನವದೆಹಲಿ: ವಿಸ್ತಾರಾ ಏರ್‌ಲೈನ್ಸ್‌ಗೆ ಪೈಲಟ್‌ಗಳ ಕೊರತೆಯಿಂದ 70 ವಿಮಾನಗಳ ಸೇವೆ ರದ್ದು Read More »

ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಜಾಮೀನು

ಸಮಗ್ರ ನ್ಯೂಸ್‌ : ಹೊಸ ಮದ್ಯ ನೀತಿಯಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಎಎಪಿ ನಾಯಕ ಹಾಗೂ ಸಂಸದ ಸಂಜಯ್ ಸಿಂಗ್‌ ಅವರಿಗೆ ಸುಪ್ರಿಂ ಕೋರ್ಟ್ ಇಂದು ಜಾಮೀನು ನೀಡಿದೆ. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಂಜಯ್ ಸಿಂಗ್ ಅವರಿಗೆ ಇನ್ನು ಮುಂದೆ ಕಸ್ಟಡಿಯ ಅಗತ್ಯವಿಲ್ಲ ಎಂದು ಜಾರಿ ನಿರ್ದೇಶನಾಲಯ ಹೇಳಿದ ನಂತರ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಪ್ರಸನ್ನ ಬಿ ವರಾಲೆ ಅವರಿದ್ದ ತ್ರಿಸದಸ್ಯ ಪೀಠವು

ದೆಹಲಿ: ಅಬಕಾರಿ ನೀತಿ ಪ್ರಕರಣದಲ್ಲಿ ಎಎಪಿ ಸಂಸದ ಸಂಜಯ್ ಸಿಂಗ್‌ಗೆ ಜಾಮೀನು Read More »

ನಿಮ್ಮ ಮೊಬೈಲ್ ತುಂಬಾ ಬಿಸಿ ಆಗ್ತಾ ಇದ್ಯ? ಯೋಚ್ನೆ ಬೇಡ, ಇಲ್ಲಿದೆ ಟಿಪ್ಸ್

ಸಮಗ್ರ ನ್ಯೂಸ್: ಬೇಸಿಗೆಯಲ್ಲಿ ಫೋನ್ ಬಿಸಿಯಾಗಿದ್ದರೆ, ಅದು ಸೂರ್ಯನ ಶಾಖದ ಕಾರಣದಿಂದಾಗಿರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಬ್ಯಾಟರಿ ಸೋರಿಕೆಯಾದರೂ ಫೋನ್ ಬಿಸಿಯಾಗಬಹುದು. ಕೆಲವೊಮ್ಮೆ ಇದು ವಿಕಿರಣದ ಕಾರಣದಿಂದಾಗಿರಬಹುದು. ಹಾಗಾದರೆ ಅದು ಏಕೆ ಬಿಸಿಯಾಗುತ್ತಿದೆ ಎಂಬುದನ್ನು ಮೊದಲು ತಿಳಿಯೋಣ. ಸ್ಮಾರ್ಟ್‌ಫೋನ್‌ ನ್ನು ನೇರ ಸೂರ್ಯನ ಬೆಳಕನ್ನು ತಪ್ಪಿಸಿ. ಫೋನ್ ನಲ್ಲಿ ಮಾತನಾಡದಿದ್ದರೂ ಬಿಸಿಲು ಬಿದ್ದರೆ ಬಿಸಿಯಾಗುತ್ತದೆ. ಅಂತಹ ಫೋನ್ ಸರಿಯಾಗಿ ಕೆಲಸ ಮಾಡದಿರಬಹುದು. ಆದ್ದರಿಂದ, ಸೂರ್ಯನ ಬೆಳಕನ್ನು ತಪ್ಪಿಸುವುದು ಅವಶ್ಯಕ. ಹೆಚ್ಚು ಹೊತ್ತು ಫೋನ್ ಬಳಸಿದರೆ

ನಿಮ್ಮ ಮೊಬೈಲ್ ತುಂಬಾ ಬಿಸಿ ಆಗ್ತಾ ಇದ್ಯ? ಯೋಚ್ನೆ ಬೇಡ, ಇಲ್ಲಿದೆ ಟಿಪ್ಸ್ Read More »

ಗ್ಯಾನವಾಪಿಯ ನೆಲಮಹಡಿಯಲ್ಲಿ ಹಿಂದುಗಳ ಪೂಜೆ/ ತಡೆ ನೀಡಲು ಸುಪ್ರೀಂ ನಿರಾಕರಣೆ

ಸಮಗ್ರ ನ್ಯೂಸ್: ಮಸೀದಿಯ ನೆಲಮಹಡಿಯಲ್ಲಿರುವ ವ್ಯಾಸ್ ಠಿಖಾನಾ ಎಂದೂ ಕರೆಯಲಾಗುವ ಜ್ಞಾನವಾಪಿ ಮಸೀದಿಯ ದಕ್ಷಿಣದ ಭಾಗದ ನೆಲಮಹಡಿಯಲ್ಲಿನ ಮೂರ್ತಿಗಳಿಗೆ ಹಿಂದುಗಳ ಪೂಜೆ ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರಿಂದ ಹಿಂದುಗಳ ಪೂಜೆಗೆ ಅವಕಾಶ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಮಿತಿಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗ್ಯಾನವಾಪಿ ಮಸೀದಿ ಉಸ್ತುವಾರಿ ವಹಿಸಿರುವ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ

ಗ್ಯಾನವಾಪಿಯ ನೆಲಮಹಡಿಯಲ್ಲಿ ಹಿಂದುಗಳ ಪೂಜೆ/ ತಡೆ ನೀಡಲು ಸುಪ್ರೀಂ ನಿರಾಕರಣೆ Read More »

ಬದಲಾಗಿದೆ ಕಾಶ್ಮೀರ/ ಕೇಳುತ್ತಿದೆ ಪ್ರವಾಸಿಗರ ಕಲರವ

ಸಮಗ್ರ ನ್ಯೂಸ್: ಭೂ ಲೋಕದ ಸ್ವರ್ಗ ಎಂದು ಹೆಸರಾಗಿರುವ ಕಾಶ್ಮೀರದಲ್ಲಿ ಕೆಲವು ವರ್ಷಗಳ ಹಿಂದೆ ಗುಂಡಿನ ಸದ್ದು ಮಾತ್ರ ಕೇಳಿಸುತ್ತಿದ್ದು, ಇದೀಗ ಈಗ ಅತಿಥಿಗಳ ಕಲರವ ಕೇಳಿಬರುತ್ತಿದೆ. ಕಣಿವೆ ರಾಜ್ಯಕ್ಕೆ ಈಗ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದ್ದು, ಪ್ರವಾಸೋದ್ಯಮದ ಚಿತ್ರಣವೇ ಬದಲಾಗುತ್ತಿದೆ. ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಬರೋಬ್ಬರಿ 12,000 ಹೋಮ್‍ಸ್ಟೇಗಳು ಬುಕ್ಕಿಂಗ್ ಆಗಿವೆ ಎಂಬುದೇ ಇಲ್ಲಿಗೆ ಪ್ರವಾಸಿಗರು ಎಷ್ಟು ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇದಲ್ಲದೆ ಇಲ್ಲಿನ ಸ್ಥಳೀಯರೂ ಪ್ರವಾಸಿಗರನ್ನು ಆಕರ್ಷಿಸಲು ತಮ್ಮ ವಸತಿ ಸ್ಥಳಗಳಲ್ಲಿಯೇ ಹೋಮ್ ಸ್ಟೇ

ಬದಲಾಗಿದೆ ಕಾಶ್ಮೀರ/ ಕೇಳುತ್ತಿದೆ ಪ್ರವಾಸಿಗರ ಕಲರವ Read More »

ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ಸಂಸ್ಥಾಪನಾ ದಿನ/ ವಿಶೇಷ ನಾಣ್ಯ ಬಿಡುಗಡೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) 90ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿದರು.ಈ ನಾಣ್ಯವು ಶೇ.99.99ರಷ್ಟು ಶುದ್ಧವಾದ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಅಂದಾಜು 40 ಗ್ರಾಂ ತೂಕ ಹೊಂದಿದೆ. ಇದು ಆರ್‍ಬಿಐನ ಶ್ರೀಮಂತ ಇತಿಹಾಸ ಹಾಗೂ 9 ದಶಕಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಒಂದು ದಶಕದಲ್ಲಿ RBI ಹಾಗೂ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಫಲವಾಗಿ ಬ್ಯಾಂಕಿಂಗ್ ವಲಯ ಉತ್ತಮ ರೀತಿಯಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ಸಂಸ್ಥಾಪನಾ ದಿನ/ ವಿಶೇಷ ನಾಣ್ಯ ಬಿಡುಗಡೆ Read More »