ರಾಷ್ಟ್ರೀಯ

ಮುಂಬೈ:ನಟಿ ಕಂಗನಾ ರಣಾವತ್ ನನಗೆ ಗೋಮಾಂಸ ಇಷ್ಟ ಅಂದಿದ್ದರು|ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್

ಸಮಗ್ರ ನ್ಯೂಸ್‌ : ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಬಿಜೆಪಿಯ ಲೋಕಸಭಾ ಅಭ್ಯರ್ಥಿಯಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ನನಗೆ ಗೋಮಾಂಸ ಇಷ್ಟ ಅಂದಿದ್ದರು ಎಂದು ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ ಹೇಳಿದ್ದಾರೆ. ಅವರು ಮಹಾರಾಷ್ಟ್ರದಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿ, ತಾನು ಗೋಮಾಂಸವನ್ನು ಇಷ್ಟಪಡುತ್ತೇನೆ ಮತ್ತು ತಿನ್ನುತ್ತೇನೆ ಎಂದು ಎಕ್ಸ್‌ನಲ್ಲಿ ಬರೆದಿದ್ದ ರಣಾವತ್‌ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ನಾಯಕ ವಿಜಯ್ ವಡೆತ್ತಿವಾರ್ ಅವರ ಮಾತಿಗೆ ಬಿಜೆಪಿ ವಕ್ತಾರ ಕೇಶವ ಉಪಾಧ್ಯೆ […]

ಮುಂಬೈ:ನಟಿ ಕಂಗನಾ ರಣಾವತ್ ನನಗೆ ಗೋಮಾಂಸ ಇಷ್ಟ ಅಂದಿದ್ದರು|ಕಾಂಗ್ರೆಸ್ ನಾಯಕ ವಿಜಯ್ ವಾಡೆತ್ತಿವಾರ್ Read More »

ಮೋದಿ ವಿರುದ್ಧ ಆಧಾರ ರಹಿತ ಆರೋಪ/ ಸಿದ್ಧರಾಮಯ್ಯ ವಿರುದ್ಧ ದೂರು

ಸಮಗ್ರ ನ್ಯೂಸ್: ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ಆಧಾರ ರಹಿತ ಆರೋಪ ಮಾಡಿರುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸಚಿವರ ವಿರುದ್ಧ ಬಿಜೆಪಿ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದೆ. ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಗೌಡ, ರಾಜ್ಯ ಕಾನೂನು ಆಯೋಗದ ಪ್ರತಿನಿಧಿ ವಸಂತ್ ಕುಮಾರ್ ನೇತೃತ್ವದ ಬಿಜೆಪಿ ನಿಯೋಗ ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಸಿದೆ. ಚುನಾವಣಾ ಸಚಿವರ ಸಮಿತಿಗೆ ಒಟ್ಟು ನಾಲ್ಕು

ಮೋದಿ ವಿರುದ್ಧ ಆಧಾರ ರಹಿತ ಆರೋಪ/ ಸಿದ್ಧರಾಮಯ್ಯ ವಿರುದ್ಧ ದೂರು Read More »

ಕೇಜ್ರೀವಾಲ್ ಬಂಧನ/ ಆಮ್ ಆದ್ಮಿ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ

ಸಮಗ್ರ ನ್ಯೂಸ್: ಅಬಕಾರಿ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜಿವಾಲ್ ಅವರ ಬಂಧನವನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖಂಡರು ಮತ್ತು ಕಾರ್ಯಕರ್ತರು ಇಂದು ಜಂತರ್ ಮಂತರ್‍ನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಿದ್ದಾರೆ. ದೆಹಲಿ ಸರ್ಕಾರದ ಸಚಿವ ಗೋಪಾಲ್ ರೈ, ಆಮ್ ಆದ್ಮ ಪಕ್ಷದ ಶಾಸಕರು, ಸಚಿವರು, ಸಂಸದರು ಮತ್ತು ಕೌನ್ಸಿಲರ್‍ಗಳು ದೆಹಲಿಯ ಜಂತರ್ ಮಂತರ್ ಮತ್ತು ಪಂಜಾಬ್‍ನ ಶಾಹೀದ್ ಭಗತ್ ಸಿಂಗ್ ಅವರ ಹಳ್ಳಿಯಾದ ಖತ್ಸರ್ಕಲನ್ನಲ್ಲಿ ಬೆಳಗ್ಗೆ 11ರಿಂದ ಸಂಜೆ 5ರವರೆಗೆ ಸಾಮೂಹಿಕ ಉಪವಾಸವನ್ನು ನಡೆಸಲಿದ್ದಾರೆ

ಕೇಜ್ರೀವಾಲ್ ಬಂಧನ/ ಆಮ್ ಆದ್ಮಿ ಕಾರ್ಯಕರ್ತರ ಉಪವಾಸ ಸತ್ಯಾಗ್ರಹ Read More »

ಲೋಕಸಭಾ ಚುನಾವಣೆ/ ಮಾಧವಿ ಲತಾ ಮತ್ತು ಸೀತಾ ಸೊರೇನ್ ಗೆ ವೈ ಪ್ಲಸ್ ಭದ್ರತೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಾದ ಹೈದರಾಬಾದ್‌ನ ಕೊಂಪೆಲ್ಲಾ ಮಾಧವಿ ಲತಾ ಹಾಗೂ ಜೆಎಂಎಂ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಸೀತಾ ಸೊರೆನ್ ಅವರಿಗೆ ಕೇಂದ್ರ ಸರ್ಕಾರವು ವೈ ಪ್ಲಸ್ ಭದ್ರತೆಯನ್ನು ಒದಗಿಸಿದೆ. ಕೊಂಪೆಲ್ಲಾ ಮಾಧವಿ ಲತಾ ಅವರನ್ನು ಅಸಾದುದ್ದೀನ್ ಓವೈಸಿ ಎದುರು ಕಣಕ್ಕಿಳಿಸಲಾಗಿದ್ದು, ಅವರಿಗೆ ಬೆದರಿಕೆ ಇದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಈ ಭದ್ರತೆಯನ್ನು ಒದಗಿಸಲಾಗುತ್ತಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯು ವೈ ಪ್ಲಸ್ ಭದ್ರತೆಯನ್ನು ಒದಗಿಸಿದ್ದು, ವಿಐಪಿ ಭದ್ರತೆಯ

ಲೋಕಸಭಾ ಚುನಾವಣೆ/ ಮಾಧವಿ ಲತಾ ಮತ್ತು ಸೀತಾ ಸೊರೇನ್ ಗೆ ವೈ ಪ್ಲಸ್ ಭದ್ರತೆ Read More »

ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಹ್ಯಾಕ್/ ಅಶ್ಲೀಲ ಚಿತ್ರ ಪೋಸ್ಟ್

ಸಮಗ್ರ ನ್ಯೂಸ್: ಕಿಡಿಕೇಡಿಗಳು, ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಅನ್ನು ಹ್ಯಾಕ್ ಮಾಡಿದ್ದು, ಅಶ್ಲೀಲ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ದೇವಸ್ಥಾನದ ಆಡಳಿತ ಸಮಿತಿ ನಿರ್ವಹಣೆ ಮಾಡುತ್ತಿದ್ದ ವಿಶ್ವ ವಿಶ್ವನಾಥ ಟೆಂಪಲ್ ಟ್ರಸ್ಟ್ ಫೇಸ್‌ಬುಕ್ ಪೇಜ್ ಹ್ಯಾಕ್ ಮಾಡಲಾಗಿದೆ. ಭಕ್ತರು ದೇವಸ್ಥಾನ ಸಮಿತಿಗೆ ಕರೆ ಮಾಡಿ ಫೇಸ್‌ಬುಕ್ ಪೇಜ್ ಹ್ಯಾಕ್ ಆಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಪೇಜ್‌ನಲ್ಲಿ ಅಶ್ಲೀಲ ಫೋಟೋಗಳು ಪೋಸ್ಟ್ ಆಗಿದೆ. ಅಸಂಬದ್ಧ ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಕುರಿತು ಮಾಹಿತಿ ತಿಳಿದ ತಕ್ಷಣ ದೇವಸ್ಥಾನ ಆಡಳಿತ

ಕಾಶೀ ವಿಶ್ವನಾಥ ಮಂದಿರದ ಫೇಸ್‌ಬುಕ್ ಪೇಜ್ ಹ್ಯಾಕ್/ ಅಶ್ಲೀಲ ಚಿತ್ರ ಪೋಸ್ಟ್ Read More »

ಚುನಾವಣಾ ಕರ್ತವ್ಯ/ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ನೀಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ. ಚುನಾವಣಾ ಕರ್ತವ್ಯಕ್ಕೆ ಹಾಜರಾಗುವಂತೆ ಫಾರ್ಮಸಿ ಅಧಿಕಾರಿಗಳಿಗೆ ಬಿಬಿಎಂಪಿ ನೀಡಿದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದ್ದು, ಈ ಮೂಲಕ ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ರಿಲೀಫ್ ಸಿಕ್ಕಿದೆ. ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನೇಮಿಸುವಾಗ ಕಾನೂನು ಪಾಲಿಸಬೇಕು ಎಂದು ಹೈಕೋರ್ಟ್‌ ಬಿಬಿಎಂಪಿಗೆ ಸೂಚನೆ ನೀಡಿದ್ದು, ಫಾರ್ಮಸಿ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯದಿಂದ ವಿನಾಯಿತಿ ನೀಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

ಚುನಾವಣಾ ಕರ್ತವ್ಯ/ ಫಾರ್ಮಸಿ ಅಧಿಕಾರಿಗಳಿಗೆ ವಿನಾಯಿತಿ ನೀಡಿದ ಹೈಕೋರ್ಟ್ Read More »

ರೂ 14,999 5G ಮೊಬೈಲ್ ಅನ್ನು ರೂ 8,799 ನಲ್ಲಿ ಪಡೆಯಿರಿ, ಸೂಪರ್ ಆಫರ್ ಇದು

ಇದು ಲಾವಾ ಕಂಪನಿ ತಯಾರಿಸಿದ ಬ್ಲೇಜ್ 5ಜಿ ಮೊಬೈಲ್. ಇದು ಎಲ್ಲಾ 5G ಬ್ರ್ಯಾಂಡ್‌ಗಳನ್ನು ಬೆಂಬಲಿಸುತ್ತದೆ. ಈ ಮೊಬೈಲ್ 6.5 ಇಂಚು ಇದೆ. ಇದು HD+ 90Hz ಡಿಸ್ಪ್ಲೇ ಹೊಂದಿದೆ. ಅಲ್ಲದೆ ಇದು Widevine L1 DRM ರಕ್ಷಣೆಯನ್ನು ಹೊಂದಿದೆ. ಎಲ್ಲಾ ವಿಷಯವನ್ನು ಹೈ ರೆಸಲ್ಯೂಷನ್‌ನಲ್ಲಿ ನೋಡಲಾಗುವುದು ಎಂದು ಅವರು ಹೇಳಿದರು. ಇದು ಆಕ್ಟಾ-ಕೋರ್ 2.2GHz ಮೀಡಿಯಾ ಟೆಕ್ ಡೈಮೆನ್ಶನ್ 700 ಪ್ರೊಸೆಸರ್ ಹೊಂದಿದೆ. ಇದು 4GB RAM, UFS 2.2 ಮತ್ತು 128GB ಸಂಗ್ರಹವನ್ನು ಹೊಂದಿದೆ.

ರೂ 14,999 5G ಮೊಬೈಲ್ ಅನ್ನು ರೂ 8,799 ನಲ್ಲಿ ಪಡೆಯಿರಿ, ಸೂಪರ್ ಆಫರ್ ಇದು Read More »

ನವದೆಹಲಿ: ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ;ರಾಜನಾಥ್‌ ಸಿಂಗ್‌

ಸಮಗ್ರ ನ್ಯೂಸ್‌ : ಭಯೋತ್ಪಾದಕರನ್ನು ಸುಮ್ಮನೆ ಬಿಡಲ್ಲ. ಪಾಕಿಸ್ತಾನಕ್ಕೆ ನುಗ್ಗಿಯಾದರೂ ಸರಿ ಅವರನ್ನು ಕೊಲ್ಲುವುದಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ರಕ್ಷಣಾ ಸಚಿವರು ಮಾತನಾಡಿ, ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ಪ್ರಯತ್ನಿಸಿದ ನಂತರ ಗಡಿಯಾಚೆ ಪಲಾಯನ ಮಾಡುವವರನ್ನು ನಿರ್ಮೂಲನೆ ಮಾಡಲು ಭಾರತವು ಪಾಕಿಸ್ತಾನದೊಳಗೆ ಪ್ರವೇಶಿಸಲಿದೆ. ಯಾವುದೇ ಭಯೋತ್ಪಾದಕನನ್ನು ಬಿಡುವುದಿಲ್ಲ, ಮನೆಗೆ ನುಗ್ಗಿ ಅವನನ್ನು ಕೊಲ್ಲುತ್ತೇವೆ. ದೇಶದ ಶಾಂತಿ ಕದಡಲು ಯತ್ನಿಸಿದರೆ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ. ಭಾರತವು ನೆರೆಹೊರೆಯವರೊಂದಿಗೆ ಸೌಹಾರ್ದಯುತ ಸಂಬಂಧವನ್ನು

ನವದೆಹಲಿ: ಭಯೋತ್ಪಾದಕರನ್ನು ಪಾಕಿಸ್ತಾನಕ್ಕೆ ನುಗ್ಗಿ ಕೊಲ್ಲುತ್ತೇವೆ;ರಾಜನಾಥ್‌ ಸಿಂಗ್‌ Read More »

ಮತ್ತೊಂದು ನಿಗೂಢ ಸಾವು/ ಅಮೇರಿಕಾದಲ್ಲಿ ಹತ್ತಕ್ಕೇರಿದ ಭಾರತೀಯರ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಅಮೆರಿಕದ ಓಹಿಯೋ ರಾಜ್ಯದಲ್ಲಿ ಭಾರತೀಯ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿದ್ದು, ಈ ಮೂಲಕ ೨೦೨೪ರ ಆರಂಭದಿಂದ, ಇಲ್ಲಿಯವರೆಗೆ ಅಮೆರಿಕದಲ್ಲಿ ಸಾವನ್ನಪ್ಪಿದ ಭಾರತೀಯ, ಭಾರತೀಯ ಮೂಲದ ವಿದ್ಯಾರ್ಥಿಗಳ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ. ಉಮಾ ಸತ್ಯ ಸಾಯಿಗಡ್ಡೆ ಎಂಬಾಕೆ ಮೃತಪಟ್ಟ ವಿದ್ಯಾರ್ಥಿನಿಯಾಗಿದ್ದು, ಈ ಸಾವಿನ ನಿಗೂಢತೆ ಬೇಧಿಸಲು ತನಿಖೆ ಆರಂಭವಾಗಿದೆ ಎಂದು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ದೂತವಾಸ ಕಚೇರಿ ತಳಿಸಿದೆ. ಈಕೆ ಉಮಾ ಓಹಿಯೋದ ಕ್ಲೀವ್‌ಲ್ಯಾಂಡ್‌ನಲ್ಲಿ ವ್ಯಾಸಾಂಗ ಮಾಡುತ್ತಿದ್ದರು. ಈಕೆಯ ಕುಟುಂಬಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದೂ ದೂತವಾಸ ಕಚೇರಿ ಹೇಳಿದೆ.

ಮತ್ತೊಂದು ನಿಗೂಢ ಸಾವು/ ಅಮೇರಿಕಾದಲ್ಲಿ ಹತ್ತಕ್ಕೇರಿದ ಭಾರತೀಯರ ಸಾವಿನ ಸಂಖ್ಯೆ Read More »

ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್

ಸಮಗ್ರ ನ್ಯೂಸ್: ಭಾರತದಲ್ಲಿ ಜಂಟಿಯಾಗಿ ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪಿಸಲು ಆಟೋ ಮೊಬೈಲ್‌ ಕ್ಷೇತ್ರದ ಜಾಗತಿಕ ದೈತ್ಯ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ ಪರಸ್ಪರ ಕೈ ಜೋಡಿಸಿದ್ದಾರೆ. ಭಾರತದ ಪುಣೆ, ಬೆಂಗಳೂರು ಹಾಗೂ ಚೆನ್ನೈನಲ್ಲಿ ಐಟಿ ಹಬ್‌ಗಳನ್ನು ಪ್ರಾರಂಭಿಸಲಾಗುತ್ತಿದೆ. ಈ ಪೈಕಿ ಜಂಟಿ ಉದ್ಯಮದ ಮುಖ್ಯ ಕೇಂದ್ರ ಬೆಂಗಳೂರು ಮತ್ತು ಪುಣೆಯಲ್ಲಿ, ಐಟಿ ಚೆನ್ನೈನಲ್ಲಿ ಸ್ಥಾಪನೆಯಾಗಲಿವೆ ಎಂದು ಕಂಪನಿಗಳು ಹೇಳಿವೆ. ಈ ಬಗ್ಗೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದ್ದು, ಒಪ್ಪಂದವು ಸಾಫ್ಟ್‌ವೇರ್-ಡಿಫೈನ್ಸ್ ವೆಹಿಕಲ್, ಬಿಎಂಡಬ್ಲ್ಯು

ಆಟೋಮೋಟಿವ್ ಸಾಫ್ಟ್‌ವೇ‌ರ್ ಹಾಗೂ ಐಟಿ ಅಭಿವೃದ್ಧಿ ಕೇಂದ್ರ ಸ್ಥಾಪನೆ/ ಜೊತೆಯಾದ ಬಿಎಂಡಬ್ಲ್ಯೂ ಹಾಗೂ ಟಾಟಾ ಟೆಕ್ನಾಲಜೀಸ್ Read More »