ರಾಷ್ಟ್ರೀಯ

ಶಾಂತ ಸ್ಥಿತಿಯತ್ತ ರೆಮಾಲ್/ ಕುಸಿತಗೊಂಡ ಚಂಡಮಾರುತದ ವೇಗ

ಸಮಗ್ರ ನ್ಯೂಸ್: 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿದ ರೆಮಾಲ್ ಚಂಡಮಾರುತದ ವೇಗ ನಿಧಾನವಾಗಿ ಕುಸಿಯುತ್ತಿದ್ದು, ಇಂದು ರಾತ್ರಿ ಹೊತ್ತಿಗೆ ಗಾಳಿಯ ವೇಗ ಗಂಟೆಗೆ 70-80 ಕಿಲೋಮೀಟರ್ ನಿಂದ 50-70 ಕಿಲೋಮೀಟರಗೆ ಕುಸಿಯುವ ಸಾಧ್ಯತೆಯಿದೆ. ಬಾಂಗ್ಲಾದೇಶ ಮತ್ತು ಪಶ್ಚಿಮ ಬಂಗಾಳ ಕರಾವಳಿ ಗಡಿಯ ತೀರಕ್ಕೆ ಗಂಟೆಗೆ 135 ಕಿಲೋಮೀಟರ್ ವೇಗದಲ್ಲಿ ಅಪ್ಪಳಿಸಿತ್ತು. ಪರಿಣಾಮ ಪಶ್ಚಿಮ ಬಂಗಾಳ, ಒಡಿಶಾ, ಅಸ್ಸಾಂ ಸೇರಿ ಈಶಾನ್ಯ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ನೂರಾರು ಮರಗಳು, ವಿದ್ಯುತ್ ಕಂಬಗಳು ಉರುಳಿ […]

ಶಾಂತ ಸ್ಥಿತಿಯತ್ತ ರೆಮಾಲ್/ ಕುಸಿತಗೊಂಡ ಚಂಡಮಾರುತದ ವೇಗ Read More »

ದುಬೈ ಪ್ರಯಾಣಿಕರೇ ಹುಷಾರು/ ರಿಟರ್ನ್ ಟಿಕೆಟ್ ಇಲ್ಲದೇ ವಿಮಾನ ಹತ್ತಬೇಡಿ

ಸಮಗ್ರ ನ್ಯೂಸ್: ಅಕ್ರಮ ವಲಸೆಯನ್ನು ತಡೆಯಲು ಮಧ್ಯಪ್ರಾಚ್ಯ ರಾಷ್ಟ್ರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ವಿಮಾನ ನಿಲ್ದಾಣಗಳಲ್ಲಿ ಪ್ರವಾಸಿ ವೀಸಾ ಹೊಂದಿರುವವರಿಗೆ ವಾಪಸ್‌ ಟಿಕೆಟ್‌, ಸುತ್ತಾಡಲು ಕನಿಷ್ಠ ಹಣ ಹಾಗೂ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆ ಆಗಿದ್ದರಷ್ಟೇ ರಾಷ್ಟ್ರದ ಒಳಗೆ ಬಿಟ್ಟುಕೊಳ್ಳಲಾಗುತ್ತಿದೆ. ಸೂಕ್ತ ದಾಖಲಾತಿಗಳು ಇಲ್ಲದ ಕಾರಣ ಕಳೆದ ತಿಂಗಳು ಹತ್ತಕ್ಕೂ ಹೆಚ್ಚು ಭಾರತೀಯರನ್ನು ವಾಪಸ್‌ ಕಳುಹಿಸಲಾಗಿದೆ. ಗಡಿಪಾರು ಸಮಸ್ಯೆ ತಡೆಯುವ ಸಲುವಾಗಿ ಭಾರತೀಯ ವಿಮಾನ ನಿಲ್ದಾಣಗಳಿಂದಲೇ ಕಟ್ಟುನಿಟ್ಟಾಗಿ ದಾಖಲಾತಿಗಳನ್ನು ಪರಿಶೀಲಿಸಿ ಯುಎಇ ವಿಮಾನ ಹತ್ತಲು ಅನುಮತಿಸಲಾಗುತ್ತಿದೆ. ಯುಎಇಯಲ್ಲಿ ದುಬೈ

ದುಬೈ ಪ್ರಯಾಣಿಕರೇ ಹುಷಾರು/ ರಿಟರ್ನ್ ಟಿಕೆಟ್ ಇಲ್ಲದೇ ವಿಮಾನ ಹತ್ತಬೇಡಿ Read More »

ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್

ಸಮಗ್ರ ನ್ಯೂಸ್: ಅಯೋಧ್ಯೆಯ ರಾಮಮಂದಿರ ಆವರಣದಲ್ಲಿ ಮೊಬೈಲ್ ಪೋನ್ ಬಳಕೆಯನ್ನು ನಿಷೇಧಿಸಿ ರಾಮಮಂದಿರ ಟ್ರಸ್ಟ್ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಆದೇಶ ಹೊರಡಿಸಲಾಗಿದೆ. ಈಗಾಗಲೇ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಮೊಬೈಲ್ ಪೋನ್ ಗಳನ್ನು ನಿಷೇಧಿಸಲಾಗಿದ್ದು, ಇದೀಗ ವಿಐಪಿಗಳು ಮತ್ತು ವಿವಿಐಪಿಗಳು ಮೊಬೈಲ್ ಪೋನ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಐಜಿ ಹಾಗೂ ರಾಮಮಂದಿರ ಟ್ರಸ್ಟ್ ಅಧಿಕಾರಿ ಆಯುಕ್ತರ ಜತೆಗಿನ ಸಭೆಯಲ್ಲಿ ಮೊಬೈಲ್ ಪೋನ್ ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ನಿರ್ಧರಿಸಲಾಗಿದೆ. ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಟ್ರಸ್ಟಿ ಅನಿಲ್ ಮಿಶ್ರಾ

ರಾಮಮಂದಿರದಲ್ಲಿ ಇನ್ನು ಮೊಬೈಲ್ ನ ಸದ್ದಿಲ್ಲ/ ಮೊಬೈಲ್ ನಿಷೇಧ ಆದೇಶ ಹೊರಡಿಸಿದ ಟ್ರಸ್ಟ್ Read More »

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಜನ ಸಾವು

ಸಮಗ್ರ ನ್ಯೂಸ್: ಉತ್ತರ ಪ್ರದೇಶದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್‌ಗೆ ಟ್ರಕ್‌ ಡಿಕ್ಕಿಯಾಗಿ 11 ಜನ ಸ್ಥಳದಲ್ಲೇ ದುರ್ಮರಣ ಹೊಂದಿ 10 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ನಿನ್ನೆ ರಾತ್ರಿ ಶಹಜಹಾನ್‌ಪುರ ಜಿಲ್ಲೆಯ ಖುತಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಉತ್ತರಾಖಂಡಕ್ಕೆ ತೆರಳುತ್ತಿದ್ದ ಬಸ್‌ಗೆ ಟ್ರಕ್ ಡಿಕ್ಕಿಯಾಗಿದೆ. ಇನ್ನು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಎಲ್ಲಾ ಭಕ್ತರು ಸೀತಾಪುರ ಜಿಲ್ಲೆಯ ಕಮಲಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಜೇಥಾ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ

ಉತ್ತರ ಪ್ರದೇಶದಲ್ಲಿ ಭೀಕರ ಅಪಘಾತಕ್ಕೆ 11 ಜನ ಸಾವು Read More »

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ| 7 ನವಜಾತ ಶಿಶುಗಳು ಸಾವು

ಸಮಗ್ರ ನ್ಯೂಸ್: ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಅಗ್ನಿ ಅವಘಡ ಸಂಭವಿಸಿದು 7 ನವಜಾತ ಶಿಶುಗಳು ಸಾವನ್ನಪ್ಪಿವೆ. ಈ ಭೀಕರ ಅಪಘಾತದಲ್ಲಿ 12 ಶಿಶುಗಳನ್ನು ರಕ್ಷಿಸಲಾಗಿದೆ, ಅದರಲ್ಲಿ 7 ಶಿಶುಗಳು ಸಾವನ್ನಪ್ಪಿವೆ. 5 ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಮತ್ತು ಒಬ್ಬರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ ಎಂಬ ಮಾಹಿತಿ ಇದೆ. ನಿನ್ನೆ ರಾತ್ರಿ 11.32 ಕ್ಕೆ ಪೂರ್ವ ದೆಹಲಿಯ ವಿವೇಕ್ ವಿಹಾರ್‌ನಲ್ಲಿರುವ ಶಿಶುಪಾಲನಾ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ 9 ಅಗ್ನಿಶಾಮಕ ದಳಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸ್ವತಃ

ದೆಹಲಿಯ ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ| 7 ನವಜಾತ ಶಿಶುಗಳು ಸಾವು Read More »

ರಾಜ್ ಕೋಟ್ ನಲ್ಲಿ ಭಾರೀ ಅಗ್ನಿ ಅವಘಡ| ಕನಿಷ್ಠ 24 ಮಂದಿ‌ ಸಾವಿನ ಶಂಕೆ

ಸಮಗ್ರ ನ್ಯೂಸ್: ಗುಜರಾತ್ ನ ರಾಜ್‌ಕೋಟ್‌ನಲ್ಲಿರುವ ಟಿಆರ್‌ಪಿ ಗೇಮ್ ಝೋನ್‌ನಲ್ಲಿ ಶನಿವಾರ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಈ ಅಗ್ನಿ ಅವಘಡದಲ್ಲಿ ಕನಿಷ್ಠ 24 ಮಂದಿ ಸಾವಿಗೀಡಾಗಿರುವ ಸುದ್ದಿ ಬಂದಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಏರುವ ಸಾಧ್ಯತೆ ಇದೆ. ಸಂಪೂರ್ಣ ಗೇಮಿಂಗ್‌ ಜೋನ್‌ನ ಫೆಸಿಲಿಟಿಯೇ ಬೆಂಕಿಯಲ್ಲಿ ಮುಳುಗಿರುವ ಕಾರಣ, ಮಕ್ಕಳು ಸೇರಿದಂತೆ ಹಲವಾರು ಮಂದಿ ಈ ಜೋನ್‌ನಲ್ಲಿ ಸಿಲುಕಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ

ರಾಜ್ ಕೋಟ್ ನಲ್ಲಿ ಭಾರೀ ಅಗ್ನಿ ಅವಘಡ| ಕನಿಷ್ಠ 24 ಮಂದಿ‌ ಸಾವಿನ ಶಂಕೆ Read More »

ಇಂದು 6ನೇ ಹಂತದ ಲೋಕಸಭಾ ಚುನಾವಣೆ

ಸಮಗ್ರ ನ್ಯೂಸ್: ಇಂದು 6ನೇ ಹಂತದ ಲೋಕಸಭಾ ಚುನಾವಣೆ ನಡೆಯುತ್ತಿದ್ದು. ಈ ಚುನಾವಣೆಯಲ್ಲಿ 8 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ 889 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಮಾಹಿತಿ ನೀಡಿದೆ. ಜೂನ್ 4ರಂದು ಎಲ್ಲ ಹಂತಗಳ ಚುನಾವಣೆಯ ಮತ ಎಣಿಕೆ ನಡೆಯಲಿದೆ. ಇಂದು ಬಿಹಾರ (8 ಸ್ಥಾನಗಳು), ಹರಿಯಾಣ (ಎಲ್ಲಾ 10 ಸ್ಥಾನಗಳು), ಜಮ್ಮು ಮತ್ತು ಕಾಶ್ಮೀರ (1 ಸ್ಥಾನ), ಜಾರ್ಖಂಡ್ (4 ಸ್ಥಾನಗಳು), ದೆಹಲಿ (ಎಲ್ಲಾ 7 ಸ್ಥಾನಗಳು), ಒಡಿಶಾ (6 ಸ್ಥಾನಗಳು),

ಇಂದು 6ನೇ ಹಂತದ ಲೋಕಸಭಾ ಚುನಾವಣೆ Read More »

ಲ್ಯಾಂಡಿಂಗ್ ವೇಳೆ ಗಿರಗಿರನೆ ತಿರುಗಿದ ಹೆಲಿಕಾಪ್ಟರ್‌| ತುರ್ತು ಭೂಸ್ಪರ್ಶ…!

ಸಮಗ್ರ ನ್ಯೂಸ್: ಕೇದಾರನಾಥ ದೇವಾಲಯದ ಹೆಲಿಪ್ಯಾಡ್‌ನಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಹೆಲಿಕಾಪ್ಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ತುರ್ತು ಭೂಸ್ಪರ್ಶ ಮಾಡಿದೆ. ಆರು ಯಾತ್ರಾರ್ಥಿಗಳು ಮತ್ತು ಪೈಲಟ್ ಸೇರಿ ಏಳು ಜನರನ್ನು ಹೊತ್ತ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ್ದು, ಇಂದು ದೊಡ್ಡ ಅಪಘಾತ ತಪ್ಪಿದೆ. ಇಂದು ಮುಂಜಾನೆ 7 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಹೆಲಿಕಾಪ್ಟರ್‌ ಸಿರ್ಸಿ ಹೆಲಿಪ್ಯಾಡ್‌ನಿಂದ ಕೇದಾರನಾಥಕ್ಕೆ ಟೇಕಾಫ್‌ ಆಗಿತ್ತು. ಮಾರ್ಗ ಮಧ್ಯದಲ್ಲಿ ತಾಂತ್ರಿಕ ಅಡಚಣೆ ಉಂಟಾಗಿದ್ದು, ಪೈಲಟ್‌ ತೆಗೆದುಕೊಂಡ ತ್ವರಿತ ನಿರ್ಧಾರದಿಂದಾಗಿ ದೊಡ್ಡ

ಲ್ಯಾಂಡಿಂಗ್ ವೇಳೆ ಗಿರಗಿರನೆ ತಿರುಗಿದ ಹೆಲಿಕಾಪ್ಟರ್‌| ತುರ್ತು ಭೂಸ್ಪರ್ಶ…! Read More »

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗ್ತಿದೆ ರೆಮಲ್ ಚಂಡಮಾರುತ| ಹಲವೆಡೆ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಹಲವೆಡೆ ಈಗಾಗಲೇ 4 ದಿನದಿಂದ ಉತ್ತಮ ಮಳೆ ಆಗುತ್ತಿದೆ. ಬಂಗಾಳಕೊಳ್ಳಿಯಲ್ಲಿ ವಾಯು ಭಾರ ಕುಸಿತ ಹಿನ್ನೆಲೆಯಲ್ಲಿ ಮುಂದಿನ ಐದು ದಿನ ಬೆಂಗಳೂರು ಸೇರಿದಂತೆ ರಾಜ್ಯ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಮುಂದಿನ‌ 48 ಗಂಟೆಯಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ಸ್ ಉಷ್ಣಾಂಶ ಇರಲಿದೆ. ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ತಿಳಿಸಿದೆ. ಬಂಗಾಳ ಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ರೂಪುಗೊಂಡ ಪರಿಣಾಮ ಸೈಕ್ಲೋನ್ ಸೃಷ್ಟಿಯಾಗಿದೆ.

ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗ್ತಿದೆ ರೆಮಲ್ ಚಂಡಮಾರುತ| ಹಲವೆಡೆ ಭಾರೀ ಮಳೆ ಮುನ್ಸೂಚನೆ Read More »

Scam Calls ಜಾಸ್ತಿ ಬರ್ತಾ ಇದ್ಯ? ಡೋಂಟ್ ವರಿ, ಇಲ್ಲಿದೆ ಬಿಗ್ ಗುಡ್ ನ್ಯೂಸ್!

ಸಮಗ್ರ ನ್ಯೂಸ್: ಈಗ ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ಇದೆ. ಅಲ್ಲದೆ ಪ್ರತಿಯೊಬ್ಬ ವ್ಯಕ್ತಿಯು 2-3 ಸಿಮ್ ಕಾರ್ಡ್‌ಗಳನ್ನು ಯೂಸ್ ಮಾಡ್ತಾರೆ. ಅವು ಕಾಂಟಾಕ್ಟ್ ನಂಬರ್ ಗಳನ್ನು ಸೇವ್ ಮಾಡಿದ್ದರೆ ಕಾಲ್, ಮೆಸೇಜ್ ಬಂದಾಗ ತಿಳಿಯುತ್ತೆ ನಮಗೆ. ಕೆಲವೊಮ್ಮೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುತ್ತವೆ. ಕೆಲವೊಮ್ಮೆ ಆ ಸಂಖ್ಯೆಗಳು ಟೆಲಿಮಾರ್ಕೆಟಿಂಗ್ ಆಗಿರಬಹುದು. ಅಥವಾ ಯಾರದೋ ಅಪರಿಚಿತ ನಂಬರ್ ಆಗಿರಬಹುದು. ಇಲ್ಲದಿದ್ದರೆ ಸ್ಪ್ಯಾಮ್ ಕರೆಗಳು ಬರುತ್ತವೆ. ನಾವು ಕರೆಯನ್ನು ಎತ್ತಿದ ನಂತರವೇ ನಮಗೆ ತಿಳಿಯುತ್ತದೆ ಅದು ಏನು, ಯಾರು

Scam Calls ಜಾಸ್ತಿ ಬರ್ತಾ ಇದ್ಯ? ಡೋಂಟ್ ವರಿ, ಇಲ್ಲಿದೆ ಬಿಗ್ ಗುಡ್ ನ್ಯೂಸ್! Read More »