ರಾಷ್ಟ್ರೀಯ

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! | ನಾನು ದೇವಸ್ಥಾನ, ಮಸೀದಿಗೆ ಹೋಗುತ್ತಿದ್ದೆ | ಇದರಲ್ಲಿ ತಪ್ಪೇನಿದೆ..?

ಮೂರು ವರ್ಷಗಳ ಕಾಲ ಮೀರತ್​ ಜೈಲಿನಲ್ಲಿದ್ದ 46 ವರ್ಷದ ತಾರಾ ಚಂದ್​ ಈ ಅವಧಿಯಲ್ಲಿ ಕೆಲ ಕೈದಿಗಳನ್ನ ತನ್ನ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದರು. ಇದರಲ್ಲಿ ಕೆಲವರು ಮುಸ್ಲಿಮರೂ ಇದ್ದರು. ಕೆಲ ದಿನಗಳ ಹಿಂದಷ್ಟೇ ಜೈಲಿನಿಂದ ಹೊರಬಂದ ತಾರಾಚಂದ್​ ತಮ್ಮ ಮುಸ್ಲಿಂ ಸ್ನೇಹಿತರ ನೆರವಿನಿಂದ ತಾಹೀರ್​ ಎಂದು ಹೆಸರನ್ನ ಬದಲಾಯಿಸಿಕೊಂಡಿದ್ದರು. ಅಲ್ಲದೇ ಗಡ್ಡವನ್ನ ಬೆಳೆಸಲು ಆರಂಭಿಸಿದ್ರು. ಆದರೆ ಇದೆಲ್ಲವನ್ನ ವಿರೋಧಿಸಿ ಬಲಪಂಥೀಯರು ಪ್ರತಿಭಟನೆ ಮಾಡುತ್ತಿದ್ದಂತೆಯೇ ತಾರಾಚಂದ್​ ತಮ್ಮ ಗಡ್ಡವನ್ನ ಶೇವ್​ ಮಾಡಿದ್ದಾರೆ. ನಾನು ದೇವಸ್ಥಾನ ಹಾಗೂ ಮಸೀದಿಗೆ ಹೋಗುತ್ತಿದ್ದೆ. ಇದರಲ್ಲಿ […]

ಜೈಲಿನಿಂದ ಬಿಡುಗಡೆಗೊಂಡ ಕೈದಿಗೆ ಮುಸ್ಲಿಂ ಧರ್ಮದ ಮೇಲೆ ಪ್ರೀತಿ..! | ನಾನು ದೇವಸ್ಥಾನ, ಮಸೀದಿಗೆ ಹೋಗುತ್ತಿದ್ದೆ | ಇದರಲ್ಲಿ ತಪ್ಪೇನಿದೆ..? Read More »

Breaking ಸಮಾಚಾರ: ಕೋವಿಡ್ ಬಾಧಿತ ವಲಯಗಳಿಗೆ ಕೇಂದ್ರದಿಂದ ಆಕ್ಸಿಜನ್, ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಮಧ್ಯಾಹ್ನ 3 ಗಂಟೆಗೆ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದು, ಕೋವಿಡ್-19 ಪರಿಹಾರ ಕ್ರಮಗಳನ್ನು ಘೋಷಿಸಿದ್ದಾರೆ. ಅದರಂತೆ, ಕೇಂದ್ರ ಸರ್ಕಾರದಿಂದ ಪ್ರಮುಖ 8 ಮಾದರಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದು, ಅದ್ರಲ್ಲಿ 4 ಹೊಸ ಘೋಷಣೆ ಇವೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್ ಬಾಧಿತ ವಲಯಗಳಿಗೆ ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದು, ಆರೋಗ್ಯ ಆರೈಕೆಯು ₹50,000 ಕೋಟಿ ಪಡೆಯಲಿದೆ

Breaking ಸಮಾಚಾರ: ಕೋವಿಡ್ ಬಾಧಿತ ವಲಯಗಳಿಗೆ ಕೇಂದ್ರದಿಂದ ಆಕ್ಸಿಜನ್, ₹1.1 ಲಕ್ಷ ಕೋಟಿ ಸಾಲ ಖಾತರಿ ಯೋಜನೆ ಘೋಷಿಸಿದ ನಿರ್ಮಲಾ ಸೀತಾರಾಮನ್ Read More »

ಜಮ್ಮು-ಕಾಶ್ಮೀರ ಒಂದು ದೇಶವಂತೆ | ಲೇಹ್ ಚೀನಾದ ಭಾಗವಂತೆ | ಏನಿದು ಟ್ವಿಟ್ಟರ್ ಎಡವಟ್ಟು?

ದೆಹಲಿ: ಭಾರತದ ನಕ್ಷೆ ತೋರಿಸುವಲ್ಲಿ ಟ್ವಿಟ್ಟರ್ ಎಡವಿದ್ದು, ಜಮ್ಮು ಕಾಶ್ಮೀರಾ ಪ್ರತ್ಯೇಕ ರಾಜ್ಯ, ಲೇಹ್ ಚೀನಾದ ಭೂ ಭಾಗವೆಂದು ತೋರಿಸಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ. ಇದರಿಂದ ಮೈಕ್ರೋ-ಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ ತನ್ನ ವೆಬ್‌ಸೈಟ್‌ನಲ್ಲಿ ಮತ್ತೊಮ್ಮೆ ಭಾರತದ ತಪ್ಪು ನಕ್ಷೆಯನ್ನು ತೋರಿಸಿದಂತಾಗಿದೆ. ಸದ್ಯ ಟ್ವಿಟ್ಟರ್ ನ ‘ಟ್ವೀಪ್ ಲೈಫ್’ ವಿಭಾಗದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ದೇಶದಿಂದ ಬೇರ್ಪಟ್ಟಿದೆ ಎಂದು ತೋರಿಸುತ್ತಿದೆ. ಟ್ವಿಟರ್ ಭಾರತದ ತಪ್ಪು ನಕ್ಷೆಯನ್ನು ತೋರಿಸಿರುವುದು ಇದು ಮೊದಲಲ್ಲ. 2020 ರ ಅಕ್ಟೋಬರ್‌ನಲ್ಲಿ

ಜಮ್ಮು-ಕಾಶ್ಮೀರ ಒಂದು ದೇಶವಂತೆ | ಲೇಹ್ ಚೀನಾದ ಭಾಗವಂತೆ | ಏನಿದು ಟ್ವಿಟ್ಟರ್ ಎಡವಟ್ಟು? Read More »

ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ

ಜಮ್ಮು-ಕಾಶ್ಮೀರ: ವಾಯುಪಡೆ ಕೇಂದ್ರದ ಮೇಲೆ ಡ್ರೋನ್ ದಾಳಿ ನಡೆಸಿದ ಬೆನ್ನಲ್ಲೇ, ಪೊಲೀಸ್ ವಿಶೇಷಾಧಿಕಾರಿ ಮನೆಗೆ ನುಗ್ಗಿದ ಉಗ್ರರು ಗುಂಡಿನ ದಾಳಿ ನಡೆಸಿ ದಂಪತಿಯನ್ನು ಕೊಂದ ಘಟನೆ ನಿನ್ನೆ ತಡರಾತ್ರಿ ನಡೆದಿದೆ. ಘಟನೆಯಲ್ಲಿ ಅಧಿಕಾರಿಯ ಪುತ್ರಿ ಗಂಭೀರ ಗಾಯಗೊಂಡಿದ್ದಾರೆ. ನಿನ್ನೆ ರಾತ್ರಿ 11 ಗಂಟೆಗೆ ಪುಲ್ವಾಮ ಜಿಲ್ಲೆಯ ಅವಂತಿಪೊರದ ಹರಿಪರಿಗಾಂವ್ ನಲ್ಲಿರುವ ಪೊಲೀಸ್ ವಿಶೇಷಾಧಿಕಾರಿ ಫಯಾಜ್ ಅಹ್ಮದ್ ಅವರ ಮನೆಗೆ ನುಗ್ಗಿದ ಉಗ್ರರು ಏಕಾಏಕಿ ಗುಂಡಿನ ಸುರಿಮಳೆಗೈದಿದ್ದಾರೆ. ಪರಿಣಾಮ ಫಯಾಜ್ ಮತ್ತು ಅವರ ಪತ್ನಿ ರಾಜಾ ಬೇಗಂ ಸ್ಥಳೀಯ

ಪೊಲೀಸ್ ಅಧಿಕಾರಿ ಮನೆಗೆ ನುಗ್ಗಿ ಉಗ್ರರಿಂದ ಗುಂಡಿನ ದಾಳಿ |ದಂಪತಿ ಮೃತ್ಯು | ಮಗಳು ಗಂಭೀರ Read More »

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ

ನವದೆಹಲಿ: 12 ರಿಂದ 18 ವರ್ಷದ ಮಕ್ಕಳಿಗೆ ಶೀಘ್ರವೇ ಕೊರೋನಾ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಪ್ರಮುಖ ಔಷಧ ಕಂಪನಿ ಜೈಡಸ್ ಕ್ಯಾಡಿಲಾ ಅಭಿವೃದ್ಧಿಪಡಿಸಿದ ಜೈಕೋವ್ ಡಿ ಲಸಿಕೆಯನ್ನು 12 ರಿಂದ 18 ವರ್ಷದ ಮಕ್ಕಳಿಗೆ ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ ಗೆ ತಿಳಿಸಿದೆ. ಭಾರತ್ ಬಯೋಟೆಕ್ ಲಸಿಕೆಯನ್ನು 12 -18 ವರ್ಷದವರ ಮೇಲೆ ಪ್ರಯೋಗಕ್ಕೆ ಕಳೆದ ಮೇ ನಲ್ಲಿ ಅನುಮತಿ ನೀಡಲಾಗಿದೆ. ಅನುಮತಿ ದೊರೆತ ಕೂಡಲೇ ಕ್ಲಿನಿಕಲ್ ಪ್ರಯೋಗ ಮುಗಿಸಿದ ಜೈಡಸ್

ಶೀಘ್ರದಲ್ಲೇ 12+ ಮಕ್ಕಳಿಗೆ ಲಸಿಕೆ Read More »

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ

ಸಾಮಾಜಿಕ ಜಾಲತಾಣಗಳಲ್ಲಿ ಈಗ ಕ್ಲಬ್ ಹೌಸ್ ಬಗ್ಗೆಯೇ ಮಾತು ಹೆಚ್ಚುತ್ತಿದೆ. ಈ ಕ್ಲಬ್‌ನಲ್ಲಿ ಇವತ್ತು ಈ ನಟಿ, ನಿರ್ದೇಶಕ ಬಂದಿದ್ದರು. ಬಹಳ ಚೆನ್ನಾಗಿ ಮಾತನಾಡಿದರು ಎಂಬ ಮಾತುಗಳನ್ನು ನೀವು ಕೇಳಿರಬಹುದು. ಹೀಗಾಗಿ ನಾನು ಕ್ಲಬ್ ಹೌಸ್ ಸೇರಬೇಕು, ಮಾತನಾಡಬೇಕು ಎಂದು ಅನಿಸಿದ್ದರೂ ಜಾಯಿನ್ ಆಗುವುದು ಹೇಗೆ? ಜಾಯಿನ್ ಆದ ನಂತರ ಮಾತನಾಡುವುದು ಹೇಗೆ? ಕ್ಲಬ್ ಸೃಷ್ಟಿ ಮಾಡುವುದು ಹೇಗೆ? ಹೀಗೆ ಹಲವು ಪ್ರಶ್ನೆಗಳು ನಿಮ್ಮಲ್ಲಿ ಮೂಡುವುದು ಸಹಜ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಲು ಇಲ್ಲಿ ಸರಳವಾಗಿ

ಜಾಲತಾಣಗಳಲ್ಲಿ ಕ್ಲಬ್ ಹೌಸ್ ದೇ ಮಾತು | ಹಾಗಿದ್ರೆ ಏನಿದು ಕ್ಲಬ್ ಹೌಸ್? | ಇಲ್ಲಿದೆ ಸಂಪೂರ್ಣ ಮಾಹಿತಿ Read More »

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ

ದೆಹಲಿ: ರಿಲಯನ್ಸ್ ಜಿಯೋ ಗೂಗಲ್ ಜೊತೆಗೂಡಿ ಜಿಯೋಫೋನ್ ಒಂದನ್ನು ಮಾರುಕಟ್ಟೆಗೆ ತರಲು ಯೋಜನೆ ಹಾಕಿಕೊಂಡಿದೆ. 4ಜಿ ಸಾಮರ್ಥ್ಯದ ಆ್ಯಡ್ರಾಂಯ್ಡ್ ಫೋನ್‌ನ್ನು ಕೈಗೆಟುಕುವ ದರದಲ್ಲಿ ನೀಡಲು ಯೋಜಿಸಿಕೊಂಡಿದೆ. ಜಿಯೋಫೋನ್ ನೆಕ್ಸ್ಟ್ ಎಂಬ ಮಾದರಿಯ ಈ ಮೊಬೈಲ್ ಫೋನ್‌ನ್ನು ರಿಲಯನ್ಸ್ ಇಂಡಸ್ಟ್ರೀಸ್‌ನ ೪೪ನೇ ವಾರ್ಷಿಕ ಜನರಲ್ ಮೀಟಿಂಗ್‌ನಲ್ಲಿ ಗುರುವಾರ ಮುಕೇಶ್ ಅಂಬಾನಿ ಘೋಷಿಸಿದ್ದಾರೆ. ಈ ಹೊಸ ಸ್ಮಾರ್ಟ್ಫೋನ್ ರಿಲಯನ್ಸ್ ಜಿಯೋ ಹಾಗೂ ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದ್ದು ಕಳೆದ ವರ್ಷವೇ ಮುಕೇಶ್ ಅಂಬಾನಿ ಮತ್ತು ಗೂಗಲ್ ಮುಖ್ಯಸ್ಥ ಸುಂದರ್ ಪಿಚೈ

ಹೊಸ ಸ್ಮಾರ್ಟ್ಫೋನ್ ರಿಲಯನ್ಸ್, ಗೂಗಲ್‌ನ ಸಹಭಾಗಿತ್ವದಿಂದ ಮಾರುಕಟ್ಟೆಗೆ ಬರಲಿದೆ | ಈ ಬಗ್ಗೆ ತಿಳಿದುಕೊಳ್ಳಿ Read More »

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ

ಜನಪ್ರಿಯ ಟೆಲಿಗ್ರಾಂ ಅಂತಿಮವಾಗಿ ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದೀಗ ಸ್ಮಾರ್ಟ್ಫೋನ್, ಟ್ಯಾಬ್ಲೆಟ್ ಮತ್ತು ಡೆಸ್ಕ್ಟಾಪ್ ಬಳಕೆದಾರರು ಗ್ರೂಪ್ ವಿಡಿಯೋ ಕರೆಯನ್ನು ಮಾಡಬಹುದಾಗಿದೆ. ಟೆಲಿಗ್ರಾಂ ಒಂದು ವರ್ಷಗಳ ಹಿಂದೆಯೇ ವಿಡಿಯೋ ಕರೆಯ ಬಗ್ಗೆ ಹೇಳಿಕೊಂಡಿತ್ತು. ಆದರೀಗ ವೈಶಿಷ್ಟ್ಯಯವನ್ನು ಪರಿಚಯಿಸಿದೆ. ಟೆಲಿಗ್ರಾಂ ಬಳಕೆದಾರರು ಆ್ಯಪ್ ಅಪ್‌ಡೇಟ್ ಮಾಡುವ ಮೂಲಕ ನೂತನ ಫೀಚರ್ ಬಳಕೆಗೆ ಸಿಗಲಿದೆ. ಲಂಡನ್ ಮೂಲದ ಟೆಲಿಗ್ರಾಂ ಆ್ಯಪ್‌ನ ಹೊಸ ಕ್ರಮವು ಫೇಸ್‌ಬುಕ್, ವಾಟ್ಸ್ಪ್ ಮತ್ತು ಆ್ಯಪಲ್‌ನ ಫೇಸ್‌ಟೈಂ ಅನ್ನು ತೆಗೆದುಕೊಳ್ಳುತ್ತದೆ. ಟೆಲಿಗ್ರಾಂ ಗ್ರೂಪ್ ಕರೆ

ಗ್ರೂಪ್ ವಿಡಿಯೋ ಕರೆ ವೈಶಿಷ್ಟ್ಯವನ್ನು ಪರಿಚಯಿಸಿದ ಟೆಲಿಗ್ರಾಂ |ಬಳಕೆದಾರರೇ ಆ್ಯಪ್ ಅಪ್‌ಡೇಟ್ ಮಾಡಿಕೊಳ್ಳಿ Read More »

ಮೋದಿ‌ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಸರ್ವನಿಯಮ ಉಲ್ಲಂಘನೆ | ಇವ್ರು ಹೇಳೋದು ಶಾಸ್ತ್ರ, ಇಕ್ಕೋದು ಗಾಳ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಚುನಾವಣೆ ನಡೆಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಶುಕ್ರವಾರ ಸರ್ವಪಕ್ಷಗಳ ಸಭೆ ನಡೆಸಿದ್ದು, ಈ ಸಭೆಯಲ್ಲಿ ಭಾಗವಹಿಸಿದ್ದ ಅಷ್ಟೂ ಹಿರಿಯ ರಾಜಕಾರಣಿಗಳು ಕೊರೊನಾ ನಿಯಮ ಉಲ್ಲಂಘಿಸಿ‌ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇವರ ಅವಿವೇಕತನದಿಂದಾಗಿ ಜನಸಾಮಾನ್ಯರು ಇವರಿಗೆ ಕೊರೊನ ಬರಲ್ವೇ? ಅಂತ ಜಾಲತಾಣಗಳಲ್ಲಿ ಪ್ರಶ್ನಿಸುತ್ತಿದ್ದಾರೆ.ಸರ್ವ ಪಕ್ಷಗಳ ಸಭೆಯಲ್ಲಿ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಜಮ್ಮು ಕಾಶ್ಮೀರದ ಮಾಜಿ ಸಿಎಂಗಳಾದ ಓಮರ್ ಅಬ್ದುಲ್ಲಾ, ಮೆಹಬೂಬ ಮುಪ್ತಿ, ಪಾರೂಕ್

ಮೋದಿ‌ ನೇತೃತ್ವದ ಸರ್ವಪಕ್ಷ ಸಭೆಯಲ್ಲಿ ಸರ್ವನಿಯಮ ಉಲ್ಲಂಘನೆ | ಇವ್ರು ಹೇಳೋದು ಶಾಸ್ತ್ರ, ಇಕ್ಕೋದು ಗಾಳ Read More »

ಗರ್ಭಿಣಿಯರಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್

ನವದೆಹಲಿ: ದೇಶದ ಎಲ್ಲಾ ಗರ್ಭಿಣಿಯರಿಗೆ ಕೋವಿಡ್ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ಲಸಿಕೆ ಗರ್ಭಿಣಿಯರಿಗೆ ಉಪಯುಕ್ತವಾಗಲಿದೆ ಮತ್ತು ಅದನ್ನು ನೀಡಬೇಕು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಡಾ. ಬಲರಾಮ್ ಭಾರ್ಗವ್ ಹೇಳಿದ್ದಾರೆ. ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ಗರ್ಭಿಣಿಯರಿಗೆ ಲಸಿಕೆ ನೀಡಲು ಅನುಮತಿಸಿತ್ತು. ಆದರೆ ಭಾರತದಲ್ಲಿ ವೈದ್ಯಕೀಯ ಪ್ರಯೋಗ ದತ್ತಾಂಶದ ಕೊರತೆ ಇತ್ತು ಎಂದು ಹೇಳಲಾಗಿತ್ತು. ಇದೀಗ ವೈಜ್ಞಾನಿಕ ಪುರಾವೆ ಗಳನ್ನು ಅಧ್ಯಯನ ಮಾಡುವ

ಗರ್ಭಿಣಿಯರಿಗೆ ಲಸಿಕೆ ನೀಡಲು ಗ್ರೀನ್ ಸಿಗ್ನಲ್ Read More »