ವಿಕ್ರಾಂತ್ ಯುದ್ದನೌಕೆ ಪರೀಕ್ಷಾರ್ಥ ಪ್ರಯೋಗ ಯಶಸ್ವಿ| ಸೇನಾವಲಯದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಭಾರತ|
ನವದೆಹಲಿ: ಭಾರತದ ಮೊದಲ ದೇಶೀಯ ವಿಮಾನ ವಾಹಕ ಯುದ್ಧನೌಕೆ (IAC) ವಿಕ್ರಾಂತ್ ಐದು ದಿನಗಳ ಪರೀಕ್ಷಾರ್ಥ ಸಂಚಾರ ಮುಗಿಸಿ ಹಿಂದಿರುಗಿದೆ. 40,000 ಟನ್ ಯುದ್ಧನೌಕೆಯ ಕಾರ್ಯಕ್ಷಮತೆಯನ್ನು ಪರೀಕ್ಷೆ ಮಾಡಲು, ಐದು ದಿನಗಳ ಸಮುದ್ರ ಪ್ರಯೋಗ ಕಳೆದ ಬುಧವಾರದಿಂದ ಪ್ರಾರಂಭವಾಗಿತ್ತು. ಅಂದಾಜು 23 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಈ ವಿಕ್ರಾಂತ್ ಯುದ್ಧನೌಕೆ ಯನ್ನು ತಯಾರಿಸಲಾಗಿದೆ. ಈ ಸ್ವದೇಶಿ ನಿರ್ಮಿತ ವಿಮಾನ ವಾಹಕ ಯುದ್ಧನೌಕೆ ಮುಂದಿನ ವರ್ಷ ಆಗಸ್ಟ್ನಿಂದ ಭಾರತೀಯ ನೌಕಾಪಡೆಯನ್ನು ಸೇರಲಿದೆ. ಈ ಯುದ್ಧ ನೌಕೆಯೀಗ ಯಶಸ್ವಿಯಾಗಿ […]