ರಾಷ್ಟ್ರೀಯ

1947 ರಲ್ಲಿ ಸ್ವಾತಂತ್ರ್ಯ ಅಲ್ಲ, ಭಿಕ್ಷೆ ಸಿಕ್ಕಿದ್ದು- ಕಂಗನಾ ರಣಾವತ್

ಡಿಜಿಟಲ್‌ ಡೆಸ್ಕ್‌ : ಬಾಲಿವುಡ್ ನಟಿ ಕಂಗನಾ ರಣಾವತ್ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದು, ಇತ್ತೀಚೆಗೆ ನಡೆದ ಖಾಸಗಿ ಚಾನಲ್‌ನ ಕಾರ್ಯಕ್ರಮವೊಂದರಲ್ಲಿ ”1947ರಲ್ಲಿ ದೇಶಕ್ಕೆ ಸಿಕ್ಕಿದ್ದು ಸ್ವಾತಂತ್ರ್ಯ ಅಲ್ಲ, ಅದು ಭಿಕ್ಷೆ. ಸಧ್ಯ ಈ ಹೇಳಿಕೆಯನ್ನ ಬಿಜೆಪಿ ಸಂಸದ ವರುಣ್ ಗಾಂಧಿ ಟ್ವೀಟರ್‌ನಲ್ಲಿ ಹಂಚಿಕೊಂಡಿದ್ದು, ಕಂಗನಾರ ಈ ಮಾತಿಗೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಹಲವೆಡೆ ಆಕ್ಷೇಪ ವ್ಯಕ್ತವಾಗಿದೆ. ಇನ್ನು ಕಂಗನಾ ಹೇಳಿಕೆ ವಿರುದ್ಧ ಮುಂಬೈನಲ್ಲಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತೆಯಾದ ಪ್ರೀತಿ ಮೆನನ್ ಪೊಲೀಸರಿಗೆ ದೂರು ನೀಡಿದ್ದಾರೆ. […]

1947 ರಲ್ಲಿ ಸ್ವಾತಂತ್ರ್ಯ ಅಲ್ಲ, ಭಿಕ್ಷೆ ಸಿಕ್ಕಿದ್ದು- ಕಂಗನಾ ರಣಾವತ್ Read More »

ನೀತಿ ಸಂಹಿತೆ ಎಂದರೇನು,ಗೊತ್ತೆ?

ಯಾವುದೇ ಚುನಾವಣೆ ಬಂದಾಗಲೆಲ್ಲಾ ಮೊದಲು ಚುನಾವಣಾ ನೀತಿ ಸಂಹಿತೆಯದ್ದೇ ಸದ್ದು. ಹಾಗಾಗಿ ಈ ನೀತಿಸಂಹಿತೆ ಬಗ್ಗೆ ಹೇಳುವುದಾದರೆ ಚುನಾವಣಾ ಅಕ್ರಮಗಳಿಗೆ ತಡೆ ಹಾಕಿ, ಸುಸೂತ್ರವಾಗಿ, ಶಾಂತಿಯುತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಅನುಸರಿಸಲಾಗುವ ಕಾನೂನು ಕ್ರಮಗಳನ್ನು ನೀತಿ ಸಂಹಿತೆ ಎನ್ನುವರು. ಇನ್ನೂ ಇದು ಚುನಾವಣೆಗೆ ದಿನಾಂಕ ಘೋಷಣೆ ಆದಾಗಿನಿಂದ ಮತದಾನ ಮುಗಿಯುವವರೆಗೆ ಇದು ಜಾರಿಯಲ್ಲಿರುತ್ತದೆ. ಸರ್ಕಾರ, ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಇದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಈ ಚುನಾವಣಾ ನೀತಿ ಸಂಹಿತೆಯ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. –

ನೀತಿ ಸಂಹಿತೆ ಎಂದರೇನು,ಗೊತ್ತೆ? Read More »

ಬಿಟ್ ಕಾಯಿನ್ ಎಂಬ ಮಾಯಾಂಗನೆ..! ಏನಿದು ಗೊತ್ತಾ ನಿಮ್ಗೆ?

ಡಿಜಿಟಲ್ ಡೆಸ್ಕ್: ಸದ್ಯ‌ ಬಿಟ್ ಕಾಯಿನ್ ಸುದ್ದಿಗಳು ಎಲ್ಲೆಡೆ ಹರಿದಾಡುತ್ತಿವೆ. ರಾಜ್ಯ ರಾಜಕೀಯದಲ್ಲೂ ಪರಸ್ಪರ ಕೆಸರೆರಚಾಟ, ಸಂಚಲಕ್ಕೆ ಕಾರಣವಾಗಿರುವ ಈ ಮಾಯಾ ಕರೆನ್ಸಿ‌ ಬಗ್ಗೆ ಎಲ್ಲರೂ ಕುತೂಹಲದಿಂದ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಏನಿದು ಬಿಟ್ ಕಾಯಿನ್? ಬಗ್ಗೆ ತಿಳಿದುಕೊಳ್ಳೋಣ ಬನ್ನಿ.. ಬಿಟ್ ಕಾಯಿನ್ ಏನಿದು? ಇದರ ಬಗ್ಗೆ ಎಚ್ಚರವಿರಲಿ.. ಬಿಟ್ ಕಾಯಿನ್ ಡಿಜಿಟಲ್ ಯುಗದ ಡಿಜಿಟಲ್ ಕರೆನ್ಸಿ. ಇದಕ್ಕೆ ಮುದ್ರಣ ರೂಪ ಇಲ್ಲ. ಬಿಟ್ ಕಾಯಿನ್ ಎಂಬ ಮಾಯಾಂಗನೆ ಕೇವಲ ಎಲೆಕ್ಟ್ರಾನಿಕ್ ರೂಪದಲ್ಲಿದ್ದು, ರೂಪಾಯಿ, ಡಾಲರ್,

ಬಿಟ್ ಕಾಯಿನ್ ಎಂಬ ಮಾಯಾಂಗನೆ..! ಏನಿದು ಗೊತ್ತಾ ನಿಮ್ಗೆ? Read More »

ಇಂದು ಮೋದಿ- ಬೊಮ್ಮಾಯಿ ಭೇಟಿ| ಪ್ರಮುಖ ವಿಷಯಗಳ ಕುರಿತು ಚರ್ಚೆ ಸಾಧ್ಯತೆ|

ನವದೆಹಲಿ : ದೆಹಲಿ ಪ್ರವಾಸ ಕೈಗೊಂಡಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಬೆಳಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಪ್ರಧಾನಿ ಮೋದಿ ಜೊತೆ ಚರ್ಚೆ ಮಾಡುತ್ತೇನೆ. ಹಾಗೆಯೇ ಪ್ರಧಾನಿ ಅವರನ್ನು ಭೇಟಿಯಾಗಿ ಬಹಳ ದಿನಗಳಾಗಿದ್ದವು. ಹೀಗಾಗಿ ಅವರ ಭೇಟಿಗೆ ಸಮಯ ಕೇಳಿದ್ದೆ ಎಂದು ಹೇಳಿದ್ದಾರೆ. ಇಂದಿನ ಭೇಟಿ ವೇಳೆ ಹಾನಗಲ್ ಉಪಚುನಾವಣೆ

ಇಂದು ಮೋದಿ- ಬೊಮ್ಮಾಯಿ ಭೇಟಿ| ಪ್ರಮುಖ ವಿಷಯಗಳ ಕುರಿತು ಚರ್ಚೆ ಸಾಧ್ಯತೆ| Read More »

60 ರೂಪಾಯಿಗೆ ಕೊಡಬಹುದಾದ ಪೆಟ್ರೋಲ್ ಗೆ 100 ರೂ.ಗಿಂತಲೂ ಅಧಿಕ| ಕಚ್ಚಾ ತೈಲ ಬೆಲೆಯಲ್ಲಿ ಗರಿಷ್ಠ ಇಳಿಕೆ| ಆದರೂ ಈ ಬೆಲೆ ಏರಿಕೆ ಯಾಕೆ?

ಡಿಜಿಟಲ್ ಡೆಸ್ಕ್: ಜಾಗತಿಕ ಕಚ್ಚಾ ತೈಲ ದರವು ಮೂರು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆ ಬ್ಯಾರೆಲ್‌ಗೆ 85 ಯುಎಸ್‌ಡಿ ಇತ್ತು. ಆದರೆ ಈಗ ಜಾಗತಿಕ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 83 ಡಾಲರ್‌ಗೆ ಕುಸಿದಿದ್ದು ಇದು ಮೂರು ವರ್ಷದಲ್ಲಿ ಗರಿಷ್ಠ ಮಟ್ಟದ ಇಳಿಕೆಯಾಗಿದೆ. ದೇಶದಲ್ಲಿ ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಏರುತ್ತಿದ್ದವು. ಕೇವಲ 45 ದಿನಗಳಲ್ಲಿ 30 ಬಾರಿ ಏರಿಕೆಯಾಗಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ

60 ರೂಪಾಯಿಗೆ ಕೊಡಬಹುದಾದ ಪೆಟ್ರೋಲ್ ಗೆ 100 ರೂ.ಗಿಂತಲೂ ಅಧಿಕ| ಕಚ್ಚಾ ತೈಲ ಬೆಲೆಯಲ್ಲಿ ಗರಿಷ್ಠ ಇಳಿಕೆ| ಆದರೂ ಈ ಬೆಲೆ ಏರಿಕೆ ಯಾಕೆ? Read More »

ನ.19 ರಂದು ಘಟಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ| ಯಾರಿಗೆ ಶುಭ| ಯಾವ ರಾಶಿಗೆ ಶುಭಫಲ| ಇಲ್ಲಿದೆ ವಿವರ…

ನ್ಯೂಸ್ ಬ್ಯೂರೋ : ನವೆಂಬರ್ 19 ಈ ವರ್ಷದ ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಭಾರತ, ಯುಎಸ್‌ಎ, ಉತ್ತರ ಯುರೋಪ್, ಆಸ್ಟ್ರೇಲಿಯಾ, ಪೂರ್ವ ಏಷ್ಯಾ ಮತ್ತು ಪೆಸಿಫಿಕ್ ಸಾಗರದ ಕೆಲವು ಪ್ರದೇಶಗಳಲ್ಲಿ ಚಂದ್ರಗ್ರಹಣ ಗೋಚರಿಸಲಿದೆ. ಹಿಂದೂ ಪಂಚಾಂಗದ ಪ್ರಕಾರ, ಕಾರ್ತಿಕ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು ಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣವು ಧಾರ್ಮಿಕವಾಗಿ ಬಹಳ ಮಹತ್ವದ್ದಾಗಿದ್ದು, ಶಾಸ್ತ್ರಗಳ ಪ್ರಕಾರ ಗ್ರಹಣದ ಸಮಯದಲ್ಲಿ ಶುಭ ಕಾರ್ಯಗಳು ನಿಷಿದ್ಧ. ಇನ್ನು ಈ ಗ್ರಹಣವು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ನವೆಂಬರ್ 19ರಂದು

ನ.19 ರಂದು ಘಟಿಸಲಿದೆ ವರ್ಷದ ಕೊನೆಯ ಚಂದ್ರಗ್ರಹಣ| ಯಾರಿಗೆ ಶುಭ| ಯಾವ ರಾಶಿಗೆ ಶುಭಫಲ| ಇಲ್ಲಿದೆ ವಿವರ… Read More »

ದಾಂಪತ್ಯಕ್ಕೆ ಕಾಲಿಟ್ಟ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕ್ರತೆ ಮಲಾಲಾ

ದೆಹಲಿ: ನೊಬೆಲ್​ ಶಾಂತಿ ಪ್ರಶಸ್ತಿ ಪುರಸ್ಕೃತೆ, ಪಾಕಿಸ್ತಾನದ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್​ ಝಾಯಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಮದುವೆಯ ವಿಚಾರವನ್ನು ಹಂಚಿಕೊಂಡಿದ್ದಾರೆ. ಬ್ರಿಟನ್​​ನ ಬರ್ಮಿಂಗ್​ಹ್ಯಾಮ್​​ನಲ್ಲಿ ನಾನು ಮತ್ತು ಅಸ್ಸರ್​ ಮದುವೆಯಾಗಿದ್ದೇವೆ ಎಂದು ಮಲಾಲಾ ತಮ್ಮ ಟ್ವಿಟರ್​​ ಖಾತೆಯಲ್ಲಿ ಫೋಟೋ ಕೂಡ ಶೇರ್​ ಮಾಡಿಕೊಂಡಿದ್ದಾರೆ. ತಮ್ಮ ನಿಖಾ ಸಮಾರಂಭದ ಬಗ್ಗೆ ಟ್ವೀಟ್ ಮಾಡಿರುವ ಮಲಾಲಾ, ಇಂದು ನನ್ನ ಬದುಕಲ್ಲಿ ಅತ್ಯಮೂಲ್ಯ ದಿನವಾಗಿದೆ. ಅಸ್ಸರ್​ ಮತ್ತು ನಾನು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದೇವೆ. ಬರ್ಮಿಂಗ್​ಹ್ಯಾಂನಲ್ಲಿ

ದಾಂಪತ್ಯಕ್ಕೆ ಕಾಲಿಟ್ಟ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕ್ರತೆ ಮಲಾಲಾ Read More »

‘ಅಲ್ಲಿ ಯಾರಿಗೂ ಕನ್ನಡ ಬರ್ತಿರ್ಲಿಲ್ಲ, ಮೋದಿ ಜೊತೆಗೂ‌ ಮಾತಾಡ್ದೆ’ – ಸಂತಸ ಹಂಚಿಕೊಂಡ ವೃಕ್ಷಮಾತೆ ತುಳಸಿ ಗೌಡ

ಅಂಕೋಲಾ : ವೃಕ್ಷದೇವತೆ ಎಂದೇ ಹೆಸರು ಗಳಿಸಿರುವ ಅಂಕೋಲಾದ ತುಳಸಿ ಗೌಡ ಅವರು ಬರಿಗಾಲಿನಲ್ಲೇ ಸಾಗಿ ರಾಷ್ಟ್ರಪತಿಗಳ ಮುಂದೆ ಅತ್ಯಂತ ಮುಗ್ಧವಾಗಿ ನಿಂತು ಪದ್ಮಶ್ರೀ ಪ್ರಶಸ್ತಿಯನ್ನು ಪಡೆದು ಎಲ್ಲರಿಗೂ ಮಾದರಿಯಾಗಿದ್ದಾರೆ. ಕಾಡಿನ ಮರಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರುವ ತುಳಸಿ ಗೌಡ ಅವರು ತಮ್ಮ ಮಾಮೂಲಿ ದಿರಸಿನಲ್ಲೇ ಪ್ರಶಸ್ತಿಯನ್ನು ಸ್ವೀಕರಿಸಿದರು. ತಾಯ್ನಾಡಿಗೆ ಮರಳಿದ ಮೇಲೆ ಪ್ರಶಸ್ತಿ ಪಡೆದ ಕ್ಷಣಗಳ ಬಗ್ಗೆ ಹೇಳಿದ ಅವರು, ಅಲ್ಲಿ ಯಾರಿಗೂ ಕನ್ನಡ ಬರುತ್ತಿರಲಿಲ್ಲ. ನಾನ್ ಹೇಳಿದ್ದು ಅವರಿಗೆ ಗೊತ್ತಾಗ್ತಾ ಇರಲಿಲ್ಲ. ಅವರು

‘ಅಲ್ಲಿ ಯಾರಿಗೂ ಕನ್ನಡ ಬರ್ತಿರ್ಲಿಲ್ಲ, ಮೋದಿ ಜೊತೆಗೂ‌ ಮಾತಾಡ್ದೆ’ – ಸಂತಸ ಹಂಚಿಕೊಂಡ ವೃಕ್ಷಮಾತೆ ತುಳಸಿ ಗೌಡ Read More »

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ|

ಚೆನ್ನೈ: ತಮಿಳುನಾಡಿನಲ್ಲಿ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪರಿಹಾರ ಕೇಂದ್ರಗಳಲ್ಲಿ 5000ಕ್ಕೂ ಅಧಿಕ ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಇನ್ನೂ ನಾಲ್ಕು ದಿನಗಳ ಕಾಲ ತಮಿಳುನಾಡಿನಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ 19 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ಹಲವು ಕಡೆ ಭಾರಿ ಮಳೆ ಮುಂದುವರೆದಿದೆ. ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. 10 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. 9 ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಪುದುಚೇರಿ,

ಭಾರೀ ಮಳೆ ಹಿನ್ನೆಲೆ| ತಮಿಳುನಾಡಿನ ಹಲವೆಡೆ ಶಾಲಾ ಕಾಲೇಜಿಗೆ ರಜೆ| Read More »

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ|

ನವದೆಹಲಿ: ಭಾರತ ಸರ್ಕಾರವು ನೀಡುವ ನಾಲ್ಕನೇ ಅತೀ ದೊಡ್ಡ ನಾಗರಿಕ ಪ್ರಶಸ್ತಿ ‘ಪದ್ಮ ಶ್ರೀ’ ಪ್ರಶಸ್ತಿಯನ್ನು ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ಭವನದಲ್ಲಿ ಸೋಮವಾರದಂದು ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಅವರು ಪ್ರದಾನ ಮಾಡಿದರು. ಸಾಂಪ್ರದಾಯಿಕ ಬಿಳಿ ಪಂಚೆ ಹಾಗೂ ಬಿಳಿ ಅಂಗಿ ಧರಿಸಿದ್ದ ಹಾಜಬ್ಬ ಅವರು ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದರು. ಕಿತ್ತಳೆ ಹಣ್ಣು ವ್ಯಾಪಾರದಿಂದ ಬಂದ ಹಣವನ್ನು ಕೂಡಿಟ್ಟು ಬಡ ಮಕ್ಕಳಿಗಾಗಿ ಶಾಲೆಯೊಂದನ್ನು ನಿರ್ಮಿಸಿದ ಇವರಿಗೆ ಈಗಾಗಲೇ ಹಲವು ಪ್ರಶಸ್ತಿ ಲಭಿಸಿವೆ.

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ| Read More »