ರಾಷ್ಟ್ರೀಯ

ಹೆಚ್ಚು ಮಕ್ಕಳ ಹೆತ್ತವರಿಗೆ ಟ್ರೋಫಿ ಸಹಿತ ಒಂದು ಲಕ್ಷ ಬಹುಮಾನ…!

ಮಿಜೋರಾಂ: ಕೇಂದ್ರ ಸರ್ಕಾರ ಸಹಿತ ಭಾರತದ ಎಲ್ಲ ರಾಜ್ಯ ಸರ್ಕಾರಗಳು ಜನಸಂಖ್ಯಾ ನಿಯಂತ್ರಣಕ್ಕೆ ಪ್ರೋತ್ಸಾಹ ನೀಡುತ್ತಿರುವುದರ ನಡುವೆ ಮಿಜೋರಾಂನ ಕ್ರೀಡಾ ಸಚಿವರು ಅಚ್ಚರಿಯ ಘೋಷಣೆ ಒಂದನ್ನು ಮಾಡಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನು ಹೆತ್ತ ಪೋಷಕರಿಗೆ ಪ್ರಮಾಣಪತ್ರ, ಟ್ರೋಫಿ ಜೊತೆಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಮಿಜೋರಾಮ್ ನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಈ ಹೇಳಿಕೆ ನೀಡಿದವರು. ಈ ಹೇಳಿಕೆಯ ಉದ್ದೇಶ ಕಡಿಮೆ ಜನಸಂಖ್ಯೆ ಹೊಂದಿರುವ ಮಿಜೊ ಸಮುದಾಯಗಳನ್ನು ಪ್ರೋತ್ಸಾಹಿಸುವುದಾಗಿದೆ. […]

ಹೆಚ್ಚು ಮಕ್ಕಳ ಹೆತ್ತವರಿಗೆ ಟ್ರೋಫಿ ಸಹಿತ ಒಂದು ಲಕ್ಷ ಬಹುಮಾನ…! Read More »

ದೀಪಾವಳಿ ವೇಳೆಗೆ ಕೊರೊನ ಮೂರನೇ ಆಟಂ ಬಾಂಬ್….! ಆತಂಕ ಎಬ್ಬಿಸಿದ ತಜ್ಞರ ಹೇಳಿಕೆ

ನವದೆಹಲಿ: ಭಾರತದಲ್ಲಿ ಇನ್ನು ಎರಡರಿಂದ ನಾಲ್ಕು ತಿಂಗಳ ಅವಧಿಯೊಳಗೆ ಕೊರೋನಾ 3ನೇ ಅಲೆ ಕಾಣಿಸಿಕೊಳ್ಳಬಹುದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಮೊದಲ 2 ಅಲೆಗೆ ಹೋಲಿಸಿದರೆ ಭಾರತವು 3ನೇ ಅಲೆಯನ್ನು ಹೆಚ್ಚು ಉತ್ತಮ ರೀತಿಯಲ್ಲಿ ನಿರ್ವಹಿಸಲಿದೆ ಎಂದು ಹೇಳಿದ್ದಾರೆ. ರಾಯಿಟರ್ಸ್‌ ಸುದ್ದಿ ಸಂಸ್ಥೆ ಆನ್‌ಲೈನ್‌ ಮೂಲಕ 40 ಜನ ಆರೋಗ್ಯ ಕ್ಷೇತ್ರದ ತಜ್ಞರು, ವೈದ್ಯರು, ವಿಜ್ಞಾನಿಗಳು, ಸೂಕ್ಷ್ಮಾಣುಜೀವಿ ಮತ್ತು ಸಾಂಕ್ರಾಮಿಕ ರೋಗ ತಜ್ಞರನ್ನು ಸಮೀಕ್ಷೆಗೆ ಒಳಪಡಿಸಿತ್ತು. ಈ ವೇಳೆ 3 ತಜ್ಞರು ಆಗಸ್ಟ್‌ ವೇಳೆಗೆ

ದೀಪಾವಳಿ ವೇಳೆಗೆ ಕೊರೊನ ಮೂರನೇ ಆಟಂ ಬಾಂಬ್….! ಆತಂಕ ಎಬ್ಬಿಸಿದ ತಜ್ಞರ ಹೇಳಿಕೆ Read More »

ಪಾಕಿಸ್ತಾನದ ಮಾರ್ಗದರ್ಶನದಲ್ಲಿ ಭಾರತೀಯರ ಮತಾಂತರ | ಸಾವಿರ ಸಾವಿರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಇಸ್ಲಾಂಗೆ….!?

ಉತ್ತರ ಪ್ರದೇಶ: ಉತ್ತರ ಭಾರತದ ಕೆಲವು ರಾಜ್ಯಗಳಲ್ಲಿ ಮಕ್ಕಳು ಮತ್ತು ಅಸಹಾಯಕರನ್ನು ಆಮಿಷ ಒಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಜಾಲವೊಂದು ಪತ್ತೆಯಾಗಿದೆ. ಈ ಸಂಬಂಧ ಇಬ್ಬರನ್ನು ಉತ್ತರ ಪ್ರದೇಶದ ಎಟಿಎಸ್ ಅಧಿಕಾರಿಗಳು ಬಂಧಿಸಿದ್ದಾರೆ. ಕಳೆದ ಜೂನ್ 2ರಂದು ದೆಹಲಿಯ ದಾಸನ ದ ದೇವಾಲಯಕ್ಕೆ ಇಬ್ಬರು ಅಕ್ರಮವಾಗಿ ನುಸುಳಿದ್ದರು. ಆ ಸಂಬಂಧ ಅವರಿಬ್ಬರನ್ನು ಬಂದಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಲವಾರು ಆಘಾತಕಾರಿ ಅಂಶಗಳು ಹೊರಬಂದಿವೆ. ಬಂಧಿತರನ್ನು ಜಂಹಗೀರ್ ಹಾಗೂ ಉಮರ್ ಗೌತಮ್ ಎಂದು ಗುರುತಿಸಲಾಗಿದೆ. ಇದರಲ್ಲಿ ಉಮರ್ ಗೌತಮ್

ಪಾಕಿಸ್ತಾನದ ಮಾರ್ಗದರ್ಶನದಲ್ಲಿ ಭಾರತೀಯರ ಮತಾಂತರ | ಸಾವಿರ ಸಾವಿರ ಸಂಖ್ಯೆಯಲ್ಲಿ ಅನ್ಯಧರ್ಮೀಯರು ಇಸ್ಲಾಂಗೆ….!? Read More »

ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಮೂವರು ಸಾವು

ತಮಿಳುನಾಡು: ದೇಶದಲ್ಲೇ ಅತೀ ಹೆಚ್ಚು ಪಟಾಕಿ ಉತ್ಪಾದಿಸುವ ತಮಿಳುನಾಡಿನ ಶಿವಕಾಶಿಯ ಪಟಾಕಿ ಕಾರ್ಖಾನೆಯೊಂದರಲ್ಲಿ ಸ್ಫೋಟ ಸಂಭವಿಸಿ ಒಂದು ಮಗು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಶಿವಕಾಶಿಯ ಅಕ್ರಮ ಪಟಾಕಿ ಕಾರ್ಖಾನೆಯೊಂದರಲ್ಲಿ ಇಂದು ಮುಂಜಾನೆ ಸ್ಪೋಟ ಸಂಭವಿಸಿದೆ. ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ಸ್ಪೋಟದ ತೀವ್ರತೆಗೆ ಕಾರ್ಖಾನೆಗೆ ಬೆಂಕಿ ಹತ್ತಿಕೊಂಡಿದ್ದು, ಕಾರ್ಖಾನೆ ಸುಟ್ಟು ಕರಕಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಸಲಾಗುತ್ತಿದೆ.

ಶಿವಕಾಶಿ ಪಟಾಕಿ ಕಾರ್ಖಾನೆಯಲ್ಲಿ ಸ್ಪೋಟ: ಮೂವರು ಸಾವು Read More »

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ

ಬರಾಮುಲ್ಲ: ಲಷ್ಕರ್ -ಇ- ತಾಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಭಾರತೀಯ ಸೇನೆ ಇಂದು ಮುಂಜಾನೆ ಹತ್ಯೆ ಮಾಡಿದೆ. ಜಮ್ಮು-ಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಸುಪೋರ್ ನಲ್ಲಿ ಉಗ್ರರು ಇರುವ ಮಾಹಿತಿ ಪಡೆದ ಸೇನೆ ಯೋಜಿತ ದಾಳಿ ನಡೆಸಿ ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿದೆ. ನಿನ್ನೆ ರಾತ್ರಿ ಆರಂಭವಾದ ಸೇನಾಕಾರ್ಯಾಚರಣೆ ಇಂದು ಮುಂಜಾನೆ ಉಗ್ರ ಸಂಘಟನೆಯ ಕಮಾಂಡರ್ ಮುದಾಸಿರ್ ಪಂಡಿತ್ ಹತ್ಯೆಯಾಗುವ ಮೂಲಕ ಕೊನೆಗೊಂಡಿದೆ ಎಂದು ತಿಳಿದುಬಂದಿದೆ. ಈ ಉಗ್ರರು ವಾರದ ಹಿಂದೆ ಇಬ್ಬರು ನಾಗರಿಕರು ಮತ್ತು

ಮೂವರು ಲಷ್ಕರ್-ಎ -ತಾಯ್ಬ ಉಗ್ರರನ್ನು ಸದೆಬಡಿದ ಸೇನೆ Read More »

ಕೊನೆಗೂ ಭಾಷೆ ಕಲಿಸುವ ಲೋಕಸಭಾ ಕಾರ್ಯಗಾರದಲ್ಲಿ ಸೇರ್ಪಡೆಯಾಯ್ತು ಕನ್ನಡ

ಬೆಂಗಳೂರು: ಆರಂಭದಲ್ಲಿ ಕನ್ನಡ ಭಾಷೆಯನ್ನು ಕಡೆಗಣಿಸಿದ್ದ ಕೇಂದ್ರ ಸರ್ಕಾರ ಇದೀಗ ಲೋಕಸಭೆ ಸಚಿವಾಲಯದ ಭಾಷೆಗಳ ಕಲಿಕಾ ತರಬೇತಿಯಲ್ಲಿ ಕನ್ನಡವನ್ನು ಸೇರ್ಪಡಿಸಿ ಆದೇಶ ಹೊರಡಿಸಿದೆ. ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ದೇಶೀಯ ಮತ್ತು ವಿದೇಶಿ ಭಾಷೆಗಳನ್ನು ಕಲಿಸಲು ಜೂ.22ರಂದು ದೆಹಲಿಯಲ್ಲಿ ಪ್ರೈಡ್‌ ಕಲಿಕಾ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ತೆಲುಗು, ಬಂಗಾಳಿ, ಮರಾಠಿ, ತಮಿಳು ಸೇರಿದಂತೆ ಬಹುತೇಕ ಭಾಷೆಗಳನ್ನು ಸೇರ್ಪಡೆ ಮಾಡಿ ಕನ್ನಡವನ್ನು ನಿರ್ಲಕ್ಷ್ಯಿಸಲಾಗಿತ್ತು. ಈ ಹಿನ್ನಲೆಯಲ್ಲಿ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಲೋಕಸಭೆ ಕನ್ನಡ ಭಾಷೆಯನ್ನು ಸೇರ್ಪಡಿಸಿಕೊಂಡಿದೆ. ಲೋಕಸಭಾ ಸಚಿವಾಲಯದ

ಕೊನೆಗೂ ಭಾಷೆ ಕಲಿಸುವ ಲೋಕಸಭಾ ಕಾರ್ಯಗಾರದಲ್ಲಿ ಸೇರ್ಪಡೆಯಾಯ್ತು ಕನ್ನಡ Read More »

ಯೋಗ ಕೊರೊನ ಸಂಕಷ್ಟ‌ ನಿವಾರಣೆಯ ಆಶಾಕಿರಣ- ಪ್ರಧಾನಿ ಮೋದಿ

ನವದೆಹಲಿ : ಕೊರೊನಾ ಸಂಕಷ್ಟ ತೊಲಗಿಸಲು ಯೋಗ ಆಶಾಕಿರಣವಾಗಿದೆ. ಯೋಗದಿಂದ ಜನರ ಉತ್ಸಾಹ ಪ್ರೀತಿ ಹೆಚ್ಚಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಇಂದು 7 ನೇ ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಜನರಿಂದ ಯೋಗ ನಡೆಯುತ್ತಿದೆ. ಕೊರೊನಾದ ವಿರುದ್ಧ ಹೋರಾಡಲು ಯೋಗ ಸಹಕಾರಿಯಾಗಿದೆ. ಕೊರೊನಾದಿಂದ ಇಂದು ವಿಶ್ವವೇ ನರಳುತ್ತಿದೆ. ಹೀಗಾಗಿ ದೊಡ್ಡ ಕಾರ್ಯಕ್ರಾಮ ಆಯೋಜನೆ ಮಾಡಲಾಗುತ್ತಿಲ್ಲ.ಆದರೂ ಯೋಗ ದಿನದ ಹುಮ್ಮಸ್ಸು ಮಾತ್ರ ಕಡಿಮೆಯಾಗಲ್ಲ. ಈ ಬಾರಿಯ

ಯೋಗ ಕೊರೊನ ಸಂಕಷ್ಟ‌ ನಿವಾರಣೆಯ ಆಶಾಕಿರಣ- ಪ್ರಧಾನಿ ಮೋದಿ Read More »

ನರ್ಸ್’ಗಳ ಯಡವಟ್ಟು: ಒಂದೇ ಬಾರಿಗೆ ಕೋವಿಶೀಲ್ಡ್ ಜೊತೆ ಕೊವ್ಯಾಕ್ಸಿನ್ ಚುಚ್ಚಿಸಿಕೊಂಡ ಮಹಿಳೆ

ಬಿಹಾರ: ನರ್ಸ್ ಗಳು ಮಾಡಿದ ಯಡವಟ್ಟಿನಿಂದ ಮಹಿಳೆಯೊಬ್ಬರು ಒಂದೇ ದಿನ ಎರಡು ಕೋವಿಡ್ ವ್ಯಾಕ್ಸಿನ್ ಗಳನ್ನು ಚುಚ್ಚಿಸಿಕೊಂಡ ಘಟನೆ ಜೂನ್ 16ರಂದು ನಡೆದಿದೆ. ಈ ಹಿನ್ನಲೆಯಲ್ಲಿ ತಪ್ಪೆಸಗಿದ ಶುಶ್ರೂಷಕಿಯರಿಗೆ ಆರೋಗ್ಯ ಇಲಾಖೆ ನೋಟೀಸ್ ನೀಡಿದೆ. ಪಾಟ್ನಾದ ಫುನ್’ಫುನ್ ಬ್ಲಾಕ್ ಎಂಬಲ್ಲಿ ಸುನೀಲಾ ದೇವಿ ಎಂಬ ಮಹಿಳೆ ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ಲಸಿಕಾ ಕೇಂದ್ರಕ್ಕೆ ಬಂದಿದ್ದರು. ರಿಜಿಸ್ಟರ್​ ಬಳಿಕ ನರ್ಸ್​ ಒಬ್ಬರು ಆಕೆಗೆ ಕೋವಿಶೀಲ್ಡ್​ ಲಸಿಕೆ ನೀಡಿದ್ದಾರೆ. ಲಸಿಕೆ ಪಡೆದ ನಂತರ ಐದು ನಿಮಿಷ ಕುಳಿತುಕೊಳ್ಳಬೇಕು ಎಂದು ಹೇಳಿ

ನರ್ಸ್’ಗಳ ಯಡವಟ್ಟು: ಒಂದೇ ಬಾರಿಗೆ ಕೋವಿಶೀಲ್ಡ್ ಜೊತೆ ಕೊವ್ಯಾಕ್ಸಿನ್ ಚುಚ್ಚಿಸಿಕೊಂಡ ಮಹಿಳೆ Read More »

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ

ಮಿಲ್ಕಾ ಸಿಂಗ್..ಈ ಹೆಸರೇ ಸ್ಫೂರ್ತಿಯ ಚಿಲುಮೆ. ಟ್ರ್ಯಾಕ್ ನಲ್ಲಿ ಓಡಲು ಶುರು ಮಾಡುವ ಪ್ರತಿ ಅಥ್ಲೀಟ್ ಗೆ ಭರವಸೆಯ ಬೆಳಕು ಈ ಒಂದು ಹೆಸರು. ಮಿಲ್ಕಾ ಸಿಂಗ್ ಅಂದ್ರೆ ಓಟ.. ಓಟ ಅಂದ್ರೆ ಮಿಲ್ಕಾ ಸಿಂಗ್.. ಅಂತಹುದ್ದೊಂದು ಮಾಂತ್ರಿಕತೆ ಮಿಲ್ಕಾ ಸಿಂಗ್ ಹೆಸರಿನಲ್ಲಿದೆ.ಭಾಘ್ ಮಿಲ್ಕಾ.. ಭಾಘ್ ಮಿಲ್ಕಾ.. ಹೌದು ಮಿಲ್ಕಾ ಸಿಂಗ್ ಮೊದಲು ಜೀವ ಉಳಿಸಿಕೊಳ್ಳಲು ಓಡಲು ಶುರು ಮಾಡಿದ್ದರು. ನಂತರ ಅಕ್ಷರ ಕಲಿಯಲು ಕಿಲೋ ಮೀಟರ್‌ ಗಟ್ಟಲೇ ಓಡುತ್ತಿದ್ದರು. ಬಳಿಕ ದಂಗೆಯ ಭಯದಿಂದ ಓಡುತ್ತಾ ಗಡಿ

ರಕ್ತಚರಿತ್ರೆಯ ಇತಿಹಾಸಕ್ಕೆ ಹೊಸ ಭಾಷ್ಯ ಬರೆದ ಮಿಲ್ಖಾ ಸಿಂಗ್ | ಜೀವರಕ್ಷಣೆಯ ಓಟ ಸ್ಥಾಪಿಸಿತ್ತು ಹೊಸ ಮೈಲಿಗಲ್ಲು | ಇದು ಪ್ಲೇಯಿಂಗ್ ಸಿಖ್ ನ ಬದುಕಿನ ಅನಾವರಣ Read More »

ಸಿಎಂ ಯಡಿಯೂರಪ್ಪ ಇನ್ಮುಂದೆ ಆಂದ್ರ ಗವರ್ನರ್?

ಅಮರಾವತಿ(ಜೂ.19): ನಾಯಕತ್ವ ಬದಲಾವಣೆ ಸೇರಿದಂತೆ ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಆಡಳಿತರೂಢ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ ಎದ್ದಿದೆ. ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಭೇಟಿ ನೀಡಿದ್ದು, ಈ ವಿಚಾರ ಈಗ ಹೈಕಮಾಂಡ್ ಅಂಗಳ ಸೇರಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆಯೇ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ನೆರೆ ರಾಜ್ಯ ಆಂಧ್ರಪ್ರದೇಶದ ಗವರ್ನರ್ ಆಗಲಿದ್ದಾರೆಂಬ ವಿಚಾರ ಭಾರೀ ಸದ್ದು ಮಾಡಲಾರಂಭಿಸಿದೆ.ಹೌದು ಯಡಿಯೂರಪ್ಪ ಅವರು ರಾಜ್ಯಪಾಲರಾಗಲಿದ್ದಾರೆ ಎನ್ನುವುದು ಆಂಧ್ರಪ್ರದೇಶದಲ್ಲಿ ಬಹುಚರ್ಚಿತ ವಿಷಯ. ಕಳೆದ

ಸಿಎಂ ಯಡಿಯೂರಪ್ಪ ಇನ್ಮುಂದೆ ಆಂದ್ರ ಗವರ್ನರ್? Read More »