ರಾಷ್ಟ್ರೀಯ

ಕೇದಾರನಾಥ ಆವರಣದಲ್ಲಿ ಶೂ ಧರಿಸಿ ಓಡಾಡಿದ‌ ಪ್ರಧಾನಿ ಮೋದಿ| ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ|

ನವದೆಹಲಿ: ನವೆಂಬರ್ 5 ರಂದು ಉತ್ತರಾಖಂಡದ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದರಲ್ಲದೆ 12 ಅಡಿಗಳಷ್ಟು ಎತ್ತರದ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಉದ್ಘಾಟಿಸಿದ್ದರು. ಈ ಭೇಟಿ ಸಂದರ್ಭದ ಫೋಟೋಗಳು, ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದ್ದವು. ಮೋದಿ, ಬಿಜೆಪಿ ಅಭಿಮಾನಿಗಳು ಪ್ರಚಾರಾರ್ಥ ಈ ಚಿತ್ರಗಳನ್ನು ಹಂಚಿಕೊಂಡರೆ, ವಿರೋಧಿ ಪಾಳೆಯದವರು ಈ ಶೋ ಆಫ್ ಬೇಕಿತ್ತಾ ಎನ್ನುವ ಅರ್ಥದಲ್ಲಿ ಈ ಚಿತ್ರಗಳನ್ನು ಹಂಚಿಕೊಂಡು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಲ್ಲಕ್ಕಿಂತ ಅಚ್ಚರಿ ಎಂದರೆ […]

ಕೇದಾರನಾಥ ಆವರಣದಲ್ಲಿ ಶೂ ಧರಿಸಿ ಓಡಾಡಿದ‌ ಪ್ರಧಾನಿ ಮೋದಿ| ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ| Read More »

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ| ಶುಭ ಕೋರಿದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ

ಬೆಂಗಳೂರು: ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಗಣ್ಯಾತಿ ಗಣ್ಯರು ಗುರುವಾರ ಶುಭಾಶಯಗಳನ್ನು ಕೋರಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು ದೀಪಾವಳಿಯ ಈ ಶುಭ ಸಂದರ್ಭದಲ್ಲಿ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ನಾನು ಬಯಸುತ್ತೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಟ್ವೀಟ್

ದೇಶದೆಲ್ಲೆಡೆ ದೀಪಾವಳಿ ಸಂಭ್ರಮ| ಶುಭ ಕೋರಿದ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ Read More »

ಪೆಟ್ರೊಲಿಯಂ ತೆರಿಗೆ ಕಡಿಮೆಗೊಳಿಸಲು ಉಪಚುನಾವಣೆ ಸೋಲು ಕಾರಣವಾಯಿತೇ?

ನ್ಯೂಸ್ ಡೆಸ್ಕ್: ಗಗನಕ್ಕೇರಿದ ತೈಲಬೆಲೆಯನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ ಕೊನೆಗೂ ಮನಸ್ಸು ಮಾಡಿದ್ದು, ಪೆಟ್ರೋಲ್ ಮತ್ತು ಡೀಸೆಲ್‌ ಬೆಲೆಯಲ್ಲಿ ತಲಾ 5 ಮತ್ತು 10 ರೂ.ಗಳಷ್ಟು ಅಬಕಾರಿ ಸುಂಕ ಕಡಿಮೆ ಮಾಡಿದೆ. ಕೇಂದ್ರ ಸರ್ಕಾರ ದೀಪಾವಳಿ ಗಿಪ್ಟ್ ಅಂತ ಹೇಳಿಕೊಂಡರೂ ತೈಲಬೆಲೆಯಲ್ಲಿನ ತೆರಿಗೆ ಇಳಿಕೆ ಉಪಚುನಾವಣೆ ಸೋಲಿನ ಪರಿಣಾಮ ಎನ್ನುತ್ತಾರೆ ರಾಜಕೀಯ ತಜ್ಞರು. ಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಿಂದ ಸಾಗಾಣಿಕೆ ವೆಚ್ಚ ಜಾಸ್ತಿಯಾಗಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿರುವುದು ಜನಸಾಮಾನ್ಯರಿಗೆ ನುಂಗಲಾರದ ತುತ್ತಾಗಿದೆ. ಇದೀಗ ಉಪ

ಪೆಟ್ರೊಲಿಯಂ ತೆರಿಗೆ ಕಡಿಮೆಗೊಳಿಸಲು ಉಪಚುನಾವಣೆ ಸೋಲು ಕಾರಣವಾಯಿತೇ? Read More »

ಪೆಟ್ರೋಲ್ 5, ಡೀಸೆಲ್ 10 ರೂ ಇಳಿಕೆ| ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದ ಜನತೆಗೆ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆಗೆ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ದೀಪಾವಳಿಯ ಮುನ್ನಾದಿನದಂದು, ಭಾರತ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಘೋಷಿಸಿದೆ. ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕ್ರಮವಾಗಿ 5 ರೂ. ಮತ್ತು 10 ರೂಪಾಯಿ ಇಳಿಕೆಯಾಗಲಿದೆ. ಪೈಸೆಗಳ ಲೆಕ್ಕದಲ್ಲಿ ಪ್ರತಿದಿನ ಏರಿಕೆಯಾಗುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ

ಪೆಟ್ರೋಲ್ 5, ಡೀಸೆಲ್ 10 ರೂ ಇಳಿಕೆ| ಅಬಕಾರಿ ಸುಂಕ ಕಡಿತಗೊಳಿಸಿದ ಕೇಂದ್ರ ಸರ್ಕಾರ Read More »

ಕೆ.ಸೆಟ್ ಫಲಿತಾಂಶ ಪ್ರಕಟ| ಈ ಬಾರಿ ಮೇಲುಗೈ‌ ಸಾಧಿಸಿದ ಪುರುಷ ಅಭ್ಯರ್ಥಿಗಳು|

ಮೈಸೂರು: ಜುಲೈ 25, 2021ರಂದು ರಾಜ್ಯಾಧ್ಯಂತ ನಡೆಸಲಾಗಿದ್ದ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿಯ ಪರೀಕ್ಷೆಯಲ್ಲಿ ಪುರುಷ ಅಭ್ಯರ್ಥಿಗಳೇ ಮೇಲುಗೈ ಸಾಧಿಸಿರುವುದಾಗಿ ತಿಳಿದು ಬಂದಿದೆ. ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಕೆಸೆಟ್-2021ರ ಪರೀಕ್ಷೆಯ ಫಲಿತಾಂಶವನ್ನು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಬಿಡುಗಡೆ ಮಾಡಿದರು. ಈ ಬಾರಿ 83,907 ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಗಾಗಿ ಅರ್ಜಿಯನ್ನು ಸಲ್ಲಿಸಿದ್ದರು. ಇವರಲ್ಲಿ 69,857 ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಹಾಜರಾಗಿದ್ದರು ಎಂದು ತಿಳಿಸಿದರು. ಇನ್ನೂ ಪರೀಕ್ಷೆಗೆ

ಕೆ.ಸೆಟ್ ಫಲಿತಾಂಶ ಪ್ರಕಟ| ಈ ಬಾರಿ ಮೇಲುಗೈ‌ ಸಾಧಿಸಿದ ಪುರುಷ ಅಭ್ಯರ್ಥಿಗಳು| Read More »

ಪತ್ನಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿರಾಯ

ಲಕ್ನೋ: ವ್ಯಕ್ತಿಯೊಬ್ಬ ತನ್ನ ಐದು ತಿಂಗಳ ದಾಂಪತ್ಯವನ್ನು ತ್ಯಾಗ ಮಾಡಿ, ಮತ್ತು ಹೆಂಡತಿಯನ್ನು ಆಕೆಯ ಗೆಳೆಯನೊಂದಿಗೆ ಮದುವೆ ಮಾಡಿಸಿದ ವಿಚಿತ್ರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಶುಕ್ರವಾರ ಗೋಲ್ ಚೌರಾದಲ್ಲಿರುವ ಆಶಾಜ್ಯೋತಿ ಕೇಂದ್ರದಲ್ಲಿ ನಡೆದ ಈ ಮದುವೆಗೆ ಜಿಲ್ಲಾ ಪರೀಕ್ಷಾಧಿಕಾರಿ, ಒನ್ ಸ್ಟಾಪ್ ಸೆಂಟರ್ ಮ್ಯಾನೇಜರ್, ಸ್ಥಳೀಯ ಪೊಲೀಸ್ ಠಾಣೆಯ ಪೊಲೀಸರು ಹಾಗೂ ಮೂವರ ಸಂಬಂಧಿಕರು ಸಾಕ್ಷಿಯಾಗಿದ್ದರು. ಗುರುಗ್ರಾಮ್‌ನ ಖಾಸಗಿ ಸಂಸ್ಥೆಯೊಂದರಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಬರ್ರಾ-8 ನಿವಾಸಿ ಪಂಕಜ್ ಶರ್ಮಾ ಅವರು ಮೇ

ಪತ್ನಿಯನ್ನು ಆಕೆಯ ಪ್ರೇಮಿಯೊಂದಿಗೆ ಮದುವೆ ಮಾಡಿಸಿದ ಪತಿರಾಯ Read More »

ಪಟಾಕಿ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದ ಸುಪ್ರೀಂ

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಹಾಗೂ ವಾಯುಮಾಲಿನ್ಯದ ನಡುವೆ ಪಟಾಕಿ ಸಂಪೂರ್ಣ ನಿಷೇಧಿಸುವಂತೆ ಕೋಲ್ಕತ್ತ ಹೈಕೋರ್ಟ್ ಹೇಳಿತ್ತು. ಆದರೆ, ಕೋಲ್ಕತ್ತಾ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಬದಿಗೊತ್ತಿ, ಹೊಸ ತೀರ್ಪು ನೀಡಿದೆ. ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಮತ್ತೊಂದು ಪ್ರಕರಣದ ವಿಚಾರಣೆ ವೇಳೆ ಶುಕ್ರವಾರದ ಸುಪ್ರೀಂ ಕೋರ್ಟ್ನ ಆದೇಶದ ಮೇರೆಗೆ ಮಾತನಾಡಿದ ನ್ಯಾಯಮೂರ್ತಿಗಳು, ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಲು ಆಗುವುದಿಲ್ಲ. ದುರುಪಯೋಗವನ್ನು ತಡೆಯಲು ಕಾರ್ಯವಿಧಾನವನ್ನು ಬಲಪಡಿಸಿ” ಎಂದು ಹೇಳಿದರು. ಸುಪ್ರೀಂ ಕೋರ್ಟ್ ನ ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್, ಅಜಯ್ ರಸ್ತೋಗಿ

ಪಟಾಕಿ ಸಂಪೂರ್ಣ ನಿಷೇಧ ಸಾಧ್ಯವಿಲ್ಲ ಎಂದ ಸುಪ್ರೀಂ Read More »

ಭಾರೀ ಏರಿಕೆ ಕಂಡ ಗ್ಯಾಸ್ ಸಿಲೆಂಡರ್| ಗ್ರಾಹಕರ ಜೇಬಗೆ ದೊಡ್ಡ ಕತ್ತರಿ

ನವದೆಹಲಿ: ದೀಪಾವಳಿಯ ಮೊದಲು LPG ಬೆಲೆಯಲ್ಲಿ ಹೆಚ್ಚಳ ಕಂಡಿದೆ. ಅಂದ ಹಾಗೇ ಪ್ರತಿ ತಿಂಗಳ ಮೊದಲ ದಿನ ಗ್ಯಾಸ್‌ ಸಿಲೆಂಡರ್‌ ಬೆಲೆಯನ್ನು ನಿಗದಿ ಮಾಡಲಾಗುತ್ತಿದ್ದು, ಅದರಂತೆ ಇಂದು ವಾಣಿಜ್ಯ ಸಿಲಿಂಡರ್ ಬೆಲೆ 265 ರೂ ಹೆಚ್ಚಳ ಮಾಡಲಾಗಿದೆ. ಈಗ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ 2000 ರೂ ದಾಟಿದೆ. ಮೊದಲು 1733 ರೂ ಇತ್ತು, . ಮುಂಬೈನಲ್ಲಿ 1683 ರೂ.ಗೆ ದೊರೆಯುವ 19 ಕೆಜಿ ಸಿಲಿಂಡರ್ ಈಗ 1950 ರೂ.ಗೆ ಲಭ್ಯವಾಗಲಿದೆ. ಅದೇ ಸಮಯದಲ್ಲಿ, ಈಗ 19 ಕೆಜಿ

ಭಾರೀ ಏರಿಕೆ ಕಂಡ ಗ್ಯಾಸ್ ಸಿಲೆಂಡರ್| ಗ್ರಾಹಕರ ಜೇಬಗೆ ದೊಡ್ಡ ಕತ್ತರಿ Read More »

ಮುಂದುವರಿದ ಪೆಟ್ರೋಲ್, ಡೀಸೆಲ್ ಜೊತೆಯಾಟ| ಅಡುಗೆ ಅನಿಲವೂ ಏಕ್ ದಂ‌ ಸೆಂಚುರಿ ಬಾರಿಸುವ ಸಾಧ್ಯತೆ|

ದೆಹಲಿ: ಸತತ ಐದನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಇದರಿಂದ ದೇಶಾದ್ಯಂತ ತೈಲ ಬೆಲೆ ದಾಖಲೆ ಮಟ್ಟ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಇಂದು ಭಾನುವಾರ (ಅ.31) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ ಮಾಡಿವೆ. ಇಂದು ಲೀಟರ್ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 35 ಪೈಸೆ ಏರಿಕೆ ಆಗಿದೆ.ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಈಗಾಗಲೇ ಬಸವಳಿದಿರುವ ಜನಸಾಮಾನ್ಯರ ಮೇಲೆ ದೀಪಾವಳಿ ಹಬ್ಬದ ವೇಳೆ ಇನ್ನೊಂದು ಬರೆ ಎಳೆಯಲು ಕೇಂದ್ರ ಸರಕಾರ ಮುಂದಾಗಿದೆ. ಅಧಿಕೃತ ಮೂಲಗಳ ಪ್ರಕಾರ ಮುಂದಿನ ದಿನಗಳಲ್ಲಿ

ಮುಂದುವರಿದ ಪೆಟ್ರೋಲ್, ಡೀಸೆಲ್ ಜೊತೆಯಾಟ| ಅಡುಗೆ ಅನಿಲವೂ ಏಕ್ ದಂ‌ ಸೆಂಚುರಿ ಬಾರಿಸುವ ಸಾಧ್ಯತೆ| Read More »

ಪೋಪ್ ಪ್ರಾನ್ಸಿಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ| ಜಗದ್ವಿಚಾರಗಳ‌ ಬಗ್ಗೆ ಚರ್ಚೆ

ವ್ಯಾಟಿಕನ್​ ಸಿಟಿ: ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಇಟಲಿ​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್​ ನಗರದಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್​ ಫ್ರಾನ್ಸಿಸ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರಾಗಿರುವ ಪೋಪ್​ ಫ್ರಾನ್ಸಿಸ್​ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು ಇದೇ ಮೊದಲು. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ, ಬಡತನ ನಿರ್ಮೂಲನೆ, ಉತ್ತಮ ಜೀವನ ನಿರ್ವಹಣೆ ಕುರಿತು ಪೋಪ್​ ಫ್ರಾನ್ಸಿಸ್ ಮತ್ತು ನರೇಂದ್ರ ಮೋದಿ ಇಬ್ಬರೂ

ಪೋಪ್ ಪ್ರಾನ್ಸಿಸ್ ಭೇಟಿಯಾದ ಪ್ರಧಾನಿ ನರೇಂದ್ರ ಮೋದಿ| ಜಗದ್ವಿಚಾರಗಳ‌ ಬಗ್ಗೆ ಚರ್ಚೆ Read More »