ರಾಷ್ಟ್ರೀಯ

ತಾಂತ್ರಿಕ ಸಮಸ್ಯೆ ಹಿನ್ನೆಲೆ| ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್

ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಬೇಕಿದ್ದ ಬೋಯಿಂಗ್ ಸ್ಟಾರ್‌ಲೈನರ್ ಅನ್ನು ತಾಂತ್ರಿಕ ಸಮಸ್ಯೆ ಕಾರಣ ನಾಸಾ ಮತ್ತೆ ಮುಂದೂಡಿದ್ದರಿಂದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಬಾಹ್ಯಾಕಾಶದಲ್ಲಿ ಸಿಲುಕಿದ್ದಾರೆ. ಅವರು ಇನ್ನೂ ಕೆಲವು ದಿನಗಳ ಕಾಲ ಅಲ್ಲೇ ಉಳಿಯುವ ಸಾಧ್ಯತೆಯಿದೆ. ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹೊಂದಿರುವ ಬಾಹ್ಯಾಕಾಶ ನೌಕೆಯ ವಾಪಸಾತಿ ಪ್ರಯಾಣವನ್ನು ಯಾವಾಗ ಕೈಗೊಳ್ಳಲಾಗುತ್ತದೆ ಎಂಬುದಕ್ಕೆ ನಾಸಾ ನಿರ್ದಿಷ್ಟ ದಿನಾಂಕವನ್ನು ನೀಡಿಲ್ಲ. ಬೋಯಿಂಗ್ ಬಾಹ್ಯಾಕಾಶ ನೌಕೆಯಲ್ಲಿ ಇಬ್ಬರು ಗಗನಯಾತ್ರಿಗಳು […]

ತಾಂತ್ರಿಕ ಸಮಸ್ಯೆ ಹಿನ್ನೆಲೆ| ಬಾಹ್ಯಾಕಾಶದಲ್ಲೇ ಸಿಲುಕಿದ ಸುನೀತಾ ವಿಲಿಯಮ್ಸ್ Read More »

ಮೊದಲ‌ ಮಳೆಯಲ್ಲೇ ತೋಯ್ದ ಬಾಲರಾಮ| ಸೋರುತ್ತಿದೆ ರಾಮಮಂದಿರ ಗರ್ಭಗುಡಿ!!

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ. ಆದ್ರೆ ಅದಾಗಲೇ ದೇವಸ್ಥಾನ ಮೇಲ್ಛಾವಣಿ ಸೋರುತ್ತಿದೆಯಂತೆ! ಹೀಗಂತ ದೇಗುಲದ ಅರ್ಚಕ ಸತ್ಯೇಂದ್ರ ದಾಸ್‌ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಸದ್ಯ ಅಯೋಧ್ಯೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ರಾಮಮಂದಿರದ ಛಾವಣಿ ಸೋರುತ್ತಿದೆ ಎಂದು ಮುಖ್ಯ ಅರ್ಚಕ ಸತ್ಯೇಂದ್ರ ದಾಸ್‌ ಹೇಳಿಕೆ ನೀಡಿದ್ದಾರೆ. ಗರ್ಭಗುಡಿಯ ಛಾವಣಿ ಮೂಲಕ ನೀರು ಒಳಗೆ ಬಂದಿದೆ. ಸುಸಜ್ಜಿತವಾಗಿಯೇ ದೇಗುಲ ಕಟ್ಟಿದ್ದರೂ ನೀರು ಸೋರುತ್ತಿದೆ ಎಂದು ಅರ್ಚಕರು ಹೇಳಿದ್ದಾರೆ.. ಇನ್ನು ಈ ಬಗ್ಗೆ ಸ್ಪಷ್ಟನೆ

ಮೊದಲ‌ ಮಳೆಯಲ್ಲೇ ತೋಯ್ದ ಬಾಲರಾಮ| ಸೋರುತ್ತಿದೆ ರಾಮಮಂದಿರ ಗರ್ಭಗುಡಿ!! Read More »

ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಘೋಷಿಸಿದ ಯುನೆಸ್ಕೋ

ಸಮಗ್ರ ನ್ಯೂಸ್: ಯುನೆಸ್ಕೋದ ಸೃಜನಶೀಲ ನಗರಗಳ ಸಾಹಿತ್ಯ ವಿಭಾಗದಲ್ಲಿ, ಸಾಂಸ್ಕೃತಿಕ ಪರಂಪರೆಗೆ ಹೆಸರುವಾಸಿಯಾಗಿರುವ ಕೇರಳದ ಉತ್ತರ ಭಾಗದಲ್ಲಿರುವ ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಯುನೆಸ್ಕೋ ಅಧಿಕೃತವಾಗಿ ಘೋಷಿಸಿದೆ. ಇದರೊಂದಿಗೆ ಬರುವ ವರ್ಷದಿಂದ ಜ.23ರನ್ನು ಸಾಹಿತ್ಯ ನಗರದ ದಿನ ಎಂದು ಆಚರಿಸಲು ರಾಜ್ಯ ಸರ್ಕಾರ ಘೋಷಿಸಿದೆ. ಸಂಖ್ಯೆ, ಗುಣಮಟ್ಟ ಮತ್ತು ವೈವಿಧ್ಯಮಯ ಪುಸ್ತಕಗಳು ನಗರದಲ್ಲಿ ಪ್ರಕಟವಾಗುತ್ತಿರಬೇಕು. ಸ್ಥಳೀಯ ಮತ್ತು ವಿದೇಶಿ ಸಾಹಿತ್ಯಗಳ ಕುರಿತು ಗುಣಮಟ್ಟದ ಶೈಕ್ಷಣಿಕ ಕಾರ್ಯಕ್ರಮ ನಡೆಯುತ್ತಿರಬೇಕು. ಸಾಹಿತ್ಯ, ನಾಟಕ, ಕಾವ್ಯ ಮೊದಲಾದ ವಿಷಯಗಳಿಗೆ ನಗರದಲ್ಲಿ ಮನ್ನಣೆ

ಕಲ್ಲಿಕೋಟೆಯನ್ನು ‘ಸಾಹಿತ್ಯ ನಗರ’ ಎಂದು ಘೋಷಿಸಿದ ಯುನೆಸ್ಕೋ Read More »

18ನೇ ಲೋಕಸಭೆ/ ಇಂದಿನಿಂದ ಮೊದಲ ಅಧಿವೇಶನ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿ ಅಧಿಕಾರಕ್ಕೆ ಬಂದಿದ್ದು,ಇದೀಗ 18ನೇ ಲೋಕಸಭೆಯ ಮೊದಲ ಸಂಸತ್ ವಿಶೇಷ ಅಧಿವೇಶನವು ಸೋಮವಾರದಿಂದ (ಜೂನ್ 24) ಆರಂಭವಾಗಲಿದೆ. ನರೇಂದ್ರ ಮೋದಿ ಅವರು ಸೇರಿ ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲರೂ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಉಭಯ ಸದನಗಳನ್ನು ಉದ್ದೇಶಿಸಿ ರಾಷ್ಟ್ರಪತಿ ದೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ನರೇಂದ್ರ ಮೋದಿ ಅವರು ಸೇರಿ ಎಲ್ಲರೂ ನೂತನ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಾಗೆಯೇ, ನೂತನ ಸ್ಪೀಕ‌ರ್ ಆಯ್ಕೆಯ ಪ್ರಕ್ರಿಯೆಯೂ ನಡೆಯಲಿದೆ.

18ನೇ ಲೋಕಸಭೆ/ ಇಂದಿನಿಂದ ಮೊದಲ ಅಧಿವೇಶನ Read More »

ಪರೀಕ್ಷಾ ಅಕ್ರಮ/ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾ ನಿರ್ದೇಶಕರ‌ ವಜಾ

ಸಮಗ್ರ ನ್ಯೂಸ್: ನೀಟ್-ಯುಜಿ ಪರೀಕ್ಷೆಯ ಅಕ್ರಮ ಆರೋಪ ಮತ್ತು ಯುಜಿಸಿ-ನೆಟ್ ಪರೀಕ್ಷೆ ಮುಂದೂಡಿಕೆ, ಸೋರಿಕೆಯಾದ ಪ್ರಶ್ನೆ ಪತ್ರಿಕೆಗಳ ವಿವಾದಗಳ ನಡುವೆ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾನಿರ್ದೇಶಕರನ್ನು ವಜಾಗೊಳಿಸಲಾಗಿದೆ. ನೀಟ್-ಯುಜಿ ಪರೀಕ್ಷೆಯ ಅಕ್ರಮ ಮತ್ತು ಯುಜಿಸಿ-ನೆಟ್ ಪರೀಕ್ಷೆಯನ್ನು ಮುಂದೂಡುವುದರ ವಿರುದ್ಧ ದೇಶಾದ್ಯಂತ ವ್ಯಾಪಕ ಪ್ರತಿಭಟನೆಗಳು ನಡೆದವು. ಪರೀಕ್ಷೆಯಲ್ಲಿ ನಕಲು ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳೂ ಆಕ್ರೋಶ ವ್ಯಕ್ತಪಡಿಸಿವೆ. ಎನ್‌ಟಿಎಯ ಮಹಾನಿರ್ದೇಶಕರಾಗಿದ್ದ ಸುಬೋದ್ ಕುಮಾ‌ರ್ ಸಿಂಗ್‌ ಅವರನ್ನು ತೆಗೆದುಹಾಕಲಾಗಿದೆ ಮತ್ತು ಅವರ ಉತ್ತರಾಧಿಕಾರಿಯಾಗಿ ಮಾಜಿ ಐಎಎಸ್ ಅಧಿಕಾರಿ

ಪರೀಕ್ಷಾ ಅಕ್ರಮ/ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮಹಾ ನಿರ್ದೇಶಕರ‌ ವಜಾ Read More »

ಜಿ ಎಸ್ ಟಿ ಕೌನ್ಸಿಲ್ ಸಭೆ/ ಹಲವು ಸೇವೆಗಳಿಗೆ ಜಿ ಎಸ್ ಟಿ ವಿನಾಯಿತಿ

ಸಮಗ್ರ ನ್ಯೂಸ್: ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಿತು. ಭಾರತೀಯ ರೈಲ್ವೆಯು ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟ, ಕೊಠಡಿಗಳ ಸೌಲಭ್ಯ, ಕ್ಲೋಕ್‌ರೂಮ್ ಸೇವೆಗಳು ಹಾಗೂ ಬ್ಯಾಟರಿ ಚಾಲಿತ ಕಾರು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಘೋಷಿಸಲಾಯಿತು. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರದ ಉದ್ದೇಶ ಸ್ಪಷ್ಟವಾಗಿದೆ. ಇಂಧನದ ಮೇಲಿನ ಜಿಎಸ್‌ಟಿ ದರವನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಟ್ಟಿದೆ

ಜಿ ಎಸ್ ಟಿ ಕೌನ್ಸಿಲ್ ಸಭೆ/ ಹಲವು ಸೇವೆಗಳಿಗೆ ಜಿ ಎಸ್ ಟಿ ವಿನಾಯಿತಿ Read More »

ಶಬರಿಮಲೆಯಲ್ಲಿ‌ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ/ ಭೂ ಸ್ವಾಧೀನ ಅಧಿಸೂಚನೆ ಹಿಂಪಡೆದ ಕೇರಳ ಸರ್ಕಾರ

ಸಮಗ್ರ ನ್ಯೂಸ್: ಶಬರಿಮಲೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯ ಭೂಸ್ವಾಧೀನ ಕುರಿತು ಆಕ್ಷೇಪಗಳ ಹಿನ್ನೆಲೆಯಲ್ಲಿ ತನ್ನ ನಿಲುವು ಬದಲಿಸಿರುವ ಕೇರಳ ಸರ್ಕಾರ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವುದಾಗಿ ಹೈಕೋರ್ಟ್‌ಗೆ ಹೇಳಿದೆ. ಪ್ರಸ್ತುತ ಅಧಿಸೂಚನೆಗೆ ಈ ಹಿಂದೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವನ್ನು ಬದಲಿಸಿದ್ದು, ಭೂ ಸ್ವಾಧೀನದಿಂದಾಗುವ ಸಾಮಾಜಿಕ ಪರಿಣಾಮದ ಅಧ್ಯಯನವನ್ನು ಹೊಸ ಏಜೆನ್ಸಿಯಿಂದ ನಡೆಸಲಾಗುವುದು ಎಂದು ಕೋರ್ಟ್‌ಗೆ ಹೇಳಿದೆ. ಕೇರಳ ಸರ್ಕಾರದ ಭೂ ಸ್ವಾಧೀನ ಅಧಿಸೂಚನೆಗೆ ಬಿಲೀವರ್ಸ್‌ ಚರ್ಚ್ ಅಧೀನದಲ್ಲಿರುವ ಅಯನಾ ಚಾರಿಟಬಲ್‌

ಶಬರಿಮಲೆಯಲ್ಲಿ‌ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ/ ಭೂ ಸ್ವಾಧೀನ ಅಧಿಸೂಚನೆ ಹಿಂಪಡೆದ ಕೇರಳ ಸರ್ಕಾರ Read More »

ನಿಮ್ಮ ಕಾರಿಗೆ ಕಣ್ಣುಕುಕ್ಕುವ ಹೆಡ್ ಲೈಟ್ ಹಾಕ್ಸಿದೀರಾ? ಹಾಗಿದ್ರೆ ನಿಮ್ ಮೇಲೆ ಕೇಸ್ ಬೀಳೋದು ಪಕ್ಕಾ!!

ಸಮಗ್ರ ನ್ಯೂಸ್: ಕೇಂದ್ರ ಮೋಟಾರು ಕಾಯ್ದೆ(ಸಿಎಂವಿ)ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್‌ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್‌ ಕುಮಾರ್‌ ಎಚ್ಚರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಭಾರಿ ಗಾತ್ರದ ವಾಹನಗಳಾದ

ನಿಮ್ಮ ಕಾರಿಗೆ ಕಣ್ಣುಕುಕ್ಕುವ ಹೆಡ್ ಲೈಟ್ ಹಾಕ್ಸಿದೀರಾ? ಹಾಗಿದ್ರೆ ನಿಮ್ ಮೇಲೆ ಕೇಸ್ ಬೀಳೋದು ಪಕ್ಕಾ!! Read More »

ನಳಂದಾ ವಿಶ್ವವಿದ್ಯಾಲಯದಲ್ಲಿ ನೂತನ ಕ್ಯಾಂಪಸ್/ ಇಂದು ಪ್ರಧಾನಿ ಮೋದಿ ಉದ್ಘಾಟನೆ

ಸಮಗ್ರ ನ್ಯೂಸ್: ಬಿಹಾರದ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ 17 ದೇಶಗಳ ಮಿಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಕ್ಯಾಂಪಸ್‌ನಲ್ಲಿ 40 ತರಗತಿ ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳಿವೆ, ಒಟ್ಟು 1900 ಆಸನ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಇದು ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ

ನಳಂದಾ ವಿಶ್ವವಿದ್ಯಾಲಯದಲ್ಲಿ ನೂತನ ಕ್ಯಾಂಪಸ್/ ಇಂದು ಪ್ರಧಾನಿ ಮೋದಿ ಉದ್ಘಾಟನೆ Read More »

ದೇಶಾದ್ಯಂತ ಜಿಯೋ ಸರ್ವರ್ ಡೌನ್| ಬಳಕೆದಾರರ ಪರದಾಟ

ಸಮಗ್ರ ನ್ಯೂಸ್: ದೇಶಾದ್ಯಂತ ಜಿಯೋ ಸರ್ವರ್ ಡೌನ್ ಆಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಎಕ್ಸ್, ಸ್ನ್ಯಾಪ್ಚಾಟ್, ಯೂಟ್ಯೂಬ್ ಮತ್ತು ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನ ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಡೌನ್ಡೆಟೆಕ್ಟರ್ ಪ್ರಕಾರ, ಶೇಕಡಾ 54 ಕ್ಕೂ ಹೆಚ್ಚು ದೂರುದಾರರು ಮೊಬೈಲ್ ಇಂಟರ್ನೆಟ್, 38 ಪ್ರತಿಶತದಷ್ಟು ಜಿಯೋ ಫೈಬರ್ ಮತ್ತು 7 ಪ್ರತಿಶತದಷ್ಟು ಮೊಬೈಲ್ ನೆಟ್ವರ್ಕ್ಗಳೊಂದಿಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಕಂಪನಿ ಈ ಕುರಿತು ಯಾವುದೇ ಸ್ಪಷ್ಟನೆ

ದೇಶಾದ್ಯಂತ ಜಿಯೋ ಸರ್ವರ್ ಡೌನ್| ಬಳಕೆದಾರರ ಪರದಾಟ Read More »