ರಾಷ್ಟ್ರೀಯ

ಉಗ್ರರ ಜೊತೆ ನಂಟು ಆರೋಪ| ಮಾಜಿ‌ ಶಾಸಕ ಬಿ.ಎಂ ಇದಿನಬ್ಬ ಪುತ್ರನ ಮನೆ ಮೇಲೆ ಐಎನ್ಎ ದಾಳಿ|

ಮಂಗಳೂರು: ಉಳ್ಳಾಲದ ಮಾಜಿ ಶಾಸಕ ಬಿ.ಎಂ.ಇದಿನಬ್ಬ ಅವರ ಪುತ್ರನ ಮನೆ ಮೇಲೆ ಎನ್​ಐಎ ದಾಳಿ ನಡೆಸಿದ್ದು, ಪುತ್ರ ಬಿ.ಎಂ.ಭಾಷಾ ಹಾಗೂ ಸೊಸೆ ದೀಪ್ತಿ ಆಲಿಯಾಸ್ ಮರಿಯಂರನ್ನು ವಶಕ್ಕೆ ಪಡೆದಿದ್ದಾರೆ. ಮಂಗಳೂರು ಹೊರವಲಯದ ಉಳ್ಳಾಲದ ಮಾಸ್ತಿಕಟ್ಟೆಯ ಮನೆ ಮೇಲೆ ದಾಳಿ ನಡೆಸಿರುವ ಎನ್‌ಐಎ ಅಧಿಕಾರಿಗಳು ಟೆಂಪೋ ಟ್ರಾವೆಲರ್ ವಾಹನದಲ್ಲಿ ದೀಪ್ತಿ ಆಲಿಯಾಸ್ ಮರಿಯಂರನ್ನು ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ. ಮಂಗಳೂರಿನ ವೆನ್​ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಮೆಡಿಕಲ್ ನಡೆಸಿದ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಿರುವ ಅಧಿಕಾರಿಗಳು, ನಂತರ ನೇರವಾಗಿ ದೆಹಲಿಗೆ ಕರೆದುಕೊಂಡು ಹೋಗಲಿದ್ದಾರೆ. […]

ಉಗ್ರರ ಜೊತೆ ನಂಟು ಆರೋಪ| ಮಾಜಿ‌ ಶಾಸಕ ಬಿ.ಎಂ ಇದಿನಬ್ಬ ಪುತ್ರನ ಮನೆ ಮೇಲೆ ಐಎನ್ಎ ದಾಳಿ| Read More »

ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ವಾಟ್ಸ್ ಆ್ಯಪ್ ಖಾತೆಗಳು ಬ್ಯಾನ್‌

ನವದೆಹಲಿ: 2021ರ ನವೆಂಬರ್‌ ತಿಂಗಳಲ್ಲಿ ಭಾರತೀಯರ 17 ಲಕ್ಷ ಖಾತೆಗಳನ್ನು ವಾಟ್ಸಪ್‌ ಬ್ಯಾನ್‌ ಮಾಡಿದೆ. ಆದರೆ ಇದೇ ವೇಳೆ 602 ಕುಂದು ಕೊರತೆ ದೂರುಗಳನ್ನು ವಾಟ್ಸಪ್‌ ಸ್ವೀಕರಿಸಿದೆ. ಮಾಸಿಕ ದೂರು ಸ್ವೀಕಾರ ವರದಿಯಲ್ಲಿ ಈ ಮಾಹಿತಿ ಬೆಳಕಿಗೆ ಬಂದಿದೆ. ಒಂದು ತಿಂಗಳಲ್ಲಿ ಭಾರತೀಯರ 17,59,000 ಖಾತೆಗಳನ್ನು ವಾಟ್ಸಪ್‌ ನಿಷೇಧಿಸಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಹಾಗೂ ದುರುಪಯೋಗ ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಈ ಖಾತೆಗಳನ್ನು ಮರುಸ್ಥಾಪಿಸಿಕೊಳ್ಳುವ ಅವಕಾಶ ಬಳಕೆದಾರನಿಗೆ ಇಲ್ಲ. ಮುಂದೆ ಈ ಸಂಬಂಧ ಆಯ್ಕೆ

ಒಂದೇ ತಿಂಗಳಲ್ಲಿ ಭಾರತೀಯರ 17 ಲಕ್ಷ ವಾಟ್ಸ್ ಆ್ಯಪ್ ಖಾತೆಗಳು ಬ್ಯಾನ್‌ Read More »

ಕಿಸಾನ್ ಸಮ್ಮಾನ್ 10ನೇ ಕಂತು ಬಿಡುಗಡೆ|

ನವದೆಹಲಿ: ಹೊಸ ವರ್ಷದ ಮೊದಲ ದಿನವೇ ರೈತರಿಗೆ ಸಿಹಿ ಸುದ್ದಿ ಸಿಕ್ಕಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳ ಖಾತೆಗೆ 2000 ರೂ. ಜಮಾ ಮಾಡಲಾಗಿದೆ. ಕಿಸಾನ್ ಸಮ್ಮಾನ್ ನಿಧಿ ಯೋಜನೆ 10 ನೇ ಕಂತಿನ ಹಣ ಬಿಡುಗಡೆ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ವರ್ಚುಯಲ್ ಮೂಲಕ ಉದ್ಘಾಟಿಸಿದ್ದಾರೆ. ದೇಶಾದ್ಯಂತ 10.09 ಕೋಟಿ ರೈತರ ಬ್ಯಾಂಕ್ ಖಾತೆಗೆ 20,900 ಕೋಟಿ ರೂಪಾಯಿ ಹಣವನ್ನು ಜಮಾ ಮಾಡಲಾಗಿದೆ. ವಾರ್ಷಿಕ 6 ಸಾವಿರ ರೂಪಾಯಿಯನ್ನು ತಲಾ 2000 ರೂ.ಗಳಂತೆ

ಕಿಸಾನ್ ಸಮ್ಮಾನ್ 10ನೇ ಕಂತು ಬಿಡುಗಡೆ| Read More »

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳ್ತಾರಾ ಸುಧಾಮೂರ್ತಿ| ಸಮಾಜ ಸೇವೆಯಲ್ಲೇ ಮುಂದುವರೆಯುವ ಬಯಕೆ|

ಬೆಂಗಳೂರು: ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಮತ್ತು ಭಾರತದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳಲ್ಲಿ ಒಂದಾದ ಇನ್ಫೋಸಿಸ್‌ನ ಯಶಸ್ಸಿನಲ್ಲಿನ ಪ್ರಮುಖ ಪಾತ್ರಧಾರಿ, ಸುಧಾ ಮೂರ್ತಿ ಅವರು ಶುಕ್ರವಾರ ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆ ಹುದ್ದೆಯನ್ನು ಅಂತಿಮವಾಗಿ ತ್ಯಜಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ನಡುವೆ ಅವರು ಹಲವು ದಶಕಗಳಿಂದ ಸಲ್ಲಿಸುತ್ತಿರುವ ಸಮಾಜ ಸೇವೆಯನ್ನು ಮುಂದುವರೆಸಿಕೊಂಡು ಹೋಗಲು ಅವರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಸುಧಾ ಮೂರ್ತಿ ಕನ್ನಡ ಮತ್ತು ಇಂಗ್ಲಿಷ್ ನ ಬರಹಗಾರ್ತಿಯಾಗಿ ಕೂಡ ಗುರುತಿಸಿಕೊಂಡಿದ್ದು, ಸುಧಾ ಮೂರ್ತಿಯವರು ತಮ್ಮ ವೃತ್ತಿಪರ ಜೀವನವನ್ನು

ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷ ಸ್ಥಾನಕ್ಕೆ ವಿದಾಯ ಹೇಳ್ತಾರಾ ಸುಧಾಮೂರ್ತಿ| ಸಮಾಜ ಸೇವೆಯಲ್ಲೇ ಮುಂದುವರೆಯುವ ಬಯಕೆ| Read More »

ಕೋರ್ಟ್ ಕಲಾಪದಲ್ಲಿ ಕ್ರಾಂತಿಕಾರಿ ಹೆಜ್ಜೆ: ನೇರ ಪ್ರಸಾರಕ್ಕೆ ನಿಯಮ ಜಾರಿ- ಮಾಧ್ಯಮ ಬಳಕೆಗೆ ನಿರ್ಬಂಧ

ನವದೆಹಲಿ : ಹೈಕೋರ್ಟ್ ಕಲಾಪದ ನೇರ ಪ್ರಸಾರ ಹಾಗೂ ಕಲಾಪದ ವಿಡಿಯೋ ರೆಕಾರ್ಡಿಂಗ್ ಮಾಡುವ ಕುರಿತು ನಿಯಮಗಳನ್ನು ರೂಪಿಸಿದ್ದು, ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಸರ್ಕಾರ Karnataka Rules on Live Streaming and Recording of Court Proceedings, 2021 ನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿದೆ. ನ್ಯಾಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಕೋರ್ಟ್ ಕಲಾಪಗಳನ್ನು ರೆಕಾರ್ಡಿಂಗ್ ಮಾಡುವುದು ಹಾಗೂ ನೇರ ಪ್ರಸಾರ ಮಾಡಬೇಕೆಂಬ ಸಾರ್ವಜನಿಕ ಬೇಡಿಕೆಯನ್ನು ರಾಜ್ಯ ಹೈಕೋರ್ಟ್ ಕೊನೆಗೂ ಈಡೇರಿಸಿದೆ. ನ್ಯಾಯಾಲಯ ಕಲಾಪಗಳ ನೇರಪ್ರಸಾರ ಮತ್ತು

ಕೋರ್ಟ್ ಕಲಾಪದಲ್ಲಿ ಕ್ರಾಂತಿಕಾರಿ ಹೆಜ್ಜೆ: ನೇರ ಪ್ರಸಾರಕ್ಕೆ ನಿಯಮ ಜಾರಿ- ಮಾಧ್ಯಮ ಬಳಕೆಗೆ ನಿರ್ಬಂಧ Read More »

ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ

ನವದೆಹಲಿ: ಭಾರತದ ವಿಮಾನಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ದೇಸಿ ಸಂಗೀತವನ್ನು ಬಳಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ವಿಮಾನ ನಿಲ್ದಾಣ ನಿರ್ವಹಣಾ ಸಂಸ್ಥೆಗಳು ಮತ್ತು ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ವಿಮಾನಯಾನ ಕಂಪನಿಗಳಿಗೆ ಸೂಚಿಸಿದೆ. ಈ ಬಗ್ಗೆ ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯ ಮನವಿಯನ್ನು ಉಲ್ಲೇಖಿಸಿ ಈ ಪತ್ರ ಬರೆದಿದೆ. ಭಾರತೀಯ ಸಾಂಸ್ಕೃತಿಕ ಸಂಶೋಧನಾ ಮಂಡಳಿಯು ಭಾರತದಲ್ಲಿ ಸಂಚರಿಸುವ ವಿಮಾನಗಳು ಮತ್ತು ದೇಶದಲ್ಲಿರುವ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತವನ್ನು ಬಳಕೆ ಮಾಡಲು ಸೂಚಿಸುವಂತೆ ಮನವಿ ಮಾಡಿ ಕೇಂದ್ರ

ವಿಮಾನ ಮತ್ತು ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಬಳಸಿ – ಸರ್ಕಾರ ಆದೇಶ Read More »

ಪ್ರಧಾನಿ ಮೋದಿಗಾಗಿ 12ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ಖರೀದಿ

ನವದೆಹಲಿ:- ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 12 ಕೋಟಿ ರೂಪಾಯಿಗೂ ಅಧಿಕ ಮೌಲ್ಯ ಐಶಾರಾಮಿ ಕಾರನ್ನು ಬಳಕೆ ಮಾಡಲಾರಂಭಿಸಿದ್ದಾರೆ. ಮರ್ಸಿಡೇಸ್ ಬೆಂಜ್ ಕಂಪೆನಿಯ ಮೇ ಬ್ಯಾಕ್ ಎಸ್650 ಸರಣಿಯ ಶಸ್ತ್ರಸ್ತ್ರ ಸಜ್ಜಿತ ಕಾರನ್ನು ಪ್ರಧಾನಿ ಅವರಿಗಾಗಿ ಮತ್ತಷ್ಟು ಮಾರ್ಪಡಿಸಲಾಗಿದೆ. ಈಗಾಗಲೇ ರೆಂಜ್‍ರೋವರ್ ವೋಗ್ ಮತ್ತು ಟೊಯೋಟಾ ಲ್ಯಾಂಡ್ ಕ್ರೂಸರ್ ಕಾರುಗಳು ಪ್ರಧಾನಿ ಅವರ ಕಚೇರಿಯಲ್ಲಿವೆ. ಅವುಗಳ ಜೊತೆ ಈಗ ಮರ್ಸಿಡೆಸ್ ಬೆಂಜ್ ಸೇರ್ಪಡೆಯಾಗಿದೆ. ಇತ್ತೀಚೆಗೆ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟೀನ್ ಭಾರತಕ್ಕೆ ಭೇಟಿ ನೀಡಿದಾಗ ಅವರನ್ನು

ಪ್ರಧಾನಿ ಮೋದಿಗಾಗಿ 12ಕೋಟಿ ಮೌಲ್ಯದ ಮರ್ಸಿಡಿಸ್ ಬೆಂಜ್ ಕಾರು ಖರೀದಿ Read More »

ಜನವರಿಯಿಂದ 15-18 ವರ್ಷದವರಿಗೆ ವ್ಯಾಕ್ಸಿನೇಷನ್‌- ಪ್ರಧಾನಿ ಮೋದಿ ಘೋಷಣೆ

ನವದೆಹಲಿ : ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್ ಆರಂಭವಾಗಲಿದೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದ್ದಾರೆ. ದೇಶದಲ್ಲಿ ಕೊರೊನಾ ರೂಪಾಂತರಿ ಒಮಿಕ್ರಾನ್ ಸೋಂಕಿನ ಅಟ್ಟಹಾಸ ಮೆರೆಯುತ್ತಿದ್ದು, ಇಂತಹ ಸಂದರ್ಭದಲ್ಲಿ ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು. ವಿಶ್ವದಾದ್ಯಂತ ಒಮಿಕ್ರಾನ್ ಸೋಂಕು ಹೆಚ್ಚಾಗುತ್ತಿದೆ ದೇಶದಲ್ಲಿ ಒಮಿಕ್ರಾನ್ ಸೋಂಕು ನಮ್ಮನ್ನು ಕಾಡುತ್ತಿದೆ. ಕೊರೊನಾ ರೂಪಾಂತರಿಯಾಗಿ ಪರಿವರ್ತನೆ ಹೊಂದುತ್ತಿದೆ. ಹೆಚ್ಚುವರಿ ಐಸಿಯು, ಆಕ್ಸಿಜನ್ ಬೆಡ್‌ಗಳನ್ನು ಸಿದ್ಧಪಡಿಸಿದ್ದೇವೆ . ಜನವರಿ 3 ರಿಂದ 15-18 ವರ್ಷದ ಮಕ್ಕಳಿಗೆ ವ್ಯಾಕ್ಸಿನೇಷನ್

ಜನವರಿಯಿಂದ 15-18 ವರ್ಷದವರಿಗೆ ವ್ಯಾಕ್ಸಿನೇಷನ್‌- ಪ್ರಧಾನಿ ಮೋದಿ ಘೋಷಣೆ Read More »

ರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತುಕೊಳ್ಳುವುದೂ ಮಾನಭಂಗಕ್ಕೆ ಸಮ- ಬಾಂಬೆ ಹೈಕೋರ್ಟ್

ಮುಂಬೈ: ಮಧ್ಯರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತು ಅವಳ ಪಾದಗಳನ್ನು ಸ್ಪರ್ಶಿಸಲು ಪ್ರಯತ್ನಿಸುವುದು ಮಾನ ಭಂಗಗೊಳಿಸಲು ಯತ್ನಿಸಿದಂತೆ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪರಿಚಿತರು ಮಹಿಳೆಯ ದೇಹದ ಯಾವುದೇ ಭಾಗವನ್ನು ಮುಟ್ಟಿದರೆ, ಅದು ಅಪಮಾನವೆಸಗಿದಂತೆ ಎಂದು ಕೋರ್ಟ್ ಹೇಳಿದೆ. ಔರಂಗಾಬಾದ್ ದ ಜಲ್ನಾ ಜಿಲ್ಲೆಯ ನಿವಾಸಿ 36 ವರ್ಷದ ಪರಮೇಶ್ವರ್ ಧಾಗೆ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿದ ಕೋರ್ಟ್ ಈ ತೀರ್ಪು ನೀಡಿದೆ. ಅಪರಾಧಿಗೆ ಕೋರ್ಟ್ ಎರಡು ವರ್ಷಗಳ ಶಿಕ್ಷೆ ವಿಧಿಸಿದೆ. ಜುಲೈ 2014

ರಾತ್ರಿ ಮಹಿಳೆಯ ಹಾಸಿಗೆ ಮೇಲೆ ಕುಳಿತುಕೊಳ್ಳುವುದೂ ಮಾನಭಂಗಕ್ಕೆ ಸಮ- ಬಾಂಬೆ ಹೈಕೋರ್ಟ್ Read More »

ಸಂಕ್ರಾಂತಿ ಬಳಿಕ ದೇಶದಲ್ಲಿ ದೊಡ್ಡ ಗಂಡಾಂತರ| ಕೋಡಿ ಮಠ ಶ್ರೀ ಭವಿಷ್ಯ|

ರಾಣಿಬೆನ್ನೂರು: ಈಗಾಗಲೇ ದೇಶದಲ್ಲಿ ದೊಡ್ಡ ಗಂಢಾಂತರ ಉಂಟಾಗಲಿದೆ ಎಂಬುದಾಗಿ ಭವಿಷ್ಯ ನುಡಿದಿದ್ದಂತ ಕೋಠಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿ ಈಗ ರೂಪಾಂತರಿ ಓಮಿಕ್ರಾನ್, ರಾಜಕೀಯ ತಲ್ಲಣದ ಬಗ್ಗೆ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಅಂತ ಅವರು ಹೇಳಿದ್ದಾರೆ. ಈ ಬಗ್ಗೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದಂತ ಕೋಡಿಮಠದ ಡಾ.ಶಿವಾನಂದ ಶಿವಯೋಗೀಂದ್ರ ರಾಜೇಂದ್ರ ಸ್ವಾಮೀಜಿಯವರು ಈಗಾಗಲೇ ನಾನು ಹೇಳಿದಂತೆ ದೊಡ್ಡ

ಸಂಕ್ರಾಂತಿ ಬಳಿಕ ದೇಶದಲ್ಲಿ ದೊಡ್ಡ ಗಂಡಾಂತರ| ಕೋಡಿ ಮಠ ಶ್ರೀ ಭವಿಷ್ಯ| Read More »