ರಾಷ್ಟ್ರೀಯ

ಪಂಜಾಬ್ ಜನಪ್ರತಿನಿಧಿಗಳಿಗೆ ಶಾಕ್ ನೀಡಿದ ‘ಭಗವಂತ’ | “ಒನ್ ಎಂಎಲ್ಎ ವನ್ ಪೆನ್ಷನ್” ಜಾರಿಗೆ ತಂದ ಸಿಎಂ

ಸಮಗ್ರ ನ್ಯೂಸ್: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಎಲ್ಲಾ ಶಾಸಕರಿಗೆ ಕೇವಲ ಒಂದು ಪಿಂಚಣಿ ಮಾತ್ರ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಶಾಸಕರ ಕುಟುಂಬ ಪಿಂಚಣಿಯನ್ನೂ ಕೂಡಾ ಕಡಿತಗೊಳಿಸಿದ್ದು, ಎಷ್ಟು ಬಾರಿ ಗೆದ್ದರೂ ಕೂಡಾ ಒಂದೇ ಪಿಂಚಣಿ ಎಂದು ಕೂಡಾ ಸ್ಪಷ್ಟಪಡಿಸಿದ್ದಾರೆ. ವಿಡಿಯೋ ಸಂದೇಶದಲ್ಲಿ ಈ ವಿಚಾರ ತಿಳಿಸಿದ ಸಿಎಂ ಭಗವಂತ್‌ಮಾನ್ ಹಲವು ಶಾಸಕರು ವಿಧಾನಸಭೆಯಲ್ಲಿ ಜನಪ್ರತಿನಿಧಿಗಳಾಗಿ ಸೇವೆ ಸಲ್ಲಿಸುವ ಪ್ರತಿ ಅವಧಿಗೆ ಬಹು ಪಿಂಚಣಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಪಿಂಚಣಿ ಕಡಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಎಷ್ಟು ಬಾರಿ […]

ಪಂಜಾಬ್ ಜನಪ್ರತಿನಿಧಿಗಳಿಗೆ ಶಾಕ್ ನೀಡಿದ ‘ಭಗವಂತ’ | “ಒನ್ ಎಂಎಲ್ಎ ವನ್ ಪೆನ್ಷನ್” ಜಾರಿಗೆ ತಂದ ಸಿಎಂ Read More »

ಔಷಧಿ ಬೆಲೆಯಲ್ಲಿ ಭಾರೀ ಏರಿಕೆ| ಅಗತ್ಯ ಔಷಧ ದರ ದುಪ್ಪಟ್ಟು

ಸಮಗ್ರ ನ್ಯೂಸ್: ಪ್ಯಾರಾಸಿಟಮಾಲ್, ಅಜಿಥ್ರೊಮೈಸಿನ್ ಸೇರಿದಂತೆ ಇತರೆ ಅಗತ್ಯ ಔಷಧಗಳ ಬೆಲೆಗಳು ಏಪ್ರಿಲ್‌ನಿಂದ 10.7% ರಷ್ಟು ಏರಿಕೆಯಾಗಲಿವೆ. ಭಾರತದ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(ಎನ್‌ಪಿಪಿಎ) ಶುಕ್ರವಾರ ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿಯ ಸಗಟು ಬೆಲೆ ಸೂಚ್ಯಂಕದಲ್ಲಿ(ಡಬ್ಲ್ಯುಪಿಐ) 10.7% ರಷ್ಟು ಬೆಲೆ ಏರಿಕೆಯನ್ನು ಘೋಷಿಸಿರುವುದರಿಂದ ಗ್ರಾಹಕರು ಅಗತ್ಯ ಔಷಧಿಗಳಿಗೆ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಜ್ವರ, ಸೋಂಕುಗಳು, ಚರ್ಮ ರೋಗಗಳು, ಅಧಿಕ ರಕ್ತದೊತ್ತಡ, ರಕ್ತಹೀನತೆ ಮತ್ತು ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುವ NLEM ನಲ್ಲಿ ಸುಮಾರು 800 ನಿಗದಿತ

ಔಷಧಿ ಬೆಲೆಯಲ್ಲಿ ಭಾರೀ ಏರಿಕೆ| ಅಗತ್ಯ ಔಷಧ ದರ ದುಪ್ಪಟ್ಟು Read More »

ಮಂಗಳೂರು ವಿವಿ ಅತಿಥಿ ಉಪನ್ಯಾಸಕರ ವೇತನದಲ್ಲಿ ಹೆಚ್ಚಳ

ಸಮಗ್ರ ನ್ಯೂಸ್: ಮಂಗಳೂರು ವಿಶ್ವವಿದ್ಯಾನಿಲಯದ ಘಟಕ ಕಾಲೇಜುಗಳು ಹಾಗೂ ಸ್ನಾತಕೋತ್ತರ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ ಮಾಡಲಾಗಿದೆ. ಪ್ರಸ್ತುತ ಯುಜಿಸಿ ವಿದ್ಯಾರ್ಹತೆ ಹೊಂದಿರುವ ಅತಿಥಿ ಉಪನ್ಯಾ ಸಕರಿಗೆ ಮಾಸಿಕ 40,000 ರೂ.ಹಾಗೂ ಯುಜಿಸಿ ವಿದ್ಯಾರ್ಹತೆ ಹೊಂದಿರದವರಿಗೆ 35,000 ರೂ. ನಿಗದಿಪಡಿಸಲಾಗಿದೆ. ಫೆಬ್ರವರಿಯಿಂದ ಜಾರಿಗೆ ಬರುವಂತೆ ಈ ಹಿಂದಿನ ವೇತನಕ್ಕಿಂತ ಸರಾಸರಿ 10ರಿಂದ 15 ಸಾವಿರ ರೂ. ಹೆಚ್ಚಳ ಮಾಡಲಾಗಿದೆ. ಇದು ಮಂಗಳೂರು ವಿಶ್ವ ವಿದ್ಯಾನಿಲಯದ ಮಹತ್ವದ ಹಾಗೂ ಸ್ವಾಗತಾರ್ಹ ನಿರ್ಧಾರ ಎಂದು ಮಂಗಳೂರು

ಮಂಗಳೂರು ವಿವಿ ಅತಿಥಿ ಉಪನ್ಯಾಸಕರ ವೇತನದಲ್ಲಿ ಹೆಚ್ಚಳ Read More »

ಪ್ರೀತಿ ಮಾಯೆಯಾ? ; ತಮ್ಮನ ಜೊತೆಗೆ ವಿಧವೆ ಅಕ್ಕನ ಲವ್ವಿಡವ್ವಿ| ಪ್ರೇಮಪಾಶಕ್ಕೆ ಸಿಲುಕಿದ ಒಂದೇ ಬಳ್ಳಿಯ ಹೂಗಳು!

ಸಮಗ್ರ ಡಿಜಿಟಲ್ ಡೆಸ್ಕ್: ಮಲತಾಯಿಯನ್ನು ಮಗ ಪ್ರೀತಿಸುವುದು, ಮಲತಂಗಿಯನ್ನು ಅಣ್ಣ ಪ್ರೀತಿಸುವುದು ವಿದೇಶಗಳಲ್ಲಿ ಸಾಮಾನ್ಯ. ಆದರೆ ಸ್ವಂತ ಅಕ್ಕ- ತಮ್ಮ ಲವ್ವಿಗೆ ಬಿದ್ದು, ಗ್ರಾಮಸ್ಥರಿಂದ ಛೀಮಾರಿಗೊಳಪಟ್ಟ ಘಟನೆ ಭಾರತದ ಹಳ್ಳಿಯೊಂದರಲ್ಲಿ ನಡೆದಿರುವುದು ಆಶ್ಚರ್ಯ ಉಂಟುಮಾಡಿದೆ. ಇಂತಹದ್ದೊಂದು ವಿಚಿತ್ರ ಪ್ರೇಮಕಥೆ ಬೆಳಕಿಗೆ ಬಂದಿದ್ದು, ಬಿಹಾರದ ಪಶ್ಚಿಮ ಚಂಪಾರಣ್ ನಲ್ಲಿ. ಇಲ್ಲಿನ ವಿಧವೆ ಸಹೋದರಿ ತನ್ನ ಕಿರಿಯ ಸಹೋದರನನ್ನು ಪ್ರೀತಿಸುತ್ತಿದ್ದಳು. ಇಬ್ಬರ ನಡುವಿನ ಪ್ರೇಮ ಸಂಬಂಧ ಎಷ್ಟರಮಟ್ಟಿಗೆ ಗಟ್ಟಿಯಾಯಿತು ಎಂದರೆ ಇಬ್ಬರೂ ಬೇರೆಯಾಗಲು ಒಪ್ಪಲಿಲ್ಲ. ಇಬ್ಬರೂ ಜೊತೆಯಾಗಿ ಬದುಕಿ ಸಾಯಬೇಕೆಂಬ

ಪ್ರೀತಿ ಮಾಯೆಯಾ? ; ತಮ್ಮನ ಜೊತೆಗೆ ವಿಧವೆ ಅಕ್ಕನ ಲವ್ವಿಡವ್ವಿ| ಪ್ರೇಮಪಾಶಕ್ಕೆ ಸಿಲುಕಿದ ಒಂದೇ ಬಳ್ಳಿಯ ಹೂಗಳು! Read More »

ಇಂದೂ ಏರಿಕೆ ಕಂಡ ತೈಲ ಬೆಲೆ| ನಾಲ್ಕೇ ದಿನದಲ್ಲಿ 3.6 ರೂ ಹೆಚ್ಚಳ

ಸಮಗ್ರ ನ್ಯೂಸ್: ದೇಶದಲ್ಲಿ ಕಳೆದ 5 ದಿನಗಳಲ್ಲಿ 4 ಬಾರಿ ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಏರಿಕೆಯಾಗಿದೆ. ಈ ಮೂಲಕ 4 ದಿನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 3.6 . ರೂ ಹೆಚ್ಚಳವಾಗಿದೆ. ಇಂದು ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಪ್ರತಿ ಲೀಟರ್‌ಗೆ ಕ್ರಮವಾಗಿ 98.61 ಮತ್ತು 89.87 ರೂ.ಏರಿಕೆಯಾದರೆ, ಬೆಂಗಳೂರಿನಲ್ಲಿ 1 ಲೀಟರ್ ಪೆಟ್ರೋಲ್ ಬೆಲೆ 103.86 ರೂ. ಮತ್ತು ಡೀಸೆಲ್ ಬೆಲೆ 88.18 ರೂ.ಇದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 113.27 ರೂ

ಇಂದೂ ಏರಿಕೆ ಕಂಡ ತೈಲ ಬೆಲೆ| ನಾಲ್ಕೇ ದಿನದಲ್ಲಿ 3.6 ರೂ ಹೆಚ್ಚಳ Read More »

ದ್ವಿತೀಯ ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ

ಸಮಗ್ರ ನ್ಯೂಸ್: ಭಾರತೀಯ ನೌಕಾಪಡೆಯು ನಾವಿಕರು ಪೋಸ್ಟ್‌ಗಳನ್ನು ಭರ್ತಿ ಮಾಡಲು ಅಧಿಕೃತ ಅಧಿಸೂಚನೆ ಹೊರಡಿಸಿದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಏಪ್ರಿಲ್ 5ರ ಮೊದಲು ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. ಸಂಸ್ಥೆಯ ಹೆಸರು: ಭಾರತೀಯ ನೌಕಾಪಡೆಹುದ್ದೆಗಳ ಸಂಖ್ಯೆ: 2500ಉದ್ಯೋಗ ಸ್ಥಳ: ಭಾರತದಾದ್ಯಂತಹುದ್ದೆಯ ಹೆಸರು: ನಾವಿಕರು (AA & SSR)ವೇತನ: ರೂ.21700-69100/- ಪ್ರತಿ ತಿಂಗಳುಶೈಕ್ಷಣಿಕ ಅರ್ಹತೆ: ಭಾರತೀಯ ನೌಕಾಪಡೆಯ ಅಧಿಕೃತ ಅಧಿಸೂಚನೆಯ ಪ್ರಕಾರ

ದ್ವಿತೀಯ ಪಿಯುಸಿ ಪಾಸಾದವರಿಗೆ ಭಾರತೀಯ ನೌಕಾಪಡೆಯಲ್ಲಿ ಉದ್ಯೋಗಾವಕಾಶ Read More »

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಜಪಾನ್| ಸೂರ್ಯೋದಯದ ನಾಡಲ್ಲಿ ಜನಜೀವನ ದುಸ್ಥರ

ಸಮಗ್ರ ನ್ಯೂಸ್: ಬುಧವಾರ ರಾತ್ರಿ ಉತ್ತರ ಜಪಾನ್‌ ನ ಫುಕುಶಿಮಾ ಕರಾವಳಿಯಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಭೂಕಂಪದಿಂದಾಗಿ ನಾಲ್ವರು ಸಾವನ್ನಪ್ಪಿದ್ದಾರೆ. ಇನ್ನೂ 90ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ಪ್ರಬಲ ಭೂಕಂಪದಿಂದ ಹಲವು ನಗರಗಳಲ್ಲಿ ವಿದ್ಯುತ್ ವ್ಯವಸ್ಥೆ ಕಡಿತಗೊಂಡಿದೆ ಎಂದು ಪೊಲೀಸರು ಮತ್ತು ಅಗ್ನಿಶಾಮಕ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉತ್ತರ ಅಕ್ಷಾಂಶ 37.7 ಮತ್ತು ಪೂರ್ವ ರೇಖಾಂಶ 141.7ರ 60 ಕಿಮೀ ಆಳದಲ್ಲಿ, ಬುಧವಾರ ಸ್ಥಳೀಯ ಕಾಲಮಾನ ರಾತ್ರಿ 11.36ರ ಸುಮಾರಿಗೆ ಕಂಪನ ಸಂಭವಿಸಿದೆ.

ಪ್ರಬಲ ಭೂಕಂಪಕ್ಕೆ ತತ್ತರಿಸಿದ ಜಪಾನ್| ಸೂರ್ಯೋದಯದ ನಾಡಲ್ಲಿ ಜನಜೀವನ ದುಸ್ಥರ Read More »

ಸುಪ್ರೀಂ ಮೆಟ್ಟಿಲೇರಿದ ‘ಹಿಜಾಬ್’| ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅರ್ಜಿದಾರರು

ಸಮಗ್ರ ನ್ಯೂಸ್: ರಾಜ್ಯ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧಿಸಿದ ರಾಜ್ಯ ಹೈಕೋರ್ಟ್‌ ನ ತೀರ್ಪು ಪ್ರಶ್ನಿಸಿ, ಸುಪ್ರೀಂ ಕೋರ್ಟ್ʼನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಅಭಿಪ್ರಾಯಪಟ್ಟ ಕರ್ನಾಟಕ ಹೈಕೋರ್ಟ್ʼನ ಹಿಜಾಬ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ʼಗೆ ವಿಶೇಷ ರಜೆ ಅರ್ಜಿ ಸಲ್ಲಿಸಲಾಗಿದೆ. ಮೇಲ್ಮನವಿಯನ್ನು ವಿದ್ಯಾರ್ಥಿನಿ ನಿಭಾ ನಾಜ್‌ ಪರ ವಕೀಲ ಅನಾಸ್‌ ತನ್ವೀರ್‌ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದಾರೆ. ‘ಹಿಜಾಬ್ ಧರಿಸುವ ಹಕ್ಕು ‘ಅಭಿವ್ಯಕ್ತಿ’ ವ್ಯಾಪ್ತಿಗೆ ಬರುತ್ತದೆ ಮತ್ತು ಹೀಗಾಗಿ ಸಂವಿಧಾನದ ಅನುಚ್ಛೇದ

ಸುಪ್ರೀಂ ಮೆಟ್ಟಿಲೇರಿದ ‘ಹಿಜಾಬ್’| ಹೈಕೋರ್ಟ್ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಅರ್ಜಿದಾರರು Read More »

ಹಿಜಾಬ್ ವಿವಾದ| ಅರ್ಜಿದಾರರಿಂದ ಸುಪ್ರೀಂ ಮೊರೆ ಹೋಗಲು ನಿರ್ಧಾರ

ಸಮಗ್ರ ನ್ಯೂಸ್: ಹಿಜಾಬ್ ಧಾರಣೆ ಇಸ್ಲಾಂ ನ ಕಡ್ಡಾಯ ಭಾಗವಲ್ಲ, ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸಬಾರದು, ಸರ್ಕಾರದ ಸಮವಸ್ತ್ರ ಆದೇಶ ಪಾಲನೆ ಕಡ್ಡಾಯ ವಾಗಬೇಕು ಎಂಬ ಕರ್ನಾಟಕ ಹೈಕೋರ್ಟ್ ನ ತೀರ್ಪು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂಗೆ ಮೊರೆ ಹೋಗಲು ನಿರ್ಧರಿಸಿದ್ದಾರೆ. ಹಿಜಾಬ್ ಗೆ ಸಂಬಂಧಿಸಿದ ಎಲ್ಲಾ ರಿಟ್ ಅರ್ಜಿಗಳನ್ನು ರದ್ದುಗೊಳಿಸಿ ಕರ್ನಾಟಕ ತ್ರಿಸದಸ್ಯ ಪೀಠ ಇಂದು ತನ್ನ ತೀರ್ಪು ಪ್ರಕಟಿಸಿದೆ. ಆದರೆ ಈ ತೀರ್ಪು ಪ್ರಶ್ನಿಸಲು ಅರ್ಜಿದಾರರು ನಿರ್ಧರಿಸಿದ್ದು, ಸುಪ್ರೀಂ ಕೋರ್ಟ್ ನಲ್ಲಿ ಈ ಕುರಿತು ದಾವೆ

ಹಿಜಾಬ್ ವಿವಾದ| ಅರ್ಜಿದಾರರಿಂದ ಸುಪ್ರೀಂ ಮೊರೆ ಹೋಗಲು ನಿರ್ಧಾರ Read More »

ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ – ಹೈಕೋರ್ಟ್ ತೀರ್ಪು

ಸಮಗ್ರ ನ್ಯೂಸ್: ಹಿಜಾಬ್ ವಿಚಾರದಲ್ಲಿ ಕರ್ನಾಟಕ ಹೈಕೋರ್ಟ್ ಮಹತ್ವವಾದ ತೀರ್ಪು ನೀಡಿದ್ದು ಶೈಕ್ಷಣಿಕ ಸಂಸ್ಥೆಗಳ ಆವರಣದಲ್ಲಿ ಯಾವುದೇ ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎ.ಜಿ ನಾವದಗಿ ಈ ತೀರ್ಪು ಪ್ರಕಟಿಸಿದ್ದಾರೆ. ಸರ್ಕಾರ ವಿಧಿಸಿರುವ ಸಮವಸ್ತ್ರ ಪಾಲನೆ ಮಾಡುವುದು ಕಡ್ಡಾಯ, ಅದನ್ನು ಪ್ರಶ್ನಿಸುವಂತಿಲ್ಲ. ಸರ್ಕಾರದ ಆದೇಶ ಕಡ್ಡಾಯವಾಗಿದೆ ಎಂದು ಪೀಠ ತೀರ್ಪಿತ್ತಿದೆ. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿರ್ಬಂಧಿಸಿರುವ ಕ್ರಮ ಹಾಗೂ ಈ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ

ಶಿಕ್ಷಣ ಸಂಸ್ಥೆಗಳಲ್ಲಿ ಧಾರ್ಮಿಕ ಆಚರಣೆಗೆ ಅವಕಾಶವಿಲ್ಲ – ಹೈಕೋರ್ಟ್ ತೀರ್ಪು Read More »