ರಾಷ್ಟ್ರೀಯ

ರಾಜ್ಯಸಭಾ ನಾಮನಿರ್ದೇಶಿತ ಸದಸ್ಯರಾಗಿ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಪ್ರಮಾಣವಚನ

ಸಮಗ್ರ ನ್ಯೂಸ್: ರಾಜ್ಯಸಭೆಗೆ ನಾಮ ನಿರ್ದೇಶನಗೊಂಡಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಇಂದು ದೆಹಲಿಯಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ರಾಜ್ಯಸಭೆಯಲ್ಲಿ ಇಂದು ವೀರೇಂದ್ರ ಹೆಗ್ಗಡೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಧರ್ಮಸ್ಥಳದ ಧರ್ಮಾಧಿಕಾರಿಯಾದ ವೀರೇಂದ್ರ ಹೆಗಡೆಯವರು ಜನಪರ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿದ್ದಾರೆ. ಕೇಂದ್ರ ಸರ್ಕಾರ ಅವರನ್ನು ರಾಜ್ಯಸಭೆಗೆ ನಾಮನಿರ್ದೇಶನ ಮಾಡಿದೆ. ರಾಜ್ಯ ಸಭೆಯಿಂದ ನೇರಪ್ರಸಾರ

ರಾಜ್ಯಸಭಾ ನಾಮನಿರ್ದೇಶಿತ ಸದಸ್ಯರಾಗಿ ರಾಜಶ್ರೀ ಡಾ. ಡಿ. ವೀರೇಂದ್ರ ಹೆಗ್ಗಡೆ ಪ್ರಮಾಣವಚನ Read More »

ಪಶ್ಚಿಮ ಘಟ್ಟಗಳ ಉಳಿವಿಗೆ ಕಸ್ತೂರಿ‌ ರಂಗನ್ ವರದಿ ಜಾರಿ| ಜನ ಯಾಕಿಷ್ಟು ಭಯ ಪಡ್ತಾರೆ ಗೊತ್ತಾ? ಅಂಥಾದ್ದೇನಿದೆ ಈ ವರದಿಯಲ್ಲಿ? ಕಂಪ್ಲೀಟ್ ಸ್ಟೋರಿ…

ಸಮಗ್ರ ನ್ಯೂಸ್: ಪಶ್ಚಿಮ ಘಟ್ಟಗಳು ಭಾರತೀಯ ಪರ್ಯಾಯ ದ್ವೀಪದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಹಬ್ಬಿದ ಪರ್ವತ ಶ್ರೇಣಿ. ಪಶ್ಚಿಮಘಟ್ಟದ ಶ್ರೇಣಿಯು ಗುಜರಾತ್‌ನಿಂದ ಆರಂಭವಾಗಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯದ ಕನ್ಯಾಕುಮಾರಿವರೆಗೂ ಹಬ್ಬಿದೆ. ಪಶ್ಚಿಮ ಘಟ್ಟಗಳ ಒಟ್ಟು 1,64,280 ಚ.ಕಿ.ಮೀ. ಪ್ರದೇಶದಲ್ಲಿ ಸುಮಾರು 59.940 ಚ.ಕಿ.ಮೀ ವಿಸ್ತೀರ್ಣ ಪ್ರದೇಶ ಅಂದರೆ ಸುಮಾರು ಶೇಕಡಾ 36.49ರಷ್ಟು ಭಾಗವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಲಾಗಿದೆ. ಪಶ್ಚಿಮ ಘಟ್ಟಗಳ ಈ ಸೂಕ್ಷ್ಮ ಪರಿಸರವು ಅಪರೂಪದ ಪ್ರಾಣಿಗಳು, ಪಕ್ಷಿಗಳು,

ಪಶ್ಚಿಮ ಘಟ್ಟಗಳ ಉಳಿವಿಗೆ ಕಸ್ತೂರಿ‌ ರಂಗನ್ ವರದಿ ಜಾರಿ| ಜನ ಯಾಕಿಷ್ಟು ಭಯ ಪಡ್ತಾರೆ ಗೊತ್ತಾ? ಅಂಥಾದ್ದೇನಿದೆ ಈ ವರದಿಯಲ್ಲಿ? ಕಂಪ್ಲೀಟ್ ಸ್ಟೋರಿ… Read More »

ಕಸ್ತೂರಿ ರಂಗನ್ ವರದಿ‌ಯ ಐದನೇ ಅಧಿಸೂಚನೆ ಹೊರಡಿಸಿದ ಪರಿಸರ ಇಲಾಖೆ| ದ.ಕ ಜಿಲ್ಲೆಯ ಈ ಹಳ್ಳಿಗಳು ಡೇಂಜರ್ ಝೋನ್ ನಲ್ಲಿ!

ಸಮಗ್ರ ನ್ಯೂಸ್: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ

ಕಸ್ತೂರಿ ರಂಗನ್ ವರದಿ‌ಯ ಐದನೇ ಅಧಿಸೂಚನೆ ಹೊರಡಿಸಿದ ಪರಿಸರ ಇಲಾಖೆ| ದ.ಕ ಜಿಲ್ಲೆಯ ಈ ಹಳ್ಳಿಗಳು ಡೇಂಜರ್ ಝೋನ್ ನಲ್ಲಿ! Read More »

ಮಂಗಳೂರು: ಸಂಗೀತ ನಿರ್ದೇಶಕ ವನಿಲ್ ವೇಗಸ್ ಗೆ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿ| ಮೊದಲ ಬಾರಿಗೆ ಕರಾವಳಿಗೆ ಒಲಿದ ಸಂಗೀತ ಗೌರವ

ಸಮಗ್ರ ನ್ಯೂಸ್: ಮಂಗಳೂರು ಮೂಲದ ಸಂಗೀತ ನಿರ್ದೇಶಕ ವನಿಲ್ ವೇಗಸ್ ರವರು ಸಂಗೀತ ಕ್ಷೇತ್ರದ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಬೆಂಗಳೂರಿನ ರಿಕ್ಕಿ ಕೇಜ್ ತಂಡದ ಮುಖ್ಯಸ್ಥರಾಗಿರುವ ವನಿಲ್, ರಿಕ್ಕಿ ಕೇಜ್- ಸ್ಟೂವರ್ಟ್ ಕೋಪ್ಲಾಂಡ್ ನಿರ್ಮಿತ “ಡಿವೈನ್ ಟೈಡ್ಸ್” ಆಲ್ಬಂಗೆ ಇಂಜಿನೀಯರಿಂಗ್ ಮತ್ತು ಮಿಕ್ಸಿಂಗ್ ವಿಭಾಗದಲ್ಲಿ ಕೆಲಸ ನಿರ್ವಹಿಸಿದ್ದರು. ಅದೇ ವಿಭಾಗದಲ್ಲಿ ಈಗ ಜಗತ್ತಿನಲ್ಲಿಯೇ ಸಂಗೀತ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಗ್ರ್ಯಾಮಿ ಪ್ರಶಸ್ತಿಯನ್ನು ಪಡೆದು ಕರ್ನಾಟಕದ ಎರಡನೇ ಗ್ರ್ಯಾಮಿ ವಿಜೇತರೆಂಬ ಖ್ಯಾತಿಯನ್ನು ಪಡೆದಿದ್ದಾರೆ. 64 ವರ್ಷಗಳ ಗ್ರ್ಯಾಮಿ

ಮಂಗಳೂರು: ಸಂಗೀತ ನಿರ್ದೇಶಕ ವನಿಲ್ ವೇಗಸ್ ಗೆ ಅತ್ಯುನ್ನತ ಗ್ರ್ಯಾಮಿ ಪ್ರಶಸ್ತಿ| ಮೊದಲ ಬಾರಿಗೆ ಕರಾವಳಿಗೆ ಒಲಿದ ಸಂಗೀತ ಗೌರವ Read More »

ನೀಟ್ ಪರೀಕ್ಷೆ ವೇಳೆ ಒಳ ಉಡುಪು ತೆಗೆದು ಪರೀಕ್ಷೆ ಬರೆಯಲು ಹೇಳಿದವರ ಬಂಧನ

ಸಮಗ್ರ ನ್ಯೂಸ್: ಕೇರಳದ ಕೊಲ್ಲಂನಲ್ಲಿ ನೀಟ್ ಪರೀಕ್ಷೆಗೆ ಹಾಜರಾಗಿದ್ದ ವಿದ್ಯಾರ್ಥಿನಿಯರಿಗೆ ಬ್ರಾ ತೆಗೆಯುವಂತೆ ಹೇಳಿದ ಮೂವರು ಸೇರಿದಂತೆ ಐವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಕೇರಳ ಪೊಲೀಸ್ ಮೂಲಗಳು ತಿಳಿಸಿವೆ. ಇದುವರೆಗೂ ಪರೀಕ್ಷೆ ವೇಳೆ ಅವಮಾನಕರ ತಪಾಸಣೆ ಬಗ್ಗೆ ಮೂರು ದೂರು ದಾಖಲಾಗಿವೆ. ತಮ್ಮ ಮಗಳಿಗಾದ ಅವಮಾನ ಮತ್ತು ಮಾನಸಿಕ ಹಿಂಸೆಯಿಂದ ದೂರು ನೀಡಿದ ವಿದ್ಯಾರ್ಥಿನಿ ತಂದೆಯ ದೂರನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ ನಿರಾಕರಿಸಿದೆ. ದೂರನ್ನು ಕಾಲ್ಪನಿಕ ಮತ್ತು ತಪ್ಪು ಉದ್ದೇಶದಿಂದ ದಾಖಲಿಸಲಾಗಿದೆ ಎಂದು ಕೊಲ್ಲಂನಲ್ಲಿರುವ ನೀಟ್ ಪರೀಕ್ಷಾ

ನೀಟ್ ಪರೀಕ್ಷೆ ವೇಳೆ ಒಳ ಉಡುಪು ತೆಗೆದು ಪರೀಕ್ಷೆ ಬರೆಯಲು ಹೇಳಿದವರ ಬಂಧನ Read More »

ದಂತಚೋರರ‌ ಬೆನ್ನಿಗೆ ನಿಂತರಾ ಪ್ರಜ್ವಲ್ ರೇವಣ್ಣ? ಸಿಎಂ ಗೆ ಪತ್ರ ಬರೆದ‌ ಸಂಸದೆ ಮನೇಕಾ ಗಾಂಧಿ

ಸಮಗ್ರ ನ್ಯೂಸ್: ಸಂಸದೆ ಮನೇಕಾ ಗಾಂಧಿ ಸಿಎಂ ಬೊಮ್ಮಾಯಿಗೆ ಬರೆದ ಪತ್ರವೊಂದು ಸದ್ಯ ಭಾರೀ ಸಂಚಲನ ಸೃಷ್ಟಿಸಿದೆ. ಮನೇಕಾ ಗಾಂಧಿ ಬರೆದಿರುವ ಪತ್ರದಲ್ಲಿ ಪ್ರಜ್ವಲ್​ ರೇವಣ್ಣ ಹಾಗೂ ರಾಜ್ಯ ಅರಣ್ಯ ಇಲಾಖೆ ವಿರುದ್ಧ ಭಾರೀ ದೊಡ್ಡ ಆರೋಪವನ್ನೇ ಮಾಡಿದ್ದಾರೆ. ಬೆಂಗಳೂರಿನ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ ಆನೆ ದಂತ ಪ್ರಕರಣ ಸಂಬಂಧಿಸಿದಂತೆ ಹಾಸನದಿಂದ ರಾಜ್ಯ ರಾಜಧಾನಿ ಬೆಂಗಳೂರು ಮಾತ್ರವಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ ಮಟ್ಟದಲ್ಲೂ ಭಾರೀ ಚರ್ಚೆಯಾಗುತ್ತಿದೆ. ಮನೇಕಾ ಗಾಂಧಿ ಈ ಕುರಿತು ರಾಜ್ಯ ಅರಣ್ಯ ಇಲಾಖೆಯಲ್ಲಿ

ದಂತಚೋರರ‌ ಬೆನ್ನಿಗೆ ನಿಂತರಾ ಪ್ರಜ್ವಲ್ ರೇವಣ್ಣ? ಸಿಎಂ ಗೆ ಪತ್ರ ಬರೆದ‌ ಸಂಸದೆ ಮನೇಕಾ ಗಾಂಧಿ Read More »

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ| ನೇರಪ್ರಸಾರ

ಸಮಗ್ರ ನ್ಯೂಸ್: ಇಂದಿನಿಂದ ಆ.12ರ ವರೆಗೆ ನಡೆಯಲಿರುವ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ 24 ವಿಧೇಯಕಗಳನ್ನು ಮಂಡಿಸಲು ಮುಂದಾಗಿದೆ. ಇಂದು ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ಮುಂದೆ 338 ವಿಧೇಯಕಗಳ ಕುರಿತು ಚರ್ಚೆ ನಡೆಯಲಿದೆ. ಒಟ್ಟಾರೆ ಈ ಬಾರಿಯ ಅಧಿವೇಶನ ಕುತೂಹಲ ಕೆರಳಿಸಿದೆ. ವಿಡಿಯೋ ಕೃಪೆ: ಸಂಸದ್ ಟಿವಿ

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ| ನೇರಪ್ರಸಾರ Read More »

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ

ಸಮಗ್ರ ನ್ಯೂಸ್: ಸಂಸತ್ತಿನ ಮುಂಗಾರು ಅಧಿವೇಶನ ಇಂದಿನಿಂದ ಆರಂಭವಾಗುತ್ತಿದ್ದು, ಮೊದಲ ದಿನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ನಡೆಯಲಿದೆ. ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಹಾಗೂ ಪ್ರತಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅವರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇಂದು ಮತದಾನದ ನಂತರ, ಇದೇ ೨೧ರಂದು ಮತ ಎಣಿಕೆ ಕಾರ್ಯ ನಡೆಯಲಿದೆ. ಹಾಲಿ ಇರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರವಧಿ ಇದೇ ೨೪ರಂದು ಕೊನೆಗೊಳ್ಳುತ್ತಿದೆ. ಈ ನಡುವೆ ಉಪರಾಷ್ಟ್ರಪತಿ ಸ್ಥಾನಕ್ಕೆ ಕೂಡ ಮುಂದಿನ ತಿಂಗಳು ಆಗಸ್ಟ್ ೬ರಂದು

ಇಂದಿನಿಂದ ಸಂಸತ್ ಮುಂಗಾರು ಅಧಿವೇಶನ Read More »

ನಾಳೆಯಿಂದ ಅಗತ್ಯ ವಸ್ತುಗಳ ಮೇಲೆ‌ ಜಿಎಸ್ ಟಿ ಬರೆ| ಅಚ್ಚೇದಿನದ ಮತ್ತೊಂದು ಕೊಡುಗೆ ಎಂದ ಗ್ರಾಹಕ

ಸಮಗ್ರ ನ್ಯೂಸ್: ಪೆಟ್ರೋಲ್, ಡಿಸೇಲ್, ಅಡುಗೆ ಎಣ್ಣೆ ದರ ಸದ್ಯ ಕೊಂಚ ಇಳಿಕೆ ಕಾಣುತ್ತಿರುವ ಬೆನ್ನಲ್ಲೇ ಕೊಂಚ ರಿಲಾಕ್ಸ್ ಆಗಿದ್ದ ದೇಶವಾಸಿಗಳಿಗೆ ಕೇಂದ್ರ ಸರ್ಕಾರ ಈಗ ಮತ್ತೊಂದು ಶಾಕ್ ಕೊಟ್ಟಿದೆ. ಕೊಂಚ ಸುಧಾರಿಸಿಕೊಳ್ಳುವ ಜೊತೆಗೆ ನಾಳೆಯಿಂದ ಅಗತ್ಯ ವಸ್ತುಗಳು, ಆಹಾರ ವಸ್ತುಗಳ ಮೇಲೆ ಜಿಎಸ್‌ಟಿ ಬರೆ ಬೀಳುತ್ತಿದ್ದು, ದುನಿಯಾ ಮತ್ತಷ್ಟು ದುಬಾರಿಯಾಗಲಿದೆ. ಕಳೆದ ತಿಂಗಳು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆಹಾರ ಉತ್ಪನ್ನಗಳ ಮೇಲೆ ಜಿಎಸ್‌ಟಿ ವಿಧಿಸಲು ನಿರ್ಧರಿಸಲಾಗಿದೆ. ಈ ದುಬಾರಿ‌ ತೆರಿಗೆಯಿಂದಾಗಿ ಗ್ರಾಹಕ ಇದೇನಾ ಅಚ್ಚೇದಿನ್

ನಾಳೆಯಿಂದ ಅಗತ್ಯ ವಸ್ತುಗಳ ಮೇಲೆ‌ ಜಿಎಸ್ ಟಿ ಬರೆ| ಅಚ್ಚೇದಿನದ ಮತ್ತೊಂದು ಕೊಡುಗೆ ಎಂದ ಗ್ರಾಹಕ Read More »

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಪ.ಬಂಗಾಳ ರಾಜ್ಯಪಾಲ ಜಗದೀಪ್ ಧಂಗರ್ | ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಘೋಷಣೆ

ಸಮಗ್ರ ನ್ಯೂಸ್: ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಚುನಾವಣಾ ಪ್ರಚಾರ ನಡೆಯುತ್ತಿರುವ ನಡುವೆಯೇ, ಭಾರತೀಯ ಜನತಾ ಪಕ್ಷ ಸಂಸದೀಯ ಮಂಡಳಿ ಸಭೆ ಶನಿವಾರ ದೇಶದ ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧಂಕರ್ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದೆ. ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್ಡಿಎ ಅಭ್ಯರ್ಥಿ ಜಗದೀಪ್ ಧಂಕರ್’ ಎಂದು ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಬಿಜೆಪಿ

ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಪ.ಬಂಗಾಳ ರಾಜ್ಯಪಾಲ ಜಗದೀಪ್ ಧಂಗರ್ | ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಘೋಷಣೆ Read More »