ರಾಷ್ಟ್ರೀಯ

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ

ನವದೆಹಲಿ: 2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತಾಹ್ ಅಲ್-ಸಿಸಿ ಭಾಗವಹಿಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಗಣರಾಜ್ಯೋತ್ಸವಕ್ಕೆ ಈಜಿಪ್ಟ್ ಅಧ್ಯಕ್ಷರನ್ನು ಇದೇ ಮೊದಲ ಬಾರಿಗೆ ಆಹ್ವಾನಿಸಲಾಗಿದೆ. ಅಧ್ಯಕ್ಷ ಅಲ್-ಸಿಸಿ ಜ. 24 ರಿಂದ 26 ರವರೆಗೆ ಭಾರತದಲ್ಲಿರಲಿದ್ದಾರೆ. ಈ ಸಂದರ್ಭದಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಈಜಿಪ್ಟ್ ನ ಅಧ್ಯಕ್ಷರೊಂದಿಗೆ ಐವರು ಸಚಿವರು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಮಟ್ಟದ ನಿಯೋಗ ಇರಲಿದೆ.

2023ರ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಈಜಿಪ್ಟ್ ಅಧ್ಯಕ್ಷ Read More »

ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್‌ ಬಿಡುಗಡೆ

ಸಮಗ್ರ ನ್ಯೂಸ್: ಸ್ವದೇಶಿ ಲಸಿಕೆ ತಯಾರಕ ಭಾರತ್ ಬಯೋಟೆಕ್ ತನ್ನ ಇಂಟ್ರಾನಾಸಲ್ ಕೋವಿಡ್ ಲಸಿಕೆ ಇನ್ ಕೊವಾಕ್ ಅನ್ನು ಜ.26ರಂದು ಭಾರತದಲ್ಲಿ ಮೊದಲ ಬಾರಿಗೆ ಬಿಡುಗಡೆ ಮಾಡಲಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೃಷ್ಣ ಎಲಾ ತಿಳಿಸಿದ್ದಾರೆ. ಭೋಪಾಲ್‌ನಲ್ಲಿ ನಡೆದ ಭಾರತ ಅಂತಾರಾಷ್ಟ್ರೀಯ ವಿಜ್ಞಾನ ಉತ್ಸವದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಲಾ, ಜಾನುವಾರುಗಳಲ್ಲಿನ ಗಡ್ಡೆಯ ಚರ್ಮದ ಕಾಯಿಲೆಗೆ ಸ್ವದೇಶಿ ಲಸಿಕೆ, ಲುಂಪಿ-ಪ್ರೊವಾಕ್‌ಇಂಡ್ ಅನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ. ಜ.26

ಜ.26ಕ್ಕೆ ಭಾರತದಲ್ಲಿ ಇಂಟ್ರಾನಸಲ್ ಕೋವಿಡ್ ಲಸಿಕೆ ಇನ್ ಕೋವ್ಯಾಕ್‌ ಬಿಡುಗಡೆ Read More »

ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿದ ಪುತ್ತೂರು ಮೂಲದ ಕೈದಿ

ಸಮಗ್ರ ನ್ಯೂಸ್: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ನಾಗ್ಪುರ ಕಚೇರಿಗೆ ಬೆದರಿಕೆ ಕರೆ ಮಾಡಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ಎನ್ನುವುದು ತಿಳಿದು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ನಾಗ್ಪುರ ಪೊಲೀಸರು ತನಿಖೆ ಸಚಿವರಿಗೆ ಜೀವ ಬೆದರಿಕೆಯನ್ನು ಹಾಕಿದ್ದು ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಕೈದಿ ದಕ್ಷಿಣ ಕನ್ನಡ ಪುತ್ತೂರು ಮೂಲದ ಜಯೇಶ್ ಕುಮಾರ್ ಎಂದು ತಿಳಿದು ಬಂದಿದೆ. ಜೈಲಿನಲ್ಲಿ ಅಕ್ರಮವಾಗಿ ಫೋನ್‌ ಬಳಸಿ ಜಯೇಶ್‌ ಕುಮಾರ್ ಈ ಕೃತ್ಯವನ್ನು ಎಸಗಿದ್ದಾನೆ. ನಾಗ್ಪುರ

ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಒಡ್ಡಿದ ಪುತ್ತೂರು ಮೂಲದ ಕೈದಿ Read More »

ಯುವಭಾರತದ ರಾಯಬಾರಿ ಈ ಸನ್ಯಾಸಿ

“ಶಕ್ತಿಯೇ ಜೀವನ ದುರ್ಭಲತೆಯೇ ಮರಣ ಜಗತ್ತು ಶಕ್ತಿಯನ್ನು ಪುಜಿಸುತ್ತದೇ ಹೊರತು ದುರ್ಭಲತೆಯನ್ನಲ್ಲ” ಎಂದು ಜಗತ್ತಿಗೆ ಸಾರಿ ಹೇಳಿ ಯುವಕರ ಮನದಲ್ಲಿ ಮಲಗಿರುವ ಚೈತನ್ಯವನ್ನು ಬಡಿದೆಬ್ಬಿಸಿ ದೇಶಕಟ್ಟಲು ಪ್ರೇರಣೆ ನೀಡಿದರು ಸಿಡಿಲ ಸನ್ಯಾಸಿ. ದೈಹಿಕ, ಹಾಗೂ ಮಾನಸಿಕ ಶಕ್ತಿ ಗಳಿಸುವ ಮೂಲಕ ಸದೃಢ ಭಾರತ ನಿರ್ಮಿಸಲು ಸಾಧ್ಯ ಎಂದು ಸಾರಿ ಸಾರಿ ಹೇಳಿದರು ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು. ತಮ್ಮ ಚಿಂತನೆಗಳು ಶಾಶ್ವತವಾಗಿ ಈ ದೇಶದಲ್ಲಿ ಉಳಿದು ದೇಶಕಟ್ಟುವ ಕೆಲಸ ಸದಾ ನಡೆಯಬೇಕು ಎಂದು ತಮ್ಮ ಗುರುಗಳ ಆದರ್ಶ

ಯುವಭಾರತದ ರಾಯಬಾರಿ ಈ ಸನ್ಯಾಸಿ Read More »

ಮಂಗಳೂರು ನಗರಗಳಲ್ಲಿ ಜಿಯೊ ಟ್ರೂ 5ಜಿ ಸೇವೆ ಆರಂಭ

ಸಮಗ್ರ ನ್ಯೂಸ್: ಮಂಗಳೂರು ಮತ್ತು ಇತರ ಏಳು ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆಗಳನ್ನು ಆರಂಭಿಸಿದೆ. ರಿಲಯನ್ಸ್ ಜಿಯೋ ಮಂಗಳೂರಿನಲ್ಲಿ 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ಆಗಿದೆ. ಜಿಯೊ ಗ್ರಾಹಕರು 5 ಜಿ ವೆಲ್‍ಕಮ್ ಆಫರ್ ನಡಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಇಂದಿನಿಂದ ಪಡೆಯಬಹುದಾಗಿದೆ ಎಂದು ಜಿಯೋ ವಕ್ತಾರರು ಪ್ರಕಟಣೆಯಲ್ಲಿ ಹೇಳಿದ್ದಾರೆ. ಇನ್ನು ಮಂಗಳೂರು ನಮ್ಮ ದೇಶದ ಪ್ರಮುಖ ಪ್ರವಾಸೋದ್ಯಮ ಕೇಂದ್ರ ಮತ್ತು ಪ್ರಮುಖ

ಮಂಗಳೂರು ನಗರಗಳಲ್ಲಿ ಜಿಯೊ ಟ್ರೂ 5ಜಿ ಸೇವೆ ಆರಂಭ Read More »

ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್

ನವದೆಹಲಿ: ಸರ್ಕಾರದ ಭಾರತೀಯ ಮಾನದಂಡಗಳ ಬ್ಯೂರೊ ಮೂರು ಬಗೆಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಗುಣಮಟ್ಟದ ಮಾನದಂಡಗಳ ಹೆಸರಿನಲ್ಲಿ ಹೊಸ ನಿಯಮಾವಳಿಗಳನ್ನ ತಂದಿದೆ. ಈ ನಿಯಮಗಳು ಡಿಜಿಟಲ್ ಟೆಲಿವಿಷನ್ ರಿಸೀವರ್ಗಳು, ಯುಎಸ್ಬಿ ಟೈಪ್-ಸಿ ಚಾರ್ಜರ್ಗಳು ಮತ್ತು ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಗೆ ಅನ್ವಯಿಸುತ್ತವೆ. ದೂರದರ್ಶನದಂತಹ ಚಾನಲ್‌ಗಳನ್ನು ಸೆಟ್-ಟಾಪ್ ಬಾಕ್ಸ್ ಇಲ್ಲದೆ ಟಿವಿಗಳಲ್ಲಿ ಪ್ರಸಾರ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಒಳಗೊಂಡಿರುತ್ತದೆ. ಲ್ಯಾಪ್ಟಾಪ್‌‌ಗಳು, ನೋಟ್ಬುಕ್‌ಗಳು, ಮೊಬೈಲ್‌ಗಳಂತಹ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಅನುಕೂಲಕರವಾಗಿ ಸಂಪರ್ಕಿಸಲು ಸಾರ್ವತ್ರಿಕ ಚಾರ್ಜರ್, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿಎಸೆಸ್ ಅನ್ನು

ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್ Read More »

ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್

ನವದೆಹಲಿ: ಸರ್ಕಾರದ ಭಾರತೀಯ ಮಾನದಂಡಗಳ ಬ್ಯೂರೊ ಮೂರು ಬಗೆಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಗುಣಮಟ್ಟದ ಮಾನದಂಡಗಳ ಹೆಸರಿನಲ್ಲಿ ಹೊಸ ನಿಯಮಾವಳಿಗಳನ್ನ ತಂದಿದೆ. ಈ ನಿಯಮಗಳು ಡಿಜಿಟಲ್ ಟೆಲಿವಿಷನ್ ರಿಸೀವರ್ಗಳು, ಯುಎಸ್ಬಿ ಟೈಪ್-ಸಿ ಚಾರ್ಜರ್ಗಳು ಮತ್ತು ವಿಡಿಯೋ ಸರ್ವೆಲೆನ್ಸ್ ಸಿಸ್ಟಮ್ ಗೆ ಅನ್ವಯಿಸುತ್ತವೆ. ದೂರದರ್ಶನದಂತಹ ಚಾನಲ್‌ಗಳನ್ನು ಸೆಟ್-ಟಾಪ್ ಬಾಕ್ಸ್ ಇಲ್ಲದೆ ಟಿವಿಗಳಲ್ಲಿ ಪ್ರಸಾರ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ಕ್ರಮಗಳನ್ನು ಒಳಗೊಂಡಿರುತ್ತದೆ. ಲ್ಯಾಪ್ಟಾಪ್‌‌ಗಳು, ನೋಟ್ಬುಕ್‌ಗಳು, ಮೊಬೈಲ್‌ಗಳಂತಹ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳನ್ನು ಅನುಕೂಲಕರವಾಗಿ ಸಂಪರ್ಕಿಸಲು ಸಾರ್ವತ್ರಿಕ ಚಾರ್ಜರ್, ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ವಿಎಸೆಸ್ ಅನ್ನು

ಇನ್ನುಮುಂದೆ ಲ್ಯಾಪ್ ಟಾಪ್, ಮೊಬೈಲ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಸಾಧನಗಳಿಗೆ ಒಂದೇ ಚಾರ್ಜರ್ Read More »

ರಾಮಭಕ್ತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸಚಿವ ಅಮಿತ್ ಶಾ| 2024ರಲ್ಲಿ ರಾಮಮಂದಿರ ಉದ್ಘಾಟನೆ

ಸಮಗ್ರ ನ್ಯೂಸ್: ರಾಮಭಕ್ತರಿಗೆ ಕೇಂದ್ರಸಚಿವ ಅಮಿತ್ ಶಾ ಗುಡ್ ನ್ಯೂಸ್ ನೀಡಿದ್ದು, 2024ರ ಜನವರಿ 1ಕ್ಕೆ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಳ್ಳಲಿದ್ದು, ಅಂದು ದೇವಸ್ಥಾನದ ಉದ್ಘಾಟನಾ ಸಮಾರಂಭ ನಡೆಯಲಿದೆ ಎಂದಿದ್ದಾರೆ. ತ್ರಿಪುರಾದಲ್ಲಿ ನಡೆದ ಸಭೆಯೊಂದರಲ್ಲಿ ಭಾಗವಹಿಸಿದ್ದ ಅಮಿತ್ ಶಾ ಈ ಹೇಳಿಕೆ ನೀಡಿದ್ದಾರೆ. ‘ರಾಹುಲ್ ಗಾಂಧಿ ಪದೇ ಪದೇ ಅಯೋಧ್ಯೆ ರಾಮಮಂದಿರವನ್ನ ಲೇವಡಿ ಮಾಡುತ್ತಾರೆ. ಅಲ್ಲಿ ನಿರ್ಮಾಣ ಮಾಡುತ್ತಿದ್ದಾರಾದರೂ ಪೂರ್ಣಗೊಳ್ಳುವ ದಿನಾಂಕವನ್ನ ಹೇಳುವುದಿಲ್ಲ ಎನ್ನುತ್ತಿದ್ದರು. ಆದರೆ ಈಗ ನಾನು ಹೇಳುತ್ತಿದ್ದೇನೆ. ರಾಹುಲ್ ಬಾಬಾ, ಎಚ್ಚರಿಕೆಯಿಂದ ಆಲಿಸಿ. ನಿಮ್ಮ

ರಾಮಭಕ್ತರಿಗೆ ಗುಡ್ ನ್ಯೂಸ್ ನೀಡಿದ ಕೇಂದ್ರ ಸಚಿವ ಅಮಿತ್ ಶಾ| 2024ರಲ್ಲಿ ರಾಮಮಂದಿರ ಉದ್ಘಾಟನೆ Read More »

ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ| 7 ಲಕ್ಷ ಮನೆಗಳಿಗೆ ಉಚಿತ ‘ಡಿಶ್ ಟಿವಿ’ ಕೊಡುಗೆ

ಸಮಗ್ರ ನ್ಯೂಸ್: ಸುದ್ದಿ ಮತ್ತು ಮನರಂಜನಾ ವಾಹಿನಿಗಳಾದ ದೂರದರ್ಶನ (DD) ಮತ್ತು ಆಲ್ ಇಂಡಿಯಾ ರೇಡಿಯೋ (AIR)ಗಳ ಸ್ಥಿತಿಯನ್ನ ಸುಧಾರಿಸಲು ಕೇಂದ್ರ ಸರ್ಕಾರ 2,539 ಕೋಟಿ ರೂ. ಖರ್ಚು ಮಾಡಲಿದೆ. ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬ್ರಾಡ್ ಕಾಸ್ಟಿಂಗ್ ಮೂಲಸೌಕರ್ಯ ಮತ್ತು ನೆಟ್ವರ್ಕ್ ಡೆವಲಪ್ಮೆಂಟ್ ಅಂಡ್ ನೆಟ್ವರ್ಕ್ ಡೆವಲಪ್ಮೆಂಟ್ (BIND) ಅಡಿಯಲ್ಲಿ, ಜನರಿಗೆ ಸರಿಯಾದ ಸುದ್ದಿ, ಶಿಕ್ಷಣ ಮತ್ತು ಮನರಂಜನೆಯನ್ನ ತರುವುದು ಸರ್ಕಾರದ ಉದ್ದೇಶವಾಗಿದೆ. 2021-22 ರಿಂದ 2025-26 ರವರೆಗೆ ಸರ್ಕಾರದ ಆರ್ಥಿಕ ವ್ಯವಹಾರಗಳ

ಕೇಂದ್ರ ಸರ್ಕಾರದಿಂದ ಮಹತ್ವದ ಯೋಜನೆ| 7 ಲಕ್ಷ ಮನೆಗಳಿಗೆ ಉಚಿತ ‘ಡಿಶ್ ಟಿವಿ’ ಕೊಡುಗೆ Read More »

ಭೀಕರ ಅಪಘಾತ; ಕ್ರಿಕೆಟಿಗ ರಿಷಬ್ ಪಂತ್ ಗಂಭೀರ

ಸಮಗ್ರ ನ್ಯೂಸ್: ಭಾರತದ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರ ಕಾರು ಅಪಘಾತಕ್ಕೀಡಾದ ಘಟನೆ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿ ನಡೆದಿದೆ. ರೂರ್ಕಿಯಿಂದ ದೆಹಲಿಗೆ ಬರುತ್ತಿದ್ದ ವೇಳೆ ಮರ್ಸಿಡಿಸ್ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ ಎನ್ನಲಾಗಿದೆ. ಘಟನೆಯಲ್ಲಿ ರಿಷಬ್ ಅವರ ಹಣೆ, ಕಣ್ಣು , ಬೆನ್ನಿಗೆ ಮತ್ತು ಕಾಲಿಗೆ ಗಂಭೀರ ಸ್ವರೂಪದ ಗಾಯವಾಗಿದೆ ಎಂದು ವರದಿಯಾಗಿದೆ. ಸದ್ಯ ಇವರನ್ನು ಚಿಕಿತ್ಸೆಗಾಗಿ ದೆಹಲಿಯ ಸೆಕ್ಷಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಹಿತಿ ಪಡೆದ ಪೊಲೀಸ್

ಭೀಕರ ಅಪಘಾತ; ಕ್ರಿಕೆಟಿಗ ರಿಷಬ್ ಪಂತ್ ಗಂಭೀರ Read More »