ರಾಷ್ಟ್ರೀಯ

ಬೆರಳಿಗೆ ಹಚ್ಚುವ ಚುನಾವಣಾ ಶಾಯಿಯ ಇತಿಹಾಸ ಗೊತ್ತೇ? 35 ದೇಶಗಳಿಗೆ ರಪ್ತಾಗುತ್ತಿದೆ ನಮ್ಮ ರಾಯಲ್ ಶಾಯಿ!!

ಸಮಗ್ರ ನ್ಯೂಸ್: ಪ್ರತಿಯೊಬ್ಬರೂ ತಾವು ಮತದಾನ ಮಾಡಿದ ಮೇಲೆ ತಮ್ಮ ಕೈಯ ತೋರು ಬೆರಳನ್ನು ಏಕೆ ತೋರಿಸುತ್ತಿದ್ದಾರೆ ಎಂಬ ಸಂದೇಹ ಚಿಕ್ಕ ಮಕ್ಕಳಲ್ಲಿ ಮೂಡಿದರೂ ದೊಡ್ಡವರಾದವರಿಗೆ ಈ ಬಗ್ಗೆ ಸಹಜವಾಗಿ ಗೊತ್ತೇ ಇರುತ್ತದೆ. ಹೌದು, ವ್ಯಕ್ತಿಯೊಬ್ಬನಿಗೆ ಸಾಂವಿಧಾನಿಕವಾಗಿ ಬಂದಿರುವ ಮತದಾನದ ಹಕ್ಕನ್ನು ಅವನು ಚಲಾಯಿಸಿದ್ದಾನೆ ಎಂಬುದನ್ನು ಸೂಚಿಸುವ ಹಾಗೂ ಒಂದೇ ಬಾರಿ ಮಾಡಬೇಕಾಗಿರುವ ತನ್ನ ಸರಿಯಾದ ಹಕ್ಕನ್ನು ಚಲಾಯಿಸಿದ್ದಾನೆ ಎಂದು ಖಾತರಿಪಡಿಸುವ ಸಂಕೇತವಾಗಿ ಅವನ/ಅವಳ ಕೈಯ ತೋರು ಬೆರಳಿಗೆ ಸುಲಭವಾಗಿ ಅಳಿಸಲಾಗದಂತಹ ಒಂದು ಶಾಯಿಯ ಗುರುತನ್ನು ಹಾಕಿರುತ್ತಾರೆ. […]

ಬೆರಳಿಗೆ ಹಚ್ಚುವ ಚುನಾವಣಾ ಶಾಯಿಯ ಇತಿಹಾಸ ಗೊತ್ತೇ? 35 ದೇಶಗಳಿಗೆ ರಪ್ತಾಗುತ್ತಿದೆ ನಮ್ಮ ರಾಯಲ್ ಶಾಯಿ!! Read More »

ತಾಂತ್ರಿಕ ದೋಷದಿಂದ ಮನೆ ಮೇಲೆ ಬಿದ್ದ ಮಿಗ್-21 ವಿಮಾನ| ಮೂವರು ಗ್ರಾಮಸ್ಥರು ಸಾವು

ಸಮಗ್ರ ನ್ಯೂಸ್: ಭಾರತೀಯ ವಾಯುಪಡೆಯ MiG-21 ಯುದ್ಧ ವಿಮಾನ ರಾಜಸ್ಥಾನದ ಹನುಮಾನ್‌ಗಢ ಬಳಿ ಪತನಗೊಂಡಿದೆ. ಇದು ಮನೆಯೊಂದರ ಮೇಲೆ ಬಿದ್ದ ಪರಿಣಾಮ ಮೂವರು ಗ್ರಾಮಸ್ಥರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಇನ್ನೂ, ವಿಮಾನ ಪೈಲೆಟ್‌ಗಳು ಸುರಕ್ಷಿತವಾಗಿದ್ದಾರೆ. ವಿಮಾನವು ಹನುಮಾನ್‌ಗಢ್ ಜಿಲ್ಲೆಯ ಪಿಲಿಬಂಗಾ ಬಳಿ ತಾಂತ್ರಿಕ ದೋಷದಿಂದಾಗಿ ಸೂರತ್‌ಗಢ ವಾಯುನೆಲೆಯಿಂದ ಟೇಕ್ ಆಫ್ ಆದ ಕೆಲವೇ ಹೊತ್ತಲ್ಲಿ ಪತನಗೊಂಡಿದೆ. ಪೈಲಟ್ ಮತ್ತು ಸಹ ಪೈಲಟ್ ಸಕಾಲದಲ್ಲಿ ವಿಮಾನದಿಂದ ಜಿಗಿದರು ಮತ್ತು ಪ್ಯಾರಾಚೂಟ್ ಸಹಾಯದಿಂದ ಡ್ರೈನ್ ಪ್ರದೇಶದಲ್ಲಿ ಸುರಕ್ಷಿತವಾಗಿ ಇಳಿದಿದ್ದಾರೆ.

ತಾಂತ್ರಿಕ ದೋಷದಿಂದ ಮನೆ ಮೇಲೆ ಬಿದ್ದ ಮಿಗ್-21 ವಿಮಾನ| ಮೂವರು ಗ್ರಾಮಸ್ಥರು ಸಾವು Read More »

ಕಾಂಗೋ: ಪ್ರವಾಹ, ಭೂಕುಸಿತಕ್ಕೆ 400 ಮಂದಿ ಸಾವು

ಸಮಗ್ರ ನ್ಯೂಸ್: ಕಾಂಗೊದ ಪೂರ್ವಭಾಗದಲ್ಲಿ ಸಂಭವಿಸಿರುವ ಹಠಾತ್ ಪ್ರವಾಹ ಮತ್ತು ಭೂಕುಸಿತದ ಅವಘಡದಿಂದಾಗಿ ಸುಮಾರು 400 ಜನರು ಮೃತಪಟ್ಟಿದ್ದಾರೆ. ಹಲವರು ನಾಪತ್ತೆಯಾಗಿದ್ದಾರೆ. 394 ಜನರ ಶವ ಪತ್ತೆಯಾಗಿದೆ. ನಾಪತ್ತೆಯಾದವರಿಗೆ ಶೋಧ ಮುಂದುವರಿದಿದೆ. ನ್ಯಾಮುಕುಬಿ ಗ್ರಾಮದಲ್ಲಿ ನೂರಾರು ಮನೆಗಳು ಪ್ರವಾಹದಲ್ಲಿ ಕೊಚ್ಚಿಹೋಗಿವೆ. ಸಿಕ್ಕಿ ಉಳಿದಿರುವವರ ರಕ್ಷಣೆಗೆ ಅವಶೇಷಗಳ ನಡುವೆ ತೀವ್ರ ಹುಡುಕಾಟ ನಡೆದಿದೆ. ಮಣ್ಣಿನಡಿಯೂ ಹಲವರು ಸಿಲುಕಿರುವ ಸಾಧ್ಯತೆಗಳಿವೆ. ಧಾರಾಕಾರ ಮಳೆಯಿಂದಾಗಿ ನದಿ ಉಕ್ಕಿ ಹರಿದಿದ್ದು, ನದಿಪಾತ್ರದಲ್ಲಿದ್ದ ಗ್ರಾಮಗಳು ತೀವ್ರ ಪರಿಣಾಮಕ್ಕೆ ತುತ್ತಾಗಿವೆ. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಪ್ರವಾಹ

ಕಾಂಗೋ: ಪ್ರವಾಹ, ಭೂಕುಸಿತಕ್ಕೆ 400 ಮಂದಿ ಸಾವು Read More »

ಕೇರಳದ ಮಲಪ್ಪುರಂನಲ್ಲಿ ಬೋಟ್ ಪಲ್ಟಿ| ಮಹಿಳೆಯರು, ಮಕ್ಕಳು ಸೇರಿ‌ ‌21 ಮಂದಿ ದುರ್ಮರಣ

ಸಮಗ್ರ ನ್ಯೂಸ್: ಕೇರಳದ ಮಲಪ್ಪುರಂ ಜಿಲ್ಲೆಯ ತನೂರ್ ಪ್ರದೇಶದ ತುವಲ್ತಿರಾಮ್ ಬೀಚ್ ಬಳಿ ಭಾನುವಾರ ಸಂಜೆ ಸುಮಾರು 30 ಪ್ರಯಾಣಿಕರಿದ್ದ ಹೌಸ್ ಬೋಟ್ ಪಲ್ಟಿಯಾಗಿ ಮುಳುಗಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 21 ಮಂದಿ ಸಾವನ್ನಪ್ಪಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನೂರ್ ಕರಾವಳಿ ಬಳಿ ಪ್ರವಾಸಿ ದೋಣಿ ಮಗುಚಿ ಬಿದ್ದಿದೆ. ಈ ಘಟನೆ ಸಂಜೆ 7 ಗಂಟೆ ಸುಮಾರಿಗೆ ನಡೆದಿದೆ. ದೋಣಿಯಲ್ಲಿದ್ದವರೆಲ್ಲರೂ ಪ್ರವಾಸಿಗರಾಗಿದ್ದಾರೆ. ಈ ಘಟನೆಯಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಿರುವ ಪ್ರಧಾನಿ

ಕೇರಳದ ಮಲಪ್ಪುರಂನಲ್ಲಿ ಬೋಟ್ ಪಲ್ಟಿ| ಮಹಿಳೆಯರು, ಮಕ್ಕಳು ಸೇರಿ‌ ‌21 ಮಂದಿ ದುರ್ಮರಣ Read More »

ಮಣಿಪುರದಲ್ಲಿ ಹಿಂಸಾಚಾರಕ್ಕೆ 54 ಮಂದಿ ಬಲಿ| ಸದ್ಯ‌ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ

ಸಮಗ್ರ ನ್ಯೂಸ್: ಮಣಿಪುರದಲ್ಲಿ ನಡೆದ ಪ್ರತಿಭಟನಾ ಕಿಡಿಗೆ ಇಲ್ಲಿಯವರೆಗೆ 54 ಜನ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಎಸ್ಟಿ ಸ್ಥಾನಮಾನದ ಕುರಿತು ನ್ಯಾಯಾಲಯದ ಆದೇಶದ ವಿರುದ್ಧ ಬುಡಕಟ್ಟು ಸಮುದಾಯಗಳು ಪ್ರತಿಭಟನೆ ನಡೆಸುತ್ತಿದ್ದವು. ಮಣಿಪುರ ಸಹಜ ಸ್ಥಿತಿಗೆ ಮರಳಿದೆ. ಮತ್ತೆ ಎಂದಿನಂತೆ ಜನ ಜೀವನ ಸಹಜ ಸ್ಥಿತಿಗೆ ಬರುತ್ತಿವೆ. ಸೇನಾಪಡೆಗಳು ಹಾಗೂ ಕೇಂದ್ರ ಪೊಲೀಸ್‌ ಪಡೆಗಳ ಕಾರ್ಯಾಚರಣೆಯಿಂದ ಅಲ್ಲಿನ ಸ್ಥಿತಿ ಗತಿ ಮತ್ತೆ ಸಹಜ ಸ್ಥಿತಿಗೆ ಬರುತ್ತಿದೆ. ಹಿಂಸಾಚಾರದಲ್ಲಿ ಮೂರೇ ದಿನಗಳಲ್ಲಿ 54 ಜನ ಬಲಿಯಾಗಿದ್ದು, 16 ಮಂದಿಯ

ಮಣಿಪುರದಲ್ಲಿ ಹಿಂಸಾಚಾರಕ್ಕೆ 54 ಮಂದಿ ಬಲಿ| ಸದ್ಯ‌ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡ Read More »

ಇಂದು(ಮೇ.7)ನೀಟ್ ಪರೀಕ್ಷೆ; ಇಲ್ಲಿದೆ ಮುಖ್ಯ ಮಾಹಿತಿ

ಸಮಗ್ರ ನ್ಯೂಸ್: ವೈದ್ಯ ಮತ್ತು ದಂತ ವೈದ್ಯ ಕೋರ್ಸ್ ಗಳ ಪ್ರವೇಶಕ್ಕಾಗಿ ಇಂದು ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ನಡೆಯುತ್ತಿದೆ. ಕನ್ನಡ, ಇಂಗ್ಲಿಷ್, ಹಿಂದಿ, ಅಸ್ಸಾಮಿ, ಬಂಗಾಳಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ತಮಿಳು, ತೆಲುಗು, ಉರ್ದು, ಪಂಜಾಬಿ ಭಾಷೆಗಳಲ್ಲೂ ಪರೀಕ್ಷೆ ಬರೆಯಲು ಅವಕಾಶವಿದ್ದು, ಮಧ್ಯಾಹ್ನ 2 ರಿಂದ ಸಂಜೆ 5:20ರ ವರೆಗೆ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಮಧ್ಯಾಹ್ನ 12:30 ರೊಳಗೆ ತಮಗೆ ನಿಗದಿಪಡಿಸಿರುವ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕಿದ್ದು,

ಇಂದು(ಮೇ.7)ನೀಟ್ ಪರೀಕ್ಷೆ; ಇಲ್ಲಿದೆ ಮುಖ್ಯ ಮಾಹಿತಿ Read More »

ಮೂರು ವರ್ಷಗಳ ಬಳಿಕ ಮುಗಿಯಿತು ‘ಮಹಾಮಾರಿ‌ ಕೊರೊನಾ’ ಕಂಟಕ| ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತ ಘೋಷಣೆ

ಸಮಗ್ರ ನ್ಯೂಸ್: ‘ವಿಶ್ವ ಆರೋಗ್ಯ ಸಂಸ್ಥೆ’ ಸಿಹಿಸುದ್ದಿ ತಿಳಿಸಿದ್ದು, ಕೊರೊನಾ ಕಂಟಕದ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಯಾಗಿದೆ ಎಂದಿದೆ. ಬರೋಬ್ಬರಿ 3 ವರ್ಷಗಳ ನಂತರ ಎಲ್ಲವೂ ಸರಿದಾರಿಗೆ ಬಂದಂತಾಗಿದೆ. 68 ಲಕ್ಷ ಜನರ ಸಾವಿನೊಂದಿಗೆ ಕೊರೊನಾ ವೈರಸ್ ಬಹುತೇಕ ಕರಾಳ ಅಧ್ಯಾಯ ಮುಗಿಸಿದೆ. 17 ನವೆಂಬರ್ 2019, ಯಾರಿಗೂ ತಿಳಿಯದ ವೈರಸ್ ಒಂದು ಚೀನಾದಲ್ಲಿ ಕಂಡುಬಂದಿತ್ತು. ಚೀನಾದ ವುಹಾನ್ ಜನರ ಮೇಲೆ ಮೊದಲು ದಾಳಿ ಮಾಡಿದ್ದ ಕೊರೊನಾ ನಂತರ ಜಗತ್ತಿಗೇ ಹರಡಿತ್ತು. ವುಹಾನ್ ಪ್ರಾಂತ್ಯದಲ್ಲಿ ಸಂಶಯಾಸ್ಪದ

ಮೂರು ವರ್ಷಗಳ ಬಳಿಕ ಮುಗಿಯಿತು ‘ಮಹಾಮಾರಿ‌ ಕೊರೊನಾ’ ಕಂಟಕ| ವಿಶ್ವ ಆರೋಗ್ಯ ಸಂಸ್ಥೆಯಿಂದ ಅಧಿಕೃತ ಘೋಷಣೆ Read More »

ಜಮ್ಮು- ಕಾಶ್ಮೀರದಲ್ಲಿ ಉಗ್ರರಿಂದ ಬಾಂಬ್ ಸ್ಫೋಟ| ಇಬ್ಬರು ಯೋಧರು ಹುತಾತ್ಮ; ನಾಲ್ವರಿಗೆ ಗಾಯ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು (ಮೇ.5) ಬೆಳಗ್ಗೆ ಭಯೋತ್ಪಾದಕರು ನಡೆಸಿದ ಬಾಂಬ್‌ ಸ್ಫೋಟದಲ್ಲಿ ಇಬ್ಬರು ಯೋಧರು ಹುತಾತ್ಮರಾಗಿದ್ದು, ಓರ್ವ ಅಧಿಕಾರಿ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. ರಾಜೌರಿ ಸೆಕ್ಟರ್‌ನ ಕಂಡಿ ಅರಣ್ಯ ಪ್ರದೇಶದಲ್ಲಿ ಸೇನಾ ತಂಡ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಂಗಳವಾರ ಜಮ್ಮು ಪ್ರದೇಶದ ಭಟ ಧುರಿಯನ್‌ನ ತೋಟಾ ಗಲಿ ಪ್ರದೇಶದಲ್ಲಿ ಸೇನಾ ಟ್ರಕ್‌ಗೆ ಹೊಂಚುದಾಳಿ ನಡೆಸಿದ ಭಯೋತ್ಪಾದಕರ ಗುಂಪನ್ನು ಪತ್ತೆಹಚ್ಚಲು ಮತ್ತು ನಿರ್ಮೂಲನೆ

ಜಮ್ಮು- ಕಾಶ್ಮೀರದಲ್ಲಿ ಉಗ್ರರಿಂದ ಬಾಂಬ್ ಸ್ಫೋಟ| ಇಬ್ಬರು ಯೋಧರು ಹುತಾತ್ಮ; ನಾಲ್ವರಿಗೆ ಗಾಯ Read More »

ಇಂದು(ಮೇ.5) ವರ್ಷದ ಮೊದಲ ಚಂದ್ರಗ್ರಹಣ| ಭಾರತದಲ್ಲಿ ಗೋಚರವಾಗುತ್ತಾ?

ಸಮಗ್ರ ನ್ಯೂಸ್: ಈ ವರ್ಷದ ಮೊದಲನೇ ಚಂದ್ರಗ್ರಹಣ ಇಂದು(ಮೇ.5) ಸಂಭವಿಸಲಿದೆ. ಆದರೆ ಭಾರತದಲ್ಲಿ ಈ ಚಂದ್ರ ಗ್ರಹಣ ಗೋಚರವಾಗುವುದಿಲ್ಲ. ಈ ವರ್ಷದ ಪ್ರಥಮ ಸೂರ್ಯ ಗ್ರಹಣ ಸಂಭವಿಸಿ 15 ದಿನ ಕಳೆದಿದೆ. ಇದರ ಬೆನ್ನಲ್ಲೇ ಚಂದ್ರ ಗ್ರಹಣ ಸಹ ಸಂಭವಿಸುತ್ತಿದೆ. ವೈಶಾಖ ಮಾಸದ ಹುಣ್ಣಿಮೆ ಆಗಿದ್ದು, ಈ ಸಂದರ್ಭ ಚಂದ್ರ ಗ್ರಹಣ ನಡೆಯಲಿದೆ. ಈ ಗ್ರಹಣವು ಪೆನಂಬ್ರಲ್ ಚಂದ್ರ ಗ್ರಹಣವಾಗಿದ್ದು, ಇದರಲ್ಲಿ ಚಂದ್ರನ ಮೇಲ್ಮೈ ಧೂಳಿನ ಬಿರುಗಾಳಿಯಂತೆ ಕಾಣಿಸಲಿದೆ. ಖಗೋಳಶಾಸ್ತ್ರಜ್ಞರ ಪ್ರಕಾರ, ವರ್ಷದ ಮೊದಲ ಚಂದ್ರ ಗ್ರಹಣವು

ಇಂದು(ಮೇ.5) ವರ್ಷದ ಮೊದಲ ಚಂದ್ರಗ್ರಹಣ| ಭಾರತದಲ್ಲಿ ಗೋಚರವಾಗುತ್ತಾ? Read More »

ಜಮ್ಮು: ಸೇನಾಕಾಪ್ಟರ್ ಪತನ; ಕಮಾಂಡಿಂಗ್ ಆಫೀಸರ್ ಸೇರಿ ಮೂವರು ಗಂಭೀರ

ಸಮಗ್ರ‌ ನ್ಯೂಸ್: ಜಮ್ಮು ಮತ್ತು ಕಾಶ್ಮೀರದ ಕಿಶ್​ತ್ವಾರ್ ಜಿಲ್ಲೆಯ ಮರ್ವಾಹ್ ತೆಹಸಿಲ್‌ನ ಮಚ್ನಾ ಗ್ರಾಮದ ಬಳಿ ಸೇನಾ ಕಾಪ್ಟರ್ ಎಎಲ್​ಎಚ್​ ಧ್ರುವ​ ಪತನಗೊಂಡಿದೆ. ಕಾಪ್ಟರ್​ನಲ್ಲಿ ಕಮಾಂಡಿಂಗ್ ಆಫೀಸರ್ ​ಸೇರಿ ಮೂವರು ಪ್ರಯಾಣಿಸುತ್ತಿದ್ದರು. ಎಲ್ಲರೂ ಗಂಭೀರ ಗಾಯಗೊಂಡಿದ್ದಾರೆ ಎಂದು ಎಂದು ತಿಳಿದುಬಂದಿದೆ. ಇಂದು ಬೆಳಗ್ಗೆ ಕಾಪ್ಟರ್​ ಮರ್ವಾ ಕಡೆಗೆ ತೆರಳುತ್ತಿದ್ದಾಗ ಇಂದು ಬೆಳಗ್ಗೆ 9.40 ಕ್ಕೆ ಪತನಗೊಂಡಿದೆ. ಸೇನೆಯ ಸುಧಾರಿತ ಲಘು ಹೆಲಿಕಾಪ್ಟರ್ ಇದಾಗಿದ್ದು, ಪತನಕ್ಕೆ ನಿಖರ ಕಾರಣ ಏನೆಂಬುದು ತಿಳಿದುಬಂದಿಲ್ಲ.

ಜಮ್ಮು: ಸೇನಾಕಾಪ್ಟರ್ ಪತನ; ಕಮಾಂಡಿಂಗ್ ಆಫೀಸರ್ ಸೇರಿ ಮೂವರು ಗಂಭೀರ Read More »