ರಾಷ್ಟ್ರೀಯ

“ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ

ಸಮಗ್ರ ನ್ಯೂಸ್: ಭಾರತೀಯ ಬಾಹ್ಯಾಕಾಶ ಸಂಸ್ಥೆ (ISRO)ದ ಮಹತ್ವಾಕಾಂಕ್ಷಿ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾಗಿದೆ. ಈ ಮೂಲಕ ಭಾರತ ಅಮೆರಿಕ, ರಷ್ಯಾ, ಚೀನಾದ ಬಳಿಕ ಐತಿಹಾಸಿಕ ಸಾಧನೆ ಮಾಡಿದೆ. ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ದಕ್ಷೀಣ ಆಫ್ರಿಕಾದಿಂದಲೇ ಮಾತನಾಡಿರುವ ಪ್ರಧಾನಿ ಮೋದಿ, ನಾವು ನಮ್ಮ ಕಣ್ಣ ಮುಂದೆ ಇಂತಹ ಇತಿಹಾಸ ನೋಡುವುದೇ ಹೆಮ್ಮೆ. ಈ ಕ್ಷಣ ರಾಷ್ಟ್ರದ ಜೀವತಾವಧಿಯಲ್ಲಿ ಚಿರಂಜೀವಿ ಚೇತನವಾಗಲಿದೆ. ಇದು ಅವಿಸ್ಮರಣಿಯಾವಾಗಿದೆ. ಅದ್ಭೂತಪೂರ್ವಕವಾಗಿದೆ. ಇದು ನವ ಭಾರತದ ಜಯಘೋಷ. […]

“ಭಾರತ ಈಗ ಚಂದ್ರನ ಮೇಲಿದೆ”| ಚಂದ್ರಯಾನ-3 ಸಕ್ಸಸ್ ಬಳಿಕ ಮೋದಿ ಅಭಿಮತ Read More »

ಚಂದ್ರನ ಅಂಗಳದಲ್ಲಿ ಭಾರತ ತಿರಂಗಾ|ಐತಿಹಾಸಿಕ ವಿಜಯದ ಪತಾಕೆ ಹಾರಿಸಿದ ಇಸ್ರೋ

ಸಮಗ್ರ ನ್ಯೂಸ್: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ‌’ ಲ್ಯಾಂಡರ್ ಹೆಜ್ಜೆ ಇರಿಸಿದ್ದು, ಅಭೂತಪೂರ್ವ ಕ್ಷಣಕ್ಕೆ ವಿಶ್ವವೇ ಸಾಕ್ಷಿಯಾಯಿತು. ನಿಗದಿತ ಸಮಯ ಸಂಜೆ 6.04 ನಿಮಿಷಕ್ಕೆ ಗುರಿ ತಲುಪಿದ್ದು, ಹೀಗಾಗಿ ಚಂದ್ರಯಾನ-3 ಯೋಜನೆ ಪರಿಪೂರ್ಣಗೊಂಡಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಆಗಸ್ಟ್ 23 ರ ಇಂದು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿದಿದೆ. ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಮಿಷನ್ ಪ್ರಾರಂಭವಾದ 42

ಚಂದ್ರನ ಅಂಗಳದಲ್ಲಿ ಭಾರತ ತಿರಂಗಾ|ಐತಿಹಾಸಿಕ ವಿಜಯದ ಪತಾಕೆ ಹಾರಿಸಿದ ಇಸ್ರೋ Read More »

ಇಸ್ರೋ ಮುಖ್ಯಸ್ಥರು ‘ಚಂದ್ರಯಾನ -3’ ಲ್ಯಾಂಡಿಂಗ್‌ ನ ಬಗ್ಗೆ ಹೇಳಿದ್ದೇನು?

ಸಮಗ್ರ ನ್ಯೂಸ್: ಇನ್ನು ಕೆಲವೇ ಗಂಟೆಗಳಲ್ಲಿ ದೇಶ ಹೊಸ ಇತಿಹಾಸ ಸೃಷ್ಟಿಸಲಿದೆ. ಚಂದ್ರಯಾನ 3 ಲ್ಯಾಂಡರ್ ವಿಕ್ರಮ್ ಇಂದು ಸಂಜೆ 6:04 ಕ್ಕೆ ಚಂದ್ರನನ್ನು ಚುಂಬಿಸಲಿದೆ. ದೇಶದೆಲ್ಲೆದೆ ಈ ಉತ್ಸಾಹವಿದ್ದರೂ, ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಸಮಯ ಹತ್ತಿರವಾಗುತ್ತಿದ್ದಂತೆ ಜನರ ಎದೆಬಡಿತವೂ ಹೆಚ್ಚುತ್ತಿದೆ. ಇಡೀ ವಿಶ್ವದ ಕಣ್ಣುಗಳು ಕೂಡ ಈ ಮಿಷನ್ ಮೇಲೆ ಕೇಂದ್ರೀಕೃತವಾಗಿವೆ. ವಿಕ್ರಮ್ ಯಶಸ್ವಿ ಲ್ಯಾಂಡಿಂಗ್‌ಗಾಗಿ ದೇಶದ ಎಲ್ಲೆಡೆ ಪೂಜೆ, ಪ್ರಾರ್ಥನೆ ಸಲ್ಲಿಸಲಾಗುತ್ತಿದ್ದು,ಈ ಎಲ್ಲದರ ನಡುವೆ, ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಅವರು ಮಿಷನ್‌ನ

ಇಸ್ರೋ ಮುಖ್ಯಸ್ಥರು ‘ಚಂದ್ರಯಾನ -3’ ಲ್ಯಾಂಡಿಂಗ್‌ ನ ಬಗ್ಗೆ ಹೇಳಿದ್ದೇನು? Read More »

ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆ ಕುಸಿತ| 17 ಮಂದಿ ದುರ್ಮರಣ

ಸಮಗ್ರನ್ಯೂಸ್: ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆಯೊಂದು ಕುಸಿದು ಬಿದ್ದು 17 ಮಂದಿ ಮೃತಪಟ್ಟಿರುವ ಘಟನೆ ಮಿಝೋರಾಂನಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ಹಲವರು ಸ್ಥಳದಲ್ಲಿ ಸಿಲುಕಿರುವ ಶಂಕೆ ಇದ್ದು, ಅವರನ್ನು ರಕ್ಷಿಸುವ ಪ್ರಯತ್ನ ನಡೆಯುತ್ತಿದೆ. ಸೇತುವೆ ಕುಸಿದಾಗ ಸುಮಾರು 35 ರಿಂದ 40 ಕಟ್ಟಡ ಕಾರ್ಮಿಕರು ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಿಝೋರಾಂ ನ ಐಝಾಲ್ ನಿಂದ ಸುಮಾರು 21 ಕಿ.ಮೀ. ದೂರದಲ್ಲಿರುವ ಸಾಯಿರಾಂಗ್ ಪ್ರದೇಶದಿಂದ ಈ ಘಟನೆ ವರದಿಯಾಗಿದೆ. ಘಟನೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ

ನಿರ್ಮಾಣ ಹಂತದಲ್ಲಿದ್ದ ರೈಲ್ವೇ ಸೇತುವೆ ಕುಸಿತ| 17 ಮಂದಿ ದುರ್ಮರಣ Read More »

ಚಂದ್ರಯಾನ -3: ಶಶಿಯ ಅಂಗಳದಲ್ಲಿ ಹೆಜ್ಜೆ ಇರಿಸಲು ‘ವಿಕ್ರಮ’ ಸನ್ನದ್ಧ| ಎಲ್ಲರ ಚಿತ್ತ ಭಾರತದತ್ತ…

ಸಮಗ್ರ ನ್ಯೂಸ್: ಚಂದ್ರನ ದಕ್ಷಿಣ ಧ್ರುವದಲ್ಲಿ ‘ವಿಕ್ರಮ‌’ ಲ್ಯಾಂಡರ್ ಹೆಜ್ಜೆ ಇರಿಸಲು ಸನ್ನದ್ಧವಾಗಿದ್ದು, ಇಂದು ಸಂಜೆ 6.04 ನಿಮಿಷಕ್ಕೆ ಗುರಿ ತಲುಪಲಿದೆ. ಹೀಗಾಗಿ ಚಂದ್ರಯಾನ-3 ಯೋಜನೆಯತ್ತ‌ ಎಲ್ಲರ ಚಿತ್ತ ನೆಟ್ಟಿದೆ. ಭಾರತೀಯ ಬಾಹ್ಯಾಕಾಶ ನೌಕೆ ಚಂದ್ರನ ಸಮೀಪವನ್ನು ತಲುಪಿದೆ ಮತ್ತು ಆಗಸ್ಟ್ 23 ರ ಇಂದು ಸಂಜೆ 6.04 ಗಂಟೆ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೃದುವಾಗಿ ಇಳಿಯಲು ಸಜ್ಜಾಗಿದೆ.ಜುಲೈ 14 ರಂದು ಉಡಾವಣೆಯಾದ ಚಂದ್ರಯಾನ -3 ರ ಲ್ಯಾಂಡರ್ ಮಾಡ್ಯೂಲ್ ಮಿಷನ್ ಪ್ರಾರಂಭವಾದ 42 ದಿನಗಳ ನಂತರ

ಚಂದ್ರಯಾನ -3: ಶಶಿಯ ಅಂಗಳದಲ್ಲಿ ಹೆಜ್ಜೆ ಇರಿಸಲು ‘ವಿಕ್ರಮ’ ಸನ್ನದ್ಧ| ಎಲ್ಲರ ಚಿತ್ತ ಭಾರತದತ್ತ… Read More »

ಚಂದ್ರಯಾನ -3 ; ಸಾಪ್ಟ್ ಲ್ಯಾಂಡಿಂಗ್ ದಿನಾಂಕ ಬದಲಾವಣೆ ಸಾಧ್ಯತೆ

ಸಮಗ್ರ ನ್ಯೂಸ್: ಚಂದ್ರಯಾನ-3 ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈಯಿಂದ ಕೇವಲ 25 ರಿಂದ 150 ಕಿಮೀ ದೂರದಲ್ಲಿ ಸುತ್ತುತ್ತಿದೆ. ಆಗಸ್ಟ್ 23ರಂದು ಚಂದ್ರನ ಮೇಲ್ಮೈಯಲ್ಲಿ ಮೃದುವಾದ ಲ್ಯಾಂಡಿಂಗ್‌ ಮಾಡಲು ಸಿದ್ಧರಿದ್ದೇವೆ. ಒಂದು ಅಂದು ಸಾಧ್ಯವಾಗದೆ ಇದ್ದರೆ ಆಗಸ್ಟ್ 27ರಂದು ಮತ್ತೊಮ್ಮೆ ಪ್ರಯತ್ನಿಸುವುದಾಗಿ ಇಸ್ರೋದ ಹಿರಿಯ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 23ರಂದು ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ಎರಡು ಗಂಟೆಗಳ ಮೊದಲು ನಾವು ಲ್ಯಾಂಡರ್ ಮಾಡ್ಯೂಲ್ ಮತ್ತು ವಾತಾವರಣದ ಆಧಾರದ ಮೇಲೆ ನಿರ್ಧರಿಸುತ್ತೇವೆ ಎಂದು ಅಹಮದಾಬಾದ್‌ನ ಬಾಹ್ಯಾಕಾಶ ಅಪ್ಲಿಕೇಶನ್

ಚಂದ್ರಯಾನ -3 ; ಸಾಪ್ಟ್ ಲ್ಯಾಂಡಿಂಗ್ ದಿನಾಂಕ ಬದಲಾವಣೆ ಸಾಧ್ಯತೆ Read More »

ಚಂದ್ರಯಾನ- 3 ಮತ್ತೊಂದು ಹಂತ ಯಶಸ್ವಿ | ಆರ್ಬಿಟರ್ ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್

ಸಮಗ್ರ ನ್ಯೂಸ್: ಭಾರತದ ಮಿಷನ್ ಚಂದ್ರಯಾನ-3 ಚಂದ್ರನ ಮೇಲೆ ಇಳಿಯಲು ಕೇವಲ ಎರಡು ದಿನಗಳು ಬಾಕಿ ಇದೆ. ಈ ನಡುವೆ ಚಂದ್ರಯಾನ-2ರ ಆರ್ಬಿಟರ್ ಚಂದ್ರಯಾನ-3ನ್ನ ಚಂದ್ರನ ಕಕ್ಷೆಯಲ್ಲಿ ಸ್ವಾಗತಿಸಿದ್ದು, ಇಬ್ಬರ ನಡುವೆ ಸಂಪರ್ಕ ಏರ್ಪಟ್ಟಿದೆ. ಇಸ್ರೋದ ಚಂದ್ರಯಾನ-3 ಮಿಷನ್‌ನ ಸಾಫ್ಟ್‌ ಲ್ಯಾಂಡಿಂಗ್‌ಗೆ ಈಗ 48 ಗಂಟೆಗಳು ಉಳಿದಿವೆ, ಭಾರತ ಮಾತ್ರವಲ್ಲದೆ ಇಡೀ ವಿಶ್ವವೇ ಈ ಮಿಷನ್ ನೋಡುತ್ತಿದೆ. ವಿಕ್ರಮ್ ಲ್ಯಾಂಡರ್ ಯಶಸ್ವಿ ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ನೊಂದಿಗೆ, ಚಂದ್ರಯಾನ -3 ಚಂದ್ರನಿಗೆ ಮತ್ತಷ್ಟು ಹತ್ತಿರವಾಗಿದೆ. ಇದು ಮಹತ್ವಾಕಾಂಕ್ಷೆಯ

ಚಂದ್ರಯಾನ- 3 ಮತ್ತೊಂದು ಹಂತ ಯಶಸ್ವಿ | ಆರ್ಬಿಟರ್ ಜೊತೆ ಸಂಪರ್ಕ ಸಾಧಿಸಿದ ವಿಕ್ರಮ್ Read More »

ನಾಗರಪಂಚಮಿ ಸಂಭ್ರಮ| ಚಂದ್ರಯಾನ -3 ಯಶಸ್ಸಿಗೆ ಕುಕ್ಕೆಯಲ್ಲಿ ವಿಶೇಷ ಪೂಜೆ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಇಂದು ನಾಗಪಂಚಮಿಯ ಸಂಭ್ರಮ ಮನೆ ಮಾಡಿದೆ. ಹಾಗೆಯೇ ಚಂದ್ರಯಾನ-3 ಯಶಸ್ವಿಯಾಗಲಿ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವಿಶೇಷ ಪೂಜೆಯನ್ನು ಸಹ ಮಾಡಲಾಯಿತು. ಬಾಹ್ಯಾಕಾಶ ಸಂಶೋಧನಾ ಕ್ಷೇತ್ರದಲ್ಲಿ ISRO ಸಂಸ್ಥೆಯ ಚಂದ್ರಯಾನ-3 ನೌಕೆಯು ಯಶಸ್ವಿಗಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದು ಇತಿಹಾಸ ನಿರ್ಮಿಸಲಿ. ಈ ಮೂಲಕ ತಾಯಿ ಭಾರತೀಯ ಹೆಸರು ಪ್ರಪಂಚದಲ್ಲೇ ಅಗ್ರಗಣ್ಯವಾಗಲಿ ಎಂದು ಪಂಚಮಿಯ ದಿನವಾದ ಇಂದು ಶ್ರೀ ನಾಗದೇವರಿಗೆ ಹಾಲೆರೆದು ನಾಗ ತಂಬಿಲ (ಕಾರ್ತೀಕ ಪೂಜೆ)

ನಾಗರಪಂಚಮಿ ಸಂಭ್ರಮ| ಚಂದ್ರಯಾನ -3 ಯಶಸ್ಸಿಗೆ ಕುಕ್ಕೆಯಲ್ಲಿ ವಿಶೇಷ ಪೂಜೆ Read More »

ವಿಫಲಗೊಂಡ ಚಂದ್ರಯಾನ| ಚಂದ್ರನ ಮೇಲೆ ಅಪ್ಪಳಿಸಿದ ಲೂನಾ 25

ಸಮಗ್ರ ನ್ಯೂಸ್: ರಷ್ಯಾದ ಬಾಹ್ಯಾಕಾಶ ನೌಕೆ ಲೂನಾ 25 ಪತನವಾಗಿ ಕಕ್ಷೆ ಸೇರುವಲ್ಲಿ ವಿಫಲವಾಗಿದೆ. ತಾಂತ್ರಿಕ ದೋಷದಿಂದಾಗಿ ಚಂದ್ರನ ಮೇಲ್ಮೈಗೆ ಬಾಹ್ಯಾಕಾಶ ನೌಕೆ ಡಿಕ್ಕಿ ಹೊಡೆದಿದೆ ಎಂದು ರಷ್ಯಾ ಬ್ಯಾಹ್ಯಾಕಾಶ ಸಂಸ್ಥೆ ರೋಸ್ಕೋಸ್ಮಾಸ್ ಹೇಳಿದೆ. ಚಂದ್ರಯಾನ 3 ಉಡಾವಣೆ ಬಳಿಕ ಆಗಸ್ಟ್​ 11 ರಂದು ರಷ್ಯಾ ಈ ರಾಕೆಟ್​ ಉಡಾವಣೆ ಮಾಡಿತ್ತಾದರೂ ಭಾರತಕ್ಕೂ ಮೊದಲೇ ಚಂದ್ರನ ದಕ್ಷಿಣ ಧ್ರುವದಲ್ಲಿ ಉಪಗ್ರಹ ಇಳಿಸಲು ಪ್ಲಾನ್​ ಮಾಡಿತ್ತು. ಆದರೆ ಇದು ಸಫಲವಾಗಿಲ್ಲ. ಆಗಸ್ಟ್ 21 ರಂದು ನೌಕೆಯನ್ನು ಸಾಫ್ಟ್ ಲ್ಯಾಂಡಿಂಗ್​

ವಿಫಲಗೊಂಡ ಚಂದ್ರಯಾನ| ಚಂದ್ರನ ಮೇಲೆ ಅಪ್ಪಳಿಸಿದ ಲೂನಾ 25 Read More »

ಚಂದ್ರಯಾನ -3: ಡಿ ಬೂಸ್ಟಿಂಗ್ ಕಾರ್ಯ ಯಶಸ್ವಿ

ಸಮಗ್ರ ನ್ಯೂಸ್: ಚಂದ್ರಯಾನ -3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ನ ಕಕ್ಷೆಯನ್ನು ಯಶಸ್ವಿಯಾಗಿ ಕಡಿಮೆ ಮಾಡಲಾಗಿದೆ ಎಂದು ಇಸ್ರೋ ತಿಳಿಸಿದೆ. ‘ಎರಡನೇ ಮತ್ತು ಅಂತಿಮ ಡಿಬೂಸ್ಟಿಂಗ್ (ನಿಧಾನಗೊಳಿಸುವ) ಕಾರ್ಯಾಚರಣೆಯು ಎಲ್‌ಎಂ ಕಕ್ಷೆಯನ್ನು 25 ಕಿಮೀ x 134 ಕಿ.ಮೀ.ಗೆ ಯಶಸ್ವಿಯಾಗಿ ಇಳಿಸಿದೆ. ಮಾಡ್ಯೂಲ್ ಆಂತರಿಕ ತಪಾಸಣೆಗೆ ಒಳಗಾಗುತ್ತದೆ ಮತ್ತು ಗೊತ್ತುಪಡಿಸಿದ ಲ್ಯಾಂಡಿಂಗ್ ಸೈಟ್ನಲ್ಲಿ ಸೂರ್ಯೋದಯಕ್ಕಾಗಿ ಕಾಯುತ್ತದೆ. ಆಗಸ್ಟ್ 23, 2023 ರಂದು ಭಾರತೀಯ ಕಾಲಮಾನ 17.45 ರ ಸುಮಾರಿಗೆ ಶಕ್ತಿಯುತ ಇಳಿಯುವಿಕೆ ಪ್ರಾರಂಭವಾಗುವ ನಿರೀಕ್ಷೆಯಿದೆ” ಎಂದು

ಚಂದ್ರಯಾನ -3: ಡಿ ಬೂಸ್ಟಿಂಗ್ ಕಾರ್ಯ ಯಶಸ್ವಿ Read More »