ದೇಶ-ವಿದೇಶ

1000 ಬಸ್ಕಿ ಹೊಡಿಸಿದ ಶಿಕ್ಷಕ, ಕಾಲಿನ ಸ್ವಾಧೀನ ಕಳೆದುಕೊಂಡ ವಿದ್ಯಾರ್ಥಿ

ಸಮಗ್ರ ನ್ಯೂಸ್: ಶಿಕ್ಷಕ ವಿದ್ಯಾರ್ಥಿಗೆ 1000 ಬಸ್ಕಿ ಹೊಡಿಯುವಂತೆ ಶಿಕ್ಷೆ ನೀಡಿದ್ದು, ಪರಿಣಾಮ 13 ವರ್ಷದ ಬಾಲಕ ಕಾಲಿನ ಸ್ವಾಧೀನ ಕಳೆದುಕೊಂಡಿದ್ದಾನೆ.ಈ ಘಟನೆ ಚೀನಾದ ಶಾನ್‌ಡಾಂಗ್ ಪ್ರಾಂತ್ಯದ ಮಿಡ್ಸ್ ಸ್ಕೂಲ್‌ನಲ್ಲಿ ನಡೆದಿದೆ. ತೀವ್ರ ಕಾಲು ನೋವಿನಿಂದ ಬಳಲುತ್ತಿದ್ದ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪ್ರಾರಂಭದಲ್ಲಿ ಸ್ನಾಯು ನೋವು ಎಂದು ಭಾವಿಸಿ ಔಷಧಿ ನೀಡಲಾಗಿದೆ. ಆದರೆ ಬಾಲಕನಿಗೆ ನೋವು ಜಾಸ್ತಿಯಾಗಿದ್ದು, ವೈದ್ಯಕೀಯ ಪರೀಕ್ಷೆಯ ವೇಳೆ ಬಾಲಕ ರಾಬೋಮಿಯೊಲಿಸಿಸ್ ಎಂಬ ಗಂಭೀರ ವೈದ್ಯಕೀಯ ಸ್ಥಿತಿಯಿಂದ ಬಳಲುತ್ತಿದ್ದಾನೆ ಎಂದು ತಿಳಿದುಬಂದಿದೆ.1000 ಬಸ್ಕಿ […]

1000 ಬಸ್ಕಿ ಹೊಡಿಸಿದ ಶಿಕ್ಷಕ, ಕಾಲಿನ ಸ್ವಾಧೀನ ಕಳೆದುಕೊಂಡ ವಿದ್ಯಾರ್ಥಿ Read More »

ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ 50 ಹಿಬ್ಬುಲ್ಲಾ ಬಂಡುಕೋರರ ಹತ್ಯೆ

ಸಮಗ್ರ ನ್ಯೂಸ್: ಹಿಜ್ಜುಲ್ಲಾ-ಇಸ್ರೇಲ್ ನಡುವಿನ ಯುದ್ಧ ಮುಂದುವರೆದಿದ್ದು. ಲೆಬನಾನ್ ಮೇಲೆ ಇಸ್ರೇಲ್ ಮತ್ತೆ ಕ್ಷಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ 50 ಕ್ಕೂ ಹೆಚ್ಚು ಹಿಬ್ಬುಲ್ಲಾ ಬಂಡೋಕರರು ಸಾವನ್ನಪ್ಪಿದ್ದಾರೆ. ಬೈರುತ್ ಮತ್ತು ದಕ್ಷಣ ನಗರಗಳಲ್ಲಿ ಬಾಂಬ್ ದಾಳಿಗಳು ಮುಂದುವರೆದಿದ್ದು, ಇಸ್ರೇಲ್ ಸೇನೆಯು ಹಿಬ್ಬುಲ್ಲಾವನ್ನು ಗುರಿಯಾಗಿಸಿಕೊಂಡು ತನ್ನ ದಾಳಿಯನ್ನು ಮುಂದುವರಿಸಿದ್ದರಿಂದ ಇಸ್ರೇಲ್ ಸೇನೆಯು ತನ್ನ ವೈಮಾನಿಕ ದಾಳಿಯನ್ನು ಉತ್ತರ ಲೆಬನಾನ್ ಗೆ ವಿಸ್ತರಿಸಿದೆ. ದಕ್ಷಣ ಲೆಬನಾನ್ ನ ಪ್ರದೇಶಗಳನ್ನು ಗುರಿಯಾಗಿಸಿಕೊಂಡಿರುವ ಇಸ್ರೇಲ್ ಸೇನೆಯು ಈಗ ತನ್ನ ವೈಮಾನಿಕ ದಾಳಿಯನ್ನು ಉತ್ತರ

ಇಸ್ರೇಲ್ ಕ್ಷಿಪಣಿ ದಾಳಿಯಲ್ಲಿ 50 ಹಿಬ್ಬುಲ್ಲಾ ಬಂಡುಕೋರರ ಹತ್ಯೆ Read More »

ಹರಿಯಾಣದಲ್ಲಿ ಬಿಜೆಪಿಗೆ ಬಿಗ್ ಶಾಕ್| ಆರಂಭಿಕ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್| ಜಮ್ಮು-ಕಾಶ್ಮೀರದಲ್ಲೂ‌ ಹಸ್ತಕ್ಕೆ ಜೈ ಅಂದ ಜನ

ಸಮಗ್ರ‌ನ್ಯೂಸ್: ಜಮ್ಮು ಮತ್ತು ಕಾಶ್ಮೀರ, ಹರಿಯಾಣ ವಿಧಾನಸಭೆ ಚುನಾವಣೆ 2024 ರ ಫಲಿತಾಂಶಗಳು ಇನ್ನೇನು ಕೆಲವೇ ಗಂಟೆಗಳಲ್ಲಿ ಬರಲಿದ್ದು, ಇದೀಗ ಮತ ಎಣಿಕೆ ಆರಂಭವಾಗಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಆರಂಭಿಕ ಮುನ್ನಡೆ ಸಾಧಿಸಿದೆ. ಹರಿಯಾಣ ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, 55 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಿಜೆಪಿ 27 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.ಐ.ಎನ್.ಎಲ್.ಡಿ. ಎರಡು ಸ್ಥಾನಗಳಲ್ಲಿ ಹಾಗೂ ಇತರರು ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದ್ದಾರೆ. ಹರಿಯಾಣದ ಎಲ್ಲಾ 90 ಅಸೆಂಬ್ಲಿ ಸ್ಥಾನಗಳಿಗೆ ಅಕ್ಟೋಬರ್ 5 ರಂದು

ಹರಿಯಾಣದಲ್ಲಿ ಬಿಜೆಪಿಗೆ ಬಿಗ್ ಶಾಕ್| ಆರಂಭಿಕ ಮುನ್ನಡೆ ಕಾಯ್ದುಕೊಂಡ ಕಾಂಗ್ರೆಸ್| ಜಮ್ಮು-ಕಾಶ್ಮೀರದಲ್ಲೂ‌ ಹಸ್ತಕ್ಕೆ ಜೈ ಅಂದ ಜನ Read More »

10ನೇ ತರಗತಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮರು ದಾಖಲಾತಿಗೆ ಅವಕಾಶ

ಸಮಗ್ರ ನ್ಯೂಸ್: ರೆಗ್ಯುಲ‌ರ್ ಶಾಲಾ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಆಯಾ ವರ್ಷದಲ್ಲಿ ಪರೀಕ್ಷೆ-1 ಮತ್ತು ಪರೀಕ್ಷೆ-2 ಇವುಗಳನ್ನು ಬರೆದು ಅಂತಿಮವಾಗಿ ಅನುತ್ತೀರ್ಣರಾದಲ್ಲಿ ಪುನಃ ಮುಂದಿನ ಒಂದು ಶೈಕ್ಷಣಿಕ ವರ್ಷದಲ್ಲಿ ಶಾಲಾ ಅಭ್ಯರ್ಥಿಯಾಗಿ ಸರ್ಕಾರಿ ಪ್ರೌಢಶಾಲೆಗಳಲ್ಲಿ 10ನೇ ತರಗತಿಗೆ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಮರು ದಾಖಲಾತಿಗೆ ಅವಕಾಶ ನೀಡಲಾಗುತ್ತದೆ. ಇತರೆ ವಿದ್ಯಾರ್ಥಿಗಳಂತೆ ಶಾಲೆಯಲ್ಲಿ ಪೂರ್ಣಾವಧಿ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮತ್ತು ಎಲ್ಲಾ ವಿಷಯದ ತರಗತಿಗೆ ಪೂರ್ಣಾವಧಿ ಹಾಜರಾಗಬೇಕು. ಈ ರೀತಿ ಪೂರ್ಣಾವಧಿ ಅಧ್ಯಯನ ಮಾಡಿ ಹಿಂದಿನ ವರ್ಷ ಅನುತ್ತೀರ್ಣರಾದ

10ನೇ ತರಗತಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಮರು ದಾಖಲಾತಿಗೆ ಅವಕಾಶ Read More »

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ

ಸಮಗ್ರ ನ್ಯೂಸ್: ಹತ್ತನೇ ತರಗತಿಯ ಮಧ್ಯ ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಅ. 25ರಂದು ಪ್ರಕಟಿಸುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸೂಚನೆ ನೀಡಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಪ್ರಕಟಿಸುವ ಬಗ್ಗೆ ಈ ಮೊದಲು ಚಿಂತನೆ ನಡೆಸಲಾಗಿತ್ತು.ಆದರೆ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ದಸರಾ ರಜೆಯ ಅವಧಿಯಲ್ಲಿ ಮೌಲ್ಯಮಾಪನ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ ಕಾರಣ ರಜಾ ಅವಧಿ ಮುಕ್ತಾಯಗೊಂಡ ಬಳಿಕ ನಡೆಸುವಂತೆ ಮಂಡಳಿ ಸೂಚಿಸಿದೆ.

SSLC; ಮಧ್ಯ ವಾರ್ಷಿಕ ಪರೀಕ್ಷಾ ಫಲಿತಾಂಶ ಅ. 25 ಕ್ಕೆ Read More »

ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟ‌ರ್ ಪತನ, ಮೂವರ ಸಾವು

ಸಮಗ್ರ ನ್ಯೂಸ್:ಅ.2-ಖಾಸಗಿ ಹೆಲಿಕಾಪ್ಟ‌ರ್ ಪತನಗೊಂಡು ಇಬ್ಬರು ಪೈಲಟ್‌ಗಳು ಸೇರಿ ಮೂವರು ಸಾವನ್ನಪ್ಪಿರುವ ಘಟನೆ ಬವ್‌ಧಾನ್ ಪ್ರದೇಶದ ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದೆ.ಹೆಲಿಕಾಪ್ಟ‌ರ್ ಪತನಗೊಂಡು ಕೂಡಲೆ ಬೆಂಕಿ ಹೊತ್ತಿಕೊಂಡು ದಟ್ಟ ಹೊಗೆ ಆವರಿಸಿದೆ.ಬೆಳಗ್ಗೆ 6.45ಕ್ಕೆ ಈ ಘಟನೆ ನಡೆದಿದೆ ಎಂದು ಪಿಂಪ್ರಿ ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ. ಪೂಣೆ ಬಳಿಯ ಆಕ್ಸ್ ಫರ್ಡ್ ಗಾಲ್ಫ್ ಕೋರ್ಸ್‌ನಲ್ಲಿರುವ ಹೆಲಿಪ್ಯಾಡ್‌ನಿಂದ ಹೆಲಿಕಾಪ್ಟರ್ ಟೇಕ್ ಆಫ್‌ಆಗಿ ಮುಂಬೈನ ಜುಹುಗೆ ತೆರಳುವಾಗ ಏಕಾಏಕಿ ನಿಯಂತ್ರಣ ಕಳೆದುಕೊಂಡು ಕೆಳಗೆ ಇಳಿದು ನೆಲಕ್ಕೆ ಅಪ್ಪಳಿಸಿದೆ ಎಂದು ಹಿಂಜೆವಾಡಿ ಪೊಲೀಸ್ ಠಾಣೆಯ

ಪುಣೆಯಲ್ಲಿ ಖಾಸಗಿ ಹೆಲಿಕಾಪ್ಟ‌ರ್ ಪತನ, ಮೂವರ ಸಾವು Read More »

ಇಸ್ರೇಲ್ ಮೇಲೆ 100 ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ ಇರಾನ್

ಸಮಗ್ರ ನ್ಯೂಸ್: ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಕ್ಷಿಪಣಿಗಳಿಂದ ಇರಾನ್ ದಾಳಿ ನಡೆಸಿದೆ.  ಇಸ್ರೇಲ್‌ ವಿರುದ್ಧ ಬ್ಯಾಲಿಸ್ಟಿಕ್‌ ಕ್ಷಿಪಣಿ ದಾಳಿ ನಡೆಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿದ್ದು, ಇಸ್ರೇಲ್‌ನಾದ್ಯಂತ ಸೈರನ್‌ ಮೊಳಗಿದೆ. ಗಾಜಾ ಪಟ್ಟಿಯಿಂದ ಆರಂಭವಾದ ಸಂಘರ್ಷ ವಿಶ್ವವೇ ಆತಂಕಕ್ಕೆ ಒಳಗಾಗುವಂತೆ ಮಾಡಿದ್ದಲ್ಲದೆ. ತನಗೆ ಎದುರಾಗಿ ಯಾರೇ ನಿಂತರೂ ಹೊಡೆದುರುಳಿಸುತ್ತೇನೆ ಎಂದು ಇಸ್ರೇಲ್ ಮುನ್ನುಗ್ಗುತ್ತಿದೆ. ಲೆಬನಾನ್‌ನಲ್ಲಿ ಹಿಜ್ಬುಲ್ಲಾ ನಾಯಕನನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಶತ್ರುಗಳ ಗುಂಪಿನ ನಾಯಕನನ್ನು

ಇಸ್ರೇಲ್ ಮೇಲೆ 100 ಕ್ಕೂ ಹೆಚ್ಚು ಕ್ಷಿಪಣಿ ದಾಳಿ ನಡೆಸಿದ ಇರಾನ್ Read More »

ಇಂದು ಬಾನಂಗಳದಲ್ಲಿ ಸೂರ್ಯಗ್ರಹಣ| ಎಲ್ಲೆಲ್ಲಿ ಗೋಚರಿಸಲಿದೆ ಖಗೋಳ ವಿದ್ಯಮಾನ?

ಸಮಗ್ರ ನ್ಯೂಸ್: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದ ಪ್ರಕಾರ, ಸೂರ್ಯಗ್ರಹಣಕ್ಕೆ ವಿಶೇಷ ಮಹತ್ವವಿದೆ. ಸೂರ್ಯಗ್ರಹಣವು ಖಗೋಳ ವಿದ್ಯಮಾನವಾಗಿದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋದಾಗ ಸೂರ್ಯ ಗ್ರಹಣ ಸಂಭವಿಸುತ್ತದೆ. ಈ ವರ್ಷದ ಎರಡನೇ ಸೂರ್ಯಗ್ರಹಣವು 2024 ರ ಅಕ್ಟೋಬರ್ 2 ರಂದು ಸಂಭವಿಸಲಿದೆ. ಇಂದು ಹಿಂದೂ ಕ್ಯಾಲೆಂಡರ್ ನಲ್ಲಿ ಅಮಾವಾಸ್ಯೆ ತಿಥಿ. ಗ್ರಹಣವು ರಾತ್ರಿ 9:13 ಕ್ಕೆ ಪ್ರಾರಂಭಗೊಂಡು ಮತ್ತು ಆಗಸ್ಟ್ 3 ರಂದು ಮುಂಜಾನೆ 3:17 ಕ್ಕೆ ಕೊನೆಗೊಳ್ಳುತ್ತದೆ. ಸಂಪೂರ್ಣ ಸೂರ್ಯಗ್ರಹಣವು ಸುಮಾರು 6 ಗಂಟೆ

ಇಂದು ಬಾನಂಗಳದಲ್ಲಿ ಸೂರ್ಯಗ್ರಹಣ| ಎಲ್ಲೆಲ್ಲಿ ಗೋಚರಿಸಲಿದೆ ಖಗೋಳ ವಿದ್ಯಮಾನ? Read More »

ಅ.03 ರಿಂದ ರಾಜ್ಯದಲ್ಲಿ ಶಾಲೆಗಳಿಗೆ ದಸರಾ ರಜೆ

ಸಮಗ್ರ ನ್ಯೂಸ್: ಶಾಲಾ ಶಿಕ್ಷಣ ಇಲಾಖೆ ಶಾಲಾ ಮಕ್ಕಳಿಗೆ ಅಕ್ಟೋಬರ್ 3 ರಿಂದ 20 ತನಕ ದಸರಾ ರಜೆ ಘೋಷಿಸಿದ್ದು, ಶಿಕ್ಷಣ ಇಲಾಖೆಯ ಆದೇಶದ ಪ್ರಕಾರ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆಯೂ ಒಟ್ಟು 17 ದಿನ ಇರಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆ ಸಿಗಲಿದೆ. ಅಕ್ಟೋಬ‌ರ್ 21ರಿಂದ 2ನೇ ಅವಧಿಯು ಪ್ರಾರಂಭವಾಗಲಿದ್ದು, 2025ರ ಏಪ್ರಿಲ್ 10 ತನಕ ಶಾಲೆ ನಡೆಯಲಿದೆ. 2024- 2025ರ ಶೈಕ್ಷಣಿಕ ವರ್ಷದ ಶಾಲಾ ಅವಧಿಯ ಮಾರ್ಗದರ್ಶಿಯನ್ನು

ಅ.03 ರಿಂದ ರಾಜ್ಯದಲ್ಲಿ ಶಾಲೆಗಳಿಗೆ ದಸರಾ ರಜೆ Read More »

5,8 ಹಾಗು 9ನೇ ತರಗತಿ ಬೋರ್ಡ್ ಪರೀಕ್ಷೆ ಪ್ರಸ್ತಾವ ಕುರಿತು ‘ಸುಪ್ರೀಂ’ ಅಸಮಾಧಾನ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ಪ್ರಸ್ತಾವದ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್, ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸಿ ಏನನ್ನೂ ಮಾಡದಂತೆ ಸೆ.30 ರಂದು ಎಚ್ಚರಿಸಿದೆ. 8, 9 ಮತ್ತು 10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಸಂಕಲನಾತ್ಮಕ ಮೌಲ್ಯಮಾಪನ ಪರೀಕ್ಷೆಗೆ ಸಂಬಂಧಿಸಿದಂತೆ ಕಲಬುರಗಿ ಜಿಲ್ಲೆಯ ಉಪ ನಿರ್ದೇಶಕರು ಸೆಪ್ಟೆಂಬರ್ 4 ಮತ್ತು 15ರಂದು ಜ್ಞಾಪನಾ ಪತ್ರಗಳನ್ನು ಹೊರಡಿಸಿದ್ದರು. ನ್ಯಾಯಾಲಯದ ಆದೇಶವನ್ನು ಧಿಕ್ಕರಿಸುವ ಯಾವುದನ್ನೂ ಮಾಡಬಾರದು. ಹೀಗಾದರೆ

5,8 ಹಾಗು 9ನೇ ತರಗತಿ ಬೋರ್ಡ್ ಪರೀಕ್ಷೆ ಪ್ರಸ್ತಾವ ಕುರಿತು ‘ಸುಪ್ರೀಂ’ ಅಸಮಾಧಾನ Read More »