ದೇಶ-ವಿದೇಶ

ನವದೆಹಲಿ: ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ

ಸಮಗ್ರ ನ್ಯೂಸ್ : ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ದೆಹಲಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ದೆಹಲಿಯಿಂದ ಬೆಂಗಳೂರಿಗೆ ಮೇ 17ರಂದು ಸಂಜೆ 6 ಗಂಟೆಗೆ ಏರ್ ಇಂಡಿಯಾ ವಿಮಾನ ಹೊರಟಿತ್ತು. ಈ ವೇಳೆ ವಿಮಾನದ ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ 6:38 ಕ್ಕೆ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿದೆ. 175 ಪ್ರಯಾಣಿಕರೊಂದಿಗೆ ದೆಹಲಿಯಿಂದ ಬೆಂಗಳೂರಿಗೆ ವಿಮಾನ ಹೊರಟಿತ್ತು. ವಿಮಾನ ದೆಹಲಿಗೆ ಮರಳಿ ಸುರಕ್ಷಿತ ಲ್ಯಾಂಡಿಂಗ್ ಮಾಡಿದೆ.ಪ್ರಯಾಣಿಕರು ಬೆಂಗಳೂರಿಗೆ […]

ನವದೆಹಲಿ: ಎಸಿಯಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ತುರ್ತು ಭೂಸ್ಪರ್ಶ ಮಾಡಿದ ಏರ್ ಇಂಡಿಯಾ ವಿಮಾನ Read More »

ಮಥುರಾ: ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಮಹಿಳೆ

ಸಮಗ್ರ ನ್ಯೂಸ್ : ತ್ರಿವಳಿ ತಲಾಖ್ ನಿಂದ ನೊಂದಿದ್ದ ಮುಸ್ಲಿಂ ಮಹಿಳೆಯೊಬ್ಬಳು ಹಿಂದೂ ಧರ್ಮಕ್ಕೆ ಮತಾಂತರಗೊಂಡು ಹಿಂದೂ ಯುವಕನನ್ನು ಮದುವೆ ಆಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ರುಬಿನಾ ಎಂಬ ಮಹಿಳೆಯ ಪತಿ ತ್ರಿವಳಿ ತಲಾಖ್ ನೀಡಿದ್ದನು. ಇದರಿಂದ ನೊಂದಿದ್ದ ರುಬಿನಾ ತನ್ನ ಧರ್ಮ ಬದಲಿಸಿಕೊಂಡು ಹಿಂದೂ ಯುವಕನನ್ನೇ ಕೈ ಕೈ ಹಿಡಿದಿದ್ದಾಳೆ. ರುಬಿನಾ ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದಳು. ಆದರೆ ಪತಿಯ ಚಿತ್ರಹಿಂಸೆಯಿಂದ ಆಕೆ ಬೇಸತ್ತಿದ್ದಳು. ಕೊನೆಗೆ ಆತ ರುಬಿನಾಗೆ ತಲಾಖ್ ನೀಡಿದ್ದನು. ಆತನಿಂದ

ಮಥುರಾ: ಹಿಂದೂ ಯುವಕನನ್ನು ಮದುವೆಯಾದ ಮುಸ್ಲಿಂ ಮಹಿಳೆ Read More »

ಪ್ರಧಾನಿ ಮೋದಿ ಪ್ರೆಸ್‌ಮೀಟ್ ಯಾಕೆ ಮಾಡಿಲ್ಲ? ಇಲ್ಲಿದೆ ಪಿಎಂ ನೀಡಿರುವ ಉತ್ತರ…

ಸಮಗ್ರ ನ್ಯೂಸ್: ಪತ್ರಿಕಾಗೋಷ್ಠಿಗಳನ್ನು ನಡೆಸದಿದ್ದಕ್ಕಾಗಿ ಟೀಕಾಕಾರರು ಪ್ರಧಾನಿ ನರೇಂದ್ರ ಮೋದಿಯವರನ್ನು ಪ್ರಶ್ನಿಸುತ್ತಲೇ ಇದ್ದಾರೆ. ಇದಕ್ಕೆ ಪ್ರಧಾನಿ ನರೇಂದ್ರ ಅವರೇ ಉತ್ತರಿಸಿದ್ದಾರೆ. ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡ ಪಿಎಂ ಮೋದಿ, ಮಾಧ್ಯಮದ ಸ್ವರೂಪ ಬದಲಾಗಿದೆ ಮತ್ತು ಅದು ಮೊದಲಿನಂತೆ ತಟಸ್ಥವಾಗಿಲ್ಲ ಎಂದು ಹೇಳಿದ್ದಾರೆ. ಪತ್ರಕರ್ತರು ತಮ್ಮ ಆಲೋಚನೆಗಳು ಮತ್ತು ಸಿದ್ಧಾಂತಗಳನ್ನು ಪ್ರಚಾರ ಮಾಡುತ್ತಾರೆ. ನಾನು ಸಂಸತ್ತಿಗೆ ಉತ್ತರದಾಯಿಯಾಗಿದ್ದೇನೆ. ಇಂದು, ಪತ್ರಕರ್ತರನ್ನು ತಮ್ಮದೇ ಆದ ಆದ್ಯತೆಗಳಿಂದ ಗುರುತಿಸಲಾಗುತ್ತದೆ. ಮಾಧ್ಯಮಗಳು ಇನ್ನು ಮುಂದೆ ಪಕ್ಷಾತೀತ ಘಟಕವಾಗಿ ಉಳಿದಿಲ್ಲ ಅಂಥ ಅವರು ಹೇಳಿದ್ದಾರೆ. ಆಜ್

ಪ್ರಧಾನಿ ಮೋದಿ ಪ್ರೆಸ್‌ಮೀಟ್ ಯಾಕೆ ಮಾಡಿಲ್ಲ? ಇಲ್ಲಿದೆ ಪಿಎಂ ನೀಡಿರುವ ಉತ್ತರ… Read More »

ಮೋದಿಯನ್ನು ಹೊಗಳಿದ ರಶ್ಮಿಕಾ/ ಗರಂ ಆದ‌ ಚೇತನ್

ಸಮಗ್ರ ನ್ಯೂಸ್: ನಟಿ ರಶ್ಮಿಕಾ ಮಂದಣ್ಣ, ಕಳೆದ ಹತ್ತು ವರ್ಷಗಳಲ್ಲಿ ಭಾರತ ಅದ್ಭುತವಾಗಿ ಅಭಿವೃದ್ಧಿ ಹೊಂದಿದೆ ಎಂದು ಮೋದಿಯವರನ್ನು ಹೊಗಳಿದ್ದಕ್ಕೆ ನಟ ಚೇತನ್ ಗರಂ ಆಗಿದ್ದಾರೆ. ಅಟಲ್ ಸೇತು ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿ ಕುರಿತು ರಶ್ಮಿಕಾ ಹೆಮ್ಮೆ ವ್ಯಕ್ತಪಡಿಸಿದ್ದರು. ರಶ್ಮಿಕಾ ಹೇಳಿಕೆಯನ್ನು ಟೀಕೆ ಮಾಡಿರುವ ಚೇತನ್, ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆದಾಯ ಅಸಮಾನತೆ ಗಗನಕ್ಕೇರಿದೆ ಮತ್ತು ಪ್ರಜಾಪ್ರಭುತ್ವದ ಸ್ವಾತಂತ್ರ್ಯಗಳು ದಾಳಿಗೆ ಒಳಗಾಗಿವೆ. ಯಾವುದೇ ಮೂರ್ಖ ಪಕ್ಷವು ಕಾಂಕ್ರೀಟ್ ಸುರಿಯಬಹುದು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸಬಹುದು. ಸಮಾಜವನ್ನು

ಮೋದಿಯನ್ನು ಹೊಗಳಿದ ರಶ್ಮಿಕಾ/ ಗರಂ ಆದ‌ ಚೇತನ್ Read More »

ಕೋವಿಶೀಲ್ಡ್ ಬಳಿಕ ಕೋವ್ಯಾಕ್ಸಿನ್ ನಲ್ಲೂ ಅಡ್ಡ ಪರಿಣಾಮ| ಬಯಲಾಯ್ತು ಕಳವಳಕಾರಿ ಸಂಗತಿ

ಸಮಗ್ರ ನ್ಯೂಸ್: ಬ್ರಿಟನ್ ಮೂಲದ ಅಸ್ಟ್ರಾಜೆನಿಕಾ ಕಂಪನಿ ತಯಾರಿಸಿದ ಮತ್ತು ಭಾರತದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಮಾರಾಟ ಮಾಡಿದ ಕೋವಿಶೀಲ್ಡ್ ಲಸಿಕೆಯಲ್ಲಿ ಅಪರೂಪದ ಅಡ್ಡ ಪರಿಣಾಮ ಇರುವುದನ್ನು ಸ್ವತಃ ಕಂಪನಿಯೇ ಒಪ್ಪಿಕೊಂಡಿದೆ. ಈಗ ಸ್ವದೇಶಿ ಕೋವಿಡ್ ಲಸಿಕೆ ಎಂದೇ ಜನಪ್ರಿಯವಾಗಿದ್ದ ಕೋವ್ಯಾಕ್ಸಿನ್ ಲಸಕೆಯಿಂದಲೂ ಅಡ್ಡ ಪರಿಣಾಮಗಳು ಉಂಟಾದ ಕಳವಳಕಾರಿ ಸಂಗತಿ ಅಧ್ಯಯನದಲ್ಲಿ ಬಳಕೆಗೆ ಬಂದಿದೆ. ಬನಾರಸ್ ವಿವಿ ಅಧ್ಯಯನದಲ್ಲಿ ಅಡ್ಡ ಪರಿಣಾಮ ಉಂಟಾಗಿರುವುದು ಬೆಳಕಿಗೆ ಬಂದಿದ್ದು, ಕೋವಿಶೀಲ್ಡ್ ನಂತರ ಸ್ವದೇಶಿ ಕೋವ್ಯಾಕ್ಸಿನ್ ಲಸಿಕೆಯಿಂದಲೂ ಅಡ್ಡ ಪರಿಣಾಮ ಉಂಟಾಗಿರುವುದು ಗೊತ್ತಾಗಿದೆ.

ಕೋವಿಶೀಲ್ಡ್ ಬಳಿಕ ಕೋವ್ಯಾಕ್ಸಿನ್ ನಲ್ಲೂ ಅಡ್ಡ ಪರಿಣಾಮ| ಬಯಲಾಯ್ತು ಕಳವಳಕಾರಿ ಸಂಗತಿ Read More »

ಲಕ್ನೋ : ಉಚಿತ ಪಡಿತರ ಜನರ ತೆರಿಗೆ ಹಣದಿಂದ ನೀಡಲಾಗುತ್ತಿದೆ: ಮಾಜಿ ಸಿಎಂ ಮಾಯಾವತಿ

ಸಮಗ್ರ ನ್ಯೂಸ್ : ಬಿಜೆಪಿ ಮತ್ತು ಅದರ ಕಂಪನಿಯ ಜನರು ಬಡವರಿಗೆ ಸ್ವಲ್ಪ ಪಡಿತರವನ್ನು ನೀಡಿ ಚುನಾವಣಾ ಲಾಭವನ್ನು ಪಡೆದುಕೊಳ್ಳಲು ಬಯಸುತ್ತಿದ್ದಾರೆ ಎಂದು ಬಿಎಸ್ಪಿ ಅಧಿನಾಯಕಿ, ಮಾಜಿ ಸಿಎಂ ಮಾಯಾವತಿ ಕಿಡಿಕಾರಿದ್ದಾರೆ. ಅವರು, ಈ ಬಗ್ಗೆ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ಬಡವರಿಗೆ ಉಚಿತ ಪಡಿತರ ಬಿಜೆಪಿ ಅಥವಾ ಸರ್ಕಾರದಿಂದ ನೀಡುತ್ತಿಲ್ಲ. ಬದಲಿಗೆ ಇದು ಜನರು ಪಾವತಿಸುವ ತೆರಿಗೆ ಹಣದಿಂದ ನೀಡಲಾಗುತ್ತಿದೆ ಎಂದರು. ಮೋದಿ ಸೇರಿದಂತೆ ಬಿಜೆಪಿ ನಾಯಕರು ಪ್ರತಿ ಚುನಾವಣಾ ರ್ಯಾಲಿಯಲ್ಲಿ ಸರ್ಕಾರದ ಉಚಿತ ಪಡಿತರ ಯೋಜನೆಯ

ಲಕ್ನೋ : ಉಚಿತ ಪಡಿತರ ಜನರ ತೆರಿಗೆ ಹಣದಿಂದ ನೀಡಲಾಗುತ್ತಿದೆ: ಮಾಜಿ ಸಿಎಂ ಮಾಯಾವತಿ Read More »

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊನೆಗೂ ಅಂತ್ಯಗೊಂಡ ಪ್ರತಿಭಟನೆ

ಸಮಗ್ರ ನ್ಯೂಸ್: ಜನರು ಬೆಲೆ ಏರಿಕೆ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಾಕ್ ಆಕ್ರಮಿತ ಕಾಶ್ಮೀರದ ನಡೆಸುತ್ತಿದ್ದ 5 ದಿನಗಳ ಹಿಂಸಾತ್ಮಕ ಪ್ರತಿಭಟನೆ ಮಂಗಳವಾರ ಅಂತ್ಯಗೊಂಡಿದೆ. ಪ್ರತಿಭಟನೆ ನೇತೃತ್ವ ವಹಿಸಿದ್ದ ಜಮ್ಮು-ಕಾಶ್ಮೀರ ಜಂಟಿ ಅವಾಮಿ ಕ್ರಿಯಾ ಸಮಿತಿ ಮುಖ್ಯಸ್ಥ ಶೌಕತ್ ನವಾಜ್ ಮೀರ್, ಪಾಕಿಸ್ತಾನ ಸರ್ಕಾರ 2300 ಕೋಟಿ ರು. ಅಭಿವೃದ್ಧಿ ಪ್ಯಾಕೇಜ್ ಪ್ರಕಟಿಸಿದ್ದು, ನಮ್ಮ ಬೇಡಿಕೆ ಈಡೇರಿಕೆಗೆ ಒಪ್ಪಿದ್ದಾರೆ. ಹೀಗಾಗಿ ಪ್ರತಿಭಟನೆ ಹಿಂಪಡೆಯುತ್ತಿದ್ದೇವೆ. ಎಲ್ಲ ಪ್ರತಿಭಟನಾಕಾರರು ಹೋರಾಟ ಹಿಂಪಡೆದು ತಮ್ಮ ದೈನಂದಿನ ಚಟುವಟಿಕೆ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಕೊನೆಗೂ ಅಂತ್ಯಗೊಂಡ ಪ್ರತಿಭಟನೆ Read More »

ಪಾಕ್ ಆಕ್ರಮಿತ ಜಮ್ಮು ಕಾಶ್ಮೀರವನ್ನು ಪಡೆದೇ ತೀರುತ್ತೇವೆ/ ಅಮಿತ್ ಷಾ ಪ್ರತಿಪಾದನೆ

ಸಮಗ್ರ ನ್ಯೂಸ್: ಭಾರತೀಯ ಜನತಾ ಪಕ್ಷ ಸರ್ಕಾರವು ಪಾಕ್ ಆಕ್ರಮಿತ ಜಮ್ಮು ಕಾಶ್ಮೀರವನ್ನು ಹಿಂಪಡೆಯಲು ಬದ್ಧವಾಗಿದೆ ಎಂದು ಪಶ್ಚಿಮ ಬಂಗಾಳದ ಹೌರಾದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಾದಿಸಿದರು. ಮಣಿಶಂಕರ್ ಅಯ್ಯರ್ ಮತ್ತು ಫಾರೂಕ್ ಅಬ್ದುಲ್ಲಾ ಅವರು ಪಾಕಿಸ್ತಾನದ ಬಳಿ ಅಣುಬಾಂಬ್ ಇದೆ, ಆದ್ದರಿಂದ ನಾವು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತನಾಡಬಾರದು ಎಂದು ಹೇಳಿ ನಮ್ಮನ್ನು ಹೆದರಿಸುತ್ತಿದ್ದರು. ರಾಹುಲ್ ಬಾಬಾ, ಮಮತಾ ದೀದಿ, ನೀವು ಎಷ್ಟೇ ಹೆದರಿಸಿದರೂ ಪರವಾಗಿಲ್ಲ. ಪಾಕ್

ಪಾಕ್ ಆಕ್ರಮಿತ ಜಮ್ಮು ಕಾಶ್ಮೀರವನ್ನು ಪಡೆದೇ ತೀರುತ್ತೇವೆ/ ಅಮಿತ್ ಷಾ ಪ್ರತಿಪಾದನೆ Read More »

ಆರ್ಥಿಕ ಹೊಡೆತಕ್ಕೆ ಸಿಲುಕಿದ ಪಾಕ್/ ಸರ್ಕಾರಿ ಉದ್ದಿಮೆಗಳ ಖಾಸಗೀಕರಣದ ಘೋಷಣೆ

ಸಮಗ್ರ ನ್ಯೂಸ್: ಆರ್ಥಿಕ ದಿವಾಳಿತನದತ್ತ ಸಾಗುತ್ತಿರುವ ಪಾಕಿಸ್ತಾನ ಸರ್ಕಾರ ತನ್ನ ಕೊನೆಯ ಮಾರ್ಗ ಎನ್ನುವಂತೆ ದೇಶದಲ್ಲಿನ ಆಯಕಟ್ಟಿನ ಪ್ರಮುಖ ಉದ್ಯಮಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಸರ್ಕಾರಿ ಉದ್ದಿಮೆಗಳ ಕಂಪನಿಗಳನ್ನು ಖಾಸಗೀಕರಣ ಮಾಡುವ ಘೋಷಣೆ ಮಾಡಿದೆ. ಖಾಸಗೀಕರಣ ಸಚಿವಾಲಯ ಮತ್ತು ಖಾಸಗೀಕರಣ ಆಯೋಗಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಪರಿಶೀಲನಾ ಸಭೆ ನಡೆಸಿದ ಬಳಿಕ, ಸರ್ಕಾರಿ ಕಂಪನಿಗಳನ್ನು ಖಾಸಗೀಕರಣಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ಷರೀಫ್ ಘೋಷಿಸಿದರು. ಎನ್ ಆರ್ ವೈ ನ್ಯೂಸ್‍ನ ವರದಿಯ ಪ್ರಕಾರ, ಇದರಲ್ಲಿ ವಿದ್ಯುತ್ ವಿತರಣಾ

ಆರ್ಥಿಕ ಹೊಡೆತಕ್ಕೆ ಸಿಲುಕಿದ ಪಾಕ್/ ಸರ್ಕಾರಿ ಉದ್ದಿಮೆಗಳ ಖಾಸಗೀಕರಣದ ಘೋಷಣೆ Read More »

ವಾರಾಣಸಿ ಲೋಕ ಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ವಾರಾಣಸಿ ಲೋಕ ಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅವರು ಸಲ್ಲಿಸಿದ ಅಫಿಡವಿಟ್​ನಲ್ಲಿ ತಮ್ಮ ಆಸ್ತಿ ವಿವರಗಳನ್ನು ನೀಡಿದ್ದಾರೆ. ಅದರ ಪ್ರಕಾರ ಅವರು ಒಟ್ಟು 3 ಕೋಟಿ ರೂ.ಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ. ಎರಡು ಬಾರಿ ಪ್ರಧಾನಿ ಆಗಿರುವ ಬಳಿಕವೂ ಅವರು ಯಾವುದೇ ಭೂಮಿ, ಮನೆ ಅಥವಾ ಕಾರುಗಳನ್ನು ಹೊಂದಿಲ್ಲ. ಅವರು ತಮ್ಮ ಉಳಿಕೆಯ ಎಲ್ಲ ಮಾಹಿತಿಗಳನ್ನು ಚುನಾವಣಾ ಅಫಿಡವಿಟ್ ನಲ್ಲಿ ತಿಳಿಸಿದ್ದಾರೆ. ಅಫಿಡವಿಟ್​ನಲ್ಲಿ

ವಾರಾಣಸಿ ಲೋಕ ಸಭಾ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ನಾಮಪತ್ರ ಸಲ್ಲಿಕೆ Read More »