ದೇಶ-ವಿದೇಶ

ಇಬ್ರಾಹಿಂ ರೈಸಿ ನಿಧನ/ ಇರಾನ್ ಹಂಗಾಮಿ ಅಧ್ಯಕ್ಷರಾಗಿ ಮೊಹಮ್ಮದ್ ಮೊಖರ್ ನೇಮಕ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ ಹೊಂದಿರುವ ಹಿನ್ನಲೆಯಲ್ಲಿ ಇರಾನ್ ನ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖರ್ ಅವರನ್ನು ದೇಶದ ಹಂಗಾಮಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇರಾನ್ ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಸೋಮವಾರ ಈ ಘೋಷಣೆ ಮಾಡಿದ್ದಾರೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹುಸೇನ್ ಅಮಿರ್ ಬೊಲ್ಲಾಹಿಯಾನ್, ಪೂರ್ವ ಅರ್ಬೈಜಾನ್ ಪ್ರಾಂತ್ಯದ ಗವರ್ನರ್ ಮತ್ತು ಇತರ ಅಧಿಕಾರಿಗಳು ಮತ್ತು ಅಂಗರಕ್ಷಕರನ್ನು ಹೊತ್ತ ಹೆಲಿಕಾಪ್ಟರ್ ಭಾನುವಾರ […]

ಇಬ್ರಾಹಿಂ ರೈಸಿ ನಿಧನ/ ಇರಾನ್ ಹಂಗಾಮಿ ಅಧ್ಯಕ್ಷರಾಗಿ ಮೊಹಮ್ಮದ್ ಮೊಖರ್ ನೇಮಕ Read More »

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್

ಸಮಗ್ರ ನ್ಯೂಸ್: ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತದ ಪೌರತ್ನ ಪಡೆದುಕೊಂಡ ನಂತರ ಮೊದಲ ಬಾರಿಗೆ ಭಾರತದಲ್ಲಿ ಮತದಾನ ಮಾಡಿದ್ದಾರೆ. ನಂತರ ಮಾತನಾಡಿದ ಅಕ್ಷಯ್, ಭಾರತದ ಅಭಿವೃದ್ಧಿ ಮತ್ತು ಬಲಿಷ್ಠ ರಾಷ್ಟ್ರಕ್ಕಾಗಿ ಮತದಾನ ಮಾಡಿ ಎಂದಿದ್ದಾರೆ. ಕೆನಡಾ ಪೌರತ್ವ ಪಡೆದಿದ್ದ ಬಾಲಿವುಡ್ ನಟ ಅಕ್ಷಯ್ ಕುಮಾರ್ ಇತ್ತೀಚೆಗಷ್ಟೇ ಭಾರತದ ಪೌರತ್ನ ಪಡೆದುಕೊಂಡಿದ್ದರು.

ಭಾರತದಲ್ಲಿ ಮೊದಲ ಬಾರಿಗೆ ಮತದಾನ ಮಾಡಿದ ನಟ ಅಕ್ಷಯ್ ಕುಮಾರ್ Read More »

ರಿಷಿ ಸುನಕ್ ದಂಪತಿಯ ಆಸ್ತಿ 651 ದಶಲಕ್ಷ ಪೌಂಡ್/ ಶ್ರೀಮಂತಿಕೆಯಲ್ಲಿ ಬ್ರಿಟನ್ ದೊರೆಯನ್ನು ಹಿಂದಿಕ್ಕಿದ ಮೂರ್ತಿ ಅಳಿಯ

ಸಮಗ್ರ ನ್ಯೂಸ್: ಭಾರತೀಯ ಮೂಲದ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅವರ ಪತ್ನಿ, ಬೆಂಗಳೂರಿನ ಪ್ರಖ್ಯಾತ ಐಟಿ ಕಂಪನಿ ಇನ್ಫೋಸಿಸ್‍ನ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ- ಸುಧಾಮೂರ್ತಿಯವರ ಮಗಳು ಅಕ್ಷತಾ ಮೂರ್ತಿ ಅವರ ಒಟ್ಟು ಆಸ್ತಿ ಬ್ರಿಟನ್ ದೊರೆ ಚಾಲ್ರ್ಸ್‍ಗಿಂತಲೂ ಹೆಚ್ಚು ಎಂದು ಬ್ರಿಟನ್‍ನ ದ ಸಂಡೇ ಟೈಮ್ಸ್ ವರದಿ ಮಾಡಿದೆ. ದ ಸಂಡೇ ಟೈಮ್ಸ್ ಇತ್ತೀಚೆಗೆ ಬ್ರಿಟನ್‍ನ 1000 ಶ್ರೀಮಂತರು/ ಶ್ರೀಮಂತ ಕುಟುಂಬಗಳ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ರಿಷಿ ಸುನಕ್ ದಂಪತಿ 651 ದಶಲಕ್ಷ ಪೌಂಡ್

ರಿಷಿ ಸುನಕ್ ದಂಪತಿಯ ಆಸ್ತಿ 651 ದಶಲಕ್ಷ ಪೌಂಡ್/ ಶ್ರೀಮಂತಿಕೆಯಲ್ಲಿ ಬ್ರಿಟನ್ ದೊರೆಯನ್ನು ಹಿಂದಿಕ್ಕಿದ ಮೂರ್ತಿ ಅಳಿಯ Read More »

ಇಬ್ರಾಹಿಂ ರೈಸಿ ನಿಧನ/ ಸಂತಾಪ ಸೂಚಿಸಿದ ನರೇಂದ್ರ ಮೋದಿ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. “ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್‌ನ ಅಧ್ಯಕ್ಷ ಡಾ. ಸೆಯದ್ ಇಬ್ರಾಹಿಂ ರೈಸಿ ಅವರ ದುರಂತ ನಿಧನದಿಂದ ತೀವ್ರ ದುಃಖ ಮತ್ತು ಆಘಾತವಾಗಿದೆ. ಭಾರತ-ಇರಾನ್ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಲು ಅವರ ಕೊಡುಗೆ ಯಾವಾಗಲೂ ಸ್ಮರಣೀಯವಾಗಿದೆ. ಅವರ ಕುಟುಂಬ ಮತ್ತು ಇರಾನ್ ಜನತೆಗೆ ನನ್ನ ಹೃತ್ತೂರ್ವಕ ಸಂತಾಪ. ಈ ದುಃಖದ ಸಮಯದಲ್ಲಿ ಭಾರತವು ಇರಾನ್‌ನೊಂದಿಗೆ ನಿಂತಿದೆ” ಎಂದು ಪ್ರಧಾನಿ ಮೋದಿ ಟ್ವೀಟ್

ಇಬ್ರಾಹಿಂ ರೈಸಿ ನಿಧನ/ ಸಂತಾಪ ಸೂಚಿಸಿದ ನರೇಂದ್ರ ಮೋದಿ Read More »

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು

ಸಮಗ್ರ ನ್ಯೂಸ್: ಅಜರ್‌ಬೈಜಾನ್‌ ನಿಂದ ಮರಳುತ್ತಿದ್ದ ವೇಳೆ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಕೊನೆಯುಸಿರೆಳೆದಿದ್ದಾರೆ. ರವಿವಾರ ನಡೆದ ಘಟನೆಯಲ್ಲಿ ಇರಾನ್ ಅಧ್ಯಕ್ಷರು ಮೃತಪಟ್ಟಿದ್ದಾರೆ ಎಂದು ಇದೀಗ ಖಚಿತಪಡಿಸಲಾಗಿದೆ. ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೇನ್‌ ಅಮೀರಬ್‌ ದೊಲ್ಲಾಹಿಯನ್‌ ಮತ್ತು ಇರಾನ್‌ನ ಪರಮೋಚ್ಚ ನಾಯಕ ಖೊಮೇನಿಯವರ ಪ್ರತಿನಿಧಿ ಸೇರಿ ನಾಲ್ವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ಪತನವಾಗಿದೆ. ಇರಾನ್ ಮಾಧ್ಯಮಗಳ ಪ್ರಕಾರ, ಹೆಲಿಕಾಪ್ಟರ್‌ನ ಅವಶೇಷಗಳು ಪತ್ತೆಯಾದ ಕೆಲವೇ ನಿಮಿಷಗಳಲ್ಲಿ, ಇರಾನ್ ಅಧ್ಯಕ್ಷ ರೈಸಿ

ಹೆಲಿಕಾಪ್ಟರ್ ದುರಂತದಲ್ಲಿ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಕೊನೆಯುಸಿರು Read More »

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ

ಸಮಗ್ರ ನ್ಯೂಸ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಭಾನುವಾರ (ಮೇ.19) ರಂದು ವಾಯುವ್ಯ ಇರಾನ್​ನ ಜೋಲ್ಫಾದಲ್ಲಿ ಪತನವಾಗಿದೆ ಎಂದು ಇರಾನ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹವಾಮಾನ ವೈಪರೀತ್ಯ ಹಿನ್ನೆಲೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದ್ದು, ಅಧ್ಯಕ್ಷ ರೈಸಿ ಜತೆ ಇರಾನ್ ವಿದೇಶಾಂಗ ಸಚಿವ ಹುಸೇನ್ ಕೂಡ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಇಬ್ರಾಹಿಂ ರೈಸಿ ಹಾಗೂ ವಿದೇಶಾಂಗ ಸಚಿವ ಹೂಸೈನ್ ಅಮಿರಾಬ್ದೊಲ್ಹೈನ್ ಇಬ್ಬರು ಪೂರ್ವ ಅಜರ್‌ಬೈಜಾನ್‌ನಲ್ಲಿ ಕಾರ್ಯಕ್ರಮಕ್ಕಾಗಿ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದಟ್ಟ ಮಂಜು ಆವರಿಸಿರುವುದರಿಂದ ಹೆಲಿಕಾಪ್ಟರ್ ಅವಘಡದ ಶಂಕೆ ವ್ಯಕ್ತವಾಗಿದ್ದು,

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನ Read More »

ನಾಳೆ ಐದನೇ ಹಂತದ ಲೋಕಸಭಾ ಚುನಾವಣೆ/ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿ

ಸಮಗ್ರ ನ್ಯೂಸ್: ಮೇ 20 ರಂದು ಲೋಕಸಭೆಯ 5ನೇ ಹಂತದ ಚುನಾವಣೆ ನಡೆಯಲಿದೆ. ಈ ಹಂತದಲ್ಲಿ 8 ರಾಜ್ಯಗಳ 49 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಒಟ್ಟು 695 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಈ ಹಂತದ ಚುನಾವಣೆಯ ಬಹಿರಂಗ ಪ್ರಚಾರ ಶನಿವಾರಕ್ಕೆ ಅಂತ್ಯವಾಗಿದೆ. ಉತ್ತರ ಪ್ರದೇಶದ 14 ಕ್ಷೇತ್ರಗಳು, ಮಹಾರಾಷ್ಟ್ರದ 13, ಪಶ್ಚಿಮ ಬಂಗಾಳದ 7, ಬಿಹಾರದ 5, ಒಡಿಶಾದ 5, ಜಾಖರ್ಂಡ್ 3 ಹಾಗೂ ಲಡಾಖ್ ಹಾಗೂ ಜಮ್ಮ ಮತ್ತು ಕಾಶ್ಮೀರದಲ್ಲಿ ತಲಾ ಒಂದು ಕ್ಷೇತ್ರಗಳಿಗೆ

ನಾಳೆ ಐದನೇ ಹಂತದ ಲೋಕಸಭಾ ಚುನಾವಣೆ/ ರಾಹುಲ್ ಗಾಂಧಿ ಸೇರಿದಂತೆ ಹಲವು ಪ್ರಮುಖರು ಕಣದಲ್ಲಿ Read More »

ಎಸ್ಎಸ್ಎಲ್ ಸಿ ಪರೀಕ್ಷೆ -2 ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-2ಕ್ಕೆ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಅದರಂತೆ ಜೂನ್.14ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ-2 ಪ್ರಾರಂಭಗೊಳ್ಳಲಿದೆ. ಈ ಕುರಿತಂತೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷರಾದಂತ ಎನ್ ಮಂಜುಶ್ರೀ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. ಅದರಲ್ಲಿ 2024ರ ಎಸ್.ಎಸ್.ಎಲ್.ಸಿ ಪರೀಕ್ಷೆ-2ನ್ನು ದಿನಾಂಕ:07-06-2024 ರಿಂದ 14-06-2024 ರವರೆಗೆ ನಡೆಸಲು ತೀರ್ಮಾನಿಸಲಾಗಿತ್ತು, ಸದರಿ ಪರೀಕ್ಷೆ-2ನ್ನು ಮುಂದೂಡಿ

ಎಸ್ಎಸ್ಎಲ್ ಸಿ ಪರೀಕ್ಷೆ -2 ಪರಿಷ್ಕೃತ ವೇಳಾಪಟ್ಟಿ ಪ್ರಕಟ Read More »

ಹೊಸದಿಲ್ಲಿ : ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಿಭವ್ ಕುಮಾರ್ ವಶಕ್ಕೆ

ಸಮಗ್ರ ನ್ಯೂಸ್ : ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪಿ, ಅರವಿಂದ್ ಕೇಜ್ರಿವಾಲ್ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ಅನ್ನು ದಿಲ್ಲಿ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ. ಸೋಮವಾರ ಸಿಎಂ ಕೇಜ್ರಿವಾಲ್ ಅವರ ನಿವಾಸಕ್ಕೆ ಭೇಟಿ ನೀಡಿದಾಗ ದೆಹಲಿ ಮುಖ್ಯಮಂತ್ರಿಯ ಕಾರ್ಯದರ್ಶಿ ಬಿಭವ್ ಕುಮಾರ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಲಿವಾಲ್ ತಮ್ಮ ಎಫ್ಐಆರ್ನಲ್ಲಿ ಆರೋಪಿಸಿದ್ದರು. ಕೇಜ್ರಿವಾಲ್ ಅವರ ಮೌನವನ್ನು ಬಿಜೆಪಿ ತೀವ್ರವಾಗಿ ಟೀಕಿಸಿದೆ. ಬಿಜೆಪಿ ವಕ್ತಾರ

ಹೊಸದಿಲ್ಲಿ : ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ನಡೆಸಿದ ಆರೋಪಿ ಬಿಭವ್ ಕುಮಾರ್ ವಶಕ್ಕೆ Read More »

ಮುಂಬೈ : ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದ ನಿತಿನ್ ಗಡ್ಕರಿ

ಸಮಗ್ರ ನ್ಯೂಸ್ : ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಿಸಲಿದೆ ಎನ್ನುವ ಕಾಂಗ್ರೆಸ್ ಆರೋಪಕ್ಕೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ ಅವರು ಉತ್ತರಿಸಿದ್ದು, ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದಿದ್ದಾರೆ. ಅವರು ನಾಸಿಕ್ ಲೋಕಸಭಾ ಕ್ಷೇತ್ರದಲ್ಲಿ ಆಡಳಿತಾರೂಢ ಮೈತ್ರಿಕೂಟದ ಅಭ್ಯರ್ಥಿ ಶಿವಸೇನೆಯ ಹೇಮಂತ್ ಗೋಡ್ಸೆ ಪರ ನಡೆದ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಯಾವ ಸರ್ಕಾರದಿಂದಲೂ ಬದಲಾಯಿಸಲು ಸಾಧ್ಯವಾಗದು. ಅದರಲ್ಲಿನ ಸೆಕ್ಷನ್ಗಳಲ್ಲಿ

ಮುಂಬೈ : ಸಂವಿಧಾನವನ್ನು ಯಾವುದೇ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ ಎಂದ ನಿತಿನ್ ಗಡ್ಕರಿ Read More »