ದೇಶ-ವಿದೇಶ

HDFC ಬ್ಯಾಂಕ್ ಮೇಲೆ 10 ಕೋಟಿ ದಂಡ ವಿಧಿಸಿದ ಆರ್‌ಬಿಐ

ನವದೆಹಲಿ: ದೇಶದ ಅತಿ ದೊಡ್ಡ ಖಾಸಗಿ ಬ್ಯಾಂಕ್‌ ಆದ ಹೆಚ್ ಡಿ ಎಫ್ ಸಿ  ಸಂಸ್ಥೆಗೆ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 10 ಕೋಟಿ ರೂ.ಗಳ ದಂಡ ವಿಧಿಸಿದೆ. 1949ರ ಬ್ಯಾಂಕಿಂಗ್‌ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಈ ದಂಡವನ್ನು ವಿಧಿಸಲಾಗಿದೆ. ಬ್ಯಾಂಕಿನ ಥರ್ಡ್‌ ಪಾರ್ಟಿ ನಾನ್‌-ಫಿನಾನ್ಶಿಯಲ್‌ ಉತ್ಪನ್ನಗಳ ಮಾರ್ಕೆಟಿಂಗ್‌ ವಿಭಾಗದಲ್ಲಿ ಕೆಲವಾರು ಲೋಪಗಳಾಗಿರುವ ಬಗ್ಗೆ ದೂರುಗಳು ಬಂದಿದ್ದವು. ಬ್ಯಾಂಕಿನ ಆಟೊಮೊಬೈಲ್‌ ಸಾಲ ನೀಡುವಿಕೆಯಲ್ಲಿ ಕೆಲವಾರು ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ತನಿಖೆಯ ವೇಳೆ ಬೆಳಕಿಗೆ ಬಂದಿದೆ. ಈ ಕಾರಣದಿಂದಾಗಿ […]

HDFC ಬ್ಯಾಂಕ್ ಮೇಲೆ 10 ಕೋಟಿ ದಂಡ ವಿಧಿಸಿದ ಆರ್‌ಬಿಐ Read More »

ಕೊರೋನಾಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 80 ಲಕ್ಷ…..!? | ಸಾವಿನಲ್ಲೂ ತಪ್ಪು ಅಂಕಿ-ಅಂಶ ನೀಡುತ್ತಿವೆ ರಾಷ್ಟ್ರಗಳು : WHO

ಸಾವಿನ ಲೆಕ್ಕಾಚಾರದಲ್ಲೂ ರಾಷ್ಟ್ರಗಳು ತಪ್ಪು ಲೆಕ್ಕಾಚಾರ ಕೊಡುತ್ತಿವೆ ಎಂದು ವಿಶ್ವ ಆರೋಗ್ಯ ಸಂಸ್ಥ ಶಂಕೆ ವ್ಯಕ್ತಪಡಿಸಿದೆ. ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿ ಸಾವಿಗೀಡಾಗಿರುವ ಜನರ ಅಂಕಿ-ಸಂಖ್ಯೆಯ ಕುರಿತು ನೀಡಲಾಗುತ್ತಿರುವ ಅಧಿಕೃತ ಸಾವಿನ ಪ್ರಮಾಣವನ್ನು ವಾಸ್ತವಕ್ಕಿಂತ ಗಮನಾರ್ಹವಾಗಿ ತಗ್ಗಿಸಲಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಅಭಿಪ್ರಾಯಪಟ್ಟಿದೆ. ಅಂದಾಜು 80 ಲಕ್ಷಕ್ಕೂ ಅಧಿಕ ಮಂದಿ ಸಾವಿಗೀಡಾಗಿರುವ ಸಾಧ್ಯತೆ ಇದ್ದು, ನೀಡಲಾದ ಮಾಹಿತಿ ಅದರ ಶೇಖಡಾ 50 ಕ್ಕಿಂತಲೂ ಕಡಿಮೆ ಇದೆ ಎಂದಿದೆ. ಕಳೆದೊಂದು ವರ್ಷದ ಹಿಂದೆ ಚೀನಾದಲ್ಲಿ ಕಾಣಿಸಿಕೊಂಡ ಕೋವಿಡ್-19

ಕೊರೋನಾಗೆ ಬಲಿಯಾದವರ ಸಂಖ್ಯೆ ಬರೋಬ್ಬರಿ 80 ಲಕ್ಷ…..!? | ಸಾವಿನಲ್ಲೂ ತಪ್ಪು ಅಂಕಿ-ಅಂಶ ನೀಡುತ್ತಿವೆ ರಾಷ್ಟ್ರಗಳು : WHO Read More »

ಗರಿಷ್ಠ 150 ವರ್ಷಗಳವರೆಗೂ ಮಾನವನು ಬದುಕಬಲ್ಲನು !

ನ್ಯೂಯಾರ್ಕ್: ಮಾನವನ ಆಯುಷ್ಯದ ಮೇಲೆ ನಿರಂತರ ಸಂಶೋಧನೆಗಳು ನಡೆಯುತ್ತಲೇ ಬಂದಿದೆ. ಇದೀಗ ಮಾನವನ ಜೀವಿತಾವಧಿಯ ಮೇಲೆ ನಡೆದ ಸಂಶೋಧನೆಯು ಮಾನವನ ಜೀವಿತಾವಧಿ ಗರಿಷ್ಠ 120-150 ವರ್ಷ ಎಂದು ತಿಳಿಸಿದೆ. ನೇಚರ್ ಕಮ್ಯೂನಿಕೇಷನ್‌ ಜರ್ನಲ್‌ನಲ್ಲಿ ಮಾನವ ಕ್ಯಾನ್ಸರ್, ಹೃದ್ರೋಗ ಅಥವಾ ಅಪಘಾತಗಳಿಂದ ಸಾಯದೇ ಉಳಿದರೆ 120-150ವರ್ಷಗಳ ಕಾಲ ಬದುಕಬಹುದು ಎಂದು ವರದಿಯಾಗಿದೆ.ಮನುಷ್ಯನ ವಯಸ್ಸಾಗುವ ವೇಗವು ಆತನ ಜೀವಾತಾವಧಿಯನ್ನು ನಿರ್ಧರಿಸುತ್ತದೆ.‌ವಯಸ್ಸಾದಂತೆ ದೇಹದ ಚಟುವಟಿಗಳಿಗೆ ರಕ್ತಕಣಗಳು ಸ್ಪಂದಿಸುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವಯಸ್ಸಾದ ವ್ಯಕ್ತಿಯ ಚೇತರಿಕೆಗೆ ಅಧಿಕ ಸಮಯ ಬೇಕಾಗುತ್ತದೆ. ಆದರೆ, ಮನುಷ್ಯನ

ಗರಿಷ್ಠ 150 ವರ್ಷಗಳವರೆಗೂ ಮಾನವನು ಬದುಕಬಲ್ಲನು ! Read More »

ಕೊಲೆ‌ ಪ್ರಕರಣ: ಒಲಿಂಪಿಯನ್ ಸುಶೀಲ್ ಕುಮಾರ್‌ ಅರೆಸ್ಟ್

ನವದೆಹಲಿ.ಮೇ.23: ಕಿರಿಯ ಕುಸ್ತಿಪಟು ಸಾಗರ್ ರಾಣಾ ಹತ್ಯೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಒಲಿಂಪಿಯನ್ ಹಿರಿಯ ಕುಸ್ತಿಪಟು ಸುಶೀಲ್ ಕುಮಾರ್ ಅವರನ್ನು ಪೊಲೀಸರು ಶನಿವಾರ ಬಂಧಿಸಿದ್ದಾರೆ.ಸುಶೀಲ್ ಕುಮಾರ್ ಪಂಜಾಬ್ ನಲ್ಲಿರುವ ಸುಳಿವು ಪಡೆದುಕೊಂಡ ದೆಹಲಿ ಪೊಲೀಸರು, ಹಿರಿಯ ಕುಸ್ತಿಪಟು ಹಾಗೂ ಆತನ ಮತ್ತೊಬ್ಬ ಶಂಕಿತ ಸಹಚರ ಅಜಯ್ ಕುಮಾರ್ ಎಂಬುವವರನ್ನು ಬಂಧಿಸಿದ್ದಾರೆ. ಸಾಗರ್ ರಾಣಾ ಕೊಲೆ ಪ್ರಕರಣದ ತನಿಖೆಗಾಗಿ ಪೊಲೀಸರು ಅವರನ್ನು ಟ್ರಾನ್ಸಿಟ್ ವಾರೆಂಟ್ ಪಡೆದು ದೆಹಲಿಗೆ ಕರೆದೊಯ್ದಿದ್ದಾರೆ.ದೆಹಲಿಯ ಛತ್ರಾಸಲ್ ಕ್ರೀಡಾಂಗಣದಲ್ಲಿ ಮೇ 4 ರಂದು ಸಾಗರ್ ರಾಣಾ

ಕೊಲೆ‌ ಪ್ರಕರಣ: ಒಲಿಂಪಿಯನ್ ಸುಶೀಲ್ ಕುಮಾರ್‌ ಅರೆಸ್ಟ್ Read More »

ಸದ್ಯದಲ್ಲೆ ಬಳಕೆಗೆ ಸಿಗಲಿದೆ ಕೊವಿಸೆಲ್ಫ್ ಟೆಸ್ಟಿಂಗ್ ಕಿಟ್, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು

ನವದೆಹಲಿ: ಮನೆಯಲ್ಲೇ ಕುಳಿತು ಸ್ವತಃ ಶಂಕಿತ ವ್ಯಕ್ತಿಗಳೇ ಕೋವಿಡ್ ಟೆಸ್ಟ್ ಮಾಡಿಕೊಳ್ಳುವ ಕೊವಿ-ಸೆಲ್ಫ್ ಎಂಬ ಟೆಸ್ಟಿಂಗ್ ಕಿಟ್ ಇನ್ನೇನು ಹೊರಬರಲಿದೆ. ಇದೊಂದು ರಾಪಿಡ್ ಆಂಟಿಜನ್ ಮಾದರಿ ಪರೀಕ್ಷಾ ಸಾಧನವಾಗಿದ್ದು, ಇದರ ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಒಪ್ಪಿಗೆ ಸೂಚಿಸಿದೆ. ಈ ಟೆಸ್ಟಿಂಗ್ ಕಿಟ್, ಬಳಕೆದಾರರ ಮಾಹಿತಿ ಚೀಟಿ, ಫ್ರೀ-ಫೀಲ್ಡ್ ಎಕ್ಸ್ಟ್ರಾಕ್ಷನ್ ಟ್ಯೂಬ್, ಟೆಸ್ಟಿಂಗ್ ಸ್ಟ್ರಿಪ್, ತ್ಯಾಜ್ಯ ಬಿಸಾಡಲು ಪುಟ್ಟ ಪ್ಲಾಸ್ಟಿಕ್ ಅನ್ನು ಒಳಗೊಂಡಿದೆ. ಇದರ ಉಪಯೋಗದಿಂದ ಕೇವಲ 15 ನಿಮಿಷಗಳಲ್ಲಿ ಫಲಿತಾಂಶ ಪಡೆಯಬಹುದು. ಮನೆಯಲ್ಲಿ ಕುಳಿತು

ಸದ್ಯದಲ್ಲೆ ಬಳಕೆಗೆ ಸಿಗಲಿದೆ ಕೊವಿಸೆಲ್ಫ್ ಟೆಸ್ಟಿಂಗ್ ಕಿಟ್, ಇನ್ನು ಮುಂದೆ ಮನೆಯಲ್ಲಿಯೇ ಕುಳಿತು ಕೋವಿಡ್ ಟೆಸ್ಟ್ ಮಾಡಿಕೊಳ್ಳಬಹುದು Read More »

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ

ವಯಸ್ಸಾದಂತೆ ಜನರ ಲಿಂಗ ಬದಲಾಗುವ ಸ್ಥಳದ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ! ಡೊಮಿನಿಕನ್ ರಿಪಬ್ಲಿಕ್ನಲ್ಲಿ ಹುಡುಗಿಯರು ಹುಡುಗರಾಗಿ ಬೆಳೆಯುವ ಗ್ರಾಮವೊಂದಿದೆ. ಲಾ ಸಲಿನಾಸ್ ಹೆಸರಿನ ಈ ಗ್ರಾಮವನ್ನು ಜನರು ಶಾಪಗ್ರಸ್ತ ಗ್ರಾಮವೆಂದು ಪರಿಗಣಿಸುತ್ತಾರೆ. ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ

ವಯಸ್ಸಾದಂತೆ ಇಲ್ಲಿ ಅವಳು ಅವನಾಗುತ್ತಾನೆ: ಲಾ ಸಲಿನಾಸ್ ಎಂಬ ವಿಚಿತ್ರ ಗ್ರಾಮ Read More »

ಅಪ್ಪಿಕೋ ಚಳುವಳಿ ನೇತಾರ ಬಹುಗುಣ ಕೊರೊನಾಗೆ ಬಲಿ

ಪರಿಸರವಾದಿ ಹಾಗೂ ಅಪ್ಪಿಕೊ (ಚಿಪ್ಕೊ) ಚಳವಳಿಯ ನೇತಾರ ಸುಂದರಲಾಲ್ ಬಹುಗುಣ (94) ಅವರು ಶುಕ್ರವಾರ ವಿಧಿವಶರಾಗಿದ್ದಾರೆ. ಕೋವಿಡ್ 19 ಸೋಂಕಿಗೆ ತುತ್ತಾಗಿದ್ದ ಸುಂದರಲಾಲ್ ಬಹುಗುಣ ಅವರು ಮೇ 8ರಂದು ರಿಷಿಕೇಶದ ಏಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಸ್ಥಳೀಯ ವರದಿಗಳ ಪ್ರಕಾರ ಅವರು ನ್ಯುಮೋನಿಯಾದಿಂದ ಬಳಲುತ್ತಿದ್ದರು ಮತ್ತು ಮಧುಮೇಹವನ್ನು ಹೊಂದಿದ್ದರು. ಇದನ್ನು ಕೊರೋನಾ ವೈರಸ್ ಪ್ರಕರಣಗಳಲ್ಲಿ ಕೊಮೊರ್ಬಿಡಿಟಿ ಎಂದು ಪರಿಗಣಿಸಲಾಗುತ್ತದೆ. ತಜ್ಞ ವೈದ್ಯರ ತಂಡ ಬಹುಗುಣ ಅವರಿಗೆ ಚಿಕಿತ್ಸೆ ನೀಡುತ್ತಿತ್ತು. ಎಲೆಕ್ಟ್ರೋಲೈಟ್‌ಗಳು ಮತ್ತು ಯಕೃತ್ತಿನ ಕಾರ್ಯವನ್ನು ಒಳಗೊಂಡಂತೆ ರಕ್ತದಲ್ಲಿನ ಸಕ್ಕರೆ

ಅಪ್ಪಿಕೋ ಚಳುವಳಿ ನೇತಾರ ಬಹುಗುಣ ಕೊರೊನಾಗೆ ಬಲಿ Read More »

ಮಹಾರಾಷ್ಟ್ರ: 13 ನಕ್ಸಲರ ಎನ್ಕೌಂಟರ್

ಮಹಾರಾಷ್ಟ್ರ: ರಾಜ್ಯದ ಗಡಚಿರೋಲಿ ಜಿಲ್ಲೆಯ ಕೊಟ್ಮಿ ಅರಣ್ಯ ಪ್ರದೇಶದಲ್ಲಿ ಸಿ-60 ಕಮಾಂಡೋ ಪೊಲೀಸರು ಮತ್ತು ಮಾವೋವಾದಿಗಳ ನಡುವಿನ ಗುಂಡಿನ ಚಕಮಕಿಯಲ್ಲಿ 13 ನಕ್ಸಲರು ಹತ್ಯೆಯಾದ ಘಟನೆ ಇಂದು ಮುಂಜಾನೆ ನಡೆದಿದೆ. ಮುಂಜಾನೆ ಐದು ಮೂವತ್ತರ ಸುಮಾರಿಗೆ ಮಾವೋವಾದಿಗಳು ಅರಣ್ಯದ ನಡುವೆ ಒಟ್ಟು ಸೇರಿರುವುದಾಗಿ ಖಚಿತ ಮಾಹಿತಿ ಪಡೆದ ಪೊಲೀಸರು ಸುಸಜ್ಜಿತ ದಾಳಿ ನಡೆಸಿ ನಕ್ಸಲರನ್ನು ಎನ್ಕೌಂಟರ್ ಮಾಡಿದ್ದಾರೆ. ಪೊಲೀಸರನ್ನು ಕಂಡ ನಕ್ಸಲರು ತೀವ್ರ ಪ್ರತಿದಾಳಿ ನಡೆಸಿದ್ದು, ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ಒಟ್ಟು

ಮಹಾರಾಷ್ಟ್ರ: 13 ನಕ್ಸಲರ ಎನ್ಕೌಂಟರ್ Read More »

ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ

ಪಂಜಾಬ್‌: ಶುಕ್ರವಾರ ಮುಂಜಾನೆ ಪಂಜಾಬ್‌ನ ಮೊಗಾ ಬಳಿ ನಡೆದ ಮಿಗ್ -21 ವಿಮಾನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಮಾರಣಾಂತಿಕ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಶುಕ್ರವಾರ ಮುಂಜಾನೆ 1 ಗಂಟೆ ಸುಮಾರಿಗೆ ಮೊಗಾದ ಬಾಗಾಪುರಾನದ ಲ್ಯಾಂಗಿಯಾನಾ ಖುರ್ದ್ ಗ್ರಾಮದಲ್ಲಿ ಐಎಎಫ್‌ನ ಮಿಗ್ -21 ಅಪಘಾತಕ್ಕೀಡಾಗಿದೆ. ಘಟನೆಯು ವಾಡಿಕೆಯ ತರಬೇತಿ ಹಂತದಲ್ಲಿ ನಡೆದಿದೆ ಎಂದು ವಾಯುಪಡೆಯ ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನ ಅಪಘಾತದಲ್ಲಿ ಪೈಲೇಟ್ ವಿಮಾನದಿಂದ ಹೊರಗೆಸೆಯಲ್ಪಟ್ಟಿದ್ದು, ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರೆದಿದೆ.

ಭಾರತೀಯ ವಾಯುಪಡೆಯ ಮಿಗ್ -21 ವಿಮಾನ ಪತನ Read More »

ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಕೇಂದ್ರಕ್ಕೆ ಸೋನಿಯಾ ಸಲಹೆ

ನವದೆಹಲಿ: ಕೊರೋನಾ ಸೋಂಕಿಗೆ ಒಳಗಾಗಿ ದುಡಿದು ಸಾಕುವ ತಂದೆ-ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡಬೇಕೆಂದು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ಪತ್ರವೊಂದನ್ನು ಬರೆದಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿನಂತಿಸಿಕೊಂಡಿದ್ದಾರೆ. ಇದಕ್ಕಾಗಿ ದೇಶವ್ಯಾಪಿ ಇರುವ ನವೋದಯ ವಿದ್ಯಾಲಯಗಳನ್ನು ಬಳಸಿಕೊಳ್ಳಬಹುದೆಂಬ ಸಲಹೆಯನ್ನೂ ಅವರು ನೀಡಿದ್ದಾರೆ.ಇದರೊಂದಿಗೆ ತಮ್ಮ ದಿವಂಗತ ಪತಿ ಮತ್ತು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರ ಮಹತ್ತರ ಕೊಡುಗೆಯನ್ನು ಮತ್ತೆ ಸ್ಮರಿಸಿಕೊಂಡಾಗುತ್ತದೆ ಎಂದು ಪತ್ರದಲ್ಲಿ ಸೋನಿಯಾ ಉಲ್ಲೇಖಿಸಿದ್ದಾರೆ ಕೋವಿಡ್ ಕಾರಣದಿಂದ ಅನಾಥರಾದ ಮಕ್ಕಳಿಗೆ ನೆರವಾಗಿ,

ಕೋವಿಡ್ ನಿಂದ ಅನಾಥರಾಗಿರುವ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿ: ಕೇಂದ್ರಕ್ಕೆ ಸೋನಿಯಾ ಸಲಹೆ Read More »