ಉ.ಪ್ರದೇಶ ಸಿಎಂ ಯೋಗಿಯಿಂದ ಮಾರ್ಕೆಟಿಂಗ್ ಸರ್ಜಿಕಲ್ ಸ್ಟ್ರೈಕ್| ರಾಜ್ಯಾದ್ಯಂತ ಅಂಗಡಿ ಬೋರ್ಡ್ ನಲ್ಲಿ ಮಾಲೀಕರ ಹೆಸರು ಪ್ರದರ್ಶನಕ್ಕೆ ಆದೇಶ
ಸಮಗ್ರ ನ್ಯೂಸ್: ಕನ್ವರ್ ಯಾತ್ರೆಯ ಮಾರ್ಗದಲ್ಲಿರುವ ಹೋಟೆಲ್- ರೆಸ್ಟೋರೆಂಟ್ ಮತ್ತಿತರ ಆಹಾರದ ಅಂಗಡಿಗಳ ಮುಂದೆ ಮಾಲೀಕರ ಹೆಸರುಗಳನ್ನು ಪ್ರದರ್ಶಿಸಬೇಕೆಂಬ ಮುಜಾಫರ್ನಗರ ಜಿಲ್ಲಾ ಪೊಲೀಸರ ವಿವಾದಾತ್ಮಕ ಆದೇಶವನ್ನು ಉತ್ತರ ಪ್ರದೇಶ ಸರ್ಕಾರ ಶುಕ್ರವಾರ ಇಡೀ ರಾಜ್ಯಕ್ಕೆ ವಿಸ್ತರಿಸಿದೆ. ಜಿಲ್ಲಾ ಪೊಲೀಸರು ಸೋಮವಾರ ಹೊರಡಿಸಿದ್ದ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದ್ದು, ಇದೊಂದು ‘ಮುಸ್ಲಿಂ-ವಿರೋಧಿ ಕ್ರಮ’ ಎಂದು ವಿಪಕ್ಷಗಳು ಟೀಕಿಸಿದ್ದವು. ಈ ಆದೇಶವು ಮುಸ್ಲಿಂ ವರ್ತಕರನ್ನು ಟಾರ್ಗೆಟ್ ಮಾಡಿದೆಯೆಂದು ಆಳುವ ಪಕ್ಷದ ಕೆಲವು ಮಿತ್ರ ಪಕ್ಷಗಳು ಕೂಡ ಆರೋಪಿಸಿರುವುದರಿಂದ ವಿವಾದದ ಕಾವು […]