ದೇಶ-ವಿದೇಶ

ಜಿ ಎಸ್ ಟಿ ಕೌನ್ಸಿಲ್ ಸಭೆ/ ಹಲವು ಸೇವೆಗಳಿಗೆ ಜಿ ಎಸ್ ಟಿ ವಿನಾಯಿತಿ

ಸಮಗ್ರ ನ್ಯೂಸ್: ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆಯಿತು. ಭಾರತೀಯ ರೈಲ್ವೆಯು ಸಾಮಾನ್ಯ ಜನರಿಗೆ ಒದಗಿಸುವ ಸೇವೆಗಳು, ಪ್ಲಾಟ್‌ಫಾರ್ಮ್ ಟಿಕೆಟ್‌ಗಳ ಮಾರಾಟ, ಕೊಠಡಿಗಳ ಸೌಲಭ್ಯ, ಕ್ಲೋಕ್‌ರೂಮ್ ಸೇವೆಗಳು ಹಾಗೂ ಬ್ಯಾಟರಿ ಚಾಲಿತ ಕಾರು ಸೇವೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ಘೋಷಿಸಲಾಯಿತು. ಇದರ ಜೊತೆಗೆ ಪೆಟ್ರೋಲ್ ಮತ್ತು ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಲು ಕೇಂದ್ರದ ಉದ್ದೇಶ ಸ್ಪಷ್ಟವಾಗಿದೆ. ಇಂಧನದ ಮೇಲಿನ ಜಿಎಸ್‌ಟಿ ದರವನ್ನು ನಿರ್ಧರಿಸಲು ರಾಜ್ಯಗಳಿಗೆ ಬಿಟ್ಟಿದೆ […]

ಜಿ ಎಸ್ ಟಿ ಕೌನ್ಸಿಲ್ ಸಭೆ/ ಹಲವು ಸೇವೆಗಳಿಗೆ ಜಿ ಎಸ್ ಟಿ ವಿನಾಯಿತಿ Read More »

ಶಬರಿಮಲೆಯಲ್ಲಿ‌ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ/ ಭೂ ಸ್ವಾಧೀನ ಅಧಿಸೂಚನೆ ಹಿಂಪಡೆದ ಕೇರಳ ಸರ್ಕಾರ

ಸಮಗ್ರ ನ್ಯೂಸ್: ಶಬರಿಮಲೆ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣ ಯೋಜನೆಯ ಭೂಸ್ವಾಧೀನ ಕುರಿತು ಆಕ್ಷೇಪಗಳ ಹಿನ್ನೆಲೆಯಲ್ಲಿ ತನ್ನ ನಿಲುವು ಬದಲಿಸಿರುವ ಕೇರಳ ಸರ್ಕಾರ ಅಧಿಸೂಚನೆಯನ್ನು ಹಿಂದಕ್ಕೆ ಪಡೆಯುವುದಾಗಿ ಹೈಕೋರ್ಟ್‌ಗೆ ಹೇಳಿದೆ. ಪ್ರಸ್ತುತ ಅಧಿಸೂಚನೆಗೆ ಈ ಹಿಂದೆ ಹೈಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಸರ್ಕಾರ ತನ್ನ ನಿಲುವನ್ನು ಬದಲಿಸಿದ್ದು, ಭೂ ಸ್ವಾಧೀನದಿಂದಾಗುವ ಸಾಮಾಜಿಕ ಪರಿಣಾಮದ ಅಧ್ಯಯನವನ್ನು ಹೊಸ ಏಜೆನ್ಸಿಯಿಂದ ನಡೆಸಲಾಗುವುದು ಎಂದು ಕೋರ್ಟ್‌ಗೆ ಹೇಳಿದೆ. ಕೇರಳ ಸರ್ಕಾರದ ಭೂ ಸ್ವಾಧೀನ ಅಧಿಸೂಚನೆಗೆ ಬಿಲೀವರ್ಸ್‌ ಚರ್ಚ್ ಅಧೀನದಲ್ಲಿರುವ ಅಯನಾ ಚಾರಿಟಬಲ್‌

ಶಬರಿಮಲೆಯಲ್ಲಿ‌ ಗ್ರೀನ್‌ ಫೀಲ್ಡ್ ವಿಮಾನ ನಿಲ್ದಾಣ/ ಭೂ ಸ್ವಾಧೀನ ಅಧಿಸೂಚನೆ ಹಿಂಪಡೆದ ಕೇರಳ ಸರ್ಕಾರ Read More »

ಯುಜಿಸಿ ನೆಟ್ ಪರೀಕ್ಷೆ ರದ್ದು/ ಶೀಘ್ರದಲ್ಲೇ ಮರುಪರೀಕ್ಷೆ

ಸಮಗ್ರ ನ್ಯೂಸ್: ಯುಜಿಸಿ-ನೆಟ್‌ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇರುವುದರಿಂದ ಅದನ್ನು ರದ್ದುಗೊಳಿಸಲಾಗಿದೆ ಎಂದು ಶಿಕ್ಷಣ ಸಚಿವಾಲಯ ತಿಳಿಸಿದೆ. ಎನ್‌ಟಿಎ ಜೂನ್ 18 ರಂದು ನಡೆಸಿದ ಯುಜಿಸಿ- ನೆಟ್ ಪರೀಕ್ಷೆಯಲ್ಲಿ 9 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪರೀಕ್ಷೆಯ ಪಾರದರ್ಶಕತೆಗೆ ಧಕ್ಕೆಯುಂಟಾಗಿರಬಹುದೆಂಬ ಮಾಹಿತಿ ಲಭಿಸಿರುವ ಕಾರಣ ಪರೀಕ್ಷೆಯನ್ನು ರದ್ದುಗೊಳಿಸಲು ಸಚಿವಾಲಯ ನಿರ್ಧರಿಸಿದೆ. ಮುಂದಿನ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಶಿಕ್ಷಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಗೋವಿಂದ್ ಜೈಸ್ವಾಲ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಯುಜಿಸಿ ನೆಟ್ ಪರೀಕ್ಷೆ ರದ್ದು/ ಶೀಘ್ರದಲ್ಲೇ ಮರುಪರೀಕ್ಷೆ Read More »

ಮೆಕ್ಕಾದಲ್ಲಿ ಸುಡುಬಿಸಿಲಿಗೆ 550ಕ್ಕೂ‌ ಹೆಚ್ಚು ಮಂದಿ ಸಾವು

ಸಮಗ್ರ ನ್ಯೂಸ್: ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ ಸುಡು ಬಿಸಿಲ ಬೇಗೆಗೆ 550ಕ್ಕೂ ಹೆಚ್ಚು ಹಜ್ ಯಾತ್ರಾರ್ಥಿಗಳು ಮೃತಪಟ್ಟಿದ್ದಾರೆ ಎಂದು ರಾಜತಾಂತ್ರಿಕ ಅಧಿಕಾರಿಗಳು ಪ್ರಕಟಿಸಿದ್ದಾರೆ. ಮೃತಪಟ್ಟವರಲ್ಲಿ ಕನಿಷ್ಠ 323 ಮಂದಿ ಈಜಿಪ್ಟ್ ದೇಶದವರಾಗಿದ್ದಾರೆ. ಬಹುತೇಕ ಮಂದಿ ಉಷ್ಣ ಸಂಬಂಧಿ ಅಸ್ವಸ್ಥತೆಗಳಿಗೆ ಬಲಿಯಾಗಿದ್ದಾರೆ ಎಂದು ಈ ಬಗ್ಗೆ ಸಮನ್ವಯ ಮಾಡುತ್ತಿರುವ ಎರಡು ಅರಬ್ ದೇಶಗಳ ರಾಜತಾಂತ್ರಿಕರು ಹೇಳಿದ್ದಾರೆ. ಕನಿಷ್ಠ 60 ಮಂದಿ ಜೋರ್ಡಾನ್ನರು ಕೂಡಾ ಮೃತಪಟ್ಟಿದ್ದಾರೆ ಎಂದು ರಾಜತಾಂತ್ರಿಕರು ತಿಳಿಸಿದ್ದು, ಜೋರ್ಡಾನ್‌ ರಾಜಧಾನಿ ಅಮ್ಮನ್ ನಿಂದ ನೀಡಿರುವ

ಮೆಕ್ಕಾದಲ್ಲಿ ಸುಡುಬಿಸಿಲಿಗೆ 550ಕ್ಕೂ‌ ಹೆಚ್ಚು ಮಂದಿ ಸಾವು Read More »

ಯುಜಿಸಿ NET ಪರೀಕ್ಷೆ ನಡೆದ ಮರುದಿನವೇ ರದ್ದು| ಏನಿದು ಪ್ರಕರಣ!?

ಸಮಗ್ರ ನ್ಯೂಸ್: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಡೆಸಿದ ವಿಶ್ವವಿದ್ಯಾಲಯ ಧನ ಸಹಾಯ ಆಯೋಗ-ನೆಟ್‌ 2024 ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂಬ ಕಾರಣಕ್ಕಾಗಿ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಯನ್ನು ರದ್ದುಗೊಳಿಸಿದೆ. ನ್ಯಾಷನ್‌ ಸೈಬರ್‌ ಕ್ರೈಮ್‌ ಥ್ರೆಟ್‌ ಅನಾಲಿಟಿಕ್ಸ್‌ ಯುನಿಟ್‌ ಆಫ್‌ ಇಂಡಿಯನ್‌ ಸೈಬರ್‌ ಕ್ರೈಮ್‌ ಕೋ-ಆರ್ಡಿನೇಷನ್‌ ಸೆಂಟರ್‌ನಿಂದ ಯುಜಿಸಿಗೆ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಜೂನ್‌ 18ರಂದು ಕರ್ನಾಟಕ ಸೇರಿ ದೇಶಾದ್ಯಂತ 317 ನಗರಗಳ 1,205 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ

ಯುಜಿಸಿ NET ಪರೀಕ್ಷೆ ನಡೆದ ಮರುದಿನವೇ ರದ್ದು| ಏನಿದು ಪ್ರಕರಣ!? Read More »

ನಿಮ್ಮ ಕಾರಿಗೆ ಕಣ್ಣುಕುಕ್ಕುವ ಹೆಡ್ ಲೈಟ್ ಹಾಕ್ಸಿದೀರಾ? ಹಾಗಿದ್ರೆ ನಿಮ್ ಮೇಲೆ ಕೇಸ್ ಬೀಳೋದು ಪಕ್ಕಾ!!

ಸಮಗ್ರ ನ್ಯೂಸ್: ಕೇಂದ್ರ ಮೋಟಾರು ಕಾಯ್ದೆ(ಸಿಎಂವಿ)ಯಲ್ಲಿ ನಮೂದಿಸಿರುವ ಮಾನದಂಡದಂತೆ ವಾಹನ ಸವಾರರು ಹೆಡ್‌ಲೈಟ್ ಅಳವಡಿಕೆ ಮಾಡಿಕೊಳ್ಳಬೇಕು. ಕಾಯ್ದೆ ಉಲ್ಲಂಘಿಸಿದರೆ ಅಂತಹ ವಾಹನ ಸವಾರರ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್‌ ಮಹಾ ನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗ) ಅಲೋಕ್‌ ಕುಮಾರ್‌ ಎಚ್ಚರಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೆಳಕು ಹೊರಹಾಕುವ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತಿದ್ದು, ಇದರಿಂದ ಎದುರು ಮುಖದಲ್ಲಿ ಸಂಚರಿಸುವ ಇತರೆ ವಾಹನ ಸವಾರರಿಗೆ ತೀವ್ರ ತೊಂದರೆ ಆಗುತ್ತಿದೆ. ಭಾರಿ ಗಾತ್ರದ ವಾಹನಗಳಾದ

ನಿಮ್ಮ ಕಾರಿಗೆ ಕಣ್ಣುಕುಕ್ಕುವ ಹೆಡ್ ಲೈಟ್ ಹಾಕ್ಸಿದೀರಾ? ಹಾಗಿದ್ರೆ ನಿಮ್ ಮೇಲೆ ಕೇಸ್ ಬೀಳೋದು ಪಕ್ಕಾ!! Read More »

ನಳಂದಾ ವಿಶ್ವವಿದ್ಯಾಲಯದಲ್ಲಿ ನೂತನ ಕ್ಯಾಂಪಸ್/ ಇಂದು ಪ್ರಧಾನಿ ಮೋದಿ ಉದ್ಘಾಟನೆ

ಸಮಗ್ರ ನ್ಯೂಸ್: ಬಿಹಾರದ ರಾಜ್‌ಗಿರ್‌ನಲ್ಲಿ ನಳಂದಾ ವಿಶ್ವವಿದ್ಯಾಲಯದ ಹೊಸ ಕ್ಯಾಂಪಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ 17 ದೇಶಗಳ ಮಿಷನ್ ಮುಖ್ಯಸ್ಥರು ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಕ್ಯಾಂಪಸ್‌ನಲ್ಲಿ 40 ತರಗತಿ ಕೊಠಡಿಗಳೊಂದಿಗೆ ಎರಡು ಶೈಕ್ಷಣಿಕ ಬ್ಲಾಕ್‌ಗಳಿವೆ, ಒಟ್ಟು 1900 ಆಸನ ಸಾಮರ್ಥ್ಯವಿದೆ. ಇದು ತಲಾ 300 ಆಸನಗಳ ಸಾಮರ್ಥ್ಯದ ಎರಡು ಸಭಾಂಗಣಗಳನ್ನು ಹೊಂದಿದೆ. ಇದು ಸುಮಾರು 550 ವಿದ್ಯಾರ್ಥಿಗಳ ಸಾಮರ್ಥ್ಯವನ್ನು ಹೊಂದಿರುವ

ನಳಂದಾ ವಿಶ್ವವಿದ್ಯಾಲಯದಲ್ಲಿ ನೂತನ ಕ್ಯಾಂಪಸ್/ ಇಂದು ಪ್ರಧಾನಿ ಮೋದಿ ಉದ್ಘಾಟನೆ Read More »

ದೇಶಾದ್ಯಂತ ಜಿಯೋ ಸರ್ವರ್ ಡೌನ್| ಬಳಕೆದಾರರ ಪರದಾಟ

ಸಮಗ್ರ ನ್ಯೂಸ್: ದೇಶಾದ್ಯಂತ ಜಿಯೋ ಸರ್ವರ್ ಡೌನ್ ಆಗಿದೆ. ವಾಟ್ಸಾಪ್, ಇನ್ಸ್ಟಾಗ್ರಾಮ್, ಎಕ್ಸ್, ಸ್ನ್ಯಾಪ್ಚಾಟ್, ಯೂಟ್ಯೂಬ್ ಮತ್ತು ಗೂಗಲ್ ಸೇರಿದಂತೆ ಎಲ್ಲಾ ದೈನಂದಿನ ಬಳಕೆಯ ಅಪ್ಲಿಕೇಶನ್ಗಳನ್ನ ಪ್ರವೇಶಿಸಲು ಸಾಧ್ಯವಾಗದ ಕಾರಣ ದೇಶಾದ್ಯಂತ ಬಳಕೆದಾರರು ಜಿಯೋ ಸೇವೆಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಡೌನ್ಡೆಟೆಕ್ಟರ್ ಪ್ರಕಾರ, ಶೇಕಡಾ 54 ಕ್ಕೂ ಹೆಚ್ಚು ದೂರುದಾರರು ಮೊಬೈಲ್ ಇಂಟರ್ನೆಟ್, 38 ಪ್ರತಿಶತದಷ್ಟು ಜಿಯೋ ಫೈಬರ್ ಮತ್ತು 7 ಪ್ರತಿಶತದಷ್ಟು ಮೊಬೈಲ್ ನೆಟ್ವರ್ಕ್ಗಳೊಂದಿಗೆ ಅಡೆತಡೆಗಳನ್ನು ಎದುರಿಸುತ್ತಿದ್ದಾರೆ. ಆದರೆ ಕಂಪನಿ ಈ ಕುರಿತು ಯಾವುದೇ ಸ್ಪಷ್ಟನೆ

ದೇಶಾದ್ಯಂತ ಜಿಯೋ ಸರ್ವರ್ ಡೌನ್| ಬಳಕೆದಾರರ ಪರದಾಟ Read More »

ಮಧುರೈ-ಬೆಂಗಳೂರು ನಡುವೆ ವಂದೇ ಭಾರತ್/ ಪ್ರಾಯೋಗಿಕ ಸಂಚಾರ ಆರಂಭ

ಸಮಗ್ರ ನ್ಯೂಸ್:ರಾಜ್ಯದ ಎಂಟನೇ ವಂದೇ ಭಾರತ್‌ ರೈಲು ಮಧುರೈ- ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಡುವೆ ಮೊದಲ ಪ್ರಾಯೋಗಿಕ ಸಂಚಾರ ನಡೆಸಿತು. ಸೋಮವಾರ ಬೆಳಗ್ಗೆ 5.15ಕ್ಕೆ ಮಧುರೈ ನಿಲ್ದಾಣದಿಂದ ಹೊರಟು ಬೆಂಗಳೂರನ್ನು ಮಧ್ಯಾಹ್ನ 2 ಗಂಟೆ ಸುಮಾರಿಗೆ ತಲುಪಿ ಪುನಃ ತೆರಳಿತು. ಎರಡು ನಗರಗಳನ್ನು ಸರಿಸುಮಾರು 6 ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ರೈಲಿನ ವೇಗ, ನಿಲುಗಡೆ ನಿಲ್ದಾಣ ನಿಗದಿ ಬಳಿಕ ರೈಲಿನ ವೇಳಾಪಟ್ಟಿ, ದರವನ್ನು ಪ್ರಕಟಿಸಿ, ವಾಣಿಜ್ಯ ಸಂಚಾರದ ದಿನಾಂಕ ಘೋಷಣೆ ಮಾಡಲಾಗುತ್ತದೆ. ಪ್ರಾಥಮಿಕ ಮಾಹಿತಿಯಂತೆ ಈ

ಮಧುರೈ-ಬೆಂಗಳೂರು ನಡುವೆ ವಂದೇ ಭಾರತ್/ ಪ್ರಾಯೋಗಿಕ ಸಂಚಾರ ಆರಂಭ Read More »

ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ/ 9.26 ಕೋಟಿ ರೈತರ ಖಾತೆಗೆ ಬಿತ್ತು ಹಣ

ಸಮಗ್ರ ನ್ಯೂಸ್: ಪಿಎಂ ಕಿಸಾನ್ ಯೋಜನೆಯ 17 ನೇ ಕಂತನ್ನು ವಾರಣಾಸಿಯಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರೈತರಿಗೆ ಬಿಡುಗಡೆ ಮಾಡಿದ್ದಾರೆ. ವಾರಣಾಸಿಯಲ್ಲಿ ಈ ಕಾರ್ಯಕ್ರಮವನ್ನು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಉತ್ತರ ಪ್ರದೇಶ ಸರ್ಕಾರದ ಸಮನ್ವಯದೊಂದಿಗೆ ಆಯೋಜಿಸಿದೆ.ಈ ಸಂದರ್ಭ, ಪಿಎಂ ಮೋದಿ 9.26 ಕೋಟಿ ಫಲಾನುಭವಿ ರೈತರಿಗೆ ಕಂತಿನ ಭಾಗವಾಗಿ 20,000 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದಾರೆ. ಕೇಂದ್ರ ಯೋಜನೆಯಾದ ಪಿಎಂ ಕಿಸಾನ್ ಯೋಜನೆ ಕೋಟ್ಯಂತರ ರೈತರಿಗೆ ವಾರ್ಷಿಕ 6,000 ರೂ.ಗಳ

ಪಿಎಂ ಕಿಸಾನ್ 17ನೇ ಕಂತು ಬಿಡುಗಡೆ/ 9.26 ಕೋಟಿ ರೈತರ ಖಾತೆಗೆ ಬಿತ್ತು ಹಣ Read More »