ದೇಶ-ವಿದೇಶ

ಎಲೆಕ್ಟ್ರಿಕ್ ವಾಹನದಲ್ಲಿ ಪುತಿನ್ – ಮೋದಿ ರೌಂಡ್ಸ್| ನಮೋಗೆ ಸಾರಥಿಯಾದ ರಷ್ಯಾ ಅಧ್ಯಕ್ಷ

ಸಮಗ್ರ ನ್ಯೂಸ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರನ್ನು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಬಹಳ ಆತ್ಮೀಯವಾಗಿ ನಿನ್ನೆ ಬರಮಾಡಿಕೊಂಡಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಅವರು ಡ್ರೈವರ್ ಸೀಟಿನಲ್ಲಿ ಕುಳಿತಿದ್ದು, ಪ್ರಧಾನಿ ಮೋದಿ ಅವರ ಪಕ್ಕದಲ್ಲೇ ಕುಳಿತಿದ್ದಾರೆ. ಇಬ್ಬರು ಆ ಪ್ರಯಾಣವನ್ನು ಎಂಜಾಯ್ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಹೀಗೆ ಕಾರಿನಲ್ಲಿ ಪ್ರಧಾನಿಯವರನ್ನು ಕೂರಿಸಿಕೊಂಡೆ ರಷ್ಯಾ ಅಧ್ಯಕ್ಷ ಪುಟಿನ್ ಅವರು ತಮ್ಮ ಬಂಗಲೆಗೆ ಒಂದು […]

ಎಲೆಕ್ಟ್ರಿಕ್ ವಾಹನದಲ್ಲಿ ಪುತಿನ್ – ಮೋದಿ ರೌಂಡ್ಸ್| ನಮೋಗೆ ಸಾರಥಿಯಾದ ರಷ್ಯಾ ಅಧ್ಯಕ್ಷ Read More »

ಜಮ್ಮು: ಸೇನೆಯ ಗುರಿಯಾಗಿಸಿ ಉಗ್ರರ ದಾಳಿ| ಗ್ರೆನೇಡ್ ಸ್ಪೋಟಕ್ಕೆ ನಾಲ್ವರು ಯೋಧರು ಹುತಾತ್ಮ

ಸಮಗ್ರ ನ್ಯೂಸ್: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ದಾಳಿ ಹೆಚ್ಚಾಗುತ್ತಿದೆ. ಕಳೆದೆರಡು ತಿಂಗಳಲ್ಲಿ ಸೇನೆ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಇದೀಗ ಕಥುವಾ ಬಳಿ ಭಾರತೀಯ ಸೇನಾ ವಾಹನ ಗುರಿಯಾಗಿ ಉಗ್ರರು ಭೀಕರ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ನಾಲ್ವರು ಯೋಧರು ಸ್ಥಳದಲ್ಲೇ ಹುತಾತ್ಮರಾಗಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸೇನ ಪ್ರತಿ ದಾಳಿ ನಡೆಸುತ್ತಿದ್ದಂತೆ ಉಗ್ರರು ಕಾಡಿನೊಳಗೆ ಪರಾರಿಯಾಗಿದ್ದಾರೆ. ಈ ದಾಳಿಯ ಹೊಣೆಯನ್ನು ಜೈಶ್ ಇ ಮೊಹಮ್ಮದ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ಇಂದು ಮಧ್ಯಾಹ್ನ 3.30ರ ವೇಳೆಗೆ

ಜಮ್ಮು: ಸೇನೆಯ ಗುರಿಯಾಗಿಸಿ ಉಗ್ರರ ದಾಳಿ| ಗ್ರೆನೇಡ್ ಸ್ಪೋಟಕ್ಕೆ ನಾಲ್ವರು ಯೋಧರು ಹುತಾತ್ಮ Read More »

ಇಂದಿನಿಂದ ಪ್ರಧಾನಿ ಮೋದಿ ರಷ್ಯಾ ಪ್ರವಾಸ

ಸಮಗ್ರ ನ್ಯೂಸ್‌: ಉಕ್ರೇನ್ ರಷ್ಯಾ ಯುದ್ಧ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಇಂದಿನಿಂದ ರಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಎರಡು ದಿನಗಳ ಕಾಲ ರಷ್ಯಾದಲ್ಲಿ ಹಲವು ಸುತ್ತಿನ ಮಾತುಕತೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಬುಧವಾರ ಪ್ರಧಾನಿ ಆಸ್ಟ್ರಿಯಾಕ್ಕೆ ತೆರಳಲಿದ್ದು, 46 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಆಸ್ಟ್ರಿಯಾ ಪ್ರವಾಸ ಕೈಗೊಳ್ಳುತ್ತಿರುವುದು ಇದೇ ಮೊದಲಾಗಿದೆ. ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯು ಮೋದಿಯವರ ರಷ್ಯಾ ಭೇಟಿಯ ಪ್ರಮುಖ ಅಜೆಂಡಾವಾಗಿದೆ. ರಷ್ಯಾ-ಉಕ್ರೇನ್ ಸಂಘರ್ಷದ ನಂತರದ ಮೊದಲ ಭೇಟಿಯಲ್ಲಿ ಮೋದಿ ಅವರು ರಷ್ಯಾ ಅಧ್ಯಕ್ಷ

ಇಂದಿನಿಂದ ಪ್ರಧಾನಿ ಮೋದಿ ರಷ್ಯಾ ಪ್ರವಾಸ Read More »

ತ್ರಿಪುರಾದಲ್ಲಿ 47 ವಿದ್ಯಾರ್ಥಿಗಳು ಏಡ್ಸ್ ಗೆ ಬಲಿ| 828 ವಿದ್ಯಾರ್ಥಿಗಳಿಗೆ ಪಾಸಿಟಿವ್

ಸಮಗ್ರ ನ್ಯೂಸ್: ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಒಂದು ಶಾಕಿಂಗ್ ವರದಿಯನ್ನ ಬಿಡುಗಡೆ ಮಾಡಿದೆ. ಎಚ್‌ಐವಿ ಸೋಂಕಿನಿಂದ 47 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಇನ್ನೂ 828 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ತ್ರಿಪುರಾ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ (TSACS) ಹಿರಿಯ ಅಧಿಕಾರಿ ಭಟ್ಟಾಚಾರ್ಜಿ, 220 ಶಾಲೆಗಳು, 24 ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳಿಂದ ಚುಚ್ಚುಮದ್ದಿನ ಔಷಧಿಗಳನ್ನ ತೆಗೆದುಕೊಳ್ಳುತ್ತಿದ್ದ ವಿದ್ಯಾರ್ಥಿಗಳನ್ನ ಗುರುತಿಸಲಾಗಿದೆ ಎಂದು ಹೇಳಿದರು. ಪ್ರತಿದಿನ ಐದರಿಂದ ಏಳು ಹೊಸ ಪ್ರಕರಣಗಳು ವರದಿಯಾಗುತ್ತಿವೆ ಎಂದು ಅಧಿಕಾರಿ ತಿಳಿಸಿದ್ದಾರೆ. ತ್ರಿಪುರಾ ಪತ್ರಕರ್ತರ

ತ್ರಿಪುರಾದಲ್ಲಿ 47 ವಿದ್ಯಾರ್ಥಿಗಳು ಏಡ್ಸ್ ಗೆ ಬಲಿ| 828 ವಿದ್ಯಾರ್ಥಿಗಳಿಗೆ ಪಾಸಿಟಿವ್ Read More »

ಕುಸ್ತಿ‌ ಅಖಾಡಕ್ಕೆ ವಿದಾಯ ಘೋಷಿಸಿದ WWE ರೆಸ್ಲರ್ ಜಾನ್ ಸೀನ

ಸಮಗ್ರ ನ್ಯೂಸ್: 16 ಬಾರಿಯ ವಿಶ್ವ ಚಾಂಪಿಯನ್, WWE ದಂತಕತೆಯಾದ ಜಾನ್ ಸೀನ ತಮ್ಮ‌ ರಸ್ಲಿಂಗ್ ವೃತ್ತಿ ಜೀವನಕ್ಕೆ ವಿದಾಯ ಘೋಷಿಸಿದ್ದಾರೆ. WWE ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಲಾಗಿರುವ ವಿಡಿಯೊದಲ್ಲಿ ಜಾನ್ ಕುಸ್ತಿಯ ಅಖಾಡಕ್ಕೆ ನಿವೃತ್ತಿ ಘೋಷಿಸಿದ್ದಾರೆ. 2025ರಲ್ಲಿ ಅವರು WWE ಕ್ರೀಡಾ ಪ್ರಕಾರಕ್ಕೆ ವಿದಾಯ ಹೇಳಲಿದ್ದಾರೆ. WWEಗೆ ಅಚ್ಚರಿಯ ವಿದಾಯ ಘೋಷಿಸಿರುವ ಜಾನ್ ಸೀನ, “ಇಂದು ರಾತ್ರಿ ನಾನು WWEಗೆ ನಿವೃತ್ತಿ ಘೋಷಿಸುತ್ತಿದ್ದೇನೆ” ಎಂದು ವಿಡಿಯೊ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ಜಾನ್ ಅವರ ವಿದಾಯವು ಅವರ

ಕುಸ್ತಿ‌ ಅಖಾಡಕ್ಕೆ ವಿದಾಯ ಘೋಷಿಸಿದ WWE ರೆಸ್ಲರ್ ಜಾನ್ ಸೀನ Read More »

ತಮಿಳುನಾಡು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರ ಹತ್ಯೆ| ಎಂಟು ಮಂದಿ ಶಂಕಿತರು ಅರೆಸ್ಟ್

ಸಮಗ್ರ ನ್ಯೂಸ್: ತಮಿಳುನಾಡು ಬಹುಜನ ಸಮಾಜ ವಾದಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್‌ಸ್ಟ್ರಾಂಗ್‌ ಬರ್ಬರವಾಗಿ ಹತ್ಯೆಯಾಗಿದ್ದಾರೆ. ಪೆರಂಬೂರ್‌ನಲ್ಲಿರುವ ಆರ್ಮ್‌ಸ್ಟ್ರಾಂಗ್‌ ಅವರ ನಿವಾಸದ ಬಳಿ ಆರು ಮಂದಿ ಅಪರಿಚಿತ ದಾಳಿಕೋರರು ದಾಳಿ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.‌ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎಂಟು ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಹತ್ಯೆಯ ಉದ್ದೇಶವನ್ನು ಕೂಲಂಕುಶವಾಗಿ ವಿಚಾರಣೆ ನಡೆಸಲಾಗುತ್ತದೆ ಎಂದು ಚೆನ್ನೈ ಹೆಚ್ಚುವರಿ ಆಯುಕ್ತ (ಉತ್ತರ) ಆಸ್ರಾ ಗರ್ಗ್‌ ಹೇಳಿದ್ದಾರೆ. ಆರ್ಮ್‌ಸ್ಟ್ರಾಂಗ್‌ ಅವರನ್ನು ಕೊಲೆಗೈದ ಬಳಿಕ ಆರೋಪಿಗಳು ಪರಾರಿಯಾಗುತ್ತಿರುವ

ತಮಿಳುನಾಡು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಆರ್ಮ್ ಸ್ಟ್ರಾಂಗ್ ಬರ್ಬರ ಹತ್ಯೆ| ಎಂಟು ಮಂದಿ ಶಂಕಿತರು ಅರೆಸ್ಟ್ Read More »

ಭಾರೀ ಮಳೆ/ ಸ್ಥಗಿತಗೊಂಡ ಅಮರನಾಥ ಯಾತ್ರೆ

ಸಮಗ್ರ ನ್ಯೂಸ್‌: ಭಾರೀ ಮಳೆ ಹಿನ್ನಲೆಯಲ್ಲಿ ಇಂದು ಗುಹಾ ದೇಗುಲಕ್ಕೆ ಎರಡೂ ಮಾರ್ಗಗಳಲ್ಲಿ ಅಮರನಾಥ ಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಬಾಲ್ವಾಲ್ ಮತ್ತು ಪಹಲ್ಲಾಮ್ ಮಾರ್ಗಗಳಲ್ಲಿ ಭಾರೀ ಮಳೆ ಸುರಿದ ಕಾರಣ ಯಾತ್ರಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮುಂಜಾಗ್ರತಾ ಕ್ರಮವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದುವರೆಗೆ 1.50 ಲಕ್ಷಕ್ಕೂ ಹೆಚ್ಚು ಮಂದಿ ಭಕ್ತರು 3,800 ಮೀಟರ್ ಎತ್ತರದ ಗುಹಾಂತರ ದೇಗುಲಕ್ಕೆ ಭೇಟಿ ನೀಡಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಲಿಂಗದ ದರ್ಶನವನ್ನು ಪಡೆದಿದ್ದಾರೆ. ಸುಮಾರು 4.5 ಲಕ್ಷಕ್ಕೂ

ಭಾರೀ ಮಳೆ/ ಸ್ಥಗಿತಗೊಂಡ ಅಮರನಾಥ ಯಾತ್ರೆ Read More »

ಭಾರತದಲ್ಲಿ ರಸ್ತೆಗಿಳಿದ ವಿಶ್ವದ ಮೊದಲ ಸಿಎನ್ ಜಿ‌ ಬೈಕ್| ಏನಿದರ ವಿಶೇಷತೆ? ಇಲ್ಲಿದೆ ಡೀಟೈಲ್ಡ್ ಸ್ಟೋರಿ…

ಸಮಗ್ರ ನ್ಯೂಸ್: ಭಾರತದಲ್ಲಿ ವಿಶ್ವದ ಮೊದಲ CNG ಬೈಕ್ ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾಗಿದೆ. ಬಜಾಜ್ CNG ಬೈಕ್ ಅನ್ನು ಬಿಡುಗಡೆ ಮಾಡಿದ ವಿಶ್ವದ ಮೊದಲ ದ್ವಿಚಕ್ರ ವಾಹನ ತಯಾರಕ ಕಂಪನಿ. ಇಡೀ ವಾಹನ ಲೋಕದ ಗಮನ ಈಗ ಈ ಕಂಪನಿಯತ್ತ ಹೊರಳುತ್ತಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಈ ಬೈಕ್ ಅನ್ನು ಭಾರತಕ್ಕೆ ಪರಿಚಯಿಸಿದ್ದು, ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿಯೂ ಇದರ ನಿರೀಕ್ಷೆಗಳು ಹಲವು ಪಟ್ಟು ಹೆಚ್ಚುತ್ತಿವೆ. ಸಿಎನ್‌ಜಿ ಚಾಲಿತ ಕಾರುಗಳು ಬಂದು ದಶಕಕ್ಕೂ ಹೆಚ್ಚು ಆದರೂ, ಸಿಎನ್‌ಜಿ-ಚಾಲಿತ

ಭಾರತದಲ್ಲಿ ರಸ್ತೆಗಿಳಿದ ವಿಶ್ವದ ಮೊದಲ ಸಿಎನ್ ಜಿ‌ ಬೈಕ್| ಏನಿದರ ವಿಶೇಷತೆ? ಇಲ್ಲಿದೆ ಡೀಟೈಲ್ಡ್ ಸ್ಟೋರಿ… Read More »

NEET PG ಪರೀಕ್ಷೆಯ ದಿನಾಂಕ ಪ್ರಕಟ

ಸಮಗ್ರ ನ್ಯೂಸ್‌: ನೀಟ್‌ ಪಿಜಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕಾರಣ ಮುಂದೂಡಲಾಗಿದ್ದ ದಿನಾಂಕವನ್ನು ಇದೀಗ ಘೋಷಿಸಲಾಗಿದ್ದು, ಪರೀಕ್ಷೆಯು ಆಗಸ್ಟ್ 11 ರಂದು ನಡೆಯಲಿದೆ. ಪರೀಕ್ಷೆಯು ಆಗಸ್ಟ್ 11 ರಂದು ಬೆಳಿಗ್ಗೆ ಮತ್ತು ಮಧ್ಯಾಹ್ನದ ಎರಡು ಪಾಳಿಗಳಲ್ಲಿ ನಡೆಯಲಿದೆ. ಈ ಹಿಂದೆ ಜೂನ್ 23ಕ್ಕೆ ನೀಟ್ ಪರೀಕ್ಷೆ ನಿಗದಿಯಾಗಿತ್ತು. ಅಕ್ರಮ ಚಟುವಟಿಕೆಗಳ ವರದಿಯಿಂದಾಗಿ ಪರೀಕ್ಷಾ ದಿನಾಂಕವನ್ನು ಮುಂದೂಡಲಾಗಿತ್ತು.

NEET PG ಪರೀಕ್ಷೆಯ ದಿನಾಂಕ ಪ್ರಕಟ Read More »

ಬ್ರಿಟನ್ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ರಿಷಿ‌ ಸುನಕ್| ಅಧಿಕಾರ ಹಸ್ತಾಂತರ ಮಾಡಲು ನಿರ್ಧಾರ

ಸಮಗ್ರ ನ್ಯೂಸ್: ಬ್ರಿಟನ್‌ನ ಸಾರ್ವತ್ರಿಕ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಾಕ್‌ ಅವರು ಸೋಲೊಪ್ಪಿಕೊಂಡಿದ್ದಾರೆ. ವಿಪಕ್ಷ ಲೇಬರ್‌ ಪಾರ್ಟಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಿದ್ದರೆ ರಿಷಿ ಸುನಾಕ್‌ ಅವರ ಕನ್ಸರ್ವೇಟಿವ್‌ ಪಕ್ಷ 61 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. “ಲೇಬರ್‌ ಪಾರ್ಟಿ ಚುನಾವಣೆ ಗೆದ್ದಿದೆ. ನಾನು ಸರ್‌ ಕೀರ್‌ ಸ್ಟಾರ್ಮರ್‌ ಅವರಿಗೆ ಕರೆ ಮಾಡಿ ವಿಜಯಕ್ಕೆ ಶುಭಾಶಯ ಸಲ್ಲಿಸಿದ್ದೇನೆ. ಇಂದು ಅಧಿಕಾರವನ್ನು ಶಾಂತಿಯುತವಾಗಿ ಹಾಗೂ ವ್ಯವಸ್ಥಿತವಾಗಿ ಹಸ್ತಾಂತರಿಸಲಾಗುವುದು. ಇದು ನಮ್ಮ ದೇಶದ ಸುಭದ್ರತೆ ಮತ್ತು ಭವಿಷ್ಯದ ಬಗ್ಗೆ ನಮ್ಮೆಲ್ಲರಲ್ಲೂ

ಬ್ರಿಟನ್ ಚುನಾವಣೆಯಲ್ಲಿ ಸೋಲೊಪ್ಪಿಕೊಂಡ ರಿಷಿ‌ ಸುನಕ್| ಅಧಿಕಾರ ಹಸ್ತಾಂತರ ಮಾಡಲು ನಿರ್ಧಾರ Read More »